ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಗ್ರಾಮೀಣ ಕೈಗಾರಿಕೆಗಳು ಖಾದಿ
ಕರಕುಶಲ ಕಲೆಗಳು, ಆಹಾರ ಗ್ರಾಮೋದ್ಯಮಗಳು ಮತ್ತು ಸಂಸ್ಕರಣಾ ಕೈಗಾರಿಕೆಗಳು
ಗುಡಿ ಕೈಗಾರಿಕೆ ಮತ್ತು ಖಾದಿ ಉದ್ಯಮಗಳು, ಕರಕುಶಲ ಕಲೆಗಳು, ಗ್ರಾಮೀಣ ಕೈಗಾರಿಕೆಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಇತರ ಕೃಷಿಯೇತರ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ನೆರವು ನೀಡಿಕೆಯ ಕಾರ್ಯತಂತ್ರ ವ್ಯವಸ್ಥೆಯನ್ನು ಸ್ಥಾಪಿಸುವುದು.
ಸಮ್ಮೇಳನಗಳು, ವಿಚಾರ ಸಂಕಿರಣಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುವುದು.
ಅತಿ ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದು.
ಸ್ವಯಂ ಉದ್ಯೋಗ ಯೋಜನೆಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು.
ಗ್ರಾಮ ಪಂಚಾಯತ್ ಸಮುಚ್ಚಯಗಳಿಗೆ (ಕ್ಲಸ್ಟರುಗಳಿಗೆ) ಅಥವಾ ಗ್ರಾಮಪಂಚಾಯತ್ಗಳ ಗುಂಪುಗಳಿಗೆ ಪರಿಕರ ಸೇವಾ ಕೇಂದ್ರಗಳನ್ನು ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸೃಜಿಸುವುದು.
ಸಮುಚ್ಚಯ(ಕ್ಲಸ್ಟರ್) ಮಟ್ಟದ ಸಾಮಾನ್ಯ ಸೌಲಭ್ಯ ಕೇಂದ್ರಗಳಿಗೆ ಹಣಕಾಸಿನ ನೆರವನ್ನು ಒದಗಿಸುವುದು
ಬ್ಲಾಕ್ನಲ್ಲಿ ಅಥವಾ ಹೋಬಳಿ ಮಟ್ಟದಲ್ಲಿ ಇರುವ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ನಿರ್ವಹಿಸುವುದು
8. ಗ್ರಾಮೀಣ ವಸತಿ
ಗ್ರಾಮಠಾಣಾ ಎಲ್ಲೆಗಳ ಹೊರಗೆ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಮತ್ತು ನಿವೇಶನಗಳನ್ನು ವಿತರಿಸುವುದು.
ಕಡಿಮೆ ವೆಚ್ಚದ ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಸಮರ್ಪಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಅವುಗಳನ್ನು ಗ್ರಾಮ ಪಂಚಾಯತ್ಗಳಿಗೆ ಪ್ರಚುರಪಡಿಸುವುದು.
ಗ್ರಾಮ ಪಂಚಾಯತ್ಗಳಿಗೆ ತಾಂತ್ರಿಕ ನೆರವನ್ನು ಮತ್ತು ಪರಿಕರಗಳನ್ನು ಒದಗಿಸುವುದು.
ತಾಲ್ಲೂಕು ಮಟ್ಟದ ಗೃಹನಿರ್ಮಾಣ ಸಹಕಾರ ಸಂಘಗಳಿಗೆ ಉತ್ತೇಜನ ನೀಡುವುದು
9. ಕುಡಿಯುವ ನೀರು ಪೂರೈಕೆ
ನೀರನ್ನು ಮಲಿನಗೊಳಿಸುವುದನ್ನು ತಡೆಯುವುದು ಮತ್ತು ನಿಯಂತ್ರಿಸುವುದು.
ಗ್ರಾಮ ಪಂಚಾಯತ್ಗಳಿಗೆ ಹೊರಗೆ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು.
ಕುಡಿಯುವ ನೀರು ಪೂರೈಕೆಯ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕೆ ಗ್ರಾಮ ಪಂಚಾಯತಿಗಳಿಗೆ ಪರಿಕರಗಳನ್ನು ಮತ್ತು ತಾಂತ್ರಿಕ ನೆರವನ್ನು ಒದಗಿಸುವುದು.
10. ಲೋಕೋಪಯೋಗಿ ಕಾಮಗಾರಿಗಳು, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ರಸ್ತೆಗಳು, ಸೇತುವೆಗಳು, ಹಾಯ್ಗಡಗಳು, ಜಲ ಮಾರ್ಗಗಳು ಮತ್ತು ಇತರ ಸಂಪರ್ಕ ಮಾರ್ಗಗಳು)
ಯಾವುದೇ ಸ್ಥಳೀಯ ಪ್ರಾಧಿಕಾರದ ಅಥವಾ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರದ ಬಹು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ
(ಎ) ರಸ್ತೆಗಳು
(ಬಿ) ಪಾದಚಾರಿ ಮಾರ್ಗಗಳಿಗೆ/ ಓಣಿಗಳಿಗೆ
(ಸಿ) ತಾಲ್ಲೂಕು ರಸ್ತೆಗಳಿಗೆ
(ಡಿ) ಸೇತುವೆಗಳಿಗೆ/ಸುರಂಗ ಕಾಲುವೆಗಳಿಗೆ (ಕಲ್ವರ್ಟ್ಸ್)
(ಇ) ಕಟ್ಟಡಗಳಿಗೆ
(ಎಫ್) ಚರಂಡಿಗಳಿಗೆ
(ಜಿ) ರಾಜ್ಯ ಅಥವಾ ಕೇಂದ್ರ ಸಕರ್ಾರದ ನಿಯಂತ್ರಣದಲ್ಲಿರುವ ಯಾವುದೇ ಇತರ ಸ್ಥಳೀಯ ಪ್ರಾಧಿಕಾರಗಳ ನಿಯಂತ್ರಣದ ಅಡಿಯಲ್ಲಿ ಬಾರದಿರುವುದು
ತಾಲ್ಲೂಕು ಪಂಚಾಯತ್ಗಳ ನಿಯಂತ್ರಣಕ್ಕೆ ಒಳಪಡುವ ಬಹು ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ ಒಳಗೆ ದೋಣಿಗಳು, ತೆಪ್ಪಗಳು (ಪೆರ್ರಿಗಳು) ಮತ್ತು ಜಲಮಾರ್ಗಗಳನ್ನು ನಿರ್ವಹಿಸುವುದು.
ತಾಲ್ಲೂಕು ಪಂಚಾಯತಿ ನಿಯಂತ್ರಣಕ್ಕೆ ಒಳಪಟ್ಟ ಪ್ರೌಢಶಾಲಾ ಕಟ್ಟಡಗಳಿಗೆ, ತಾಲ್ಲೂಕು ಆಸ್ಪತ್ರೆಗಳಿಗೆ ಮತ್ತು ಇತರ ತಾಲ್ಲೂಕು ಮಟ್ಟದ ಸಾರ್ವಜನಿಕ ಸಂಸ್ಥೆಗಳಿಗೆ ಯೋಜನೆ ರೂಪಿಸುವುದು, ಅವುಗಳ ನಿರ್ಮಾಣ ಮಾಡುವುದು ಮತ್ತು ಅವುಗಳನ್ನು ನಿರ್ವಹಿಸುವುದು.
11. ಗ್ರಾಮೀಣ ವಿದ್ಯುದೀಕರಣ/ವಿದ್ಯುತ್ ಮತ್ತು ಇಂಧನ
ಪ್ರಮುಖ ಬೆಳೆ ಹಂಗಾಮುಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಗುಣಮಟ್ಟದ ಮತ್ತು ನಿರಂತರವಾಗಿ ವಿದ್ಯುತ್ ಪೂರೈಕೆ ಸಾಧ್ಯವಾಗುವಂತೆ ಮಾಡುವ ದೃಷ್ಟಿಯಿಂದ ವಿದ್ಯುತ್ ಪೂರೈಕೆ ಏಜೆನ್ಸಿಗಳೊಂದಿಗೆ ಸಮನ್ವಯ.
ಸಮರ್ಪಕ ಶ್ರೇಣಿಯ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಘಟಕಗಳ ಕುರಿತು ಯೋಜನೆ ರೂಪಿಸುವುದು ಅವುಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು.
ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಇಂಧನವನ್ನು ಇತರರಿಗೆ ಮಾರಾಟ ಮಾಡುವುದು.
12. ಬಡತನ ನಿರ್ಮೂಲನೆ
ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ಗಳಿಗೆ ತಾಂತ್ರಿಕ ಪರಿಕರಗಳನ್ನು ಒದಗಿಸುವುದು.
ತಾಲ್ಲೂಕು ಮಟ್ಟದಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮಗಳನ್ನು ಕೈಗೊಳ್ಳುವುದು, ಜೆಎಲ್ಜಿ ಗಳು ಮತ್ತು ವೈಯಕ್ತಿಕ ಹಾಗೂ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಸ್ವ-ಸಹಾಯ ಸಮೂಹಗಳಿಗೆ ಸಂಪರ್ಕವನ್ನು ಕಲ್ಪಿಸುವುದು.
13. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅತ್ಯಾವಶ್ಯಕ ಸರಕುಗಳನ್ನು ವಿತರಿಸುವುದು.
14. ವಿಪತ್ತು ನಿರ್ವಹಣೆ ವಿಪತ್ತು ನಿರ್ವಹಣಾ ಕಾರ್ಯಕ್ರಮಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಮಟ್ಟದ ಕಾರ್ಯನಿರ್ವಹಣಾ ಸಿಬ್ಬಂದಿಗೆ ತರಬೇತಿಗಳನ್ನು ನಡೆಸುವುದು.
15. ಶಿಕ್ಷಣ [ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ, ವಯಸ್ಕರ ಹಾಗೂ ಅನೌಪಚಾರಿಕ ಶಿಕ್ಷಣ]
ವಯಸ್ಕರ ಶಿಕ್ಷಣವನ್ನು ಪ್ರೋತ್ಸಾಹಿಸುವುದು.
ತಾಲ್ಲೂಕು ಮಟ್ಟದಲ್ಲಿ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಈ ಎರಡು ರೀತಿಯ ಶಿಕ್ಷಣ ನೀಡುವುದನ್ನು ಯೋಜನೆ ರೂಪಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.
ಪ್ರೌಢ ಶಾಲೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುವುದು ಮತ್ತು ಮಂಜೂರಾತಿಗಳನ್ನು ಪಡೆದುಕೊಳ್ಳುವುದು.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಪ್ರಾಯೋಜಿತ ಕಾರ್ಯಕ್ರಮಗಳನ್ನು ಸಂಯೋಜಿಸುವುದು.
ತಾಲ್ಲೂಕು ಮಟ್ಟದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಟ್ಟಡಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಶಾಲೆಗಳಿಗೆ ಪುಸ್ತಕಗಳು, ಅಧ್ಯಯನ ಸಾಮಗ್ರಿಗಳು, ತರಬೇತಿ ಹೂಡುವಳಿ ರೂಪಗಳಂಥ ಅಗತ್ಯ ನೆರವನ್ನು ಒದಗಿಸುವುದು.
ಯುವ ಕ್ಲಬ್ಗಳು ಮತ್ತು ಮಹಿಳಾ ಮಂಡಳಿಗಳ ಮೂಲಕ ಸಾಮಾಜಿಕ ಶಿಕ್ಷಣವನ್ನು ಉತ್ತೇಜಿಸುವುದು.
ಹಿಂದುಳಿದ ವರ್ಗಗಳು ಮತ್ತು ಸಮೂಹಗಳು, ಬಾಲಕಿಯರು, ವಿಶೇಷ ಚೇತನ ಮಕ್ಕಳು ಮತ್ತು ಅಲ್ಪಸಂಖ್ಯಾತ ಸಮೂಹಗಳ ಮಕ್ಕಳಿಗೆ ಹಾಗೂ ಅನಾಥ ಮಕ್ಕಳಿಗೆ ಪ್ರಾಥಮಿಕ ಶಾಲೆಯ ಹಂತದಲ್ಲಿ ಆಶ್ರಮ ಶಾಲೆಗಳು, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವುದನ್ನು ಕುರಿತು ಯೋಜನೆ ರೂಪಿಸುವುದು, ಸ್ಥಾಪಿಸುವುದು ಮತ್ತು ನಿರ್ವಹಿಸುವುದು.
16. ಗ್ರಂಥಾಲಯಗಳು
ತಾಲ್ಲೂಕು ಮಟ್ಟದ ಗ್ರಂಥಾಲಯಗಳು ಮತ್ತು ವಾಚನಾಲಯಗಳನ್ನು ಸ್ಥಾಪಿಸುವುದನ್ನು ಕುರಿತು ಯೋಜನೆಯನ್ನು ಸೂಚಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.
ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸುವುದು.
No comments:
Post a Comment