ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ವೃತ್ತಿಪರ ನೈತಿಕತೆಯ ನೀತಿ ಸಂಹಿತೆ
* ಉದ್ದೇಶ ಮತ್ತು ವ್ಯಾಪ್ತಿ: ಶಿಕ್ಷಣ ಸಂಸ್ಥೆಯಲ್ಲಿನ ಬೋಧಕ, ಬೋಧಕೇತರ ಮತ್ತು ಹೊರಗುತ್ತಿಗೆ (ಇನ್ನು ಮುಂದೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳೆಂದು ಉಲ್ಲೇಖಿಸಲಾಗುವುದು) ಸಿಬ್ಬಂದಿಗಳಿಗೆ ಅವರ ವರ್ತನೆ ಮತ್ತು ನೈತಿಕತೆಯ ಬಗ್ಗೆ ಮಾರ್ಗದರ್ಶನ ನೀಡಲು ನೀತಿ ಸಂಹಿತೆಯನ್ನು ರೂಪಿಸಿ, ಪಾಲಿಸಲು ಸಂಸ್ಥೆಯು ಬದ್ಧವಾಗಿರಬೇಕೆಂದು ನಿರೀಕ್ಷಿಸಲಾಗಿದೆ.
* ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳನ್ನು ವಿಶೇಷ ಹಾಗೂ ಆದರ್ಶಪ್ರಾಯ ಸ್ಥಾನದಲ್ಲಿ ಗುರುತಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಸಮುದಾಯದ ಸದಸ್ಯರ ವರ್ತನೆ ಮತ್ತು ನಡವಳಿಕೆಯ ಮೇಲೆ ಪ್ರಭಾವ ಬೀರುವ ಮಾದರಿಯ ವ್ಯಕ್ತಿಗಳಾಗಿರುವುದು. ಆದುದರಿಂದ ಸದರಿಯವರ ನಡವಳಿಕೆಯು ಸಮಾಜದಲ್ಲಿನ ಉತ್ತಮ ನಡವಳಿಕೆಗಳಿಗೆ ಉದಾಹರಣೆಯಾಗುವಂತಿರಬೇಕು. ಒಬ್ಬ ನಾಗರೀಕನಾಗಿ ಮತ್ತು ಶಿಕ್ಷಣ ಸಂಸ್ಥೆಯ ಸದಸ್ಯನಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಾಲೆಯ ಒಳಗೆ ಮತ್ತು ಹೊರಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರೊಂದಿಗೆ ಅವರ ಗೌರವ, ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು.
ಈ ಮಾರ್ಗಸೂಚಿಗಳ ಆಧಾರದಲ್ಲಿ ಶಿಕ್ಷಣ ಸಂಸ್ಥೆಯಲ್ಲಿನ ಆಡಳಿತ ಮಂಡಳಿಯು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ನೀತಿಸಂಹಿತೆಯನ್ನು ವ್ಯಾಖ್ಯಾನಿಸುವುದು. ಸರ್ಕಾರಿ ಶಾಲೆಗಳಾಗಿದ್ದಲ್ಲಿ, ಶಿಕ್ಷಣ ಇಲಾಖೆಯು ಸಿಬ್ಬಂದಿಗಳಿಗೆ ನೀತಿಸಂಹಿತೆಯನ್ನು ವ್ಯಾಖ್ಯಾನಿಸುವುದು. ಈ ನೀತಿಸಂಹಿತೆಯು ಶಿಕ್ಷಣ ಸಂಸ್ಥೆಯ ಮಕ್ಕಳ ರಕ್ಷಣಾ ನೀತಿಯ ಭಾಗವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕರಡು ಎನ್ಸಿಟಿಇ ಮಾರ್ಗಸೂಚಿ 2010ನ್ನು ಉಲ್ಲೇಖಿಸುವುದು.
ಕಾನೂನು ಮತ್ತು ಸಂವಿಧಾನದ ಕಟ್ಟುಪಾಡುಗಳ ಅನುಪಾಲನೆ
ಎಲ್ಲಾ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಹಾಗೂ ಹೊರಗುತ್ತಿಗೆಯ ಸಂಸ್ಥೆಗಳಿಂದ ನೇಮಿಸಲ್ಪಟ್ಟ ಗುತ್ತಿಗೆ ಸಿಬ್ಬಂದಿಗಳು ಭಾರತೀಯ ದಂಡ ಸಂಹಿತೆಯು ಸೇರಿದಂತೆ ಪ್ರಸ್ತುತ ಜಾರಿಯಲ್ಲಿರುವ ಶಾಸನಗಳಡಿ ಒಳಪಟ್ಟಿರುವರು.
ಮಗುವಿನ ರಕ್ಷಣೆಗೆ ಸಕಾರಾತ್ಮಕ ಉದಾಹರಣೆಯನ್ನು ಸ್ಥಾಪಿಸುವುದು
* ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವರ್ತನೆ ಮತ್ತು ನೈತಿಕತೆಯು ಶಾಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳು ಅನುಸರಿಸಲು ಮಾದರಿಯಾಗಿರುವುದು.
* ಮಕ್ಕಳಿಗೆ ಸಂಬಂಧಿಸಿದ ಮೌಖಿಕ ಮತ್ತು ಮೌಖಿಕೇತರ ಸಂವಹನವು ಮಕ್ಕಳ ಸಂವೇದಿ ಮತ್ತು ವಯಸ್ಸಿಗನುಗುಣವಾಗಿರಬೇಕಲ್ಲದೇ, ಯಾವುದೇ ರೀತಿಯಲ್ಲಿಯೂ ಮಗುವಿಗೆ ಹೆದರಿಕೆ, ಭಯ, ಅವಮಾನ ಅಥವಾ ಘನತೆಗೆ ಧಕ್ಕೆ ತರುವಂತಿರಬಾರದು. ಸಂವಹನವು ಮಗುವಿನ ಪೋಷಕರು ಮತ್ತು ಪಾಲಕರನ್ನು ಸಹ ಕೀಳಾಗಿ ಅಥವಾ ಕಡೆಗಣಿಸುವಂತಿರಬಾರದು.
* ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲಾ ಸಿಬ್ಬಂದಿಗಳು ತಮ್ಮ ಮೇಲೆ ಯಾವುದೇ ರೀತಿಯ ನಿಂದನೆ ಮತ್ತು ವೃತ್ತಿಪರವಲ್ಲದ ನೈತಿಕತೆಯ ಆಪಾದನೆಗಳು ಬರದಂತೆ ನಡೆದುಕೊಳ್ಳುವುದು.
* ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಸಿಬ್ಬಂದಿಗಳು ಶಾಲೆಯಲ್ಲಿನ ಯಾವುದೇ ಮಕ್ಕಳು, ವಯಸ್ಕರು ಅಥವಾ ಸಮುದಾಯದಲ್ಲಿನ ಯಾವುದೇ ಮಗುವನ್ನು ವಯಸ್ಸು, ಲಿಂಗತ್ವ, ಜಾತಿ, ವರ್ಗ, ಧರ್ಮ, ವಿಕಲತೆ ಮುಂತಾದವುಗಳ ಆಧಾರದಲ್ಲಿ ತಾರತಮ್ಯ ಸಂಭವಿಸದಿರುವುದನ್ನು ಖಾತರಿಪಡಿಸಿಕೊಳ್ಳುವುದು. ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿ ಯಾವುದೇ ಮಗುವಿಗೆ ವಿಶೇಷ ಆದ್ಯತೆಯನ್ನು ನೀಡದಿರುವುದನ್ನು ಸಹ ಖಾತರಿಪಡಿಸಿಕೊಳ್ಳುವುದು.
* ಸಹೋದ್ಯೋಗಿ ಅಥವಾ ಹೊರಗುತ್ತಿಗೆ ಸಂಸ್ಥೆಯ ನೌಕರರಿಂದ ನೀತಿಸಂಹಿತೆ ಉಲ್ಲಂಘನೆಯ ಬಗ್ಗೆ ಅನುಮಾನ ಅಥವಾ ಮಾಹಿತಿ ಕಂಡುಬಂದಲ್ಲಿ, ತಕ್ಷಣವೇ ಮಕ್ಕಳ ರಕ್ಷಣಾಧಿಕಾರಿಗೆ ವರದಿ ಮಾಡುವುದು.
ಮಕ್ಕಳ ರಕ್ಷಣೆ ಹಾಗೂ ಕ್ಷೇಮ
* ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿಗಳೂ ತಮ್ಮ ಪರಿವೀಕ್ಷಣೆಯಡಿ ಬರುವ ವಿದ್ಯಾರ್ಥಿಗಳ ರಕ್ಷಣೆ ಮತ್ತು ಯೋಗಕ್ಷೇಮದ ಗುರಿ ಹೊಂದಿರುವುದನ್ನು ಖಾತರಿಪಡಿಸಿಕೊಳ್ಳುವುದು.
* ಶಿಕ್ಷಣ ಸಂಸ್ಥೆ ಮತ್ತು ಶಾಲೆಯ ಆವರಣದಲ್ಲಿ ಮಗುವಿನ ನಿಂದನೆಯೂ ಸೇರಿದಂತೆ ಸುರಕ್ಷತೆಯ ಉಲ್ಲಂಘನೆಯಾಗದಂತೆ ಮಗುವನ್ನು ರಕ್ಷಿಸುವ ಕರ್ತವ್ಯ ಮತ್ತು ಜವಾಬ್ದಾರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಯದಾಗಿರುತ್ತದೆ ಹಾಗೂ ಸದರಿ ಘಟನೆಗಳು ಸಂಭವಿಸಿದಾಗ ಮಾಹಿತಿಯನ್ನು ಶಿಕ್ಷಣ ಸಂಸ್ಥೆಯ ಮಕ್ಕಳ ರಕ್ಷಣಾಧಿಕಾರಿ ಅಥವಾ ಸಂಸ್ಥೆಯ ಮುಖ್ಯಸ್ಥರಿಗೆ ವರದಿ ಮಾಡುವುದನ್ನು ಸಹ ಒಳಗೊಂಡಿರುತ್ತದೆ.
* ಶಾಲೆಯಲ್ಲಿನ ಯಾವುದೇ ಮಗುವಿಗೆ ಭಯ, ಆಘಾತ, ಗಾಯ, ಭೌತಿಕ ದಂಡನೆ, ಲೈಂಗಿಕ ಹಲ್ಲೆ, ಮಾನಸಿಕ ಮತ್ತು ಭಾವನಾತ್ಮಕ ಶೋಷಣೆ ಮುಂತಾದವುಗಳಿಂದ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ದೂರ ಉಳಿಯುವುದು.
* ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಮಗುವು ನೀಡಿರುವ ಮಾಹಿತಿ ಅಥವಾ ಮಗುವಿಗೆ ಸಂಬಂಧಿಸಿದ ಘಟನೆಯ ವಿವರಗಳ ಗೌಪ್ಯತೆಯನ್ನು ಕಾಪಾಡುವುದು.
* ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಎಲ್ಲಾ ವಿಧದ ದೌರ್ಜನ್ಯ (ಭೌತಿಕ, ಭಾವನಾತ್ಮಕ, ಲೈಂಗಿಕ ಮತ್ತು ನಿರ್ಲಕ್ಷ), ಶೋಷಣೆ ಮತ್ತು ಅಧಿಕಾರ ದುರುಪಯೋಗವಾಗದಂತೆ ತೀವ್ರ ನಿಗಾವಹಿಸುವುದು ಮತ್ತು ಶೂನ್ಯ ಸಹನೆಯನ್ನು ಹೊಂದಿರುವುದು. ಇದರಲ್ಲಿ ವಿದ್ಯಾರ್ಥಿಗಳು ಅಥವಾ ವಯಸ್ಕರಿಂದ ಬೆದರಿಕೆ ಮತ್ತು ಗೇಲಿ ಮಾಡುವುದು ಸಹ ಸೇರಿರುತ್ತದೆ.
* ರಾಷ್ಟ್ರಿಯ ಮಕ್ಕಳ ಹಕ್ಕುಗಳ ಆಯೋಗ (ಎನ್ಸಿಪಿಸಿಆರ್) ಹೊರಡಿಸಿರುವ ಶಾಲೆಗಳಲ್ಲಿ ದೈಹಿಕ ಶಿಕ್ಷೆಯನ್ನು ನಿರ್ಮೂಲನೆ ಮಾಡುವ ಮಾರ್ಗಸೂಚಿಗಳಲ್ಲಿ ವ್ಯಾಖ್ಯಾನಿಸಿರುವಂತೆ, ಮಕ್ಕಳನ್ನು ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಯಾವುದೇ ರೀತಿಯ ದೈಹಿಕ ದಂಡನೆಯನ್ನು ವಿಧಿಸುವುದರಿಂದ ದೂರವಿರುವುದು.
* ಶಾಲೆಗಳಲ್ಲಿ ಮಕ್ಕಳೊಂದಿಗೆ ವಯಸ್ಕರು ನಡೆಸುವ ಸಂಭಾಷಣೆಯನ್ನು ಎಲ್ಲರಿಗೂ ಗೋಚರಿಸುವಂತಹ ವ್ಯವಸ್ಥೆ (ತೆರೆದ ಬಾಗಿಲು / ಕಿಟಕಿ ಅಥವಾ ಪಾರದರ್ಶಕ ಬಾಗಿಲುಗಳನ್ನು ಹೊಂದಿರುವ ಕೋಣೆ)ಯಲ್ಲಿ ನಡೆಸುವುದು ಹಾಗೂ ಆ ಸಂದರ್ಭದಲ್ಲಿ ಕನಿಷ್ಠ ಒಬ್ಬ ಇತರೆ ವಯಸ್ಕ ಮಗುವಿನೊಂದಿಗೆ ಹಾಜರಿರುವುದು. ಒಂದು ವೇಳೆ ಬಾಗಿಲು ಮುಚ್ಚಿದ ಕೋಣೆಯಲ್ಲಿ ಮಗುವಿನೊಂದಿಗೆ ಚರ್ಚೆ ಅಥವಾ ಸಭೆ ನಡೆಸಬೇಕಾದಲ್ಲಿ ಅಧಿಕೃತವಾಗಿ ನೇಮಿಸಲಾದ ಸಿಬ್ಬಂದಿ / ಪೋಷಕ / ಪಾಲಕರು ಯಾವಾಗಲೂ ಹಾಜರಿರುವುದನ್ನು ಕಡ್ಡಾಯಗೊಳಿಸಲಾಗಿದೆ.
* ಭೌತಿಕ ಭೇಟಿಯು ಕೇವಲ ಅಗತ್ಯ ಮತ್ತು ಸಂದರ್ಭೋಚಿತವಾಗಿರುವುದು ಮತ್ತು ಪರಿಸ್ಥಿತಿ, ಲಿಂಗತ್ವ, ವಯಸ್ಸು, ಸಾಮಥ್ರ್ಯ, ಬೆಳವಣಿಗೆಯ ಹಂತ, ಮಗುವಿನ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳುವುದು. ಭೇಟಿಯು ಗೌರವಯುತವಾಗಿರಬೇಕು ಮತ್ತು ಮಗುವಿಗೆ ಅಹಿತಕರ, ಬೆದರಿಕೆ, ತನಿಖೆ ಮತ್ತು ಲೈಂಗಿಕತೆಯಂತಹ ಸ್ವಭಾವವೆಂದೆನಿಸಬಾರದು.
* ಮಗುವಿನ ವೈಯಕ್ತಿಕ ಮತ್ತು ಖಾಸಗಿ ಚಟುವಟಿಕೆಗಳಾದ ಸ್ನಾನ ಮಾಡುವುದು, ಬಟ್ಟೆ ಬದಲಿಸುವುದು, ಶೌಚಾಲಯ ಬಳಕೆ ಮತ್ತಿತರ ಸಂದರ್ಭಗಳಲ್ಲಿ ಮಗುವಿನ ಏಕಾಂತತೆಯನ್ನು ಖಾತರಿಪಡಿಸುವುದು ಹಾಗೂ ವೈದ್ಯಕೀಯ ತುತರ್ು ಪರಿಸ್ಥಿತಿ ಮತ್ತು ಅವಶ್ಯಕ ಸಂದರ್ಭಗಳಲ್ಲಿ ಮಗುವನ್ನು ಸಂಪರ್ಕಿಸಿ ಸಹಾಯ ಮಾಡುವುದು.
* ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಸಂಸ್ಥೆಯ ಆಡಳಿತ ಮಂಡಳಿಯ ಅನುಮತಿ ಇಲ್ಲದೆ ಹಾಗೂ ಪೋಷಕರ ಗಮನಕ್ಕೆ ತಾರದೆ, ಶಾಲಾ ಅವಧಿಯ ನಂತರ ಅಥವಾ ರಜಾದಿನಗಳಲ್ಲಿ ಮಗುವನ್ನು ಹೊರಗಡೆ ಸಂಪರ್ಕಿಸಬಾರದು.
* ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಯಾವುದೇ ಸನ್ನಿವೇಶಗಳಲ್ಲಿ ಯಾವುದೇ ಕಾರಣಕ್ಕೂ, ಮಗುವಿನ/ಮಕ್ಕಳ ಅನಧಿಕೃತ ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣ ಮಾಡುವುದರಿಂದ ದೂರ ಉಳಿಯುವುದು.
* ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಮಾಹಿತಿ ತಂತ್ರಜ್ಞಾನವನ್ನು ಬಳಸುವಾಗ ಸೈಬರ್ ರಕ್ಷಣಾ ನಿಯಮಗಳನ್ನು ಅನುಸರಿಸುವುದು ಮತ್ತು ಎಚ್ಚರಿಕೆಯಿಂದ ಅಭ್ಯಾಸ ಮಾಡುವುದು. ಶಿಕ್ಷಣ ಸಂಸ್ಥೆಯ ಸಿಬ್ಬಂದಿಯ ಅಪ್ಪಣೆಯಿಲ್ಲದೆ ಯಾವುದೇ ವ್ಯಕ್ತಿಗೆ, ಯಾವುದೇ ಮಾಹಿತಿ ಅಥವಾ ಸಿಸಿಟಿವಿಯಲ್ಲಿನ ಮಾಹಿತಿಯನ್ನು ನೀಡುವುದರಿಂದ ದೂರವಿರುವುದು. ಮೊಬೈಲ್ ಅಪ್ಲಿಕೇಷನ್ನಿಂದ ಮಕ್ಕಳು ಮತ್ತು ಪೋಷಕರು / ಪಾಲಕರ ನಡುವಿನ ಸಂವಾದ ಮತ್ತು ಸಂವಹನವು ಶಿಕ್ಷಣ ಸಂಸ್ಥೆಯ ಆಡಳಿತವು ಅನುಮೋದಿಸಿರುವ ಅಪ್ಲಿಕೇಷನ್ಸ್ನ ಮೂಲಕವೇ ನಿರ್ವಹಿಸುವುದು.
No comments:
Post a Comment