ಮಹಿಳಾ ಶಿಕ್ಷಣ
ಡಾ: ಬಿ.ಎ. ಅನ್ನದಾನೇಶ

ಇಂದು ಭಾರತೀಯ ಶಿಕ್ಷಣ ವ್ಯವಸ್ಥೆಯು ಬದಲಾವಣೆಯಹಂತದಲ್ಲಿದೆ, ಎಂದು ಎಲ್ಲರೂ ಭ್ರಮಿಸಿದ್ದಾರೆ.  ವಾಸ್ತವದಲ್ಲಿಅದು ಪರಿವರ್ತನೆಯಾಗದೆ ಶಿಕ್ಷಣ ವ್ಯವಸ್ಥೆಯ ಹಂತಗಳು ಮತ್ತುವರ್ಗಗಳು ಸೃಷ್ಟಿಯಾಗುತ್ತಿವೆ. ಪ್ರಾಚೀನ ಭಾರತದಲ್ಲಿ ಗುರುಕುಲವ್ಯವಸ್ಥೆಯು ಕೆಲವೇ ವರ್ಗಕ್ಕೆ ಸೀಮಿತವಾದ ಹಾಗೆ. ಆದರೆ ಇಂದುಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಎಲ್ಲರಿಗೂ ಶಿಕ್ಷಣ ಸಿಗಬೇಕಿದೆ.ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಶಿಕ್ಷಣದ ಹಕ್ಕೂಕೂಡ ಒಂದು.

ಭಾರತ ವಿದ್ಯೆಗಳ ತವರೂರು. ಎಲ್ಲಾ ರೀತಿಯ ಶಿಕ್ಷಣವೂ ಇಲ್ಲಿ ದೊರೆಯುತ್ತದೆ. ಆದರೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅದರಲ್ಲೂಮಹಿಳಾ ಶಿಕ್ಷಣದ ವಿಷಯಕ್ಕೆ ಬಂದರೆ ಮಹಿಳೆಯರಿಗೆ ಶಾಲಾ- ಕಾಲೇಜುಗಳಲ್ಲಿ ಸೂಕ್ತವಾದ ಭದ್ರತೆ ಸಿಗುತ್ತಿಲ್ಲ. ಶೌಚಾಲಯ ಮತ್ತು ಅವರ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ತತ್ಕಾಲದ ವೈದ್ಯಕೀಯಸೌಲಭ್ಯಗಳು ಸಿಗುವುದಿಲ್ಲ. ತೀರ ಇತ್ತೀಚೆಗೆ ನಗರಗಳಲ್ಲಿ ಹೆಚ್ಚುಹಣ ಪಡೆಯುವ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಎಲ್ಲ ರೀತಿಯವ್ಯವಸ್ಥೆಗಳು ದೊರೆಯುತ್ತವೆ. ಆದರೆ ಇದು ಎಷ್ಟು ಮಹಿಳೆಯರಿಗೆತಲುಪುತ್ತದೆ ಎಂಬುದು ಮುಖ್ಯ ಪ್ರಶ್ನೆ?

ಗ್ರಾಮೀಣ ಮಹಿಳೆಯರು ನಗರಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ ಕಡಿಮೆ. ನಗರಗಳಲ್ಲಿ ಮಹಿಳೆಯರಿಗೆ ಶಿಕ್ಷಣ ದೊರೆತರೂ ಅದರ ಸದುಪಯೋಗವನ್ನು ಸಮಾಜ ಪಡೆಯುವುದುಬಹಳ ಕಷ್ಟ ಮತ್ತು ಕಡಿಮೆ.  ಏಕೆಂದರೆ ಕೆಲಸಕ್ಕೆ ಕಳುಹಿಸದ ಅತ್ತೆ-ಮಾವ-ಗಂಡ, ತಂದೆ-ತಾಯಿಯರು ಅಥವಾ ಮಹಿಳೆಯರೇಪ್ರತಿಭಾವಂತರಾಗಿದ್ದರೂ ಉದ್ಯೋಗಕ್ಕೆ ಹೋಗದೆ 'ಪ್ರತಿಭಾಮಹಿಳಾ ಸಂಪನ್ಮೂಲ'ವು ವ್ಯರ್ಥವಾಗುತ್ತಿದೆ.

ಪ್ರಸ್ತುತ ಮಹಿಳಾ ಶಿಕ್ಷಣ ಕುರಿತ ಈ ಲೇಖನದಲ್ಲಿ ಇಂದುಭಾರತದ ಎಲ್ಲ ಭಾಗದ ಮಹಿಳೆಯರು ಪಡೆಯುವ ಶಿಕ್ಷಣ ಎಂತಹದಿರಬೇಕು ಎಂಬುದನ್ನು ಅರಿಯುವ ಪ್ರಯತ್ನವಿದೆ.ಇಂದಿನ ಶಿಕ್ಷಣ ಪದ್ಧತಿಯು ಉದ್ಯೋಗ ಮೂಲದ ಗುರಿಯನ್ನು ಹೊಂದಿದೆ. ಓದಿದವರೆಲ್ಲರೂ ಕೆಲಸ ಮಾಡಲೇಬೇಕು ಎಂಬಂತಹಮನಃಸ್ಥಿತಿಯು ನಿರ್ಮಾಣವಾಗುತ್ತಿದೆ ಅದರ ಬದಲು ಪರ್ಯಾಯ ಶಿಕ್ಷಣ ವ್ಯವಸ್ಥೆಯು ಜಾರಿಗೆ ಬಂದರೆ ಮಹಿಳೆಯರು ಅರಿವಿನ ಶಿಕ್ಷಣಪಡೆಯುತ್ತಾರೆ.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ವಾವಲಂಬನೆಯಾಗುವಶಿಕ್ಷಣ ದೊರೆಯಬೇಕು. ಗ್ರಾಮ- ನಗರಗಳಲ್ಲಿ ವಾಸಿಸುತ್ತಿರುವಮಹಿಳೆಯರ ನಡುವೆ ಯಾವುದೇ ವರ್ಗಭೇದವಿಲ್ಲದಂತಹರೀತಿಯಲ್ಲಿ ಶಿಕ್ಷಣವು ಸೇತುವೆಯಾಗಬೇಕು. ಹಳ್ಳಿಯಲ್ಲಿ ಕಲಿತಮಹಿಳೆ  ನಗರ-ಹಳ್ಳಿ-ವಿದೇಶ  ಮೂರೂ  ಸ್ತರಗಳಲ್ಲಿಯೂ ವ್ಯವಹರಿಸುವ ನೈಪುಣ್ಯತೆ ಗಳಿಸುವ ಶಿಕ್ಷಣದ ಶೋಧವಾಗಬೇಕು.ಹಾಗೆಯೇ ನಗರ - ವಿದೇಶಗಳಲ್ಲಿ ಕಲಿತ ಮಹಿಳೆಯರು ಹಳ್ಳಿಯಲ್ಲಿತಮ್ಮ ಅನುಭವ ಮತ್ತು ಜ್ಞಾನವನ್ನು ಧಾರೆ ಎರೆದು ಗ್ರಾಮೀಣಮಹಿಳೆಯರನ್ನು ಸಶಕ್ತಗೊಳಿಸಬೇಕು. ಈ ಎಲ್ಲಾ ಪ್ರಯತ್ನಗಳುಕೇವಲ ಸರ್ಕಾರದ ಕಡೆಯಿಂದ ಮಾತ್ರವಲ್ಲದೆ ಮಹಿಳಾಸ್ವಯಂ ಸಂಘಗಳ ಸಕ್ರಿಯತೆಯಿಂದ ಸಮರೋಪಾದಿಯಲ್ಲಿಜರುಗಬೇಕಾದದ್ದು ಅತ್ಯಗತ್ಯವಾಗಿದೆ.

ಮಹಿಳೆ ಇಂದು ಅಕ್ಷರಸ್ಥೆಯಾಗುವ ದಿಕ್ಕಿನಲ್ಲಿ ಪಯಣಿಸಿದರೆಸಾಲದು  ಉಳಿದ  ವಿಷಯಗಳಲ್ಲೂ  ಸಬಲೆಯಾಗಬೇಕು.ಕೋಮಲಕಾಯ, ಸೌಂದರ್ಯ . . . ಮುಂತಾದ ರೂಪ ಕುರಿತ ದಿಕ್ಕಿನನಡಿಗೆಯಷ್ಟೇ ಮುಖ್ಯವಾದದ್ದಲ್ಲ, ಆಕೆ ತನ್ನ ಸ್ವರಕ್ಷಣೆಗೆ ಅಗತ್ಯವಾದಶಕ್ತಿಶಾಲಿ ಶರೀರ, ಒಂಟಿಮಹಿಳೆಯರನ್ನು ಬೆದರಿಸುವ, ಕೊಲ್ಲುವ,ಬಲಾತ್ಕರಿಸುವ ಪುರುಷ ಸಮುದಾಯದಿಂದ ರಕ್ಷಣೆಯನ್ನುಪಡೆಯಲು ದೈಹಿಕ ಶಿಕ್ಷಣದ ಅಗತ್ಯವಿದೆ. ದೈಹಿಕ ಶಿಕ್ಷಣ-ಕ್ಕೆ ಸಂಬಂಧಿಸಿದಂತೆ ಶಾಲಾ-ಕಾಲೇಜುಗಳಲ್ಲಿ 'ಮಹಿಳಾ ಸ್ವರಕ್ಷಣಾಘಟಕ'ಗಳು, ಗೈಡ್, ಎನ್.ಎಸ್.ಎಸ್., ಎನ್.ಸಿ.ಸಿ. ಘಟಕಗಳಂತೆಸರ್ಕಾರವು ಸ್ಥಾಪಿಸಬೇಕಾದ ಅನಿವಾರ್ಯತೆ ಇದೆ.

ಮಹಿಳೆಯರನ್ನು ಮಾನಸಿಕವಾಗಿ ಸದೃಢಗೊಳಿಸುವ 'ಕೌನ್ಸಿಲಿಂಗ್ಸೆಂಟರ್'ಗಳೂ ಶಾಲಾ-ಕಾಲೇಜುಗಳ ಮಟ್ಟದಲ್ಲಿ ಸಕ್ರಿಯಗೊಳ್ಳಬೇಕು.ಕುಟುಂಬದಲ್ಲಿ ಆಕೆ ಹೇಗೆ ಎಲ್ಲರೊಂದಿಗೂ ಬೆರೆತು ನಿರಾಳತೆಯನ್ನುಅನುಭವಿಸುತ್ತಾಳೋ ಹಾಗೇ ಸಮಾಜದಲ್ಲೂ 'ನಿರಾಳ'ತೆಯನ್ನುಅನುಭವಿಸುವಂತಹ ವಾತಾವರಣ ಸೃಷ್ಠಿಯಾಗಬೇಕು. ಜೊತೆ-ಜೊತೆಗೆ ಪುರುಷವರ್ಗವೂ ಸಹ ಮಹಿಳೆಯರನ್ನು ಗೌರವಿಸುವ,ತನ್ನಂತೆಯೇ ಆಕೆಯೂ ಸಹ ಶ್ರೇಷ್ಠ (ಸಮಾನ)ಳು ಎಂಬ ಭಾವನೆಬರುವ ರೀತಿಯ ಶಿಕ್ಷಣ ವ್ಯವಸ್ಥೆಯಲ್ಲೂ ಆಗಬೇಕು.

ಕೊನೆಗೆ, ಪತ್ರಕರ್ತೆ, ಕವಿಯತ್ರಿಯಾಗಿದ್ದ ಮಣಿಪುರಿಯಮಹಿಳೆ ಚಾನು ತನ್ನ ದಿಟ್ಟತನದಿಂದ ಸರ್ಕಾರದ ವಿರುದ್ಧನಡೆಸುತ್ತಿರುವ ಪ್ರತಿಭಟನೆ ಇಡೀ ದೇಶದ ಮಹಿಳೆಯರಿಗೆಮಾದರಿಯಾಗಬೇಕು. ಪಾಕಿಸ್ತಾನದ ಪ್ರತಿಭಾವಂತ 'ಮಲಾಲ'ಳಹೋರಾಟ ಸ್ಫೂರ್ತಿಯಾಗಬೇಕು.  ನಮ್ಮ ನೆಲದ ಮಗಳಾದ'ಸಾಲುಮರದ ತಿಮ್ಮಕ್ಕ'ಳಂತಹ ಗ್ರಾಮೀಣ ಮಹಿಳೆಯ ಸಾಧನೆಗಳುಇಂದಿನ ಯುವ ಮಹಿಳೆಯರಿಗೆ ಆದರ್ಶವಾಗಬೇಕು. ಈದಿಕ್ಕಿನಲ್ಲಿ ಸಮಾಜ, ಸರ್ಕಾರ, ಮಹಿಳಾ ಸ್ವಯಂಸಂಘಟನೆಗಳುಕಾರ್ಯಪ್ರವೃತ್ತವಾಗಬೇಕು.
 
Related Posts