ಅಡ್ಡ ಪ್ರಶ್ನೆಗಳು ಮತ್ತು ನಿರ್ಣಯಗಳು
(1) ಜಿಲ್ಲಾ ಪಂಚಾಯತಿಯ ಸದಸ್ಯರು ಜಿಲ್ಲಾ ಪಂಚಾಯತಿಯು ರಚಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು ಆಡಳಿತಕ್ಕೆ ಸಂಬಂಧಪಟ್ಟ ಜಿಲ್ಲಾ ಪಂಚಾಯತಿಯ ವಿಷಯಗಳ ಬಗ್ಗೆ ನಿರ್ಣಯಗಳನ್ನು ಮಂಡಿಸಬಹುದು ಮತ್ತು ಅಧ್ಯಕ್ಷರಿಗೆ ಅಡ್ಡ ಪ್ರಶ್ನೆಗಳನ್ನು ಹಾಕಬಹುದು.
(2) ಜಿಲ್ಲಾ ಪಂಚಾಯತಿಯ ಸದಸ್ಯನು, ಜಿಲ್ಲಾ ಪಂಚಾಯತಿಯ ಕೆಲಸವನ್ನು ನಿರ್ವಹಿಸುವಲ್ಲಿ ಯಾವುದೇ ನಿರ್ಲಕ್ಷಯತೆ, ಜಿಲ್ಲಾ ಪಂಚಾಯತಿಗೆ ಸೇರಿದ ಸ್ವತ್ತಿನ ಯಾವುದೇ ಪೋಲು ಅಥವಾ ಜಿಲ್ಲೆಯೊಳಗೆ ಯಾವುದೇ ಸ್ಥಳೀಯ ಬೇಡಿಕೆಗಳ ಬಗ್ಗೆ ಅಧ್ಯಕ್ಷನ ಗಮನವನ್ನು ಸಹ ಸೆಳೆಯಬಹುದು ಮತ್ತು ಅಪೇಕ್ಷಣೀಯವೆಂದು ಕಂಡುಬರಬಹುದಾದಂಥ ಯಾವುವೇ ಸುಧಾರಣೆಗಳ ಬಗ್ಗೆ ಸಲಹೆ ಕೊಡಬಹುದು.
182. ಜಿಲ್ಲಾ ಪಂಚಾಯತಿಯು ಸಭೆಗಳಲ್ಲಿ 1[ಸರ್ಕಾರವು ಅಧಿಸೂಚಿಸಬಹುದಾದಂತೆ ಸಕರ್ಾರದ ಅಥವಾ ಯಾವುದೇ ಸರ್ಕಾರಿ ಸಮಿತಿಯ ಅಥವಾ ಕಂಪನಿಯ ಅಥವಾ ನಿಗಮದ ಅಧಿಕಾರಿಗಳ]1 ಹಾಜರಾತಿಯನ್ನು ಅಗತ್ಯಪಡಿಸಬಹುದು. ಜಿಲ್ಲಾ ಪಂಚಾಯತಿಯ ಒಂದು ವಿಭಾಗದ ಅಥವಾ ಸರ್ಕಲ್ಲಿನ ಅಥವಾ ಒಂದು ವಿಭಾಗ ಅಥವಾ ಸರ್ಕಲ್ಲಿಗಿಂತ ಕಡಿಮೆ ಇರುವ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಅಥವಾ ಜಿಲ್ಲಾ ಪಂಚಾಯತಿಯ ಅಧೀನದಲ್ಲಿ ಕೆಲಸವನ್ನು ಮಾಡುತ್ತಿಲ್ಲದಿರುವ 1[ಸರ್ಕಾರವು ಅಧಿಸೂಚಿಸಬಹುದಾದಂತೆ ಸರ್ಕಾರದ ಅಥವಾ ಯಾವುದೇ ಸರ್ಕಾರಿ ಸಮಿತಿಯ ಅಥವಾ ಕಂಪನಿಯ ಅಥವಾ ನಿಗಮದ ಅಧಿಕಾರಿಗಳ]1 ಹಾಜರಾತಿಯು ಜಿಲ್ಲಾ ಪಂಚಾಯತಿಯ ಸಭೆಯಲ್ಲಿ ಅಪೇಕ್ಷಣೀಯವೆಂದು ಕಂಡುಬಂದರೆ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಯು, ಉದ್ದೇಶಿತ ಸಭೆಗೆ ಮುಂಚಿತವಾಗಿ ಹದಿನೈದು ದಿನಗಳಿಗೆ ಕಡಿಮೆಯಿಲ್ಲದಂತೆ ಅಂಥ ಅಧಿಕಾರಿಗೆ ಪತ್ರ ಬರೆಯುವ ಮೂಲಕ ಆ ಅಧಿಕಾರಿಯನ್ನು ಆ ಸಭೆಗೆ ಹಾಜರಾಗುವಂತೆ ಕೋರತಕ್ಕದ್ದು ಮತ್ತು ಆ ಅಧಿಕಾರಿಯು ಅನಾರೋಗ್ಯದ ಅಥವಾ ಇತರ ಯುಕ್ತ ಕಾರಣಗಳಿಂದಾಗಿ ಬರಲಾಗದ ಹೊರತು, ಸಭೆಗೆ ಹಾಜರಾಗತಕ್ಕದ್ದು:
ಪರಂತು, ಅಧಿಕಾರಿಯು ಅಂಥ ಪತ್ರವನ್ನು ಸ್ವೀಕರಿಸಿದಾಗ ಈ ಮೊದಲೇ ಹೇಳಿದ ಯಾವುದೇ ಕಾರಣಕ್ಕಾಗಿ ತಾನೇ ಖುದ್ದಾಗಿ ಹಾಜರಾಗುವುದು ಸಾಧ್ಯವಾಗದಿದ್ದರೆ ಆ ಸಭೆಗೆ ಅವನನ್ನು ಪ್ರತಿನಿಧಿಸಲು ಅವನ ಪ್ರತಿತನಿಧಿ ಅಥವಾ ಇತರ ಸಕ್ಷಮ ಅಧೀನ ಅಧಿಕಾರಿಗೆ ಸೂಚನೆ ನೀಡತಕ್ಕದ್ದು.
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
183. ವ್ಯವಹರಣೆಗಳ ವಿಧಿಮಾನ್ಯತೆ. (1) ಜಿಲ್ಲಾ ಪಂಚಾಯತಿಯ ಸದಸ್ಯನಾಗಿ ಅತವಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ ಅಥವಾ ಸಾಮಾನ್ಯ ಅಥವಾ ವಿಶೇಷ ಸಭೆಗಳಲ್ಲಿ ಅಧ್ಯಕ್ಷತೆಯನ್ನು ವಹಿಸುವ ಪ್ರಾಧಿಕಾರಿಯಾಗಿ ಅಥವಾ ಈ ಅಧಿನಿಯಮದ ಅಡಿಯಲ್ಲಿ ನೇಮಕಗೊಂಡ ಸಮಿತಿಯ ಅಧ್ಯಕ್ಷನಾಗಿ ಅಥವಾ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿರುವ ಯಾವನೇ ವ್ಯಕ್ತಿಯ ಚುನಾವಣೆ ಮತ್ತು ನೇಮಕದಲ್ಲಿನ ಯಾವುದೇ ಅನರ್ಹತೆಯು ಅಥವಾ ದೋಷವು ಸಂದರ್ಭಾನುಸಾರ ಜಿಲ್ಲಾ ಪಂಚಾಯತಿಯ ಅಥವಾ ಯಾವುದೇ ಅಂಥ ಸಮಿತಿಯ ಕಾರ್ಯವನ್ನು ಅಥವಾ ವ್ಯವಹರಣೆಯನ್ನು ಅಂಥ ಯಾವುದೇ ಕಾರ್ಯದಲ್ಲಿ ಅಥವಾ ವ್ಯವಹರಣೆಯಲ್ಲಿ ಕಾರ್ಯ ನಿರ್ವಹಿಸಲು ಹಕ್ಕುಳ್ಳವರಾಗಿದ್ದ ಬಹುಸಂಖ್ಯಾತರು ಭಾಗವಹಿಸಿ ನಿರ್ವಹಿಸಿರುವಲ್ಲಿ ನಿರರ್ಥಕಗೊಳಿಸುತ್ತದೆ ಎಂದು ಭಾವಿಸತಕ್ಕದ್ದಲ್ಲ.
(2) ಈ ಅಧಿನಿಯಮದ ಅಡಿಯಲ್ಲಿ ನೇಮಕಗೊಂಡ ಜಿಲ್ಲಾ ಪಂಚಾಯತಿಯ ಅಥವಾ ಯಾವುದೇ ಸಮಿತಿಯ ಯಾವುದೇ ನಿರ್ಣಯವನ್ನು ಯಾವನೇ ಸದಸ್ಯನಿಗೆ ನೋಟೀಸನ್ನು ಜಾರಿಮಾಡುವುದರಲ್ಲಾದ ಯಾವುದೇ ಅಕ್ರಮತೆಯ ಕಾರಣದಿಂದ ಅಸಿಂಧುವೆಂದು ಭಾವಿಸತಕ್ಕದ್ದಲ್ಲ. ಪರಂತು, ಜಿಲ್ಲಾ ಪಂಚಾಯತಿಯ ಅಥವಾ ಸಮಿತಿಯ ವ್ಯವಹರಣೆಗಳಿಗೆ ಅಂಥ ಅಕ್ರಮತೆಯಿಂದ ಪ್ರತಿಕೂಲ ಬಾಧಕವುಂಟಾಗಿರಕೂಡದು.
(3) ತದ್ಪಿರುದ್ದವಾಗಿ ರುಜುವಾತಾಗುವವರೆಗೆ, ಈ ಅಧಿನಿಯಮದ ಅಡಿಯಲ್ಲಿ ರಚಿಸಿದ ಜಿಲ್ಲಾ ಪಂಚಾಯತಿಯ ಅಥವಾ ಸಮಿತಿಯ ಪ್ರತಿಯೊಂದು ಸಭೆಯ ಯಾವ ವ್ಯವಹರಣೆಗಳಿಗೆ ಸಂಬಂಧಿಸಿದಂತೆ ಈ ಅಧಿನಿಯಮಕ್ಕನುಸಾರವಾದ ನಡವಳಿಕೆಯನ್ನು ಬರೆಯಲಾಗಿದೆಯೋ ಮತ್ತು ಸಹಿ ಮಾಡಲಾಗಿದೆಯೋ ಆ ವ್ಯವಹರಣೆಗಳಿಗೆ ಸಂಬಂಧಿಸಿದ ಪ್ರತಿಯೊಂದು ಸಭೆಯನ್ನು ಕ್ರಮಬದ್ಧವಾಗಿ ಕರೆಯಲಾಗಿತ್ತೆಂದು ಮತ್ತು ನಡೆಸಲಾಯಿತೆಂದು ಮತ್ತು ಸಭೆಯ ಎಲ್ಲ ಸದಸ್ಯರು ಕ್ರಮಬದ್ಧವಾಗಿ ಅರ್ಹತೆ ಹೊಂದಿದ್ದರೆಂದು ಭಾವಿಸತಕ್ಕದ್ದು ಮತ್ತು ಆ ವ್ಯವಹರಣೆಗಳು ಸಮಿತಿಯ ವ್ಯವಹರಣೆಗಳಾಗಿದ್ದರೆ ಅಂಥ ಸಮಿತಿಯನ್ನು ಕ್ರಮಬದ್ಧವಾಗಿ ರಚಿಸಲಾಗಿತ್ತೆಂದು ಮತ್ತು ಆ ನಡವಳಿಕೆಯಲ್ಲಿ ಉಲ್ಲೇಖಿಸಿದ ವಿಷಯಗಳನ್ನು ವ್ಯವಹರಿಸಲು ಅದು ಅಧಿಕಾರವನ್ನು ಹೊಂದಿತ್ತೆಂದು ಭಾವಿಸತಕ್ಕದ್ದು.
(4) ಜಿಲ್ಲಾ ಪಂಚಾಯತಿಯಲ್ಲಿ ಅಥವಾ ಸಮಿತಿಗಳಲ್ಲಿ ಯಾವುದೇ ಖಾಲಿ ಸ್ಥಾನವು ಉಂಟಾದ ಅವಧಿಯಲ್ಲಿ, ಮುಂದುವರಿದಿರುವ ಸದಸ್ಯನು ಅಥವಾ ಸದಸ್ಯರು, ಆ ಯಾವುದೇ ಖಾಲಿ ಸ್ಥಾನವು ಉಂಟಾಗಿರದಿದ್ದರೆ ಹೇಗೋ ಹಾಗೆ ಕಾರ್ಯನಿರ್ವಹಿಸಬಹುದು.
ಜಿಲ್ಲಾ ಪಂಚಾಯತಿಯ, ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಪ್ರಕಾರ್ಯಗಳು, ಕರ್ತವ್ಯಗಳು, ಅಧಿಕಾರಗಳು
1[184. ಜಿಲ್ಲಾ ಪಂಚಾಯತಿಯ ಪ್ರಕಾರ್ಯಗಳು. (1) ಜಿಲ್ಲಾ ಪಂಚಾಯತಿಯು ಅನುಸೂಚಿ ರಲ್ಲಿ ನಿರ್ದಿಷ್ಟಪಡಿಸಿರುವ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು: ಪರಂತು ಅನುಸೂಚಿ ರಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ಪ್ರಕಾರ್ಯವನ್ನು ನಿರ್ವಹಿಸುವುದಕ್ಕೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು ನಿಧಿಗಳನ್ನು ಒದಗಿಸುವಲ್ಲಿ, ಜಿಲ್ಲಾ ಪಂಚಾಯತಿಯು ಅಂಥ ಪ್ರಕಾರ್ಯವನ್ನು ನಿರ್ವಹಿಸುವುದಕ್ಕಾಗಿ ವಿಧಿಸಲಾಗಿರುವ ಮಾರ್ಗದರ್ಶನಗಳಿಗೆ ಅಥವಾ ಸೂತ್ರಗಳಿಗೆ ಅನುಸಾರವಾಗಿ ಅಂಥ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು. (2) (1)ನೇ ಉಪಪ್ರಕರಣದಲ್ಲಿ ಅಥವಾ ಅನುಸೂಚಿ ರಲ್ಲಿ ಏನೇ ಇದ್ದರೂ, ಜಿಲ್ಲಾ ಪಂಚಾಯತಿಯ ವಶದಲ್ಲಿರುವ ನಿಧಿಯು ಅನುಮತಿಸುವಷ್ಟರಮಟ್ಟಿಗೆ, ಜಿಲ್ಲಾ ಪಂಚಾಯತಿಯು ಈ ಕೆಳಗಿನ ವಿಷಯಗಳ ಬಗ್ಗೆ ಅದರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರದೇಶದೊಳಗೆ ಸೂಕ್ತವಾಗಿ ಅವಕಾಶ ಕಲ್ಪಿಸುವುದು ಕಡ್ಡಾಯವಾಗತಕ್ಕದ್ದು, ಎಂದರೆ:
ಸರ್ಕಾರವು ವಿಧಿಸಲಾಗಿರುವ ಸೂತ್ರಗಳಿಗೆ ಅನುಸಾರವಾಗಿ ಐದು ವರ್ಷಗಳೊಳಗೆ ಸಂಪೂರ್ಣ ಜನತೆಯನ್ನು ಒಳಗೊಳ್ಳುವಂತೆ ಆರೋಗ್ಯ ಕೇಂದ್ರಗಳನ್ನು ಹಾಗೂ ಪ್ರಸೂತಿ ಕೇಂದ್ರಗಳನ್ನು ಸ್ಥಾಪಿಸುವುದು:
ಕುಡಿಯುವ ನೀರಿನ ಬಾವಿಗಳಲ್ಲಿ ನೀರು ಇರುವಂತೆ ನೋಡಿಕೊಳ್ಳುವುದಕ್ಕಾಗಿ ಅಂತರ್ಜಲ ಒರತೆ ಬತ್ತಿ ಹೋಗದಂತೆ ನಿರ್ಮಿತಿಗಳನ್ನು ರಚಿಸುವುದು;
ವಿಶೇಷವಾಗಿ ಕಡಿಮೆ ಮಳೆಯಾಗಿರುವ ಕಾಲದಲ್ಲಿ ಸಾಕಷ್ಟು ಕುಡಿಯುವ ನೀರು ಸಿಗುವಂತೆ ಮಾಡುವುದಕ್ಕಾಗಿ ಕುಡಿಯುವ ನೀರಿನ ಬಾವಿಗಳ ಅಕ್ಕಪಕ್ಕದಲ್ಲಿ ನೀರಾವರಿ ಕೊಳವೆ ಬಾವಿಗಳನ್ನು ಕೊರೆಯುವುದನ್ನು ತಡೆಗಟ್ಟುವುದು;
ಪ್ರತಿಯೊಂದು ತಾಲೂಕಿನಲ್ಲಿ ಸಾಮಾಜಿಕ ಅರಣ್ಯೋದ್ಯಮದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು ಮತ್ತು ಪ್ರತಿ ವರ್ಷ ಜಿಲ್ಲಾ ಯೋಜನೆ ಹಂಚಿಕೆಯಲ್ಲಿ ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂಥ ಶೇಕಡಾವಾರಿಗೆ ಕಡಿಮೆ ಇಲ್ಲದಂತೆ ಖರ್ಚು ಮಾಡುವುದು.]1 1[(6) ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಈ ಮುಂದಿನವರಲ್ಲಿ ವಿಶ್ವಾಸವಿಲ್ಲದಿರುವುದನ್ನು ತಿಳಿಸುವ ಸೂಚನೆಯನ್ನು ಪರಿಗಣಿಸುವುದಕ್ಕಾಗಿ ಕರೆಯಲಾಗಿದ್ದಲ್ಲಿ,-
ಅಧ್ಯಕ್ಷನ ಸಂಬಂಧದಲ್ಲಿ, ಉಪಾಧ್ಯಕ್ಷನು ಅದರ ಅಧ್ಯಕ್ಷತೆಯನ್ನು ವಹಿಸತಕ್ಕದ್ದು;
ಉಪಾಧ್ಯಕ್ಷನ ಸಂಬಂಧದಲ್ಲಿ, ಅಧಕ್ಷನು ಅದರ ಅಧ್ಯಕ್ಷತೆಯನ್ನು ವಹಿಸತಕ್ಕದ್ದು;
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇವರಿಬ್ಬರ ಸಂಬಂಧದಲ್ಲಿ, ಸಭೆಯಲ್ಲಿ ಹಾಜರಿರುವ ಚುನಾಯಿತ ಸದಸ್ಯರು ತಮ್ಮಲ್ಲಿಯೇ ಚುನಾಯಿಸಿದ ಒಬ್ಬ ಸದಸ್ಯನು ಅದರ ಅಧ್ಯಕ್ಷತೆಯನ್ನು ವಹಿಸತಕ್ಕದ್ದು]1
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
1[(3) ಜಿಲ್ಲಾ ಪಂಚಾಯತಿಯು ಸ್ಥಳೀಯ ಸ್ವಯಮಾಡಳಿತದ ಸರ್ಕಾರದ ಒಂದು ಘಟಕವಾಗಿರತಕ್ಕದ್ದು ಮತ್ತು ರಾಜ್ಯವು, ಜಿಲ್ಲಾ ಪಂಚಾಯತಿಯು ಸ್ವಯಂ-ಸರ್ಕಾರದ ಸಂಸ್ಥೆಯಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಅದಕ್ಕೆ ಅವಶ್ಯವಿರಬಹುದಾದ ಅಧಿಕಾರಗಳು, ಪ್ರಾಧಿಕಾರ, ಪ್ರಕಾರ್ಯಗಳು, ಸಿಬ್ಬಂದಿ ವರ್ಗದವರು ಮತ್ತು ನಿಧಿಗಳನ್ನು ಒದಗಿಸತಕ್ಕದ್ದು.
(4) ಪಂಚಾಯತಿ ಪ್ರದೇಶದ ಜನತೆಯ ಅವಶ್ಯಕತೆಗಳನ್ನು ಪೂರೈಸುವುದು ಪ್ರತಿಯೊಂದು ಜಿಲ್ಲಾ ಪಂಚಾಯತಿಯ ಕರ್ತವ್ಯವಾಗಿರತಕ್ಕದ್ದು ಮತ್ತು ಅನುಸೂಚಿ-ರಲ್ಲಿ ನಮೂದಿಸಿರುವ ವಿಷಯಗಳು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸಂಬಂಧಿಸಿದ ಜವಾಬ್ದಾರಿ ನಕ್ಷಯಲ್ಲಿ ತಿಳಿಸಲಾದಂತೆ ಮತ್ತು ಜಿಲ್ಲಾ ಪಂಚಾಯತಿ ನಿಧಿ ಅನುಮತಿಸುವಷ್ಟರ ಮಟ್ಟಿಗೆ, ಸರ್ವರಿಗೂ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪರ ಯೋಜನೆಗಳನ್ನು ಸಿದ್ಧಪಡಿಸುವ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ವಿಷಯಗಳನ್ನು ನಿರ್ವಹಿಸುವ ಅಧಿಕಾರಗಳನ್ನು ಹೊಂದಿರತಕ್ಕದ್ದು.
(5) ಜಿಲ್ಲಾ ಪಂಚಾಯತಿಯು ಪಂಚಾಯತಿ ಪ್ರದೇಶದ ಅವಶ್ಯಕತೆಗಳನ್ನು ಪೂರೈಸತಕ್ಕದ್ದು ಮತ್ತು ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ಅಗತ್ಯತೆಗಳು ಮತ್ತು ಕೋರಿಕೆಗಳಿಗೆ ಸ್ಪಂದಿಸತಕ್ಕದ್ದು ಮತ್ತು ಅನುಸೂಚಿ-ನಮೂದಿಸಲಾಗಿರುವ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರದೇಶಕ್ಕೆ ಅಗತ್ಯವಿರಬಹುದಾದ ನೆರವನ್ನು ನೀಡತಕ್ಕದ್ದು.
(6) ಅಧಿನಿಯಮದಲ್ಲಿ ಹೇಳಲಾದ ಯೋಜಿತ ಯೋಜನಾ ಪ್ರಕ್ರಿಯೆಗಳಲ್ಲಿ ತಾನಾಗಿಯೇ ತೊಡಗಿಸಿಕೊಳ್ಳುವುದು ಜಿಲ್ಲಾ ಪಂಚಾಯತಿಯ ಹೊಣೆಗಾರಿಕೆಯಾಗಿರತಕ್ಕದ್ದು.]1
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.
185. ಪ್ರಕಾರ್ಯಗಳನ್ನು ವಹಿಸಿಕೊಡುವುದು. (1) ಸರ್ಕಾರವು ಜಿಲ್ಲಾ ಪಂಚಾಯತಿಗೆ ಸರ್ಕಾರದ ಕಾರ್ಯಾಂಗ ಅಧಿಕಾರವರ್ಗವು ಯಾವ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಗಳನ್ನು ವಿಸ್ತರಿಸಿದೆಯೋ ಆ ಕಾರ್ಯಗಳನ್ನು ಅಥವಾ ಕೇಂದ್ರ ಸರ್ಕಾರವು ರಾಜ್ಯಸರ್ಕಾರಕ್ಕೆ ವಹಿಸಿಕೊಟ್ಟ ಪ್ರಕಾರ್ಯಗಳನ್ನು ವಹಿಸಿಕೊಡಬಹುದು.
(2) ಸರ್ಕಾರವು, ಈ ಪ್ರಕರಣದ ಅಡಿಯಲ್ಲಿ ವಹಿಸಿಕೊಟ್ಟಿರುವ ಪ್ರಕಾರ್ಯಗಳನ್ನು ಅಧಿಸೂಚನೆಯ ಮೂಲಕ ಹಿಂತೆಗೆದುಕೊಳ್ಳಬಹುದು ಅಥವಾ ಮಾರ್ಪಾಟು ಮಾಡಬಹುದು.
No comments:
Post a Comment