ಮುಕ್ತ ಪ್ರಕ್ರಿಯೆ

inyatrust.in | Wednesday, November 16, 2022

ಭಾಗವಹಿಸುವಿಕೆಯು  ಎಲ್ಲರನ್ನು  ಒಳಗೊಂಡಿರುವುದಾಗಿದ್ದು,  ಈಗಿರುವ  ತಾರತಮ್ಯ  ಮಾದರಿಗಳಿಂದ ಮುಕ್ತವಾಗಿರುವುದಾಗಿದೆ  ಮತ್ತು  ಸಂಕಷ್ಟದಲ್ಲಿರುವ  ಹುಡುಗಿಯರು,  ಹುಡುಗರು  ಮತ್ತು  ಲಿಂಗಪರಿವರ್ತನೆಗೊಂಡ ಮಕ್ಕಳಿಗೆ  ಅವಕಾಶಗಳನ್ನು  ನೀಡುವ  ಮೂಲಕ  ಪಾಲ್ಗೊಳ್ಳುವಂತೆ  ಉತ್ತೇಜಿಸುವುದು.  ಎಲ್ಲಾ  ಸಮುದಾಯಗಳ ಮಕ್ಕಳಿಗೆ ಸಾಂಸ್ಕೃತಿಕವಾಗಿ ಸಂವೇದನಾತ್ಮಕವಾಗಿರುವಂತೆ ಕಾರ್ಯಕ್ರಮಗಳನ್ನು ರೂಪಿಸುವುದು.
ತರಬೇತಿ ಮೂಲಕ ಬೆಂಬಲ ನೀಡುವುದು
ಮಕ್ಕಳ  ಪರಿಣಾಮಕಾರಿ  ಭಾಗವಹಿಸುವಿಕೆಗೆ  ಅನುಕೂಲ  ಕಲ್ಪಿಸಲು  ಹಿರಿಯರಿಗೆ  ತಯಾರಿ,  ಕೌಶಲ್ಯಗಳು  ಮತ್ತು ಬೆಂಬಲದ ಅಗತ್ಯವಿದೆ. ಉದಾ: ಮಕ್ಕಳನ್ನು ಆಲಿಸುವ, ಅವರೊಂದಿಗೆ ತೊಡಗಿಸಿಕೊಳ್ಳುವ ಮತ್ತು ಅವರೆ ವಿಕಸನದ ಸಾಮಥ್ರ್ಯಕ್ಕೆ ತಕ್ಕಂತೆ ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದು.
ಎ. ಸುರಕ್ಷತೆ ಮತ್ತು ಅಪಾಯದ ಸನ್ನಿವೇಶಗಳಲ್ಲಿ ಸೂಕ್ಷ್ಮಗ್ರಾಹಿಯಾಗಿರುವಿಕೆ ಮಕ್ಕಳು ಅಪಾಯಗಳಿಂದ ರಕ್ಷಿಸಿಕೊಳ್ಳುವ ಹಕ್ಕುಗಳ ಬಗ್ಗೆ ಅರಿವನ್ನು ಹೊಂದಿರುವುದು ಮತ್ತು ಅವರಿಗೆ ಸಹಾಯದ ಅವಶ್ಯಕತೆಯ  ಸಂದರ್ಭಗಳಲ್ಲಿ  ಯಾವಾಗ,  ಎಲ್ಲಿ  ಮತ್ತು  ಯಾರನ್ನು  ಸಂಪರ್ಕಿಸಬೇಕೆಂಬುದನ್ನು ತಿಳಿದುಕೊಂಡಿರುವುದು.
ಏ. ಉತ್ತರದಾಯಿತ್ವ
ಹೊಣೆಗಾರಿಕೆ ನಿರಂತರ  ಅನುಸರಣೆಯನ್ನು  ಕೈಗೊಳ್ಳುವ  ಮತ್ತು  ಭಾಗವಹಿಸುವಿಕೆಯ  ಚಟುವಟಿಕೆಗಳ  ಮೌಲ್ಯಮಾಪನ  ಮಾಡುವ ಬದ್ಧತೆಯ  ಅಗತ್ಯವಿದೆ.  ಮಕ್ಕಳ  ಅಭಿಪ್ರಾಯಗಳನ್ನು  ಯಾವ  ರೀತಿ  ಅರ್ಥೈಸಲಾಗಿದೆ  ಮತ್ತು  ಅವರ ಭಾಗವಹಿಸುವಿಕೆಯು ಫಲಿತಾಂಶಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಮಕ್ಕಳಿಗೆ ತಿಳಿಸುವುದು. ಮಕ್ಕಳ ಭಾಗವಹಿಸುವಿಕೆಯ ಅವಶ್ಯಕತೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ಕೇಂದ್ರೀಕೃತ ಪ್ರಕ್ರಿಯೆಯ ಮೂಲಕ ಮಕ್ಕಳ ಸಹಭಾಗಿತ್ವದೊಂದಿಗೆ ಕೈಗೊಳ್ಳುವುದು.
1.3.2 ಸುರಕ್ಷಾ ವಿಧಾನಗಳ ಸ್ಥಾಪನೆ  
ಸುರಕ್ಷತೆಯನ್ನು ಖಾತರಿಪಡಿಸುವ ವಿಧಾನಗಳನ್ನು ಕೆಳಕಂಡಂತೆ ವಿವರಿಸಲಾಗಿದೆ; ?   
ಚಿ.  ಶೈಕ್ಷಣಿಕ ಸಂಸ್ಥೆಗಳ ಮಕ್ಕಳ ರಕ್ಷಣಾ ನೀತಿಯನ್ನು ರೂಪಿಸಿ ಅಧಿಸೂಚನೆ ಹೊರಡಿಸುವುದು
*  ಪ್ರತಿಯೊಂದು  ಶೈಕ್ಷಣಿಕ  ಸಂಸ್ಥೆಯು  (ಶೈಕ್ಷಣಿಕ  ಸಂಸ್ಥೆಯ  ವ್ಯಾಖ್ಯಾನವನ್ನು  2.1  ಅ  ನಲ್ಲಿ  ಉಲ್ಲೇಖಿಸಿದಂತೆ) ಅನುಬಂಧದಲ್ಲಿರುವಂತೆ  ಮಕ್ಕಳ  ರಕ್ಷಣಾ  ನೀತಿಯನ್ನು  ಸಿದ್ಧಪಡಿಸುವುದು.  ಶೈಕ್ಷಣಿಕ  ಸಂಸ್ಥೆಗಳ  ಎಲ್ಲಾ ಭಾಗೀದಾರರೊಂದಿಗೆ  ಪೋಷಕರು,  ಮಕ್ಕಳು  ಮತ್ತು  ನೀತಿಯಡಿ  ಒಳಗೊಳ್ಳುವ  ಎಲ್ಲರಿಗೂ  ನೀತಿಯನ್ನು ಅಧಿಸೂಚಿಸುವುದು.
ಛ.  ಹೊಂದಿಕೆಯಾಗಿರುವ ಮಾದರಿ ಸುರಕ್ಷಾ ಗಮನಿಕೆ ಪಟ್ಟಿಯನ್ನು ಹೊಂದಿರುವುದು
*  ಪ್ರಸ್ತಾವಿತ  ಮಾರ್ಗಸೂಚಿಯ  ಭಾಗವಾಗಿ  ಸುರಕ್ಷತೆಯ  ಚೆಕ್ಲಿಸ್ಟನ್ನು  ಅನುಬಂಧದಲ್ಲಿ  ಲಗತ್ತಿಸಲಾಗಿದ್ದು,  ಇದನ್ನು ಪ್ರತಿಯೊಂದು  ಶೈಕ್ಷಣಿಕ  ಸಂಸ್ಥೆಯು  ಅಳವಡಿಸಿಕೊಳ್ಳುವುದು.  ಚೆಕ್ಲಿಸ್ಟ್ನಲ್ಲಿ  ಕಡ್ಡಾಯವಾಗಿರುವ  ಕಲಂಗಳನ್ನು ಹಾಗೆಯೇ  ಉಳಿಸಿಕೊಂಡು,  ಸುರಕ್ಷತಾ  ಮೇಲ್ವಿಚಾರಣೆಗೆ  ಪರಿಣಾಮಕಾರಿ  ಸಾಧನವಾಗಿ  ಪ್ರತಿಯೊಂದು  ಶೈಕ್ಷಣಿಕ ಸಂಸ್ಥೆಗಳು ವಿಶಿಷ್ಟ ಸನ್ನಿವೇಶಗಳಿಗೆ ಅನುಗುಣವಾಗಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಳ್ಳಬಹುದಾಗಿದೆ.  
  ವಿಪತ್ತಿನ ಅಪಾಯವನ್ನು ತಗ್ಗಿಸುವ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವಿಕೆ
*  ಮಕ್ಕಳಿಗೆ  ಲಭ್ಯವಿರುವ  ಶಿಕ್ಷಣದ  ಹಕ್ಕಿನಡಿಯಲ್ಲಿ  ಪ್ರತಿಯೊಂದು  ಶೈಕ್ಷಣಿಕ  ಸಂಸ್ಥೆಗಳು  ಮಕ್ಕಳು  ಎಲ್ಲಾ  ರೀತಿಯ ಅಪಾಯದಿಂದ  ಸುರಕ್ಷಿತವಾಗಿರುವುದನ್ನು  ಖಾತರಿಪಡಿಸಿಕೊಳ್ಳುವುದು.  ಬೃಹತ್  ಪ್ರಮಾಣದ  ನೈಸರ್ಗಿಕ ವಿಪತ್ತುಗಳಾದ  ಭೌಗೋಳಿಕ  /  ಹವಾಮಾನ  ಆಧಾರಿತ  ವಿಕೋಪಗಳು,  ಮಾನವ  ನಿರ್ಮಿತ  ಅಪಾಯಗಳು, ಪಿಡುಗುಗಳು,  ನಾಗರೀಕ  ಅಶಾಂತಿ,  ಉಗ್ರಗಾಮಿ  ಪ್ರವೃತ್ತಿ,  ಭಯೋತ್ಪಾದನೆ,  ಸಾಮಾನ್ಯವಾಗಿ  ಅಥವಾ  ಸಣ್ಣ ಪ್ರಮಾಣದಲ್ಲಿ ಸಂಭವಿಸುವ ಬೆಂಕಿ ಅನಾಹುತಗಳು, ಸಾರಿಗೆ, ಇತರೆ ತುರ್ತುಪರಿಸ್ಥಿತಿಗಳು ಮತ್ತು ಮಕ್ಕಳ ಜೀವದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಪರಿಸರಾತ್ಮಕ ಅಪಾಯಗಳಿಂದ ಸುರಕ್ಷತೆಯನ್ನು ಹೊಂದುವುದು.
ಜ.  ಮಕ್ಕಳ ಹಕ್ಕುಗಳ ಕ್ಲಬ್ಬುಗಳ ರಚನೆ
*  ಮಕ್ಕಳ  ಹಕ್ಕುಗಳ  ಕ್ಲಬ್ಬುಗಳನ್ನು  ರಚಿಸಲು  ಮಕ್ಕಳಿಗೆ  ಸಹಕರಿಸುವುದರಿಂದ  ಮಕ್ಕಳು  ತಮ್ಮ  ಹಕ್ಕುಗಳು  ಮತ್ತು ಜವಾಬ್ದಾರಿಗಳು, ವರದಿ ಮಾಡುವ ವಿಧಾನಗಳು ಹಾಗೂ ಕಾಳಜಿಯ ವಿಷಯಗಳ ಜೊತೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಸುರಕ್ಷತೆಯಡಿ ಪೋಷಕರನ್ನು ತೊಡಗಿಸಿಕೊಳ್ಳುವಿಕೆಯ ಕುರಿತು ಚರ್ಚಿಸಬಹುದಾಗಿದೆ.  
ಜ.  ಸಿಬ್ಬಂದಿಗಳ ಮೌಲ್ಯಮಾಪನದಲ್ಲಿ ಮಗುವಿನ ಸುರಕ್ಷತೆಯ ಸೇರ್ಪಡೆ
*  ಸಿಬ್ಬಂದಿಗಳ  ಔಪಚಾರಿಕ  ಮೌಲ್ಯಮಾಪನ  ಮತ್ತು  ಮೇಲ್ವಿಚಾರಣೆಯಲ್ಲಿ  ಮಗುವಿನ  ಸುರಕ್ಷತೆಯ  ವಿಷಯಗಳು ನಿಯಮಿತವಾಗಿ ಒಳಗೊಂಡಿರುವುದನ್ನು ಖಾತರಿಪಡಿಸಿಕೊಳ್ಳುವುದು.
ಜಿ.  ಅರಿವು, ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ ಕಾರ್ಯಕ್ರಮಗಳ ಆಯೋಜನೆ
*  ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ಕುರಿತು ಮಕ್ಕಳು, ಪೋಷಕರು ಮತ್ತು ಪಾಲಕರಿಗೆ ಅರಿವು, ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ ಕಾರ್ಯಕ್ರಮಗಳನ್ನು ಸಂಘಟಿಸಲು ಒತ್ತು ನೀಡಿರುವುದನ್ನು ಖಚಿತಪಡಿಸುವುದು.
 ರ.  ವರದಿ ಮಾಡುವ ವಿಧಾನಗಳನ್ನು ಸೃಜಿಸುವುದು
*  ಸದೃಢ  ಮತ್ತು  ನಿರ್ದಿಷ್ಟವಾದ  ವರದಿ  ವಿಧಾನಗಳನ್ನು  ಸೃಜಿಸುವುದು  ಮತ್ತು  ಅವುಗಳು  ಶಾಲಾ  ನಿರ್ವಹಣಾ ಸಮಿತಿ/ಪೋಷಕರು-ಶಿಕ್ಷಕರ ಸಂಘ, ಸಲಹೆ ಪೆಟ್ಟಿಗೆ, ಮಕ್ಕಳ ಸಭೆಗಳು, ಸಾಮಾನ್ಯ ಸಭೆಗಳು ಇತ್ಯಾದಿಗಳ ಮೂಲಕ ಅರ್ಥಪೂರ್ಣವಾಗಿ ಬಳಕೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು.
 ಶೈಕ್ಷಣಿಕ ಸಂಸ್ಥೆಗಳು
ವ್ಯಾಖ್ಯಾನಗಳು ಮತ್ತು ವ್ಯಾಪ್ತಿ
2.1 ವ್ಯಾಖ್ಯಾನಗಳು
ಅ. ಶೈಕ್ಷಣಿಕ ಸಂಸ್ಥೆ ಎಂದರೆ ಕೆಳಕಂಡ ಅರ್ಥ ಮತ್ತು ಅಂಶಗಳನ್ನು ಒಳಗೊಂಡಿರುವುದು.
*  ಸಂಸ್ಥೆಯು  ಯಾವುದೇ  ಹೆಸರಿನಿಂದ  ಕರೆಯಲ್ಪಡುವ  ಅಂದರೆ,  ಪೂರ್ವಪ್ರಾಥಮಿಕ,  ಪ್ರಾಥಮಿಕ,  ಮಾಧ್ಯಮಿಕ,  ಸೆಕೆಂಡರಿ, ಹೈಯರ್  ಸೆಕೆಂಡರಿ  ಶಾಲೆಗಳು,  ಆಪ್ರೆಂಟೀಸ್  ತರಬೇತಿ  ಕೇಂದ್ರಗಳು,  ಔದ್ಯೋಗಿಕ  ಕೌಶಲ್ಯ  ತರಬೇತಿ  ಕೇಂದ್ರಗಳು  ಮತ್ತು ಅದಕ್ಕೆ  ಹೊಂದಿಕೆಯಾಗಿರುವ  ಎಲ್ಲಾ  ಪ್ರದೇಶ,  ಅದು  ಪ್ರತ್ಯೇಕವಾಗಿ  ನಿರ್ವಹಿಸುತ್ತಿರುವ  ಅಥವಾ  ಇತರೆ  ಚಟುವಟಿಕೆಗಳಡಿ 2.5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳನ್ನು ಶೈಕ್ಷಣಿಕ ಸಂಸ್ಥೆಗಳೆಂದು ಕರೆಯಬಹುದು.  
*  ಶಿಕ್ಷಣವನ್ನು  ನೀಡುತ್ತಿರುವ  ಯಾವುದೇ  ಸಂಸ್ಥೆ  ಅಥವಾ  ಪದವಿಗಿಂತ  ಕೆಳಹಂತದಲ್ಲಿ  ತಥರಬೇತಿಯನ್ನು  ನೀಡುತ್ತಿರುವ ಟ್ಯುಟೋರಿಯಲ್ಗಳನ್ನು  ಒಳಗೊಂಡಿರುವುದು  ಸಹ  ಶಿಕ್ಷಣ  ಸಂಸ್ಥೆ  ಎಂದೆನಿಸುತ್ತದೆ.  ಯಾವುದೇ  ರಾಜ್ಯ  /  ಕೇಂದ್ರ  / ಶೈಕ್ಷಣಿಕ  ಮಂಡಳಿ  ಅಥವಾ  ಕೆಳಗೆ  ತಿಳಿಸಿರುವ  ಸೂಕ್ತ  ಪ್ರಾಧಿಕಾರದ  ಸ್ವಾಮ್ಯಕ್ಕೆ  ಒಳಪಟ್ಟಿರುವ  ಸಂಸ್ಥೆಗಳು  ಇದರಡಿ ಸೇರಿರುತ್ತವೆ.  
ಚಿ.  ಸರ್ಕಾರದಿಂದ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಸ್ಥಾಪಿತವಾಗಿ, ಮಾಲೀಕತ್ವಹೊಂದಿ ನಿಯಂತ್ರಿಸಲ್ಪಟ್ಟಿರುವ ಅಥವಾ ನಿರ್ವಹಿಸಲ್ಪಟ್ಟಿರುವ ಅಥವಾ ನಿರ್ವಹಿಸಲ್ಪಡುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆ.
ಛ.  ಸರ್ಕಾರ  ಅಥವಾ  ಸ್ಥಳೀಯ  ಪ್ರಾಧಿಕಾರದಿಂದ  ಭಾಗಶಃ  ಅಥವಾ  ಪೂರ್ಣಪ್ರಮಾಣದ  ನೆರವು  ಅಥವಾ ಅನುದಾನ ಪಡೆಯುತ್ತಿರುವ ಯಾವುದೇ ಅನುದಾನಿತ ಸಂಸ್ಥೆ.
ಛಿ.  ಖಾಸಗಿ  ಮಂಡಳಿಯಿಂದ  ನಿರ್ವಹಿಸಲ್ಪಡುತ್ತಿರುವ  ಮತ್ತು  ಆಡಳಿತಕ್ಕೊಳಪಟ್ಟಿರುವ,  ಯಾವುದೇ  ಸ್ಥಾಪಿತ ಶಿಕ್ಷಣ ಸಂಸ್ಥೆ.
ಜ.  ಸಂವಿಧಾನ  ಪರಿಚ್ಛೇದ  30ರ  ಕಲಂ(1)ರನ್ವಯ  ಸ್ಥಾಪಿತವಾಗಿರುವ  ಮತ್ತು  ಆಡಳಿತಕ್ಕೊಳಪಟ್ಟಿರುವ,  ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುದಾನ ಪಡೆಯುತ್ತಿರುವ ಅಥವಾ ಪಡೆಯದೇ ಇರುವ ಯಾವುದೇ ಅಲ್ಪಸಂಖ್ಯಾತ ಶಾಲೆ, ವೇದ ಶಾಲೆ, ಮದರಸಾ ಅಥವಾ
ಜ.  ವೆಚ್ಚಗಳನ್ನು  ಸರಿದೂಗಿಸಲು,  ಸರ್ಕಾರ  ಅಥವಾ  ಸ್ಥಳೀಯ  ಪ್ರಾಧಿಕಾರದಿಂದ  ಯಾವುದೇ  ರೀತಿಯ ಅನುದಾನ ಅಥವಾ ನಿಧಿಯನ್ನು ಪಡೆಯದೇ ಇರುವ ಅನುದಾನರಹಿತ ಶಿಕ್ಷಣ ಸಂಸ್ಥೆ.

No comments:

Post a Comment