ಪ್ರೊ. ಸಿ.ಎನ್.ಆರ್. ರಾವ್ ಭಾರತರತ್ನ ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ಶಿಕ್ಷಣವಾರ್ತೆಗೆ ನೀಡಿದ ಸಂದರ್ಶನದ ಆಯ್ದ ಭಾಗ

ಶಿಕ್ಷಣವಾರ್ತೆ: ತಮ್ಮ ಶಾಲಾ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಹೇಳಿ.?
ಪ್ರೊ: ಸಿಎನ್ನಾರ್ ರಾವ್: ಬೆಂಗಳೂರಿನಲ್ಲಿ ಕೆಲವೇ ಕೆಲವು ಉತ್ತಮ ಶಾಲೆಗಳಿವೆ. ಆಚಾರ್ಯ ಪಾಠಶಾಲಾ, ನ್ಯಾಷನಲ್ ಹೈಸ್ಕೂಲ್ ಮತ್ತು ಕೆಲವು ಸರ್ಕಾರಿ ಶಾಲೆಗಳು. ನಾನು ಓದಿದ್ದು ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲೇ. ಖಾಸಗಿ ಶಾಲೆಗಳಲ್ಲಿ ಓದಿದರೂ (ಆಚಾರ್ಯ ಪಾಠಶಾಲಾದಲ್ಲಿ) ಕೇವಲ 2 ರೂಪಾಯಿ, 1 ರೂಪಾಯಿ ಹೆಚ್ಚೆಂದರೆ 3 ರೂಪಾಯಿ ಫೀಸ್ ಇತ್ತು. ಕಡಿಮೆ ಫೀಸು, ಅತ್ಯುತ್ತಮ ಶಿಕ್ಷಕರು. ನನಗೆ ಶಾಲಾ ಅವಧಿಯಲ್ಲಿ ಅತ್ಯುತ್ತಮ ಶಿಕ್ಷಕರಿದ್ದರು ನಾನು ಕಾಲೇಜಿಗೆ ಹೋದಂತೆಲ್ಲಾ ಬೋಧನೆಯ ಗುಣಮಟ್ಟ ಕಡಿಮೆ ಆಗ್ತಾ ಹೋಯ್ತು. ಸಾಮಾನ್ಯವಾಗಿ ನಮ್ಮ ದೇಶದ ಕಾಲೇಜುಗಳಲ್ಲಿ ಒಳ್ಳೆಯ ಶಿಕ್ಷಕರಿಲ್ಲ ಅಂತಲೇ ಹೇಳಬಹುದು. ಕರ್ನಾಟಕದಲ್ಲಿ ಒಳ್ಳೆಯ ಶಾಲಾ ಶಿಕ್ಷಕರಿದ್ದಾರೆ. ನಾವು ಓದಬೇಕಾದಾಗ ಶಿಕ್ಷಕರಿಗೆ 50ರೂ, 60 ರೂ ಸಂಬಳ ಸಿಗ್ತಾಇತ್ತು. ನನ್ನ ಶಾಲಾ ಅವಧಿಯಲ್ಲೇ ರಸಾಯನ ಶಾಸ್ತ್ರ ವಿಷಯಕ್ಕೆ ಅತ್ಯುತ್ತಮ ಶಿಕ್ಷಕರಿದ್ದರು. ನನಗೆ ಅವರನ್ನು ಮರೆಯೋಕ್ಕೇ ಆಗಲ್ಲ. ಫ್ಲೋರೀನ್, ಜಲಜನಕ ತಯಾರಿಸುವುದು ಹೇಗೆ ಎಂಬಂಥ ಪ್ರಯೋಗಗಳನ್ನು ತರಗತಿಯಲ್ಲಿ, ಪ್ರಯೋಗಶಾಲೆಯಲ್ಲಿ ಮಾಡಿ ತೋರಿಸ್ತಾ ಇದ್ದರು. ಆಚಾರ್ಯ ಪಾಠಶಾಲೆಯೊಬ್ಬ ಶಿಕ್ಷಕರು ನನಗೆ ತುಂಬಾ ನೆನಪಾಗ್ತಾರೆ. 1945ರಲ್ಲಿ ನನಗಾಗ 11 ವರ್ಷ ವಯಸ್ಸು. 1947 ಕ್ಕೆ ನಾನು ಪ್ರೌಢಶಾಲೆ ಮುಗಿಸಿದ್ದೆ. ನನಗಾಗ 13 ವರ್ಷ. ಆಗ ಸರ್.ಸಿ.ವಿ. ರಾಮನ್ರನ್ನು ಶಾಲೆಗೆ ಕರೆಸಿದ್ದರು. ನಮ್ಮ ಶಿಕ್ಷಕರು ನೀವು ನನ್ನ ಕೆಲವು ವಿದ್ಯಾರ್ಥಿಗಳ ಕೈಲಿ ಮಾತನಾಡಬೇಕು ಅಂತ ಅವರನ್ನು ಕೇಳಿದರು. ಶಾಲೆಯ ಇಬ್ಬರು ಅಥವಾ ಮೂವರು ಒಳ್ಳೆಯ ವಿದ್ಯಾರ್ಥಿಗಳನ್ನು ಭಾರತೀಯ ವಿಜ್ಞಾನ ಮಂದಿರದ ಅವರ ಪ್ರಯೋಗಾಲಯಕ್ಕೆ ಕರೆದುಕೊಂಡು ಬರಲು ಪ್ರೊಫೆಸರ್ ರಾಮನ್ರವರು ಶಿಕ್ಷಕರಿಗೆ ತಿಳಿಸಿದರು. ಆ ವಿದ್ಯಾರ್ಥಿಗಳಲ್ಲಿ ನಾನು ಒಬ್ಬನಾಗಿದ್ದುದು ನನ್ನ ಅದೃಷ್ಟ. ತಮ್ಮ ಪ್ರಯೋಗಾಲಯದಲ್ಲಿ ಏನು ಮಾಡಲಾಗುತ್ತಿದೆ ಎಂಬ ಬಗ್ಗೆ ಹೇಳುತ್ತಾ ಪ್ರೊ: ರಾಮನ್ ರವರು ಒಂದು ಗಂಟೆಗಿಂತ ಹೆಚ್ಚಿನ ಸಮಯ ನಮ್ಮ ಜೊತೆ ಕಳೆದರು. ಇದೇ ಮೇಷ್ಟ್ರೇ ನಮ್ಮನ್ನು ಒಮ್ಮೆ ಗಾಂಧೀಜಿ ಮದ್ರಾಸಿಗೆ (ಇಂದಿನ ಚನ್ನೈ) ಬರ್ತಾರೆ ಅಂತ ತಿಳಿದಾಗ ಗಾಂಧೀಜಿಯವರನ್ನು ನೋಡಲು ಯಾರಿಗೆ ಇಷ್ಟ ಇದೆ ಅಂತ ಕೇಳಿದರು. ನಮ್ಮಪ್ಪ ನನಗೆ 5ರೂಪಾಯಿ ಕೊಟ್ರು. ಆಗಿನ ಕಾಲದಲ್ಲಿ ಮಸಾಲೆದೋಸೆ ನಾಲ್ಕಾಣೆ, ಕಾಫಿ ಒಂದಾಣೆ, ಮೇಷ್ಟ್ರು ನಮ್ಮನ್ನು ಅವತ್ತು ರಾತ್ರಿ ಟ್ರೈನ್ಗೆ ಮೆಡ್ರಾಸ್ಗೆ ಕರ್ಕೊಂಡು ಹೋದ್ರು. ಬೆಳಿಗ್ಗೆ ಗಾಂಧೀಜಿನ ನೋಡಿದ್ವಿ, ಮತ್ತದೇ ರಾತ್ರಿ ವಾಪಸ್ಸು ಬಂದ್ವಿ. ಇವತ್ತು ಹೀಗೆ ಎಷ್ಟು ಜನ ಟೀಚರ್ಸ್ ಮಾಡ್ತಾರೆ? ಈಗ ಇಲ್ಲಿನ ಕ್ಯಾಂಪಸ್ನಲ್ಲಿ ನಾನೊಬ್ಬನೇ ಇರಬೇಕು ಗಾಂಧೀಜಿನ ನೋಡಿರೋದು. ಗಾಂಧೀಜಿ ಸೌತ್ ಇಂಡಿಯಾಗೆ ಹೆಚ್ಚಾಗಿ ಬರ್ತಾ ಇರ್ಲಿಲ್ಲ.

 ಪುರಂದರದಾಸರ ಜನ್ಮದಿನ ನಾನೂ ಸಹ ಅವರ ಒಂದು ಕೀರ್ತನೆ ಹೇಳಿದ್ದೆ. ನಂಗೆ ಬರಲ್ಲ ಸಾರ್ ಅಂತ ಎಷ್ಟು ಹೇಳಿದ್ರ್ರೂ ಹೇಗೆ

ನಾವು ಶಾಲಾ ಶಿಕ್ಷಣಕ್ಕೆ ಉತ್ತಮ ಕೆಲಸ ಮಾಡದೇ ಇದ್ರೆ ಭಾರತಕ್ಕೆ ಭವಿಷ್ಯಾನೇ ಇರೋದಿಲ್ಲ.

ಬರುತ್ತೋ ಹಾಗೇ ಹೇಳು ಅಂದ್ರು ಮೇಷ್ಟ್ರು. ನಾನು ಕನ್ನಡ, ಇಂಗ್ಲಿಷ್ ಎರಡು ಭಾಷೆಯಲ್ಲೂ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸ್ತಾ ಇದ್ದೆ. ಎಷ್ಟೊಂದು ಚರ್ಚಾಸ್ಪರ್ಧೆಗಳನ್ನು ಏರ್ಪಡಿಸ್ತಾ ಇದ್ರು ನಮ್ಮ ಶಾಲೆಯಲ್ಲಿ! ನಮ್ಮ ಫ್ರೆಂಡ್ ಒಬ್ಬರು ರೊದ್ದಂ ನರಸಿಂಹ ಅಂತ. ನಾವಿಬ್ಬರೂ ಒಂದೇ ಕ್ಲಾಸು. ನಾನು ಕನ್ನಡ ಮೀಡಿಯಂ ಅವರು ಇಂಗ್ಲಿಷ್ ಮೀಡಿಯಂ. ನಮ್ಮ ತಂದೆ ಇಂಗ್ಲಿಷ್ ಮಾಧ್ಯಮದ ವಿರೋಧಿ. ಅವರೂ ಸಹ ಶಿಕ್ಷಣ ಇಲಾಖೆಯಲ್ಲೇ ಇದ್ರು, ನಮ್ಮ ತಂದೆ ಟ್ರಿಪ್ಪಲ್ ಎಂ.ಎ., ಎಂ.ಇಡಿ. ಮೈಸೂರು ರಾಜ್ಯದಲ್ಲೇ ಅವರೊಬ್ಬರೇ ಎಂ.ಎ. ಮಾಡಿದ್ದವರು. ಆಗಿನ ಕಾಲದಲ್ಲಿ 100 ರೂ. 200 ರೂಪಾಯಿ ಸಂಬಳ. ನಮ್ಮ ಟೀಚರ್ ಶಿವರುದ್ರಪ್ಪ ಅಂತ ಒಬ್ಬರು, ಪಿ.ಎಸ್. ನಾರಾಯಣರಾವ್ (ಕೆಮಿಸ್ಟ್ರಿ ಟೀಚರ್), ಗಣಿತಕ್ಕೆ ಸೂರ್ಯನಾರಾಯಣರಾವ್ ಅಂತ. ಮತ್ತೆ ಎಸ್. ಕೃಷ್ಣಮೂತರ್ಿ, ಗಣಿತ, ಕೆಮಿಸ್ಟ್ರಿ ಟೀಚರ್. ಚಿಕ್ಕಮಗಳೂರಿನಲ್ಲಿ (ನಮ್ಮಪ್ಪನಿಗೆ ಚಿಕ್ಕಮಗಳೂರಿಗೆ ವರ್ಗವಾದ್ದರಿಂದ ನಾನು ಎಸ್.ಎಸ್. ಎಲ್.ಸಿ. ಚಿಕ್ಕಮಗಳೂರಲ್ಲಿ ಓದಿದೆ. ಇಂಟರ್ಮೀಡಿಯೆಟ್ನಲ್ಲಿ ಫಿಸಿಕ್ಸ್ಗೆ ತುಂಬಾ ಒಳ್ಳೆ ಟೀಚರ್ಸ್ ಇದ್ರು. ನೀವು ಊಹೆ ಮಾಡಕ್ಕೂ ಆಗಲ್ಲ. ಆದ್ರೆ ಕಾಲೇಜಲ್ಲಿ ಒಳ್ಳೆ ಟೀಚಿಂಗ್ ಇರಲಿಲ್ಲ. ಶಾಲಾ ಶಿಕ್ಷಕರು ತಮಗೆ ತಿಳಿದಷ್ಟು ವಿಷಯಾನೇ ತುಂಬಾ ಚೆನ್ನಾಗಿ ಹೇಳಿಕೊಡ್ತಾ ಇದ್ರು. ಕಾಲೇಜಲ್ಲಿ ಪ್ರೊ. ಬಿ.ಎಸ್.ಮಾಧವರಾವ್ ಅಂತ ಗಣಿತ ಟೀಚರ್ ತುಂಬಾ ಚೆನ್ನಾಗಿ ಕಲಿಸ್ತಾ ಇದ್ರು. ಅವರು ಆಗಿನ ಕಾಲದಲ್ಲೇ ಬಿಎಸ್ಸಿ ಮಾಡಿದ್ರು. ಅಸ್ಟ್ರಾನಮೀನೂ ಚೆನ್ನಾಗಿ ಕಲಿಸ್ತಾ ಇದ್ರು. ಕೆಮಿಸ್ಟ್ರಿ ಆಸಕ್ತಿಯ ವಿಷಯ. ಆದ್ರೂ ಯಾರೊಬ್ಬ ಒಳ್ಳೆ ಟೀಚರ್ಸೂ ಇರಲಿಲ್ಲ. ಇವತ್ತು ನಾನು ಕೆಮಿಸ್ಟ್ರಿ ಪಾಠ ಮಾಡೋದಕ್ಕೆ ಹೋಲಿಸಿದರೆ ಹಿಂದೆ ಕಾಲೇಜುಗಳಲ್ಲಿ ತುಂಬಾ ಕೆಟ್ಟದಾಗಿ ಹೇಳಿಕೊಡ್ತಾ ಇದ್ದರು.ನಾನು ಭಾರತ ಸರ್ಕಾರದ ಜೊತೆ ಹೋರಾಟ ಮಾಡ್ತಾನೇ ಇದ್ದೀನಿ. ಈ 12ನೇ ಯೋಜನೆಯಲ್ಲಿ ಶಿಕ್ಷಕರು ಮತ್ತು ಶಿಕ್ಷಣವನ್ನು ನ್ಯಾಷನಲ್ ಮಿಶಿನ್ ಆಗಿ ಮಾಡಬೇಕು ಅಂತ ನಾನು ಸಲಹೆ ಕೊಟ್ಟಿದ್ದೇನೆ. ಹಾಗೇ ಮಾಡಿದ್ದಾರೆ.  ಇದಕ್ಕಾಗಿ ನನ್ನನ್ನು ಅಭಿನಂದಿಸಿದರು ಕೂಡಾ. ಶಾಲಾ ಶಿಕ್ಷಣ ಬಹಳ ಮುಖ್ಯ. ಕನ್ನಡ ಮೀಡಿಯಂ ಆಗ್ಲಿ, ಇಂಗ್ಲಿಷ್ ಮೀಡಿಯಂ ಆಗ್ಲಿ ಅದೆಲ್ಲಾ ಬೇರೆ ವಿಷಯ. ನಾವು ಶಾಲಾ ಶಿಕ್ಷಣಕ್ಕೆ ಉತ್ತಮ ಕೆಲಸ ಮಾಡದೇ ಇದ್ರೆ ಭಾರತಕ್ಕೆ ಭವಿಷ್ಯಾನೇ ಇರೋದಿಲ್ಲ.

ಶಿಕ್ಷಣವಾರ್ತೆ: ನಿಮ್ಮ ಪೋಷಕರು ನಿಮ್ಮ ಮೇಲೆ ಬೀರಿದ ಪ್ರಭಾವವೇನು?
ಪ್ರೊ: ಸಿಎನ್ನಾರ್ ರಾವ್: ವಂಡರ್ಫುಲ್. ನನಗಿದ್ದಂತಹ ಪೋಷಕರು ಅನೇಕರಿಗೆ ಇರಲ್ಲ. ನನಗೆ 12 ವರ್ಷ ವಯಸಾಗಿದ್ದಾಗ ನಾವೇನು ಮಾಡಬೇಕು ಅಂತ ನಿನಗನ್ನಿಸುತ್ತೆ ಅಂತ ನನ್ನ ಅಭಿಪ್ರಾಯ ಕೇಳ್ತಾ ಇದ್ರು. ನಿನಗೇನು ಇಷ್ಟಾನೋ ಅದು ಮಾಡು ಅಂತ ಹೇಳ್ತಾ ಇದ್ರು. ನನ್ನನ್ನು ಸಮಾನವಾಗಿ ಭಾವಿಸ್ತಾ ಇದ್ರು. ನಮ್ಮ ತಾಯೀನೂ ಅದೇ ರೀತಿ. ನಮ್ಮ ತಂದೆ ತಾಯಿಗೆ ನಾನೊಬ್ಬನೇ ಮಗ. ಎಲ್ಲರೂ ಇಂಜಿನಿಯರಿಂಗ್ ಓದು ಅಂದ್ರು, ನಾನು ಓದಲ್ಲ ನಾನು ಸೈನ್ಸ್ ಓದಬೇಕು ಅಂದೆ. ಬಿಎಸ್ಸಿಯಲ್ಲಿ ರ್ಯಾಂಕ್ ಬಂತು ನಮ್ಮ ಸಂಬಂಧಿಗಳೊಬ್ಬರು ಐ.ಪಿ.ಎಸ್. ಮಾಡಿದ್ರು. ಅವರೆಲ್ಲಾ ಐ.ಎ.ಎಸ್. ಓದು ಅಂತ. ಎಲ್ಲರೂ ಒಬ್ಬೊಬ್ಬರು ಒಂದೊಂದು ಥರಾ ಹೇಳಿದ್ರು. ನಾನು ಇಲ್ಲ ಬನಾರಸ್ ಯೂನಿವರ್ಸಿಟಿಗೆ ಹೋಗ್ತೀನಿ ಅಂದೆ. ಮಲ್ಲಿಕಾರ್ಜುನಪ್ಪ ಅಂತ ಸೆಂಟ್ರಲ್ ಕಾಲೇಜಲ್ಲಿ ಲೆಕ್ಚರರ್ ಆಗಿದ್ದರು. ನೀನು ಬನಾರಸ್ ಯೂನಿವರ್ಸಿಟಿಗೆ ಹೋಗು ಅಂತ ಹೇಳಿದ್ರು. ನಾನು ಅವರಿಂದ ಬನಾರಸ್ಗೆ ಹೋದೆ. ನನಗೆ ಭಾರತರತ್ನ ಬಂದ ಮೇಲೆ ಸುಮಾರು 2000 ಅಭಿನಂದನಾ ಪತ್ರಗಳು, ಮೇಲ್ಸ್ ಬಂದಿವೆ ಅದರಲ್ಲಿ ಒಬ್ಬರು ನಾನು ಮಲ್ಲಿಕಾರ್ಜುನಪ್ಪ ಅವರ ಮಗ ನೀವು ನಮ್ಮ ತಂದೆಯವರ ಹೆಸರನ್ನು ಪ್ರಸ್ತಾಪಿಸಿದಿರಿ ಅಂತ ಪತ್ರ ಬರೆದಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ತಂದೆ ತಾಯಿ ನನಗೆ ಇಷ್ಟ ಬಂದಿದ್ದನ್ನು ಓದಲು ಕೊಟ್ಟ ಸ್ವತಂತ್ರ್ಯ ಬಹಳ ಮುಖ್ಯ. ಇಂದು ಪೋಷಕರು ಮಕ್ಕಳಿಗೆ ಹೀಗೆ ಮಾಡು, ಹಾಗೆ ಮಾಡು, ನೀನು ಇಂಜಿನಿಯರಿಂಗೇ ಮಾಡಬೇಕು ಅಂತ ಒತ್ತಾಯ ಹೇರಿ ಸೆಕೆಂಡ್ ರೇಟ್ ಇಂಜಿನಿಯರಿಂಗ್ ಕಾಲೇಜುಗಳಿಗೆ ತಳ್ತಾರೆ.  ಕೆಲವು ಮಕ್ಕಳಿಗೆ ಜರ್ನಲಿಸಂ, ಸಿನೆಮಾ, ನಾಟಕ, ಸಾಹಿತ್ಯ, ಕಲೆ ಹೀಗೆ ಬೇರೆಬೇರೆ ವಿಷಯದಲ್ಲಿ ಆಸಕ್ತಿ ಇರುತ್ತೆ. ಮಕ್ಕಳ ಆಸಕ್ತಿಗೆ ತಕ್ಕಂತೆ ಅವಕಾಶ ಕೊಡಬೇಕು. ಜೀವನ ಆರ್ಮಿ ಅಲ್ಲ ಎಲ್ಲರೂ ಒಂದೇ ಥರ ಇರಕ್ಕಾಗಲ್ಲ. ಸಾರ್ವಜನಿಕ ಜೀವನದಲ್ಲಿ ಜನರಿಗೆ ವೈವಿಧ್ಯಮಯ ಆಸಕ್ತಿಗಳಿರುತ್ತವೆ.

ಶಿಕ್ಷಣವಾರ್ತೆ: ನಿಮ್ಮ ಸಂಶೋಧನೆ ಬಗ್ಗೆ ಹೇಳಿ.
ಪ್ರೊ: ಸಿಎನ್ನಾರ್ ರಾವ್: ನಾನು ಎಲ್ಲಾ ಥರದ ಸಂಶೋಧನೆ ಮಾಡಿದ್ದೇನೆೆ. 54 ವರ್ಷಗಳ ಕಾಲ ಪ್ರೊಫೆಸರ್ ಆಗಿದ್ದೆ. ನಾನು ನಿಮಗೆ ಎಷ್ಟನ್ನು ಹೇಳಬಹುದು? ನನ್ನ 1500 ಸಂಶೋಧನಾ ಪೇಪರ್ಸ್ ಪ್ರಕಟವಾಗಿವೆ. ಹಲವು ಪುಸ್ತಕ ಬರೆದಿದ್ದೇನೆ. ಪ್ರಾರಂಭದಲ್ಲಿ ಸ್ಪೆಕ್ಟ್ರೋಸ್ಕೋಪಿ ಮೇಲೆ ಬಹಳಷ್ಟು ಕೆಲಸ ಮಾಡಿದೆ. ನಂತರ ಕೆಮಿಸ್ಟ್ರಿ ಆಫ್ ಸಾಲಿಡ್ಸ್ ಮತ್ತು ಮೆಟೀರಿಯಲ್ಸ್ ಬಗ್ಗೆ ನಾನು ಈ ಕೆಲಸ ಶುರು ಮಾಡಿದಾಗ ಇದು ತುಂಬಾ ಹೊಸದು. ಈಗದು ತುಂಬಾ ಆಸಕ್ತ, ಪ್ರಸಿದ್ಧವಾದ ಹಾಗೂ ತುಂಬಾ ಚಚರ್ೆಗೊಳಗಾಗಿರುವ ವಿಷಯ. ಅನೇಕರು ನನ್ನನ್ನು ಈ ವಿಷಯದಲ್ಲಿ ತಾತ ಅನ್ಕೊಂಡಿದ್ದಾರೆ. ಒಮ್ಮೆ ಒಂದು ತಮಾಷೆ ನಡೆಯಿತು. ಎಲ್ಲೋ ಒಂದು ಕಡೆ ಉಪನ್ಯಾಸ ಕೊಟ್ಟು ಬರ್ತಾ ಇದ್ದೆ. ಏರ್ಪೋಟರ್್ನಲ್ಲಿ ಒಬ್ಬರು ಮಾತಾಡ್ತಾ ನಾನು 1959 ರಲ್ಲಿ ಒಂದು ಪೇಪರ್ ಓದಿದ್ದೆ ಅವರದೂ ನಿಮ್ಮ ಹೆಸರೇ, ಅವರು ಈಗ ಸತ್ತು ಹೋಗಿರಬಹುದು ಅಂದ್ರು. ಇಲ್ಲ ಅದು ನಾನೇ ಅಂದೆ. ಈ ಥರ ನಾನು ನಿರಂತರವಾಗಿ ರಿಸರ್ಚ್ ಪೇಪರ್ಸ್ ಪ್ರೆಸೆಂಟ್ ಮಾಡ್ತಾನೇ ಇದ್ದೀನಿ. ಕೆಮಿಸ್ಟ್ರಿ ಆಫ್ ಮೆಟೀರಿಯಲ್ಸ್, ಸೂಪರ್ ಕಂಡಕ್ಟಿವಿಟಿ, ಮ್ಯಾಗ್ನೆಟಿಸಂ, ಗ್ರಾಫೀನ್, ಕಾರ್ಬನ್ ನ್ಯಾನೊ ಟ್ಯೂಬ್ಸ್ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೀನಿ.

ಶಿಕ್ಷಣವಾರ್ತೆ: ನ್ಯಾನೋ ಟೆಕ್ನಾಲಜಿಗೆ ನಿಮ್ಮ ಕೊಡುಗೆ ಏನು?
ಪ್ರೊ: ಸಿಎನ್ನಾರ್ ರಾವ್: ನಾನೀಗ ಕೊನೆಯಲ್ಲಿ ಹೇಳಿದ್ದು ಅದರ ಬಗ್ಗೇನೇ. 20-25 ವರ್ಷಗಳಿಂದ ಈ ಬಗ್ಗೆ ಕೆಲಸ ಮಾಡಿದ್ದೇನೆ. ಭಾರತದಲ್ಲಿ ಈ ಬಗ್ಗೆ ಕೆಲಸ ಶುರು ಮಾಡಿದ್ದೇ ನಾನು. ನಾನೇ ಭಾರತ ಸರ್ಕಾರದಿಂದ ನ್ಯಾನೋ ಮಿಷನ್ ಅಧ್ಯಕ್ಷ ಆಗಿದ್ದೀನಿ. ಭಾರತದಲ್ಲಿ ಈ ಬಗ್ಗೆ ಕೆಲಸ ಆಗೋಕ್ಕೆ ಉತ್ತೇಜನ ಕೊಟ್ಟಿದೀನಿ. ಈ ಕ್ಷೇತ್ರದಲ್ಲಿ ಕೆಲವು ಪುಸ್ತಕ ಬರೆದಿದ್ದೀನಿ, ನಾನೀಗ್ಲೂ ಗ್ರಾಫೀನ್, ನ್ಯಾನೊ ಟ್ಯೂಬ್ಸ್ ಬಗ್ಗೆ ಬಹಳಷ್ಟು ಕೆಲಸ ಮಾಡ್ತಾ ಇದೀನಿ. ಹೀಗೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೀನಿ.

ಶಿಕ್ಷಣವಾರ್ತೆ: ಸರ್. ನೀವೊಂದು ರೀತಿ ವಿಶ್ವಕ್ಕೇ ಶಿಕ್ಷಕರಿದ್ದ ಹಾಗೆ. ನೀವು ಎಲ್ಲೆಲ್ಲಿ ಉಪನ್ಯಾಸಗಳನ್ನು ನೀಡ್ತಾ ಇದ್ದೀರಿ
ಪ್ರೊ: ಸಿಎನ್ನಾರ್ ರಾವ್: ನಾನು ನನ್ನ ಹೆಂಡತಿ ಭಾರತದ ಎಲ್ಲಾ ಭಾಗಗಳಲ್ಲೂ ಉಪನ್ಯಾಸ ನೀಡ್ತಾ ಇರ್ತೀವಿ. ನನ್ನ ಹೆಂಡತಿ ಮಲ್ಟಿಮೀಡಿಯಾ ಪ್ಯಾಕೇಜಸ್ ರೆಡಿ ಮಾಡಿದ್ದಾರೆ. ಉತ್ತರಾಖಂಡ, ಹಿಮಾಲಯ ಹೀಗೆ ಎಲ್ಲಾ ಕಡೆ ಹೋಗಿದ್ದೀವಿ. ಇತ್ತೀಚೆಗೆ ಭಾರತರತ್ನ ಬಂದಾಗ ನಾನು ಟ್ರಿವೆಂಡ್ರಂನಲ್ಲಿ ಮಕ್ಕಳಿಗೆ ಒಂದು ಉಪನ್ಯಾಸ ಕೊಟ್ಟು ಏರ್ಪೋಟರ್್ನಲ್ಲಿದ್ದೆ. ಪ್ರಧಾನಮಂತ್ರಿಗಳು ನಾನು ಏರ್ಪೋಟರ್್ನಲ್ಲಿದ್ದಾಗ ನನ್ನನ್ನು ಅಭಿನಂದಿಸಿದರು. ಮೂರು ದಿನಗಳ ಹಿಂದೆ ಮುಧುರೈನಲ್ಲಿ ಮಕ್ಕಳಿಗೆ ಉಪನ್ಯಾಸ ನೀಡಲು ಹೋಗಿದ್ದೆ. 12-14 ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಕರ್ನಾಟಕದಲ್ಲಿ ವಿಷನ್ ಗ್ರೂಪ್ನ ಮೂಲಕ ಕೆಲಸ ನಡೀತಾ ಇದೆ. ಕೊರಿಯಾದಲ್ಲಿ ನೊಬೆಲ್ ಕಮಿಟಿಯವರು ಉಪನ್ಯಾಸ ಏಪರ್ಾಟು ಮಾಡಿದ್ದರು. 8 ಜನ ಉಪನ್ಯಾಸಕರು. 4 ಜನ ನೊಬೆಲ್ ಲಾರೆಟ್ಸ್, ನೊಬೆಲ್ ಇಲ್ಲದವರು ನಾಲ್ಕು ಜನ, ನಾನು ಅವರಲ್ಲೊಬ್ಬ. 600 ಮಕ್ಕಳು ಮತ್ತು ವಿಜ್ಞಾನಿಗಳಿಗೆ ಉಪನ್ಯಾಸ ನೀಡಿದೆವು. ತುಂಬಾ ಚೆನ್ನಾಗಿ ಏಪರ್ಾಟು ಮಾಡಿದ್ದರು. ನಾನು ಪ್ರಪಂಚದ ಎಲ್ಲ ಅಕಡೆಮಿಕ್ ಗ್ರೂಪ್ಸ್ನ ಸದಸ್ಯ. ರಾಯಲ್ ಸೊಸೈಟಿ ಆಫ್ ಲಂಡನ್, ಅಮೆರಿಕನ್ ಅಕಾಡೆಮಿ, ಫ್ರೆಂಚ್ ಅಕಾಡೆಮಿ, ಜಪಾನ್ ಅಕಾಡೆಮಿ, ಸೋವಿಯಟ್ ರಷ್ಯನ್ ಅಕಾಡೆಮಿ ಹೀಗೆ ಪ್ರಪಂಚದಲ್ಲಿ ನನ್ನ ಬಗ್ಗೆ ಎಲ್ಲರಿಗೂ ತಿಳಿದಿದೆ. ಭಾರತಕ್ಕಿಂತ ಹೊರದೇಶದವರಿಗೇ ಹೆಚ್ಚಾಗಿ ತಿಳಿದಿದೆ.

ಶಿಕ್ಷಣವಾರ್ತೆ: ಸರ್ ತಾವು ಪ್ರಧಾನಿವರ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದೀರಿ. ಆ ಅನುಭವವನ್ನು ಹಂಚಿಕೊಳ್ಳಿ
ಪ್ರೊ: ಸಿಎನ್ನಾರ್ ರಾವ್: ನಾನು ರಾಜೀವ್ ಗಾಂಧಿಗೆ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಆಗಿದ್ದೆ.  ಆಮೇಲೆ ಗುಜ್ರಾಲ್ ಬಂದಾಗ ಯೂನಿಯನ್ ಕ್ಯಾಬಿನೆಟ್ ಅಡ್ವೈಸರಿ ಕಮಿಟಿ ಅಧ್ಯಕ್ಷನಾಗಿದ್ದೆ. ಕಳೆದ ಒಂಬತ್ತು ವರ್ಷದಿಂದ ಮತ್ತೆ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷನಾಗಿದ್ದೇನೆ.  ಐದು ಹೊಸ ಇಂಡಿಯನ್ ಇನ್ಸ್ಟ್ಟ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್(ಖಇಖ) ಗಳನ್ನು ಸ್ಥಾಪಿಸಿದ್ದು, ವಿಜ್ಞಾನಕ್ಕೆ ಬಜೆಟ್ ಹೆಚ್ಚು ಮಾಡಿದು, ರಾಮಾನುಜನ್ ಫೆಲೋಸ್ ಅಂತ ಮಾಡಿದೀವಿ, ತುಂಬಾ ಬ್ರಿಲಿಯೆಂಟ್ಸ್ ಸೆಲೆಕ್ಟ್ಟ್ ಆಗ್ತಾ ಇದ್ದಾರೆ. ವೇಕೆನ್ಸಿ ಇದೆಯಾ ಇಲ್ವಾ ಅನ್ನೋದು ಇಲ್ಲಿ ಮುಖ್ಯ ಅಲ್ಲ. ಇವರೂ ಕೂಡ ಬೇರೆಯವರ ಥರಾ ಸಂಶೋಧನೆ ಮಾಡಿ ಪಿ.ಎಚ್.ಡಿ ತಗೋತಾರೆ. ನ್ಯಾನೋ ಮಿಷಿನ್, ಭಾರತದಲ್ಲಿ ಬೆಂಗಳೂರು ಮತ್ತು ಚಂಡೀಘರ್ನಲ್ಲಿ ನ್ಯಾನೋ ಸಂಸ್ಥೆಗಳನ್ನು ಆರಂಭಿಸಿದ್ದೇವೆ. ವಿಜ್ಞಾನದಲ್ಲಿ ಏನೇನಾಗಿದೆ

ಶ್ರೀಮತಿ ಸೋನಿಯಾ ಗಾಂಧಿಯರೊಂದಿಗೆ ಸಿಎನ್ನಾರ್
ಅನ್ನುವ ಬಗ್ಗೆ ಒಂದು ಒಳ್ಳೆ ಪುಸ್ತಕ ತಂದಿದೀವಿ. ಬೇಕಾದಷ್ಟು ಕೆಲಸ ಮಾಡಿದೀವಿ. ಇದಕ್ಕಿಂತ ಹೆಚ್ಚಿಗೆ ಮಾಡಬಹುದಿತ್ತು. ಆದರೆ ವ್ಯವಸ್ಥೆಯಲ್ಲಿ ಸಾಕಷ್ಟು ವೈರುಧ್ಯಗಳಿವೆ.

ಶಿಕ್ಷಣವಾರ್ತೆ: ಈ ಸಂಸ್ಥೆಗೆ ಜವಾಹರಲಾಲ್ ನೆಹರು ಅವರ ಹೆಸರನ್ನು ಇಟ್ಟಿದ್ದೇಕೆ?
ಪ್ರೊ: ಸಿಎನ್ನಾರ್ ರಾವ್: ಜವಾಹರಲಾಲ್ ನೆಹರು ಅವರ ಶತಮಾನೋತ್ಸವ ಸಂದರ್ಭದಲ್ಲಿ ಭಾರತದಲ್ಲಿ ಏನಾದರೂ ವಿಜ್ಞಾನಕ್ಕೆ ಸಂಬಂಧಪಟ್ಟ ಕೆಲಸ ಆಗಬೇಕು ಅಂತ ಪ್ರಸ್ತಾಪವಿತ್ತು. ಬೇರೆ ಬೇರೆ ಸ್ಥಳಗಳಲ್ಲಿ ಮಾಡಬಹುದಾದ ವಿವಿಧ ಪ್ರಸ್ತಾಪಗಳು ಬಂದವು. ಆಗಿನ ಉಪರಾಷ್ಟ್ರಪತಿಗಳಾಗಿದ್ದ ಆರ್. ವೆಂಕಟರಾಮನ್ ಅವರ ಆಧ್ಯಕ್ಷತೆಯ ಸಮಿತಿಯಲ್ಲಿ ಅವರು ಒಂದು ವಿಜ್ಞಾನ ಸಂಶೋಧನಾ ಸಂಸ್ಥೆ ಆರಂಭ ಮಾಡಬೇಕು ಅಂತ ಪ್ರಸ್ತಾಪವಿಟ್ಟರು. ಒಬ್ಬೊಬ್ಬರು ಒಂದೊಂದು ಕಡೆ ಸ್ಥಾಪನೆ ಮಾಡಬೇಕು ಅಂತ ಸಲಹೆ ಕೊಟ್ಟರು. ಆದರೆ  ರಾಜೀವ್ ಗಾಂಧೀ ಬೆಂಗಳೂರಿನಲ್ಲಿ ಮಾಡಬೇಕು ಅಂತ ಹೇಳಿದರು. ನಾನಾಗ ಕಾನ್ಪುರದ ಐಐಟಿಯಲ್ಲಿದ್ದೆ. ನಾನು ಬೆಂಗಳೂರಿನಲ್ಲಿ ಈ ಸ್ಥಳ ತೋರಿಸಿದೆ. 1989 ರಲ್ಲಿ ಸಂಸ್ಥೆ ಇಲ್ಲಿ ಆರಂಭವಾಯಿತು. ಈ ವರ್ಷ ಈ ಸಂಸ್ಥೆ (ಜೆ.ಎನ್.ಸಿ.ಎ.ಎಸ್.ಆರ್ - ಜವಹರಲಾಲ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್) ನಂಬರ್ ಒನ್ ಸಂಸ್ಥೆ ಎಂದು ರೇಟಿಂಗ್ ಪಡೆದಿದೆ. ಭಾರತೀಯ ವಿಜ್ಞಾನ ಸಂಸ್ಥೆ ಎರಡನೆಯದು. ನಾವಿಲ್ಲಿ ಬಹಳಷ್ಟು ಸಂಶೋಧನೆ ಮಾಡ್ತೇವೆ.

ಶಿಕ್ಷಣವಾರ್ತೆ: ಶಿಕ್ಷಕರು ಮತ್ತು ಮಕ್ಕಳಿಗೆ ನಿಮ್ಮ ಸಂದೇಶ ಏನು?
ಪ್ರೊ: ಸಿಎನ್ನಾರ್ ರಾವ್: ಬೋಧನೆ  ತುಂಬಾ ಅದ್ಭುತ ವೃತ್ತಿ. ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದೇ ವಿಷಯದಲ್ಲಿ ಬಿಡದೆ ಮುಂದೆ ಹೋಗಿ. ಅಪ್ಪ ಅಮ್ಮ ಹೇಳಿದ್ರು ಅಂತ ಬದಲಾಯಿಸ್ಕೋಬೇಡಿ. ನಾಟಕ ಇರಬಹುದು,  ಸಾಹಿತ್ಯ ಇರಬಹುದು, ಎಕನಾಮಿಕ್ಸ್ ಇರಬಹುದು ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನೇ ಮಾಡಿ. ಐಟಿಗೆ ಹೋಗಬೇಡಿ ಅಂತ ನಾನು ಹೋಳೋದಿಲ್ಲ. ನನ್ನ ಬಗ್ಗೆ ಅದೊಂದು ದೂರು ಇದೆ. ಆದ್ರೆ ಎಲ್ಲರೂ ಐಟಿಗೇ ಹೋದ್ರೆ ಹೇಗೆ. ಲಾಡು ಸಹಿಯಾಗಿದೆ  ಅಂತ ಪ್ರತೀ ದಿನ ಎಲ್ಲಾ ಹೊತ್ತೂ ಅದನ್ನೇ ತಿನ್ನಕ್ಕಾಗುತ್ತೇ? ಅನ್ನ ಸಾರು ತಿನ್ನಬೇಡವೇ? ಎಲ್ಲರೂ ಐಟಿ ಅಂತ ಹೇಳಿ ಸೈನ್ಸ್ಗೆ ಒಳ್ಳೆಯ ವಿದ್ಯಾರ್ಥಿಗಳೇ ಬರ್ತಾ ಇಲ್ಲ. ಕಳೆದ 25 ವರ್ಷಗಳಲ್ಲಿ ಈ ಸಂಸ್ಥೆಗೆ ಬಂದ ಒಬ್ಬೇ ಒಬ್ಬ ವಿದ್ಯಾರ್ಥಿ ಮಾತ್ರ ಬೆಂಗಳೂರಿನವ. ಇದು ಪ್ರಪಂಚದಲ್ಲೇ ಅತ್ಯುತ್ತಮ ಸಂಶೋಧನಾ ಸಂಸ್ಥೆ. ಪಡ್ಯರ್ೂ, ಹಾರ್ವಡರ್್, ಕೇಂಬ್ರಿಜ್ ಯಾವುದಕ್ಕೂ ಕಡಿಮೆ ಇಲ್ಲ.

ಪ್ರೊ. ಸಿ.ಎನ್.ಆರ್. ರಾವ್ ಭಾರತರತ್ನ ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ಶಿಕ್ಷಣವಾರ್ತೆಗೆ ನೀಡಿದ ಸಂದರ್ಶನ

Related Posts