ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವ...
 - ಡಾ. ವೆಂಕಟೇಶ್ ವಿ.

ಬದುಕಿನ ಅತ್ಯಂತ ಸುಂದರ ಪುಷ್ಪವೇ ಕ್ರೀಡೆ. ಇಂದಿನ ಆಧುನಿಕ ಜಗತ್ತು ನಿರೀಕ್ಷಿಸುತ್ತಿರುವ ಶಾಂತಿ, ಸೌಹಾರ್ದತೆ ಮತ್ತು ಸಾಂಸ್ಕೃತಿಕ ಜೀವನ ಶೈಲಿಯ ಪ್ರತಿಬಿಂಬ. ಹೀಗೆ ಮಾನವ ಸಮೂಹದ ಸಂಪೂರ್ಣತೆಗೆ ಆಟ-ಕೂಟಗಳ ಕೊಡುಗೆ ಅಪಾರ. ದೈಹಿಕ ಶಿಕ್ಷಣ ಎಂಬುದು ಕ್ರೀಡಾಪಟುವಿನ ಉಸಿರಾಗಿದೆ. ಇಂತಹ ಶಿಕ್ಷಣವು ಒಬ್ಬವ್ಯಕ್ತಿ ಜೀವನಕ್ಕೆ ತಳಪಾಯ ಹಾಕುವುದರೊಂದಿಗೆ ಆತನಸರ್ವತೋಮುಖ ಅಭಿವೃದ್ಧಿಗೆ ನೇರ ಹಾಗೂ ಪರೋಕ್ಷವಾಗಿಸಹಕಾರಿಯಾಗುತ್ತದೆ. ಕ್ರೀಡೆಗಳಲ್ಲಿ ಮೂಲತಃ ವೈವಿಧ್ಯತೆಗಳಿದ್ದರೂಆರೋಗ್ಯ ಪೂರ್ಣ ಸಮಾಜದ ರಚನೆಯಲ್ಲಿ ನಾನಾ ವಿಧದಲ್ಲಿ ನಮಗೆ
ನೆರವಾಗುತ್ತದೆ.

ದೈಹಿಕ ಶಿಕ್ಷಣವು ದೇಹಾರೋಗ್ಯಕ್ಕೆ ಬೇಕಾಗಿರುವ ಪ್ರಾಕೃತಿಕ ಚಿಕಿತ್ಸೆಯಾಗಿದೆ. ಇವು ದೈಹಿಕ, ಮಾನಸಿಕ ದೃಢತೆಗಾಗಿ, ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಹಾಗೂ ನವೋಲ್ಲಾಸ, ಉತ್ಸಾಹಗಳಿಗಾಗಿ ನಾವುನಡೆಸುವ ಒಂದು ದೈಹಿಕ ಕ್ರಿಯೆಯಾಗಿದೆ. ಇದೊಂದು ಆಧುನಿಕಜಗತ್ತು ಅಂಗೀಕರಿಸಿದ, ಒಟ್ಟಾರೆ ಶಿಕ್ಷಣದ ಒಂದು ಭಾಗವೂ ಆಗಿದೆ,ಮನುಷ್ಯನ ದೇಹವನ್ನು ಸಮತೋಲನದಲ್ಲಿಡಲು ಮತ್ತು ತೃಪ್ತಿಕರ ದೀರ್ಘ ಜೀವನ ನಡೆಸಲು ಆಟೋಟಗಳು ಅಗತ್ಯವಾಗಿದೆ. ವಿದ್ಯಾರ್ಥಿವಿದ್ಯಾರ್ಥಿನಿಯರ ಶಕ್ತಿ ಮತ್ತು ಸಾಮಥ್ರ್ಯಗಳನ್ನು ಯೋಗ್ಯ ರೀತಿಯಲ್ಲಿಉಪಯೋಗಿಸಿಕೊಳ್ಳಲು  ಅನುಕೂಲವಾಗುತ್ತದೆ.  ಅವರೊಂದಿಗೆ ಭೌದ್ಧಿಕ ಹಾಗೂ ಆಧ್ಯಾತ್ಮಿಕ ಜೀವನ ಕ್ರಮಗಳನ್ನು ನಡೆಸಲುದಾರಿದೀಪವಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಕ್ರೀಡಾಂಗಣವನ್ನುಪ್ರವೇಶಿಸಬೇಕಾಗಿದೆ.

ಶಿಕ್ಷಣ ತಜ್ಞ ಜೆ.ಪಿ. ಥೋಮಸ್ರವರ ಪ್ರಕಾರ ಒಂದು ಮಗುವಿನ ಸಮಗ್ರ ಅಭಿವೃದ್ಧಿಗೆ ಬೇಕಾಗಿರುವ ಪರಿಸರ, ದೇಹ, ಬುದ್ಧಿ, ಉತ್ಸಾಹಗಳು ದೈಹಿಕ ಶಿಕ್ಷಣವೆಂಬ ಚಟುವಟಿಕೆಗಳಿಂದ ಸಾಧ್ಯ ಎಂಬುದು ಅವರ ನಿಲುವಾಗಿತ್ತು. ಇದರಿಂದಲೇ ಮಾನವ ತನ್ನ ಸಂಪೂರ್ಣ ಪ್ರಗತಿಯನ್ನು ಸಾಧಿಸಬಹುದು. ಇಷ್ಟೊಂದು ಮಹತ್ವವವಿರುವ ಈ ಶಿಕ್ಷಣವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬನೂ ತನ್ನ ದೈನಂದಿನ ಜೀವನದಲ್ಲಿ ವ್ಯಾಯಾಮಕ್ಕಾಗಿ ಕನಿಷ್ಟ ಅರ್ಧಗಂಟೆಯನ್ನಾದರೂ ಮೀಸಲಿಟ್ಟರೆ ಮಾತ್ರ ವೈದ್ಯರಿಗೆ ನೀಡುವ ಹಣವನ್ನು ಉಳಿಸಬಹುದು. ಇಂದು ವೈಜ್ಞಾನಿಕ ಜಗತ್ತು ಕೂಡ ವ್ಯಾಯಾಮಕ್ಕೆ ವಿಶೇಷ ಮಹತ್ವವನ್ನು ನೀಡಿದೆ.

ಆಧುನಿಕ ಯುಗವನ್ನು ಯಂತ್ರಗಳೇ ಆಳುತ್ತಿದ್ದು, ಅವು ಮಾನವನಲ್ಲಿ ಜಡತ್ವವನ್ನುಂಟುಮಾಡಿದೆ.  ಇಂತಹ  ಐಷಾರಾಮಿ  ಜಗತ್ತಿನಲ್ಲಿ ನಾಲ್ಕು ಹೆಜ್ಜೆ ನಡೆಯಲೂ ಹಿಂದು ಮುಂದು ನೋಡುವ ಮನುಷ್ಯ ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲಗೊಳ್ಳುವುದನ್ನು ಗಮನಿಸಲಾರ ಮತ್ತು ನಾಗಿಯೇ ಜಡತ್ವವನ್ನು ಆಹ್ವಾಸಿಕೊಳ್ಳುತ್ತಾನೆ. ಕೊನೆಗೆ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಆದುದರಿಂದ ಅಂತಹ ಸಮಸ್ಯೆಗಳಿಂದ ದೂರ ಸರಿಯಲು ದೈಹಿಕ ವ್ಯಾಯಾಮಗಳಿಂದ ಮಾತ್ರ ಸಾಧ್ಯ. ನಮ್ಮ ಜೀವನದ ಕೊನೆಯ ದಿನಗಳನ್ನು ಆನಂದಮಯವಾಗಿರಿಸಬೇಕಾದರೆ ವಿದ್ಯಾರ್ಥಿ ಜೀವನದಲ್ಲಿಯೇ ಕ್ರೀಡೆಯತ್ತ ನೋಟ ಹರಿಸಬೇಕು.

ಓದುವ ಸಮಯದಲ್ಲಿ ವಿದ್ಯಾರ್ಥಿಗಳು ಆಟೋಟಗಳತ್ತ ಗಮನ ಹರಿಸಿದರೆ ಅದರಿಂದ ಓದಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಗೂ ಹೆತ್ತವರ ಭಾವನೆ. ಆದರೆ ದೈಹಿಕ ಶಿಕ್ಷಣವೂ ಶಿಕ್ಷಣದ ಒಂದು ಅಂಗವಾಗಿರುವ ಕಾರಣ ವಿದ್ಯಾರ್ಜನೆಯ ಕಾಲದಲ್ಲಿಯೇ ಒಂದಷ್ಟು ನಿಗದಿತ ಸಮಯವನ್ನು ಯಾವುದಾದರೊಂದು ಆಸಕ್ತಿಯುಳ್ಳ ಕ್ರೀಡೆಯಲ್ಲಿ ಭಾಗವಹಿಸುವುದರ ಮುಖಾಂತರ ತನ್ನಲ್ಲಿರುವ ಪ್ರತಿಭೆಯನ್ನು ಪ್ರದಶರ್ಿಸಲು ಮುಂದಾಗಬೇಕು. ಇದನ್ನೇ ಆಧುನಿಕ ಸಮಾಜವು ಯುವಪೀಳಿಗೆಯಿಂದ ನಿರೀಕ್ಷಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸರಕಾರವೂ ಕೂಡಾ ಕ್ರೀಡಾಪಟುವಿಗೆ ನೆರವನ್ನು ನೀಡತೊಡಗಿದೆ. ಈ ಆಧುನಿಕ ಪೈಪೋಟಿಯ ಜಗತ್ತಿನಲ್ಲಿ ನಾವಿರುವಾಗ ಶಾಲೆಯಲ್ಲಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಲು ನಾವು ಶಾಲಾ ಹಂತದಿಂದಲ್ಲಿಯೇ ಮುಂದಾಗಬೇಕು.

ಡಾ. ಥಾಮಸ್ವುಡ್ ಪ್ರಕಾರ ಮನೆ, ಶಾಲೆ ಅಥವಾ ಇನ್ನಿತರ ಸಾಮಾಜಿಕ ವೈಯಕ್ತಿಕ ಅಥವಾ ಸಾಮಾಜಿಕ ಆರೋಗ್ಯದ ಬಗ್ಗೆ ಯೋಗ್ಯವಾದ ಮನೋವೃತ್ತಿ ಜ್ಞಾನ ಹಾಗೂ ಅಭ್ಯಾಸಗಳು ಮತ್ತು ಅನುಭವಗಳ ಒಟ್ಟು ಪರಿಣಾಮವೇ ಆರೋಗ್ಯ, ಯೋಗ ಶಿಕ್ಷಣ.

ಭಾರತದಲ್ಲಿ ದೈಹಿಕ ಶಿಕ್ಷಣ: ಭಾರತದಲ್ಲಿ ತನ್ನದೇ ಆದ ವ್ಯಾಯಾಮಕ್ರಮ, ಸಂರಕ್ಷಕ ತಂತ್ರ, ಮನೋರಂಜಕ ಕ್ರೀಡೆ ನೃತ್ಯಗಳಿವೆ ಎಂಬುದನ್ನು ಅವಲೋಕಿಸಬೇಕಾದರೆ ಭಾರತದಲ್ಲಿಯ ಏಕದೇಶಿಯವಾದ ಚಟುವಟಿಕೆಗಳಾವುವು? ಬುದನ್ನು ಪ್ರಾಚೀನ ಇತಿಹಾಸದಿಂದಲೇ ತಿಳಿದುಕೊಳ್ಳಬೇಕಾಗುತ್ತದೆ. ಏಕೆಂದರೆ ಆಸನ-ಪ್ರಾಣಾಯಾಮಗಳಂಥ ಯೋಗದ ಕ್ರಮಗಳಾಗಲೀ, ಸೂರ್ಯ ನಮಸ್ಕಾರ, ದಂಡ, ಬೈಟಕ್ ನಂತಹ ವ್ಯಾಯಾಮ ಕ್ರಮಗಳಾಗಲಿ, ಮಲ್ಲಕಂಬ, ಭಾರ ಎತ್ತುವುದು ಇಂತಹ ಕಸರತ್ತಿನ ರೀತಿಗಳಾಗಲಿ, ನೃತ್ಯಗಳಾಗಲೀ ನಮ್ಮ ಭಾರತ ದೇಶದ ದೈಹಿಕ ಶಿಕ್ಷಣದ ವಿಶಿಷ್ಟತೆಯನ್ನು ಎತ್ತಿ ತೋರಿಸುತ್ತವೆ.

ಸ್ವಾತಂತ್ರ್ಯಾನಂತರದ ದೈಹಿಕ ಶಿಕ್ಷಣದ ಬೆಳವಣಿಗೆ: ಸ್ವಾತಂತ್ರ್ಯ ನಂತರ ಭಾರತವು ದೈಹಿಕ ಶಿಕ್ಷಣ ಹಾಗೂ ಆಟ-ಓಟಗಳ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಿತು. ದೈಹಿಕ ಶಿಕ್ಷಣ ಪ್ರಗತಿಗಾಗಿ ಆಯೋಗ ನೇಮಿಸುವ ವ್ಯವಸ್ಥಿತ ಯೋಜನೆಗಳನ್ನು ಹಾಕಿಕೊಂಡಿತು. ನಿಶ್ಚಿತ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕೆ ತಜ್ಞರ ಸಮಿತಿಯನ್ನು ನೇಮಕ ಮಾಡಿತು. ಅವರ ವರದಿಯ ಪ್ರಕಾರ ದೈಹಿಕ ಶಿಕ್ಷಣವು ಹಳ್ಳಿಮಟ್ಟದಿಂದ ಪಟ್ಟಣದವರೆಗೆ ವಿಸ್ತರಿಸಿ, ಗ್ರಾಮಾಂತರ, ನಗರ, ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದವರೆಗೆ ಕ್ರೀಡೆಗಳು ನಡೆಯಲು ಕಾರಣವಾದವು.

ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವ... ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವ...

Related Posts