ಶಿಕ್ಷಣ ಹಾಗೂ ಬಾಲಕರಲ್ಲಿ ಜಾಗೃತಿಯ ಅವಶ್ಯಕತೆ

 ಹೆಣ್ಣಮಕ್ಕಳ ಸಬಲೀಕರಣಕ್ಕಾಗಿ ಶಿಕ್ಷಣ ಹಾಗೂ ಬಾಲಕರಲ್ಲಿ ಜಾಗೃತಿಯ ಅವಶ್ಯಕತೆ
  -ಡಾ.ಎಚ್.ಬಿ.ಚಂದ್ರಶೇಖರ್,

ಇತ್ತೀಚೆಗೆ ಸಂಗತ ಮತ್ತು ಚರ್ಚೆ ಅಂಕಣಗಳಲ್ಲಿ ಹೆಣ್ಣಾದರೆ ಹೊರೆ ಹಾಗೂ ಹೆಣ್ಣಾದರೆ ಹೊರೆ ಮನೋಭಾವ ಹುಟ್ಟಿದ್ದು ಎಲ್ಲಿಂದ ಎಂಬ ಶೀರ್ಷಿಕೆಗಳಡಿಯಲ್ಲಿ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹಾಗೂ ಶ್ರೀಮತಿ ಸುಮಂಗಲಾರವರು ಪ್ರಸ್ತಾಪಿಸಿರುವ ವಿಷಯಗಳು ಸಕಾಲಿಕವಾಗಿವೆ. ಮಹಿಳೆಯರನ್ನು ನೋಡುವ ಪುರುಷರ ದೃಷಿಕೋನವನ್ನು ಬದಲಿಸಲು ಪುರುಷರಲ್ಲಿ ಜಾಗೃತಿಯುಂಟುಮಾಡುವ ಅಗತ್ಯವಿದೆ. ನನ್ನ ದೃಷ್ಟಿಯಲ್ಲಿ ಈ ಕಾರ್ಯವು ಶಾಲಾ ಹಂತದಿಂದಲೇ ಪ್ರಾರಂಭವಾಗಬೇಕು. ಅಷ್ಟೇಕೆ ಮಕ್ಕಳ ಸ್ಕೂಲ್ ಮನೇಲಲ್ವೇ? ಎಂಬಂತೆ ಕುಟುಂಬದಲ್ಲಿಯೇ ಲಿಂಗತ್ವದ ಕುರಿತ ಮಾಹಿತಿ, ಅಭ್ಯಾಸಗಳು ಬಾಲಕರಿಗೆ ಆದಲ್ಲಿ  ಭವಿಷ್ಯದಲ್ಲಿ ಅವರು ಪುರುಷರಾಗಿ ಲಿಂಗ ಸಂವೇದಿ ಮನೋಭಾವವುಳ್ಳವರಾಗಿ ಬೆಳೆಯುತ್ತಾರೆ. ಆದರೆ ಹೆಚ್ಚಿನ ಕುಟುಂಬಗಳಲ್ಲಿ ಮನೆಯಲ್ಲಿ ಕಸ ಹೊಡೆಯುವುದು, ನೆಲ ಒರೆಸುವುದು, ಅಡುಗೆಗೆ ಸಹಾಯ ಮಾಡುವುದು ಇತ್ಯಾದಿ ಕಾರ್ಯಗಳನ್ನು ಬಾಲಕಿಯರಿಂದ ಮಾತ್ರ ಮಾಡಿಸುವ ವಾತಾವರಣ ಇದೆ.

ಬಾಲಕರು ಮನೆಯಲ್ಲಿನ ಸಹೋದರಿ ಮತ್ತು ತಾಯಿಗೆ ಮನೆ ಕಾರ್ಯಗಳಲ್ಲಿ ನೆರವಾಗುವ ಮನೋಭಾವವನ್ನು ಬೆಳೆಸಲು ಅಗತ್ಯ ತರಬೇತಿಯನ್ನು ಕುಟುಂಬದ ತಾಯಿ ಮತ್ತು ತಂದೆ ನೀಡಬೇಕು. ಆದರೆ ಹೆಚ್ಚಿನ ಕುಟುಂಬಗಳಲ್ಲಿ ತಾಯಂದಿರು ತಮ್ಮ ಗಂಡುಮಕ್ಕಳು ಕಸ ಗುಡಿಸುವ ಅಥವಾ ಅಡುಗೆಗೆ ನೆರವಾಗುವ ಕಾರ್ಯಗಳನ್ನು ಮಾಡಲು ಅವಕಾಶ ನೀಡುವುದಿಲ್ಲ. ಎಷ್ಟೇ ಕಷ್ಟವಾದರೂ ಮನೆಯಲ್ಲಿನ ಗಂಡ ಅಥವಾ ಗಂಡು ಮಕ್ಕಳಿಗೆ ಕಷ್ಟವಾಗಬಾರದು ಹಾಗೂ ಇಂತಹ ಕೆಲಸಗಳನ್ನು ಗಂಡಸರು ಮಾಡಬಾರದು ಎಂಬ ಮನಸ್ಥಿತಿಯುಳ್ಳವರಾಗಿರುತ್ತಾರೆ. ಗಂಡು ಮಕ್ಕಳೇನಾದರೂ ಕಸ ಗುಡಿಸಲು ಪೊರಕೆ ತೆಗೆದುಕೊಂಡರೆ ನೀನೇನು ಹೆಣ್ಣು ಮಗುವೇ ಕಸ ಗುಡಿಸಲು? ಎನ್ನುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಬೆಳೆದ ಮಕ್ಕಳು ದೊಡ್ಡವರಾದ ಮೇಲೆ ಬದುಕಿನ ಅನಿವಾರ್ಯತೆಗಳಲ್ಲಿ ಹೆಂಡತಿಯೊಂದಿಗೆ ಮನೆಕೆಲಸಗಳಲ್ಲಿ ಸಹಕರಿಸಲು ಸಾಧ್ಯವಾಗದೇ ಸಂಘರ್ಷಕ್ಕಿಳಿಯತ್ತಾರೆ. ಇದರಿಂದ ದಂಪತಿಗಳಲ್ಲಿ ವೈಮನಸ್ಯ ಮೂಡುತ್ತದೆ. ಬಹುಶಃ ಜನಾಂಗಗಳಿಂದ ಬಂದಂತಹ ರೂಢಿಗಳ ಬದಲಾವಣೆಗೆ ಮಾನಸಿಕವಾಗಿ ಹೆಂಗಸರು ಸಿದ್ಧರಿರುವುದಿಲ್ಲವೋ ಅಥವಾ ಗಂಡಸರು ಈ ಕಾರ್ಯಗಳನ್ನು ಮಾಡುವುದೇ ಇಲ್ಲವೆಂಬ ಮನೋಧೋರಣೆಯೋ ತಿಳಿಯದು. ಕೆಲವು ಕುಟುಂಬಗಳಲ್ಲಿ ಗೃಹಿಣಿಯು ಸೂಚಿಸಿದಾಗ್ಯೂ ಮನೆ ಕೆಲಸಗಳಲ್ಲಿ ತೊಡಗದೇ ಇರುವ ಪುರುಷರೇ ಹೆಚ್ಚಿದ್ದಾರೆ. ಈ ಕಾರ್ಯಗಳೆಲ್ಲ ಹೆಂಗಸರದೇ ಹೊರತು ಪುರುಷರಿಗೂ ಇವುಗಳಿಗೂ ಸಂಬಂಧವಿಲ್ಲ ಎಂಬ ಪರಂಪಾರಗತ ದೃಷ್ಟಿಕೋನದಿಂದ ಹೆಣ್ಣುಮಕ್ಕಳು ಎಷ್ಟೋ ವೇಳೆ ಅಸೌಖ್ಯದಿಂದಿದ್ದರೂ ಮನೆ ಕೆಲಸಗಳಲ್ಲಿ ತೊಡಗಿಕೊಳ್ಳಲೇಬೇಕೆಂಬ ಒತ್ತಾಯವನ್ನು ಹೆಚ್ಚಿನ ಗಂಡಸರು ಮಾಡುತ್ತಾರೆ. ಇದಕ್ಕೆಲ್ಲಾ ಪರಿಹಾರವೆಂದರೆ ಬಾಲಕರಲ್ಲಿ ಚಿಕ್ಕವಯಸ್ಸಿನಿಂದಲೇ ಲಿಂಗ ತಾರತಮ್ಯ ಮಾಡದ ಮನಸ್ಥಿತಿಯನ್ನು ಪೋಷಕರು ಬೆಳೆಸಬೇಕಿದೆ. ಮಾಧ್ಯಮಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಬಾಲಕರಲ್ಲಿ ಚಿಕ್ಕವಯಸ್ಸಿನಿಂದಲೇ ಬಾಲಕಿಯರ ಜೊತೆಗೂಡಿ ಸಹಜವಾಗಿ ಕಾರ್ಯ ನಿರ್ವಹಿಸುವಂತೆ ಪೋಷಕರನ್ನು ಸಜ್ಜುಗೊಳಿಸಲು ಅಗತ್ಯ ಜಾಗೃತಿಯನ್ನು ಉಂಟುಮಾಡಬೇಕಿದೆ.

ಇನ್ನು ಶಾಲೆಗಳಲ್ಲಿ ಬಾಲಕ-ಬಾಲಕಿಯರ ನಡುವೆ ಯಾವುದೇ ತಾರತಮ್ಯವಿಲ್ಲವೆಂದು ಹೇಳುವ ಹಾಗಿಲ್ಲ. ನಮ್ಮ ಪಠ್ಯಪುಸ್ತಕ, ತರಗತಿಯ ಸನ್ನಿವೇಶ, ಶಾಲಾ ವಾತಾವರಣದಲ್ಲಿ ಲಿಂಗ ತಾರತಮ್ಯವನ್ನು ತೊಡೆದು ಹಾಕಲು ಪ್ರಜ್ಞಾಪೂರ್ವಕ ಪ್ರಯತ್ನಗಳಾಗಿವೆ. ಆದಾಗ್ಯೂ ಸುಪ್ತ ರೀತಿಯ ಪೂರ್ವಾಗ್ರಹಗಳು ಈಗಲೂ ಅಸ್ತಿತ್ವದಲ್ಲಿದ್ದು, ಲಿಂಗ ತಾರತಮ್ಯ ಉಂಟು ಮಾಡುತ್ತಿರುವುದನ್ನು ನಾವು ತಳ್ಳಿ ಹಾಕುವಂತಿಲ್ಲ. ಶಾಲಾ ವಾರ್ಷಿಕೋತ್ಸವ, ಸ್ವಾತಂತ್ರ್ಯ ದಿನಾಚರಣೆ ಅಥವಾ ಇನ್ನಿತರ ಸಮಾರಂಭಗಳಲ್ಲಿ ಈಗಲೂ ಹೆಚ್ಚಿನ ಶಾಲೆಗಳಲ್ಲಿ ಶಾಲೆಯನ್ನು ಶುಚಿಗೊಳಿಸುವುದು, ರಂಗೋಲಿ ಹಾಕುವುದು, ಅಲಂಕಾರ ಮಾಡುವುದು ಈ ರೀತಿಯ ಚಟುವಟಿಕೆಗಳಿಗೆ ಮಾತ್ರ ಬಾಲಕಿಯರನ್ನು ಸೀಮಿತಗೊಳಿಸಿರುವುದು ಸುಳ್ಳಲ್ಲ. ಯಾವುದೇ ರೀತಿಯಲ್ಲಿ ಪ್ರಜ್ಞಾ ಪೂರ್ವಕವಾಗಿ ಲಿಂಗ ತಾರತಮ್ಯ ಮಾಡದ ನಗರದ ಖಾಸಗಿ ಶಾಲೆಯೊಂದರಲ್ಲಿ ಪ್ರಾರ್ಥನಾ ಸಮಯದಲ್ಲಿ ಶಾಲಾಧ್ವಜವನ್ನು ಶಾಲೆಯ ವಿದ್ಯಾರ್ಥಿನಾಯಕನಿಗೆ ಮಾತ್ರ ಹಾರಿಸಲು ಅವಕಾಶವಿದ್ದು, ವಿದ್ಯಾರ್ಥಿನಾಯಕಿಗೆ ಅಂತಹ ವಿಶೇಷಾಧಿಕಾರವಿಲ್ಲ. ಇದು ಆ ಶಾಲೆಯು ತನಗೇ ತಿಳಿಯದೇ ರೂಢಿಸಿಕೊಂಡಿರುವ ಲಿಂಗ ತಾರತಮ್ಯದ ವಿಧಾನವಾಗಿದೆ. ಅನೇಕ ಶಾಲೆಗಳಲ್ಲಿ ಕ್ರ್ರಿಕೆಟ್, ಫುಟ್ಬಾಲ್ನಂತಹ ಕ್ರೀಡೆಗಳು ಬಾಲಕರಿಗೆ ಮಾತ್ರ ಮೀಸಲು. ನಮ್ಮ ಬಹುತೇಕ ಶಾಲೆಗಳ ತರಗತಿಯೊಳಗಿನ ಸನ್ನಿವೇಶಗಳಲ್ಲಿ ಇರಬಹುದಾದ ಲಿಂಗ ತಾರತಮ್ಯಗಳ ಕುರಿತಂತೆ ಹೆಚ್ಚಿನ ಸಂಶೋಧನೆಗಳಾಗಬೇಕಿದೆ.

ರಾಜ್ಯದಲ್ಲಿ ಲಿಂಗ ತಾರತಮ್ಯ ನಿವಾರಣೆ ಹಾಗೂ ಲಿಂಗತ್ವ ಕುರಿತಂತೆ ಶಿಕ್ಷಕರಿಗೆ ತರಬೇತಿಗಳನ್ನು ನೀಡಲಾಗಿದ್ದು, ಶಿಕ್ಷಕರ ಮನೋಭಾವಗಳ ಬದಲಾವಣೆಗಾಗಿ ಪ್ರಯತ್ನಗಳು ನಡೆದಿವೆ. ರಾಜ್ಯದಲ್ಲಿನ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಗಿಂತಲೂ ಶಿಕ್ಷಕಿಯರ ಸಂಖ್ಯೆಯು ಹೆಚ್ಚಿರುವುದು ಈ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆ ಆಗಿದೆ. (2012-13ರ ಶಿಕ್ಷಣ ಇಲಾಖೆಯ ಅಧಿಕೃತ ಅಂಕಿ ಅಂಶದ ಪ್ರಕಾರ ರಾಜ್ಯದ ಒಟ್ಟು ಸರ್ಕಾರಿ ಹಾಗೂ ಖಾಸಗಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1.72 ಲಕ್ಷ ಶಿಕ್ಷಕರಿದ್ದರೆ 2.14 ಲಕ್ಷ ಶಿಕ್ಷಕಿಯರಿದ್ದಾರೆ)

ಲಿಂಗತ್ವದ ಕುರಿತು ಹಾಗೂ ಹದಿಹರೆಯದ ಬಾಲಕಿಯರಿಗೆ ಅಗತ್ಯವಾದ ಮಾಹಿತಿಯುಳ್ಳ ಕಿಶೋರಿ ಎಂಬ ಮಾಹಿತಿ ಒದಗಿಸುವ ತರಬೇತಿಯನ್ನು ಸರ್ಕಾರಿ ಶಾಲೆಗಳ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ. ಆದರೆ ಬಾಲಕರಿಗೂ ಲಿಂಗ ತಾರತಮ್ಯ ನಿವಾರಣೆ ಕುರಿತಂತೆ ಜಾಗೃತಿಯುಂಟುಮಾಡಲು ಕಾರ್ಯಕ್ರಮಗಳನ್ನು ರೂಪಿಸಿದಲ್ಲಿ ಬಾಲಕರ ಮನೋಭಾವ ಬದಲಾವಣೆಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕಿದೆ.

ಬಾಲಕಿಯರು ಋತುಮತಿಯರಾಗುತ್ತಿದ್ದಂತೆ ಶಾಲೆ ಬಿಡಿಸುವ ಪರಿಪಾಠ ರಾಜ್ಯದಲ್ಲಿನ್ನೂ ಜೀವಂತವಾಗಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ ನಡೆಸಲ್ಪಟ್ಟ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯಲ್ಲಿ 5,238 ಬಾಲಕಿಯರು ಋತುಮತಿಯಾದ ಕಾರಣ, 1,365 ಬಾಲಕಿಯರು ಮದುವೆಯಾಗಿದ್ದು ಹಾಗೂ 2,858 ಬಾಲಕಿಯರು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಇತರೆ ಕಾರಣಗಳಿಂದ ಶಾಲೆ ತೊರೆದಿರುವುದಾಗಿ ವರದಿಯಾಗಿದೆ. ಇದರ ಜೊತೆ 14,671 ಬಾಲಕಿಯರು ಮನೆಗೆಲಸ ಹಾಗೂ ತನ್ನ ತಮ್ಮ ತಂಗಿಯರನ್ನು ನೋಡಿಕೊಳ್ಳಲು ಶಾಲೆಗೆ ಹೋಗಲು ಸಾಧ್ಯವಾಗಿಲ್ಲದಿದ್ದರೆ 3,384 ಬಾಲಕಿಯರು ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲಕಿಯರಿಗೆ ಶಾಲೆಗಳಲ್ಲಿ ಶೌಚಾಲಯ ಹಾಗೂ ವಿಶ್ರಾಂತಿ ಕೋಣೆಯ ಸೌಲಭ್ಯಗಳ ಅಭಾವವೂ ಅವರು ಅನುಕೂಲಕರ ರೀತಿಯಲ್ಲಿ ಶಾಲೆಗೆ ಹಾಜರಾಗಲು ಅಡ್ಡಿಯುಂಟುಮಾಡುತ್ತದೆ.

ಅಮೆರಿಕಾದಲ್ಲಿ 1990ರಲ್ಲಿ ಅಮೆರಿಕನ್ ಅಸೋಸಿಯೇಷನ್ ಆಫ್ ಯೂನಿವರ್ಸಿಟಿ ವುಮೆನ್ ನಿಂದ ನಡೆದ ಒಂದು ಸಮೀಕ್ಷೆಯಂತೆ  ಬಾಲಕಿಯರು ಋತುಮತಿಯರಾದ ಸಂದರ್ಭದಲ್ಲಿ ಅವರಲ್ಲ್ಲಿ ಆತ್ಮವಿಶ್ವಾಸ ಮತ್ತು ಸಾಮಥ್ರ್ಯಗಳಲ್ಲಿ ಕುಸಿತ ಕಂಡುಬರುತ್ತದೆಂದು ತಿಳಿದು ಬಂದಿದೆ. ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿಯೇ ಇಂತಹ ಸನ್ನಿವೇಶವಿದ್ದಲ್ಲಿ, ನಮ್ಮ ದೇಶದ ಪರಿಸ್ಥಿತಿಯ ಬಗ್ಗೆ ಆಲೋಚಿಸುವುದೇ ಕಠಿಣವಾಗುತ್ತದೆ. ಬಾಲಕಿಯರು ಕಿಶೋರಾವಸ್ಥೆಗೆ ತಲುಪಿದ ಸನ್ನಿವೇಶಗಳಲ್ಲಿ ಅವರಲ್ಲಾಗುವ ಮನೋದೈಹಿಕ ಬದಲಾವಣೆಗೆ ಅವರು ಹೊಂದಿಕೊಳ್ಳಲು ಕುಟುಂಬ ಹಾಗೂ ಶಾಲೆಯು ಅಗತ್ಯ ಬೆಂಬಲ ಮತ್ತು ಮಾರ್ಗದರ್ಶನ ನೀಡಬೇಕು. ಅವರಿಗೆ ಅನುಕೂಲಕರವಾಗುವ ರೀತಿಯಲ್ಲಿ ಶಾಲೆಗಳಲ್ಲಿ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸುವತ್ತ ಕ್ರಮಗಳಾಗಬೇಕಿದೆ.

1974 ರಲ್ಲಿ ಭಾರತದಲ್ಲಿನ ಮಹಿಳೆಯರ ಸ್ಥಾನಮಾನದ ಕುರಿತಂತೆ ರಚಿತವಾದ ಸಮಿತಿಯು ವರದಿ ಮಾಡಿರುವಂತೆ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ತಮ್ಮ ಕುಟುಂಬದ ಅಸೌಖ್ಯ ಹಾಗೂ ನಿರುದ್ಯೋಗಿ ಪೋಷಕರು ಮತ್ತು ಒಡಹುಟ್ಟಿದ ಚಿಕ್ಕಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರುವುದರಿಂದ ಹೆಚ್ಚಿನ ಸಂಖ್ಯೆಯ ಬಾಲಕಿಯರು ಶಾಲೆಗಳಿಂದ ಹೊರಗುಳಿಯುತ್ತಾರೆಂದು ವರದಿ ಮಾಡಿದೆ. ಈ ಕಾರಣದಿಂದ ಶಾಲೆಗಳಲ್ಲಿ ಚಿಕ್ಕಮಕ್ಕಳನ್ನು ನೋಡಿಕೊಳ್ಳಲು ಶಿಶುಪಾಲನಾ ಗೃಹಗಳನ್ನು ಶಾಲೆಗಳಿಗೆ ಹೊಂದಿಕೊಂಡಂತೆ ನಿಮರ್ಿಸುವುದರ ಜೊತೆ ಅಲ್ಲಿ ಆಟಗಳು ಮತ್ತು ಕ್ರೀಡೆಗಳಿಗೆ ಅವಕಾಶವಿರುವಂತೆ ನೋಡಿಕೊಳ್ಳಬೇಕೆಂಬ ಶಿಫಾರಸ್ಸನ್ನೂ ಸಹ ಸಮಿತಿಯು ಮಾಡಿದೆ.

ಹೆಣ್ಣುಮಕ್ಕಳ ಶಿಕ್ಷಣದ ರಾಷ್ಟ್ರೀಯ ಸಮಿತಿ (1958-59), ಕೊಠಾರಿ ಆಯೋಗ (1964-65), ರಾಷ್ಟ್ರೀಯ ಶಿಕ್ಷಣ ನೀತಿ (1986) ಗಳು ಹೆಣ್ಣುಮಕ್ಕಳ ಸಬಲೀಕರಣ ಹಾಗೂ ಸ್ವಾವಲಂಬನೆಗಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿವೆ. ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಹೆಚ್ಚಿನ ಪ್ರಯತ್ನಗಳಾಗಿದ್ದಾಗ್ಯೂ ಶಿಕ್ಷಣದಿಂದ ವಂಚಿತವಾಗುವ ಹೆಣ್ಣುಮಕ್ಕಳ ಸಂಖ್ಯೆ ಸಾಕಷ್ಟಿದ್ದು, ಅವರನ್ನು ಶಿಕ್ಷಣದತ್ತ ಸೆಳೆಯುವಂತೆ ಮಾಡುವುದರ ಜೊತೆ ಕೌಟುಂಬಿಕ ಮತ್ತು ಶಾಲಾ ಸನ್ನಿವೇಶಗಳಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ತಾರತಮ್ಯವಾಗದಂತೆ ಎಚ್ಚರವಹಿಸಬೇಕಿದೆ. ಹೆಣ್ಣುಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಂದುವರೆಸಲು ಸರ್ಕಾರದ ವತಿಯಿಂದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ಕನರ್ಾಟಕ ಕಸ್ತೂರಬಾ ಬಾಲಿಕಾ ವಿದ್ಯಾಲಯ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಇತ್ಯಾದಿಗಳನ್ನು ಸ್ಥಾಪಿಸಲಾಗಿದ್ದು, ಈ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲಾ ಹೆಣ್ಣುಮಕ್ಕಳು ಶಿಕ್ಷಣವನ್ನು ಮುಂದುವರೆಸಲು ಪೋಷಕರು, ಸ್ಥಳೀಯ ಸಮುದಾಯ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಮುಂದಾಗಬೇಕಿದೆ. ಈ ಅಂಶಗಳ ಜೊತೆ ಬಾಲಕರಲ್ಲಿ ಲಿಂಗ ಸಂವೇದನೆ ಬೆಳೆಸಲು ಕುಟುಂಬ ಮತ್ತು ಶಾಲೆಗಳು ಶ್ರಮಿಸಿದಲ್ಲಿ ಹೆಣ್ಣುಮಕ್ಕಳ ಸಬಲೀಕರಣದ ಜೊತೆ ಆರೋಗ್ಯಕರ ಸಮಾಜ ನಿಮರ್ಾಣ ಸಾಧ್ಯ

Related Posts