4) ರೈತರ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರೋಪಾಯಗಳು
ಪೀಠಿಕೆ : ರೈತ ದೇಶದ ಬೆನ್ನೆಲುಬು.ಅವನಿಲ್ಲದೆ ಯಾರೊಬ್ಬರಿಗೂ ಅನ್ನವಿಲ್ಲ.ಅವನ ದುಡಿಮೆಯೇ ನಮಗೆ ಸಹಕಾರ.ಇಂತಹ ರೈತನ ಬಾಳು ಇಂದಿನ ಕಾಲದಲ್ಲಿ ಗೋಳಾಗಿದೆ.ಇದರಿಂದ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.ಇದಕ್ಕೆ ಅವಕಾಶ ಕೊಡದೆ ಅವರಲ್ಲಿ ಧೈರ್ಯವನ್ನು ತುಂಬುವಂತ ಕೆಲಸ ನೀಡಬೇಕು. ಇಲ್ಲವಾದರೆ ನಮ್ಮ ಅನ್ನಕ್ಕೆ ಕುತ್ತು ಬಂದು ಅವರ ದಾರಿಯನ್ನು ನಾವು ಹಿಡಿಬೇಕಾದಿತು.

ವಿಷಯ ವಿವರಣೆ : ದೇಶದ ಗಡಿಯನ್ನು ರಕ್ಷಿಸುವವನು ಯೋಧ. ಹಾಗೆಯೇ ದೇಶಕ್ಕೆ ಅನ್ನವನ್ನು ನೀಡುವವನು ರೈತ. ಇವರಿಬ್ಬರು ದೇಶದ ಎರಡು ಕಣ್ಣುಗಳಿದ್ದಂತೆ, ಅವರಿಂದಲೇ ನಾವು ಇಂದು ದೇಶದೊಳಗೆ ಸುಖ, ಸಂತೋಷದಿಂದ ಬಾಳುತಿದ್ದೇವೆ. ಇಂತಹ ರೈತನ ಇಂದಿನ ಜೀವನ ಬಹಳ ದುಸ್ತರವಾಗಿಬಿಟ್ಟಿದೆ. ರೈತರಿಗೆ ಅವಶ್ಯವಾದ ಮಳೆ ಸರಿಯಾದ ಸಮಯಕ್ಕೆ ಬಾರದೆ ಗೋಳಾಡಿಸುತ್ತಿದೆ. ಇನ್ನೊಂದು ಕಡೆ ಬಿತ್ತಲು ಬೀಜ,ಗೊಬ್ಬರವಿಲ್ಲದೆ ಪರದಾಟ, ಮತ್ತೊಂದೆಡೆ ಇದಕ್ಕೋಸ್ಕರ ಸಾಲಮಾಡಿ ತೀರಿಸಲಾಗದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮತ್ತೊಂದು ಸಲ ಮಳೆಬಂದರು ಸರಿಯಾದ ಬೆಳೆ ಬರುವುದಿಲ್ಲ, ಬೆಳೆ ಇದ್ದರೂ ಅದಕ್ಕೆ ಸರಿಯಾದ ಬೆಲೆ ದೊರೆಯದೆ ಇರುವುದು. ಮತ್ತೊಂದೆಡೆ ಬೆಳೆಗಳು ಕೀಟಬಾದೆಯಿಂದ ನಾಶವಾಗುವುದು. ಒಂದು ಸಲ ಬರಗಾಲ, ಇನ್ನೊಂದು ಸಲ ಪ್ರವಾಹ ಇದರಿಂದ ಬೆಳೆಗಳಿಲ್ಲದೆ ಅನ್ನಕ್ಕೆ ಕುತ್ತು ಬಂದಿದೆ. ಹೀಗೆ ನಾನಾ ಕಾರಣಗಳಿಂದ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂತಹ ರೈತರಿಗೆ ಮೊದಲು ನಾವು ದೈರ್ಯತುಂಬಬೇಕು. ಸಹಾಯ, ಸಹಕಾರ ನೀಡಬೇಕು. ಸ್ಥಾಪಿತ ಸರ್ಕಾರಗಳು ರೈತರಿಗೆ ಅವಶ್ಯವಾದ ಯೋಜನೆಗಳನ್ನು ಜಾರಿಗೊಳಿಸಬೇಕು. ಬೆಳೆವಿಮೆಯನ್ನು ಸರಿಯಾದ ರೀತಿಯಲ್ಲಿ ಹಂಚಬೇಕು. ಸಾಲವಸೂಲಾತಿಯನ್ನು ಮುಂದೂಡಬೇಕು.ರೈತರಿಗೆ ಅವಶ್ಯವಾದ ಬೀಜಗೊಬ್ಬರ, ಔಷಧ, ಕೃಷಿಸಂಬಂಧಿತ ಸಲಕರಣೆಗಳನ್ನು ಯೋಗ್ಯಬೆಲೆಯಲ್ಲಿ ಸಿಗುವಂತೆ ಮಾಡಬೇಕು.ಬೆಳೆಗಳಿಗೆ ಸರಿಯಾದ ಮಾರುಕಟ್ಟೆ,ಬೆಲೆಯನ್ನು ಒದಗಿಸಬೇಕು. ವೈಜ್ಞಾನಿಕವಾಗಿ ಕೃಷಿಚಟುವಟಿಕೆಗಳನ್ನು ಕೈಗೊಳ್ಳುವ ತರಬೇತಿ ನೀಡಬೇಕು. ಹೀಗಾದಲ್ಲಿ ನಾವು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು.

ಉಪಸಂಹಾರ : ಭಾರತದಂತಹ ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿ ಇಂದಿನ ರೈತರ ಜೀವನ ಅಯೋಮಯವಾಗಿಬಿಟ್ಟಿದೆ.  ನಾನಾ  ಕೃಷಿ  ಸಂಬಂಧಿತ  ಕಾರಣಗಳಿಂದ  ತನ್ನ  ಜೀವವನ್ನೆ ತ್ಯಾಗಮಾಡುತ್ತಿದ್ದಾನೆ. ನಮ್ಮ ದೇಶದ ಬಲಗಳಲ್ಲಿ ಒಂದಾದ ರೈತ ಬಲವನ್ನು ಹೆಚ್ಚಿಸಬೇಕಾಗಿದೆ. ಅವನ ಜೀವನವನ್ನು ಸುಧಾರಿಸಬೇಕಾಗಿದೆ. ದೇಶದ ನಿಜವಾದ ಶಕ್ತಿ ರೈತರ ಕೈಯಲ್ಲಿದೆ ಎಂಬುದನ್ನು ಮರೆಯಬಾರದು. ಸರ್ಕಾರಗಳು ಅವರನ್ನು ಉತ್ತಮ ರೀತಿಯಲ್ಲಿ ಕಾಣಬೇಕು ಹಾಗೆಯೇ ರೈತರು ಏನೇ ಕಷ್ಟ ಬಂದರೂ ಎದೆಗುಂದದೆ ಜೀವನವನ್ನು ಸಾಗಿಸಬೇಕೆಂದು ನಮ್ಮಲ್ಲೆರ ಆಶಯವಾಗಬೇಕು.

5) ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಮಹತ್ವ ಅಥವಾ ಭಾವೈಕ್ಯತೆಯನ್ನು ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳ ಪಾತ್ರ
ಪೀಠಿಕೆ : ಒಂದು ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಭಾರತದಂತಹ ವೈವಿಧ್ಯತೆಯುಳ್ಳ ರಾಷ್ಟ್ರಗಳಲ್ಲಿ ಏಕತೆಯನ್ನು ತರುವುದು ಇಂತಹ ರಾಷ್ಟ್ರೀಯ ಹಬ್ಬಗಳ ಮೂಲಕ ಸಾಧ್ಯವಿದೆ. ಇಡಿ ರಾಷ್ಟ್ರದ ಜನರೆಲ್ಲರೂ ಯಾವುದೇ ಭೇಧಭಾವವಿಲ್ಲದೆ, ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆಯನ್ನು ತೊರೆದು ಒಟ್ಟಾಗಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು ಎಂದು ಕರೆಯಬಹುದು. ನಮ್ಮದೇಶದಲ್ಲಿ ಮೂರು ರಾಷ್ಟ್ರೀಯ ಹಬ್ಬಗಳೆಂದು ಘೋಸಿಸಲಾಗಿದೆ.ಅವುಗಳೆಂದರೆ 1) ಸ್ವಾತಂತ್ರ್ಯ ದಿನಾಚರಣೆ 2) ಗಣರಾಜ್ಯೋತ್ಸವ 3) ಗಾಂಧಿ ಜಯಂತಿ.

ವಿಷಯ ವಿವರಣೆ : 

1) ಸ್ವಾತಂತ್ರ್ಯ ದಿನಾಚರಣೆ: ಭಾರತ ಸುಮಾರು ಎರಡು ನೂರು ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು.ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟೀಷರು ಭಾರತೀಯ ಅರಸರುಗಳು ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು.ಭಾರತಿಯರಿಗೆ ಸ್ವಾತಂತ್ರ ಎನ್ನವುದೇ ಇರಲಿಲ್ಲ.ಹಾಗಾಗಿ ಭಾರತೀಯರೆಲ್ಲರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ರಣಕಹಳೆಯನ್ನು ಊದಿ ಕೊನೆಗೆ 1947 ನೇ ಆಗಷ್ಟ್ 15 ರಂದು ಸ್ವಾತಂತ್ರವನ್ನು ಪಡೆದರು.ಆ ದಿನವನ್ನು ಪ್ರತಿವರ್ಷ ಭಾರತೀಯರೆಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ರಾಷ್ಟ್ರೀಯ ಐಕ್ಯತೆಯನ್ನು ಮೆರೆಯುತ್ತಾರೆ.ಅಂದು ಶಾಲಾ-ಕಾಲೇಜು-ಕಛೇರಿಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ ದೇಶಭಕ್ತಿ ಸಾರುವ ಕಾರ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ.

2) ಗಣರಾಜ್ಯೋತ್ಸವ :
ಭಾರತದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಆಡಳಿತದ ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ. ಆ ರೂಪುರೇಷಗಳನ್ನು ಒಳಗೊಂಡಿರುವುದೇ ನಮ್ಮ ಸಂವಿಧಾನ. ಎಲ್ಲ ರಾಜ್ಯಗಳನ್ನು ಗಣಗಳನ್ನಾಗಿ ಮಾಡಿ (ಒಟ್ಟುಗೂಡಿಸಿ) ಉತ್ತಮವಾದ ಆಡಳಿತ ನಡೆಸಲು ಕಾನೂನುರೂಪ ಪಡೆದ ಸಂವಿಧಾನವನ್ನು ಜಾರಿಗೆ ತಂದ ದಿನವೇ ಗಣರಾಜ್ಯ ದಿನ. ಇದನ್ನು ಕೂಡ ನಮ್ಮ ದೇಶದ ಪ್ರಜೆಗಳೆಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಾರೆ.ಈ ದಿನದಲ್ಲಿ ರಾಷ್ಟ್ರಧ್ವಜವನ್ನು ಆರಿಸಿ ಸಂವಿಧಾನದ ನಿರ್ಮಾತೃಗಳು ಹಾಗೂ ತತ್ವಗಳನ್ನು ಸ್ಮರಿಸಿಕೊಳ್ಳತ್ತಾರೆ. ಪ್ರತಿಯೊಬ್ಬರು ಸಂವಿಧಾನ ಪಾಲಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳುವ ಆಶಯನ್ನು ಪಡೆಯುತ್ತಾರೆ. ಹಾಗೆಯೇ ದೇಶಭಕ್ತಿ ಸಾರುವ ಕಾರ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. 

3) ಗಾಂಧಿ ಜಯಂತಿ : ಯಾವುದೇ ಒಂದು ದೇಶದ ಜನರೆಲ್ಲರೂ ಒಟ್ಟಾಗಿ ಸೇರಲು ನಾಯಕತ್ವ ಬೇಕು. ನಾಯಕರಿಲ್ಲದ ನಾವೆ ದಡಸೇರಲಾರದು ಅಂತೆಯೇ ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ಬಹುಮುಖ್ಯ ನಾಯಕತ್ವವಹಿಕೊಂಡವರು ನಮ್ಮ ದೇಶದ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧೀಜಿಯವರು. ಅವರ ಹುಟ್ಟಿದ ದಿನವೇ ಅಕ್ಟೋಬರ್ 2. ಆ ದಿನವನ್ನು ಗಾಂಧಿಜಯಂತಿಯೆಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ.ಏಕೆಂದರೆ ಗಾಂಧೀಜಿವರು ಸ್ವಾತಂತ್ರ್ಯ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡರು. ಆದ್ದರಿಂದ ಅವರ ಆದರ್ಶಗಳನ್ನು ನೆನೆಯುತ್ತ,ಅವರನ್ನು ಸ್ಮರಿಸುತ್ತಾ ಸ್ವಾತಂತ್ರ್ಯದ ಮಹತ್ವದಬಗ್ಗೆ ಕೊಂಡಾಡುವ ದಿನವಾಗಿದೆ.

ಉಪಸಂಹಾರ : ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ಪ್ರತಿಯೊಬ್ಬ ನಾಗರಿಕರಲ್ಲಿ ಏಕತೆ. ದೇಶಭಕ್ತಿ, ಸಂವಿಧಾನದ ಮಹತ್ವ, ನಾಯಕತ್ವದ ಮಹತ್ವ ಮುಂತಾದ ವಿಚಾರಗಳನ್ನು ತಿಳಿಯಲು ಮತ್ತು ನಾವು ಅದೇ ರೀತಿ ನೆಡೆದುಕೊಳ್ಳಲು ನೆರವಾಗುತ್ತದೆ ಎಂಬ ಆಶಯವನ್ನು ಇಟ್ಟುಕೊಳ್ಳೋಣ.

6) ರಾಷ್ಟ್ರೀಯ ಭಾವೈಕ್ಯತೆ
ಪೀಠಿಕೆ: ಜನರು ವಾಸಮಾಡುತ್ತಿರುವ ಒಂದು ನಿರ್ಧಿಷ್ಟವಾದ ಭೌಗೋಳಿಕ ಪ್ರದೇಶವನ್ನು ದೇಶ ಎಂದು ಕರೆಯಬಹುದು.ಎಲ್ಲ ಜನರು ತಾವೆಲ್ಲ ಒಂದೇ ಎಂಬ ಭಾವನೆಗಳನ್ನು ಹೊಂದುವುದು ಐಕ್ಯತೆ. ಅದೇ ರೀತಿ ದೇಶದಲ್ಲಿ ವಾಸಿಸುತ್ತಿರುವ ಜನರೆಲ್ಲರು ತಮ್ಮ ಧರ್ಮ,ಜಾತಿ,ಕುಲ,ಭಾಷೆಗಳನ್ನು ಬದಿಗೊತ್ತಿ ಒಂದೇ
ಕುಟುಂಬದ ಸದಸ್ಯರಂತೆ ವಾಸಮಾಡುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎಂದು ಕರೆಯಬಹುದು. ಭಾರತದಂತಹ ವೈವಿಧ್ಯತೆಗಳಿಂದ ಕೂಡಿರುವ ರಾಷ್ಟ್ರದಲ್ಲಿ ಏಕತೆಯನ್ನು ಸಾಧಿಸುವುದು ಬಹಳ ಮುಖ್ಯವೆನಿಸುತ್ತದೆ.

ವಿಷಯ ವಿವರಣೆ : ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂಬ ಮಾತಿನಂತೆ ಹೆತ್ತತಾಯಿ ಹೊತ್ತಭೂಮಿಯು ಸ್ವರ್ಗವಿದ್ದಂತೆ.ಇಂತಹ ಹೊತ್ತ ಭೂಮಿಯಲ್ಲಿ ವಾಸಿಸುವ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ. ರಾಷ್ಟ್ರದ ಐಕ್ಯತೆಗೆ ರಾಷ್ಟ್ರೀಯ ಭಾವನೆಯೂ ಅಗತ್ಯವಾದದು. ಭಾರತ
ಸರ್ವಧರ್ಮಗಳ ನೆಲೆಬೀಡು,ಇಲ್ಲಿ ವಿವಿಧ ಜಾತಿ,ಮತ,ಪಂಥ,ಭಾಷೆ,ಸಂಸ್ಕೃತಿಯ ಜನರು ಇದ್ದಾರೆ.ಇಂತಹ ವೈವಿಧ್ಯತೆಯಿಂದ ಕೂಡಿರುವ ಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳು,ರಾಷ್ಟ್ರಧ್ವಜ,ರಾಷ್ಟ್ರಲಾಂಛನ,ರಾಷ್ಟ್ರಗೀತೆಗಳು ಪ್ರಮುಖಪಾತ್ರವನ್ನು ವಹಿಸುತ್ತವೆ, ಭಾರತದ ಪ್ರತಿಯೊಬ್ಬ ಪ್ರಜೆಯು ತನ್ನ ಸಂಕೀರ್ಣತೆಯನ್ನು ತೊರೆದು ಆಚರಿಸುವ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿಜಯಂತಿಗಳನ್ನು ಸಾಮೂಹಿಕವಾಗಿ ಆಚರಿಸಿದಾಗ ಐಕ್ಯತೆಯನ್ನು ಸಾಧಿಸಬಹುದು. ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ  ಗೌರವವನ್ನು  ನೀಡುವುದು  ,  ರಾಷ್ಟ್ರನಾಯಕರ  ಉತ್ತಮ  ಆದರ್ಶಗಳನ್ನು
ಬೆಳೆಸಿಕೊಳ್ಳುವುದು, ರಾಷ್ಟ್ರಕ್ಕೆ ಧಕ್ಕೆಯುಂಟಾದಾಗ ದೇಶದ ಎಲ್ಲ ಪ್ರಜೆಗಳು ಪರಸ್ಪರ ಸಹಾಯ ಸಹಕಾರದಿಂದ ನಡೆದುಕೊಂಡರೆ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರಬಹುದಾಗಿದೆ. ಅಲ್ಲದೆ ರಾಷ್ಟ್ರಮಟ್ಟದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ರಾಷ್ಟ್ರೀಯ ಭಾವೈಕ್ಯತೆಯನ್ನು ತರಬಲ್ಲವು.

ಉಪಸಂಹಾರ : ಎಲ್ಲರೂ ಎಲ್ಲರಿಗಾಗಿ ಎಂಬ ಮಂತ್ರ ದಿಂದ ,ಕಣ್ಣು ಬೇರೆಯಾದರೂ ನೋಟ ಒಂದೇ,ಭಾಷೆ ಬೇರೆಯಾದರೂ ಭಾವ ಒಂದೇ ಜಾತಿ.ಕುಲ.ಮತ,ಧರ್ಮ ಬೇರೆ ಬೇರೆಯಾದರೂ ಬಾಳುವ ದೇಶ ಒಂದೆಯಾಗಿದೆ ಎಂದ ಮೇಲೆ ನಾವೆಲ್ಲಾ ಒಂದೆ ತೊಟ್ಟಿಲಲ್ಲಿ ಬೆಳೆವ ಜನರು ನಾವು ಭಾರತೀಯರು ಐಕ್ಯತೆಯ ಮಂತ್ರ ಪಠಿಸುವವರಾಗಬೇಂಬುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕಿದೆ.

 7) ಸಮೂಹ ಮಾಧ್ಯಮಗಳು
ಪೀಠಿಕೆ: ಆಧುನಿಕ ಯುಗದಲ್ಲಿ ಸಮೂಹ ಮಾಧ್ಯಮಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದು ಸ್ಥಳದಲ್ಲಿಯ ವಿಚಾರಗಳನ್ನು ಮತ್ತೊಂದು ಸ್ಥಳದ ಜನರಿಗೆ ತಿಳಿಸುವ ಮಾಧ್ಯಮಗಳು ಸಮೂಹ ಮಾಧ್ಯಮಗಳು. ಸಮೂಹ ಮಾಧ್ಯಮಗಳು ಇಡಿ ವಿಶ್ವವನ್ನು ಒಂದುಗೂಡಿಸಿವೆ. ಪ್ರಪಂಪದ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರೂ ತತಕ್ಷಣವಾಗಿ ಇಡಿ ವಿಶ್ವದ ಜನರಿಗೆ ಮುಟ್ಟಿಸುವಷ್ಟು ಸಾಮರ್ಥವನ್ನು ಇಂದಿನ ಸಮೂಹ ಮಾಧ್ಯಮಗಳು ಬೆಳೆಸಿಕೊಂಡಿವೆ.

ವಿಷಯ ವಿವರಣೆ : ಸಾಮಾನ್ಯವಾಗಿ ಒಂದು ವಿಷಯವನ್ನು ಜನರಿಗೆ ತಲುಪಿಸುವ ದೂರದರ್ಶನ,ರೇಡಿಯೋ,ವೃತ್ತಪತ್ರಿಕೆಗಳು,ಅಂತಜರ್ಾಲದಂತಹ ಮೊದಲಾದ ಸಂಪರ್ಕ ಸಾಧನಗಳನ್ನು ಸಮೂಹ ಮಾಧ್ಯಮಗಳು ಎಂದು ಕರೆಯಲಾಗುತ್ತದೆ. ಸುದ್ಧಿ ಮಾಹಿತಿಯ ವರ್ಗಾವಣೆ ಅವಶ್ಯತೆ ಇದ್ದೇ ಇದೆ. ಒಬ್ಬರಿಗೆ ತಿಳಿದಿರುವ ಮಾಹಿತಿ ಘಟನೆಯ ಬಗ್ಗೆ ತಿಳುವಳಿಕೆ, ಚಿಂತನ-ಸುದ್ಧಿ-ಸಮಾಚಾರ- ವಾರ್ತೆವರಧಿ ಮುಂತಾದವುಗಳನ್ನು ಸಮೂಹ ಮಾಧ್ಯಮಗಳಲ್ಲಿ ನೋಡಬಹುದು. ಸಮೂಹ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲಾಗುತ್ತದೆ. ನಮ್ಮ ಜನರಿಗೆ ಅವಶ್ಯವಾದ ವಿಷಯಗಳನ್ನು ಮುಟ್ಟಿಸುವಲ್ಲಿ ಹಾಗೂ ಸಮಾಜವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸುತ್ತಿವೆ. ಇಂದಿನ ಮಾಧ್ಯಮಗಳು ಮನೋರಂಜನೆಯ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಮುಂತಾದ ವಿಷಯಗಳನ್ನು , ವಿಶ್ವದ ಇತರ ಸುದ್ಧಿಸಮಾಚಾರಗಳನ್ನು ತಿಳಿಸುತ್ತಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಮೂಹ ಮಾಧ್ಯಮಗಳು ಜ್ಞಾನವಿಕಾಸಕ್ಕೂ ಕೂಡ ಸಹಕಾರಿ ಆಗಿವೆ. ಹಾಗೆಯೇ ಸಮೂಹ ಮಾಧ್ಯಮಗಳಿಂದ ಸಾಕಷ್ಟು ದುಷ್ಪರಿಣಾಮಗಳು ಇವೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಯಬೇಕಾಗಿದೆ.
ವಿದ್ಯಾರ್ಥಿಗಳು ಅವಶ್ಯವಾದ ವಿಚಾರಗಳನ್ನು ಮಾತ್ರ ಆಯ್ದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ವಿಜ್ಞಾನದ ಆವಿಷ್ಕಾರದಿಂದ ಮೊಬೈಲ್ (ವಾಟ್ಸಪ್,ಈಮೇಲ್,ಹೈಕ್ ಗ್ರೂಪ್) ನಂತಹ ಮತ್ತೊಷ್ಟು ಸಮೂಹ ಮಾಧ್ಯಮಗಳು ಹುಟ್ಟಿಕೊಂಡು ವಿಚಾರ ವಿನಮಯಕ್ಕೆ ಸಹಕಾರಿಯಾಗಿವೆ.

ಉಪಸಂಹಾರ : ಒಟ್ಟಾರೆಯಾಗಿ ಸಮೂಹ ಮಾಧ್ಯಮಗಳಿಂದ ಇಡಿ ವಿಶ್ವವೇ ಸಾಕಷ್ಟು ವಿಚಾರಗಳನ್ನು ಕ್ಷಣಮಾತ್ರದಲ್ಲಿ ನೋಡಬಹುದಾಗಿದೆ. ಪ್ರತಿಯೊಂದು ಮಾಧ್ಯಮಗಳು ಸಮಾಜವನ್ನು ಸರಿದಾರಿಗೆ ತರುವ ಸುಖಿ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕೆಂಬುದೇ ಎಲ್ಲರ ಆಶಯವಾಗಿದೆ.

8) ಮೂಢನಂಬಿಕೆಗಳು
ಪೀಠಿಕೆ : ಮಾನವ ಸಂಘ ಜೀವಿ , ಅವನು ಸಮಾಜದಲ್ಲಿ ವಾಸಿಸುವಾಗ ಕೆಲವು ನಂಬಿಕೆಗಳನ್ನು ಇಟ್ಟುಕೊಂಡಿರುತ್ತಾನೆ. ಅದೇ ರೀತಿ ಕೆಲವು ಮೂಢನಂಬಿಕೆಗಳನ್ನು ಅನುಸರಿಸುತ್ತಾನೆ. ಮೂಢನಂಬಿಕೆಗಳನ್ನು ಎಲ್ಲಾ ದೇಶದ ಎಲ್ಲಾ ಜನಾಂಗದವರಲ್ಲಿ ಕೂಡ ಕಾಣಬಹುದು. ಮೂಢನಂಬಿಕೆಗಳಿಂದ ನಮ್ಮ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ.ಹಾನಿಕಾರವೇ ಹೆಚ್ಚು.

ವಿಷಯ ವಿವರಣೆ : ವೈಜ್ಞಾನಿಕವಲ್ಲದ ಕೇವಲ ನಂಬಿಕೆ ಮಾತ್ರದಿಂದಲೇ ಅನುಸರಿಸುವ ಅಸಂಪ್ರದಾಯಕ ಆಚರಣೆಗಳನ್ನು ಮೂಢನಂಬಿಕೆಗಳೆಂದು ಕರೆಯಲಾಗಿದೆ. ಅಂದರೆ ಯಾವ ನಂಬಿಕೆಗಳಲ್ಲಿ ಮೌಢ್ಯತೆ ತುಂಬಿರುತ್ತದೆಯೋ ಅವೇ ಮೂಢನಂಬಿಕೆಗಳು ಎನಿಸಿಕೊಳ್ಳುತ್ತವೆ, ಗ್ರಹಣನಂಬುವುದು, ವಿಧವೆತನ, ದೃಷ್ಟಿತೆಗೆಯುವುದು, ನಿವಾಳಿಯೆತ್ತುವುದು, ಬಲಿದಾನ, ಹರಕೆ, ದೇವದಾಸಿ ಪದ್ಧತಿ, ಭೂತಬಿಡಿಸುವುದು, ಭೂತರಾಧನೆ, ಬೆಕ್ಕು ಅಡ್ಡಹೋದರೆ ಕೆಟ್ಟದ್ದು ಎಂದು ನಂಬುವುದು, ಮಾಟಮಂತ್ರಗಳು, ವಶೀಕರಣ ಮುಂತಾದ ಅವೈಜ್ಞಾನಿಕ ನಂಬಿಕೆಗಳು ಹರಡಿಕೊಂಡಿವೆ. ಕೆಲವೊಂದು ಅತ್ಯಂತ ಅಮಾನವೀಯವಾದ ಪದ್ಧತಿಗಳು ಕೂಡ ಇವೆ. ಅನಕ್ಷರಸ್ಥರು ಇಂತಹ ಮೂಢನಂಬಿಕೆಗಳನ್ನು ನಂಬುವುದು ಹೆಚ್ಚು. ಎಚ್. ನರಸಿಂಹಯ್ಯನವರು ಹೇಳುವಂತೆ ಮೂಢನಂಬಿಕೆಗಳನ್ನು ನಂಬುವ ಅವಿದ್ಯಾವಂತನಿಗಿಂತ ಮೂಢನಂಬಿಕೆಗಳನ್ನು ಪ್ರತಿಪಾದಿಸುವ ವಿದ್ಯಾವಂತನು ಸಮಾಜಕ್ಕೆ ಬಹಳ ಅಪಾಯಕಾರಿ. ಶಿಕ್ಷಣವೆತ್ತರು ಮೂಢನಂಬಿಕೆಗಳ ಬಗ್ಗೆ ತಳೆಯುವ ನಿಷ್ಕ್ರಿಯತೆ ತುಂಬಾ ಹಾನಿಯುಂಟುಮಾಡುತ್ತದೆ. ಭಯ, ಅಜ್ಞಾನಗಳಿಂದ ತುಂಬಿರುವ ಮೂಢನಂಬಿಕೆಗಳು ಆತ್ಮವಿಶ್ವಾಸವನ್ನು ,ಸ್ವತಂತ್ರ ಆಲೋಚನೆಗಳನ್ನು ಮೊಟಕುಗೊಳಿಸುತ್ತವೆ. ಇವುಗಳು ದೇಶಗ ಪ್ರಗತಿಗೆ ವಿರೋಧವಾಗಿದ್ದು ಸಮಾಜಕ್ಕೆ ಅಘಾತವನ್ನುಂಟು ಮಾಡುತ್ತವೆ. ಆದ್ದರಿಂದ ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಮೂಢನಂಬಿಕೆಗಳ ಹಾನಿಯ ಬಗ್ಗೆ ತಿಳಿಯಬೇಕು ಮತ್ತು ತಿಳಿಸಬೇಕು.

ಉಪಸಂಹಾರ : ವಿಜ್ಞಾನ ಮತ್ತು ಅದರ ಸಂಶೋಧನೆಯಿಂದ ಮೂಢನಂಬಿಕೆಗಳ ಬಗ್ಗೆ ಸಮಾಜಕ್ಕೆ ಸಾಕಷ್ಟು ಅರಿವು ಮೂಡಿಸುವುದರ ಮೂಲಕ, ವಿವಿಧ ಸಭೆ , ಸಮ್ಮೇಳನಗಳಲ್ಲಿ ಪ್ರಚಾರಗೊಳಿಸುವ ಮೂಲಕ ಮತ್ತು ಚರ್ಚಿಸುವುದರ ಮೂಲಕ ತಡೆಗಟ್ಟಬಹುದಾಗಿದೆ. ಸಮಾಜದಲ್ಲಿ ಬೇರೂರಿವ ಪ್ರತಿಯೊಂದು ಮೂಢನಂಬಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅದರಿಂದ ಆಗುವ ಅನಾಹುತ, ನಷ್ಟ ತಪ್ಪಿಸಿಕೊಳ್ಳುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೆಂಬುದೆ ನಮ್ಮ ಆಶಯವಾಗಬೇಕು.

9) ಭಯೋತ್ಪಾದನೆ
ಪೀಠಿಕೆ : 21 ನೇ ಶತಮಾನದ ಜಗತ್ತು ಎದುರಿಸುತ್ತಿರುವ ಅತ್ಯಂತ ಪ್ರಮುಖ ಸಮಸ್ಯೆಗಳಲ್ಲಿ ಭಯೋತ್ಪಾದನೆ ಎನ್ನುವಂತಹದ್ದು ಒಂದು. ಆಧುನಿಕ ಜಗತ್ತಿಗೆ ಅಂಟಿಕೊಂಡಿರುವ ಒಂದು ಶಾಪವಾಗಿದೆ. ವಿಶ್ವಶಾಂತಿಗೆ ಧಕ್ಕೆಯನ್ನುಂಟು ಮಾಡುವ ಹೇಯ ಕೃತ್ಯವಾಗಿದೆ. ವಿಷಯ ವಿವರಣೆ : ಟೆರರಿಸಂ ಎನ್ನವ ಪದ ಲ್ಯಾಟಿನ್ ಭಾಷೆಯ ಟೆರರ್ ಎಂಬ ಪದದಿಂದ ಹುಟ್ಟಿದ್ದು ಭಯಪಡಿಸು, ನಡುಗಿಸು ಎಂದರ್ಥ. ಅಂದರೆ ಭಯವನ್ನು ಹುಟ್ಟಿಸುವುದು. ಭಯೋತ್ಪಾದನೆ ಎಂದರೆ ಹಿಂಸಾತ್ಮಕ ಕೃತ್ಯಗಳ ಮೂಲಕ ಜನರಲ್ಲಿ ಭಯವನ್ನು ಉತ್ಪಾದನೆ ಮಾಡುವುದು. ಕೆಲವು ವ್ಯಕ್ತಿಗಳು ಅಥವಾ ಗುಂಪುಗಳು ಜನರಲ್ಲಿ ಹಿಂಸಾತ್ಮಕ ತಂತ್ರ ಮತ್ತು ನಿರಂತರ ದಾಳಿಯ ಮೂಲಕ ಜನರನ್ನು ಬೆದರಿಸುವುದು, ಭಯಪಡಿಸುವುದಾಗಿದೆ. 17ನೇ ಶತಮಾನದ ಪ್ರಾನ್ಸ ಕ್ರಾಂತಿಯ ಸಂದರ್ಭದಲ್ಲಿ ಜಾಕೋಬಿನ ಆಡಳಿತದ ಅವಧಿಯಲ್ಲಿ ಸುಮಾರು 40 ಸಾವಿರ ಜನರನ್ನು ಕೊಲ್ಲಲಾಗಿತ್ತು. ಆ ಸಂದರ್ಭದಲ್ಲಿಯೆ ಭಯೋತ್ಪಾದನೆ ಎಂಬ ಶಬ್ದ ಚಾಲ್ತಿಗೆ ಬಂದಿತು. ಇಂದು ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ.

ಭಯೋತ್ಪಾದನೆಗೆ ಅನೇಕ ಕಾರಣಗಳಿವೆ. ಹೆಚ್ಚುತ್ತಿರುವ ಜನಸಂಖ್ಯೆ, ಬಡತನ, ಜನಾಂಗೀಯ ಸಂಘರ್ಷ, ಧರ್ಮಗಳ ಪ್ರತಿಷ್ಟೆ, ಮೂಲಭೂತವಾದ ಗುಂಪುಗಳ ಸಂಘರ್ಷ, ಪ್ರಾದೇಶಿಕ ಅಸಮತೋಲನ, ಯುದ್ಧ ಸಂಘರ್ಷಗಳು, ನಿರುದ್ಯೋಗ, ಇತ್ಯಾದಿ ಹೆಸರಿಸಬಹುದು. ಐಸಿಸ್,ಮುಜಾಹಿದ್ಧಿನ್,ಎಲ್ಟಿಟಿಇ,ತಾಲಿಬಾನ್ ನಂತಹ ಸಂಘಟನೆಗಳು ಭಯೋತ್ಪಾದನೆ ಯಲ್ಲಿ ತೊಡಗಿಕೊಂಡಿವೆ. ಅಮೇರಿಕಾ,ಭಾರತ.ಪ್ರಾನ್ಸ್,ಪಾಕಿಸ್ತಾನ,ಅಪ್ಘಾನಿಸ್ತಾನ,ಇಂಗ್ಲೆಂಡ್,ರಷ್ಯಾ ಮುಂತಾದ ದೇಶಗಳು ಭಯೋತ್ಪಾದನಾ ಪಿಡುಗಿಗೆ ಸಿಲುಕಿಕೊಂಡ ಪ್ರಮುಖ ರಾಷ್ಟ್ರಗಳಾಗಿವೆ.

ಉಪಸಂಹಾರ: ಆಧುನಿಕ ಜಗತ್ತಿಗೆ ಅಂಟಿಕೊಂಡಿರುವ ಭಯೋತ್ಪಾದನೆಯಂತಹ ಶಾಪವನ್ನು ತೊಡೆದು ಹಾಕಲು ಇಡಿ ವಿಶ್ವ ಸಮುದಾಯವೇ ಒಂದಾಗಬೇಕು. ಇಲ್ಲವಾದರೆ ವಿಶ್ವಶಾಂತಿಗೆ ಧಕ್ಕೆಯನ್ನುಂಟು ಮಾಡಿ, ಸಮಾಜದ ನೀತಿನಿಯಮಗನ್ನು ದಿಕ್ಕರಿಸಿ ವ್ಯವಸ್ಥೆಯನ್ನೆ ಬುಡಮೇಲು ಮಾಡಬಹುದು. ಪ್ರತಿಯೊಬ್ಬರಲ್ಲಿಯೂ ಅದರಿಂದಾಗುವ ಹಾನಿಯ ಬಗ್ಗೆ ತಿಳಿಸಿ ಅದನ್ನು ಮಟ್ಟ ಹಾಕಲೂ ಶ್ರಮಿಸಬೇಕು.

10) ಪತ್ರಿಕೆಗಳ ಮಹತ್ವ
ಪೀಠಿಕೆ : ದೈನಂದಿನ ಆಗು-ಹೋಗುಗಳನ್ನು,ಸುದ್ಧಿ-ಸಮಾಚಾರಗಳನ್ನು ತಿಳಿಸುವ ಮಾಧ್ಯಮವೇ ಪತ್ರಿಕೆ. ಸಮೂಹ ಮಾಧ್ಯಮಗಳಲ್ಲಿ ಅತ್ಯಂತ ಹಳೆಯ ಸಮೂಹ ಮಾಧ್ಯಮವೆಂದರೆ ಅದು ಪತ್ರಿಕೆ ಎಂದು ಹೇಳಬಹುದು. ವಿದ್ಯುನ್ಮಾನ ಕಾಲದಲ್ಲಿಯೂ ಪತ್ರಿಕೆಗಳಿಗೆ ಮಹತ್ವದ ಸ್ಥಾನವಿದೆ.

ವಿಷಯ ವಿವರಣೆ : ಪತ್ರಿಕೆಗಳು ಸುದ್ಧಿ-ಸಮಾಚಾರಗಳ ಮೂಲ ಪ್ರತಿಬಿಂಬಗಳಾಗಿವೆ. ದೇಶ-ವಿದೇಶಗಳ ಸುದ್ಧಿಯನ್ನು ದಿನನಿತ್ಯ ಕೊಡುವುದರ ಜೊತೆಗೆ  ಕತೆ-ಕವನ-ಕಾದಂಬರಿಗಳು, ಇತಿಹಾಸ, ಕ್ರೀಡೆ, ಮನೋರಂಜನೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಇತ್ಯಾದಿ ವಿಚಾರಗಳು ಪತ್ರಿಕೆಗಳಲ್ಲಿ ಬರುವುದರಿಂದ ಪ್ರತಿಯೊಬ್ಬರೂ ಕೂಡ ಜ್ಞಾನ ಪಡೆದುಕೊಳ್ಳಬಹುದು. ಓದುವ ಆಸಕ್ತಿ ಇರುವವರಿಗೆ ಮೂಲ ಅವಶ್ಯಕತೆಗಳಲ್ಲಿ ಪತ್ರಿಕೆಯೂ ಒಂದಾಗಿ ಪರಿಣಮಿಸಿದೆ. ಒಂದು ದಿನ ಪತ್ರಿಕೆ ಬರದೆ ಇದ್ದರೆ ಕಸಿವಿಸಿಯಾಗುತ್ತಾರೆ. ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದರಿಂದ ವಿಚಾರವಂತರಾಗಬಹುದು. ದಿನಪತ್ರಿಕೆ,ವಾರಪತ್ರಿಕೆ, ಮಾಸಪತ್ರಿಕೆ, ವಾರ್ಷಿಕಪತ್ರಿಕೆಗಳು ಪ್ರಸಾರವಾಗುತ್ತಿವೆ. ಕನ್ನಡದಲ್ಲಿ ಪ್ರಜಾವಾಣಿ, ವಿಜಯವಾಣಿ,ಕನ್ನಡಪ್ರಭ,ವಿಜಯಕರ್ನಾಟಕ ಮುಂತಾದ ಪತ್ರಿಕೆಗಳನ್ನು ಓದಬಹುದು. ಭಾರತದ ಮೊದಲಪತ್ರಿಕೆ ದಿ ಬೆಂಗಾಲ್ ಗೆಜೆಟ್ ಮೊದಮೊದಲು ಸರ್ಕಾರದ ಸುದ್ಧಿ ಪ್ರಸಾರಕ್ಕೆ ಸೀಮಿತವಾಗಿತ್ತು. ನಂತರ ಬೇರೆ ಬೇರೆ ಭಾಷೆಗಳಲ್ಲಿ ಖಾಸಗಿಯಾಗಿ ಪತ್ರಿಕೆಗಳು ಆರಂಭವಾಗಿ ಸಮಗ್ರ ವಿಷಯಗಳ ಪ್ರಸಾರಕ್ಕೆ ನಾಂದಿಯಾದವು. ಆದ್ದರಿಂದ ವೃತ್ತಪತ್ರಿಕೆಗಳನ್ನು ಓದುವುದರಿಂದ ಸಾಕಷ್ಟವಿಚಾರಗಳು ಲಭಿಸುತ್ತವೆ.

ಉಪಸಂಹಾರ : ಪತ್ರಿಕೆಗಳು ವಿಚಾರ ಶಕ್ತಿಯ ಆಕರಗಳು, ಜ್ಞಾನಾರ್ಜನೆಯ ಪ್ರಬಲ ಮಾಧ್ಯಮಗಳು ಆದ್ದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ದಿನನಿತ್ಯ ಬೇರೆಬೇರೆ ಭಾಷೆಯ ಬೇರೆಬೇರೆ ಪತ್ರಿಕೆಗಳನ್ನು ಓದಿ ವಿಚಾರವಂತರಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಬೇಕು. 

ರೈತರ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರೋಪಾಯಗಳು 4) ರೈತರ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರೋಪಾಯಗಳು

Related Posts