ತಂಬಾಕು ಮತ್ತು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳು

ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಬೀಡಿ, ಸಿಗರೇಟ್, ಗುಟ್ಕಾ ಹಾಗೂ ಮಾದಕ ವಸ್ತುಗಳಿಗೆ ಮಾರು ಹೋಗುತ್ತಿರುವುದು ಒಂದು ದುರದೃಷ್ಟಕರ ಬೆಳವಣಿಗೆಯೇ ಸರಿ. ಸರಿಯಾದ ಮಾರ್ಗದರ್ಶನದ ಕೊರತೆ ಹಾಗೂ ಮಾದಕ ವಸ್ತುಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗೆಗಿನ ಅರಿವಿನ ಕೊರತೆಯೇ ಈ ದುರಂತಕ್ಕೆ ಕಾರಣ. ಮಾದಕ ವಸ್ತುಗಳ ಸೇವನೆಯು ದೇಹ ಹಾಗೂ ಮನಸ್ಸಿನ ಮೇಲೆ ಅಪಾಯಕಾರಿ ಪರಿಣಾಮವನ್ನು ಉಂಟುಮಾಡುತ್ತದೆ.

ಖಿನ್ನತೆ, ಒತ್ತಡ, ಬಡತನ, ಕೀಳರಿಮೆ, ಹಿರಿಯ ವಿದ್ಯಾರ್ಥಿಗಳ ಪ್ರಭಾವ ಇವು ವಿದ್ಯಾರ್ಥಿಗಳ ವ್ಯಸನಿಗಳಾಗುವುದಕ್ಕೆ ಮುಖ್ಯ ಕಾರಣಗಳಾಗಿವೆ.

ಇಂದಿನ ಸಾಮಾಜಿಕ ಮಾಧ್ಯಮವು ಸಹ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವರು ಒತ್ತಡ ನಿವಾರಣೆಯಾಗುತ್ತದೆಂಬ ತಪ್ಪು ತಿಳಿವಳಿಕೆಯಿಂದ ತಂಬಾಕು ಮತ್ತು ಮಾದಕ ವಸ್ತುಗಳನ್ನು ಸೇವಿಸಿದರೆ ಇನ್ನು ಕೆಲವರು ಕುತೂಹಲಕ್ಕಾಗಿ ಸೇದಿ ವ್ಯಸನಿಗಳಾಗುತ್ತಿದ್ದಾರೆ. ಹೆರಾಯಿನ್, ಮರಿಜುವಾನ ಕೊಕೈನ್, ನಿಕೋಟಿನ್ ಮುಂತಾದ ಅಭ್ಯಾಸ ರೂಢಿಸುವ ಮಾದಕ ವಸ್ತುಗಳು ಮಿದುಳಿನ ಕೆಲಸ ಹಾಗೂ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಹೃದಯಸಂಬಂಧಿ ರೋಗಗಳು, ಶ್ವಾಸಕೋಶದ ತೊಂದರೆಗಳು, ಕಿಡ್ನಿ ಸಮಸ್ಯೆಗಳು, ಪಾಶ್ರ್ವವಾಯು, ಕ್ಯಾನ್ಸರ್ನಂತಹ ಅಪಾಯಕಾರಿ ರೋಗಗಳು, ಮಾದಕ ವಸ್ತುಗಳಿಂದ ಉದ್ಭವಿಸುತ್ತವೆ. ಕೆಲಸದಲ್ಲಿ ನಿರುತ್ಸಾಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ತಲೆದೋರುತ್ತದೆ. ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ ಪ್ರಕಾರ ಪ್ರತಿವರ್ಷ ಭಾರತದಲ್ಲಿ ಪ್ರತಿ ಆರು ಸೆಕೆಂಡಿಗೆ ಒಂದು ಸಾವು ಸಂಭವಿಸುತ್ತದೆ.

ಮಾದಕ ವಸ್ತುಗಳನ್ನು ನಿಯಂತ್ರಿಸಿ ವಿದ್ಯಾರ್ಥಿಗಳನ್ನು ಇದರಿಂದ ರಕ್ಷಿಸಲು ಸಕರ್ಾರ ಮತ್ತು ಅನೇಕ ಸಂಘಸಂಸ್ಥೆಗಳು ಇಂದು ಶ್ರಮಿಸುತ್ತಿವೆ. ಪಠ್ಯಪುಸ್ತಕಗಳಲ್ಲೂ ಸಹ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಹೇಳಲಾಗಿದೆ. ಇಂದಿನ ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡಿ ಅವರನ್ನು ವ್ಯಸನಿಗಳಾಗದಂತೆ ತಡೆಯುವುದು ಪೋಷಕರ, ಶಿಕ್ಷಕರ ಮತ್ತು ಸಮಾಜದ ಗುರುತರ ಜವಾಬ್ದಾರಿಯಾಗಿದೆ. ಈ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂದರ್ಭ ಬಂದಾಗಲೆಲ್ಲಾ ಮಾಹಿತಿ ನೀಡುವ ಅವಶ್ಯಕತೆಯಿದೆ. ಸಾಧ್ಯವಿದ್ದಲ್ಲಿ ತರಗತಿಯ ಎಲ್ಲಾ ಮಕ್ಕಳನ್ನೂ ಒಳಗೊಂಡಂತೆ ರಸಪ್ರಶ್ನೆ, ಪ್ರಬಂಧ, ಭಾಷಣ ಕಾರ್ಯಕ್ರಮ ಹಮ್ಮಿಕೊಳ್ಳಬಹುದು.

ಜಗತ್ತನ್ನು ಆವರಿಸಿರುವ ಸಮಸ್ಯೆಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳು ಮುಂಚೂಣಿಯಲ್ಲಿವೆ. ಜತೆಗೆ ದಿನೇದಿನೇ ತಂಬಾಕು ಚಟ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆ. ಅದನ್ನು ತಡೆಯಲೆಂದೇ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಮೇ 31ರಂದು `ವಿಶ್ವ ತಂಬಾಕು ರಹಿತ ದಿನ' ಆಚರಿಸುತ್ತಿದೆ. `ತಂಬಾಕು- ಅಭಿವೃದ್ಧಿಗೆ ಆತಂಕ' ಎಂಬ ಘೋಷವಾಕ್ಯದಡಿ ಈ ವರ್ಷ ಆಚರಣೆ ಮಾಡುತ್ತಿದೆ.

ಸಿಗರೇಟ್ ಸೇವನೆ ಮೃತ್ಯುವಿಗೆ ಆಹ್ವಾನ ಎಂದು ಗೊತ್ತಿದ್ದೂ ಸಹ ಇದರಿಂದ ಒಂದು ವರ್ಷದಲ್ಲಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಬರೋಬ್ಬರಿ 70 ಲಕ್ಷ. ಸದ್ಯದ ಪರಿಸ್ಥಿತಿ ಹೀಗೇ ಮುಂದುವರಿದರೆ 2030ರ ಸುಮಾರಿಗೆ ಈ ಸಾವಿನ ಸಂಖ್ಯೆ ವರ್ಷಕ್ಕೆ 80 ಲಕ್ಷಕ್ಕೆ ತಲುಪಿರುತ್ತದೆ. ಇಂಥ ಮೃತ್ಯುಕೂಪಕ್ಕೆ ಕಾರಣವಾಗುತ್ತಿರುವುದು ಬೀಡಿ-ಸಿಗರೇಟ್ ಹಾಗೂ ಅಗಿಯುವ ತಂಬಾಕು. ಒಟ್ಟಾರೆ ಹೇಳುವುದಾದರೆ ತಂಬಾಕು ಸೇವನೆ. ಈ ತಂಬಾಕು ವ್ಯಸನವನ್ನು ಹೀಗೇ ಬಿಟ್ಟರೆ ಅದು ಮನುಷ್ಯನ ಆರೋಗ್ಯ-ಆಯುಷ್ಯಕ್ಕಷ್ಟೇ ಅಲ್ಲದೆ ಇಡೀ ಜಗತ್ತಿಗೇ ಮಾರಕವಾಗಬಲ್ಲದು ಎಂಬುದನ್ನು ಮನಗಂಡಿರುವ ವಿಶ್ವ ಆರೋಗ್ಯ ಸಂಸ್ಥೆ, `ತಂಬಾಕು- ಅಭಿವೃದ್ಧಿಗೆ ಆತಂಕ' ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ `ವಿಶ್ವ ತಂಬಾಕುರಹಿತ ದಿನ'ವನ್ನು ಆಚರಿಸುತ್ತಿದೆ.

ತಂಬಾಕು ಸೇವಿಸುವವರ ಪ್ರಮಾಣ ಮೂರನೇ ಒಂದರಷ್ಟು: ಭಾರತದಲ್ಲಿರುವ ವಯಸ್ಕರ ಪೈಕಿ ಮೂರನೆಯ ಒಂದು ಭಾಗದಷ್ಟು ಮಂದಿ ಯಾವುದೇ ರೂಪದಲ್ಲಾದರೂ ತಂಬಾಕು ಸೇವಿಸುತ್ತಿದ್ದಾರೆ. ಅಂದರೆ ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೆ(ಗ್ಯಾಟ್ಸ್) ಪ್ರಕಾರ ದೇಶದಲ್ಲಿನ ವಯಸ್ಕರ ಪೈಕಿ ಶೇ. 34.6ರಷ್ಟು ಮಂದಿ ತಂಬಾಕು ವ್ಯಸನಿಗಳಾಗಿದ್ದಾರೆ.

ವ್ಯಸನಿಗಳಾಗಲು ಕಾರಣ: ತಂಬಾಕು ವ್ಯಸನಿ ಗೆಳೆಯರ ಸಹವಾಸ, ಅದರಲ್ಲೂ ಶೇ. 55.8 ವ್ಯಸನಿಗಳ ಸ್ನೇಹಿತರೂ ವ್ಯಸನಿಗಳಾಗಿರುತ್ತಾರೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಶಾಲೆ ಹಾಗೂ ಮನೆಯ ವಾತಾವರಣದಿಂದಾಗಿಯೂ ಶಾಲಾ ಮಕ್ಕಳೂ ತಂಬಾಕು ವ್ಯಸನಿಗಳಾಗುತ್ತಿದ್ದಾರೆ. ಹಾಗೆಯೇ ವ್ಯಸನಿ ವಿದ್ಯಾರ್ಥಿಗಳ ಪೈಕಿ ಅರ್ಧದಷ್ಟು ಜನರ ಮನೆಯಲ್ಲಿ ಕನಿಷ್ಠ ಒಬ್ಬರಾದರೂ ತಂಬಾಕು ವ್ಯಸನಿಗಳಿರುತ್ತಾರೆ ಹಾಗೂ ಅವರೇ ಒಂದು ರೀತಿಯಲ್ಲಿ ಕಾರಣರಾಗಿರುತ್ತಾರೆ.

ವಿದ್ಯಾಭ್ಯಾಸ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಮಾನಸಿಕ ಒತ್ತಡ, ಪ್ರೇಮವೈಫಲ್ಯ, ಜತೆಗೆ ತಂಬಾಕು ವ್ಯಸನಗಳ ಕುರಿತ ಕುತೂಹಲ ಕೂಡ ತಂಬಾಕು ವ್ಯಸನಿಗಳಾಗಲು ಕಾರಣವಾಗುತ್ತಿದೆ. ಸಿಗರೇಟ್ ಹಾಗೂ ಗುಟ್ಖಾ ಸೇವನೆ ಸ್ಟೈಲ್ ಹಾಗೂ ವ್ಯಕ್ತಿತ್ವ ವೃದ್ಧಿಸುತ್ತದೆ ಎಂಬ ತಪ್ಪು ಭಾವನೆ ಮಕ್ಕಳನ್ನು ತಪ್ಪು ಹಾದಿಗೆ ಎಳೆಯುತ್ತಿದೆ. ಮಾದಕ ವ್ಯಸನಕ್ಕೂ ತಂಬಾಕು ರಹದಾರಿ. ಮಾದಕ ವಸ್ತು ವ್ಯಸನಿಗಳಲ್ಲಿ ಶೇ. 90 ಮಂದಿ ಆರಂಭದಲ್ಲಿ ತಂಬಾಕು ವ್ಯಸನಿಗಳಾಗಿರುತ್ತಾರೆ. ಹೀಗೆ ತಂಬಾಕಿನಿಂದ ಶುರುವಾದ ವ್ಯಸನ ಡ್ರಗ್ಸ್ ವರೆಗೆ ತಲುಪಿರುವುದು ಕಂಡುಬಂದಿದೆ. ಹಾಗಾಗಿ ಡ್ರಗ್ಸ್ ತಡೆ ದಾಳಿಯಂತೆ ತಂಬಾಕು ತಡೆಗೂ ದಾಳಿ ಮಾಡಲಾಗುತ್ತದೆ. ಏಕೆಂದರೆ ತಂಬಾಕು ಪದಾರ್ಥಗಳು ಸಿಗುವಲ್ಲೇ ಸಾಮಾನ್ಯವಾಗಿ ಮಾದಕ ವಸ್ತುಗಳು ಸಿಗುತ್ತವೆ ಹಾಗೂ ತಂಬಾಕು ನಿಯಂತ್ರಣಕ್ಕೆ ನಡೆಸುವ ದಾಳಿಯಿಂದ ವಿದ್ಯಾರ್ಥಿಗಳು ತಂಬಾಕು ವ್ಯಸನಿಗಳಾಗುವುದನ್ನು ತಡೆಯುವ ಜತೆಗೆ ಮಾದಕ ವಸ್ತುಗಳ ವ್ಯಸನಿಗಳಾಗದಂತೆಯೂ ರಕ್ಷಿಸಿದಂತಾಗುತ್ತದೆ ಎಂಬುದು ತಂಬಾಕು ತಡೆ ಯೋಜನೆಯ ನಿದರ್ೇಶಕ ಡಾ.ಯು.ಎಸ್. ವಿಶಾಲ್ ರಾವ್ ಅಭಿಪ್ರಾಯ. ಇನ್ನು ತಂಬಾಕು ಪದಾರ್ಥಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದರಿಂದ ಅವುಗಳ ಮಾರಾಟ ಹಾಗೂ ಬಳಕೆ ನಿಯಂತ್ರಣಕ್ಕೆ ಬರುತ್ತದೆ. ಹೀಗೆ ಬಂದ ತೆರಿಗೆ ಹಣದಲ್ಲಿ ಬೀಡಿ ಕಾರ್ಮಿಕರು ಸೇರಿ ಜೀವನೋಪಾಯಕ್ಕಾಗಿ ತಂಬಾಕು ಪದಾರ್ಥಗಳ ಅವಲಂಬಿತರಿಗೆ ಪರ್ಯಾಯ ವ್ಯವಸ್ಥೆ ಮಾಡಬಹುದು ಎಂಬ ಮನವಿಯನ್ನೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದೆ.

ಈ ಪೈಕಿ ಶೇ. 47.9 ಪುರುಷರು ಹಾಗೂ ಶೇ. 20.3 ಮಹಿಳೆಯರು. ಅದರಲ್ಲೂ ಶೇ. 5.7 ಮಂದಿ ಸಿಗರೇಟ್ ಹಾಗೂ ಶೇ. 9.2 ಬೀಡಿ ಸೇದುವವರಿದ್ದು, ಧೂಮವ್ಯಸನಿಗಳೆನಿಸಿಕೊಂಡಿದ್ದಾರೆ. ಇನ್ನು ಧೂಮವ್ಯಸನಿಗಳಲ್ಲದ ತಂಬಾಕು ವ್ಯಸನಿಗಳು ಅರ್ಥಾತ್ ಅಗಿಯುವ ತಂಬಾಕು ಸೇವಿಸುವವರ ಸಂಖ್ಯೆ ಶೇ. 25.9ರಷ್ಟಿದೆ. ಅಗಿಯುವ ತಂಬಾಕು ಸೇವಿಸುವವರು ಬಾಯಿ ಕ್ಯಾನ್ಸಗರ್ ತುತ್ತಾಗುತ್ತಿದ್ದು, ಪ್ರಪಂಚದಲ್ಲೇ ಭಾರತ ಅತಿ ಹೆಚ್ಚು ಬಾಯಿಕ್ಯಾನ್ಸರ್ ರೋಗಿಗಳನ್ನು ಹೊಂದಿರುವ ದೇಶ ಎನಿಸಿಕೊಂಡಿದೆ. ಹೀಗೆ ತಂಬಾಕು ಸೇವನೆ ಜನರ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ದೇಶದ ಅಭಿವೃದ್ಧಿಗೂ ಮಾರಕ ಎನಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಭಿಯಾನ ಹಮ್ಮಿಕೊಂಡಿದೆ.

ಧೂಮಪಾನಿಗಳಲ್ಲದವರಿಗೂ ಅದರ ದುಷ್ಪರಿಣಾಮ: ಧೂಮಪಾನ ಮಾಡಿದವರಿಗೆ ಅದರ ದುಷ್ಪರಿಣಾಮಗಳು ಕಾಡುವುದು ಸಹಜ. ಜತೆಗೆ ಧೂಮವ್ಯಸನಿಗಳಲ್ಲದವರಿಗೂ ಅದರ ದುಷ್ಪರಿಣಾಮ ಉಂಟಾಗುತ್ತಿದೆ ಎಂಬುದು ಸಾಬೀತಾಗಿದೆ. ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೆ(ಗ್ಯಾಟ್ಸ್) ಪ್ರಕಾರ, ಕರ್ನಾಟಕದಲ್ಲಿರುವ ಧೂಮವ್ಯಸನಿಗಳ ಪ್ರಮಾಣ ಶೇ. 11.9. ಆದರೆ ಧೂಮವ್ಯಸನಿಗಳಲ್ಲದಿದ್ದರೂ ಅದರ ದುಷ್ಪರಿಣಾಮಗಳಿಗೆ ಈಡಾಗುತ್ತಿರುವವರ ಪ್ರಮಾಣ ಶೇ. 37.2. ಪರಿಣಾಮ, ಯಾರೋ ಮಾಡಿದ ತಪ್ಪಿಗೆ ಧೂಮಪಾನಿಗಳಲ್ಲದವರೂ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಂದರೆ, ಧೂಮವ್ಯಸನಿಗಳು ತಮಗೆ ತಾವೇ ಹಾನಿಮಾಡಿಕೊಳ್ಳುವ ಜತೆಗೆ ತಾವು ಬಿಡುವ ಹೊಗೆಯಿಂದ ಇತರರ ಆರೋಗ್ಯಕ್ಕೂ ಕುತ್ತು ತರುತ್ತಿದ್ದಾರೆ.

ಬುಡಸಮೇತ ತೊಲಗಿಸಲು ಕ್ರಮ: ತಂಬಾಕು ರಹಿತ ಸಮಾಜ ನಿರ್ಮಾಣಕ್ಕಾಗಿ ತಂಬಾಕಿನ ಬಳಕೆ ಹಾಗೂ ಮಾರಾಟವನ್ನು ಬುಡಸಮೇತ ತೊಲಗಿಸಲು ಕರ್ನಾಟಕ ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. ಅಔಖಿಕಂ ಕಾಯ್ದೆ ಅನುಷ್ಠಾನವನ್ನು ಹಳ್ಳಿಗಳಲ್ಲೂ ಸಮರ್ಥವಾಗಿ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಕರ್ಾರ ಜವಾಬ್ದಾರಿ ವಹಿಸಿದೆ. ಈ ಕಾಯ್ದೆ ಅನುಷ್ಠಾನ ನಿಟ್ಟಿನಲ್ಲಿ ಪಿಡಿಒಗಳು ತಿಂಗಳಿಗೆ ಕನಿಷ್ಠ 20 ಪ್ರಕರಣಗಳನ್ನು ದಾಖಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸೂಚಿಸಿದೆ. ಇದರಿಂದ ಗ್ರಾಮಮಟ್ಟದಲ್ಲಿ ತಂಬಾಕು ನಿಯಂತ್ರಣವಾಗಿ ಬುಡಮಟ್ಟದಲ್ಲೇ ಅದನ್ನು ಕಿತ್ತೆಸೆದಂತಾಗುತ್ತದೆ ಎಂಬ ಚಿಂತನೆ ಸರ್ಕಾರದ್ದು. ಚಿಕ್ಕಮಗಳೂರು, ಬಳ್ಳಾರಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಈಗಾಗಲೇ ಈ ಪ್ರಕ್ರಿಯೆ ಜಾರಿಯಲ್ಲಿದೆ.

ಮಕ್ಕಳ ಬಗ್ಗೆ ಇರಲಿ ನಿಗಾ: ಪಿಯುಸಿ ವಿದ್ಯಾರ್ಥಿಗಳಿಂದಲೇ ರಾಜ್ಯದಲ್ಲಿ ವರ್ಷಕ್ಕೆ 5.6 ಕೋಟಿ ರೂ. ಮೊತ್ತದ ತಂಬಾಕು ಖರೀದಿಯಾಗುತ್ತಿದೆ. ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಜತೆಗೆ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ವಿದ್ಯಾರ್ಥಿಗಳಲ್ಲಿ ಶೇ. 33.1 ಮಂದಿ ತಂಬಾಕು ರುಚಿ ನೋಡಿದ್ದು, ಈ ಪೈಕಿ ಶೇ. 7.2 ಮಂದಿ ಇದರ ವ್ಯಸನಿಗಳಾಗಿದ್ದಾರೆ. ಇನ್ನು ತಂಬಾಕು ರುಚಿ ನೋಡಿರುವವರ ಪೈಕಿ ವಿದ್ಯಾರ್ಥಿಗಳ ಪ್ರಮಾಣ ಶೇ. 21.7 ಇದ್ದರೆ, ವಿದ್ಯಾರ್ಥಿನಿಯರ ಪ್ರಮಾಣ ಶೇ. 11.4 ಇದೆ. ಹಾಗೆಯೇ, ವ್ಯಸನಿಗಳ ಪೈಕಿ ವಿದ್ಯಾರ್ಥಿಗಳು ಶೇ. 5.3ರಷ್ಟಿದ್ದರೆ, ವಿದ್ಯಾರ್ಥಿನಿಯರು ಶೇ. 1.9ರಷ್ಟಿದ್ದಾರೆ.

ತಂಬಾಕಿನ ದುಷ್ಪರಿಣಾಮಗಳು: ತಂಬಾಕು ಸೇವನೆ ಹತ್ತು ಹಲವು ಕ್ಯಾನ್ಸರ್ಗಳಿಗೆ ಕಾರಣವಾಗುತ್ತದೆ. ಶ್ವಾಸಕೋಶ, ಅಡ್ರಿನಲ್ ಗ್ರಂಥಿ, ಹೊಟ್ಟೆ, ಮೂಗು, ಮೂತ್ರಚೀಲ, ಮೇದೋಜೀರಕ ಗ್ರಂಥಿ, ಪಿತ್ತಜನಕಾಂಗ, ಮೂತ್ರಜನಕಾಂಗ, ಸರ್ವಿಕಲ್, ಬಾಯಿ, ಧ್ವನಿಪೆಟ್ಟಿಗೆ, ತಲೆ ಮತ್ತು ಕುತ್ತಿಗೆ, ಸ್ತನ, ಅನ್ನನಾಳದ ಕ್ಯಾನ್ಸರ್ ತಂಬಾಕು ವ್ಯಸನಿಗಳಲ್ಲಿ ಸಾಮಾನ್ಯ. ಇನ್ನು ತಂಬಾಕು ಸೇವನೆಯಿಂದ ಬರುವ ರೋಗಗಳಲ್ಲಿ ಪ್ರಮುಖವಾದವೆಂದರೆ ಹೃದ್ರೋಗ, ಮಿದುಳಿನ ಸಂಕೋಚನ, ಅಲ್ಝೀಮರ್ಸ್, ಬ್ರಾಂಕೈಟಿಸ್(ಶ್ವಾಸನಾಳಗಳ ಒಳಪೊರೆಯ ಉರಿಯೂತ), ಎಂಫೀಸಿಮಾ(ಶ್ವಾಸಕೋಶದ ವಾಯುಕೋಶಗಳ ಊತ), ಪಾಶ್ರ್ವವಾಯು, ನೆನಪಿನ ಶಕ್ತಿ ಕುಂದುವಿಕೆ, ದೀರ್ಘಕಾಲದ ಶ್ವಾಸಕೋಶದ ಅಡಚಣೆ. ಅಲ್ಲದೆ ಕಡಿಮೆ ತೂಕದ ಶಿಶು ಜನಿಸುವ ಸಾಧ್ಯತೆಯೂ ಇರುತ್ತದೆ.

ಹೀಗೆ ಮಾಡಿ: * ತಂಬಾಕು ಪದಾರ್ಥಗಳ ಬಗ್ಗೆ ವೈರಾಗ್ಯ- ತಾತ್ಸಾರ ಮನೋಭಾವ ಮೂಡಿಸಿಕೊಳ್ಳಿ. * ತಂಬಾಕು ಪದಾರ್ಥ ಬಾಯಿಗಿಟ್ಟುಕೊಳ್ಳುತ್ತಿದ್ದಂತೆ ಅದು ಮೃತ್ಯುಚುಂಬನ ಎಂಬುದನ್ನು ನೆನಪಿಸಿಕೊಳ್ಳಿ. * ಧೂಮಪಾನ ಮಾಡುವುದರಿಂದ ಯೋಚನಾಶಕ್ತಿ- ಏಕಾಗ್ರತೆ ಬರುತ್ತದೆ ಎಂಬುದೆಲ್ಲ ಸುಳ್ಳು ಎಂಬುದನ್ನು ಆಗಾಗ ಮನದಟ್ಟು ಮಾಡಿಕೊಳ್ಳುತ್ತಿರಿ. * ಧೂಮಪಾನ ವ್ಯಕ್ತಿತ್ವವನ್ನು ವೃದ್ಧಿಸುತ್ತದೆ ಎಂಬುದು ಭ್ರಮೆ ಎನ್ನುವುದನ್ನು ಅರಿಯಿರಿ. * ತಂಬಾಕು ಸೇವಿಸಲೇಬೇಕು ಎನಿಸುತ್ತಿದ್ದರೆ, ತಂಬಾಕು ಈಗಾಗಲೇ ವ್ಯಸನವಾಗಿದ್ದರೆ ಮನೋವೈದ್ಯರ ಸಲಹೆ ಪಡೆಯಿರಿ.

ಖಿನ್ನತೆಗೆ ಪರಿಹಾರ: ಒಬ್ಬ ವ್ಯಾಪಾರಿ ಬಹಳ ಖಿನ್ನತೆ ಮತ್ತು ನರ ದೌರ್ಬಲ್ಯ ಪೀಡಿತನಾಗಿದ್ದ. ಅವನನ್ನು ಪರೀಕ್ಷಿಸಿದ ಮನಃಶಾಸ್ತ್ರಜ್ಞರು `ಮೊದಲು ನೀನೊಂದು ಕೆಲಸ ಮಾಡು. ರೈಲು ನಿಲ್ದಾಣಕ್ಕೆ ಹೋಗು. ಅಲ್ಲಿ ಸಹಾಯ ಮಾಡಲು ಯಾರನ್ನಾದರೂ ಹುಡುಕು. ಆ ಬಳಿಕ ನಿನ್ನ ಮನಃಸ್ಥಿತಿಯ ಬಗ್ಗೆ ನನಗೆ ವರದಿ ನೀಡು' ಎಂದರು.

ವ್ಯಾಪಾರಿಯು ಅದರಂತೆ ರೈಲು ನಿಲ್ದಾಣಕ್ಕೆ ಹೋದ. ಅಲ್ಲಿ ವೇಯ್ಟಿಂಗ್ ರೂಮಿನ ತುದಿಯಲ್ಲಿ ಒಬ್ಬ ವೃದ್ಧೆಯು ಅಳುತ್ತಾ ಕುಳಿತಿರುವುದನ್ನು ನೋಡಿದ. ಅವಳು ತನ್ನ ಮಗಳನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಳು. ಆದರೆ ವಿಳಾಸ ಕಳೆದುಕೊಂಡಿದ್ದಳು. ಅವಳ ಬಳಿ ಹಣವೂ ಇರಲಿಲ್ಲ. ಇದನ್ನು ಕಂಡ ವ್ಯಾಪಾರಿಯು ಟೆಲಿಫೋನ್ ಡೈರೆಕ್ಟರಿಯಿಂದ ವೃದ್ಧೆಯ ಮಗಳ ವಿಳಾಸವನ್ನು ಕಂಡುಹಿಡಿದು ಅವಳನ್ನು ಟ್ಯಾಕ್ಸಿಯಲ್ಲಿ ಅಲ್ಲಿಗೆ ಕರೆದುಕೊಂಡು ಹೋದ. ದಾರಿಯಲ್ಲಿ ಗುಲಾಬಿ ಹೂಗಳನ್ನು ಖರೀದಿಸಿ ಅವಳಿಗೆ ನೀಡಿದ. ವೃದ್ಧೆಯ ಸಂತೋಷ ಹೇಳತೀರದಾಗಿತ್ತು. ವ್ಯಾಪಾರಿ ಕೆಲಸ ಮುಗಿಸಿ ಮನಃಶಾಸ್ತ್ರಜ್ಞರನ್ನು ಮತ್ತೆ ಭೇಟಿ ಮಾಡಿದ. ಈಗ ನಾನು ಬದುಕಿನ ನಿಜವಾದ ಆನಂದವೇನೆಂದು ತಿಳಿದೆ. ಎಳ್ಳಷ್ಟೂ ನಿರೀಕ್ಷೆಯಿಲ್ಲದೆ ಅಸಹಾಯಕರಿಗೆ ಸೇವೆ ಮಾಡಿದಾಗ ಮಾತ್ರ ನಿಜವಾದ ಸಂತೋಷ ದೊರಕುತ್ತದೆ ಎಂದ.

ತಂಬಾಕು ಮತ್ತು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳು ತಂಬಾಕು ಮತ್ತು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳು

Related Posts