ವಸತಿ ನಿಲಯ/ಶಾಲೆಗಳಲ್ಲಿ ವಹಿಸಬೇಕಾದ ಕ್ರಮಗಳು
* ವಸತಿನಿಲಯಗಳನ್ನು ಪ್ರಾರಂಭಿಸುವ ಮುನ್ನ ಡೀಪ್ಕ್ಲೀನ್ ಮಾಡಿ ಸ್ಯಾನಿಟೈಸ್ ಮಾಡತಕ್ಕದ್ದು.
* ವಸತಿ ನಿಲಯದಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪಾರ್ಟಿಷನ್ ಕಲ್ಪಿಸತಕ್ಕದ್ದು.
* ಹಾಸಿಗೆಗಳ ನಡುವೆ ಸಾಮಾಜಿಕಅಂತರ ನಿರ್ವಹಿಸತಕ್ಕದ್ದು.
* ರೋಗ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಅವಕಾಶ ಕಲ್ಪಿಸತಕ್ಕದ್ದಲ್ಲ.
* ಬೇರೆ ಕಡೆಯಿಂದ ಹಾಸ್ಟೆಲ್ಗೆ ಬಂದ ವಿದ್ಯಾರ್ಥಿಗಳು ಕೆಲವು ದಿನ ಇತರರೊಂದಿಗೆ ಬೆರೆಯತಕ್ಕದ್ದಲ್ಲ.
* ಹಾಸ್ಟೆಲ್ನಲ್ಲಿ ಇರುವವರಿಗೆ ನಿಯಮಿತವಾಗಿ ಕೌನ್ಸ್ಲಿಂಗ್ ನಡೆಸತಕ್ಕದ್ದು.
* ಆಗಾಗ್ಗೆ ಹಾಸ್ಟೆಲ್ನ ಅಡುಗೆಮನೆ ಹಾಗೂ ಭೋಜನಾಲಯವನ್ನು ವೈದ್ಯಕೀಯತಂಡದಿಂದ ತಪಾಸಣೆಗೆ ಒಳಪಡಿಸಬೇಕು.
* ಹಾಸ್ಟೆಲ್ನಲ್ಲಿ ರೇಡಿಯೋ, ದೂರದರ್ಶನ, ಇಂಟರ್ನೆಟ್ ಸೌಲಭ್ಯಗಳು ಇರುವಂತೆ ನೋಡಿಕೊಳ್ಳತಕ್ಕದ್ದು.
* ವಸತಿನಿಲಯದಲ್ಲಿನ ಎಲ್ಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಶುಚಿತ್ವದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳತಕ್ಕದ್ದು.
* ಯಾವುದೇ ವಿದ್ಯಾರ್ಥಿಗೆ ಅನಾರೋಗ್ಯ ಅಥವಾ ರೋಗಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ನೆರವನ್ನು ಪಡೆದು ಅಗತ್ಯಕ್ರಮಗಳನ್ನು ನಿರ್ವಹಿಸತಕ್ಕದ್ದು.
* ವಸತಿನಿಲಯದ ಮೇಲ್ವಿಚಾರಕರು ಮೇಲಿನ ಎಲ್ಲಾ ಅಂಶಗಳ ಪಾಲನೆಗೆ ಜವಾಬ್ದಾರರಾಗಿರುತ್ತಾರೆ.
ಕೋವಿಡ್-19 ಸೋಂಕು ತಗುಲದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಅಭ್ಯಾಸಗಳನ್ನ್ಲು ಮಾಡಿಸುವುದು.
* ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಎಲ್ಲ ಸಂದರ್ಭದಲ್ಲಿಯೂ ಕಾಪಾಡಿಕೊಳ್ಳುವಂತೆ ಅಗತ್ಯಅಭ್ಯಾಸ ಮಾಡಿಸಬೇಕು.
* ಆಗಾಗ್ಗೆ ತಮ್ಮ ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಜರ್ನಿಂದ ಸ್ವಚ್ಚಗೊಳಿಸುವಂತೆ ಅರಿವು ಮೂಡಿಸಬೇಕು.
* ಕೆಮ್ಮುವಾಗ ಅಥವಾ ಸೀನುವಾಗ ಬಾಯಿಗೆ ಅಡ್ಡವಾಗಿ ಕರವಸ್ತ್ರವನ್ನು ಹಿಡಿಯುವುದು ಅಥವಾ ಮೊಣಕೈಯನ್ನುಅಡ್ಡ ಹಿಡಿಯುವಂತೆ ತಿಳಿಸಬೇಕು.
* ಶಾಲೆಯಲ್ಲಿ ಮತ್ತು ರಸ್ತೆಯಲ್ಲಿ ಓಡಾಡುವಾಗ ಅನಗತ್ಯವಾಗಿ ಯಾವುದೇ ವಸ್ತುಗಳನ್ನು ಮುಟ್ಟದಂತೆ ತಿಳಿಸಬೇಕು. ರಸ್ತೆ ಬದಿಯ ತೆರೆದಿಟ್ಟ ಆಹಾರಗಳನ್ನು ಸೇವಿಸದಂತೆ ಸೂಚನೆ ನೀಡಬೇಕು.
* ರಸ್ತೆಯಲ್ಲಿ/ಶಾಲಾ ಆವರಣದಲ್ಲಿ ಉಗುಳುವುದು ಮುಂತಾದವುಗಳನ್ನು ಮಾಡದಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು (ಶಾಲಾ ಚಾಲಕರು ಸೇರಿದಂತೆ).
* ಬಳಸಿದ ಮಾಸ್ಕ್ಗಳನ್ನು ಮತ್ತು ನ್ಯಾಪ್ಕಿನ್ಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮಾಡದಂತೆ ತಿಳುವಳಿಕೆ ನೀಡುವುದು.
* ವಿದ್ಯಾರ್ಥಿಗಳ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವ್ಯಾಯಾಮ, ಯೋಗ, ಸರಳ ಪ್ರಾಣಾಯಾಮಗಳನ್ನು ಸಾಮಾಜಿಕಅಂತರದೊಂದಿಗೆ ಮಾಡಿಸಬಹುದು ಹಾಗೂ ಮನೆಯಲ್ಲಿಯೂ ಮಾಡುವಂತೆ ಪ್ರೇರೇಪಿಸುವುದು.
* ದೈಹಿಕ ಸ್ವಾಸ್ಥ್ಯ ಹೆಚ್ಚಿಸುವ ಆರೋಗ್ಯಕರ ಹಾಗೂ ಬಿಸಿಯಾದ ಆಹಾರ ಪದಾರ್ಥಗಳನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಬೇಕು. ಆರೋಗ್ಯಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ನಿಯಮಿತವಾಗಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಕ್ರಮವಹಿಸುವುದು.
* ಮಾಸ್ಕ್ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಾರದು.
* ತಿಂಡಿ ಮಾರುವವರಿಗೆ ಅವಕಾಶ ನೀಡಬಾರದು.
ಮಧ್ಯಾಹ್ನದಉಪಹಾರಯೋಜನೆ ಅನುಷ್ಠಾನ ಕುರಿತು
1. ಅಕ್ಷರದಾಸೋಹ ಯೋಜನೆಯಡಿ ಒದಗಿಸಿರುವ ಅಡುಗೆಕೋಣೆ, ದಾಸ್ತಾನುಕೋಣೆಯಲ್ಲಿನ ವಸ್ತುಗಳನ್ನು ಹೊರತೆಗೆದು ಆ ಕೋಣೆಗಳನ್ನು ಸಹ ಮೇಲೆ ವಿವರಿಸಿರುವಂತೆ ಸ್ವಚ್ಛಗೊಳಿಸತಕ್ಕದ್ದು.
2. ಪಾತ್ರೆಗಳು, ಸ್ಟವ್, ಗ್ಯಾಸ್ ಸಿಲಿಂಡರ್, ಆಹಾರಧಾನ್ಯ ಸಂಗ್ರಹಣಾ ಡಬ್ಬಿಗಳು, ತರಕಾರಿ ಬುಟ್ಟಿಗಳು, ಚಾಕುಗಳು, ಅಡುಗೆ ಮಾಡಲು ಬಳಸುವ ಸೌಟುಗಳು, ತಟ್ಟೆಗಳು ಮುಂತಾದ ಪ್ರತಿಯೊಂದು ವಸ್ತುವನ್ನು ನೀರಿನಿಂದ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಬಳಕೆಗೆ ಅಣಿಗೊಳಿಸುವುದು.
3. ಕ್ಷೀರಭಾಗ್ಯ ಯೋಜನೆಯಡಿ ಹಾಲು ಮತ್ತು ಮಧ್ಯಾಹ್ನದ ಊಟವನ್ನು ವಿತರಿಸುವಾಗ ಮತ್ತು ಸೇವಿಸುವಾಗ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಅಗತ್ಯ ಗುರುತುಗಳನ್ನು ಮಾಡಿ ವಿದ್ಯಾರ್ಥಿಗಳು ಆ ಸಂದರ್ಭದಲ್ಲಿ ಸಹ ಸಾಮಾಜಿಕ ಅಂತರವನ್ನು ಪಾಲಿಸುವಂತೆ ನೋಡಿಕೊಳ್ಳಬೇಕು.
4. ಅಡುಗೆ ಸಿಬ್ಬಂದಿಯವರು ಕಡ್ಡಾಯವಾಗಿ ಮಾಸ್ಕ್, ಏಫ್ರಾನ್, ಗ್ಲೌಸ್, ತಲೆಗೆ ಕ್ಯಾಪ್ ಧರಿಸಿರಬೇಕು.
5. ಅಡುಗೆ ಸಿಬ್ಬಂದಿಯವರಿಗೆ ಅನಾರೋಗ್ಯ, ಕೆಮ್ಮು, ನೆಗಡಿ, ಜ್ವರ ಮುಂತಾದ ಲಕ್ಷಣಗಳಿದ್ದಲ್ಲಿ ಅಡುಗೆಕಾರ್ಯದಲ್ಲಿ ಭಾಗವಹಿಸಬಾರದು ಮತ್ತು ರಜೆ ಪಡೆದುಕೊಳ್ಳುವುದು.
6. ಅಡುಗೆ ಸಿಬ್ಬಂದಿಯವರು ತಾವು ಮತ್ತು ತಮ್ಮ ಮನೆಯವರೆಲ್ಲರೂ ಆರೋಗ್ಯವಾಗಿರುವ ಕುರಿತು ಸ್ವಯಂದೃಢೀಕರಣ ಪತ್ರವನ್ನು ನೀಡಬೇಕು.
7. ಶಾಲೆ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನಿಂಗ್ (ದೇಹದಉಷ್ಣತೆ) ಒಳಪಡಬೇಕು ಮತ್ತು ಪ್ರತಿದಿನ ಅವರ ಉಷ್ಣಾಂಶವನ್ನು ದಾಖಲಿಸಬೇಕು.
8. ಶಾಲೆ ಪ್ರವೇಶಿಸಿದ ಕೂಡಲೇ 40 ಸೆಕೆಂಡುಗಳ ಕಾಲ ತಮ್ಮ ಕೈಗಳನ್ನು ತೊಳೆದುಕೊಳ್ಳಬೇಕು.
9. ಶಾಲೆಯಲ್ಲಿ ಇರುವಷ್ಟು ಸಮಯವೂ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಿರಬೇಕು.
10. ಅಡುಗೆ ಸಿಬ್ಬಂದಿಗೆ ಸುರಕ್ಷಿತ ಏಪ್ರಾನ್, ಶಿರಗವಸು, ಗ್ಲೌಸ್ ಮುಂತಾದವುಗಳನ್ನು ಒದಗಿಸಬೇಕು.
11. ಅಡುಗೆಮನೆಗೆ ಸಾಕಷ್ಟು ಸ್ವಾಭಾವಿಕ ಅಥವಾ ಯಾಂತ್ರಿಕ ಗಾಳಿ ಹೊರಹೋಗುವ (ವಾಯು ನಿರ್ಗಮನ) ವ್ಯವಸ್ಥೆಯನ್ನು ಕಲ್ಪಿಸತಕ್ಕದ್ದು.
12. ನೆಲ ಒರೆಸುವ ಬಟ್ಟೆ, ಪೊರಕೆ, ಮಾಪ್, ಬ್ರಷ್ ಇತ್ಯಾದಿಗಳನ್ನು ಪ್ರತಿದಿನ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ನೆಲ ಒರೆಸುವ ಬಟ್ಟೆಯನ್ನು ಅಡುಗೆ ಮಾಡುವ ಕೆಲಸದಲ್ಲಿ ಬಳಸಬಾರದು.
13. ಅಡುಗೆ ಮಾಡುವ ಪಾತ್ರೆ ಪರಿಕರಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.
14. ತರಕಾರಿ, ಹಣ್ಣು ಮುಂತಾದವುಗಳನ್ನು ಸಾಧ್ಯವಾದಷ್ಟು ತಾಜಾ ಆಗಿ ಇರುವಂತೆ ಸಂಗ್ರಹಿಸಿ, ಉಪ್ಪು ಮತ್ತು ಹಳದಿ ಅಥವಾ50 ಪಿ.ಪಿ.ಎಂ.ಕ್ಲೋರಿನ್ ದ್ರಾವಣದಲ್ಲಿ ತೊಳೆದು ಬಳಸಬೇಕು.
15. ಅಡುಗೆ ಮಾಡುವಾಗ ಅಡುಗೆ ಸಿಬ್ಬಂದಿಯು ತಮ್ಮೊಡನೆ ಸೂಕ್ತ ಸಾಮಾಜಿಕಅಂತರ ಕಾಪಾಡಿಕೊಳ್ಳಬೇಕು. ಅಡುಗೆ ಸಿಬ್ಬಂದಿಯು ತಮ್ಮ ಮುಖವನ್ನು ವಿರುದ್ಧ ದಿಕ್ಕಿನಲ್ಲಿ ಇರುವಂತೆ ಕಾರ್ಯನಿರ್ವಹಿಸತಕ್ಕದ್ದು.
16. ಮಧ್ಯಾಹ್ನದ ಬಿಸಿಯೂಟವನ್ನು ಬಡಿಸುವಾಗಲೂ ಸಹ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಾಮಾಜಿಕಅಂತರವನ್ನು ಪಾಲಿಸತಕ್ಕದ್ದು. ಒಂದೊಂದು ತರಗತಿಗೆ ಬೇರೆ ಬೇರೆ ಸಮಯದಲ್ಲಿ ಊಟ ಬಡಿಸಬಹುದು.
17. ವಿದ್ಯಾರ್ಥಿಗಳು ಊಟ ಮಾಡುವ ಸ್ಥಳವನ್ನು ಸಹ ಊಟಕ್ಕೆ ಮೊದಲು ಮತ್ತು ಊಟಕ್ಕೆ ನಂತರ ಸ್ವಚ್ಛಗೊಳಿಸತಕ್ಕದ್ದು. ವಿದ್ಯಾರ್ಥಿಗಳು ವರಾಂಡದಲ್ಲಿ ಕುಳಿತುಕೊಳ್ಳುತ್ತಿದ್ದರೆ ಅದಕ್ಕೆ ಗುರುತುಗಳನ್ನು ಮಾಡಿರಬೇಕು.
18. ಮಧ್ಯಾಹ್ನದ ಬಿಸಿಯೂಟವನ್ನು ಸಾಧ್ಯವಾದಷ್ಟು ಅಡುಗೆ ಬಿಸಿ ಇರುವಾಗಲೇ ಬಡಿಸತಕ್ಕದ್ದು.
No comments:
Post a Comment