ಮಹಾತ್ಮ ಗಾಂಧಿ ಮತ್ತು ಶಿಕ್ಷಣ
- ರುದ್ರೇಶ್ ಬಿ. ಅದರಂಗಿ,

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಶಿಕ್ಷಣವನ್ನು ಕುರಿತಾಗಿ ಸ್ಪಷ್ಟವಾದ ನಿಲುವನ್ನು, ಚಿಂತನೆಯನ್ನು ಹೊಂದಿದ್ದರು, ಅಂದು ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ಮೆಕಾಲೆ ಶಿಕ್ಷಣವನ್ನು ತಂದಿದ್ದರು. ವಿಶಾಲವಾದ ವಿವಿಧತೆಯ ಬಹು ಧರ್ಮ ಮತ್ತು ಬಹು ಭಾಷೆಗಳ ಭಾರತವನ್ನು ಆಳುವುದು ಅವರಿಗೆ ಸವಾಲಿನ ಸಂಗತಿಯಾಗಿತ್ತು, ತಮ್ಮ ಆಡಳಿತದ ಅನುಕೂಲಕ್ಕೆ ಸ್ಥಳೀಯರು ಬೇಕಾಗಿತ್ತು. ತಮಗೆ ಬೇಕಾದ ಕಾರಕೂನರನ್ನು ತಯಾರು ಮಾಡಲು ಬೇಕಾದ ಶಿಕ್ಷಣವನ್ನು ನೀಡುವ ಮೆಕಾಲೆ ಶಿಕ್ಷಣ ಪದ್ಧತಿಯನ್ನು ತಂದರು.

ಬ್ರಿಟಿಷ್ ಶಿಕ್ಷಣ ಪದ್ಧತಿಯು ಭಾರತೀಯರಲ್ಲಿ ಜ್ಞಾನಾರ್ಜನೆಯನ್ನು ಜನರಲ್ಲಿ ಸಮಾನತೆಯನ್ನು, ಚಿಂತನೆಯನ್ನು ನೀಡಿತು. ಭಾರತವು ಸ್ವಾತಂತ್ರ್ಯವನ್ನು ಗಳಿಸಿದರು ನಾವು ಮೆಕಾಲೆ ಶಿಕ್ಷಣ ಪದ್ಧತಿಗೆ ಜೋತು ಬಿದ್ದೆವು. ಇದರ ಪರಿಣಾಮವಾಗಿ ಇಂದಿಗೂ ನಾವು ಗುಣಾತ್ಮಕವಾದ ಸರ್ವತೋಮುಖವಾದ ವ್ಯಕ್ತಿತ್ವ ವಿಕಸನದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕವಾದ ಶಿಕ್ಷಣವನ್ನು ಪಡೆಯಲಾಗಿಲ್ಲ. ಈ ನಿಟ್ಟಿನಲ್ಲಿ ಹಲವಾರು ವರದಿಗಳು ಬದಲಾವಣೆಗಳು ಬಂದರೂ, ಮೂಲ ಸ್ವರೂಪ ಮಾತ್ರ ಬದಲಾಗಿಲ್ಲ. ಇದರ ಅಪಾಯವನ್ನು ಬಾಪು ಅಂದೆ ಕಂಡಿದ್ದರು. ಹೀಗಾಗಿ ಭಾರತಕ್ಕೆ ಬೇಕಾದ ಮೂಲಭೂತ ಶಿಕ್ಷಣದ ಮಹತ್ವವನ್ನು ಅವರು ತಮ್ಮ ಚಿಂತನೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷರ ಮೆಕಾಲೆ ಶಿಕ್ಷಣ ಪದ್ಧತಿ ಕಾರಕೂನರನ್ನು ತಯಾರು ಮಾಡುವ ಕಾರ್ಖಾನೆ ಇದ್ದಂತೆ, ಇದರಿಂದ ವ್ಯಕ್ತಿತ್ವ ವಿಕಸನವಾಗುವುದಿಲ್ಲ, ಶಿಕ್ಷಣವೆಂದರೆ, ಬರಿಯ ನಾಲ್ಕು ಗೋಡೆಗಳ ಇಟ್ಟಿಗೆ ಗೂಡಲ್ಲ. ಇಂತಹ ಶಿಕ್ಷಣ ಪದ್ಧತಿಯಿಂದ ಯಾವುದೇ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಸತ್ಯ ಮತ್ತು ಪಾವಿತ್ರ್ಯದ ತಳಹದಿಯ ಮೇಲಿನ ಶಿಕ್ಷಣಕ್ಕೆ ಗಾಂಧೀಜಿಯವರು ಅದ್ಯತೆಯನ್ನು ನೀಡಿದರು. ಬಾಪು ದಕ್ಷಿಣ ಆಫ್ರಿಕಾದಲ್ಲಿಯ ತಮ್ಮ ಆಶ್ರಮದಲ್ಲಿ ಹಾಗೂ ಭಾರತಕ್ಕೆ ಬಂದ ನಂತರ ಸ್ಥಾಪಿಸಿದ ಸಾಬರ್ಮತಿ ಆಶ್ರಮವನ್ನು ಶಿಕ್ಷಣದ ಒಂದು ಪ್ರಯೋಗಶಾಲೆಯನ್ನಾಗಿಯೇ ಮಾಡಿಕೊಂಡರು. ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದರು. ವ್ಯಕ್ತಿತ್ವ ವಿಕಸನದ ಮಂತ್ರಗಳನ್ನು ಬೋಧಿಸಿದರು. ರಾಷ್ಟ್ರವನ್ನು ಕೇವಲ ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡುವುದಷ್ಟೆ ಇವರ ಉದ್ದೇಶವಾಗಿರಲಿಲ್ಲ. ಭಾರತವನ್ನು ಸಮಗ್ರವಾಗಿ ಶಕ್ತಿಯುತ ರಾಷ್ಟ್ರವನ್ನಾಗಿಸಲು ಬೇಕಾದ ಶಿಕ್ಷಣವನ್ನು ತಮ್ಮ ಆಶ್ರಮದಲ್ಲಿ ಅಳವಡಿಸಿದ್ದರು. ಆಶ್ರಮವಾಸಿಗಳೆಲ್ಲರೂ ಬಾಪು ಅವರ ಈ ಶಿಕ್ಷಣದ ವಕ್ತಾರರಾಗಿದ್ದರು.

ಶಿಕ್ಷಣವೆಂದರೆ ಅದು ಚಾರಿತ್ರ್ಯವನ್ನು ನಿರ್ಮಾಣ ಮಾಡಬೇಕು. ಕೇವಲ ಶಾಲಾ ಕಾಲೇಜುಗಳಲ್ಲಿ ನೀಡುವ ಶಿಕ್ಷಣದಿಂದ ಇದು ಈಡೇರುತ್ತದೆ ಎಂದು ಅವರು ಬಗೆದಿರಲಿಲ್ಲ. ಸಮಾಜದಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನವಾಗಿ ಶುದ್ಧ ಚಾರಿತ್ರ್ಯ ನಿರ್ಮಾಣವಾಗಬೇಕೆಂದು ಬಯಸಿದ್ದರು. ಚಾರಿತ್ರ್ಯ ನಿರ್ಮಾಣವು ಅವರ ಜೀವನದಿಂದಲೇ ಬರುತ್ತದೆ. ಆಗ ಅದು ಹೆಚ್ಚು ಸತ್ವಯುತವಾಗಿ ಒಳಗಿನಿಂದಲೇ ನಿರ್ಮಾಣವಾಗುತ್ತದೆ ಎಂದು ಪರಿವರ್ತನೆಯನ್ನು ಶಿಕ್ಷಣದಲ್ಲಿ ಬಯಸಿದ್ದರು.

ವಿದ್ಯಾರ್ಥಿಯು ಆತ್ಮ ಸಂಯಮವನ್ನು ಹೊಂದಿರಬೇಕೆಂಬುದು ಇವರ ಸ್ಪಷ್ಟವಾದ ನಿಲುವಾಗಿತ್ತು. ತನ್ನ ಮನಸ್ಸಿನ ಚಾಂಚಲ್ಯಕ್ಕೆ ನೈತಿಕ ಬಂಧನವನ್ನು ತೊಟ್ಟು ಪರಿಪೂರ್ಣ ವ್ಯಕ್ತಿತ್ವದತ್ತ ವಿದ್ಯಾರ್ಥಿಯು ಸಾಗಬೇಕು. ಇದಕ್ಕಾಗಿ ಕಠಿಣವಾದ ಮಾರ್ಗವನ್ನು ತುಳಿಯಬೇಕು. ಯಾವುದೇ ಸ್ವಾರ್ಥಕ್ಕೆ ಬಲಿಯಾಗಬಾರದು, ಯಾವ ಚಾಂಚಲ್ಯಕ್ಕೂ ಒಳಗಾಗಬಾರದು. ಒಂದು ವಿಧದಲ್ಲಿ ವಿದ್ಯಾರ್ಥಿಯ ಬದುಕು ಋಷಿ ಸದೃಶ್ಯವಾದ ಬದುಕು. ತಪಸ್ಸಿನಂತೆ ಕಾಯ್ದುಕೊಳ್ಳಬೇಕು. ಯಾವಾಗಲೂ ಜಾಗೃತವಾಗಿರಬೇಕು. ಎಂದಿಗೂ ಯಾವ ಪ್ರಲೋಭನೆಗಳಿಗೂ ಒಳಗಾಗಬಾರದು. ತನ್ನ ಗುರಿಯನ್ನು ತಲುಪುವವರೆಗೂ ಸಂಯಮದಿಂದಿರಬೇಕು.

ವಿದ್ಯಾರ್ಥಿ ಸಂಯಮವನ್ನು ಪಾಲಿಸುವುದೆಂದರೆ, ಕೇವಲ ಹೊರಗಿನ ಸಂಯಮವಲ್ಲ. ಅದು ಒಳಗೂ ಇರಬೇಕು. ಅಂದರೆ ತೋರಿಕೆಯಿಂದ ಬಂದದ್ದು,  ಬಲವಂತದಿಂದ ಬಂದದ್ದು, ಎಂದಿಗೂ ದೀರ್ಘವಾಗಿರುವುದಿಲ್ಲ. ಇದು ವಿದ್ಯಾರ್ಥಿಯ ಅಂತರಂಗದಿಂದ ಬರಬೇಕು. ಅಂತರಂಗದಿಂದ ಬಂದ ಸಂಯಮ ಹೆಚ್ಚು ಬಲಿಷ್ಠವಾದುದು ಎಂದು ಪ್ರತಿಪಾದಿಸಿದ್ದರು.

ರಾಷ್ಟ್ರಕ್ಕಾಗಿ ವಿದ್ಯಾರ್ಥಿ ಯಾವ ತ್ಯಾಗಕ್ಕಾದರೂ ಸಿದ್ಧನಾಗಿರಬೇಕು. ಇದಕ್ಕಾಗಿ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದಾಗ ಕಾನೂನುಭಂಗ ಚಳುವಳಿ ಮತ್ತು ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡರು. ಬಾಪು ಕರೆ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ತೊರೆದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳ ಚಳುವಳಿಯೂ ಕೂಡ ಮಹತ್ವವಾದುದು.

ವೃದ್ಧರಾದ ಮತ್ತು ದುರ್ಬಲರಾದ ತನ್ನ ತಂದೆ-ತಾಯಿಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಮಕ್ಕಳ ಜವಾಬ್ದಾರಿ. ವಿದ್ಯಾರ್ಥಿಗಳು ಪಿತೃಭಕ್ತಿಯನ್ನು ತೋರಬೇಕು. ಗುರು ಮತ್ತು ಮಾತಾಪಿತೃಗಳು ಶ್ರೇಷ್ಠರು. ಅದಕ್ಕಾಗಿಯೇ ಸಂಸ್ಕೃತದಲ್ಲಿ ಮಾತೃದೇವೋಭವ, ಪಿತೃದೇವೋಭವ, ಗುರುದೇವೋಭವ ಎಂದು ಹೇಳಲಾಗಿದೆ. ಬಾಲ್ಯದಲ್ಲಿ ಬಾಪು ಶ್ರವಣಕುಮಾರನ ಕಥೆಯನ್ನು ಕೇಳಿದ್ದರು. ಇದು ಇವರ ಮೇಲೆ ಬಹುದೊಡ್ಡ ಪ್ರಭಾವವನ್ನು ಬೀರಿತ್ತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಶ್ರವಣಕುಮಾರನ ಕಥೆಯನ್ನು ಹೇಳುತ್ತಿದ್ದರು. ತಮ್ಮ ತಂದೆ ತಾಯಿಗಳನ್ನು ಅತ್ಯಂತ ಭಕ್ತಿಯಿಂದ ನೋಡುವುದಲ್ಲದೆ ಅವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಮಕ್ಕಳದು ಎಂದು ಪ್ರತಿಪಾದಿಸಿದ್ದರು.

ಧರ್ಮವನ್ನು ಕುರಿತಾಗಿ ಇಂದು ಬಹುದೊಡ್ಡ ಚರ್ಚೆಯಾಗುತ್ತಿದೆ. ಬಾಪು ಹೇಳಿದ ಸಪ್ತ ಮಹಾಪಾತಕಗಳಲ್ಲಿ ಒಂದೆಂದರೆ, ಧರ್ಮವಿಲ್ಲದ ರಾಜಕೀಯ ಮತ್ತು ನೈತಿಕತೆಯಿಲ್ಲದ ಶಿಕ್ಷಣ. ಆದರೆ ಇಂದು ಇವುಗಳೆರಡು ಇಲ್ಲವಾಗಿವೆ. ಧರ್ಮದಿಂದ ಜೀವನವನ್ನು ನಡೆಸುವುದರಿಂದಲೇ ಧಾರ್ಮಿಕ ಶಿಕ್ಷಣ ಪಡೆಯಬಹುದಾಗಿದೆ ಎಂದು ನಂಬಿದ್ದರು. ಧರ್ಮವೆಂದರೆ ಯಾವುದೋ ಒಂದು ನಿರ್ದಿಷ್ಠವಾದ ಧರ್ಮವಲ್ಲ ಅದು ಎಲ್ಲರನ್ನು ಒಳಗೊಂಡಿದ್ದು. ಅಂತೆಯೇ ಬಾಪು ಸರ್ವಧರ್ಮಗಳನ್ನು ಸಮಾನಭಾವದಿಂದ ಕಂಡವರು. ಅವರು ದೇವಸ್ಥಾನಗಳಿಗೆ ಹೋಗುವಂತೆ ಚರ್ಚ್ ಮತ್ತು ಮಸೀದಿಗಳಿಗೂ ಹೋಗುತ್ತಿದ್ದರು. ಧರ್ಮಬದ್ಧವಾದ ಶಿಕ್ಷಣ ಸಿಗಬೇಕೆಂಬುದನ್ನು ಕುರಿತು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಹೀಗೆ ಹೇಳಿದ್ದಾರೆ. ವಿದ್ಯಾರ್ಥಿಗಳಲ್ಲಿ ಶ್ರದ್ಧೆಯು ದಿನ ದಿನಕ್ಕೆ ಕಡಿಮೆಯಾಗುತ್ತಿರುವುದನ್ನು ಕಂಡು ನಿಜವಾಗಿ ನನಗೆ ವ್ಯಥೆ ಎನಿಸುತ್ತದೆ. ನಾನು ಯಾವನಾದರೂ ಹಿಂದೂ ವಿದ್ಯಾರ್ಥಿಗೆ ರಾಮನಾಮವನ್ನು ಜಪಿಸಲು ಹೇಳಿದರೆ, ಅವನು ನನ್ನ ಕಡೆಗೆ ಕೆಕ್ಕರಿಸಿ ನೋಡಿ ಈ ರಾಮನೆಂದರೆ ಯಾರೆಂದು ತನ್ನೊಳಗೆ ಕೇಳಿಕೊಳ್ಳುತ್ತಾನೆ. ನಾನು ಯಾವನಾದರೂ ಮುಸಲ್ಮಾನ ಹುಡುಗನಿಗೆ ಕುರಾನ್ನನ್ನು ಓದಬೇಕೆಂತಲೂ, ದೇವರಿಗೆ ಹೆದರಬೇಕೆಂತಲೂ ಹೇಳಿದರೆ, ತನಗೆ ಕುರಾನ್ನ್ನು ಓದಲು ಬಾರದೆಂದು ಹೇಳುವನಲ್ಲದೆ ಅವನು ಪಠಿಸುವ ಅಲ್ಲಾನ ಹೆಸರು ಬರಿಯ ತುಟಿಯಿಂದ ಬರುತ್ತದೆ. ನಿಜವಾದ ಶಿಕ್ಷಣದ ಪ್ರಥಮ ಸೋಪಾನವೆಂದರೆ, ಶುದ್ಧ ಹೃದಯವೇ ಆಗಿದೆ ಎಂದು ನಾನು ಈ ಹುಡುಗರಿಗೆ ಹೇಗೆ ಮನಗಾಣಿಸಿಕೊಡಲಿ? ನಿಮಗೆ ಕೊಡುತ್ತಿರುವ ಶಿಕ್ಷಣವು ನಿಮ್ಮನ್ನು ದೇವರಿಂದ ದೂರ ಒಯ್ಯುತ್ತಿದ್ದರೆ ಇಂತಹ ಶಿಕ್ಷಣವು ಯಾವ ರೀತಿ ಉಪಯುಕ್ತವಾಗಿದೆ ಎಂಬುದನ್ನು ಮತ್ತು ಅದರಿಂದ ನೀವು ಯಾವರೀತಿ ಜಗತ್ತಿಗೆ ಸಹಾಯಕರಾಗುತ್ತೀರಿ ಎಂಬುದನ್ನು ನಾನು ಅರಿಯೆ. ನಾನು ಜನಸಾಮಾನ್ಯರ ಸೇವೆಯ ಮುಖಾಂತರವಾಗಿಯೇ ಪರಮಾತ್ಮನನ್ನು ಕಾಣುತ್ತಿದ್ದೇನೆಂದು ನೀವು ಸರಿಯಾಗಿಯೆ ಹೇಳಿದಿರಿ. ಯಾಕೆಂದರೆ ಪರಮಾತ್ಮನು ಸ್ವರ್ಗ ಪಾತಾಳಗಳಲ್ಲಿರದೆ ನಾವು ಹಿಂದುವೇ ಆಗಿರಲಿ, ಮುಸಲ್ಮಾನ, ಪಾರ್ಸಿ, ಕ್ರಿಶ್ಚಿಯನ್ ಯಾರೇ ಇರಲಿ ನಮ್ಮೆಲ್ಲರ ಹೃದಯದಲ್ಲಿ ಆ ಪರಮಾತ್ಮನು ಇದ್ದಾನೆಂಬುದನ್ನು ನಾನು ಬಲ್ಲೆ. ಯಂಗ್ ಇಂಡಿಯಾ 1927.

ಬಾಪು ತಮ್ಮ ಯಾವುದೇ ಸಭೆ ಸಮಾರಂಭಗಳಾಗಲಿ, ಅವುಗಳಲ್ಲಿ ಮೊದಲು ಸಾಮೂಹಿಕ ಪ್ರಾರ್ಥನೆಯನ್ನು ಮಾಡಿಸುತ್ತಿದ್ದರು. ಧ್ಯಾನ ಮತ್ತು ಪ್ರಾರ್ಥನೆ ಮನುಷ್ಯನಿಗೆ ಅದರಲ್ಲಿಯೂ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾದುದು ಎಂದು ನಂಬಿದ್ದರು. ಪ್ರಾರ್ಥನೆಗೆ ಒಂದು ನಿಶ್ಚಿತವಾದ ವೇಳೆ ಎಂಬುದಿಲ್ಲ. ದೇಹದ ತುಂಬೆಲ್ಲಾ ಪರಮಾತ್ಮನೇ ತುಂಬಿರುವ ಜನರಿಗೆ  ಕೆಲಸ ಮಾಡುವುದೇ ಪ್ರಾರ್ಥನೆಯಾಗುವುದು. ಅವರ ಜೀವನವೆಂದರೆ ಒಂದು ನಿರಂತರವಾದ ಪ್ರಾರ್ಥನೆ ಇಲ್ಲವೆ ಪೂಜೆಯಾಗಿದೆ. ಎಂದು ವಿದ್ಯಾರ್ಥಿಗಳನ್ನು ಕುರಿತು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಹೇಳಿದ್ದಾರೆ. ಧ್ಯಾಸನ ಮತ್ತು ಪ್ರಾರ್ಥನೆಗಳು ವಿದ್ಯಾರ್ಥಿಗಳಿಗೆ ಅತ್ಮವಿಶ್ವಾಸವನ್ನು ನೀಡುವುದಲ್ಲದೆ ಪರಿಪೂರ್ಣವಾದ ವ್ಯಕ್ತಿತ್ವ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದು ಗಾಂಧೀಜಿ ನಂಬಿದ್ದರು.

ಬಾಪು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಚಳುವಳಿಗೆ ಕರೆ ನೀಡಿದಂತೆ ಖಾದಿ ವಸ್ತ್ರ ತೊಡುವಂತೆ ಕರೆ ನೀಡಿದರು, ನೂಲು ತೆಗೆಯುವುದು, ಬಟ್ಟೆ ನೇಯುವುದು, ದೇಶವನ್ನು ಸ್ವಾವಲಂಬಿಯನ್ನಾಗಿಸುತ್ತದೆ. ಖಾದಿ ಬಟ್ಟೆಯ ಮೂಲಕ ದೇಶದ ದಾಸ್ಯವನ್ನು ಕೊನೆಗಾಣಿಸಲು ದಿವ್ಯಮಂತ್ರವನ್ನಾಗಿ ಮಾಡಿದರು. ವಿದ್ಯಾರ್ಥಿಗಳು ಹರಿಜನರ ಸೇವೆ ಮಾಡಬೇಕೆಂದು ತಮ್ಮ ಪತ್ರಿಕೆಯಲ್ಲಿ ಹಾಗೂ ಪ್ರವಚನಗಳಲ್ಲಿ ಹೇಳಿದ್ದಾರೆ. ಹರಿಜನೋದ್ಧಾರವೇ ದೇಶೋದ್ಧಾರ. ಹರಿಜನರ ಸೇವೆ ಮಾಡುವುದೆಂದರೆ ಭಗವಂತನ ಸೇವೆ ಮಾಡಿದಂತೆ ಎಂದು ತಿಳಿಸಿದ್ದಾರೆ. ಸಾಬರ್ಮತಿ ಆಶ್ರಮದಲ್ಲಿ ಪ್ರತಿಯೊಬ್ಬರು ಹರಿಜನರ ಸೇವೆ ಮಾಡಬೇಕಿತ್ತು. ಅಷ್ಟೇ ಅಲ್ಲ ತಮ್ಮಲ್ಲಿರುವ ಜಾತಿ ಭಾವನೆಯನ್ನು ತೆಗೆದುಹಾಕಬೇಕಿತ್ತು. ಆಶ್ರಮದ ಮೊದಲ ಕೆಲಸವೆಂದರೆ, ಪಾಯಖಾನಿಗಳನ್ನು ಸ್ವಚ್ಛಪಡಿಸುವುದು ಈ ಮೂಲಕ ಬಾಪು ವ್ಯಕ್ತಿಯ ಅಹಮಿಕೆಯನ್ನು ಕಳೆದು ಸಮಾನತೆಯ ಭಾವನೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದರು. ಬಾಪು ಪ್ರತಿ ವಿದ್ಯಾರ್ಥಿಗೆ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡುತ್ತಿದ್ದರು. ಭಾರತ ಹಳ್ಳಿಗಳ ನಾಡು, ಹಳ್ಳಿಗಳ ಅಭಿವೃದ್ಧಿಯಿಂದ ರಾಷ್ಟ್ರ ಅಭಿವೃದ್ಧಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಹಳ್ಳಿಗಳಿಗೆ ಮರಳಿ ಗ್ರಾಮೋದ್ಧಾರವನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು. ಆಚಾರ್ಯ ವಿನೋಬಾ ಭಾವೆ ಅವರೂ ಕೂಡ ಬಾಪು ಅವರ ಈ ಮಾತಿಗೆ ಪೂರಕವಾಗಿ ಗಾಂಧಿ ಗ್ರಾಮಗಳನ್ನು ಸ್ಥಾಪಿಸಿದ್ದನ್ನು ಇಲ್ಲಿ ಮನಗಾಣಬಹುದು.

ವಿದ್ಯಾರ್ಥಿಯು ಧೂಮಪಾನದಿಂದ, ಮದ್ಯಪಾನದಿಂದ, ಲಂಚದಿಂದ, ವರದಕ್ಷಿಣೆಯಿಂದ ಐಶಾರಾಮ ಜೀವನದಿಂದ ದೂರವಿರಬೇಕೆಂದು ತಿಳಿಸಿದ್ದಾರೆ. ಈ ಮೇಲಿನ ದುರ್ನಡತೆಗಳು ಪಾತಕಗಳು. ಇವುಗಳಿಂದ ದೂರವಿದ್ದು, ವ್ಯಕ್ತಿತ್ವ ವಿಕಸನವನ್ನು ಹೊಂದುವುದಲ್ಲದೆ ರಾಷ್ಟ್ರೋದ್ಧಾರಕ್ಕೆ ಶ್ರಮಿಸಬೇಕೆಂದು ಕರೆಯುತ್ತಿದ್ದಾರೆ. ಹದಿಹರೆಯದ ಯುವಕರಲ್ಲಿ ಉಂಟಾಗುವ ವಯೋಸಹಜವಾದ ಲೈಂಗಿಕ ಆಸಕ್ತಿಯನ್ನು ಸಂಯಮದಿಂದ ನಿಯಂತ್ರಿಸಬೇಕೆಂದು ಹೇಳುತ್ತಾರೆ. ನೈತಿಕವಾದ ನೆಲೆಗಟ್ಟಿನಲ್ಲಿಯೇ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣವನ್ನು ನೀಡುವುದರಿಂದ ಆತ ಅಡ್ಡದಾರಿ ಹಿಡಿಯುವುದಿಲ್ಲ. ಆತ ಸಂಯಮದಿಂದ ಜ್ಞಾನಾರ್ಜನೆಯನ್ನು ಪಡೆದು ಉತ್ತಮ ಪ್ರಜೆಯಾಗಿ ವಿವಾಹವಾಗಿ ನೈತಿಕತೆಯ ದಾಂಪತ್ಯವನ್ನು ಪರಿಪಾಲಿಸಬೇಕೆಂದು ಹೇಳಿದ್ದಾರೆ.

ಮಾತೃಭಾಷಾ ಶಿಕ್ಷಣಕ್ಕೆ ಬಾಪು ಅದ್ಯತೆಯನ್ನು ನೀಡಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆಯಬೇಕು. ಮಾತೃಭಾಷಾ ಶಿಕ್ಷಣದಿಂದ ಸಂವಹನ ಸುಲಭವಾಗಿ ವಿದ್ಯಾರ್ಥಿಯು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದ್ದರಿಂದ ದೇಶೀಯ ಭಾಷೆಗಳಲ್ಲಿ ಮಾತೃಭಾಷಾ ಶಿಕ್ಷಣ ದೊರಕುವಂತಾಗಬೇಕು. ಇಂಗ್ಲೀಷ್ ಅಂತರರಾಷ್ಟ್ರೀಯ ವ್ಯಾಪಾರದ ಭಾಷೆ, ರಾಜಕೀಯ ಸಂಧಾನ ವ್ಯವಹಾರದ ಭಾಷೆ, ಅದರಲ್ಲಿ ಅಪಾರ ಸಾಹಿತ್ಯವಿದೆ. ಪಶ್ಚಿಮದ ವಿಚಾರ ಸಂಸ್ಕೃತಿಗಳಿಗೆ ಅದು ಬಾಗಿಲು. ನಮ್ಮಲ್ಲಿ ಕೆಲವರಿಗೆ ಇಂಗ್ಲೀಷಿನ ಜ್ಞಾನ ಬೇಕು ಆದರೆ ಇವತ್ತು ಇಂಗ್ಲೀಷ್ ನಮ್ಮ ಮಾತೃಭಾಷೆಯನ್ನು ಸಿಂಹಾಸನದಿಂದ ತಳ್ಳಿದೆ. ಇಂಗ್ಲೀಷಿನ ವ್ಯಾಮೋಹ ನೀಗುವುದು ಸ್ವರಾಜ್ಯದ ಒಂದು ಮುಖ್ಯ ಲಕ್ಷಣ ಎಂದು ಹೇಳಿದ್ದಾರೆ. ಮಾತೃಭಾಷಾ ಶಿಕ್ಷಣಕ್ಕೆ ಬಾಪು ಮತ್ತು ಗುರು ರವೀಂದ್ರನಾಥ ಟ್ಯಾಗೋರ್ ಅವರು ಸ್ವತಃ ತಮ್ಮ ಆಶ್ರಮಗಳಲ್ಲಿ ಇವುಗಳನ್ನು ಅನುಷ್ಠಾನಕ್ಕೆ ತಂದಿದ್ದರು.

ಶಿಕ್ಷಣದಲ್ಲಿ ವಿದ್ಯಾರ್ಥಿಯ ಪಾತ್ರದಷ್ಟೆ ಪೋಷಕರು ಮತ್ತು ಶಿಕ್ಷಕರ ಪಾತ್ರವೂ ಇದೆ. ಶಿಕ್ಷಕರು ಕೂಡ ತಮ್ಮ ವಿದ್ಯಾರ್ಥಿಗಳ ಹೃದಯವನ್ನು ಸಂಸ್ಕರಿಸಬೇಕೆಂದು ಅವರ ಹೃದಯ ಸಂಬಂಧವನ್ನಿಟ್ಟುಕೊಳ್ಳಬೇಕೆಂದು ತಿಳಿಸಿದ್ದಾರೆ. ಶಿಕ್ಷಕರ ಕೆಲಸವು ಪಾಠಶಾಲೆಯ ಒಳಗಿನದ್ದಕ್ಕಿಂತ ಹೊರ ಗೆ ಹೆಚ್ಚಿದೆ. ಇಂದಿನ ದಿನಗೂಲಿಯ ಆಧಾರದಲ್ಲಿ ದುಡಿಯುತ್ತಿರುವ ಶಿಕ್ಷಕರು ಶಾಲೆಗಷ್ಟೆ ಅಲ್ಲದೆ ಹೊರಗಡೆಯೂ ಕೂಡ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡಿರಬೇಕು. ವಿದ್ಯಾರ್ಥಿಗಳ ಜೀವನ ಮತ್ತು ಚಾರಿತ್ರ್ಯ ನಿರ್ಮಾಣಕ್ಕೆ ಶ್ರಮಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಮೆದುಳನ್ನು ಬಲಿಷ್ಠಗೊಳಿಸುವುದಕ್ಕಿಂತ ಅವರ ಹೃದಯವನ್ನು ಹದಗೊಳಿಸಲಿ ಎಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಶಿಕ್ಷಕರಿಗೆ ಕರೆ ನೀಡಿದ್ದಾರೆ.

ಸರ್ವತೋಮುಖವಾದ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಿದ ಬಾಪು ತಮ್ಮ ಬದುಕನ್ನೇ ಒಂದು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರು. 1948ರ ಜನವರಿ 30 ರಂದು ನಾಥೂರಾಮ್ ಗೂಡ್ಸೆ ಎಂಬ ವ್ಯಕ್ತಿ ಬಾಪು ಅವರನ್ನು ಹತ್ಯೆ ಮಾಡಿದ, ಆದರೆ ಬಾಪು ಅವರ ವ್ಯಕ್ತಿತ್ವ ಮತ್ತು ಚಿಂತನೆಯನ್ನು ಹತ್ಯೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಗೂಡ್ಸೆ ಬಾಪು ಅವರಿಗೆ ಗುಂಡಿಕ್ಕಿದರೂ ಎದೆಗುಂದದ ಬಾಪು ಅವರ ಬಾಯಿಂದ ಬಂದ ನುಡಿ ಹೇ ರಾಮ್. ಅಷ್ಟು ಪರಿಪಕ್ವ ಮತ್ತು ಶಕ್ತಿಯುತವಾದುದು ಬಾಪು ಅವರ ವ್ಯಕ್ತಿತ್ವ. ಇಂದಿನ ಸಂದರ್ಭದಲ್ಲಿ ಅಷ್ಟೇ ಅಲ್ಲ, ಎಂದೆಂದಿಗೂ ಅವರ ಚಿಂತನೆಧಾರೆ ಚಿರಸ್ಥಾಯಿಯಾದವುಗಳು.

Related Posts