ಪತ್ರ ಸಂಸ್ಕೃತಿ
- ಪಾಲಾಕ್ಷಪ್ಪ ಎಸ್. ಎನ್.

ಬಹಳ ದಿನಗಳ ನಂತರ ಹುಬ್ಬಳ್ಳಿಯ ಗೆಳಯ ಪೋನ್ ಮಾಡಿದ್ದ `ಈ ದಿನ ನನಗೆ ತುಂಬಾ ಖುಷಿಯಾಗಿದೆ. ಎಷ್ಟು ದುಡ್ಡು ಕೊಟ್ಟರೂ ಈ ಖುಷಿಯನ್ನು ಕೊಳ್ಳಾಕಾಗಲ್ಲ. ನಿನಗೆ ತುಂಬಾ ಥ್ಯಾಂಕ್ಸ್?..' ಹೀಗೆ ಹೆಮ್ಮೆಯಿಂದ ಖುಷಿಯಿಂದ ಮಾತನಾಡುತ್ತಲಿದ್ದ. ಸೂರ್ಯಕಾಂತಿಯಂತೆ ಅರಳಿರಬಹುದಾದ ಅವನ ಮುಖಭಾವ ಅವನಿಗಾದ ಸಂತಸ ಎಲ್ಲವೂ ಅವನ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು. ಗೆಳಯ ಖುಷಿಯಾಗಿರುವುದರಿಂದ ನನಗೂ ಖುಷಿಯಾಗಿತ್ತು. ಇದಕ್ಕೆಲ್ಲ ಕಾರಣ ಅವನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹದಿನೈದು ಪೈಸೆಗಳ ಅಂಚೆ ಕಾಡರ್ಿನಲ್ಲಿ ನನಗೆ ಬರೆದ ಪತ್ರ !

ಅವನು ಅಂದು ನನಗೆ ಬರೆದ ಪತ್ರವನ್ನು ನಾನು ಮೊಬೈಲ್ನಲ್ಲಿ ಪೋಟೊ ತೆಗೆದು ಅವನ ವಾಟ್ಸಆಪ್ ಗೆ ಕಳಿಸಿದ್ದೆ. ಹಾಗಾದರೆ ಆ ಪತ್ರದಲ್ಲಿ ಅಂತಹದೇನಿತ್ತು ಅಂತಿರಾ? ಅವನ ಮಗಳು ಐಶ್ವರ್ಯ ಹುಟ್ಟಿದ ದಿನಾಂಕ, ವಾರ, ಗಂಟೆ, ನಿಮಿಷ, ತಾಯಿಮಗಳ ಆರೋಗ್ಯ, ಅವನ ಸಂತಸ ಎಲ್ಲಾ ಇತ್ತು. ಮಗಳು ಹುಟ್ಟಿದ ಸಮಯವೇ ಅವನಿಗೆ ನೆನಪಿರಲಿಲ್ಲವಂತೆ. ಆದರೆ ಆದಿನಗಳಲ್ಲಿ ನನಗೆ ಬರೆದ ಪತ್ರದಲ್ಲಿ ಎಲ್ಲವನ್ನೂ ಭಿತ್ತರಿಸಿದ್ದ. ಆದ್ದರಿಂದ ನಿಧಿ ಸಿಕ್ಕಷ್ಟು ಸಂತಸಗೊಂಡಿದ್ದ. ಈ ಪತ್ರ ಅವನದೇ ಕೈಬರಹದಲ್ಲಿ ಬರೆದ ಅವನದೇ ಬದುಕಿನ ಜೀವಂತ ಐತಿಹಾಸಿಕ ದಾಖಲೆಯಾಗಿತ್ತು !

ಇನ್ನೊಬ್ಬ ಗೆಳೆಯ ಬಹಳ ವರುಷಗಳ ಹಿಂದೆ ಬದುಕಿನ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ನನಗೆ ಪತ್ರ ಬರೆದಿದ್ದ. ಅದನ್ನೂ ಹೀಗೇ ಅವನ ಪತ್ರವನ್ನು ಅವನಿಗೆ ಕಳಿಸಿದಾಗ ಭಾವುಕನಾಗಿ ಪ್ರತಿಕ್ರಯಿಸಿದ್ದ. ಪತ್ರಗಳು ನಮ್ಮ ನೈಜ ಭಾವನೆಗಳ ಪ್ರತಿಬಿಂಬಗಳಾಗಿದ್ದವು. ರಾಜರು, ಆಧಿಕಾರಿಗಳು, ಸರ್ಕಾರಗಳು ಬರೆದ ಪತ್ರಗಳು ಇತಿಹಾಸ ರಚನೆಗೆ ಆಕರಗಳಾದಂತೆ ನಮ್ಮ ಪತ್ರಗಳು ವೈಯಕ್ತಿಕ ಬದುಕಿನ ಲಿಖಿತ ದಾಖಲೆಗಳಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಹುಕಾಲ ನಮ್ಮ ನೆನಪಿನ ಬುತ್ತಿ ಬಿಚ್ಚಲು ಇರುವ ಜೀವಂತ ಸಾಕ್ಷಿಗಳು !

ಬಾಲ್ಯದಲ್ಲಿ ಐದರಿಂದ ಏಳನೇ ತರಗತಿಯಲ್ಲಿ ಸಹಪಾಠಿಯಾಗಿದ್ದ ಗೆಳಯ ಎಂಟನೇ ತರಗತಿಗೆ ದೂರದೂರಿನ ಶಾಲೆಗೆ ಸೇರಿದಾಗ ಪೆನ್ಸಿಲ್ ನಲ್ಲಿ ಒಂದು ಪತ್ರ ಬರೆದಿದ್ದ. ಜೀವನದಲ್ಲಿ ನನ್ನ ಹೆಸರಿಗೆ ಬಂದ ಮೊದಲ ಪತ್ರ ಅದಾಗಿತ್ತು. ಈಗಲೂ ಅದು ಕಣ್ಣಿಗೆ ಕಟ್ಟಿದ ಹಾಗಿದೆ. ಅದನ್ನು ಮತ್ತೆ ಮತ್ತೆ ಓದಿ ಮುತ್ತಿಟ್ಟಿದ್ದೆ. ಕೆಲವು ವರುಷಗಳ ನಂತರ ಪತ್ರ ನೆನಪಾಗಿ ಹುಡುಕಿದೆ. ಸಿಗಲಿಲ್ಲವಾದ್ದರಿಂದ ಅಕ್ಷರಶಃ ಕಣ್ಣೀರಾದೆ. ಆಗ ನನಗಾದ ಸಂಕಟ ಹೇಳತೀರದು. ಪತ್ರಗಳನ್ನು ಕಾಪಿಟ್ಟುಕೊಳ್ಳಬೇಕೆಂದು ಅಂದೇ ನಿರ್ಧರಿಸಿದೆ. ಅಂದಿನಿಂದ ಇಂದಿನವರೆಗೆ ನನಗೆ ಬಂದ ಎಲ್ಲಾ ಪತ್ರಗಳನ್ನು ಕಾಪಾಡಿಕೊಂಡು ಬಂದಿರುವೆ. ಹಾಗೆ ನಾನು ಬರೆದ ಕೆಲ ಪತ್ರಗಳನ್ನೂ ಸಂಗ್ರಹಿಸಿರುವೆ.

ಈ ಪತ್ರಗಳಲ್ಲಿ ಗೆಳೆಯರು, ತಮ್ಮತಂಗಿ, ತಂದೆತಾಯಿ, ಬಂಧುಬಳಗ, ವಿದ್ಯಾರ್ಥಿಗಳ ಭಾವನೆಗಳಿವೆ. ಪತ್ರಗಳಲ್ಲಿ ಸಂತಸ ಸಡಗರ, ದುಃಖ ದುಮ್ಮಾನ, ಹಬ್ಬ ಹರಿದಿನ, ಮಳೆ ಬೆಳೆ, ಓದು ಬರಹ, ದುಡ್ಡು ಕಾಸು ಹೀಗೆ ಅನಂತಗಳೂ ಅಡಕವಾಗಿವೆ. ಮತ್ತೆ ಮತ್ತೆ ಓದಿ ಪುಳಕವಾಗಿದ್ದಿದೆ. ಕೆಲವೊಮ್ಮೆ ಕಣ್ಣಾಲಿಗಳು ತುಂಬಿಬಂದಿವೆ. ಮನೆಮಂದಿಯಲ್ಲ ಸಂತಸಪಟ್ಟದ್ದೂ ಇದೆ. ಪತ್ರಗಳನ್ನು ಬರೆಯುತ್ತಲೇ ಭಾವನೆಗಳು ಬೆಸೆದುಕೊಂಡು ಬದುಕಲ್ಲಿ ಒಂದಾದ ಕಥೆಗಳನ್ನು ಈ ಕಾಗದಗಳು ಹೇಳುತ್ತವೆ. ಆ ಕೈ ಬರಹದ ಪತ್ರ, ಪತ್ರ ಬರೆಯುವ ರೀತಿ, ಅವು ನೀಡುವ ಅನುಭವ ಅವಿಸ್ಮರಣೀಯ !

ಒಂದೇ ಪತ್ರದಲ್ಲಿ ಇಬ್ಬರೂ ಗೆಳೆಯರು ಬರೆದಿದ್ದು, ಪತ್ರಗಳಿಗಾಗಿ ಕಾದು ಕುಳಿತಿದ್ದು, ಪತ್ರಗಳಲ್ಲಿ ಚಿತ್ರಬಿಡಿಸಿದ್ದು, ಕವನ ಬರೆದಿದ್ದು, ಹಬ್ಬಗಳಿಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದು, ಹೀಗೆ ನೆನಪು ಮಾಡಿಕೊಂಡರೆ ಗತಕಾಲಕ್ಕೆ ಜಾರಿ ಹೋಗುತ್ತೇವೆ. `ಸವಿ ನೆನಪುಗಳು ಬೇಕು ಸವಿಯಲೀ ಬದುಕು?.' ಎಂಬ ಹಾಡಿನ ಸಾಲಿನ ಆಶಯದಂತೆ ಪತ್ರಗಳೂ ಸವಿ ನೆನಪುಗಳನ್ನೂ ತಂದುಕೊಡಬಲ್ಲವು.

ಭಾವನೆಗಳನ್ನು ಕೈಬರಹದಲ್ಲಿ ಮೂಡಿಸುವುದಕ್ಕೂ ಕಂಪ್ಯೂಟರ್ನಲ್ಲಿ ಟೈಪಿಸುವುದಕ್ಕೂ ವ್ಯತ್ಯಾಸವಿದೆ ಅಂತ ಅನ್ನಿಸದಿರದು. ಆಧುನಿಕತೆ ಆವಿಷ್ಕರಿಸಿದ ಸಂಪರ್ಕ ಸಾಧನಗಳ ನಡುವೆಯೂ ಪತ್ರ ಸಂಸ್ಕೃತಿ ಉಳಿಸಿಕೊಳ್ಳುವ ಅವಕಾಶ ಅನಿವಾರ್ಯತೆ ಇದೆ ಅನ್ನಿಸುತ್ತದೆ. ಭಾವನೆಗಳನ್ನು, ಚಿತ್ರಗಳನ್ನು, ಚಿಂತನೆಗಳನ್ನು ಹಸ್ತಾಕ್ಷರದಲ್ಲಿ ಪತ್ರ ಬರೆದು ಹಂಚಿಕೊಳ್ಳೊಣ. ಪತ್ರ ಸಂಸ್ಕೃತಿಯನ್ನು ಉಳಿಸಿ ಬೆಳಸೋಣ

 ವಿವೇಕಾನಂದರ ವಿಚಾರ ಧಾರೆಗಳು
- ವಿಜಯಲಕ್ಷ್ಮಿ ವಿ.

ಏಳಿ, ಎದ್ದೇಳಿ, ಜಾಗೃತರಾಗಿ, ಗುರಿಯನ್ನು ಸೇರುವವರೆಗೆ ನಿಲ್ಲಬೇಡಿ! ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನ ನರನಾಡಿಗಳು, ಅವುಗಳ ಅಂತರಾಳದಲ್ಲಿ ಸಿಡಿಲಿನಂತಿರುವ ಮಾನಸಿಕ ಶಕ್ತಿ, ಸತ್ಯ ಶೋಧನೆಗಾಗಿ ಸಮುದ್ರ ತಳಕ್ಕೆ ಬೇಕಾದರೂ ಹೋಗಿಬರುವ ಅದಮ್ಯ ಇಚ್ಛಾಶಕ್ತಿ ಇರುವಂಥ ಯುವಕರು ಇಂದು ಬೇಕು ಎಂದು ಹೇಳಿದ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಅನ್ವಯವಾಗುವಂತಹವು. ಭಾರತೀಯ ಸಂಸ್ಕೃತಿಯ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಗಮನ ಸೆಳೆದ ಮಹಾನ್ ವ್ಯಕ್ತಿಗಳಲ್ಲಿ ವಿವೇಕಾನಂದರು ಪ್ರಮುಖರು. ವಿವೇಕಾನಂದರು ಸಹಜವಾಗಿಯೇ ಅದ್ಭುತ ಪ್ರತಿಭಾಸಂಪನ್ನರು. ಅವರು ಸಂಸ್ಕೃತದಲ್ಲಿ ವ್ಯಾಕರಣ, ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲೀಷಿನಲ್ಲಿ ಕಾವ್ಯ, ಇತಿಹಾಸಗಳನ್ನೂ, ವಿಜ್ಞಾನಶಾಸ್ತ್ರ, ತತ್ತ್ವ ಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಅನುಭವ ಗಳಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವಿಣ್ಯತೆಯ  ಜೊತೆಗೆ ಅವರಿಗೆ ಉತ್ತಮವಾದ ವಾಕ್ಚಾತುರ್ಯವೂ ಇದ್ದುದರಿಂದ  ಅವರ ಭಾಷಣಗಳು ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತ್ತಿದ್ದವು. ಇದರ ಹಿಂದೆ ರಾಮಕೃಷ್ಣ ಪರಮಹಂಸರಂತಹ ಶ್ರೇಷ್ಠ ಗುರುಗಳ ಪಾತ್ರ ಬಹಳ ಮಹತ್ವದ್ದು. ಹಾಗಾಗಿ ವಿಭಿನ್ನ ಸಂಸ್ಕೃತಿಯ ಪಾಶ್ಚಾತ್ಯ ಜನರಿಗೆ ಭಾರತೀಯ ಪರಂಪರೆಯ ವೈಶಿಷ್ಟ್ಯತೆಯನ್ನು ತಲುಪಿಸಲು ಅವರಿಗೆ ಸಾದ್ಯವಾಯಿತು. ಅದಕ್ಕಾಗಿಯೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಒಂದು ಕಡೆ ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಓದಿ ಎಂದು ಹೇಳಿದ್ದಾರೆ. ಅಂದರೆ ವಿವೇಕಾನಂದರ ವಿಚಾರಧಾರೆಗಳಲ್ಲಿ ಭಾರತದ ಸರ್ವಧರ್ಮ ಸಮನ್ವಯದ ಸಮಗ್ರ ಚಿತ್ರಣವಿರುತ್ತದೆ.

ಅಮೇರಿಕಾದ ಸರ್ವಧರ್ಮ ಸಭೆಯಲ್ಲಿ ಅವರು ಮಾಡಿದ ಭಾಷಣ ಇಂದಿಗೂ ಜನಪ್ರಿಯವಾಗಿದೆ. ಅಮೆರಿಕಾದ ನನ್ನ ಸೋದರ, ಸೋದರಿಯರೇ...! ಎಂದು ಸಂಭೋಧಿಸುವ ಮೂಲಕ ವಿಶ್ವಭ್ರಾತೃತ್ವಕ್ಕೆ ಮುನ್ನುಡಿ ಹಾಡಿದ ವಿವೇಕಾನಂದರಿಗೆ ಭಾರತದ ಯವಶಕ್ತಿಯನ್ನು ಕಂಡರೆ ಅಪಾರ ಪ್ರೀತಿ ಮತ್ತು ಕಾಳಜಿಯಿತ್ತು.

ಅಂದಿನ ಭಾರತದ ಪರಿಸರ ಮತ್ತು ಇಲ್ಲಿನ ಅನೇಕ ವಿಚಾರಗಳ ಬಗ್ಗೆ ವಿವೇಕಾನಂದರಿಗೆ ಅಪಾರವಾದ ನೋವಿತ್ತು ಮತ್ತು ಅದನ್ನು ಸರಿಪಡಿಸುವ ಕಾಳಜಿಯಿತ್ತು ಹಾಗಾಗಿ ಅವರು ಯುವಕರನ್ನು ಜಾಗೃತಿಗೊಳಿಸಿದರು. ಪರಿಸರ ಮತ್ತು ಮೌಲ್ಯಗಳ ಕೊರತೆಯಿಂದಾಗಿ ಯುವಕರು ಅಜಾಗರೂಕರಾಗುತ್ತಿದ್ದಾರೆ, ಈ ಬಗ್ಗೆ ಅವರಿಗೆ ಅರಿವು ಮೂಡಿಸಲು ಇದು ಸೂಕ್ತ ಸಮಯ. ಭಾರತವು ನಂಬಲಾಗದ ಸವಾಲುಗಳನ್ನು ಎದುರಿಸುತ್ತಿರುವ ರಾಷ್ಟ್ರವಾಗಿದೆ. ದೇಶದಲ್ಲಿ ಎಲ್ಲಿಯೂ ಹೆಣ್ಣು ಮಗುವಿಗೆ ಮತ್ತು ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಗಳಿಲ್ಲ. ನೈತಿಕತೆಯ ಕೊರತೆಯಿಂದಾಗಿ ಇಂದು ಬಾಲಕಿಯರ ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ರಾಶಿಗಳು ಹಿಂಸಾಚಾರದಂತಹ ದೈತ್ಯಾಕಾರದ ಅಂಶಗಳು ನಮಗೆ ಎದ್ದು ಕಾಣುತ್ತವೆ ಎಂದಿದ್ದಾರೆ.

ಹಾಗೆಯೇ ಅಂದಿನ ಸಮಾನ ಶಿಕ್ಷಣದ ಬಗ್ಗೆ  ಮಾತನಾಡುತ್ತಾ... ಒಂದು ಕಡೆ ನಮ್ಮ ದೇಶದ ಜನರು ದೊಡ್ಡ ಸಂಪತ್ತನ್ನು ಹೊಂದಿದ್ದಾರೆ ಇನ್ನೊಂದೆಡೆ ಮೂರನೇ ಒಂದು ಭಾಗದಷ್ಟು ಜನರು ಪ್ರತಿದಿನ ಎರಡು ಹೊತ್ತಿನ ಊಟವೂ ಇಲ್ಲದೆ ನಲುಗುತ್ತಿದ್ದಾರೆ. ನಮಗೆ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಬಡವರ ಉದಾಹರಣೆಗಳಿವೆ. ಮತ್ತೊಂದು ಮುಖ್ಯ ವಿಷಯವೆಂದರೆ ನಮ್ಮ ದೇಶದ  ಲಕ್ಷಾಂತರ ಮಕ್ಕಳು ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಪ್ರವೇಶ ಪಡೆಯುವುದಿಲ್ಲ, ನಾವು ಇನ್ನೂ ಬಾಲ ಕಾರ್ಮಿಕರ ವಿಚಾರಗಳನ್ನು ತಲೆಕೆಳಗಾಗಿ ನೋಡುತ್ತಿದ್ದೇವೆ ಎಂದಿದ್ದಾರೆ. ಇಂದಿಗೂ ಬಾಲ ಕಾರ್ಮಿಕರ ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಪರಿಸ್ಥಿಗಳು ನಮ್ಮ ದೇಶದಲ್ಲಿ ಬಗೆ ಹರಿಯದ ಸಮಸ್ಯೆಗಳಾಗಿ ಕಾಡುತ್ತಿವೆ.

ಸ್ವದೇಶ ಮಂತ್ರ :
ಆರ್ಯಮಾತೆಯ ಅಮೃತ ಪುತ್ರರಿರಾ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ, ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ಧೈರ್ಯಗೆಡದಿರಿ, ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು. ಅಭಿಮಾನಪೂರ್ವಕವಾಗಿ ದಿಕ್ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಎಂದು ಯುವಜನರಿಗೆ ಕರೆ ನೀಡಿದರು, ಇದು ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಮೇಲೆ ತುಂಬಾ ಗಂಭೀರ ಪರಿಣಾಮ ಬೀರಿತು. ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧೀಜಿ ಮುಂತಾದ ಗಣ್ಯರು ವಿವೇಕಾನಂದರ ವಿಚಾರಧಾರೆಗಳಿಂದ ತುಂಬಾ ಪ್ರಭಾವಿತರಾಗಿದ್ದರು.

ವೇದಾಂತ ವ್ಯಾಖ್ಯಾನವನ್ನು ಆಧುನಿಕ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ವಿಶ್ಲೇಷಿಸಿದ ಕೀರ್ತಿ ವಿವೇಕಾನಂದರದ್ದು.ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ' ಎಂಬ ಪ್ರಾಚೀನ ವೇದಾಂತ ಸಂದೇಶಕ್ಕೆ ಸೇರ್ಪಡೆಯಾಗಿ ದೀನ ದೇವೋಭವ, ದರಿದ್ರ ದೇವೋಭವ, ರೋಗಿ ದೇವೋಭವ, ಅಶಕ್ತ ದೇವೋಭವ' ಎಂಬ ನೂತನ ವೇದಾಂತವನ್ನಿತ್ತರು. ಕಣ್ಣು ಮುಚ್ಚಿ ದೇವರನ್ನು ಕಾಣಬಯಸುತ್ತಿದ್ದ ಜಗತ್ತಿಗೆ ಕಣ್ಣು ತೆರೆದು ತನ್ನೆದುರಿಗೇ ಇರುವ ದೇವರನ್ನು ಕಾಣುವ ಜೀವನ ಕಲೆಯನ್ನು ಪರಿಚಯಿಸಿದವರು ವಿವೇಕಾನಂದರು.

ಯುವಜನರೇ, ಜಗತ್ತಿನ ಸಕಲ ಚರಾಚರಗಳಲ್ಲಿಯೂ ತುಂಬಿರುವ ದೇವರೊಬ್ಬನೇ ಎಂದು ಹೇಳುವ ಧರ್ಮ ನಿಮ್ಮದು, ಆದರೆ ಇದನ್ನು ಅನುಷ್ಠಾನಕ್ಕೆ ತರಲಿಲ್ಲ, ಇದು ನಮ್ಮ ತಪ್ಪು. ವಿಧವೆಯರ ಕಣ್ಣೀರೊರೆಸದ, ಅನಾಥರ ಬಾಯಿಗೆ ಒಂದು ತುತ್ತು ಅನ್ನವನ್ನು ಕೊಡದ ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ. ಸಿದ್ಧಾಂತಗಳು ಎಷ್ಟು ಸೂಕ್ಷ್ಮವಾಗಿದ್ದರೇನು? ತತ್ವಶಾಸ್ತ್ರಗಳನ್ನು ಎಷ್ಟು  ಚೆನ್ನಾಗಿ ರಚಿಸಿದ್ದರೇನು? ಎಲ್ಲಿಯವರೆಗೆ ಅವು ಕೇವಲ ಪುಸ್ತಕ ರೂಪದಲ್ಲಿರುತ್ತವೆಯೋ, ಎಲ್ಲಿಯವರೆಗೆ ಅವು ಮೂಢ ನಂಬಿಕೆಗಳಲ್ಲಿ ಕೊನೆಗಾಣುತ್ತವೆಯೋ ಅಲ್ಲಿಯವರೆಗೆ ಅದನ್ನು ಧರ್ಮವೆಂದು ಕರೆಯಲಾಗದು.

ಕಣ್ಣಿರುವುದು ಮುಖದ ಮುಂದೆ, ಬೆನ್ನ ಹಿಂದ ಅಲ್ಲ, ಹಾಗಾಗಿ ಮುಂದೆ ಮುಂದೆ ಹೋಗಿ, ಯಾವುದನ್ನು ನನ್ನ ಧರ್ಮ ಎಂದು ಕರೆಯುವಿರೋ ಅದನ್ನು ಆಚರಣೆಯಲ್ಲಿ ತಂದು ತೋರಿಸಿ ಧರ್ಮವಿರುವುದು ಪ್ರೀತಿಯಲ್ಲಿ, ಬಾಹ್ಯಾಚಾರದಲ್ಲಿ ಅಲ್ಲ, ಧರ್ಮಕ್ಕೆ ಪರಿಶುದ್ಧ ಮತ್ತು ನಿಷ್ಕಪಟ ಹೃದಯ ಮುಖ್ಯ. ಪರಿಶುದ್ಧ ಮನಸ್ಸಿನಿಂದ ಮಾಡುವ ಕೆಲಸವೆಲ್ಲಾ ಪೂಜೆಯೇ ಆಗುತ್ತದೆ. ಎಂದು ಯುವಕರನ್ನು ಸಾಧನೆಯ ಕಡೆ ಪ್ರೇರೇಪಿಸಿದರು.

ದೇವರನ್ನು ಎಲ್ಲೆಲ್ಲಿಯೋ ಏಕೆ ಹುಡುಕುತ್ತಿದ್ದೀಯೆ?, ನೋಡು, ಹಸಿದು ಕೈಚಾಚಿ ಕುಳಿತಿರುವ ಭಿಕ್ಷುಕನ ರೂಪದಲ್ಲಿರುವ ದೇವರನ್ನು, ನರಳುತ್ತಿರುವ ರೋಗಿಯ ರೂಪದಲ್ಲಿರುವ ದೇವರನ್ನು, ಹಸಿದವನಿಗೆ ಕೈಚಾಚಿ ನೀಡು, ಕಷ್ಟದಲ್ಲಿರುವವರನ್ನು ಉಪಚರಿಸು ಅದರಲ್ಲೇ ದೇವರಿದ್ದಾನೆ ಎಂದ ವಿವೇಕಾನಂದರು, ದೇವರನ್ನಷ್ಟೇ ನಂಬುವುದರ ಮೂಲಕ ತನ್ನನ್ನು 'ಆಸ್ತಿಕ' ಎಂದು ಬಿಂಬಿಸಿಕೊಳ್ಳುತ್ತಿದ್ದ ಮಾನವನನ್ನು ಕೇವಲ ನಿನ್ನನ್ನು ನೀನು ನಂಬದೇ, ದೇವರಲ್ಲಿನ ನಿನ್ನ ನಂಬಿಕೆ ಮಾತ್ರವೇ ನಿನ್ನನ್ನು ಆಸ್ತಿಕನನ್ನಾಗಿಸದು ಎಂದು ತಿಳಿವಳಿಕೆ ಹೇಳಿ ಯಾರು ಇತರರಿಗಾಗಿ ಬದುಕುತ್ತಾರೋ ಅವರದ್ದೇ ಜೀವನ, ಉಳಿದವರು ಬದುಕಿದ್ದರೂ ಸತ್ತಂತೆ...! ಎಲ್ಲಿಯವರೆಗೆ ಒಂದು ನಾಯಿ ಹಸಿವಿನಿಂದ ಇರುತ್ತದೋ ಅಲ್ಲಿಯವರೆಗೆ ನಾನು ಸಹಸ್ರ ಸಲ ನರಕಗಳನ್ನು ಸುತ್ತಬಲ್ಲೆ, ಇದೇ ನನ್ನ ಧರ್ಮ ಎಂದಿದ್ದಾರೆ. ದೀನರ, ದುರ್ಬಲರ, ಅಶಕ್ತರ ಮೇಲೆ ದೌರ್ಜನ್ಯ ಎಸಗುವ ಅಕ್ಷರಸ್ಥ ಶಕ್ತರನ್ನು, ಆರ್ಥಿಕ ಶಕ್ತರನ್ನು ದೇಶದ್ರೋಹಿಗಳು ಎಂದೇ ಹೇಳುತ್ತಾ, ಭಾರತದ ಅವಳಿ ಅದರ್ಶಗಳಾದ ತ್ಯಾಗ ಮತ್ತು ಸೇವೆ'ಯನ್ನು ಇನ್ನಷ್ಟು ಊರ್ಜಿತಗೊಳಿಸಿಕೊಳ್ಳಬೇಕೆಂದು ಯುವಕರಿಗೆ ಸಲಹೆಯಿತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಅದ್ಭುತ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ.

ಶಿಕ್ಷಕರು ಯಾವುದೇ ಸ್ವಾರ್ಥದ ಉದ್ದೇಶದಿಂದ, ಹಣಕ್ಕಾಗಿ, ಹೆಸರಿಗಾಗಿ ಅಥವಾ ಪ್ರಸಿದ್ಧಿಗಾಗಿ ಬೋಧಿಸಬಾರದು. ಇಂತಹ ಯಾವುದೇ ಉದ್ಧೇಶಗಳು ತಕ್ಷಣವೇ ಶಿಕ್ಷಕನ ಸಂವಹನ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಶಿಕ್ಷಕ ಯಾವುದೇ ಅಹಿತಕರ ಪ್ರಭಾವಕ್ಕೆ ಒಳಗಾಗದೇ ತನ್ನ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದಾಗ ಮಾತ್ರ ಆತನ ವ್ಯಕ್ತಿತ್ವ ಮಾದರಿ ವ್ಯಕ್ತಿತ್ವವಾಗುತ್ತದೆ. ಶಿಕ್ಷಕರು ನಿಸ್ವಾರ್ಥ ಮತ್ತು ಆದರ್ಶವ್ಯಕ್ತಿಗಳಾಗಿ ಮಕ್ಕಳಿಗೆ ಮಾದರಿಯಾಗಬೇಕೆಂದು ಶಿಕ್ಷಕರಿಗೆ ಕರೆನೀಡಿದ್ದಾರೆ.

ಹಿಂದಿರುಗಿ ನೋಡುವ ಅವಶ್ಯಕತೆ ಇಲ್ಲ, ಮುಂದೆ ನೋಡಿ! ನಮಗೆ ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಧೈರ್ಯ, ಅನಂತ ತಾಳ್ಮೆ ಬೇಕು. ಆಗ ಮಾತ್ರ ನಾವು ಮಹತ್ಕಾರ್ಯಗಳನ್ನು ಸಾಧಿಸಬಹುದು. ಉತ್ತಮವಾದ ಪುಸ್ತಕ ನಕಾಶೆಯಿದ್ದಂತೆ; ಅದು ಊರಿಗೆ ದಾರಿಯನ್ನು ತೋರಿಸುತ್ತದೆ. ಆದರೆ ಆ ಊರು ತಲುಪುವುದು ನಿಮ್ಮ ಸಾಮಥ್ರ್ಯವನ್ನು ಅವಲಂಬಿಸಿರುತ್ತದೆ ಎನ್ನುತ್ತಾ ಓದಿನ ಅಗತ್ಯಗಳನ್ನು ತಿಳಿಸುತ್ತಾ ಮುನ್ನಡೆಯಿರಿ! ಸುದೀರ್ಘ ಹೋರಾಟದಿಂದ ಮಾತ್ರವೇ ಚಾರಿತ್ರ್ಯವು ರೂಪಗೊಳ್ಳುವುದು. ಆದ್ದರಿಂದ ನಡು-ನಡುವೆ ತಪ್ಪುಗಳು ಸಂಭವಿಸಿದಾಗ ನಿರುತ್ಸಾಹಗೊಳ್ಳದಿರಿ ಎಂದು ಯುವಕರನ್ನು ಹುರಿದುಂಬಿಸಿದ್ದಾರೆ

Related Posts