ಚುನಾವಣಾ ಉದ್ದೇಶಗಳಿಗಾಗಿ ಆವರಣ, ವಾಹನಗಳು ಇತ್ಯಾದಿಗಳನ್ನು ಕಡ್ಡಾಯವಾಗಿ ಕೋರುವುದು.

inyatrust.in | Saturday, November 26, 2022

(1) ಈ ಅಧಿನಿಯಮದ ಅಡಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಚುನಾವಣೆಗಳನ್ನು ನಡೆಸುವುದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಅಧಿಕಾರ ನೀಡಿರುವ ಅಧಿಕಾರಿಗೆ  (ಇದರಲ್ಲಿ  ಇನ್ನು  ಮುಂದೆ  ``ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿ''  ಎಂದು  ಉಲ್ಲೇಖಿಸಿದೆ)  ಈ ಅಧಿನಿಯಮದ ಅಡಿಯಲ್ಲಿ ಚುನಾವಣೆಗೆ ಸಂಬಂಧಪಟ್ಟಂತೆ,     
(ಎ)  ಯಾವುದೇ  ಆವರಣವು,  ಮತದಾನ  ಕೇಂದ್ರವಾಗಿ  ಉಪಯೋಗಿಸುವ  ಉದ್ದೇಶಕ್ಕಾಗಿ  ಅಥವಾ ಮತದಾನ  ನಡೆದ  ತರುವಾಯ  ಮತಪೆಟ್ಟಿಗೆಗಳನ್ನು  ದಾಸ್ತಾನು  ಮಾಡುವುದಕ್ಕಾಗಿ  ಬೇಕಾಗಿದೆಯೆಂದು  ಅಥವಾ ಬೇಕಾಗುವ ಸಂಭವವಿದೆಯೆಂದು ಕಂಡುಬಂದರೆ, ಅಥವಾ     
(ಬಿ)  ಯಾವುದೇ  ವಾಹನ,  ನೌಕೆ  ಅಥವಾ  ಪ್ರಾಣಿಯು  ಯಾವುದೇ  ಮತದಾನ  ಕೇಂದ್ರಕ್ಕೆ  ಅಥವಾ ಅದರಿಂದ,  ಮತಪೆಟ್ಟಿಗೆಗಳನ್ನು  ಸಾಗಿಸುವ  ಉದ್ದೇಶಕ್ಕಾಗಿ  ಅಥವಾ  ಅಂಥ  ಚುನಾವಣೆಯನ್ನು  ನಡೆಸುವಾಗ ಸುವ್ಯವಸ್ಥೆಯನ್ನು ಪಾಲಿಸುವುದಕ್ಕಾಗಿ, ಪೊಲೀಸು ದಳದ ಸದಸ್ಯರನ್ನು ಸಾಗಿಸುವುದಕ್ಕಾಗಿ ಅಥವಾ ಅಂಥ ಚುನಾವಣೆಗೆ ಸಂಬಂಧಿಸಿದ  ಯಾವುದೇ  ಕರ್ತವ್ಯವನ್ನು  ನೆರವೇರಿಸುವುದಕ್ಕಾಗಿ  ಯಾವನೇ  ಅಧಿಕಾರಿ  ಅಥವಾ  ಇತರ  ವ್ಯಕ್ತಿಯನ್ನು ಸಾಗಿಸುವ  ಉದ್ದೇಶಕ್ಕಾಗಿ  ಬೇಕಾಗಿದೆ  ಎಂದು  ಅಥವಾ  ಬೇಕಾಗುವ  ಸಂಭವವಿದೆಯೆಂದು  ಕಂಡುಬಂದರೆ, ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು,  ಬರಹದಲ್ಲಿನ  ಆದೇಶದ  ಮೂಲಕ  ಅಂಥ  ಆವರಣ  ಅಥವಾ ಸಂದರ್ಭಾನುಸಾರ,  ಅಂಥ  ವಾಹನ,  ನೌಕೆ  ಅಥವಾ  ಪ್ರಾಣಿಯನ್ನು  ಒದಗಿಸುವಂತೆ  ಕಡ್ಡಾಯವಾಗಿ  ಕೋರಬಹುದು ಮತ್ತು  ಆ  ಕಡ್ಡಾಯ  ಕೋರಿಕೆಯ  ಸಂಬಂಧದಲ್ಲಿ  ಅವನಿಗೆ  ಅಗತ್ಯವೆಂದು  ಅಥವಾ  ವಿಹಿತವೆಂದು ಕಂಡುಬರಬಹುದಾದಂಥ ಇನ್ನೂ ಹೆಚ್ಚಿನ ಆದೇಶಗಳನ್ನು ಮಾಡಬಹುದು:   ಪರಂತು,  ಅಂಥ  ಅಭ್ಯರ್ಥಿಯ  ಚುನಾವಣೆಗೆ  ಸಂಬಂಧಪಟ್ಟ  ಯಾವುದೇ  ಉದ್ದೇಶಕ್ಕಾಗಿ  ಅಂಥ  ಅಭ್ಯರ್ಥಿ ಅಥವಾ  ಅವನ  ಏಜೆಂಟನು  ಕಾನೂನುಬದ್ಧವಾಗಿ  ಉಪಯೋಗಿಸುತ್ತಿರುವಂಥ  ಯಾವುದೇ  ವಾಹನ,  ನೌಕೆ  ಅಥವಾ ಪ್ರಾಣಿಯನ್ನು  ಅಂಥ  ಚುನಾವಣೆಗಳ  ಮತದಾನವು  ಮುಕ್ತಾಯವಾಗುವವರೆಗೆ  ಈ  ಉಪಪ್ರಕರಣದ  ಅಡಿಯಲ್ಲಿ ಕಡ್ಡಾಯವಾಗಿ ಕೋರತಕ್ಕದ್ದಲ್ಲ.   
(2) ಕಡ್ಡಾಯ  ಕೋರಿಕೆಯನ್ನು,  ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು,  ಸ್ವತ್ತಿನ  ಮಾಲೀಕನಾಗಿರುವುದಾಗಿ ಅಥವಾ  ಅದರ  ಸ್ವಾಧೀನ  ಹೊಂದಿರುವ  ವ್ಯಕ್ತಿಯಾಗಿರುವುದಾಗಿ  ಭಾವಿಸಲಾದ  ವ್ಯಕ್ತಿಗೆ  ಸಂಬೋಧಿಸಿದ  ಲಿಖಿತ ಆದೇಶದ  ಮೂಲಕ  ಜಾರಿಗೊಳಿಸತಕ್ಕದ್ದು  ಮತ್ತು  ಅಂಥ  ಆದೇಶವನ್ನು  ಗೊತ್ತುಪಡಿಸಿರುವ  ರೀತಿಯಲ್ಲಿ,  ಅದನ್ನು ಯಾರಿಗೆ ಸಂಬೋಧಿಸಲಾಗಿದೆಯೋ ಆ ವ್ಯಕ್ತಿಗೆ ಜಾರಿ ಮಾಡತಕ್ಕದ್ದು.   
(3)  (1)ನೇ  ಉಪಪ್ರಕರಣದ  ಅಡಿಯಲ್ಲಿ  ಯಾವುದೇ  ಸ್ವತ್ತನ್ನು  ಕಡ್ಡಾಯವಾಗಿ  ಕೋರಿದಾಗಲೆಲ್ಲಾ,  ಅಂಥ ಕಡ್ಡಾಯ ಕೋರಿಕೆಯ ಅವಧಿಯನ್ನು, ಆ ಉಪಪ್ರಕರಣದಲ್ಲಿ ನಮೂದಿಸಿದ ಯಾವುದೇ ಉದ್ದೇಶಕ್ಕಾಗಿ ಅಂಥ ಸ್ವತ್ತು ಅಗತ್ಯವಾಗಿರುವಂಥ ಅವಧಿಯನ್ನು ಮೀರಿ ವಿಸ್ತರಿಸತಕ್ಕದ್ದಲ್ಲ.   (4) ಈ ಪ್ರಕರಣದಲ್ಲಿ,     
(ಎ)  ``ಆವರಣ''  ಎಂದರೆ,  ಯಾವುದೇ  ಭೂಮಿ,  ಕಟ್ಟಡ  ಅಥವಾ  ಕಟ್ಟಡದ  ಭಾಗ  ಮತ್ತು  ಗುಡಿಸಲು, ಷೆಡ್ಡು ಅಥವಾ ಇತರ ರಚನೆ ಅಥವಾ ಅದರ ಯಾವುದೇ ಭಾಗವನ್ನು ಒಳಗೊಳ್ಳುತ್ತದೆ;     
(ಬಿ)  ``ವಾಹನ''  ಎಂದರೆ,  ಯಾಂತ್ರಿಕ  ಶಕ್ತಿಯಿಂದ  ಅಥವಾ  ಅನ್ಯಥಾ  ಚಾಲಿತವಾದ,  ರಸ್ತೆ  ಸಾರಿಗೆ ಉದ್ದೇಶಕ್ಕಾಗಿ ಉಪಯೋಗಿಸಲಾಗುವ ಅಥವಾ ಉಪಯೋಗಿಸಲು ಸಮರ್ಥವಾದ ಯಾವುದೇ ವಾಹನ.   
272.    ನಷ್ಟ  ಪರಿಹಾರ  ಸಂದಾಯ.  (1)  271ನೇ  ಪ್ರಕರಣದ  ಅನುಸರಣೆಯಲ್ಲಿ,  ಕಡ್ಡಾಯವಾಗಿ  ಕೋರುವ ಪ್ರಾಧಿಕಾರಿಯು  ಯಾವುದೇ  ಆವರಣವನ್ನು  ಕಡ್ಡಾಯವಾಗಿ  ಕೋರಿದಾಗಲೆಲ್ಲಾ,  ಸಂಬಂಧಪಟ್ಟ  ಗ್ರಾಮ  ಪಂಚಾಯತಿ, ತಾಲ್ಲೂಕು  ಪಂಚಾಯತಿ  ಮತ್ತು  ಜಿಲ್ಲಾ  ಪಂಚಾಯತಿಯು,  ಹಿತಾಸಕ್ತಿಯನ್ನು  ಹೊಂದಿರುವ  ವ್ಯಕ್ತಿಗಳಿಗೆ
ನಷ್ಟಪರಿಹಾರವನ್ನು ಸಂದಾಯಮಾಡತಕ್ಕದ್ದು. ಅದರ ಮೊಬಲಗನ್ನು, ಕಡ್ಡಾಯವಾಗಿ ಕೋರುವ ಪ್ರಾಧಿಕಾರಿಯು, ಈ ಕೆಳಕಂಡ ಅಂಶಗಳನ್ನು ಪರ್ಯಾಲೋಚಿಸಿ ನಿರ್ಧರಿಸತಕ್ಕದ್ದು ಎಂದರೆ:     
  ಆ  ಆವರಣಕ್ಕೆ  ಸಂಬಂಧಿಸಿದಂತೆ  ಸಂದಾಯಮಾಡಬೇಕಾದ  ಬಾಡಿಗೆ  ಅಥವಾ  ಯಾವುದೇ ಬಾಡಿಗೆಯನ್ನು ಹಾಗೆ ಸಂದಾಯ ಮಾಡಬೇಕಾಗಿಲ್ಲದೆ ಇರುವಾಗ, ಆ ಸ್ಥಳದಲ್ಲಿ ಅಂಥದೇ ಆವರಣಕ್ಕಾಗಿ ಸಂದಾಯ ಮಾಡಬೇಕಾದ ಬಾಡಿಗೆ;     
  ಆವರಣಗಳನ್ನು  ಕಡ್ಡಾಯವಾಗಿ  ಕೋರಿದ  ಪರಿಣಾಮವಾಗಿ  ಹಿತಾಸಕ್ತಿಯುಳ್ಳ  ವ್ಯಕ್ತಿಯು,  ಅವನ ವಾಸಸ್ಥಳ  ಅಥವಾ  ವ್ಯವಹಾರದ  ಸ್ಥಳವನ್ನು  ಬಲವಂತವಾಗಿ  ಬದಲಾಯಿಸಬೇಕಾಗಿ  ಬಂದರೆ,  ಅಂಥ  ಬದಲಾವಣೆಗೆ ಪ್ರಾಸಂಗಿಕವಾದ ಯುಕ್ತ ವೆಚ್ಚಗಳು, ಯಾವುವಾದರೂ ಇದ್ದರೆ, ಅವುಗಳು:   
ಪರಂತು,  ಹಾಗೆ  ನಿರ್ಧರಿಸಿದ  ನಷ್ಟ  ಪರಿಹಾರದ  ಮೊಬಲಗಿನಿಂದ  ಬಾಧಿತನಾದ,  ಹಿತಾಸಕ್ತಿಯನ್ನು  ಹೊಂದಿದ, ಯಾವನೇ  ವ್ಯಕ್ತಿಯು  (1)ನೇ  ಉಪಪ್ರಕರಣದ  ಅಡಿಯಲ್ಲಿ  ಆದೇಶವನ್ನು  ಮಾಡಿದ    ದಿನಾಂಕದಿಂದ  ಮೂವತ್ತು ದಿನಗಳೊಳಗೆ  ಕಡ್ಡಾಯವಾಗಿ  ಕೋರಿರುವ  ಪ್ರಾಧಿಕಾರಿಗೆ  ಅರ್ಜಿಯನ್ನು  ಸಲ್ಲಿಸಿದಾಗ,  ಕಡ್ಡಾಯವಾಗಿ  ಕೋರುವ ಪ್ರಾಧಿಕಾರಿಯು,  ನಿರ್ಧರಣೆಗಾಗಿ  ಆ  ವಿಷಯವನ್ನು  ಆ  ಸ್ಥಳದಲ್ಲಿ  ಅಧಿಕಾರ  ವ್ಯಾಪ್ತಿಯನ್ನು  ಹೊಂದಿರುವ 1[ಗೊತ್ತುಪಡಿಸಿದ  ನ್ಯಾಯಾಲಯರಿಗೆ]1  ಒಪ್ಪಿಸತಕ್ಕದ್ದು  ಮತ್ತು  ಅಂಥ  1[ಗೊತ್ತುಪಡಿಸಿದ  ನ್ಯಾಯಾಲಯರ]1 ತೀರ್ಮಾನಕ್ಕನುಸಾರರಾಗಿ ಅದನ್ನು ನಿರ್ಧರಿಸತಕ್ಕದ್ದು.
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
ವಿವರಣೆ.  ಈ  ಉಪ  ಪ್ರಕರಣದಲ್ಲಿ  ``ಹಿತಾಸಕ್ತಿಯನ್ನು  ಹೊಂದಿದ  ವ್ಯಕ್ತಿ''  ಎಂದರೆ  ಕಡ್ಡಾಯ  ಕೋರಿಕೆಯ ನಿಕಟಪೂರ್ವದಲ್ಲಿ  271ನೇ  ಪ್ರಕರಣದ  ಅಡಿಯಲ್ಲಿ  ಕಡ್ಡಾಯವಾಗಿ  ಕೋರಿದ  ಆವರಣದ  ವಾಸ್ತವಿಕ  ಸ್ವಾಧೀನವನ್ನು ಹೊಂದಿದ್ದ  ವ್ಯಕ್ತಿ  ಅಥವಾ  ಯಾವನೇ  ವ್ಯಕ್ತಿಯು  ಅಂಥ  ವಾಸ್ತವಿಕ  ಸ್ವಾಧೀನವನ್ನು  ಹೊಂದಿಲ್ಲದಿರುವಲ್ಲಿ  ಅಂಥ ಆವರಣದ ಮಾಲೀಕ.   
(2) 271ನೇ  ಪ್ರಕರಣದ  ಅನುಸರಣೆಯಲ್ಲಿ  ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು,  ಯಾವುದೇ  ವಾಹನ, ನೌಕೆ  ಅಥವಾ  ಪ್ರಾಣಿಯನ್ನು  ಕಡ್ಡಾಯವಾಗಿ  ಕೋರಿದಾಗಲೆಲ್ಲಾ  ಗ್ರಾಮ  ಪಂಚಾಯತಿ,  ತಾಲ್ಲೂಕು  ಪಂಚಾಯತಿ ಅಥವಾ  ಜಿಲ್ಲಾ  ಪಂಚಾಯತಿಯು,  ಅದರ  ಮಾಲೀಕನಿಗೆ  ನಷ್ಟ    ಪರಿಹಾರವನ್ನು  ಸಂದಾಯ  ಮಾಡತಕ್ಕದ್ದು. ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು  ಅದರ  ಮೊಬಲಗನ್ನು  ಅಂಥ  ವಾಹನ,  ನೌಕೆ  ಅಥವಾ  ಪ್ರಾಣಿಯ ಬಾಡಿಗೆಗಾಗಿ ಆ ಸ್ಥಳದಲ್ಲಿ ಚಾಲ್ತಿಯಲ್ಲಿರುವ ಹಾಸಲುಗಳು ಅಥವಾ ದರಗಳ ಆಧಾರದ ಮೇಲೆ ನಿರ್ಧರಿಸತಕ್ಕದ್ದು:   
ಪರಂತು,  ಹಾಗೆ  ನಿರ್ಧರಿಸಿದ  ಪರಿಹಾರದ  ಮೊಬಲಗಿನಿಂದ  ಬಾಧಿತನಾದ  ಅಂಥ  ವಾಹನ,  ನೌಕೆ  ಅಥವಾ ಪ್ರಾಣಿಯ ಮಾಲೀಕನು ಕಡ್ಡಾಯವಾಗಿ ಕೋರುವ ಪ್ರಾಧಿಕಾರಿಗೆ ಮೂವತ್ತು ದಿನಗಳೊಳಗೆ ಅರ್ಜಿಯನ್ನು ಸಲ್ಲಿಸಿದಲ್ಲಿ, ಆ  ಸ್ಥಳದಲ್ಲಿ  ಅಧಿಕಾರ  ವ್ಯಾಪ್ತಿಯನ್ನು  ಹೊಂದಿರುವ  1[ಗೊತ್ತುಪಡಿಸಿದ  ನ್ಯಾಯಾಲಯ]1ರಿಗೆ  ಆ  ವಿಷಯವನ್ನು ಒಪ್ಪಿಸತಕ್ಕದ್ದು  ಮತ್ತು  ಸಂದಾಯ  ಮಾಡಬೇಕಾದ  ನಷ್ಟಪರಿಹಾರದ  ಮೊಬಲಗು  ಆ  1[ಸಿವಿಲ್  ನ್ಯಾಯಾಧೀಶರು (ಕಿರಿಯ ವರ್ಗ)]1 ನಿರ್ಧರಿಸಬಹುದಾದಂಥದ್ದಾಗಿರತಕ್ಕದ್ದು:
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
  ಮತ್ತು  ಪರಂತು,  ಕಡ್ಡಾಯ  ಕೋರಿಕೆಯ  ನಿಕಟಪೂರ್ವದಲ್ಲಿ,  ವಾಹನ  ಅಥವಾ  ನೌಕೆಯು  ಕಂತು  ಖರೀದಿ ಒಪ್ಪಂದದ ಕಾರಣದಿಂದಾಗಿ ಆ ವಾಹನ ಅಥವಾ ನೌಕೆಯ ಮಾಲೀಕನನ್ನು ಹೊರತುಪಡಿಸಿದ ವ್ಯಕ್ತಿಯ ಸ್ವಾಧೀನದಲ್ಲಿ ಇದ್ದಾಗ,  ಒಟ್ಟು  ಇತರ  ನಷ್ಟಪರಿಹಾರವೆಂದು  ಈ  ಉಪ  ಪ್ರಕರಣದ  ಅಡಿಯಲ್ಲಿ  ನಿರ್ಧರಿಸಲಾದ  ಮೊಬಲಗನ್ನು  ಆ ವ್ಯಕ್ತಿ  ಮತ್ತು  ಮಾಲೀಕನ  ನಡುವೆ,  ಅವರು  ಒಪ್ಪಬಹುದಾದಂಥ  ರೀತಿಯಲ್ಲಿ  ಮತ್ತು  ಆ  ಒಪ್ಪಂದವು  ಆಗದಿದ್ದರೆ,  ಈ ಬಗ್ಗೆ  ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು  ನೇಮಕ  ಮಾಡಿದ  ಮಧ್ಯಸ್ಥಗಾರನು  ತೀರ್ಮಾನಿಸಬಹುದಾದಂಥ ರೀತಿಯಲ್ಲಿ ಹಂಚತಕ್ಕದ್ದು.   
273.  ಮಾಹಿತಿಯನ್ನು ಪಡೆಯುವ  ಅಧಿಕಾರ. ಕಡ್ಡಾಯವಾಗಿ ಕೋರುವ ಪ್ರಾಧಿಕಾರಿಯು, 271ನೇ ಪ್ರಕರಣದ ಅಡಿಯಲ್ಲಿ  ಯಾವುದೇ  ಸ್ವತ್ತನ್ನು,  ಕಡ್ಡಾಯವಾಗಿ  ಕೋರುವ  ಅಥವಾ  272ನೇ  ಪ್ರಕರಣದ  ಅಡಿಯಲ್ಲಿ  ಸಂದಾಯ ಮಾಡಬೇಕಾದ  ನಷ್ಟಪರಿಹಾರವನ್ನು  ನಿರ್ಧರಿಸುವ  ದೃಷ್ಟಿಯಿಂದ,  ಆದೇಶದ  ಮೂಲಕ,  ಆ  ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ  ಪ್ರಾಧಿಕಾರಿಗೆ,  ಹಾಗೆ  ನಿರ್ದಿಷ್ಟಪಡಿಸಬಹುದಾದಂಥ  ಸ್ವತ್ತಿಗೆ  ಸಂಬಂಧಪಟ್ಟಂಥ, ಅವನಲ್ಲಿರುವಂಥ ಮಾಹಿತಿಯನ್ನು ಒದಗಿಸಲು ಯಾವನೇ ವ್ಯಕ್ತಿಯನ್ನು ಅಗತ್ಯಪಡಿಸಬಹುದು.   
274.    ಆವರಣ  ಇತ್ಯಾದಿಗಳಿಗೆ  ಪ್ರವೇಶಿಸುವ  ಮತ್ತು  ಅವುಗಳನ್ನು  ಪರಿಶೀಲಿಸುವ  ಅಧಿಕಾರ.  (1)  ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು  ಈ  ಬಗ್ಗೆ  ಅಧಿಕಾರ  ನೀಡಿರುವ  ಯಾವನೇ  ವ್ಯಕ್ತಿಯು,  273ನೇ ಪ್ರಕರಣದ  ಅಡಿಯಲ್ಲಿ,  ಅಂಥ  ಆವರಣ,  ವಾಹನ,  ನೌಕೆ  ಅಥವಾ  ಪ್ರಾಣಿಗೆ  ಸಂಬಂಧಪಟ್ಟಂತೆ  ಆದೇಶವನ್ನು  ಹೇಗೆ ಮಾಡತಕ್ಕದ್ದು  ಮತ್ತು  ಹಾಗೆ  ಮಾಡಬಹುದಾದರೆ  ಯಾವ  ರೀತಿಯಲ್ಲಿ  ಮಾಡಬಹುದು  ಎಂಬುದನ್ನು  ನಿರ್ಧರಿಸುವ ಉದ್ದೇಶಕ್ಕಾಗಿ  ಅಥವಾ  ಆ  ಪ್ರಕರಣದ  ಅಡಿಯಲ್ಲಿ  ಮಾಡಿದ  ಯಾವುದೇ  ಆದೇಶದ  ಪಾಲನೆಯನ್ನು ಸುನಿಶ್ಚಿತಗೊಳಿಸುವ ದೃಷ್ಟಿಯಿಂದ ಆ ಯಾವುದೇ ಆವರಣದೊಳಕ್ಕೆ ಪ್ರವೇಶಿಸಬಹುದು ಮತ್ತು ಅಂಥ ಆವರಣ ಮತ್ತು ಅದರಲ್ಲಿರುವ ಯಾವುದೇ ವಾಹನ, ನೌಕೆ ಅಥವಾ ಪ್ರಾಣಿಯನ್ನು ಪರಿಶೀಲಿಸಬಹುದು.   
(2) ಈ  ಪ್ರಕರಣದಲ್ಲಿ  ``ಆವರಣ''  ಮತ್ತು  ``ವಾಹನ''  ಎಂಬ  ಪದಗಳು  271ನೇ  ಪ್ರಕರಣದಲ್ಲಿ  ಅವು ಹೊಂದಿರುವಂಥದೇ ಅರ್ಥವನ್ನು ಹೊಂದಿರುತ್ತವೆ.   
275.    ಕಡ್ಡಾಯವಾಗಿ  ಕೋರಲಾದ  ಆವರಣಗಳಿಂದ  ಹೊರ  ಹಾಕುವುದು.  (1)  271ನೇ  ಪ್ರಕರಣದ  ಅಡಿಯಲ್ಲಿ ಮಾಡಿದ  ಯಾವುದೇ  ಆದೇಶವನ್ನು  ಉಲ್ಲಂಘಿಸಿ,  ಕಡ್ಡಾಯವಾಗಿ  ಕೋರಿದ  ಯಾವುದೇ  ಆವರಣದ  ಸ್ವಾಧೀನವನ್ನು ಉಳಿಸಿಟ್ಟುಕೊಂಡಿರುವ  ಯಾವನೇ  ವ್ಯಕ್ತಿಯನ್ನು,  ಈ  ಬಗ್ಗೆ  ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು  ಅಧಿಕಾರ ನೀಡಿರುವ ಯಾವನೇ ಅಧಿಕಾರಿಯು ಆ ಆವರಣದಿಂದ ಕ್ಷಿಪ್ರವಾಗಿ ಹೊರಹಾಕಬಹುದು.   
(2) ಹಾಗೆ  ಅಧಿಕಾರ  ಪಡೆದಿರುವ  ಯಾವನೇ  ಅಧಿಕಾರಿಯು,  ಸಾರ್ವಜನಿಕವಾಗಿ  ಕಾಣಿಸಿಕೊಳ್ಳದ  ಯಾರೇ ಮಹಿಳೆಗೆ  ಹೊರಟು  ಹೋಗಲು  ಸೂಕ್ತ  ಎಚ್ಚರಿಕೆಯನ್ನು  ಮತ್ತು  ಸೌಲಭ್ಯವನ್ನು  ಕೊಟ್ಟ  ತರುವಾಯ,  ಯಾವುದೇ
ಕಟ್ಟಡದ  ಯಾವುದೇ  ಬೀಗ  ಅಥವಾ  ಚಿಲಕವನ್ನು  ತೆಗೆದುಹಾಕಬಹುದು  ಅಥವಾ  ತೆರೆಯಬಹುದು  ಅಥವಾ  ಅದರ ಯಾವುದೇ  ಬಾಗಿಲನ್ನು  ಒಡೆಯಬಹುದು  ಅಥವಾ  ಹಾಗೆ  ಹೊರಹಾಕುವುದನ್ನು  ಜಾರಿಗೊಳಿಸುವುದಕ್ಕೆ  ಅವಶ್ಯವಾದ ಯಾವುದೇ ಇತರ ಕಾರ್ಯವನ್ನು ಮಾಡಬಹುದು.   
276.    ಕಡ್ಡಾಯ  ಕೋರಿಕೆಯಿಂದ  ಆವರಣಗಳ  ಬಿಡುಗಡೆ.  (1)  271ನೇ  ಪ್ರಕರಣದ  ಅಡಿಯಲ್ಲಿ  ಕಡ್ಡಾಯವಾಗಿ ಕೋರಲಾದ  ಯಾವುದೇ  ಆವರಣವನ್ನು,  ಕಡ್ಡಾಯ  ಕೋರಿಕೆಯಿಂದ  ಬಿಡುಗಡೆ  ಮಾಡಬೇಕಾದಾಗ,  ಅದರ ಸ್ವಾಧೀನತೆಯನ್ನು,  ಆವರಣವನ್ನು  ಕಡ್ಡಾಯವಾಗಿ  ಕೋರಿದ  ಕಾಲದಲ್ಲಿ  ಯಾರ  ಸ್ವಾಧೀನದಿಂದ  ಅದನ್ನು ಪಡೆಯಲಾಯಿತೋ  ಆ  ವ್ಯಕ್ತಿಗೆ  ಅಥವಾ  ಅಂಥ  ಯಾವನೇ  ವ್ಯಕ್ತಿಯು  ಇಲ್ಲದಿದ್ದರೆ  ಅಂಥ  ಆವರಣದ ಮಾಲೀಕನೆಂದು ಕಡ್ಡಾಯವಾಗಿ ಕೋರುವ ಪ್ರಾಧಿಕಾರಿಯು ಭಾವಿಸಿದ ವ್ಯಕ್ತಿಗೆ ವಾಪಸ್ಸು ಮಾಡತಕ್ಕದ್ದು ಮತ್ತು ಹಾಗೆ ಸ್ವಾಧೀನತೆಯನ್ನು ವಾಪಸ್ಸು ಮಾಡಿರುವುದು ಅದಕ್ಕೆ ಸಂಬಂಧಿಸಿದಂತೆ ಕಡ್ಡಾಯವಾಗಿ ಕೋರುವ ಪ್ರಾಧಿಕಾರಿಯ ಎಲ್ಲ ಹೊಣೆಗಾರಿಕೆಗಳನ್ನು  ಪೂರ್ಣವಾಗಿ  ವಿಮೋಚನೆ  ಮಾಡತಕ್ಕದ್ದು.  ಆದರೆ  ಆ  ಆವರಣದ  ಸ್ವಾಧೀನವನ್ನು  ಹಾಗೆ ಯಾರಿಗೆ  ವಾಪಸ್ಸು  ಮಾಡಲಾಯಿತೋ  ಆ  ವ್ಯಕ್ತಿಯ  ವಿರುದ್ಧ,  ಆವರಣಕ್ಕೆ  ಸಂಬಂಧಿಸಿದ  ಯಾವ  ಹಕ್ಕುಗಳನ್ನು ಯಾವನೇ ಇತರ ವ್ಯಕ್ತಿಯು, ಕಾನೂನಿನ ಯುಕ್ತ ಕ್ರಮದ ಮೂಲಕ ಜಾರಿಗೊಳಿಸಲು ಹಕ್ಕುಳ್ಳವನಾಗಿರಬಹುದೋ ಆ ಯಾವುವೇ ಹಕ್ಕುಗಳಿಗೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.   
(2) 271ನೇ ಪ್ರಕರಣದ ಅಡಿಯಲ್ಲಿ ಕಡ್ಡಾಯವಾಗಿ ಕೋರಲಾದ ಯಾವುದೇ ಆವರಣದ ಸ್ವಾಧೀನವನ್ನು (1)ನೇ ಉಪ ಪ್ರಕರಣದ ಮೇರೆಗೆ ಪಡೆಯಬೇಕಾಗಿರುವ ವ್ಯಕ್ತಿಯು ಸಿಕ್ಕದಿರುವಲ್ಲಿ ಅಥವಾ ಅವನ ಬಗ್ಗೆ ಖಚಿತಪಡಿಸಿಕೊಳ್ಳಲು ಆಗದಿರುವಲ್ಲಿ  ಅಥವಾ  ಅವನ  ಪರವಾಗಿ  ವಾಪಸ್ಸು  ಪಡೆಯುವುದನ್ನು  ಅಂಗೀಕರಿಸಲು  ಅಧಿಕಾರ  ಪಡೆದಿರುವ ಯಾವನೇ  ಏಜೆಂಟ್  ಅಥವಾ  ಯಾವನೇ  ಇತರ  ವ್ಯಕ್ತಿಯಿಲ್ಲದಿರುವಲ್ಲಿ,  ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು, ಅಂಥ ಆವರಣವನ್ನು ಕಡ್ಡಾಯ ಕೋರಿಕೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ನೋಟೀಸನ್ನು ಅಂಥ ಆವರಣದ ಎದ್ದುಕಾಣುವ ಭಾಗದಲ್ಲಿ ಮತ್ತು ತಹಸೀಲ್ದಾರರ ಕಛೇರಿಯ ಸೂಚನಾಫಲಕದ ಮೇಲೆ ಅಂಟಿಸುವಂತೆ ಮಾಡತಕ್ಕದ್ದು.   
(3)  (2)ನೇ  ಉಪಪ್ರಕರಣದಲ್ಲಿ  ಉಪಬಂಧಿಸಲಾದಂತೆ  ನೋಟೀಸನ್ನು  ಸೂಚನಾಫಲಕದ  ಮೇಲೆ ಅಂಟಿಸಿದಾಗ,  ಅಂಥ  ನೋಟೀಸಿನಲ್ಲಿ  ನಿದರ್ಿಷ್ಟಪಡಿಸಿದ  ಆವರಣವು,  ಆ  ನೋಟೀಸನ್ನು  ಹಾಗೆ  ಅಂಟಿಸಿದ ದಿನಾಂಕದಂದು  ಮತ್ತು  ಅಂದಿನಿಂದ  ಕಡ್ಡಾಯ  ಕೋರಿಕೆಗೆ  ಒಳಪಟ್ಟಿರುವುದು  ನಿಂತು  ಹೋಗತಕ್ಕದ್ದು  ಮತ್ತು  ಅದರ ಸ್ವಾಧೀನವನ್ನು  ಹೊಂದಲು  ಹಕ್ಕುಳ್ಳ  ವ್ಯಕ್ತಿಗೆ  ಅದನ್ನು  ವಾಪಸ್ಸು  ಮಾಡಿರುವುದಾಗಿ  ಭಾವಿಸತಕ್ಕದ್ದು  ಮತ್ತು  ಸದರಿ ದಿನಾಂಕದ  ತರುವಾಯದ  ಯಾವುದೇ  ಅವಧಿಗಾಗಿ  ಅಂಥ  ಆವರಣಕ್ಕೆ  ಸಂಬಂಧಿಸಿದಂತೆ  ಯಾವುದೇ ನಷ್ಟಪರಿಹಾರಕ್ಕಾಗಿ  ಅಥವಾ  ಇತರ  ಕ್ಲೇಮಿಗಾಗಿ  ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿ  ಅಥವಾ  ಜಿಲ್ಲಾ  ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಗ್ರಾಮ ಪಂಚಾಯತಿಯ ಹೊಣೆಯಾಗಿರತಕ್ಕದ್ದಲ್ಲ.  

No comments:

Post a Comment