ಹಲಗಲಿ ಬೇಡರು                       
18. ಎಲ್ಲ ಜನರಿಗೆ ಜೋರ ಮಾಡಿ ಕಸಿದುಕೊಳ್ಳಿರಿ ಹತಾರ    ಜನಪದರು ರಚಿಸಿದ ಹಲಗಲಿ ಬೇಡರು ಎಂಬ ಲಾವಣಿಯಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಇದು ಬ್ರೀಟೀಷ್ ಸರಕಾರದ ಆಜ್ಞೆ .    
     ಬ್ರಿಟೀಷ್ ಸರಕಾರವು ಭಾರತೀಯರು ಆಯುಧಗಳನ್ನು ಇಟ್ಟುಕೊಳ್ಳಬಾರದು ಎಂಬ ಶಾಸನವನ್ನು ಮಾಡಿತು. ಹಾಗೂ ಭಾರತೀಯರಲ್ಲಿದ್ದ ಆಯುಧಗಳನ್ನು ಕಸಿದುಕೊಳ್ಳಲು ಆಜ್ಞೆಯನ್ನು ಹೊರಡಿಸಿತು. ಅದು ಎಷ್ಟು ಕಠಿಣವಾಗಿತ್ತೆಂದರೆ ಎಲ್ಲ ಜನರನ್ನು ಜೊರು ಮಾಡಿ ಅವರಿಂದ ಆಯುಧಗಳನ್ನು ಕಸಿದುಕೊಳ್ಳಿರಿ ಎಂಬ ಭೀತಿ ಹುಟ್ಟಿಸಿದ್ದರು.                                                

19.   ಜೀವ ಸತ್ತು ಹೋಗುವುದು ಗೊತ್ತ.                                                                                                                                                              
    ಜನಪದರು ರಚಿಸಿದ ಹಲಗಲಿ ಬೇಡರು ಎಂಬ ಲಾವಣಿಯಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಹಲಗಲಿ ವೀರರು ಹೇಳಿದ ಮಾತು.  ಬ್ರಿಟೀಷ್ ಸರಕಾರವು ಭಾರತೀಯರು ಆಯುಧಗಳನ್ನು ಇಟ್ಟುಕೊಳ್ಳಬಾರದು ಎಂಬ ಶಾಸನವನ್ನು ಮಾಡಿತು. ಹಾಗೂ ಭಾರತೀಯರಲ್ಲಿದ್ದ ಆಯುಧಗಳನ್ನು ಕಸಿದುಕೊಳಲ್ಳು ಆಜ್ಞೆಯನ್ನು ಹೊರಡಿಸಿತು. ಆದರೆ ಹಲಗಲಿಯ ವೀರರಾದ ಹನುಮ, ಬಾಲ, ಜಡಗ ಮತ್ತು ರಾಮ - ಇವರು ನಾವು ನಾಲ್ಕು ಮಂದಿ ಏನೇ ಬಂದರೂ ಬ್ರಿಟೀಷರಿಗೆ ಆಯುಧಗಳನ್ನು ಕೊಡಬಾರದು ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಿ ಈ ಮಾತನ್ನು ಹೇಳಿದ್ದಾರೆ.                  

20.   ಹೊಡೆದರೊ ಗುಂಡ ಕರುಣೆ ಇಲ್ಲದ್ಹಂಗ        
    ಜನಪದರು ರಚಿಸಿದ ಹಲಗಲಿ ಬೇಡರು ಎಂಬ ಲಾವಣಿಯಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಇದು ಲಾವಣಿಕಾರ ಹೇಳಿದ ಮಾತು.                      
     ಬ್ರಿಟೀಷ್ ಸರಕಾರವು ಭಾರತೀಯರಲ್ಲಿದ್ದ ಆಯುಧಗಳನ್ನು ಕಸಿದುಕೊಳ್ಳಲು ಆಜ್ಞೆಯನ್ನು ಹೊರಡಿಸಿತು. ಆದರೆ ಹಲಗಲಿಯ ವೀರರು ಏನೇ ಬಂದರೂ ಬ್ರಿಟೀಷರಿಗೆ ಆಯುಧಗಳನ್ನು ಕೊಡಬಾರದು ಎಂದು ಹೇಳಿದರು. ಕಾರಕೂನನ ಕಪಾಳಕ್ಕೆ ಹೊಡೆದಾಗ ಅವನು ಬಿದ್ದುಹೋದ. ಈ ಸುದ್ದಿ ತಿಳಿದ ಬ್ರಿಟೀಷ್ ಸಾಹೇಬ ಕೊಪದಿಂದ ಆಜ್ಞೆ ಹೊರಡಿಸಿದ ಕಾರಣ ಕುದುರೆಯ ಸೈನ್ಯ ಹಲಗಲಿಗೆ ಬಂದು ಬೆನ್ನಟ್ಟಿಕೊಂಡು ಹೋಗಿ ಹಲಗಲಿಯ ಜನರನ್ನು ಕರುಣೆ ಇಲ್ಲದೆ ಕೊಲ್ಲುತ್ತಿತ್ತು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

21.   ಕೆಟ್ಟು ವರ್ಣಿಸಿ ಹೇಳಿದೆ ಒಂದಷ್ಟು                        

     ಬ್ರಿಟೀಷ್ ಸರಕಾರವು ಭಾರತೀಯರಲ್ಲಿದ್ದ ಆಯುಧಗಳನ್ನು ಕಸಿದುಕೊಳ್ಳಲು ಆಜ್ಞೆಯನ್ನು ಹೊರಡಿಸಿತು. ಆದರೆ ಹಲಗಲಿಯ ವೀರರಾದ ಹನುಮ, ಬಾಲ, ಜಡಗ ಮತ್ತು ರಾಮ - ಇವರು ನಾವು ಏನೇ ಬಂದರೂ ಬ್ರಿಟೀಷರಿಗೆ ಆಯುಧಗಳನ್ನು ಕೊಡಬಾರದು ಎಂದು ಹೇಳಿದರು. ಕಾರಕೂನನ ಕಪಾಳಕ್ಕೆ ಹೊಡೆದ ಪರಿಣಾಮವಾಗಿ ಸೈನ್ಯವು ಹಲಗಲಿಗೆ ಬಂದು ಊರನ್ನು ಲೂಟಿಮಾಡಿ, ಊರಿಗೆ ಬೆಂಕಿ ಕೊಟ್ಟರು. ಈ ದುಃಖದ ಕಥೆಯನ್ನು ಸ್ವಲ್ಪ ಹೇಳಿದ್ದೇನೆ ಎನ್ನುತ್ತಾನೆ ಲಾವಣಿಕಾರ.   
        
 ಸಂಕಟಕೆ ಗಡಿ ಇಲ್ಲ                 
22.   ಗೆರೆ ಎಳೆದು ಗಡಿ ಎಂದ.                                                                                                                                                              
    ದು. ಸರಸ್ವತಿಯವರ ಸಂಕಟಕೆ ಗಡಿ ಇಲ್ಲ ಎಂಬ ಪದ್ಯಪಾಠದಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಕವಯತ್ರಿ ಈ ಮಾತನ್ನು ಹೇಳಿದ್ದಾರೆ.                                         
      ಮಾನವನೆಂಬ ಅಹಂಕಾರಿಯು ಈ ಭೂಮಿಯು ತನ್ನದೆಂದು ಹೇಳಿಕೊಂಡು ಬೀಗುತ್ತಾನೆ. ತಾನೇ ಈ ಭೂಮಿಗೆ ಮಾಲೀಕ ಎಂಬ ಮತ್ತಿನಲ್ಲಿ ಮೆರೆಯುತ್ತಾನೆ. ಅದೇ ಅಹಂಕಾರದಿಂದ ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಂಡು ಮೆರೆಯುತ್ತಾನೆ ಎಂದು ಕವಯತ್ರಿ ಹೇಳಿದ್ದಾರೆ.                      

23.   ಜೀವಗಳು ಶವವಾದವು .                         

    ಮಾನವನು ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಳ್ಳುತ್ತಾನೆ. ಈ ಭೂಮಿಗೆ ಮಾಲೀಕ ಎಂಬ ಮತ್ತಿನಲ್ಲಿ ಮೆರೆಯುತ್ತಾನೆ. ಅದೇ ಅಹಂಕಾರದಿಂದ ಭೂಮಿಗಾಗಿ ಕಾದಾಟದ ಆಟವನ್ನು ಆಡುತ್ತಾನೆ. ಇದರಿಂದ ಜೀವಗಳು ಶವಗಳಾಗುತ್ತವೆ ಎಂದು ಕವಯತ್ರಿ ಹೇಳಿದ್ದಾರೆ.                            

24.   ಗಡಿಯ ಮ್ಯಾಜಿಕ್ನಿಂದ ಜೀವ ತೆತ್ತವರು  .   

     ಮಾನವನು ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಳ್ಳುತ್ತಾನೆ. ಈ ಭೂಮಿಗೆ ಮಾಲೀಕ ಎಂಬ ಮತ್ತಿನಲ್ಲಿ ಮೆರೆಯುತ್ತಾನೆ. ಅದೇ ಅಹಂಕಾರದಿಂದ ಭೂಮಿಗಾಗಿ ಕಾದಾಟದ ಆಟವನ್ನು ಆಡುತ್ತಾನೆ. ಗಡಿಯ ಎರಡೂ ಕಡೆ ರಕ್ತ ಒಂದೇ ಆದರೂ ಗಡಿಯ ಮ್ಯಾಜಿಕ್ನಿಂದಾಗಿ ಸಾವು ಸಂಭವಿಸುತ್ತದೆ ಎಂದು ಕವಯತ್ರಿ ಹೇಳಿದ್ದಾರೆ.                            

25.   ಗಡಿಯೂ ಇಲ್ಲ, ಆಚೆ ಈಚೆಯೂ ಇಲ್ಲ .              

     ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಂಡ ಮಾನವನು ಅದರ ಮತ್ತಿನಲ್ಲಿ ಭೂಮಿಗಾಗಿ ಕಾದಾಟ ಮಾಡುತ್ತಾನೆ. ನೆತ್ತರು ಹರಿಯುತ್ತದೆ.ಆದರೆ ಒಡಲು ಅನುಭವಿಸುವ ಸಂಕಟಕ್ಕೆ ಗಡಿಯೂ ಇಲ್ಲ, ಆಚೆ ಈಚೆಯೂ ಇಲ್ಲ ಎನ್ನುತ್ತಾರೆ ಕವಯತ್ರಿ.                                                

8-10 ವಾಕ್ಯಗಳಲ್ಲಿ ಉತ್ತರಿಸಿ.    
        
ಜೀವನ ದೃಷ್ಟಿ                         

1. ಜೀವನ ದೃಷ್ಟಿ ಗದ್ಯದಲ್ಲಿ ಅಂತರ್ ಜೀವಿಯ ವ್ಯಕ್ತಿತ್ವ ಹೇಗೆ ವರ್ಣಿತವಾಗಿದೆ?                                     
          ಅಂತರ್ಜೀವಿಯು ಉಳಿದವರನ್ನು ಪ್ರೀತಿಯಿಂದ ಕಾಣಬಲ್ಲ. ಅವನು ತನ್ನಿಂದ ಆದಷ್ಟು ಯಾರಿಗೂ ತೊಂದರೆ ಆಗಬಾರದೆಂದು ಎಚ್ಚರದಿಂದ ಇರುತ್ತಾನೆ. ಅಂತರ್ಜೀವಿಯು ತನ್ನ ಮನಸ್ಸನ್ನು ಓರಣವಾಗಿ ಇಡುವುದರಲ್ಲಿ ಎಲ್ಲ ಶಕ್ತಿಯನ್ನು ಖರ್ಚು ಮಾಡುತ್ತಾನೆ. ಇವನಿಗೆ ಪರರ ಹಂಗು ಇರುವುದಿಲ್ಲ. ಸಮಾಜದ ಕಲ್ಯಾಣವನ್ನು ಪೋಷಿಸುವ ಒಂದು ಶಕ್ತಿಯು ಅವನಲ್ಲಿರುತ್ತದೆ. ಅವನು ಉಳಿದವರ ಹಿತಚಿಂತನೆ, ಹಿತಸಾಧನೆ ಮಾಡುವುದನ್ನು ತನ್ನ ಕರ್ತವ್ಯವೆಂದು ತಿಳಿದಿರುತ್ತಾನೆ. ಅಂತರ್ಜೀವಿಯು ಇನ್ನೊಬ್ಬರಮೇಲೆ ಭಾರ ಹಾಕುವುದಿಲ್ಲ. ಇನ್ನೊಬ್ಬರು ತಾವಾಗಿಯೇ ಕೈಯೆತ್ತಿಕೊಡದೆ ಏನನ್ನೂ ಸ್ವೀಕರಿಸುವುದಿಲ್ಲ. ಅಂತರ್ಜೀವಿಯು ಸಮಾಜದ ಮಧ್ಯದಲ್ಲಿಯೇ ಬಾಳುತ್ತಾನೆ. ಇವನು ರಸವೇ ಜೀವನ ಎಂದು ತಿಳಿದಿರುತ್ತಾನೆ. ಅಂತರ್ಜೀವಿಯು ತನ್ನಲ್ಲಿಯೂ, ಇತರರಲ್ಲಿಯೂ ದೈವಿಕತೆಯು ಇದೆಯೆಂಬುದನ್ನು ತಿಳಿದಿರುತ್ತಾನೆ. ಇದು ಅಂತರ್ಜೀವಿಯ ವ್ಯಕ್ತಿತ್ವ.                                                
 
2. ಸಮಾಜದಲ್ಲಿ ಕಲೋಪಾಸಕನ ಮಹತ್ವವನ್ನು ವಿ.ಕೃ. ಗೋಕಾಕ್ ಹೇಗೆ ವಿಶ್ಲೇಷಿಸಿದ್ದಾರೆ?                                       
     ಹಿರಿಯ ಸಾಹಿತಿಯೊಬ್ಬರು ಹೇಳುವಂತೆ ಕಲೋಪಾಸಕನಿಗೆ ಸಮಾಜದಲ್ಲಿ ಯಾವ ಹೊಣೆಯೂ ಇರಬಾರದು. ಸಮಾಜದ ಕಲ್ಯಾಣವನ್ನು ಬೆಳೆಸುವ ಶಕ್ತಿ ಅವನಲ್ಲಿರುತ್ತದೆ. ಆದ್ದರಿಂದ ಅವನನ್ನು ಪೋಷಿಸುವ ಹೊಣೆ ಸಮಾಜದ ಮೇಲಿದೆ. ಅವನು ಅಂಗಡಿಗೆ ಹೋಗಲಿ, ಹೊಟೇಲಿಗೆ ಹೋಗಲಿ ಅವನು ಕಲೊಪಾಸಕನೆಂದು ತಿಳಿದ ಕೂಡಲೇ ಎಲ್ಲರೂ ಅವನ ಅವಶ್ಯಕತೆಗಳನ್ನು ಈಡೇರಿಸಬೇಕು. ಕಲೋಪಾಸಕನೂ ಒಬ್ಬ ವ್ಯಕ್ತಿ. ಅವನು ಸಮಾಜದ ಒಂದು ಘಟಕ. ಕಲೋಪಾಸಕನಾಗಿ ಕಲಾ ಸೇವೆಯನ್ನು ಸಲ್ಲಿಸುವುದರೊಂದಿಗೆ ಅವನ ವ್ಯಕ್ತಿತ್ವ ವಿಕಾಸವೂ ಆಗಬೇಕು. ಕಲೋಪಾಸಕನು ಜನರ ಮನಸ್ಸನ್ನು ತಿದ್ದಬಹುದು. ಆದರೆ ಯಾರ ಮನಸ್ಸನ್ನೂ ನೋಯಿಸದಂತೆ ಹಿತಚಿಂತನೆ, ಹಿತ ಸಾಧನೆಯಲ್ಲಿ ತೊಡಗುವುದು ಅವನ ಕರ್ತವ್ಯವಾಗಿರುತ್ತದೆ. ರಸವೇ ಜೀವನ, ಸಮರಸವೇ ಸಹಜೀವನ ಎಂಬುದನ್ನು ಕಲೊಪಾಸಕನು ಅರಿತಿರಬೇಕು. ಕಲೋಪಾಸಕನ ಎರಡು ಕಣ್ಣುಗಳು ಯಾವಾಗಲೂ ತೆರೆದಿರಬೇಕಾಗುತ್ತದೆ. ಒಂದು ತನ್ನಿಂದ ಬೇರೆಯವರಿಗೆ ಯಾವ ತೊಂದರೆಯೂ ಆಗದಂತೆ ಎಚ್ಚರ ವಹಿಸುವ ಕಣ್ಣು, ಇನ್ನೊಂದು ಇತರರ ಮಾನಸಿಕ,ಐಹಿಕ, ಆತ್ಮಿಕ ಹಿತ ಚಿಂತನೆ ಎಲ್ಲೆಲ್ಲಿ ಸಾಧ್ಯ ಎಂದು ಅಭ್ಯಾಸ ಮಾಡುವ ಕಣ್ಣು. ಕಲೋಪಾಸಕನಿಗೆ ಈ ರೀತಿಯ ಒಳಗಣ್ಣನ್ನು ಕೊಟ್ಟಿದ್ದಾನೆ ಎಂದು ಲೇಖಕರು ಹೇಳಿದ್ದಾರೆ.                                    

      ಕೌರವೇಂದ್ರನ ಕೊಂದೆ ನೀನು                                        
6. ಕರ್ಣನಿಗೆ ಶ್ರೀಕೃಷ್ಣನು ಒಡ್ಡಿದ ಆಮಿಷಗಳೇನು?                                
   ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ತನ್ನೊಂದಿಗೆ ಕೂಡಿಸಿಕೊಳ್ಳುತ್ತಾನೆ. ಕೃಷ್ಣನಿಗೆ ಸಮಾನವಾಗಿ ಕುಳಿತುಕೊಳ್ಳಲು ಕರ್ಣನು ಹಿಂಜರಿದರೂ ತನ್ನ ತೊಡೆಯು ತಾಗುವಂತೆ ಅವನ್ನು ಬರಸೆಳೆದುಕೊಳ್ಳುತ್ತಾನೆ. ಯಾದವರಿಗೂ, ಕೌರವರಿಗೂ ಭೇದವಿಲ್ಲ ಎಂದು ತಿಳಿಸಿ ನೀನೇ ರಾಜ್ಯದ ಒಡೆಯ ಎನ್ನುತ್ತಾನೆ. ಕುಂತಿಯು ಪಡೆದ ಐದು ಮಂತ್ರಗಳಲ್ಲಿ ಮೊದಲ ಮಂತ್ರದಿಂದ ಜನಿಸಿದವನು ನೀನು. ನಂತರ ಧರ್ಮರಾಯ, ಭೀಮ, ಅರ್ಜುನ, ನಕುಲ ಸಹದೇವರು ಹುಟ್ಟಿದರು ಎಂದು ಕರ್ಣನ ಜನ್ಮ ರಹಸ್ಯವನ್ನು ಕೃಷ್ಣನು ತಿಳಿಸಿದನು. ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ. ಪಾಂಡವ ಕೌರವರು ನಿನ್ನ ಸೇವೆಯನ್ನು ಮಾಡುತ್ತಾರೆ. ಅಲ್ಲದೆ ಎಡಬದಿಯಲ್ಲಿ ಪಾಂಡವರು, ಬಲಬದಿಯಲ್ಲಿ ಕೌರವರು, ಎದುರಿನಲ್ಲಿ ಮಾದ್ರ, ಮಾಗಧ, ಯಾದವರು ಇರುವ ಸಭೆಯಲ್ಲಿ ನೀನು ವೈಭವದಿಂದ ಇರಬಹುದು ಎಂಬ ಆಮಿಷವನ್ನು ಕೃಷ್ಣನು ಒಡ್ಡುತ್ತಾನೆ.                                            
 
7. ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಮನಸ್ಥಿತಿಯನ್ನು ತಿಳಿಸಿ.                                      
   ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಕೊರಳಿನ ನರಗಳು ಉಬ್ಬಿದವು; ಕಣ್ಣೀರು ರಭಸದಿಂದ ಮುನ್ನುಗ್ಗಿತು. ತುಂಬಾ ನೊಂದುಕೊಂಡನು. ಅಯ್ಯೋ ! ಕುರುಪತಿಗೆ ಕೇಡಾಯಿತಲ್ಲ ! ಎಂದು ಮನಸ್ಸಿನಲ್ಲಿ ಮರುಗಿದನು. ನನ್ನ ವಂಶವನ್ನು ನನಗೆ ತಿಳಿಸಿ ಕೃಷ್ಣನು ನನ್ನನ್ನು ಕೊಂದನು ಎಂದು ಚಿಂತಿಸಿದನು. ಕರ್ಣನು ಕೃಷ್ಣನ ಆಮಿಷಗಳಿಗೆ ಮನಸೋಲದೆ ರಾಜ್ಯದ ಸಿರಿಗೆ ನಾನು ಸೋಲುವುದಿಲ್ಲ, ಪಾಂಡವ ಕೌರವರಿಂದ ಸೇವೆಯನ್ನು ಪಡೆದುಕೊಳ್ಳುವ ಮನಸ್ಸಿಲ್ಲ, ಆದರೆ ಒಡೆಯನಾದ ದುರ್ಯೋಧನನಿಗೆ ಪ್ರಾಣವನ್ನು ಅರ್ಪಿಸಲು ಸಿದ್ಧನಿರುವ ಸಂದರ್ಭದಲ್ಲಿ ಅವನ ಜನ್ಮ ರಹಸ್ಯವನ್ನು ತಿಳಿಸಿದ ಕಾರಣ ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಿದನು. ವೀರ ಕೌರವನೇ ನನ್ನ ಒಡೆಯ, ಅವನ ಶತ್ರುವೇ ನನ್ನ ಶತ್ರು. ಮುಂದೆ ನಡೆಯಲಿರುವ ಯುದ್ಧದಲ್ಲಿ ಪಾಂಡವರಿಗೆ ನನ್ನ ಪರಾಕ್ರಮ ಏನೆಂಬುದನ್ನು ತೋರಿಸುತ್ತೇನೆ ಎಂದನು. ಪಾಂಡವರು ಸೋದರರೆಂದು ತಿಳಿದ ಕಾರಣ ಪಾಂಡವರ ಬಗೆಗೆ ಇದ್ದ ದ್ವೇಷ ಕಡಿಮೆ ಆಯಿತು. ಅದಕ್ಕಾಗಿಯೇ ಕೌರವನ ಪಕ್ಷದಲ್ಲಿದ್ದು ಅವನ ಋಣವನ್ನು ತೀರಿಸುತ್ತೇನೆ ಆದರೆ ಪಾಂಡವರನ್ನು ನೋಯಿಸುವುದಿಲ್ಲ ಎಂದು ಕರ್ಣನು ಭರವಸೆಯನ್ನು ಕೊಡುತ್ತಾನೆ.                                          

8. ಕರ್ಣನ ನಿರ್ಧಾರ ಸರಿ ಎನ್ನುವಿರಾ? ಏಕೆ?                                         
   ಕೃಷ್ಣನು ಕರ್ಣನನ್ನು ರಾಜನನ್ನಾಗಿ ಮಾಡುತ್ತೇನೆ ಎಂದರೂ, ಬೇರೆ ಬೇರೆ ಆಮಿಷಗಳನ್ನು ಒಡ್ಡಿದರೂ ಕರ್ಣನು ಕೌರವನೇ ನನ್ನ ಒಡೆಯ ಎನ್ನುತ್ತಾನೆ. ಆದರೆ ಯುದ್ಧದಲ್ಲಿ ಪಾಂಡವರನ್ನು ನೋಯಿಸುವುದಿಲ್ಲ ಎಂದು ಭರವಸೆಯನ್ನು ಕೊಡುತ್ತಾನೆ. - ಕರ್ಣನ ಈ ನಿರ್ಧಾರ ಸರಿ. ದುರ್ಯೋಧನನು ಕರ್ಣನ ಆತ್ಮೀಯ ಗೆಳೆಯನಾಗಿದ್ದಾನೆ. ತನ್ನನ್ನು ಬಾಲ್ಯದಿಂದಲೂ ಬೆಳೆಸಿದ್ದಾನೆ,  ಗೌರವವನ್ನು ತಂದುಕೊಟ್ಟಿದ್ದಾನೆ. ಈಗ ಕೃಷ್ಣನು ಜನ್ಮ ರಹಸ್ಯವನ್ನು ತಿಳಿಸಿದ ಕೂಡಲೇ ಪಾಂಡವ ಪಕ್ಷವನ್ನು ಸೇರಿದ್ದೇ ಆದರೆ ಕರ್ಣನು ಅಧಿಕಾರಕ್ಕಾಗಿ, ಆಸ್ತಿಗಾಗಿ ಆಶೆಪಡುವವನು ಎಂಬ ಅಪಕೀರ್ತಿಗೆ ಒಳಗಾಗುತ್ತಾನೆ. ಮಿತ್ರದ್ರೋಹ ಮಾಡಿದಂತೆ ಆಗುತ್ತದೆ. ಆದ್ದರಿಂದ ಅವನು ಕೌರವ ಪಕ್ಷದಲ್ಲಿರುವ ನಿರ್ಧಾರವನ್ನು ಮಾಡಿದ್ದೇ ಸರಿ. ಅಲ್ಲದೇ ಯುದ್ಧದಲ್ಲಿ ಪಾಡವರನ್ನು ನೋಯಿಸುವುದಿಲ್ಲ ಎಂಬ ಕರ್ಣನ ಭರವಸೆಯ ಮಾತು ನಾವು ಮೆಚ್ಚತಕ್ಕದ್ದು. ಸಹೋದರರ ಬಗೆಗೆ ಕರ್ಣನ ಪ್ರೀತಿ ತುಂಬಿ ತುಳುಕಿತು. ಆದರೆ ಕೌರವರಿಗೆ ಮೋಸ ಮಾಡಲಾಗದ ಪರಿಸ್ಥಿತಿಯಲ್ಲಿ ಅವನ ಮನಸ್ಸು ನೋವನ್ನು ಅನುಭವಿಸಿತು. ಈ ಎಲ್ಲಾ ಕಾರಣಗಳಿಂದ ಕರ್ಣನ ನಿರ್ಧಾರವೇ ಸರಿ ಎಂದು ಹೇಳುತ್ತೇನೆ.                   
      
ವ್ಯಾಕರಣಾಂಶಗಳು  ದ್ವಿರುಕ್ತಿಗಳು: ಒಂದು ಪದವನ್ನು ಎರಡು ಬಾರಿ ಬಳಸಿದರೆ ಅದು ದ್ವಿರುಕ್ತಿ ಆಗುತ್ತದೆ.                                 
ಹೌದುಹೌದು,  ಈಗೀಗ, ದೊಡ್ಡದೊಡ್ಡ, ಬನ್ನಿಬನ್ನಿ,   ಕೇರಿಕೇರಿಗಳನ್ನು, ನಿಲ್ಲುನಿಲ್ಲು, ಹೆಚ್ಚುಹೆಚ್ಚು, ತುತ್ತತುದಿ,   ಮನೆಮನೆಗಳಲ್ಲಿ, ಬಂದೆಬಂದೆ, ಅಗೋಅಗೋ, ಅಬ್ಬಬ್ಬಾ, ಅಹಹಾ, ಬೇಡಬೇಡ, ನಡೆನಡೆ, ಸಾಕುಸಾಕು, ಓಡುಓಡು, ಆಗಲಿ ಆಗಲಿ, ಇರಲಿ ಇರಲಿ, ನಡೆನಡೆ, ಮೊಟ್ಟಮೊದಲು, ಕಟ್ಟಕಡೆಗೆ, ಕಡೆಕಡೆಗೆ,  ನಟ್ಟನಡುವೆ, ನಡುನಡುವೆ, ಬಟ್ಟಬಯಲು, ಕೊನೆಕೊನೆಗೆ, ಮೆಲ್ಲಮೆಲ್ಲನೆ. ಓಡಿಓಡಿ, ತಿರುತಿರುಗಿ, ಒಬ್ಬೊಬ್ಬ,                          

Related Posts