ಮಹಿಳೆ ಮತ್ತು ವೈಚಾರಿಕತೆ
- ಎಸ್.ಆರ್.ಎಸ್. ನಾಧನ್

ವಿಶ್ವದ ಇತಿಹಾಸದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನವಿದೆ. ಭಾರತದಸಾಂಸ್ಕೃತಿಕ ಇತಿಹಾಸ ಅತ್ಯಂತ ಪ್ರಾಚೀನವಾದದ್ದು ಮತ್ತು ಆ ಸಾಂಸ್ಕೃತಿಕ ಉತ್ತುಂಗ ಅವಸ್ಥೆಯಲ್ಲಿ ಭಾರತೀಯ ಸಮಾಜ ಜೀವನದ ವಿವಿಧಕ್ಷೇತ್ರಗಳಲ್ಲಿ ತೋರಿದ ಸಾಧನೆಗಳಿಂದ ಅದು ವಿಶ್ವಕ್ಕೆ ಜ್ಯೋತಿಯಾಗಿಬೆಳಗಿತು. ಈಮಹತ್ಕಾರ್ಯದಲ್ಲಿ ಪುರುಷರು ಮಾತ್ರವಲ್ಲ ಸ್ತ್ರೀಯರುಸಹ ಸಹಭಾಗಿಗಳಾಗಿ ಸಾಧಕಿಯರಾಗಿ ಸಿದ್ಧೆಯರಾಗಿ ಕೆಲವೊಮ್ಮೆಪುರುಷರನ್ನು ಮೀರಿಸಿ ಅಮರರಾದರು. ವೇದಗಳ ಕಾಲದಿಂದಲೂನಮ್ಮ ದೇಶದಲ್ಲಿ ಸ್ತ್ರೀ ಶಿಕ್ಷಣದ ಪರಂಪರೆಯು ಸಾಗಿ ಬಂದಿದೆ.ಭಾರತದಲ್ಲಿ ಮೊದಲಿನಿಂದಲೂ ಸ್ತ್ರೀಯು ಪುರುಷನಿಗೆ ಸರಿಸಮಾನಳುಎಂಬ ಮಾನ್ಯತೆಗೆ ಪಾತ್ರಳಾಗಿದ್ದಾಳೆ. ಪುರಾಣ ಇತಿಹಾಸಗಳಿಂದತೊಡಗಿ ಆಧುನಿಕ ಕಾಲದವರೆಗೆ ಜಗತ್ತಿನ ಆಗುಹೋಗುಗಳಲ್ಲಿಮಹಿಳೆಯರ ಪಾತ್ರ ಅನನ್ಯವಾದದ್ದು.

ಮಹಿಳೆಯ ದೂರದೃಷ್ಠಿ, ಕ್ಷಮೆ, ತ್ಯಾಗ, ವಾತ್ಸಲ್ಯ, ಮಮತೆ, ಜ್ಞಾನ, ತಪಸ್ಸು, ಸಾಧನೆ, ಧರ್ಮ ಪರಿಪಾಲನೆ, ಕರುಣೆ, ಪರಿಶುದ್ಧತೆ ಮುಂತಾದ ಗುಣಗಳ ಮೂಲಕ ಅವಳು ಪುರುಷರಿಗೆ ಸರಿ-ಮಿಗಿಲೆನಿಸಿದ್ದಾಳೆ. ಮಹಿಳೆಯು ತಾಯಿಯಾಗಿ, ಅರ್ಧಾಂಗಿನಿಯಾಗಿ, ಸಹೋದರಿಯಾಗಿ, ರಾಣಿಯಾಗಿ, ದಾಸಿಯಾಗಿ, ಸನ್ಯಾಸಿನಿಯಾಗಿ, ವೀರವನಿತೆಯಾಗಿಪಾರಂಪರಿಕವಾಗಿ ಪ್ರಸಿದ್ಧಳಾಗಿದ್ದು, ಆಧುನಿಕ ಕಾಲದ ಮುಂದುವರೆದಮಹಿಳೆಯಾಗಿ ಆರ್ಥಿಕ ಸಬಲತೆಯಿಂದ ಆರೋಗ್ಯ, ಬಾಹ್ಯಾಕಾಶ,ಕಾನೂನು, ವಿಜ್ಞಾನ, ಶಿಕ್ಷಣ ಮತ್ತು ಇತರೆ ಕ್ಷೇತ್ರಗಳಲ್ಲಿ ಪುರುಷರಿಗಿಂತಅದ್ವಿತೀಯಳೆನಿಸಿದ್ದಾಳೆ. ಸ್ತ್ರೀಯು ತೋರಿದ ಹಾದಿ, ನೀಡಿದಸ್ಫೂರ್ತಿ ನಮಗೆಲ್ಲರಿಗೂ ಅನುಕರಣೀಯ ಮತ್ತು ಸ್ಮರಣೀಯವಾಗಿದೆ.ಮಹಿಳೆಯು ಇಷ್ಟೆಲ್ಲಾ ಸಾಧನಾ ಕ್ರಮಗಳನ್ನು ರೂಢಿಸಿಕೊಂಡಿದ್ದರೂಸಹ ಪುರುಷ ಪ್ರಧಾನ ಸಮಾಜದಲ್ಲಿ ತಮಗೆ ಸರಿಯಾದ ಸ್ಥಾನ-ಮಾನ ನೀಡಿಲ್ಲ ಎಂಬ ಕೂಗು ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸ್ವಾತಂತ್ರ್ಯದ ನಂತರ ಲಿಂಗ ಸಮಾನತೆ ಬಗ್ಗೆ ಭಾರತೀಯ ಸಂವಿಧಾನದಲ್ಲಿ ವಿಶೇಷವಾಗಿ ಮೂಲಭೂತ ಹಕ್ಕಾಗಿ ಮಹಿಳೆಯರಿಗೆವಿಶೇಷ ಸ್ಥಾನ-ಮಾನ ಕಲ್ಪಿಸಿದೆ. ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ ಒಂದನ್ನೇ ಕಲ್ಪಿಸದೇ, ಮಹಿಳೆಯರ ಸಬಲೀಕರಣಕ್ಕೆ ಒತ್ತುನೀಡಲಾಗಿದೆ. ಈ ವಿಶೇಷವಾದ ಮೂಲಭೂತ ಹಕ್ಕು ಮಹಿಳೆಯರಿಗೆ5ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ 1974-78 ರಲ್ಲಿ ವಿವಿಧಕಾರ್ಯಕ್ರಮಗಳಾಗಿ ರೂಪುಗೊಂಡವು. ಮಹಿಳೆಯರ ಸಮಸ್ಯೆಗಳನ್ನುಮಹಿಳಾ ಕಲ್ಯಾಣ ಕಾರ್ಯಕ್ರಮದಿಂದ ಆರ್ಥಿಕ, ಸಾಮಾಜಿಕವಾಗಿ ಬಲಗೊಳಿಸುವಂತಹ ಕಾರ್ಯಕ್ರಮಗಳು ಜಾರಿಗೆ ಬಂದವು, 1990ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಜಾರಿಗೆ ಬಂದಿದ್ದು,ಈ ಆಯೋಗದ ಕಾರ್ಯಕ್ಷೇತ್ರವು ಮುಖ್ಯವಾಗಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಕಾನೂನು ರೀತಿಯ ಹೋರಾಟಕ್ಕೆರೂಪುರೇಷೆಗಳನ್ನು ನಿರ್ಧರಿಸುವುದೇ ಆಗಿದೆ. 1993 ರ ಸಂವಿಧಾನದ73 ಮತ್ತು 74 ರ ತಿದ್ದುಪಡಿಯಲ್ಲಿ ಮಹಿಳೆಯರಿಗಾಗಿ ವಿವಿಧ ಹುದ್ದೆಗಳನೇಮಕಾತಿಯಲ್ಲಿ ಮೀಸಲಾತಿಯನ್ನು ನೀಡಲಾಯಿತು, ಜನಪ್ರತಿನಿಧಿಗಳಆಯ್ಕೆಯಡಿಯಲ್ಲಿ ಪಂಚಾಯತಿ ಮತ್ತು ಮುನಿಸಿಪಲ್ ಮಂಡಳಿಯಲ್ಲಿಮೀಸಲಾತಿ ಕಲ್ಪಿಸಲಾಗಿದೆ. ಇದರ ಮೂಲಕ ಮಹಿಳೆಯರು ಸಕ್ರಮವಾಗಿಭಾಗವಹಿಸುವಿಕೆ, ತೊಡಗಿಸಿಕೊಳ್ಳುವಿಕೆ ಹಾಗೂ ಸ್ಥಳೀಯವಾಗಿಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಭದ್ರ ಬುನಾದಿಯನ್ನುಸಂವಿಧಾನವು ಮಹಿಳೆಯರಿಗೆ ಹಾಕಿಕೊಟ್ಟಿದೆ.

ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯ ಈ ಕಾಲದಲ್ಲಿ ಭಾರತೀಯನಾರಿಯರ ಗುಣಗಳು ಇತ್ತೀಚಿಗೆ ಕಣ್ಮರೆಯಾಗುತ್ತಿರುವುದು ಆತಂಕದಸಂಗತಿ. ಈ ನಿಟ್ಟಿನಲ್ಲಿ ಇಂದಿನ ಮಹಿಳೆಯರು ಸಾಧನೆ ತೋರಿಸುವಂತಹಕಲ್ಯಾಣ ಗುಣಗಳನ್ನು ಮುಂದುವರೆಸುವುದು ಪ್ರಸ್ತುತ ಅವಶ್ಯವಾಗಿದೆ.ಶ್ರೀ ರಾಮಕೃಷ್ಣ ಪರಮಹಂಸರು ಮಹಾನ್ ಸಂತರಾಗಿದ್ದರು, ಅವರಪತ್ನಿಯವರಾದ ಶ್ರೀಮತಿ ಶಾರದಾ ದೇವಿಯವರು ಮಹಾನ್ಸಾಧ್ವೀಮಣಿಯಾಗಿದ್ದರು. ಇವರ ವಿಚಾರಧಾರೆಯು ನಮ್ಮೆಲ್ಲರ ಕಣ್ಣಮನಸ್ಸನ್ನು ತೆರೆಸಿ ವೈಚಾರಿಕತೆಯ ದೃಷ್ಟಿಕೋನ ಬೀರಬಹುದೆ?ಶಾರದಾ ಮಾತೆಯವರು ದುರ್ಗಾಮಾತೆಯ ಆರಾಧಕರಾಗಿದ್ದು ಹೆಚ್ಚುಸಮಯವನ್ನು ದುರ್ಗಾಮಾತೆಯ ದೇವಾಲಯದ ಶುಚಿತ್ವ, ಮಾತೆಯಶೃಂಗಾರ, ಭಕ್ತಿ, ಧ್ಯಾನ, ಭಜನೆಗೆ ಮೀಸಲಿಟ್ಟಿದ್ದರು.ಇದರೊಂದಿಗೆ ಇತರೆ ಮಹಿಳೆಯರು ಸಹಕರಿಸುತ್ತಿದ್ದರು. ಈ ಮಹಿಳೆಯರಲ್ಲಿ ಒಬ್ಬ ಮಹಿಳೆಯು ಕುಲ ಮತ್ತು ಚಾರಿತ್ರ್ಯದ ದೃಷ್ಟಿಯಿಂದ ಕೀಳು ಮಟ್ಟದವಳೆಂದು ಪರಿಗಣಿಸಲ್ಪಡುತ್ತಿದ್ದ ಕುಂತಿ ಎಂಬಮಹಿಳೆಯೊಬ್ಬಳಿದ್ದಳು. ಶಾರದಾಮಾತೆಗೆ ಈ ವಿಚಾರ ಗೊತ್ತಿದ್ದರೂ ಆಕೆ ಏನೂ ಹೇಳಿರಲಿಲ್ಲ. ಆದರೆ, ಇತರೆ ಮಹಿಳೆಯರಿಗೆ ಇದು ಸರಿ ಕಾಣುತ್ತಿರಲಿಲ್ಲ.

ಒಂದು ಬಾರಿ ಎಲ್ಲಾ ಮಹಿಳೆಯರೂ ಶಾರದಾಮಾತೆಯ ಬಳಿಗೆಬಂದು ಕುಂತಿ ನೀಚ ಕುಲದವಳು ಮತ್ತು ಚಾರಿತ್ರ್ಯಹೀನಳು ಅವಳುದುರ್ಗಾಮಾತೆಯ ಮೂರ್ತಿಯನ್ನು ಮುಟ್ಟಲು ನೀವೇಕೆ ಬಿಡುತ್ತೀರಿ?ಅವಳಿಂದ ದೇವಾಲಯದ ಭಕ್ತಿ, ಶ್ರದ್ಧೆಯ ಪರಿಸರ ಹಾಳಾಗುವುದು.ಆದ್ದರಿಂದ ಅವಳನ್ನು ದೇವಾಲಯದ ಹೊರಗಡೆ ಇರಿಸಿದರೆ ಒಳ್ಳೆಯದುಎಂದರು. ಅದಕ್ಕೆ ಶಾರದಾಮಾತೆಯು ನೀಡಿದ ವೈಚಾರಿಕ ಉತ್ತರಸದಾ ನೆನಪಿನಲ್ಲಿಡುವಂಥದು. ಶಾರದಾಮಾತೆಯ ಉತ್ತರ ಹೀಗಿತ್ತು ನಾನು ನಿಮ್ಮ ಮಾತನ್ನು ಕೇಳಿದರೆ ದುರ್ಗಾಮಾತೆಯ ಮೂರ್ತಿಯನ್ನುಗಂಗಾಜಲದಿಂದ ಸ್ನಾನಮಾಡಿಸುವ ಅವಶ್ಯಕತೆ ಇರಲಾರದು ಏಕೆಂದರೆಗಂಗಾಜಲವು ತನ್ನಲ್ಲಿ ಅಶುದ್ಧತೆ ಮತ್ತು ಅಪವಿತ್ರ್ಯತೆಗಳನ್ನು ಸೇರಿ-ಕೊಂಡೇ ಇದೆ. ಎಂದರು

ಅದಕ್ಕೆ ಮಹಿಳೆಯರು ಆಶ್ಚರ್ಯಚಕಿತರಾಗಿ ಇದೇನು ಹೇಳುತ್ತಿದ್ದೀರಿ?ಮಾತಾಜಿ, ಗಂಗೆಯ ನೀರು ಪರಮ ಪವಿತ್ರ ಹಾಗೂ ಶುದ್ಧವಾದದ್ದು,ಪಾಪಿಗಳು ಅದರಲ್ಲಿ ತಮ್ಮ ಪಾಪವನ್ನು ತೊಳೆದುಕೊಳ್ಳುತ್ತಿದ್ದಾರೆ.ಅದರಲ್ಲಿ ಅಶುದ್ಧತೆ ಮತ್ತು ಅಪವಿತ್ರತೆ ಎಂಬುದಿಲ್ಲ. ಇಡೀ ಪ್ರಪಂಚಗಂಗಾಜಲವನ್ನು ಪವಿತ್ರ ಎನ್ನುತ್ತಿದೆಯಲ್ಲ. ಎಂದರು. ಶಾರದಾಮಾತೆಯಉತ್ತರವು ಜಲ ಪವಿತ್ರವಲ್ಲ, ಗಂಗೆಯ ಕುರಿತು ನಿಮ್ಮಲ್ಲಿರುವ ಶ್ರದ್ದೆಪವಿತ್ರವಾದದ್ದು. ಆದುದರಿಂದ ನಿಮಗೆ ನೀರು ಪವಿತ್ರವೆಂದು ತೋರುತ್ತದೆ.ಗಂಗಾ ನೀರಿನ ಆತ್ಮ ಪವಿತ್ರವಾದದ್ದು, ಶರೀರ ಪವಿತ್ರವಾಗಿರಲು ಹೇಗೆ ಸಾಧ್ಯ? ಹಿಮಾಲಯದ ಗರ್ಭದಿಂದ ಉದ್ಭವಿಸುವ ನದಿ ಸಾವಿರಾರುಮೈಲುಗಳ ಯಾತ್ರೆ ಮಾಡುತ್ತಾ, ಎಷ್ಟೋ ಜನರ ಕೊಳೆ ಮತ್ತು ಮಾರ್ಗಮಧ್ಯದಲ್ಲಿನ ಮಾಲಿನ್ಯ ಹೊತ್ತುಕೊಂಡು ಹರಿಯುತ್ತಾಳೆ. ಗಂಗಾಜಲ ಎಲ್ಲರ ಪಾಪ ಕೊಳೆಗಳನ್ನು ತೊಳೆದರೂ ಪಾಪಿಗಳ ಪಾಪ ಗಂಗೆಗೆ ತಟ್ಟುವುದಿಲ್ಲ. ಆದರೆ ಅದು ಖಂಡಿತ ಗಂಗೆಯಲ್ಲಿ ನಾಶವಾಗುತ್ತದೆ. ಇಷ್ಟಾದರೂ ಭಕ್ತಿ, ಶ್ರದ್ಧೆಯುಳ್ಳವರು ಆ ಮಲಿನಗೊಂಡ ನೀರಿನಲ್ಲಿ ಸ್ನಾನಮಾಡಿ ತಾವು ಧನ್ಯರೆಂದು ಭಾವಿಸುತ್ತಾರೆ.

ಶಾರದಮಾತೆಯ ಮಾತುಗಳನ್ನು ಕೇಳಿ ಮಹಿಳೆಯರು ಬೆರಗಾಗಿಮಾತೆಯನ್ನು ಮತ್ತೆ ಕೇಳಿದರು ಶಾರದಮಾತೆ ಗಂಗೆಯ ಅಪವಿತ್ರನೀರು ದುರ್ಗಾಮಾತೆಗೆ ತಗಲುವುದಿಲ್ಲವೇ ? ಗಂಗಾಮಾತೆಯಆಶುದ್ಧತೆ ದುರ್ಗಾಮಾತೆಗೆ ತಗಲಲಾರದೆಂದ ಮೇಲೆ ಕುಂತಿ ಮಹಿಳೆಯೆಆಶುದ್ಧತೆ ದುರ್ಗಾಮಾತೆಗೆ ಹೇಗೆ ತಗುಲೀತು? ದುರ್ಗೆಯಪ್ರತಿಮೆಯನ್ನು ಮುಟ್ಟಿ ಕುಂತಿಯು ಪವಿತ್ರಳಾಗುತ್ತಾಳೆಂದು ನೀವೇಕೆಯೋಚಿಸುತ್ತಿಲ್ಲ? ಕುಂತಿಯ ಅಪವಿತ್ರತೆಗಿಂತ ದುರ್ಗೆಯ ಪವಿತ್ರತೆಯಪಾಲು ದೊಡ್ಡದು. ದುರ್ಗಾಮಾತೆಯ ಮುಂದೆ ಬಂದ ಮೇಲೂನಿಮ್ಮಗಳ ಮನಸ್ಸಿನಲ್ಲಿ ತಿರಸ್ಕಾರದ ಭಾವನೆ ಉಳಿದುಕೊಂಡರೆ ಇಲ್ಲಿಗೆಬಂದ ಪ್ರಯೋಜನವೇನು? ಮನಸ್ಸಿನ ಮಾಲಿನ್ಯವನ್ನು ಕಳೆಯಲುಜನರು ದೇವಾಲಯಕ್ಕೆ ಬರುತ್ತಾರೆ. ದೇವಾಲಯಕ್ಕೆ ಬಂದು ನಿಮ್ಮಮನೋಮಾಲಿನ್ಯ ಹೆಚ್ಚುವುದಾದರೆ ನೀವೆಲ್ಲರೂ ನಿಮ್ಮ ಮನೆಯಲ್ಲಿಯೇಇದ್ದು ನಿಮ್ಮ ಮನಸ್ಸನ್ನು ಶುದ್ಧಗೊಳಿಸಿ ಎಂಬುದು ನನ್ನ ಸಲಹೆ?ಶಾರದಾಮಾತೆಯ ಈ ಮಾತಿನಿಂದ ಉಳಿದೆಲ್ಲ ಮಹಿಳೆಯರುಕಣ್ಣು ಮತ್ತು ಮನಸ್ಸು ಬಿಚ್ಚುಕೊಂಡು ಹೃದಯ ವೈಶಾಲ್ಯತೆಯಿಂದಎಲ್ಲಾ ವಿಚಾರಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವಬೆಳೆಸಿಕೊಂಡರು

ಇಂದಿನ ಮಹಿಳೆಯರು ಮತ್ತೊಬ್ಬರ ಮನಸ್ಸನ್ನುವಿಕಾಸಗೊಳಿಸುವಂತಹ ವೈಚಾರಿಕತೆಯನ್ನು ಎತ್ತಿ ಹಿಡಿದುಸಮಾಜಮುಖಿಯಗಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ನಡೆಯಲಿಎಂದು ಮಹಿಳಾ ವಿಶೇಷ ಸಂಚಿಕೆಯ ಮೂಲಕ ಎಲ್ಲಾ ಶಿಕ್ಷಕರಿಗೂ
ಶಿಕ್ಷಕರ ದಿನಾಚರಣೆಯ ಶುಭ ಹಾರೈಕೆಗಳು.

ಧೂಮಕೇತುಗಳನ್ನು ಕಂಡುಹಿಡಿದ ಪ್ರಥಮ ಮಹಿಳಾ ವಿಜ್ಞಾನಿ ಕ್ಯಾರೊಲಿನ್ ಹರ್ಷಲ್(1750-1848)
- ನೇಮಿಚಂದ್ರ ಅವರ 'ಮಹಿಳಾ ವಿಜ್ಞಾನಿಗಳು' ಪುಸ್ತಕದಿಂದ

1750 ರಲ್ಲಿ ಜರ್ಮನಿಯ ಹ್ಯಾನೋವರ್ ನಲ್ಲಿ ಹುಟ್ಟಿದ ಕ್ಯಾರೊಲಿನ್ ಹರ್ಷಲ್ ಅನೇಕ ನಕ್ಷತ್ರ ನೀಹಾರಿಕೆಗಳನ್ನು, ಎಂಟು ಧೂಮಕೇತುಗಳನ್ನು ಕಂಡುಹಿಡಿದಾಕೆ. ಅಣ್ಣ ವಿಲಿಯಂ ಹರ್ಷಲ್ ತಯಾರಿಸಿಕೊಟ್ಟ ಸಣ್ಣ ದೂರದರ್ಶಕದ ಮೂಲಕ ಆಕಾಶಕಾಯಗಳನ್ನುಅಧ್ಯಯನಮಾಡಿ,ಅಲ್ಲಿಯವರೆಗೂ ದಾಖಲಾಗದ 561 ನಕ್ಷತ್ರಗಳನ್ನುಪಟ್ಟಿಮಾಡಿ 1797ರಲ್ಲಿ ರಾಯಲ್ ಸೊಸೈಟಿಗೆ ಒಪ್ಪಿಸಿದಾಕೆ. 1786 ರಲ್ಲಿ ಧೂಮಕೇತುವೊಂದನ್ನು ಗುರುತಿಸಿದ ಹರ್ಷಲ್ ಧೂಮಕೇತುವೊಂದನ್ನು ಕಂಡುಹಿಡಿದ ಮೊತ್ತಮೊದಲ ಮಹಿಳೆ. 'ತಾನು ಶ್ರೀಮಂತಳಲ್ಲ,ನೋಡಲು ಸುಂದರವಾಗಿಯೂ ಇಲ್ಲ. ಸಿಡುಬಿನ ಕಲೆ ಕುಳ್ಳನೆಯದೇಹ ಹಾಗಾಗಿ ಯಾವ ಗಂಡೂ ತನ್ನನ್ನು ಮದುವೆಯಾಗಲು ಮುಂದೆಬರುವುದಿಲ್ಲ' ಎಂಬ ತಂದೆಯ ಮಾತುಗಳು ಅವಳನ್ನು ಅವಿವಾಹಿತಬದುಕಿಗೆ ಸಿದ್ಧಪಡಿಸಿತ್ತು. ಯುರೇನಸ್ ಗ್ರಹವನ್ನು ಕಂಡುಹಿಡಿದಅಣ್ಣ ವಿಲಿಯಂ ಹರ್ಷಲ್ನ ಸಹಕಾರದಿಂದ ಸಾಂಪ್ರದಾಯಿಕ ಓದನ್ನುಕಲಿಯದ ಕ್ಯಾರೊಲಿನ್ ಹರ್ಷಲ್ ಇಷ್ಟೆಲ್ಲಾ ಸಾಧಿಸಿದಳು. ವಿಲಿಯಂತಾಯಿಯ ಆಕ್ಷೇಪವನ್ನು ತಳ್ಳಿಹಾಕಿ, ಕ್ಯಾರೋಲಿನಳ ಜಾಗದಲ್ಲಿ ಓರ್ವಮನೆಗೆಲಸದವಳನ್ನು ನೇಮಿಸಿಕೊಳ್ಳಲು ಹೇಳಿ ಅವಳನ್ನು ತನ್ನೊಡನೆಇಂಗ್ಲೆಂಡಿಗೆ ಕರೆತಂದ. ತನ್ನ ಮೂವತ್ತೆರಡನೆಯವಯಸ್ಸಿನಲ್ಲಿ ಕ್ಯಾರೋಲಿನ್ ಸಹಾಯಕಖಗೋಳ ಶಾಸ್ತ್ರಜ್ಞಳಾಗಿ ಕೆಲಸವನ್ನುಆರಂಭಿಸಿದ್ದಳು. ಅಣ್ಣತಂಗಿಯರಿಬ್ಬರು ಮೋಡಮುಚ್ಚಿದ ರಾತ್ರಿಗಳು ಮಾತ್ರ ಮಲಗುತ್ತಿದಂತಿತ್ತು.ಹಗಲೆಲ್ಲಾ ನೀಹಾರಿಕೆಗಳನ್ನು ಗುಣಿಸುತ್ತಾ

ರಾತ್ರಿ ಅವುಗಳನ್ನು ವೀಕ್ಷಿಸುವುದರಲ್ಲಿ ಕಳೆದಳು. 1786ರ ಆಗಸ್ಟ್ಒಂದರಂದು ಕ್ಯಾರೊಲಿನ್ ಆಕಾಶವನ್ನು ವೀಕ್ಷಿಸುತ್ತಿದ್ದಾಗ ಒಂದುಧೂಮಕೇತುವಿನಂಥ ಆಕಾಶಕಾಯ ಕಣ್ಣಿಗೆ ಬಿತ್ತು. ಮರಿದಿನ ಮಳೆಸುರಿದು ರಾತ್ರಿ ಆಕಾಶ ತಿಳಿಯಾಗಿ ರಾತ್ರಿ ಒಂದು ಘಂಟೆಗೆ ಮತ್ತೆಕ್ಯಾರೋಲಿನ್ ಗೆ ಹಿಂದಿನ ರಾತ್ರಿ ಕಂಡ ಧೂಮಕೇತು ಕಾಣಸಿಕ್ಕಿತು.ವಿಜ್ಞಾನಿಗಳು ಇದನ್ನು ಮೊದಲ ಮಹಿಳಾ ಧೂಮಕೇತು ಎಂದುಕರೆದರು. 1786 ಮತ್ತು 1797 ರನಡುವೆ ಕ್ಯಾರೊಲಿನ್ ಒಟ್ಟು ಎಂಟುಧೂಮಕೇತುಗಳನ್ನು ಕಂಡುಹಿಡಿದು ತನ್ನ ಸ್ವಂತ ಸಾಮಥ್ರ್ಯದಿಂದಖಗೋಳಸಾಸ್ತ್ರಜ್ಞಳೆಂದು ಗುರುತಿಸಲ್ಪಟ್ಟಳು. ಆಕೆಯ ಕೆಲಸವನ್ನು ಗುರುತಿಸಿರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ 1828ರಲ್ಲಿ ಚಿನ್ನದ ಪದಕವನ್ನುನೀಡಿತು ಹಾಗೂ 1835 ರಲ್ಲಿ ಗೌರವ ಸದಸ್ಯಳನ್ನಾಗಿ ನಿವರ್ಿವಾದವಾಗಿಚುನಾಯಿಸಿತು.1838 ರಲ್ಲಿ ಐರಿಶ್ ಅಕಾಡೆಮಿ ಕೂಡ ಕ್ಯಾರೊಲಿನ್ ಳನ್ನುಗೌರವ ಸದಸ್ಯಳನ್ನಾಗಿ ಚುನಾಯಿಸಿತು.

Related Posts