ರಾಜ್ಯ ಪಂಚಾಯತಿ ಪರಿಷತ್ತು.

inyatrust.in | Tuesday, January 3, 2023

(1) ಸರ್ಕಾರವು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಹಾಗೂ ಅದು ಜನತೆಯ ಅವಶ್ಯಕತೆಗಳಿಗೆ ತೀವ್ರವಾಗಿ ಸ್ಪಂದಿಸುವಂತೆ ಮಾಡುವ ಸಲುವಾಗಿ, ಚುನಾಯಿತ ಪ್ರತಿನಿಧಿಗಳು  ತಮ್ಮ  ಆಶಯಗಳನ್ನು  ವ್ಯಕ್ತಪಡಿಸುವುದಕ್ಕೆ  ಮತ್ತು  ತಮ್ಮ  ಸಲಹೆಗಳನ್ನು  ಸೂಚಿಸುವುದಕ್ಕೆ  ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಲು ಒಂದು ರಾಜ್ಯ ಪಂಚಾಯತಿ ಪರಿಷತ್ತನ್ನು ರಚಿಸತಕ್ಕದ್ದು.
  1.    ಉಪಪ್ರಕರಣ (1) ಮತ್ತು (2), ಖಂಡ ರಿಂದ  ಮತ್ತು (3) ಮತ್ತು (4), 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997 ರಿಂದ ಸೇರಿಸಲಾಗಿದೆ.
  (2)  ರಾಜ್ಯ ಪಂಚಾಯತಿ ಪರಿಷತ್ತು,     
  ಮುಖ್ಯ ಮಂತ್ರಿಯವರನ್ನು ಅಧ್ಯಕ್ಷರನ್ನಾಗಿ;     
  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಉಪಾಧ್ಯಕ್ಷರನ್ನಾಗಿ;     ಸರ್ಕಾರದಿಂದ ನಾಮನಿರ್ದೆಶಿಸಲ್ಪಟ್ಟ ಇತರ ಐವರು ಸಚಿವರುಗಳನ್ನು ಸದಸ್ಯರುಗಳನ್ನಾಗಿ;     
1[(ತ)  2[ಎಲ್ಲಾ ಜಿಲ್ಲಾ ಪಂಚಾಯತಿಗಳ ಅಧ್ಯಕ್ಷರನ್ನು]2 ಸದಸ್ಯರನ್ನಾಗಿ;     
(ತ)  3[ಸರ್ಕಾರದಿಂದ]3  ನಾಮನಿರ್ದೇಶಿಸಲ್ಪಟ್ಟ  2[ನಾಲ್ಕು  ಗ್ರಾಮ  ಪಂಚಾಯತಿಗಳ  ಅಧ್ಯಕ್ಷರು, ಪ್ರತಿಯೊಂದು  ಕಂದಾಯ  ವಿಭಾಗದಿಂದ  ಒಬ್ಬರು]2  ಹಾಗೂ  ಒಂದು  ತಾಲ್ಲೂಕು  ಪಂಚಾಯತಿಯ ಅಧ್ಯಕ್ಷರುಗಳನ್ನು ಸದಸ್ಯರುಗಳನ್ನಾಗಿ;
      ವಿಧಾನ  ಸಭೆಯ  ಸಭಾಧ್ಯಕ್ಷರಿಂದ  ನಾಮನಿರ್ದೇಶಿಸಲ್ಪಟ್ಟ  ಐದು  ಜನ  ಶಾಸಕರು  ಮತ್ತು  ವಿಧಾನ ಪರಿಷತ್ತಿನ  ಸಭಾಪತಿಯವರಿಂದ  ನಾಮನಿರ್ದೇಸಲ್ಪಟ್ಟ  ಇಬ್ಬರು  ಶಾಸಕರನ್ನು  ಸದಸ್ಯರುಗಳನ್ನಾಗಿ; ಮತ್ತು
    (ತ)  ಗ್ರಾಮೀಣಾಭಿವೃದ್ಧಿ  ಮತ್ತು  ಪಂಚಾಯತ್  ರಾಜ್  ಇಲಾಖೆಯ  ಕಾರ್ಯದರ್ಶಿಯವರನ್ನು  ಸದಸ್ಯ ಕಾರ್ಯದರ್ಶಿಯನ್ನಾಗಿ.]1  
1.  ಖಂಡ  ತ ರಿಂದ ತ 2003ರ ಅಧಿನಿಯಮ ಸಂಖ್ಯೆ: 37ರ ಮೂಲಕ ದಿನಾಂಕ: 20-10-1997ರಿಂದ ಸೇರಿಸಲಾಗಿದೆ.
2.  2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
3.  2017ರ ಅಧಿನಿಯಮ ಸಂಖ್ಯೆ 37ರ ಮೂಲಕ ದಿನಾಂಕ: 11.07.2017ರಿಂದ ಪ್ರತಿಯೋಜಿಸಲಾಗಿದೆ.
ಒಳಗೊಂಡಿರತಕ್ಕದ್ದು.   
(3)  ರಾಜ್ಯ ಪಂಚಾಯತಿ ಪರಿಷತ್ತು ಪ್ರತಿವರ್ಷ ಕಡೆಯ ಪಕ್ಷ ಎರಡು ಸಲವಾದರೂ ಸಭೆಯನ್ನು ಸೇರತಕ್ಕದ್ದು.   
(4)  ರಾಜ್ಯ  ಪಂಚಾಯತಿ  ಪರಿಷತ್ತು,  ರಾಜ್ಯದಲ್ಲಿರುವ  ಪಂಚಾಯತಿಗಳ  ಕಾರ್ಯನಿರ್ವಹಣೆಗೆ  ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸತಕ್ಕದ್ದು.]1   
1[310ಬಿ.  ಕರ್ನಾಟಕ  ರಾಜ್ಯ  ವಿಕೇಂದ್ರಿಕರಣ  ಯೋಜನೆ  ಮತ್ತು  ಅಭಿವೃದ್ಧಿ  ಸಮಿತಿ.-  (1)  ಅಭಿವೃದ್ಧಿ ಯೋಜನೆಗಳನ್ನು  ಮತ್ತು  ಆಯವ್ಯಯ  ದಸ್ತಾವೇಜಿನೊಂದಿಗೆ  ಹಾಜರುಪಡಿಸಬೇಕಾದ  ವಾರ್ಷಿಕ  ಹಣಕಾಸು ಪುನರಾವಲೋಕನೆಯನ್ನು  ರೂಪಿಸುವುದಕ್ಕೆ  ಸರ್ಕಾರವನ್ನು    ಸಮರ್ಥಗೊಳಿಸುವುದಕ್ಕೆ  ಕರ್ನಾಟಕ  ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು  ಅಭಿವೃದ್ಧಿ ಸಮಿತಿಯೆಂದು ಕರೆಯಲಾಗುವ ಸಮಿತಿಯನ್ನು ಸ್ಥಾಪಿಸತಕ್ಕದ್ದು.
(2)  ಕರ್ನಾಟಕ  ರಾಜ್ಯ    ವಿಕೇಂದ್ರಿಕರಣ  ಯೋಜನೆ  ಮತ್ತು  ಅಭಿವೃದ್ಧಿ  ಸಮಿತಿಯ  ಈ  ಮುಂದಿನವರನ್ನು ಒಳಗೊಂಡಿರತಕ್ಕದ್ದು, ಎಂದರೆ;-
(3) ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ(2)ನೇ ಉಪ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ  ಸರ್ಕರೇತರ ಸದಸ್ಯರ  ಪದಾವಧಿಯು    ಐದು  ವರ್ಷಗಳಿಗೆ    ಅಥವಾ  ತಮ್ಮ  ಪದಾವಧಿ  ಮುಕ್ತಾಯದವರೆಗೆ,  ಅವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ  ಆಗಿರತಕ್ಕದ್ದು.
(4)  ಕರ್ನಾಟಕ  ರಾಜ್ಯ  ವಿಕೇಂದ್ರಿರಣ  ಯೋಜನೆ    ಮತ್ತು  ಅಭಿವೃದ್ಧಿ  ಸಮಿತಿಯ  ಪ್ರಕಾರ್ಯಗಳು  ಈ ಮುಂದಿನಂತೆ ಇರತಕ್ಕದ್ದು, ಎಂದರೆ;
(ಎ)  ಕರ್ನಾಶಟಕ  ರಾಜ್ಯ  ವಿಕೇಂದ್ರಿಕರಣ  ಯೋಜನೆ  ಮತ್ತು  ಅಭಿವೃದ್ಧಿ  ಸಮಿತಿಯ(ಕೆಎಸ್ಡಿಪಿಡಿಸಿ) ಜಿಲ್ಲೆಯ ಯೋಜನೆಗಳು ಮತ್ತು ಇತರ  ಯೋಜನಾ ಘಟಕಗಳ ನಡುವೆ ಪರಸ್ಪರ ಸಮಾಲೋಚನೆ ಮತ್ತು ವ್ಯವಹಾರಗಳನ್ನು    ಕಲ್ಪಿಸುವುದಕ್ಕೆ    ಅವುಗಳನ್ನು    ಜೋಡಿಸತಕ್ಕದ್ದು  ಮತ್ತು    ನಗರ  ಮತ್ತು  ಗ್ರಾಮೀಣ ಯೋಜನೆಗಳ  ವಲಯ  ಮತ್ತು  ಸ್ಥಳ  ವಿಸ್ತಾರ  ವಿಷಯಗಳನ್ನು    ಸಂಯೋಜಿಸುವುದಕ್ಕೆ    ಚೌಕಟ್ಟನ್ನು  ಕೂಡಾ ಕಲ್ಪಿಸತಕ್ಕದ್ದು.
(ಬಿ)    ಕೆಎಸ್ಡಿಪಿಡಿಸಿಯ  ಕ್ರೋಢೀಕರಣ  ಮತ್ತು  ಸಂಯೋಜನೆಯ  ಪ್ರಕ್ರಿಯೆಯು    ಜಿಲ್ಲೆಗಳು ಸಿದ್ದಪಡಿಸಿದುದನ್ನು  ವ್ಯತ್ಯಾಸಗೊಳಿಸತಕ್ಕದ್ದಲ್ಲ.  
(ಸಿ) ಸಮಿತಿಯು ಕ್ರೋಢೀಕರಣ ಯೋಜನೆಯನ್ನು  ಸಿದ್ದಪಡಿಸುವಾಗ, ಸರ್ಕಾರವು ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂತೆ    ಅಂಥ  ಸಂಸ್ಥೆಗಳು  ಮತ್ತು  ಸಂಘಗಳೊಂದಿಗೆ    ಸಮಾಲೋಚನೆ ಮಾಡತಕ್ಕದ್ದು.
(ಡಿ)  ಕೇಂದ್ರೀಕರಣ  ಮತ್ತು    ಸಮಾಲೋಚನೆಯ  ಪ್ರಕ್ರಿಯೆಯು  ಪೂರ್ಣವಾದ    ತರುವಾಯ  ಕೂಡಲೇ ಸಮಿತಿಯು ಸರ್ಕಾರಕ್ಕೆ ಕ್ರೋಢೀಕೃತ ಯೋಜನೆಯನ್ನು ಕಳುಹಿಸತಕ್ಕದ್ದು.
(ಇ)  ಸಮಿತಿಯು,  ಸ್ಥಳೀಯ  ಅಭಿವೃದ್ಧಿ  ಮತ್ತು  ಪ್ರಾದೇಶಿಕ  ಅಭಿವೃದ್ಧಿಗೆ  ಸಂಬಂಧಿಸಿದ  ಕಾರ್ಯಸೂತ್ರವನ್ನೂ  ಸಹ ನೋಡಿಕೊಳ್ಳತಕ್ಕದ್ದು,  ಜಿಲ್ಲೆಗಳ  ಮತ್ತು  ರಾಜ್ಯ  ಯೋಜನೆಗಳ  ಸಮನ್ವಯ  ಮತ್ತು  ಸ್ಥಳೀಯ  ಸಂಸ್ಥೆಗಳನ್ನು ಬಲಗೊಳಿಸಲು ಕಾರ್ಯನೀತಿಗಳನ್ನು ರೂಪಿಸುವುದು]1   1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.
ನಿಯಮಗಳು, ವಿನಿಮಯಗಳು ಮತ್ತು ಉಪವಿಧಿಗಳು
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.   
311.    ನಿಯಮಗಳನ್ನು  ರಚಿಸಲು  ಸರ್ಕಾರದ  ಅಧಿಕಾರ.  (1)  ಸರ್ಕಾರವು,  ರಾಜ್ಯಪತ್ರದಲ್ಲಿ  ಅಧಿಸೂಚನೆಯ ಮೂಲಕ  ಪೂರ್ವ  ಪ್ರಕಟಣೆಯ  ತರುವಾಯ  ಈ  ಅಧಿನಿಯಮದ  ಉದ್ದೇಶಗಳನ್ನು  ಕಾರ್ಯಗತಗೊಳಿಸುವುದಕ್ಕಾಗಿ ನಿಯಮಗಳನ್ನು ರಚಿಸಬಹುದು.   
(2) ಈ  ಅಧಿನಿಯಮದ  ಅಡಿಯಲ್ಲಿನ  ನಿಯಮವನ್ನು  ಪೂರ್ವಾನ್ವಯವಾಗಿ  ಪರಿಣಾಮಕಾರಿಯಾಗುವಂತೆ ರಚಿಸಬಹುದು  ಮತ್ತು  ಅಂಥ  ನಿಯಮವನ್ನು  ರಚಿಸಿದಾಗ  ಆ  ನಿಯಮ  ರಚಿಸುವುದಕ್ಕೆ   ಕಾರಣಗಳನ್ನು  ರಾಜ್ಯ ವಿಧಾನಮಂಡಲದ  ಉಭಯ  ಸದನಗಳ  ಮುಂದೆ  ಇಟ್ಟ  ವಿವರಣಾ  ಪತ್ರದಲ್ಲಿ  ನಿರ್ದಿಷ್ಟಪಡಿಸತಕ್ಕದ್ದು.  320ನೇ ಪ್ರಕರಣದ  ಅಡಿಯಲ್ಲಿ  ಮಾಡಿದ  ಯಾವುದೇ  ಮಾರ್ಪಾಟಿಗೊಳಪಟ್ಟು  ಈ  ಅಧಿನಿಯಮದ  ಅಡಿಯಲ್ಲಿ  ರಚಿಸಿದ ಪ್ರತಿಯೊಂದು  ನಿಯಮವು,  ಈ  ಅಧಿನಿಯಮದಲ್ಲಿ  ಅಧಿನಿಯಮಿತವಾಗಿದ್ದಿದ್ದರೆ  ಹೇಗೋ  ಹಾಗೆ  ಪರಿಣಾಮವನ್ನು ಹೊಂದಿರತಕ್ಕದ್ದು.   
(3)  ಈ  ಪ್ರಕರಣದ  ಅಡಿಯಲ್ಲಿ  ನಿಯಮವನ್ನು  ರಚಿಸುವಲ್ಲಿ,  ಸರ್ಕಾರವು,  ಅದರ  ಉಲ್ಲಂಘನೆಯ  ಬಗ್ಗೆ ತಪ್ಪಿತಸ್ಥನಾದ  ವ್ಯಕ್ತಿಯು  ಅಪರಾಧ  ನಿರ್ಣಯವಾದ  ಮೇಲೆ  ಐದುನೂರು  ರೂಪಾಯಿಗಳವರೆಗೆ  ವಿಸ್ತರಿಸಬಹುದಾದ ಜುಲ್ಮಾನೆಯಿಂದ  ದಂಡಿತನಾಗತಕ್ಕದ್ದು  ಎಂದು  ಮತ್ತು  ಆ  ಉಲ್ಲಂಘನೆಯು  ಮುಂದುವರೆದರೆ  ಆ  ಉಲ್ಲಂಘನೆಯು ಮುಂದುವರಿಯುತ್ತಿರುವಂಥ  ದಿವಸದಂದು  ಮತ್ತು  ಮೊದಲನೇ  ದಿವಸದ  ತರುವಾಯದ  ಪ್ರತಿಯೊಂದು  ದಿವಸಕ್ಕೆ ಇಪ್ಪತ್ತೈದು  ರೂಪಾಯಿಗಳವರೆಗೆ  ವಿಸ್ತರಿಸಬಹುದಾದಂಥ  ಇನ್ನೂ  ಹೆಚ್ಚಿನ  ಜುಲ್ಮಾನೆಯಿಂದ  ದಂಡಿತನಾಗತಕ್ಕದ್ದೆಂದು ಉಪಬಂಧಿಸಬಹುದು. 

No comments:

Post a Comment