ಪೊಲೀಸ್ ಅಧಿಕಾರಿಗಳ ಅಧಿಕಾರಗಳು.
(1) ಯಾವನೇ ಪೊಲೀಸು ಅಧಿಕಾರಿಯು, ಈ ಅಧಿನಿಯಮ ಅಥವಾ ಅದರ ಅಡಿಯಲ್ಲಿನ ಯಾವುದೇ ನಿಯಮ, ವಿನಿಯಮ ಅಥವಾ ಉಪವಿಧಿಯ ಉಪಬಂಧದ ವಿರುದ್ಧ ಯಾವುದೇ ಅಪರಾಧವನ್ನು ತನ್ನ ಸಮ್ಮುಖದಲ್ಲಿ ಮಾಡಿದ ಯಾವನೇ ವ್ಯಕ್ತಿಯನ್ನು, ಅವನಿಗೆ ಅಂಥ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಿಲ್ಲದಿದ್ದರೆ, ಮತ್ತು ಅವನು ತನ್ನ ಹೆಸರು ಮತ್ತು ವಿಳಾಸವನ್ನು ಕೊಡಲು ನಿರಾಕರಿಸಿದರೆ ಅಥವಾ ಅದನ್ನು ಕೊಟ್ಟರೆ ಅಂಥ ಹೆಸರು ಮತ್ತು ವಿಳಾಸದ ನಿಷ್ಕೃಷ್ಟತೆಯ ಬಗ್ಗೆ ಸಂದೇಹಪಡಲು ಆ ಪೊಲೀಸ್ ಅಧಿಕಾರಿಗೆ ಕಾರಣವಿದ್ದರೆ, ದಸ್ತಗಿರಿಮಾಡಬಹುದು ಮತ್ತು ಅಂಥ ವ್ಯಕ್ತಿಯನ್ನು ಠಾಣೆಯಲ್ಲಿ ಅವನ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ಖಚಿತಪಡಿಸಿಕೊಳ್ಳುವವರೆಗೆ ಬಂಧಿಸಿಡಬಹುದು.
(2) (1)ನೇ ಉಪಪ್ರಕರಣದ ಅಡಿಯಲ್ಲಿ ದಸ್ತಗಿರಿ ಮಾಡಲಾದ ಯಾವನೇ ವ್ಯಕ್ತಿಗೆ ಆದಷ್ಟು ಬೇಗ ಅಂಥ ದಸ್ತಗಿರಿಯ ಕಾರಣಗಳ ಬಗ್ಗೆ ತಿಳಿಸತಕ್ಕದ್ದು ಮತ್ತು ಅವನನ್ನು, ದಸ್ತಗಿರಿಯಾದ ಸ್ಥಳದಿಂದ ಮ್ಯಾಜಿಸ್ಟ್ರೇಟರ ನ್ಯಾಯಾಲಯಕ್ಕೆ ಪ್ರಯಾಣ ಮಾಡಲು ಅವಶ್ಯವಾದ ಕಾಲವನ್ನು ಹೊರತುಪಡಿಸಿ, ಅಂಥ ದಸ್ತಗಿರಿಯಾದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗೆ ಅತಿ ಸವಿೂಪದ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸತಕ್ಕದ್ದು ಮತ್ತು ಅಂಥ ಯಾವನೇ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟರ ಅಧಿಕಾರವಿಲ್ಲದೆ, ಸದರಿ ಅವಧಿಯನ್ನು ವಿೂರಿ ಅಭಿರಕ್ಷೆಯಲ್ಲಿ ಬಂಧಿಸಿಡತಕ್ಕದ್ದಲ್ಲ.
(3) ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿನ ಯಾವುದೇ ನಿಯಮ, ವಿನಿಯಮ ಅಥವಾ ಉಪವಿಧಿಯ ಉಪಬಂಧಗಳ ವಿರುದ್ಧ ಯಾವುದೇ ಅಪರಾಧವನ್ನು ಮಾಡಿರುವ ಬಗ್ಗೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಅಥವಾ ತಾಲ್ಲೂಕು ಪಂಚಾಯತಿಯ ಅಧ್ಯಕ್ಷ ಅಥವಾ ಕಾರ್ಯನಿರ್ವಾಹಕ ಅಧಿಕಾರಿಗೆ ಅಥವಾ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಅಥವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಸದಸ್ಯನನ್ನು ದಸ್ತಗಿರಿ ಮಾಡಿದಲ್ಲಿ ಅಂಥ ದಸ್ತಗಿರಿಯಾದ ಇಪ್ಪತ್ತನಾಲ್ಕು ಗಂಟೆಯೊಳಗೆ ಮಾಹಿತಿಯನ್ನು ಕೂಡಲೇ ಕೊಡುವುದು ಮತ್ತು ಅವರ ಕಾನೂನು ಬದ್ಧ ಅಧಿಕಾರವನ್ನು ಚಲಾಯಿಸುವಲ್ಲಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿಗಳು ಮತ್ತು ನೌಕರರಿಗೆ ಸಹಾಯ ಮಾಡುವುದು ಸಹ ಎಲ್ಲ ಪೊಲೀಸ್ ಅಧಿಕಾರಿಗಳ ಕರ್ತವ್ಯವಾಗಿರತಕ್ಕದ್ದು.
300. ವಾರ್ಷಿಕ ಆಡಳಿತ ವರದಿ. (1) ಪ್ರತಿವರ್ಷದ ಏಪ್ರಿಲ್ ಮೊದಲನೇ ದಿನದ ತರುವಾಯ ಆದಷ್ಟು ಬೇಗನೆ ಮತ್ತು ಸರ್ಕಾರವು ನಿಗದಿಪಡಿಸಬಹುದಾದಂಥ ದಿನಾಂಕವನ್ನು ವಿೂರದಂತೆ, ಕಾರ್ಯದರ್ಶಿಯು, ಗ್ರಾಮಪಂಚಾಯತಿಯ ಹಿಂದಿನ ಆರ್ಥಿಕ ವರ್ಷದ ಆಡಳಿತ ವರದಿಯನ್ನು ಸರ್ಕಾರವು ನಿರ್ದೆಶಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥ ವಿವರಗಳೊಡನೆ ಗ್ರಾಮ ಪಂಚಾಯತಿಯ ಮುಂದೆ ಮಂಡಿಸತಕ್ಕದ್ದು ಮತ್ತು ಅದರ ಮೇಲಿನ ಗ್ರಾಮ ಪಂಚಾಯತಿಯ ನಿರ್ಣಯದೊಂದಿಗೆ ಆ ವರದಿಯನ್ನು ಜಿಲ್ಲಾ ಪಂಚಾಯತಿಗೆ ಕಳುಹಿಸತಕ್ಕದ್ದು.
(2) ಪ್ರತಿವರ್ಷದ ಏಪ್ರಿಲ್ ಮೊದಲನೇ ದಿನದ ತರುವಾಯ ಆದಷ್ಟು ಬೇಗನೆ ಮತ್ತು ಸರ್ಕಾರವು ನಿಗದಿಪಡಿಸಬಹುದಾದಂಥ ದಿನಾಂಕವನ್ನು ಮೀರದಂತೆ, ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯು ಹಿಂದಿನ ಆರ್ಥಿಕ ವರ್ಷದ ಆಡಳಿತ ವರದಿಯನ್ನು ಸರ್ಕಾರವು ನಿರ್ದೆಶಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥ ವಿವರಗಳೊಂದಿಗೆ ತಾಲ್ಲೂಕು ಪಂಚಾಯತಿಯ ಮುಂದೆ ಮಂಡಿಸತಕ್ಕದ್ದು ಮತ್ತು ಅದರ ಮೇಲಿನ ತಾಲ್ಲೂಕು ಪಂಚಾಯತಿಯ ನಿರ್ಣಯದೊಂದಿಗೆ ಆ ವರದಿಯನ್ನು ಜಿಲ್ಲಾ ಪಂಚಾಯತಿಗೆ ಕಳುಹಿಸತಕ್ಕದ್ದು.
(3) (1) ಮತ್ತು (2)ನೇ ಉಪಪ್ರಕರಣದ ಅಡಿಯಲ್ಲಿನ ವರದಿಗಳು ಬಂದ ಮೇಲೆ ಗ್ರಾಮ ಪಂಚಾಯತಿಗಳು ಮತ್ತು ತಾಲ್ಲೂಕು ಪಂಚಾಯತಿಗಳ ಕೆಲಸವನ್ನು ಜಿಲ್ಲಾ ಪಂಚಾಯತಿಯು ಪುನರವಲೋಕಿಸತಕ್ಕದ್ದು ಮತ್ತು ಈ ಬಗ್ಗೆ ಕ್ರೋಡೀಕರಿಸಲಾದ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
(4) ಪ್ರತಿವರ್ಷದ ಏಪ್ರಿಲ್ ಮೊದಲನೇ ದಿವಸದ ತರುವಾಯ, ಆದಷ್ಟು ಬೇಗನೆ ಮತ್ತು ಸಕರ್ಾರವು ನಿಗದಿಪಡಿಸಬಹುದಾದಂಥ ದಿನಾಂಕವನ್ನು ವಿೂರದಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲಾ ಪಂಚಾಯತಿಯ ಹಿಂದಿನ ಆರ್ಥಿಕ ವರ್ಷದ ಆಡಳಿತ ವರದಿಯನ್ನು ಸರ್ಕಾರವು ನಿರ್ದೇಶಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥ ವಿವರಗಳೊಂದಿಗೆ ತಯಾರಿಸತಕ್ಕದ್ದು ಮತ್ತು ಜಿಲ್ಲಾ ಪಂಚಾಯತಿಗೆ ವರದಿಯನ್ನು ಸಲ್ಲಿಸತಕ್ಕದ್ದು. ಜಿಲ್ಲಾ ಪಂಚಾಯತಿಯಿಂದ ಅನುಮೋದಿತವಾದ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
(5) (3) ಮತ್ತು (4)ನೇ ಉಪಪ್ರಕರಣದ ಮೇರೆಗೆ ಸರ್ಕಾರಕ್ಕೆ ಒಪ್ಪಿಸಿದ ವರದಿಯನ್ನು ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳ ಕೆಲಸವನ್ನು ಸರ್ಕಾರವು ಪುನರಲೋಕಿಸಿದ ಬಗ್ಗೆ ಜ್ಞಾಪನ ಪತ್ರದೊಂದಿಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂದೆ ಮಂಡಿಸತಕ್ಕದ್ದು.
301. ಸರ್ಕಾರಿ ಬಾಕಿ, ಇತ್ಯಾದಿಗಳ ಹೊಂದಾಣಿಕೆ. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯು ಸರ್ಕಾರಕ್ಕೆ, ಕರ್ನಾಟಕ ರಾಜ್ಯ ವಿದ್ಯುಚ್ಫಕ್ತಿ ಮಂಡಲಿಗೆ ಕೊಡಬೇಕಾದ ಯಾವುವೇ ಮೊಬಲಗುಗಳು, ಸಾಲದ ಕಂತುಗಳು ಅಥವಾ ಬಡ್ಡಿಯನ್ನು ಅಥವಾ ಅಂಥ ಪಂಚಾಯತಿಗಳಿಗೆ ಪ್ರತಿನಿಯೋಜನೆಯ ಮೇಲೆ ಬಂದ ಸರ್ಕಾರಿ ನೌಕರರ ಸಂಬಳಗಳು, ಭತ್ಯೆಗಳು ಅಥವಾ ರಜೆ ಮತ್ತು ಪಿಂಚಣಿ ವಂತಿಗೆಗಳನ್ನು ಸಂದಾಯ ಮಾಡಲು ತಪ್ಪಿದರೆ, ಸರ್ಕಾರವು, ಪಂಚಾಯತಿಗಳ ನಿಧಿಯ ಅಭಿರಕ್ಷೆಯನ್ನು ಹೊಂದಿರುವ ವ್ಯಕ್ತಿಗೆ ಅಂಥ ನಿಧಿಯಿಂದ ಸಂದಾಯ ಮಾಡತಕ್ಕ ಯಾವುದೇ ಹೊಣೆಗಿಂತಲೂ, ಬಾಕಿ ಇರುವ ಮೊಬಲಗನ್ನು ಆದ್ಯತೆಯ ಮೇಲೆ ಸಂದಾಯ ಮಾಡುವಂತೆ ಆದೇಶಿಸಬಹುದು ಮತ್ತು ಅಂಥ ವ್ಯಕ್ತಿಯು, ಅಂಥ ನಿಧಿಗೆ ಜಮೆಯಾಗಿರುವ ಮೊಬಲಗಿನಷ್ಟರಮಟ್ಟಿಗೆ, ಆದೇಶವನ್ನು ಪಾಲಿಸಲು ಬದ್ಧನಾಗಿರತಕ್ಕದ್ದು.
1[302. ಒಂದು ಪಂಚಾಯತಿ ಪ್ರದೇಶದ ಭಾಗವನ್ನು ಅಥವಾ ಜಿಲ್ಲಾ ಅಥವಾ ತಾಲ್ಲೂಕು ಪರಿಮಿತಿಗಳಲ್ಲಿರುವ ಒಂದು ಪ್ರದೇಶವನ್ನು ದೊಡ್ಡ ನಗರ ಪ್ರದೇಶ ಮುಂತಾದುವುಗಳೊಳಗೆ ವಿಲೀನಗೊಳಿಸುವುದರ ಪರಿಣಾಮ. (1) ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಸದಸ್ಯನ ಹುದ್ದೆಯ ಅವಧಿಯಲ್ಲಿ, ಅಂಥ ಸದಸ್ಯನು ಪ್ರತಿನಿಧಿತನಾಗಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರದಲ್ಲಿ ಅಡಕವಾದ ಪೂರ್ಣ ಪ್ರದೇಶವಾಗಿರುವ ಪಂಚಾಯತಿ ಪ್ರದೇಶ, ತಾಲ್ಲೂಕು ಅಥವಾ ಜಿಲ್ಲೆಯ ಪರಿಮಿತಿಗಳೊಳಗಿನ ಯಾವುದೇ ಪ್ರದೇಶವನ್ನು ಯಾವುದೇ ದೊಡ್ಡ ನಗರ ಪ್ರದೇಶದಲ್ಲಿ, ಚಿಕ್ಕ ನಗರ ಪ್ರದೇಶದಲ್ಲಿ ಅಥವಾ ಪರಿವರ್ತಿತವಾಗಲಿರುವ ಪ್ರದೇಶದಲ್ಲಿ ಸೇರ್ಪಡೆ ಮಾಡಿದರೆ ಅಥವಾ ಪಂಚಾಯತಿ ಪ್ರದೇಶ ಅಥವಾ ತಾಲ್ಲೂಕು ಪರಿಮಿತಿಗಳಲ್ಲಿರುವ ಅಂಥ ಪ್ರದೇಶವನ್ನು ಚಿಕ್ಕ ನಗರ ಪ್ರದೇಶ ಅಥವಾ ಪರಿವರ್ತಿತವಾಗಲಿರುವ ಪ್ರದೇಶವಾಗಿ (ಇನ್ನು ಮುಂದೆ ಇತರ ಸ್ಥಳೀಯ ಪ್ರದೇಶವೆಂದು ಉಲ್ಲೇಖಿಸಲಾಗುವುದು) ಪರಿವರ್ತಿಸಿದರೆ, ಈ ಅಧಿನಿಯಮದಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನಲ್ಲಿ ಏನೇ ಇದ್ದರೂ, ಹಾಗೆ ಸೇರ್ಪಡೆ ಮಾಡುವ ಅಥವಾ ಪರಿವರ್ತಿಸುವ ದಿನಾಂಕದಿಂದ ಈ ಮುಂದಿನ ಪರಿಣಾಮಗಳು ಸಂಭವಿಸತಕ್ಕದ್ದು, ಎಂದರೆ:
1. ಪ್ರಕರಣ 302 ಮತ್ತು 302ಎ 1997ರ ಅಧಿನಿಯಮ ಸಂಖ್ಯೆ: 10ರ ಮೂಲಕ ದಿನಾಂಕ: 14-ಂ8-1997ರಿಂದ ಪ್ರತಿಯೋಜಿಸಲಾಗಿದೆ.
(ಎ) ಅಂಥ ಸದಸ್ಯನು ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಗ್ರಾಮ ಪಂಚಾಯತಿಯ ಸದಸ್ಯನಾಗಿರುವುದು ನಿಂತು ಹೋಗತಕ್ಕದ್ದು ಮತ್ತು ಅಂಥ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಸಂದರ್ಭಾನುಸಾರ ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯು ಈಗಾಗಲೇ ನಿರ್ಧರಿತವಾದಂತೆ ಅದಕ್ಕನುಸಾರವಾಗಿ ಕಡಿಮೆಯಾಗತಕ್ಕದ್ದು. (ಬಿ) ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಗ್ರಾಮ ಪಂಚಾಯತಿಯಲ್ಲಿ ನಿಹಿತವಾಗಿರುವಷ್ಟರಮಟ್ಟಿಗೆ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಗ್ರಾಮ ಪಂಚಾಯತಿಯ ನಿಧಿ ಅಥವಾ ಅದರ ಸ್ವತ್ತನ್ನು ಸರ್ಕಾರವು, ಲಿಖಿತದಲ್ಲಿ ಆದೇಶಿಸಬಹುದಾದಂತೆ ಅಂಥ ಇತರ ಸ್ಥಳೀಯ ಪ್ರದೇಶದ ಅಂಥ ಸ್ಥಳೀಯ ಪ್ರಾಧಿಕಾರದ ನಿಧಿಗೆ ವರ್ಗಾಯಿಸತಕ್ಕದ್ದು.
(ಸಿ) ಇತರ ಸ್ಥಳೀಯ ಪ್ರದೇಶದಲ್ಲಿ ಸೇರ್ಪಡೆ ಮಾಡಲಾದ ಅಥವಾ ಇತರ ಸ್ಥಳೀಯ ಪ್ರದೇಶವಾಗಿ ಪರಿವರ್ತಿತವಾದ ಪ್ರದೇಶದಲ್ಲಿ ಉದ್ಭವಿಸುವ ಅಥವಾ ಆ ಪ್ರದೇಶಕ್ಕೆ ಸಂಬಂಧಪಟ್ಟ ಸಿವಿಲ್ ಮತ್ತು ಕ್ರಿಮಿನಲ್ ವ್ಯವಹರಣೆಗಳು, ಕರಾರುಗಳು, ಒಪ್ಪಂದಗಳು ಮತ್ತು ಇತರ ವಿಷಯಗಳು ಅಥವಾ ಸಂಗತಿಗಳಿಗೆ (ತೆರಿಗೆ, ಶುಲ್ಕಗಳು, ದರಗಳು ಮತ್ತು ಉಪಕರದ ಬಾಕಿಯೂ ಸೇರಿದಂತೆ) ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಗ್ರಾಮ ಪಂಚಾಯತಿಯ ಹಕ್ಕುಗಳು ಮತ್ತು ಬಾಧ್ಯತೆಗಳು ಇತರ ಸ್ಥಳೀಯ ಪ್ರದೇಶದ ಸ್ಥಳೀಯ ಪ್ರಾಧಿಕಾರದಲ್ಲಿ ನಿಹಿತವಾಗತಕ್ಕದ್ದು ಮತ್ತು ಅಂಥ ಹಕ್ಕುಗಳು ಮತ್ತು ಬಾಧ್ಯತೆಗಳನ್ನು, ಸ್ಥಳೀಯ ಪ್ರಾಧಿಕಾರಕ್ಕೆ ಅನ್ವಯಿಸುವ ಸುಸಂಗತ ಕಾನೂನು ಅಥವಾ ಅದರಡಿಯಲ್ಲಿ ಮಾಡಲಾದ ನಿಯಮಗಳು, ಉಪವಿಧಿಗಳು ಮತ್ತು ಆದೇಶಗಳ ಅಡಿಯಲ್ಲಿ ಅಂಥ ಸ್ಥಳೀಯ ಪ್ರಾಧಿಕಾರ ಅಥವಾ ಅದರ ವಿರುದ್ಧ ಜಾರಿಗೊಳಿಸತಕ್ಕದ್ದು.
302ಎ. ಅಸ್ತಿತ್ವದಲ್ಲಿದ್ದ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಪರಿಮಿತಿಗಳನ್ನು ಬದಲಾಯಿಸುವ ಮೂಲಕ ಹೊಸ ಜಿಲ್ಲೆ ಮತ್ತು ತಾಲ್ಲೂಕುಗಳ ರಚನೆ. (1) ಒಂದು ಜಿಲ್ಲೆಯ ಜಿಲ್ಲಾ ಪಂಚಾಯತಿಯ ಅಥವಾ ಒಂದು ತಾಲ್ಲೂಕಿನ ತಾಲ್ಲೂಕು ಪಂಚಾಯತಿಯ ಸದಸ್ಯರ ಹುದ್ದೆಯ ಅವಧಿಯಲ್ಲಿ (ಇನ್ನು ಮುಂದೆ ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ಅಸ್ತಿತ್ವದಲ್ಲಿದ್ದ ತಾಲ್ಲೂಕು ಪಂಚಾಯತಿ ಎಂದು ಉಲ್ಲೇಖಿಸಲಾಗುವುದು) 1964ರ ಕರ್ನಾಟಕ ಭೂ ಕಂದಾಯ ಅಧಿನಿಯಮದ ಅಡಿಯಲ್ಲಿ ಅಂಥ ಜಿಲ್ಲೆಯ ಅಥವಾ ತಾಲ್ಲೂಕಿನ ಪರಿಮಿತಿಗಳನ್ನು ಬದಲಾವಣೆ ಮಾಡಿ ಒಂದು ಹೊಸ ಜಿಲ್ಲೆ ಅಥವಾ ತಾಲ್ಲೂಕನ್ನು ರಚಿಸಿದರೆ (ಇನ್ನು ಮುಂದೆ ಹೊಸ ಜಿಲ್ಲೆ ಅಥವಾ ಸಂದರ್ಭಾನುಸಾರ ಹೊಸ ತಾಲ್ಲೂಕು ಎಂದು ಉಲ್ಲೇಖಿಸಲಾಗುವುದು), ಈ ಅಧಿನಿಯಮದಲ್ಲಿ ಅದಕ್ಕೆ ವಿರುದ್ಧವಾಗಿ ಏನೇ ಇದ್ದರೂ, ಹಾಗೆ ಹೊಸ ಜಿಲ್ಲೆ ಅಥವಾ ತಾಲ್ಲೂಕಿನ ರಚನೆಯಾದ ದಿನಾಂಕದಿಂದ ಈ ಮುಂದಿನ ಪರಿಣಾಮಗಳು ಉಂಟಾಗತಕ್ಕದ್ದು, ಎಂದರೆ:
(ಎ) ಹೊಸ ಜಿಲ್ಲೆಗೆ ಒಂದು ಜಿಲ್ಲಾ ಪಂಚಾಯತಿ ಅಥವಾ ಸಂದರ್ಭಾನುಸಾರ ಹೊಸ ತಾಲ್ಲೂಕಿಗೆ ಒಂದು ತಾಲ್ಲೂಕು ಪಂಚಾಯತಿ ಇರತಕ್ಕದ್ದು ಮತ್ತು ಇದು ಹೊಸ ಜಿಲ್ಲೆ ಅಥವಾ ಹೊಸ ತಾಲ್ಲೂಕಿನಲ್ಲಿ ಸೇರ್ಪಡೆಯಾದ ಪ್ರದೇಶದ ಪೂರ್ಣ ಅಥವಾ ಬಹು ಭಾಗವು ಇರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಪ್ರತಿನಿಧಿಸುವ, ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ಸಂದರ್ಭಾನುಸಾರ ತಾಲ್ಲೂಕು ಪಂಚಾಯತಿಯ ಸದಸ್ಯರನ್ನು ಮತ್ತು 120ನೇ ಪ್ರಕರಣ ಅಥವಾ ಸಂದರ್ಭಾನುಸಾರ 159ನೇ ಪ್ರಕರಣದಲ್ಲಿ ಉಲ್ಲೇಖಿಸಲಾದ ಇತರ ಸದಸ್ಯರನ್ನು ಹೊಂದಿರತಕ್ಕದ್ದು ಮತ್ತು ಈಗಾಗಲೇ ನಿರ್ಧರಿತವಾದ ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿಯ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯು ಅದಕ್ಕನುಸಾರವಾಗಿ ಕಡಿಮೆಯಾಗತಕ್ಕದ್ದು;
(ಬಿ) ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತಿ ಅಥವಾ ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಯು, ಹೊಸ ಜಿಲ್ಲೆ ಅಥವಾ ಸಂದರ್ಭಾನುಸಾರ ಹೊಸ ತಾಲ್ಲೂಕಿನ ರಚನೆಯಾದ ತರುವಾಯ ತನ್ನ ಮೊದಲ ಸಬೆಯಲ್ಲಿ, ತನ್ನ ಸದಸ್ಯರ ಪೈಕಿ ಒಬ್ಬನನ್ನು ಅಧ್ಯಕ್ಷನನ್ನಾಗಿ ಮತ್ತು ಅಧ್ಯಕ್ಷನನ್ನು ಬಿಟ್ಟು ಮತ್ತೊಬ್ಬನನ್ನು ಉಪಾಧ್ಯಕ್ಷನನ್ನಾಗಿ ಆಯ್ಕೆ ಮಾಡತಕ್ಕದ್ದು;
(ಸಿ) ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತಿ ಅಥವಾ ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಯು, ಸಾಧ್ಯವಾದಷ್ಟು ಬೇಗ, 148ನೇ ಪ್ರಕರಣದ ಅಡಿಯಲ್ಲಿ ಅಥವಾ ಸಂದರ್ಭಾನುಸಾರ 186ನೇ ಪ್ರಕರಣದ ಅಡಿಯಲ್ಲಿ ಸಮಿತಿಗಳ ಸದಸ್ಯರನ್ನು ಆಯ್ಕೆ ಮಾಡತಕ್ಕದ್ದು;
(ಡಿ) ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಅಥವಾ ಸಂದರ್ಭಾನುಸಾರ ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಯ ಸದಸ್ಯರು, 128, 129, 135, 136, 167, 168, 174 ಮತ್ತು 175ನೇ ಪ್ರಕರಣಗಳ ಉಪಬಂಧಗಳಿಗೆ ಒಳಪಟ್ಟು, ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿಯಲ್ಲಿ ಅಥವಾ ಸಂದರ್ಭನುಸಾರ ಅಸ್ತಿತ್ವದಲ್ಲಿದ್ದ ತಾಲ್ಲೂಕು ಪಂಚಾಯತಿಯಲ್ಲಿ ಸದಸ್ಯರಾಗಿ ಅವರ ಹುದ್ದೆಯ ಅವಧಿಯ ಅಪೂರ್ಣ ಭಾಗಕ್ಕೆ ಹುದ್ದೆಯನ್ನು ಧಾರಣ ಮಾಡತಕ್ಕದ್ದು;
(ಇ) (ಬಿ) ಮತ್ತು (ಸಿ) ಖಂಡಗಳಲ್ಲಿ ಉಲ್ಲೇಖಿಸಲಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮತ್ತು ಸದಸ್ಯರ ಹುದ್ದೆಯ ಅವಧಿಯು, 138, 140 148, 177, 179 ಮತ್ತು 186ನೇ ಪ್ರಕರಣಗಳ ಉಪಬಂಧಗಳಿಗೆ ಒಳಪಟ್ಟು ಸರ್ಕಾರವು ಅಧಿಸೂಚನೆ ಮೂಲಕ ನಿದರ್ಿಷ್ಟಪಡಿಸಬಹುದಾದ ದಿನಾಂಕದಂದು ಮುಕ್ತಾಯವಾಗತಕ್ಕದ್ದು.
(2) ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿಯ ಸಂಬಂಧದಲ್ಲಿ ಮಾಡಿದ, ಹೊರಡಿಸಿದ ಅಥವಾ ವಿಧಿಸಿದ ಯಾವುದೇ ನೇಮಕಾತಿ, ಅಧಿಸೂಚನೆ, ನೋಟೀಸು, ತೆರಿಗೆ, ಆದೇಶ, ಯೋಜನೆ, ಲೈಸೆನ್ಸು, ಅನುಮತಿ, ನಿಯಮ, ವಿನಿಯಮ, ಉಪವಿಧಿ ಅಥವಾ ನಮೂನೆಯು, ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮಾಡಿದ, ಹೊರಡಿಸಿದ, ವಿಧಿಸಿದ ಅಥವಾ ಮಂಜೂರು ಮಾಡಿದ ಯಾವುದೇ ನೇಮಕಾತಿ, ಅಧಿಸೂಚನೆ, ನೋಟೀಸು, ತೆರಿಗೆ, ಆದೇಶ, ಯೋಜನೆ, ಲೈಸೆನ್ಸು, ಅನುಮತಿ, ನಿಯಮ, ವಿನಿಯಮ, ಉಪವಿಧಿ ಅಥವಾ ನಮೂನೆಯ ಮೂಲಕ ಅದನ್ನು ರದ್ದುಗೊಳಿಸುವವರೆಗೆ ಅಥವಾ ಮಾರ್ಪಾಡು ಮಾಡುವವರೆಗೆ ಜಾರಿಯಲ್ಲಿರುವುದು ಮುಂದುವರಿಯತಕ್ಕದ್ದು ಮತ್ತು ಹೊಸ ಜಿಲ್ಲೆ ಅಥವಾ ಸಂದರ್ಭಾನುಸಾರ ಹೊಸ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿಯ ಸಂಬಂಧದಲ್ಲಿ ಮಾಡಿದೆ, ಹೊರಡಿಸಿದೆ ಅಥವಾ ವಿಧಿಸಿದೆ ಎಂದು ಭಾವಿಸತಕ್ಕದ್ದು:
ಪರಂತು ಅಸ್ತಿತ್ವದಲ್ಲಿದ್ದ ಎರಡು ಅಥವಾ ಹೆಚ್ಚಿನ ಜಿಲ್ಲೆಗಳು ಅಥವಾ ತಾಲ್ಲೂಕುಗಳ ಪರಿಮಿತಿಗಳನ್ನು ಬದಲಾವಣೆ ಮಾಡುವ ಮೂಲಕ ಹೊಸ ಜಿಲ್ಲೆ ಅಥವಾ ಹೊಸ ತಾಲ್ಲೂಕನ್ನು ರಚಿಸಿದರೆ, ಸರ್ಕಾರವು, ಅಧಿಸೂಚನೆಯ ಮೂಲಕ, ಅಸ್ತಿತ್ವದಲ್ಲಿದ್ದ ಅಂಥ ಜಿಲ್ಲಾ ಪಂಚಾಯತಿಗಳು ಅಥವಾ ತಾಲ್ಲೂಕು ಪಂಚಾಯಿಗಳ ಸಂಬಂಧದಲ್ಲಿ ಮಾಡಲಾದ, ಹೊರಡಿಸಲಾದ ಅಥವಾ ವಿಧಿಸಲಾದ ನೇಮಕಾತಿ, ಅದಿಸೂಚನೆ, ನೋಟೀಸು, ತೆರಿಗೆ, ಆದೇಶ, ಯೋಜನೆ, ಲೈಸೆನ್ಸು, ಅನುಮತಿ, ನಿಯಮ, ವಿನಿಯಮ, ಉಪವಿಧಿ ಮತ್ತು ನಮೂನೆಯು ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತಿ ಮತ್ತು ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಗೆ ಅಧಿಸೂಚನೆಯ ಅಡಿ ನಿರ್ದಿಷ್ಟಪಡಿಸಿದ ದಿನಾಂಕದಿಂದ ಅನ್ವಯವಾಗತಕ್ಕದ್ದೆಂದು ಮತ್ತು ಆ ತರುವಾಯ ಅಂಥ ನೇಮಕಾತಿಗಳು, ಅಧಿಸೂಚನೆಗಳು, ನೋಟೀಸು, ತೆರಿಗೆ, ಆದೇಶ, ಯೋಜನೆ, ಲೈಸೆನ್ಸು, ಅನುಮತಿ, ನಿಯಮ, ವಿನಿಯಮ, ಉಪವಿಧಿ ಮತ್ತು ನಮೂನೆ ಮಾತ್ರ ಜಾರಿಯಲ್ಲಿ ಮುಂದುವರಿಯತಕ್ಕದ್ದೆಂದು ನಿರ್ದೆಶಿಸಬಹುದು.
(3) ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿಯಲ್ಲಿ ನಿಹಿತವಾಗಿರುವ ಖರ್ಚುಮಾಡದೆ ಉಳಿದ ನಿಧಿ ಮತ್ತು ಎಲ್ಲ ಇತರ ಸ್ವತ್ತುಗಳನ್ನು, ಸರ್ಕಾರವು ಆದೇಶದ ಮೂಲಕ ನಿರ್ದೆಶಿಸಬಹುದಾದಂತೆ ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತಿಗೆ ಅಥವಾ ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಗೆ ವರ್ಗಾಯಿಸತಕ್ಕದ್ದು.
(4) ಹೊಸ ಜಿಲ್ಲೆ ಅಥವಾ ಹೊಸ ತಾಲ್ಲೂಕಿನಲ್ಲಿ ಸೇರ್ಪಡೆ ಮಾಡಲಾದ ಪ್ರದೇಶದ ಯಾವುದೇ ಭಾಗದಲ್ಲಿ ಉದ್ಭವಿಸುವ ಅಥವಾ ಆ ಪ್ರದೇಶಕ್ಕೆ ಸಂಬಂಧಪಟ್ಟ ಸಿವಿಲ್ ಮತ್ತು ಕ್ರಿಮಿನಲ್ ವ್ಯವಹರಣೆಗಳು, ಸ್ವತ್ತುಗಳು, ಕರಾರುಗಳು, ಒಪ್ಪಂದಗಳು ಮತ್ತು ಇತರ ವಿಷಯಗಳು ಅಥವಾ ಸಂಗತಿಗಳಿಗೆ (ತೆರಿಗೆಗಳು, ಶುಲ್ಕಗಳು, ದರಗಳು ಮತ್ತು ಉಪಕರದ ಬಾಕಿಯೂ ಸೇರಿದಂತೆ) ಸಂಬಂಧಿಸಿದಂತೆ ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿಯ ಹಕ್ಕುಗಳು ಮತ್ತು ಬಾಧ್ಯತೆಗಳು, ಸರ್ಕಾರವು ಆದೇಶದ ಮೂಲಕ ನಿರ್ದೆಶಿಸಬಹುದಾದಂತೆ ಹೊಸ ಜಿಲ್ಲೆಗಳ ಜಿಲ್ಲಾ ಪಂಚಾಯತಿಯಲ್ಲಿ ಅಥವಾ ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಯಲ್ಲಿ ನಿಹಿತವಾಗತಕ್ಕದ್ದು.
(5) ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು ಮತ್ತು ನೌಕರರನ್ನು, ಸರ್ಕಾರವು ಆದೇಶದ ಮೂಲಕ ನಿರ್ದೆಶಿಸಬಹುದಾದಂತೆ ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತಿಗೆ ಅಥವಾ ಸಂದರ್ಭಾನುಸಾರ ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಗೆ ವರ್ಗಾಯಿಸಬಹುದು ಮತ್ತು ಈ ಅಧಿನಿಯಮಕ್ಕೆ ಅನುಸಾರವಾಗಿ ಇತರ ಉಪಬಂಧಗಳನ್ನು ರಚಿಸುವವರೆಗೆ, ಹಾಗೆ ವರ್ಗಾಯಿತರಾಗುವುದಕ್ಕೆ ಮೊದಲು ಅವರು ಪಡೆಯಲು ಹಕ್ಕುಳ್ಳವರಾಗಿದ್ದ ಅದೇ ಸಂಬಳ ಮತ್ತು ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವರಾಗತಕ್ಕದ್ದು ಮತ್ತು ಅವರು ಒಳಪಡುತ್ತಿದ್ದ ಅವೇ ಸೇವಾ ಷರತ್ತುಗಳಿಗೆ ಒಳಪಡತಕ್ಕದ್ದು.
(6) ಹೊಸ ಜಿಲ್ಲೆ ಅಥವಾ ಹೊಸ ತಾಲ್ಲೂಕಿನ ರಚನೆಗೆ ನಿಕಟಪೂರ್ವದಲ್ಲಿ ಅಪೀಲುಗಳೂ ಸೇರಿದಂತೆ ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಯಾವೊಬ್ಬ ಅಧಿಕಾರಿಯ ಮುಂದೆ ಇತ್ಯರ್ಥವಾಗದೆ ಉಳಿದಿರುವ ಎಲ್ಲ ವ್ಯವಹರಣೆಗಳು ಮತ್ತು ಅಂಥ ರಚನೆಗೆ ನಿಕಟಪೂರ್ವದಲ್ಲಿ ಇತ್ಯರ್ಥವಾಗದೆ ಉಳಿದಿರುವ ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಅದರ ಯಾವೊಬ್ಬ ಅಧಿಕಾರಿ ಅಥವಾ ಅವನ ಪರವಾಗಿ ಹೂಡಲಾದ ಎಲ್ಲಾ ಕಾನೂನು ವ್ಯವಹರಣೆಗಳನ್ನು ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಅಂಥ ಅಧಿಕಾರಿಯು ಮುಂದುವರಿಸತಕ್ಕದ್ದು ಅಥವಾ ಅಂಥ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಅಧಿಕಾರಿಯ ವಿರುದ್ಧ ಮುಂದುವರಿಯತಕ್ಕದ್ದು ಅಥವಾ ಅಂಥ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಅಧಿಕಾರಿಯು ವಿಲೆಮಾಡತಕ್ಕದ್ದು.
(7) ಸರ್ಕಾರವು, ಅದಿಸೂಚನೆಯ ಮೂಲಕ,
ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತಿಗೆ ಅಥವಾ ಸಂದರ್ಭಾನುಸಾರ ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಗೆ (2)ನೇ ಉಪಪ್ರಕರಣವನ್ನು ಅನ್ವಯಿಸುವಾಗ ಅದರಲ್ಲಿ ಉಲ್ಲೇಖಿಸಲಾದ ಯಾವುದೇ ನಿಯಮ, ಉಪವಿಧಿ, ಅಧಿಸೂಚನೆ, ಯೋಜನೆ, ಅನುಮತಿ ಅಥವಾ ಲೈಸೆನ್ಸಿನಿಂದ ಬಿಟ್ಟುಬಿಡುವುದಕ್ಕೆ, ಅವುಗಳಿಗೆ ಸೇರ್ಪಡೆ ಮಾಡುವುದಕ್ಕೆ ಅಥವಾ ಅವುಗಳಲ್ಲಿ ಅಳವಡಿಸುವುದಕ್ಕೆ ಅಥವಾ ಮಾರ್ಪಾಟು ಮಾಡುವುದಕ್ಕೆ; ಅಥವಾ
ಅಸ್ತಿತ್ವದಲ್ಲಿದ್ದ ಜಿಲ್ಲಾ ಪಂಚಾಯತಿ ಅಥವಾ ಅಸ್ತಿತ್ವದಲ್ಲಿದ್ದ ತಾಲ್ಲೂಕು ಪಂಚಾಯತಿ ಅಥವಾ ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತಿ ಅಥವಾ ಹೊಸ ತಾಲ್ಲೂಕಿನ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಉಂಟಾಗುವ ತೊಂದರೆಗಳನ್ನು ನಿವಾರಿಸುವುದಕ್ಕೆ, ಅಗತ್ಯವೆಂದು ಅಥವಾ ಯುಕ್ತವೆಂದು ಕಂಡು ಬರುವಂಥ ಉಪಬಂಧಗಳನ್ನು ರಚಿಸಬಹುದು.]1
No comments:
Post a Comment