ಕ್ರೀಡಾಪಟುಗಳಿಗೆ ವಿಶೇಷ ವೇತನ ಬಡ್ತಿಗಳು
- ಕೆ.ಎಸ್.ರವಿಶಂಕರ

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಕ್ರೀಡೆಗಳು ಹಾಗೂ ಟೂರ್ನಮೆಂಟ್ಗಳಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ವೇತನ ಬಡ್ತಿ ಹಾಗೂ ವಿಶೇಷ ಸಾಂದರ್ಭಿಕ ರಜೆ ಮಂಜೂರಾತಿಗೆ ಇರುವ ಅವಕಾಶಗಳು.

ರಾಷ್ಟ್ರೀಯ ಮಹತ್ವದ ಕ್ರೀಡಾಕೂಟಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸರ್ಕಾರಿ ನೌಕರನಿಗೆ ಒಂದು ವಿಶೇಷ ವೇತನ ಬಡ್ತಿ ಅಂತರರಾಷ್ಟ್ರೀಯ ಮಹತ್ವದ ಕ್ರೀಡಾಕೂಟಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸರ್ಕಾರಿ ನೌಕರನಿಗೆ ಎರಡು ವಿಶೇಷ ವೇತನ ಬಡ್ತಿಯನ್ನು ನೀಡಬಹುದಾಗಿದೆ. ಆದರೆ ರನ್ನರ್ ಅಪ್ ಆದ ಕ್ರೀಡಾಪಟುಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಹೀಗೆ ಮಂಜೂರು ಮಾಡಲಾದ ವಿಶೇಷ ವೇತನ ಬಡ್ತಿಗಳು ಒಬ್ಬ ವ್ಯಕ್ತಿಗೆ ಅವನ/ಅವಳ ಪೂರ್ಣ ಸೇವಾವಧಿಯಲ್ಲಿ ಮೂರನ್ನು ಮೀರಬಾರದು. ಈ ವಿಶೇಷ ವೇತನ ಬಡ್ತಿಯನ್ನು ಮಂಜೂರು ಮಾಡುವಾಗ ಸಣ್ಣಕುಟುಂಬದ ಧ್ಯೇಯಗಳನ್ನು ಅನುಸರಿಸುವವರಿಗೆ ನೀಡಲಾಗುವ ಪ್ರೋತ್ಸಾಹಕ ವೇತನ ಬಡ್ತಿಯಂತೆಯೇ ವೈಯಕ್ತಿಕ ವೇತನವೆಂದು ಪರಿಗಣಿಸತಕ್ಕದ್ದು. ಈ ವಿಶೇಷ ವೇತನ ಬಡ್ತಿ ದರವು, ಈ ಸೌಲಭ್ಯವನ್ನು ಮಂಜೂರು ಮಾಡುವ ಸಮಯದಲ್ಲಿನ ಮುಂದಿನ ವಾರ್ಷಿಕ ವೇತನ ಬಡ್ತಿಯ ದರಕ್ಕೆ ಸಮನಾಗಿರಬೇಕು ಮತ್ತು ಪೂರ್ಣ ಸೇವಾ ಅವಧಿಯಲ್ಲಿ ಅದೇ ದರದಲ್ಲಿರಬೇಕು. ಈ ವೈಯಕ್ತಿಕ ವೇತನವು ಪದೋನ್ನತಿ ಹೊಂದಿದ ಸಂದರ್ಭದಲ್ಲಿಯಾಗಲೀ ಅಥವಾ ವೇತನ ಹೆಚ್ಚಳದ ಸಂದರ್ಭದಲ್ಲಾಗಲೀ ವಿಲೀನಗೊಳ್ಳತಕ್ಕದ್ದಲ್ಲ. ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ಹಂತ ತಲುಪಿದ ಸರ್ಕಾರಿ ನೌಕರನ ಪ್ರಕರಣದಲ್ಲಿ ವೈಯಕ್ತಿಕ ವೇತನ ದರವು ಹಿಂದಿನ ವೇತನ ಬಡ್ತಿಯ ದರಕ್ಕೆ ಸಮನಾಗಿರತಕ್ಕದ್ದು. ಈ ರೀತಿ ವಿಶೇಷ ವೇತನ ಮಂಜೂರು ಮಾಡುವಾಗ ಯಾವ ತಿಂಗಳಿನಲ್ಲಿ ಕ್ರೀಡಾಕೂಟವು ಮುಕ್ತಾಯವಾಗುತ್ತದೋ ಅದರ ನಂತರದ ತಿಂಗಳ ಮೊದಲನೆ ದಿನಾಂಕದಿಂದ ನೀಡಬೇಕಾಗಿರುತ್ತದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ವದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳೆರಡರಲ್ಲಿಯೂ ಮಂಜೂರು ಮಾಡಬಹುದಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಮ್ಯಾನೇಜರ್ಗಳು, ಕೋಚ್ಗಳು, ಮ್ಯೂಸಿಯರ್ಗಳು ಮತ್ತು ವೈದ್ಯರುಗಳಾಗಿ ಭಾಗವಹಿಸುವ ಸರ್ಕಾರಿ ನೌಕರರು ವಿಶೇಷ ಸಾಂದರ್ಭಿಕ ರಜೆ ಹೊರತುಪಡಿಸಿ ವಿಶೇಷ ವೇತನ ಬಡ್ತಿಗೆ ಅರ್ಹರಿರುವುದಿಲ್ಲ. ಈ ವಿಶೇಷ ವೇತನ ಬಡ್ತಿಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ನಾಟಕ, ಸಂಗೀತ, ನೃತ್ಯ, ಕಲೆ, ವಾದ್ಯಗೋಷ್ಟಿ ಇತ್ಯಾದಿ ಸ್ವರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ನೌಕರರಿಗೆ ಅನ್ವಯಿಸುವುದಿಲ್ಲ.

ಟೆನ್ನಿಸ್ ನಂತಹ ಕ್ರೀಡಾತಂಡಗಳಲ್ಲಿ ಅಂತಿಮ ಸ್ಪರ್ಧೆಯಲ್ಲಿ ಆಟಗಾರರಾಗಿ ಭಾಗವಹಿಸುವ ಮತ್ತು ಪ್ರಥಮ ಸ್ಥಾನವನ್ನು ಗಳಿಸದ ನಾನ್-ಪ್ಲೇಯಿಂಗ್ ಕ್ಯಾಪ್ಟನ್ ಹಾಗೂ ಇತರ ಕ್ರೀಡಾಪಟುಗಳು ವಿಶೇಷ ವೇತನ ಭತ್ಯೆಯನ್ನು ಪಡೆಯಲು ಅರ್ಹರಾಗುವುದಿಲ್ಲ. ಸರ್ಕಾರವು ಪ್ರಕಟಿಸಿದ ಮಾನ್ಯತೆ ಪಡೆದ ರಾಷ್ಟ್ರೀಯ ಫೆಡರೇಷನ್ಗಳಿಂದ (ಮುಂದುವರೆಯುತ್ತದೆ.)

ಸೂಚಿಸಲ್ಪಟ್ಟ ಹಾಗೂ ಸರ್ಕಾರದಿಂದ ಪೂರ್ವಾನುಮತಿ ಪಡೆದು ಭಾಗವಹಿಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಂದ ನಡೆಸಲ್ಪಡುವ ಕ್ರೀಡಾ ಕೂಟಗಳಿಗೆ ಸಹ ಈ ಆದೇಶದ ಸೌಲಭ್ಯಗಳು ಅನ್ವಯಿಸುತ್ತವೆ. ಕ್ರೀಡಾಪಟುಗಳಿಗೆ ವಿಶೇಷ ವೇತನ ಬಡ್ತಿಯ ರೂಪದಲ್ಲಿ ಮಂಜೂರು ಮಾಡುವ ವೈಯಕ್ತಿಕ ವೇತನಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನಿದರ್ೇಶಕರ ಶಿಫಾರಸ್ಸಿನೊಂದಿಗೆ, ಸರ್ಕಾರಕ್ಕೆ ಸಲ್ಲಿಸಿ, ಸರ್ಕಾರದ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಮಾತ್ರ ಈ ವೈಯಕ್ತಿಕ ವೇತನವನ್ನು ಮಂಜೂರು ಮಾಡಬಹುದಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ 1 ಎಸ್.ಆರ್.ಎಸ್.2003 ದಿನಾಂಕ:29.03.2003 ರಲ್ಲಿ ದಿನಾಂಕ: 02.07.1986ರ ಮತ್ತು ಆನಂತರದ ದಿನಾಂಕಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆಗೈದು ವಿಶೇಷ ವೇತನ ಬಡ್ತಿಗಳನ್ನು ಪಡೆದ ರಾಜ್ಯ ಸರ್ಕಾರಿ ನೌಕರರು ಈ ವಿಶೇಷ ವೇತನವನ್ನು ಯಾವ ವೇತನ ಶ್ರೇಣಿಯಲ್ಲಿ ಮಂಜೂರು ಮಾಡಲಾಗಿದೆಯೋ ಆ ವೇತನ ಶ್ರೇಣಿಗೆ ಸಂವಾದಿಯಾಗಿ, 1998 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಕನಿಷ್ಠ ವಾರ್ಷಿಕ ವೇತನ ಬಡ್ತಿ ದರಕ್ಕೆ ಸಮನಾದ ದರವನ್ನು ಭವಿಷ್ಯವರ್ತಿಯಾಗಿ ಪಡೆಯಲು ಮಂಜೂರಾತಿ ನೀಡಲಾಗಿದೆ.

ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಹಾಗೂ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ಗಳಿಂದ ನಡೆಸಲ್ಪಡುವ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಹತ್ವದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಯ್ಕೆಯಾದ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು. ಸರ್ಕಾರ ಪ್ರಕಟಿಸಿದ ಇಂತಹ ಮಾನ್ಯತೆ ಪಡೆದ ಕ್ರೀಡಾ ಫೆಡರೇಷನ್ಗಳ ಪಟ್ಟಿಯಲ್ಲಿನ ಸಂಸ್ಥೆಗಳವರು ನಡೆಸುವ ಕ್ರೀಡಾಕೂಟಗಳಲ್ಲಿ ಕ್ರೀಡಾಪಟುವಾಗಿ ವಾಸ್ತವವಾಗಿ ಭಾಗವಹಿಸುವ ದಿನಗಳಿಗೆ ಹಾಗೂ ಕ್ರೀಡಾಕೂಟಗಳಿಗೆ ಹೋಗಿಬರಲು ತಗಲುವ ಅವಧಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅವಕಾಶವಿರುತ್ತದೆ. ಈ ಕ್ರೀಡೆಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಭಾಗವಹಿಸಬೇಕಾದ ಸಂದರ್ಭಗಳಿದ್ದಲ್ಲಿ ಅಂತಹ ಅವಧಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಕ್ರೀಡಾಕೂಟಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಮ್ಯಾನೇಜರ್ಗಳು, ಕೋಚ್ಗಳು, ಮ್ಯೂಸಿಯರ್ಗಳು ಮತ್ತು ವೈದ್ಯರುಗಳಾಗಿ ಭಾಗವಹಿಸುವ ಸರ್ಕಾರಿ ನೌಕರರುಗಳಿಗೆ ಕೆಲಸದ ಅಗತ್ಯತೆಯನ್ನು ಪರಿಗಣಿಸಿ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು. ಸರ್ಕಾರಿ ಸೇವೆಯ ಅಗತ್ಯತೆಗನುಸಾರವಾಗಿ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವುದು ಅಥವಾ ತಿರಸ್ಕರಿಸುವುದು ರಜೆ ಮಂಜೂರು ಮಾಡುವ ಪ್ರಾಧಿಕಾರದ ವಿವೇಚನೆಗೆ ಸೇರಿದ್ದು. ಈ ವಿಶೇಷ ಸಾಂದರ್ಭಿಕ ರಜೆಯನ್ನು ನೌಕರನು ಹಕ್ಕೆಂಬಂತೆ ಸಾಧಿಸಲಾಗದು.

Related Posts