ಯೋಗ ಚಿಕಿತ್ಸೆ
- ಶಿವಣ್ಣ ಜಿ.ಕೆ.

ಯೋಗಶ್ಚಿತ್ತವೃತ್ತಿ ನಿರೋಧಹಃ' ಎಂಬುದು ಪತಂಜಲಿ ಋಷಿಯ ಯೋಗ ಸೂತ್ರದ ಮಾತು. ಜಗತ್ತಿನ ಪ್ರತಿಯೊಬ್ಬರೂ ಪ್ರಕೃತಿಯ ಪೂರ್ಣರೂಪದ ಪ್ರತ್ಯೇಕಭಾಗವಾಗಿ ಜನಿಸಿರುತ್ತಾರೆ. ಮನಸ್ಸಿನಲ್ಲಿ ಯಾವುದೇ ಆಲೋಚನೆಗಳಿಲ್ಲದ ನಿರ್ಮಲ ಸ್ಥಿತಿಯೇ ಯೋಗ ಎಂಬುದು ಇದರರ್ಥ. ಸಾಧಕರೊಬ್ಬರು ಅಷ್ಟಾಂಗ ಯೋಗದ ಎಂಟು ಮೆಟ್ಟಿಲುಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ದಾರಿಯಲ್ಲಿ ಸಾಗಿ, ಚಿಂತನೆ ಮತ್ತು ಆಧ್ಯಾತ್ಮಿಕತೆಯಿಂದ ನಾನು ವ್ಯಕ್ತ್ತಿಗತವಾಗಿ ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದ್ದರೂ ಈ ವಿಶ್ವಚೇತನದ ಒಂದು ಭಾಗ ಎಂಬುದನ್ನು ಅರಿಯಲು ಯೋಗ ನೆರವಾಗುತ್ತದೆ. ಜಗತ್ತಿನಾದ್ಯಂತ ವಿವಿಧ ಜೀವನ ಶೈಲಿಗಳು, ಆಹಾರ ಕ್ರಮಗಳಿದ್ದರೂ, ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ಯೋಗಾಭ್ಯಾಸವು ರೋಗಕ್ಕೆ ಕಾರಣವಾಗುವ ಅನೇಕ ಅಂಶಗಳನ್ನು ತಿಳಿಗೊಳಿಸುತ್ತದೆ. ಯೋಗಾಭ್ಯಾಸಿಯು ನಿಯಮಿತ ಅಭ್ಯಾಸಗಳಿಂದ ರೋಗಗಳಿಂದ ದೂರವಿರುತ್ತಾನೆ, ಅಲ್ಲದೆ ಆರಂಭಿಕ ಹಂತದಲ್ಲಿರುವ ಯಾವುದೇ ರೋಗವನ್ನೂ ಯೋಗ ಗುಣಮುಖಗೊಳಿಸುವುದಲ್ಲದೆ ಮುಂದೆ ಬರಬಹುದಾದ ಅನೇಕ ಕಾಯಿಲೆಗಳನ್ನು ತಡೆಯುತ್ತದೆ. ಯೋಗಾಭ್ಯಾಸವನ್ನು ಎಳೆವಯಸ್ಸಿನಲ್ಲಿಯೇ ಆರಂಭಿಸಿದರೆ ತುಂಬಾ ಉಪಯುಕ್ತ, ವ್ಯಕ್ತಿಯ ಬದುಕು ಸರ್ವಾಂಗೀಣ ಸುಂದರವಾಗಿರುತ್ತದೆ. ಯೋಗವು ಒಂದು ರೀತಿಯ ವಿಶಿಷ್ಠ ವ್ಯಾಯಾಮವಾಗಿದ್ದು, ಇದು ಮನೋದೈಹಿಕ ಪ್ರಯೋಜನಗಳನ್ನು ಹೆಚ್ಚಿಸುವಲ್ಲಿ ಪ್ರಭಾವಶಾಲಿಯಾಗಿದೆ, ಇದರಲ್ಲಿ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುವುದು, ಹೃದಯದ ಆರೋಗ್ಯವನ್ನು ಸುಧಾರಿಸುವುದು, ಶಕ್ತಿ ಮತ್ತು ನಮ್ಯತೆಯನ್ನು ಹೆಚ್ಚಿಸುವ ಗುಣಗಳಿವೆೆ. ಇಂದು ಆಧುನಿಕತೆಯ ನಾಗಾಲೋಟದಲ್ಲಿ ಮನುಷ್ಯರ ಆರೋಗ್ಯದ ಸ್ಥಿತಿ ತುಂಬಾ ಹದಗೆಡುತ್ತಿದೆ. ಪರಿಸರದಲ್ಲಿನ ಕಲ್ಮಶ ವಾತಾವರಣ, ಅಶುದ್ಧತೆ, ಕೃತಕ ಆಹಾರ ಪದ್ಧತಿಗಳ ಪ್ರಭಾವಗಳಿಂದ ಆಸ್ತಮಾ, ಅಧಿಕ ರಕ್ತದೊತ್ತಡ, ಮಧುಮೇಹ, ಆತಂಕ ಮತ್ತು ಖಿನ್ನತೆ, ಕೀಲು ಮತ್ತು ಸ್ನಾಯು ನೋವು, ಬೆನ್ನು ನೋವು, ಕ್ಯಾನ್ಸರ್ ಮುಂತಾದ ವಿವಿಧ ಕಾಯಿಲೆಗಳು ಸಾಮಾನ್ಯವಾಗಿಬಿಟ್ಟಿವೆ. ಯೋಗದ ಮೂಲಕ ಇಂತಹ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ವಾಸ್ತವವಾಗಿ, ಪ್ರಕೃತಿಯಲ್ಲಿ ಯಾವುದೇ ರೋಗಗಳಿಲ್ಲ. ಪ್ರಕೃತಿ ಶಕ್ತಿಯು ವಸ್ತುವಿನ ರೂಪದಲ್ಲಿ ಖನಿಜ, ಸಸ್ಯ ಮತ್ತು ಪ್ರಾಣಿ ಸಾಮ್ರಾಜ್ಯಗಳ ಎಲ್ಲಾ ರೂಪಗಳಲ್ಲಿ ನಿರಂತರ ಸಂವಹನ ಶಕ್ತಿ ಮತ್ತು ರೂಪಗಳೊಂದಿಗೆ ಹರಿಯುತ್ತಿರುತ್ತದೆ. ಅತೀ ಹೆಚ್ಚು ಮಾನಸಿಕ ಅಭಿವೃದ್ಧಿಯನ್ನು ಹೊಂದಿರುವ ಮಾನವರು ಮಾತ್ರ ಹೆಚ್ಚು ರೋಗ ಪೀಡಿತರಾಗಿದ್ದಾರೆ. ಆದರೆ ಮೂಲ ಶಕ್ತಿಯಲ್ಲಿ ಯಾವುದೇ ರೋಗವಿಲ್ಲ, ಆದರೆ ರೂಪದಿಂದ ರೂಪಕ್ಕೆ ಅದರ ಹರಿಯುವಿಕೆಯಲ್ಲಿ, ವಿಭಿನ್ನ ಭಾಗಗಳಲ್ಲಿ ಮತ್ತು ವಿಭಿನ್ನ ಸಮಯಗಳಲ್ಲಿ ಹೆಚ್ಚು ಅಥವಾ ಕಡಿಮೆ ಶಕ್ತಿಯಿರುವುದು ರೋಗವಾಗಿದೆ. ಮತ್ತು ಹೆಚ್ಚಿನ ರೋಗಗಳು ಮನಸ್ಸಿಗೆ ಸಂಬಂಧಿಸಿವೆ. ಸರಿಯಾದ ಪೋಷಣೆ, ಸುರಕ್ಷಿತ ಕುಡಿಯುವ ನೀರು, ಶುದ್ಧ ಗಾಳಿಯ ಕೊರತೆಯಿಂದಾಗಿ ಜೀವನಶೈಲಿ ಮತ್ತು ಮಾಲಿನ್ಯಕ್ಕೆ ಕಾರಣವಾಗಿವೆ ಎನ್ನುತ್ತದೆ ಯೋಗ ವಿಜ್ಞಾನ.

ಸಾಮಾನ್ಯ ರೋಗಗಳಿಗೆ ಯೋಗ ಪಟ್ಟಿ :
ಈ ಯೋಗಾಸನ ಮತ್ತು ಪ್ರಾಣಾಯಾಮಗಳ ಪಟ್ಟಿ ವೈದ್ಯಕೀಯ ಚಿಕಿತ್ಸೆಗೆ ಪೂರಕವಾಗಿವೆ ಎಂದು ಗಮನಿಸಬೇಕು. ಯೋಗಾಸನ ಮಾಡುವ ಮೊದಲು ಸೂಕ್ತ ವೈದ್ಯರ ಸಲಹೆ ಅತ್ಯಗತ್ಯ.
ಕಿಬ್ಬೊಟ್ಟೆಯ ಅಸ್ವಸ್ಥತೆಗಳು: ಲೋಲಾಸನ, ಪವನಮುಕ್ತಾಸನ, ಭುಜಂಗಾಸನ, ಶಲಭಾಸನ, ಪಶ್ಚಿಮೋತ್ತಾಸನ.
ಸಂಧಿವಾತ: ಶಶಾಂಕಾಸನ, ಸೇತುಬಂಧಾಸನ, ಸರ್ವಂಗಾಸನ, ಪೂರ್ಣಶಲಭಾಸನ.
ಉಬಚ್ಬಿಸ:ಸಿದ್ಧಾಸನ, ಶೀರ್ಷಾಸನ, ಸರ್ವಾಂಗಾಸನ, ಅರ್ಧಮತ್ಸ್ಯಾಸನ, ಅರ್ಧಮತ್ಸ್ಯೇಂದ್ರಾಸನ, ಸುಪ್ತವಜ್ರಾಸನ, ಭುಜಂಗಾಸನ. ಕಪಾಲಭಾತಿ- ಪ್ರಾಣಾಯಾಮ.
ಬೆನ್ನುನೋವು: ಧನುರಾಸನ, ಸೇತುಬಂಧಾಸನ, ಸರ್ವಾಂಗಾಸನ, ವಜ್ರಾಸನ, ಭುಜಂಗಾಸನ, ಗೋಮುಖಾಸನ, ಅರ್ಧಮತ್ಸ್ಯಾಸನ, ಚಕ್ರಾಸನ, ಶೀರ್ಷಾಸನ. ಬ್ರಾಂಕೈಟಿಸ್: ಕಪಾಲಭಾತಿ. ಭುಜಂಗಾಸನ, ಅರ್ಧಮತ್ಸ್ಯಾಸನ, ಪೂರ್ಣಶಲಭಾಸನ, ಪದ್ಮಾಸನ, ಸರ್ವಾಂಗಾಸನ, ಲೋಲಾಸನ.
ಶೀತ/ನೆಗಡಿ ಇತ್ಯಾದಿಗಳಿಗೆ : ಸೂರ್ಯ ನಮಸ್ಕಾರದ ಜೊತೆಗೆ ಭಸ್ತ್ರಿಕಾ ಪ್ರಾಣಾಯಾಮ ಉತ್ತಮ ಫಲ ನೀಡುತ್ತದೆ.
ಮಲಬದ್ಧತೆ: ಹಸ್ತಪದ್ಮಾಸನ, ಪವನಮುಕ್ತಾಸನ, ಅರ್ಧಮತ್ಸ್ಯೇಂದ್ರಾಸನ, ಹಲಾಸನ, ಧನುರಾಸನ, ವಜ್ರಾಸನ, ಶೀರ್ಷಾಸನ.
ಖಿನ್ನತೆ: ಹಸ್ತಪಾದಾಸನ, ಪರ್ವತಾಸನ, ತ್ರಿಕೋಣಾಸನ, ಪವನಮುಕ್ತಾಸನ, ಅರ್ಧಮತ್ಸ್ಯೇಂದ್ರಾಸನ, ಹಲಾಸನ, ಧನುರಾಸನ, ವಜ್ರಾಸನ, ಶಿರಸಾಸನ,, ಧ್ಯಾನ, ಯೋಗ ಮುದ್ರಾ, ಶವಾಸನ.
ಮಧುಮೇಹ: ಸೂರ್ಯ ನಮಸ್ಕಾರಗಳ ಜೊತೆ ಭುಜಂಗಾಸನ, ಮಯೂರಾಸನ, ಹಲಾಸನ, ಸರ್ವಾಂಗಾಸನ, ಅರ್ಧಮತ್ಸ್ಯೇಂದ್ರಾಸನ, ಯೋಗಮುದ್ರಾ, ಮಂಡೂಕಾಸನ, ಶವಾಸನ.
ಕಣ್ಣಿನ ನೋವಿಗೆ: ಕುತ್ತಿಗೆ ಮತ್ತು ಕಣ್ಣಿನ ವ್ಯಾಯಾಮಗಳು (ತಲೆಕೆಳಗಾದ ಆಸನಗಳನ್ನು ಮಾಡಬಾರದು).
ಹೊಟ್ಟೆಯ ಅಸ್ವಸ್ಥತೆಗಳು: ಧನುರಾಸನ, ಭುಜಂಗಾಸನ, ಮಯೂರಾಸನ, ತ್ರಿಕೋನಾಸನ.
ತಲೆನೋವು: ಕುತ್ತಿಗೆ ಮತ್ತು ಕಣ್ಣಿನ ವ್ಯಾಯಾಮಗಳು, ಶವಾಸನ. ಸೀತ್ಕರಿ ಪ್ರಾಣಾಯಾಮ ಮತ್ತು ಧ್ಯಾನ.
ಅಜೀರ್ಣ/ಆಸಿಡಿಟಿ: ಅರ್ಧಮತ್ಸ್ಯೇಂದ್ರಾಸನ, ಲೋಲಾಸನ, ಹಲಾಸನ, ಸರ್ವಾಂಗಾಸನ, ಭುಜಂಗಾಸನ, ಅರ್ಧಚಕ್ರಸಾನ, ತಾಡಾಸನ, ಮಯೂರಾಸನ, ಮಂಡೂಕಾಸನ, ವಜ್ರಾಸನ, ಶವಾಸನ.
ನಿದ್ರಾಹೀನತೆ: ತಡಾಸನ, ಸರ್ವಾಂಗಾಸನ, ಭುಜಂಗಾಸನ, ಶಲಭಾಸನ, ಹಲಾಸನ, ಧ್ಯಾನ, ಶವಾಸನ.
ಮೂತ್ರಪಿಂಡದ ಅಸ್ವಸ್ಥತೆಗಳು: ಧನುರಾಸನ, ಶಲಭಾಸನ, ಸರ್ವಂಗಾಸನ ಭುಜಂಗಾಸನ ಅರ್ಧಮತ್ಸ್ಯೇಂದ್ರಾಸನ, ವಜ್ರಾಸನ.
ಯಕೃತ್ತಿನ ಅಸ್ವಸ್ಥತೆಗಳು: ಅರ್ಧಮತ್ಸ್ಯೇಂದ್ರಾಸನ, ಲೋಲಾಸನ, ಹಲಾಸನ, ಸರ್ವಾಂಗಾಸನ, ಭುಜಂಗಾಸನ, ಅರ್ಧಚಕ್ರಸಾನ, ತಾಡಾಸನ, ಮಯೂರಾಸನ, ಮಂಡೂಕಾಸನ, ವಜ್ರಾಸನ, ಶವಾಸನ.
ಮುಟ್ಟಿನ ಅಸ್ವಸ್ಥತೆಗಳು: ಉಡ್ಡಿಯಾನಬಂಧ, ವಜ್ರಾಸನ, ಭುಜಂಗಾಸನ, ಹಸ್ತಪಾದಾಸನ, ಹಲಾಸನ, ಶೀರ್ಷಾಸನ, ಶವಾಸನ.
ನರದೌರ್ಬಲ್ಯ: ಶಿರ್ಷಾಸನ, ವೀರಾಸನ ಸಿದ್ಧಾಸನ, ತಾಡಾಸನ, ಶವಾಸನ, ಧ್ಯಾನ.
ಬೊಜ್ಜು: ತ್ರಿಕೋನಾಸನ, ಅರ್ಧಮತ್ಸ್ಯೇಂದ್ರಾಸನ, ಹಸ್ತಪಾದಾಸನ, ಪಶ್ಚಿಮೋತ್ತಾಸನ, ಭುಜಂಗಾಸನ, ಹಲಾಸನ, ಧನುರಾಸನ, ಮಂಡೂಕಾಸನ, ಅರ್ಧಚಕ್ರಾಸನ, ಸುಪ್ತವಜ್ರಾಸನ, ಶವಾಸನ.
ಸಂಧಿವಾತ: ಧನುರಾಸನ, ಗೋಮುಖಾಸನ, ಅರ್ಧಮತ್ಸ್ಯೇಂದ್ರಾಸನ, ತ್ರಿಕೋನಾಸನ.
ಸೊಂಟ/ಕಟಿವಾಯು: ಗೋಮುಖಾಸನ, ಸೇತುಬಂಧಾಸನ, ಸರ್ವಾಂಗಾಸನ, ಶವಾಸನ.
ಚರ್ಮ ರೋಗಗಳು: ಸೂರ್ಯನಮಸ್ಕಾರ, ತ್ರಿಕೋನಾಸನ, ಅರ್ಧಮತ್ಸ್ಯೇಂದ್ರಾಸನ, ಹಸ್ತಪಾದಾಸನ, ಪಶ್ಚಿಮೋತ್ತಾಸನ, ಭುಜಂಗಾಸನ, ಹಲಾಸನ, ಧನುರಾಸನ, ಮಂಡೂಕಾಸನ, ಅರ್ಧಚಕ್ರಾಸಾನ, ಸುಪ್ತವಜ್ರಾಸನ, ಶವಾಸನ.
ಪ್ರಾಣಾಯಾಮ ಮತ್ತು ಯೋಗಾಸನಗಳನ್ನು ಅಭ್ಯಾಸ ಮಾಡುವವರು ಅದರಲ್ಲಿ ಸಾಕಷ್ಟು ಅನುಭವ ಇರುವ ಮಾರ್ಗದರ್ಶಕರನ್ನು ಸಂಪಕರ್ಿಸಿ ಅಭ್ಯಾಸ ಮಾಡಬೇಕು. ವಿಶೇಷವಾಗಿ ಪ್ರಾಣಾಯಾಮಗಳನ್ನು ಸರಿಯಾಗಿ ಬಲ್ಲವರಿಂದಲೇ ಕಲಿಯುವುದು ಸೂಕ್ತ. (ಮಾಹಿತಿ: ಸೂರ್ಯನಮಸ್ಕಾರ, ಯೋಗಾಸನಗಳು, ಪ್ರಾಣಾಯಾಮ-ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು. ಯೋಗ ದೀಪಿಕಾ - ಬಿ.ಕೆ.ಎಸ್. ಐಯ್ಯಂಗಾರ್)

  ಸಾಂಪ್ರದಾಯಿಕ ಮತ್ತು ನವೀನ ಬೋಧನಾ ಉಪಕ್ರಮಗಳು ಒಂದು ಚಿಕ್ಕ ಅವಲೋಕನ.....
 - ಮುರಳೀಧರ.ಎಚ್.ಆರ್.

ಒಂದು ಭಾಷೆಯಲ್ಲಿ ಸ್ವಾಮಿತ್ವವನ್ನು ಗಳಿಸಬೇಕಾದರೆ ಆ ಭಾಷೆಯ ಸೇವಕರಾಗಬೇಕಾದದ್ದು ಅತಿ ಮುಖ್ಯ. ಸೇವಕರಾಗುವುದು ಎಂದರೆ ಹೆಚ್ಚು ಹೆಚ್ಚಾಗಿ ಆ ಭಾಷೆಯನ್ನು ಬಳಸುವುದೇ ಎಂದೇ ಅರ್ಥ. ಹೀಗಾದಾಗ ಸೃಜನಾತ್ಮಕವಾಗಿ ನೂತನ ಪ್ರಯೋಗಗಳು, ಅನುಕೂಲಿಸುವಿಕೆಯ ವಿಧಿ ವಿಧಾನಗಳು ಆವಿಷ್ಕಾರಗೊಳ್ಳುತ್ತವೆ. ಯಾವುದೇ ಪರಿಕಲ್ಪನೆಯ ಬಂಧವು ಅತ್ಯಂತ ಪರಿಣಾಮಕಾರಿಯಾಗಿ ನಿಲ್ಲಬೇಕಾದರೆ ಸಾಂಪ್ರದಾಯಿಕವಾಗಿ ಬಂದ ಬೋಧನಾ ವಿಧಾನಗಳ ಜೊತೆಗೆ ಹೊಸದಾಗಿ ಆವಿಷ್ಕಾರಗೊಂಡ ಪದ್ಧತಿಗಳು ಬೆಸೆದು ಹೊಸತನ ಮೂಡುತ್ತದೆ.

ಶತ ಶತಮಾನಗಳಿಂದಲೂ ಮೂಡಿಬಂದಿರುವ ಸಂಪ್ರದಾಯಿಕ ವಿಧಾನಗಳನ್ನು ಒಮ್ಮೆ ಅವಲೋಕಿಸಿದಾಗ ಹಂತ ಹಂತವಾಗಿ ವೈಜ್ಞಾನಿಕವಾಗಿ ಚಿಂತಿಸಿ, ಹಿಂಜಿ ಹಿಂಜಿ ಹೊಸದನ್ನು ಕಂಡುಕೊಳ್ಳುತ್ತಾ ಸಾಗುತ್ತಿರುವ ನಮ್ಮ ಶಿಕ್ಷಣ ತಜ್ಞರ ವಿಚಾರಧಾರೆಗಳು ಅತಿ ಪ್ರಸ್ತುತ ಎನಿಸುತ್ತವೆ.

ಉಪಾಧ್ಯಾಯರಿಗೆ ಅದರಲ್ಲೂ ಭಾಷಾ ಶಿಕ್ಷಕರಿಗೆ ಬಾಷಾ ಬೋಧನೆಯೇ ಒಂದು ಸವಾಲು .ನಾನಾ ರೀತಿಯ ಕೌಟುಂಬಿಕ ಹಿನ್ನೆಲೆಯಿಂದ ಬರುವ ನಮ್ಮ ವಿದ್ಯಾಥರ್ಿಗಳನ್ನು ಗಣನೆಗೆ ತೆಗೆದುಕೊಂಡು ಅನುಕೂಲಿಸುವುದು ನಿಜಕ್ಕೂ ಒಂದು ಸವಾಲೇ ಸರಿ. 1986ರ ರಾಷ್ಟ್ರೀಯ ಶಿಕ್ಷಣ ನೀತಿ, ರಾಧಾ ಕೃಷ್ಣನ್ ಆಯೋಗ, ಕೊಥಾರಿ ಆಯೋಗ ಅಂತೆಯೇ ಎನ್.ಸಿ.ಎಫ್. 2005 ಹೀಗೆ ಎಷ್ಟೋ ಆಯೋಗಗಳು ತಮ್ಮ ವರದಿಯನ್ನು ನೀಡಿವೆ. ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಪರಿಶೀಲಿಸಿದರೂ ಮತ್ತಷ್ಟು ಸುಧಾರಣೆಗಳಾಗಬೇಕಿದೆ ಎಂಬುದಂತು ಸ್ಪಷ್ಟ.

ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಳು ಪ್ರಧಾನವಾಗಿರುವ ಈ ಮನಃಶಾಸ್ತ್ರೀಯ ಪ್ರಕ್ರಿಯೆಯು  ಶಿಶು ಕೇಂದ್ರಿತವೆಂಬುದು ಎಲ್ಲರಿಗೂ ತಿಳಿದಿದ್ದೇ ಆಗಿದೆ. ಮಗುವಿಗೆ ಇರುವ ಅರಿವಿನ ಜೊತೆಗೆ ಸಂಬಂಧೀಕರಿಸಿ ಹೊಸದೊಂದು ಪರಿಕಲ್ಪನೆಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಮಗುವೇ ಪ್ರಧಾನ. ಮಗುವನ್ನು ಕೇಂದ್ರವಾಗಿಟ್ಟುಕೊಂಡು ಪರಿಣಾಮಕಾರಿ ಕಲಿಕೆಗೆ ಅವಿರತವಾಗಿ ಪರಿಶ್ರಮಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಗುರುಚೇತನ ಕಾರ್ಯಕ್ರಮದಡಿಯಲ್ಲಿ  ಮಾಡ್ಯುಲ್ಗಳ ತಯಾರಿಕೆ ಪರಿಶೀಲಿಸುವಿಕೆ ಅನುಕೂಲಿಸುವ ವಿವಿಧ ಉಪಕ್ರಮಗಳ ಹೆಣಿಕೆ, ತರಬೇತಿ ಆಯೋಜನೆ ಹೀಗೆ ನಿರಂತರವಾಗಿ ಕಾರ್ಯಕ್ರಮಗಳು ನಡೆದು ಶಿಕ್ಷಕರು ಸಂಪನ್ಮೂಲಭರಿತರಾಗುತ್ತಿದ್ದಾರೆ

 ಕೇವಲ ಪಾಠ ಮುಗಿಸುವುದಷ್ಟೇ ಉಪಾಧ್ಯಾಯನ ಕಾಯಕವಲ್ಲ. ಮಗುವಿನಲ್ಲಿ ಯಾವ ಸಾಮಥ್ರ್ಯದ ಬೆಳವಣಿಗೆ ಆಗಬೇಕು? ಅದಕ್ಕಾಗಿ ಶಿಕ್ಷಕರು ಮಾಡಬೇಕಾದುದೇನು? ಅಧ್ಯಾಯದ ಆಯ್ಕೆ, ಹೇಗೆ ಅನುಕೂಲಿಸಬೇಕೆಂಬುದರ ಅನುಸಂಧಾನ, ವಿವಿಧ ಚಟುವಟಿಕೆಗಳ ರೂಪಣೆ, ಅವುಗಳನ್ನು ತರಗತಿಯಲ್ಲಿ ಅನುಷ್ಠಾನಗೊಳಿಸುವಿಕೆ ಅಂತೆಯೇ ಮಗು ಔಪಚಾರಿಕ ಸನ್ನಿವೇಶದಲ್ಲಿ ಮತ್ತು ಅನೌಪಚಾರಿಕವಾಗಿ ತನ್ನ ಸಮಾಜದಲ್ಲಿ ಹೇಗೆ ಅನ್ವಯಿಸಿಕೊಳ್ಳುತ್ತಿದ್ದಾನೆ ಎಂಬುದರ ಸೂಕ್ಷ್ಮಾವಲೋಕನ ಇವುಗಳೆಲ್ಲವೂ ಪ್ರಧಾನ ಪಾತ್ರವಹಿಸುತ್ತದೆ.

ಕಲಿಯಬೇಕಾದ ಪರಿಕಲ್ಪನೆಯನ್ನು ಮಗು ಎಷ್ಟರ ಮಟ್ಟಿಗೆ ಕಲಿತನೆಂಬುದನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಜೊತೆಗೆ ತಾನು ಅನುಕೂಲಿಸಿದುದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದೂ ಒಳಗೊಂಡಂತೆ ತನ್ನನ್ನೂ ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳಬೇಕು. ಇದರಿಂದ ಮಕ್ಕಳ ಕಲಿಕೆಯಲ್ಲಿ ಅಮೂಲಾಗ್ರ ಬದಲಾವಣೆ ಯಾಗುವುದಲ್ಲದೆ ಶಿಕ್ಷಕರ ಬೋಧನೆಯಲ್ಲಿಯೂ ವಿವಿಧ ರೀತಿಯ ಗುಣಾತ್ಮಕ ಮಾರ್ಪಾಟುಗಳು ಸಾಧ್ಯ.

ಎಷ್ಟೇ ಪದ್ಧತಿಗಳು ಅನುಸಂದಾನಗೊಂಡರೂ ಸಹ ಸಾಂಪ್ರದಾಯಿಕ ವಿಧಾನವನ್ನು ಬಿಡಲು ಸಾದ್ಯವಾಗುವುದಿಲ್ಲ. ಪ್ರಶ್ನೋತ್ತರ ಪದ್ದತಿಯು ಸಾಂಪ್ರದಾಯಿಕ ಪದ್ಧತಿಯಾದರೂ ಸಹ ಅದನ್ನು ಬಿಡಲು ಸಾಧ್ಯವೇ ಇಲ್ಲ. ಏಕೆ? ಹೇಗೆ? ಹಾಗಾದರೆ? ಹಾಗಾಗದಿದ್ದರೆ ಹೇಗೆ? ಈ ರೀತಿಯ ಚಿಂತನೋದ್ದೀಪನ ಪ್ರಶ್ನೆಗಳು ನಿರಂತರ ಮೂಡಬೇಕು. ಮಕ್ಕಳಿಗೆ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ಅವರೇ ಉತ್ತರಗಳನ್ನು ಕಂಡುಕೊಳ್ಳುವ ರೀತಿಯಲ್ಲಿ ಶಿಕ್ಷಕರು ಸಂದರ್ಭವನ್ನು ಮಾರ್ಪಡಿಸಬೇಕು. ಚಿಂತಿಸಲು ಉತ್ತೇಜನ ನೀಡಬೇಕು. ನಾಟಕೀಕರಣ ಪದ್ಧತಿ, ಕ್ರೀಡಾ ಪದ್ಧತಿ, ಯೋಜನಾ ಪದ್ಧತಿ ಇವುಗಳೆಲ್ಲವೂ ಹಳೆಯವೇ ಆದರೂ ಸಹ ಇಂದಿನ ನವೀನತೆಯಲ್ಲಿಯೂ ಸ್ಥಾನ ಪಡೆದುಕೊಂಡಿವೆ. ಇವುಗಳನ್ನೇ ಹೊಸ ರೀತಿಯಲ್ಲಿ ಆಯೋಜಿಸಿ ಪಡೆಯುವ ಫಲಶೃತಿಯಂತೂ ಅನುಪಮವಾದದ್ದು ಎಂದರೆ ತಪ್ಪಾಗಲಾರದು.

Related Posts