ತಂಬಾಕು ನಿಯಂತ್ರಣದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯ ಪಾತ್ರ
ಮೂಲ: ಡಾ. ಪ್ರಗತಿ ಬಿ. ಹೆಬ್ಬಾರ್

ಇತ್ತೀಚಿನ ದಿನಗಳಲ್ಲಿ ವಿವಿಧ ಮಾಧ್ಯಮಗಳು ಉಪಯೋಗ ಆಗುವಂತಹ ಮತ್ತು ದುಷ್ಪರಿಣಾಮ ಬೀರುವಂತಹ ವಿಚಾರಗಳಿಂದಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತಿವೆ. ಈ ಅಂಶಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ತಂಬಾಕು ಸಹ ಮಕ್ಕಳ ಮೇಲೆ ಗಂಭೀರ ರೀತಿಯ ಪರಿಣಾಮ ಬೀರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) 2010 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ.9.6 ರಷ್ಟು ಮಕ್ಕಳು ಅತ್ಯಂತ ಸುಲಭವಾಗಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳ ಎದುರೇ ಇರುವ ಅಂಗಡಿಗಳು, ಆಕರ್ಷಕ ಪೊಟ್ಟಣಗಳು, ಕೈಗೆಟುಕುವ ದರ ಮತ್ತು ಮಕ್ಕಳನ್ನು ಗಮನದಲ್ಲಿಟ್ಟುಕೊಂಡೇ ಸಿದ್ಧಪಡಿಸಲಾದ ಮತ್ತು ಪ್ರದರ್ಶಿಸಲ್ಪಡುತ್ತಿರುವ ಜಾಹೀರಾತುಗಳು ಹಾಗೂ ಮಾರುಕಟ್ಟೆ ವ್ಯವಹಾರ ಮಾಡುತ್ತಿರುವುದರಿಂದ ಓದುವ ಹಂತದಲ್ಲೇ ಮಕ್ಕಳು ತಂಬಾಕು ಉತ್ಪನ್ನಗಳ ದಾಸರಾಗುತ್ತಿದ್ದಾರೆ.

ಈ ಕೆಳಗಿನ ಹಂತಗಳಲ್ಲಿ ಮಕ್ಕಳು ತಂಬಾಕು ವ್ಯಸನಿಗಳಾಗುತ್ತಾರೆ:-
1. ತಂಬಾಕು ಉತ್ಪನ್ನಗಳ ಮೇಲಿನ ನಂಬಿಕೆ ಮತ್ತು ಮನೋಧರ್ಮ.
2. ತಂಬಾಕು ಉತ್ಪನ್ನಗಳ ಬಳಕೆಯ ಪ್ರಯತ್ನ.
3. ತಂಬಾಕು ಸೇವನೆಯ ಪ್ರಯತ್ನ.
4. ನಿರಂತರವಾಗಿ ತಂಬಾಕು ಬಳಕೆ ಮಾಡುವುದು.
5. ತಂಬಾಕು ಉತ್ಪನ್ನಗಳಿಗೆ ದಾಸರಾಗುವುದು.
ಚಿಕ್ಕ ವಯೋಮಾನದಲ್ಲೇ ತಂಬಾಕು ಉತ್ಪನ್ನಗಳ ವ್ಯಸನಿಗಳಾಗುವುದನ್ನು ತಡೆಗಟ್ಟಿ, ಅವರನ್ನು ನಾನಾ ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಈ ಮಾರಕ ಪದಾರ್ಥಗಳ ದಾಸರಾಗುವುದನ್ನು ತಪ್ಪಿಸುವ ಮೊದಲ ಹೆಜ್ಜೆಯೆಂದರೆ ಅವರು ತಂಬಾಕು ಉತ್ಪನ್ನಗಳ ಬಳಕೆಯ ಪ್ರಯತ್ನ ನಡೆಸುತ್ತಿದ್ದಾಗಲೇ ಮೂಲೋತ್ಪಾಟನೆ ಮಾಡುವುದು.

ಭಾರತದಲ್ಲಿ ತಂಬಾಕು ಉತ್ಪನ್ನಗಳಿಂದ ಆಗುವ ದುಷ್ಪರಿಣಾಮಗಳಿಂದ ಜನರನ್ನು ರಕ್ಷಿಸಲೆಂದೆ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣಕಾಯ್ದೆ, 2003 (ಕೋಟ್ಪಾ)ಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ 4 ನೇ ನಿಯಮದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸಾರ್ವಜನಿಕರು ಬಂದು ಹೋಗುವುದರಿಂದ ಶಿಕ್ಷಣ ಸಂಸ್ಥೆಗಳನ್ನೂ ಸಾರ್ವಜನಿಕ ಸ್ಥಳಗಳೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಇದು ಧೂಮಪಾನ ನಿಷೇಧಿತ ವಲಯ. ಇಲ್ಲಿ ಧೂಮಪಾನ ಮಾಡುವುದು ಅಪರಾಧ ಎಂಬ ಫಲಕಗಳನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಹಾಕಬೇಕು.

ಕಾಯ್ದೆಯ 6 ನೇ ನಿಯಮ ಮಕ್ಕಳ ಆರೋಗ್ಯದ ಮೇಲೆ ಕೇಂದ್ರೀಕೃತ ವಾಗಿದೆ. ಇದರಲ್ಲಿ ಎರಡು ಉಪನಿಯಮಗಳಿದ್ದು, 6ಎ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಮಾರಾಟಗಾರ 18 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. 6 ಬಿ ಪ್ರಕಾರ ಶೈಕ್ಷಣಿಕ ಸಂಸ್ಥೆಗಳ 100 ಗಜಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ನಿಷೇಧ. ಈ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳನ್ನು 100 ಗಜಗಳ ವ್ಯಾಪ್ತಿಯಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ, ಕಾನೂನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಮತ್ತು 200 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಎಂದು ನಾಮಫಲಕಗಳನ್ನು ಹಾಕಬೇಕು.

ರಾಜ್ಯದಲ್ಲಿ ತಂಬಾಕು ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು
* ಸಾರ್ವಜನಿಕ ಶಿಕ್ಷಣ ಇಲಾಖೆ ಆನ್ಲೈನ್ ಪೋರ್ಟಲ್ ಮೂಲಕ ತಂಬಾಕು ನಿಯಂತ್ರಣದ ಬಗ್ಗೆ ಇರುವ ಎಲ್ಲಾ ಅಂಕಿ-ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ಬಿತ್ತರ ಮಾಡುತ್ತಿರುವುದು. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ನಿಷೇಧಿತ ವಲಯದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ಮಾಡಿದ್ದರ ಬಗ್ಗೆ ನಿಯಮ 4 ಮತ್ತು ನಿಯಮ 6 ರ ಉಲ್ಲಂಘನೆಯಾಗಿರುವ ಸಮಗ್ರ ವರದಿ ಪ್ರತಿ ತಿಂಗಳು ದಾಖಲಾಗುತ್ತಿದೆ.

* ಜೂನ್ ತಿಂಗಳಲ್ಲಿ ವೆಬ್ಸೈಟ್ನಲ್ಲಿ ದಾಖಲಾದ ಅಂಕಿ-ಅಂಶಗಳ ಪ್ರಕಾರ, ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ನಿಯಮ ಉಲ್ಲಂಘನೆ ಪತ್ತೆ ಹಚ್ಚುವಲ್ಲಿ ಹಿಂದೆ ಬಿದ್ದಿವೆ. ರಾಜ್ಯದ ಇತರೆ ಜಿಲ್ಲೆಗಳು ಕೋಟ್ಪಾ ಫಲಕಗಳನ್ನು ಹಾಕಿರುವ ಶಾಲೆಗಳು ಮತ್ತು ಹಾಕದಿರುವ ಶಾಲೆಗಳ ಬಗ್ಗೆ ವಿಸ್ತೃತ ಮಾಹಿತಿಯನ್ನೊಳಗೊಂಡ ವರದಿಯನ್ನು ದಾಖಲಿಸಿವೆ.

* ಅಲ್ಲದೇ, ಶಿಕ್ಷಣ ಸಂಸ್ಥೆಗಳ 100 ಗಜಗಳ ಸುತ್ತಮುತ್ತ ಕೋಟ್ಪಾಕಾಯ್ದೆ ಜಾರಿ ಕುರಿತು ಸರ್ಕಾರ ಹೊರಡಿಸಿರುವ ಆದೇಶವನ್ನು ಶಿಕ್ಷಣ ಇಲಾಖೆ ಮತ್ತು ಗೃಹ ಇಲಾಖೆಗಳು ಪರಸ್ಪರ ವಿನಿಮಯ ಮಾಡಿಕೊಂಡಿರುವುದರ ಜತೆಗೆ ಉತ್ತಮ ಸಮನ್ವಯತೆ ಸಾಧಿಸುತ್ತಿವೆ. ಪ್ರತಿಯೊಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು 6 ಬಿ ನಿಯಮ (ಶಿಕ್ಷಣ ಸಂಸ್ಥೆ ಸುತ್ತಮುತ್ತ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವ ಅಂಗಡಿ, ಮುಗ್ಗಟ್ಟುಗಳ ವಿವರ) ಉಲ್ಲಂಘನೆ ಆಗಿರುವ ಪ್ರಕರಣಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಂಕಿಅಂಶಗಳನ್ನು ನೀಡಬೇಕು. ಈ ಅಂಕಿ ಅಂಶದ ಆಧಾರದಲ್ಲಿ ಪೊಲೀಸರು ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ಭವಿಷ್ಯದಲ್ಲಿ ತಂಬಾಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳು:
* ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ, ಶಿಕ್ಷಕರಲ್ಲಿ ಮತ್ತು ಶಿಕ್ಷಣ ಕ್ಷೇತ್ರದ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವುದು.
* ಪ್ರತಿ ವರ್ಷ 31 ರಂದು ವಿಶ್ವತಂಬಾಕುರಹಿತ ದಿನ ಮತ್ತು ಏಪ್ರಿಲ್ 7 ರಂದು ವಿಶ್ವಆರೋಗ್ಯ ದಿನವನ್ನಾಗಿ ಆಚರಿಸಲು ಉತ್ತೇಜನ ನೀಡಬೇಕು. ಈ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು.
* 5 ನೇ ತರಗತಿ ನಂತರದ ತರಗತಿಗಳ ಪಠ್ಯದಲ್ಲಿ ತಂಬಾಕಿನಿಂದ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳ ಕುರಿತ ಪಠ್ಯವನ್ನು ಅಳವಡಿಸಬೇಕು.
* ಧೂಮಪಾನ ನಿಷೇಧಿತ ವಲಯ- ಇಲ್ಲಿ ಧೂಮಪಾನ ಮಾಡುವುದು ಅಪರಾಧ ಎಂಬ ಫಲಕಗಳನ್ನು ಶಿಕ್ಷಣ ಸಂಸ್ಥೆಗಳ ಒಳಗೆ ಹಾಕಬೇಕು.
* ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳನ್ನು 100 ಗಜಗಳ ವ್ಯಾಪ್ತಿಯಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ., ಕಾನೂನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಮತ್ತು 200 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಎಂದು ನಾಮಫಲಕಗಳನ್ನು ಹಾಕಬೇಕು. ಈ ಮೂಲಕ ಕೋಟ್ಪಾದ 6 ಬಿ ನಿಯಮಜಾರಿಗೊಳಿಸಬೇಕು.
* ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜಗಳ ವ್ಯಾಪ್ತಿಯಲ್ಲಿ ಸಿಗರೇಟು ಅಥವಾ ತಂಬಾಕು ಮಾರಾಟವಾಗುತ್ತಿದ್ದರೆ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಕಾನೂನು ಜಾರಿಗೆ ಸಹಕಾರ ನೀಡಬೇಕು
ಇಂತಹ ಹತ್ತು ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಬೇಕು.ಯುವಜನಾಂಗದೇಶ ಮತ್ತು ರಾಜ್ಯದ ಶಕ್ತಿ ಇದ್ದಂತೆ. ಭವಿಷ್ಯದಲ್ಲಿ ಈ ಶಕ್ತಿಯನ್ನು ಆರೋಗ್ಯವಂತವಾಗಿಡಲು ಎಲ್ಲರೂ ಕಲೆತು ತಂಬಾಕು ನಿಯಂತ್ರಣದ ಕೈಂಕರ್ಯದಲ್ಲಿ ತೊಡಗಬೇಕಿದೆ

ತಂಬಾಕು ನಿಯಂತ್ರಣದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯ ಪಾತ್ರ ಮೂಲ

Related Posts