ಆಕಸ್ಮಿಕ ಖಾಲಿ ಸ್ಥಾನ.
ಜಿಲ್ಲಾ ಪಂಚಾಯತಿಯ ಸದಸ್ಯನ ಆಕಸ್ಮಿಕ ಖಾಲಿ ಸ್ಥಾನವನ್ನು ವ್ಯಕ್ತಿಯೊಬ್ಬನನ್ನು ಚುನಾಯಿಸುವುದರ ಮೂಲಕ ಸಾಧ್ಯವಾದಷ್ಟು ಬೇಗನೆ ತುಂಬತಕ್ಕದ್ದು. ಅವನು ಯಾರ ಸ್ಥಾನದಲ್ಲಿ ಚುನಾಯಿತನಾಗಿರುವನೋ ಆ ಸ್ಥಾನವು ತೆರವಾಗದೇ ಇದ್ದಿದ್ದರೆ ಆ ಸದಸ್ಯನು ಎಲ್ಲಿಯವರೆಗೆ ಹುದ್ದೆಯನ್ನು ಧಾರಣ ಮಾಡುತ್ತಿದ್ದನೋ ಆ ಅವಧಿಯವರೆಗೆ ಮಾತ್ರ ಹುದ್ದೆಯನ್ನು ಧಾರಣ ಮಾಡತಕ್ಕದ್ದು.
177. ಅಧ್ಯಕ್ಷ, ಉಪಾಧ್ಯಕ್ಷನ ಚುನಾವಣೆ ಮತ್ತು ಹುದ್ದೆಯ ಅವಧಿ. (1) 159ನೇ ಪ್ರಕರಣದ (1)ನೇ ಉಪ ಪ್ರಕರಣದ ನೇ ಖಂಡದಲ್ಲಿ ಉಲ್ಲೇಖಿಸಿರುವ ಜಿಲ್ಲಾ ಪಂಚಾಯತಿಯ ಚುನಾಯಿತ ಸದಸ್ಯರು 1[ಜಿಲ್ಲಾ ಪಂಚಾಯತಿಯ ಸದಸ್ಯರುಗಳನ್ನು ಚುನಾಯಿಸಲು ನಡೆಸಲಾಗುವ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯ ತರುವಾಯ ಅಥವಾ ಈ ಅಧಿನಿಯಮದಡಿ ಅದನ್ನು ಪುನರ್ರಚಿಸಿದ ಅಥವಾ ಸ್ಥಾಪಿಸಿದ ಮೇಲೆ 2[172ನೇ ಪ್ರಕರಣದಡಿ ಸದಸ್ಯರುಗಳ ಹೆಸರುಗಳನ್ನು ಪ್ರಕಟಿಸಿದ ದಿನಾಂಕದಿಂದ ಒಂದು ತಿಂಗಳಿನೊಳಗೆ]2 ಅಥವಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಯ ಅವಧಿ ಮುಕ್ತಾಯವಾಗುವುದಕ್ಕೆ ನಿಕಟಪೂರ್ವದಲ್ಲಿ]1 ತಮ್ಮಲ್ಲಿಂದ ಇಬ್ಬರು ಸದಸ್ಯರನ್ನು ಕ್ರಮವಾಗಿ ಅದರ ಅಧ್ಯಕ್ಷನನ್ನಾಗಿ ಅಥವಾ ಉಪಾಧ್ಯಕ್ಷನನ್ನಾಗಿ ಆಯ್ಕೆ ಮಾಡತಕ್ಕದ್ದು ಮತ್ತು ಅಧ್ಯಕ್ಷ ಅಥವಾ ಉಪಾಧ್ಯಕ್ಷನ ಸ್ಥಾನಗಳು ಆಕಸ್ಮಿಕವಾಗಿ ತೆರವಾದಾಗಲೆಲ್ಲಾ ತಮ್ಮಲ್ಲಿಂದ ಇನ್ನೊಬ್ಬ ಸದಸ್ಯನನ್ನು ಸಂದರ್ಭಾನುಸಾರ ಅಧ್ಯಕ್ಷನನ್ನಾಗಿ ಅಥವಾ ಉಪಾಧ್ಯಕ್ಷನನ್ನಾಗಿ ಆಯ್ಕೆ ಮಾಡತಕ್ಕದ್ದು:
1. 1996ರ ಅಧಿನಿಯಮ ಸಂಖ್ಯೆ: 17ರ ಮೂಲಕ ದಿನಾಂಕ: 23-ಂ9-1996ರಿಂದ ಪ್ರತಿಯೋಜಿಸಲಾಗಿದೆ.
2. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
ಪರಂತು, ಆ ಖಾಲಿ ಸ್ಥಾನವು, ಒಂದು ತಿಂಗಳಿಗಿಂತ ಕಡಿಮೆಯ ಅವಧಿಯದಾಗಿದ್ದರೆ ಯಾವುದೇ ಚುನಾವಣೆಯನ್ನು ನಡೆಸತಕ್ಕದ್ದಲ್ಲ.
(2) 1[ಸರ್ಕಾರವು]1, ಗೊತ್ತುಪಡಿಸಿರುವ ರೀತಿಯಲ್ಲಿ,
1. 2000ರ ಅಧಿನಿಯಮ ಸಂಖ್ಯೆ: 8ರ ಮೂಲಕ ದಿನಾಂಕ: 03-ಂ4-2000ದಿಂದ ಪ್ರತಿಯೋಜಿಸಲಾಗಿದೆ.
(ಎ) ರಾಜ್ಯದಲ್ಲಿರುವ ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಲ್ಲಿ ಇಂತಿಷ್ಟು ಸಂಖ್ಯೆಯನ್ನು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ವ್ಯಕ್ತಿಗಳಿಗಾಗಿ ವಿೂಸಲಿಡತಕ್ಕದ್ದು ಮತ್ತು ಜಿಲ್ಲೆಯ ಜನಸಂಖ್ಯೆಯಲ್ಲಿ ರಾಜ್ಯದಲ್ಲಿರುವ ಅನುಸೂಚಿತ ಜಾತಿಗಳ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯು ಯಾವ ಅನುಪಾತದಲ್ಲಿದೆಯೋ ಅಂಥ ಹುದ್ದೆಗಳ ಸಂಖ್ಯೆಯು ರಾಜ್ಯದಲ್ಲಿರುವ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಸರಿಸುಮಾರು ಅದೇ ಅನುಪಾತದಲ್ಲಿರತಕ್ಕದ್ದು.
1. 1995ರ ಅಧಿನಿಯಮ ಸಂಖ್ಯೆ: 10ರ ಮೂಲಕ ದಿನಾಂಕ: 13-ಂ1-1995ರಿಂದ ಬಿಟ್ಟುಬಿಡಲಾಗಿದೆ.
(ಬಿ) ರಾಜ್ಯದಲ್ಲಿರುವ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಒಟ್ಟು ಸಂಖ್ಯೆಯ ಸರಿಸುಮಾರು ಮೂರನೇ ಒಂದರಷ್ಟು ಸಂಖ್ಯೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಹಿಂದುಳಿದ ವರ್ಗಗಳ ವ್ಯಕ್ತಿಗಳಿಗಾಗಿ ವಿೂಸಲಿಡತಕ್ಕದ್ದು. 2[ಆದರೆ ಈ ಖಂಡದಡಿಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಹಾಗೆ ನಿರ್ಧರಿಸಿ ಮೀಸಲಿರಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಒಟ್ಟು ಹುದ್ದೆಗಳ ಸಂಖ್ಯೆಯು, (ಎ) ಖಂಡದ ಅಡಿಯಲ್ಲಿ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳಿಗಾಗಿ ಮತ್ತು ಈ ಖಂಡದ ಅಡಿಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಮೀಸಲಿರಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಒಟ್ಟು ಸಂಖ್ಯೆಯು, ರಾಜ್ಯದಲ್ಲಿನ ಜಿಲ್ಲಾ ಪಂಚಾಯತಿಯಲ್ಲಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಒಟ್ಟು ಸಂಖ್ಯೆಯ ಶೇಕಡಾ ಐವತ್ತನ್ನು ಮೀರತಕ್ಕದ್ದಲ್ಲ.]2
1[ಪರಂತು, ಈ ಖಂಡದ ಅಡಿಯಲ್ಲಿ ಮೀಸಲಿರಿಸಿದ ಹುದ್ದೆಗಳ ಪೈಕಿ ಅಂಥ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿಶೇಕಡಾ ಎಂಬತ್ತರಷ್ಟನ್ನು ``ಎ'' ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸತಕ್ಕದ್ದು ಮತ್ತು ಉಳಿದ ಶೇಕಡ ಇಪ್ಪರಷ್ಟು ಹುದ್ದೆಗಳನ್ನು ``ಬಿ'' ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸತಕ್ಕದ್ದು.]1
1. 1995ರ ಅಧಿನಿಯಮ ಸಂಖ್ಯೆ: 10ರ ಮೂಲಕ ದಿನಾಂಕ: 13-ಂ1-1995ರಿಂದ ಸೇರಿಸಲಾಗಿದೆ.
2. 2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2011ರಿಂದ ಸೇರಿಸಲಾಗಿದೆ. (ಸಿ) ರಾಜ್ಯದಲ್ಲಿರುವ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ, ಅನುಸೂಚಿತ ಜಾತಿಗಳ, ಅನುಸೂಚಿತ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗಕ್ಕೂ ವಿೂಸಲಿಟ್ಟಿರುವ ಹುದ್ದೆಗಳಲ್ಲಿ ಮತ್ತು ವಿೂಸಲಿಟ್ಟಿರದ ಹುದ್ದೆಗಳಲ್ಲಿ 1[ಶೇಕಡಾ ಐವತ್ತರಷ್ಟಕ್ಕೆ]1 ಕಡಿಮೆ ಇಲ್ಲದಷ್ಟು ಹುದ್ದೆಗಳನ್ನು ಮಹಿಳೆಯರಿಗಾಗಿ 2[ಒಟ್ಟಾರೆಯಾಗಿ ಅರ್ಧದಷ್ಟು ಪರಿಮಿತಿಗೆ ಒಳಪಟ್ಟು ಮುಂದಿನ ಸಂಖ್ಯೆಗೆ ಪೂರ್ಣಾಂಕಗೊಳಿಸಿದಷ್ಟು]2 ವಿೂಸಲಿಡತಕ್ಕದ್ದು:
ಪರಂತು, ಈ ಪ್ರಕರಣದಡಿಯಲ್ಲಿ ವಿೂಸಲಿರಿಸಿರುವ ಹುದ್ದೆಯನ್ನು ಬೇರೆ ಬೇರೆ ಜಿಲ್ಲಾ ಪಂಚಾಯತಿಗಳಿಗೆ ಸರದಿ ಪ್ರಕಾರ ಹಂಚಿಕೆ ಮಾಡತಕ್ಕದ್ದು. ವಿವರಣೆ. ಸಂದೇಹಗಳ ನಿವಾರಣೆಗಾಗಿ, ಈ ಉಪ ಪ್ರಕರಣದಡಿ ಹುದ್ದೆಗಳ ವಿೂಸಲಾತಿಯ ಉದ್ದೇಶಗಳಿಗಾಗಿ ಸರದಿಯ ಸೂತ್ರವು 1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು ಪ್ರಾರಂಭವಾದ ತರುವಾಯ ನಡೆಯುವ ಪ್ರಥಮ ಸಾಮಾನ್ಯ ಚುನಾವಣೆಯಿಂದ ಪ್ರಾರಂಭವಾಗತಕ್ಕುದ್ದೆಂದು ಈ ಮೂಲಕ ಘೋಷಿಸಲಾಗಿದೆ.
1. 2010ರ ಅಧಿನಿಯಮ ಸಂಖ್ಯೆ: 24ರ ಮೂಲಕ ದಿನಾಂಕ: 23-ಂ7-2010ರಿಂದ ಪ್ರತಿಯೋಜಿಸಲಾಗಿದೆ.
2. 2015ರ ಅಧಿನಿಯಮ ಸಂಖ್ಯೆ 17ರ ಮೂಲಕ ದಿನಾಂಕ: 30.04.2015ರಿಂದ ಸೇರಿಸಲಾಗಿದೆ.
32[1[(3) ಈ ಅಧಿನಿಯಮದಲ್ಲಿ ಅನ್ಯಥಾ ಉಪಬಂಧಿಸಿದುದನ್ನು ಹೊರತುಪಡಿಸಿ, ಜಿಲ್ಲಾ ಪಂಚಾಯತಿಯ ಪ್ರತಿಯೊಬ್ಬ ಅಧ್ಯಕ್ಷ ಮತ್ತು ಪ್ರತಿಯೊಬ್ಬ ಉಪಾಧ್ಯಕ್ಷನ ಹುದ್ದೆಯ ಅವಧಿಯು, ಆತನನ್ನು ಚುನಾಯಿಸಿದ ದಿನಾಂಕದಿಂದ ಐದು ವರ್ಷಗಳು ಅಥವಾ ಅವನು ಜಿಲ್ಲಾ ಪಂಚಾಯತಿಯ ಸದಸ್ಯನಾಗಿರುವುದು ನಿಂತುಹೋಗುವವರಗೆ, ಇದರಲ್ಲಿ ಯಾವುದು ಮೊದಲೋ ಆ ಅವಧಿಯಾಗಿರತಕ್ಕದ್ದು.]1]3
2[ಪರಂತು ಅಧ್ಯಕ್ಷ ಅಥವಾ ಉಪಾಧ್ಯಕ್ಷನ ಹುದ್ದೆಯಲ್ಲಿನ ಆಕಸ್ಮಿಕ ಖಾಲಿ ಸ್ಥಾನವನ್ನು ತುಂಬುವುದಕ್ಕಾಗಿ ಅಧ್ಯಕ್ಷ ಅಥವಾ ಉಪಾಧ್ಯಕ್ಷನಾಗಿ ಚುನಾಯಿತನಾದ ಸದಸ್ಯನು, ಯಾವ ಅಧ್ಯಕ್ಷ ಅಥವಾ ಉಪಾಧ್ಯಕ್ಷನ ಸ್ಥಾನಕ್ಕೆ ಆತನು ಚುನಾಯಿತನಾಗಿರುವನೋ ಆ ಅಧ್ಯಕ್ಷ ಅಥವಾ ಉಪಾಧ್ಯಕ್ಷನು ಖಾಲಿ ಹುದ್ದೆ ಉಂಟಾಗಿರದಿದ್ದರೆ ಯಾವ ಅವಧಿಯವರೆಗೆ ಹುದ್ದೆಯನ್ನು ಹೊಂದಿರುತ್ತಿದ್ದನೋ ಆ ಉಳಿದ ಅವಧಿಯವರೆಗೆ ಹುದ್ದೆಯನ್ನು ಹೊಂದಿರತಕ್ಕದ್ದು.]2
1. 1996ರ ಅಧಿನಿಯಮ ಸಂಖ್ಯೆ: 17ರ ಮೂಲಕ ದಿನಾಂಕ: 23-ಂ9-1996ರಿಂದ ಪ್ರತಿಯೋಜಿಸಲಾಗಿದೆ.
2. 1997ರ ಅಧಿನಿಯಮ ಸಂಖ್ಯೆ: 10ರ ಮೂಲಕ ದಿನಾಂಕ: 23-ಂ9-1996ರಿಂದ ಸೇರಿಸಲಾಗಿದೆ.
3. 2015ರ ಅಧಿನಿಯಮ ಸಂಖ್ಯೆ 17ರ ಮೂಲಕ ದಿನಾಂಕ: 30.04.2015ರಿಂದ ಪ್ರತಿಯೋಜಿಸಲಾಗಿದೆ.
(4) ಜಿಲ್ಲಾ ಪಂಚಾಯತಿಯ ಅಧ್ಯಕ್ಷನ ಅಥವಾ ಉಪಾಧ್ಯಕ್ಷನ ಚುನಾವಣೆ ಮತ್ತು ಸದರಿ ಹುದ್ದೆಗಳಲ್ಲಾಗುವ ಖಾಲಿ ಸ್ಥಾನಗಳನ್ನು ತುಂಬುವುದು ಮತ್ತು ಅಂಥ ಚುನಾವಣೆಗೆ ಸಂಬಂಧಪಟ್ಟ ವಿವಾದಗಳನ್ನು ನಿರ್ಧರಿಸುವುದು, ಗೊತ್ತುಪಡಿಸಬಹುದಾದಂಥ ನಿಯಮಗಳಿಗನುಸಾರವಾಗಿ ಇರತಕ್ಕದ್ದು:
ಪರಂತು, ಅಂಥ ಚುನಾವಣಾ ವಿವಾದಗಳನ್ನು ತೀರ್ಮಾನಿಸುವ ಪ್ರಾಧಿಕಾರಿಯು, ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲಾ ನ್ಯಾಯಾಧೀಶನಾಗಿರತಕ್ಕದ್ದು.
178. ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮತ್ತು ಇತರ ಸದಸ್ಯರ ಸಂಬಳ ಮತ್ತು ಭತ್ಯೆಗಳು. (1) ಅಧ್ಯಕ್ಷನಿಗೆ ಮತ್ತು ಉಪಾಧ್ಯಕ್ಷನಿಗೆ ಸಂದಾಯ ಮಾಡಬೇಕಾದ ಸಂಬಳ ಮತ್ತು ಭತ್ಯೆಗಳು ಗೊತ್ತುಪಡಿಸಬಹುದಾದಂತೆ ಇರತಕ್ಕದ್ದು. 1[ಪರಂತು, ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ರಾಜ್ಯ ಸಚಿವರ ಸ್ಥಾನಮಾನವನ್ನು ಹೊಂದಿರತಕ್ಕದ್ದು ಮತ್ತು ನಿಯಮಿಸಬಹುದಾದಂಥ ಸಂಬಳ, ಅಥವಾ ಇನ್ನಿತರ ಉಪಲಬ್ಧಿಗಳಿಗೆ ಹಕ್ಕುಳ್ಳವರಾಗಿರತಕ್ಕದ್ದು.]1
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ. (2) ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹೊರತುಪಡಿಸಿ ಜಿಲ್ಲಾ ಪಂಚಾಯತಿಯ ಪ್ರತಿಯೊಬ್ಬ ಸದಸ್ಯನು, ಗೊತ್ತುಪಡಿಸಬಹುದಾದಂಥ ಉಪವೇಶನ ಶುಲ್ಕ ಮತ್ತು ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು.
179. ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ರಾಜೀನಾಮೆ ಅಥವಾ ಅವನನ್ನು ತೆಗೆದುಹಾಕುವುದು. (1) ಅಧ್ಯಕ್ಷನಾಗಿ ಹುದ್ದೆಯನ್ನು ಧಾರಣ ಮಾಡಿರುವ ಸದಸ್ಯನು 1[ಸಕರ್ಾರಕ್ಕೆ]1 ಯಾವುದೇ ಕಾಲದಲ್ಲಿ ತನ್ನ ಸಹಿ ಸಹಿತ ಬರಹದಲ್ಲಿ ಬರೆದು ತನ್ನ ಹುದ್ದೆಗೆ ರಾಜೀನಾಮೆ ಕೊಡಬಹುದು ಮತ್ತು ಉಪಾಧ್ಯಕ್ಷನು, ತನ್ನ ಸ್ಥಾನಕ್ಕೆ, ತನ್ನ ಸಹಿ ಸಹಿತ ಬರಹದಲ್ಲಿ ಅಧ್ಯಕ್ಷನಿಗೆ ಅಥವಾ ಅಧ್ಯಕ್ಷನ ಗೈರುಹಾಜರಿಯಲ್ಲಿ 1[ಸರ್ಕಾರಕ್ಕೆ]1 ಬರೆದು ಯಾವುದೇ ಕಾಲದಲ್ಲಿ ರಾಜೀನಾಮೆ ಕೊಡಬಹುದು ಮತ್ತು ಆ ಹುದ್ದೆಯು ಅಂಥ ರಾಜೀನಾಮೆ ದಿನಾಂಕದಿಂದ ಹದಿನೈದು ದಿವಸಗಳು ಮುಕ್ತಾಯವಾದ ಮೇಲೆ ಸದರಿ ಹದಿನೈದು ದಿವಸಗಳ ಅವಧಿಯೊಳಗೆ ಸಂದರ್ಭಾನುಸಾರ, 1[ಸರ್ಕಾರಕ್ಕೆ]1 ಅಥವಾ ಅಧ್ಯಕ್ಷನಿಗೆ, ಸಂಬೋಧಿಸಿ ತನ್ನ ಸಹಿ ಸಹಿತ ಬರಹದಲ್ಲಿ ಬರೆದು ಅಂಥ ರಾಜೀನಾಮೆಯನ್ನು ಅವರು ಹಿಂತೆಗೆದುಕೊಂಡಿದ್ದ ಹೊರತು, ಆ ಹುದ್ದೆಯು ತೆರವಾಗತಕ್ಕದ್ದು.
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
(2) ಪ್ರತಿಯೊಬ್ಬ ಅಧ್ಯಕ್ಷ ಅಥವಾ ಉಪಾಧ್ಯಕ್ಷನು ಅವನು ಜಿಲ್ಲಾ ಪಂಚಾಯತಿಯ ಸದಸ್ಯನಾಗಿರುವುದು ನಿಂತುಹೋದಾಗ ತನ್ನ ಹುದ್ದೆಯನ್ನು ತೆರವು ಮಾಡತಕ್ಕದ್ದು.
(3) ಜಿಲ್ಲಾ ಪಂಚಾಯತಿಯ ಅಧ್ಯಕ್ಷನು ಅಥವಾ ಉಪಾಧ್ಯಕ್ಷನು ಅವನಲ್ಲಿ ಅವಿಶ್ವಾಸವನ್ನು ವ್ಯಕ್ತಪಡಿಸುವ ನಿರ್ಣಯವನ್ನು 2[ಅರ್ಧದಷ್ಟು ಚುನಾಯಿತ ಸದಸ್ಯರು ನೋಟೀಸನ್ನು ನೀಡಿದ ತರುವಾಯ ಮತ್ತು ಒಟ್ಟು ಚುನಾಯಿತ ಸದಸ್ಯರ ಪೈಕಿ ಮೂರನೇ ಎರಡು ಭಾಗದಷ್ಟು ಬಹುಮತದಿಂದ]2 ಅಂಗೀಕರಿಸಿದರೆ ಅವನು ಹುದ್ದೆಯನ್ನು ತಕ್ಷಣವೇ ತೆರವು ಮಾಡಿರುವುದಾಗಿ ಭಾವಿಸತಕ್ಕದ್ದು:
1[ಪರಂತು ಅಧ್ಯಕ್ಷ ಅಥವಾ ಉಪಾಧ್ಯಕ್ಷನಲ್ಲಿ ಅವಿಶ್ವಾಸ ಸೂಚಿಸುವ ಯಾವ ನಿರ್ಣಯವನ್ನೂ ಆತನು ಆಯ್ಕೆಯಾದ ದಿನಾಂಕದಿಂದ 2[ಮೂವತ್ತು ತಿಂಗಳೊಳಗೆ]2 ಮಂಡಿಸತಕ್ಕದ್ದಲ್ಲ:
ಮತ್ತು ಪರಂತು ಯಾವೊಬ್ಬ ಅಧ್ಯಕ್ಷ ಅಥವಾ ಉಪಾಧ್ಯಕ್ಷನಲ್ಲಿ ಅವಿಶ್ವಾಸ ಸೂಚಿಸುವ ನಿರ್ಣಯವನ್ನು ಜಿಲ್ಲಾ ಪಂಚಾಯತಿಯು ಪರಿಶೀಲಿಸಿ ಅದನ್ನು ಅಂಗೀಕರಿಸದಿರುವಲ್ಲಿ, ಅದೇ ಅಧ್ಯಕ್ಷ ಅಥವಾ ಉಪಾಧ್ಯಕ್ಷನ ಸಂಬಂಧದಲ್ಲಿ ಜಿಲ್ಲಾ ಪಂಚಾಯತಿಯು ತನ್ನ ನಿರ್ಣಯವನ್ನು ನೀಡಿದ ದಿನಾಂಕದಿಂದ 2[ಎರಡು ವರ್ಷಗಳೊಳಗೆ]2 ಅದೇ ರೀತಿಯ ನಿರ್ಣಯದ ನೋಟೀಸನ್ನು ನೀಡತಕ್ಕದ್ದಲ್ಲ ಅಥವಾ ಮಂಡಿಸತಕ್ಕದ್ದಲ್ಲ.]1
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಸೇರಿಸಲಾಗಿದೆ. 2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
(4) ಜಿಲ್ಲಾ ಪಂಚಾಯತಿಯ ಪ್ರತಿಯೊಬ್ಬ ಅಧ್ಯಕ್ಷನನ್ನು ಮತ್ತು ಉಪಾಧ್ಯಕ್ಷನನ್ನು, ಅವನಿಗೆ ಅಹವಾಲು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ತರುವಾಯ ಅಧ್ಯಕ್ಷನಾಗಿ ಅಥವಾ ಉಪಾಧ್ಯಕ್ಷನಾಗಿ ಅವನ ಕರ್ತವ್ಯಗಳ ನಿರ್ವಹಣೆಯಲ್ಲಿನ ದುರ್ವರ್ತನೆಗಾಗಿ ಅಥವಾ ಅವನ ಕರ್ತವ್ಯಗಳ ನಿರ್ವಹಣೆಯಲ್ಲಿ ಒಂದೇ ಸಮನೆ ಅಲಕ್ಷಯ ತೋರಿಸಿದ್ದಕ್ಕಾಗಿ ಸರ್ಕಾರವು ಆ ಹುದ್ದೆಯಿಂದ ಅವನನ್ನು ತೆಗೆದುಹಾಕಬಹುದಾಗಿರತಕ್ಕದ್ದು ಮತ್ತು ಹಾಗೆ ತೆಗೆದುಹಾಕಲಾದ ಅಧ್ಯಕ್ಷನು ಅಥವಾ ಉಪಾಧ್ಯಕ್ಷನು (2)ನೇ ಉಪ ಪ್ರಕರಣದಡಿಯಲ್ಲಿ ಸದಸ್ಯನಾಗಿರುವುದು ನಿಂತುಹೋಗಿರದಿದ್ದರೆ ಅವನು ಅಂಥ ಜಿಲ್ಲಾ ಪಂಚಾಯತಿ ಸದಸ್ಯ ಹುದ್ದೆಯ ಉಳಿದ ಅವಧಿಯಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷನಾಗಿ ಮರು ಚುನಾವಣೆಗೆ ಅರ್ಹನಾಗಿರತಕ್ಕದ್ದಲ್ಲ.
(5) (4)ನೇ ಉಪ ಪ್ರಕರಣದ ಅಡಿಯಲ್ಲಿ ಹುದ್ದೆಯಿಂದ ತೆಗೆದುಹಾಕಲಾದ ಅಧ್ಯಕ್ಷನನ್ನು ಅಥವಾ ಉಪಾಧ್ಯಕ್ಷನನ್ನು ಸರ್ಕಾರವು, ಜಿಲ್ಲಾ ಪಂಚಾಯತಿಯ ಸದಸ್ಯತ್ವದಿಂದಲೂ ಸಹ ತೆಗೆದುಹಾಕಬಹುದು.
ಅಧ್ಯಕ್ಷ ಮತ್ತು ಉಪಾಧ್ಯಕ್ಷನ ಹುದ್ದೆಗಳೆರಡೂ ತೆರವಾದಲ್ಲಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷನು, ಅಧ್ಯಕ್ಷ ಅಥವಾ ಉಪಾಧ್ಯಕ್ಷನನ್ನು ಯುಕ್ತವಾಗಿ ಚುನಾಯಿಸುವವರೆಗೆ ಅಧ್ಯಕ್ಷನ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.]1
1. 2003ರ ಅಧಿನಿಯಮ ಸಂಖ್ಯೆ: 37ರ ಮೂಲಕ ದಿನಾಂಕ: 01-10-2003ರಿಂದ ಸೇರಿಸಲಾಗಿದೆ.
No comments:
Post a Comment