ಗೌಪ್ಯತೆ

inyatrust.in | Friday, November 18, 2022

ಶಿಕ್ಷಣ ಸಂಸ್ಥೆಗಳ ಎಲ್ಲಾ ಸಿಬ್ಬಂದಿಗಳು ಅಥವಾ ಗುತ್ತಿಗೆ ಸಿಬ್ಬಂದಿಗಳು, ಮಕ್ಕಳ ಅಥವಾ ಅವರ ಪೋಷಕರು / ಪಾಲಕರಿಗೆ ಸಂಬಂಧಿಸಿದ  ಗೌಪ್ಯ  ಮಾಹಿತಿಯನ್ನು  ಹೊಂದಿದ್ದು,  ಸದರಿ  ಮಾಹಿತಿಯನ್ನು  ಅಧಿಕೃತ  ಮತ್ತು  ಅರ್ಹರೊಂದಿಗೆ  ಮಾತ್ರ ಹಂಚಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುವುದು.
*  ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು  ಇತರೆ ಮಗುವಿನ ಅಸಮರ್ಪಕ  ವರ್ತನೆಯನ್ನು ಗಮನಿಸಿದ ಪ್ರಕರಣಗಳಲ್ಲಿ ಉದಾ:  ಮಗುವನ್ನು  ಇತರೆ  ಮಗು  ಬೆದರಿಸಿದಲ್ಲಿ,  ಶಿಕ್ಷಣ  ಸಂಸ್ಥೆಯ  ಸಿಬ್ಬಂದಿಯು  ಸಮರ್ಪಕ ಕಾರ್ಯವಿಧಾನಗಳಿಗೆ  ಅನುಗುಣವಾಗಿ  ವರದಿ  ಮಾಡುವುದು  ಮತ್ತು  ಶಿಕ್ಷಣ  ಸಂಸ್ಥೆಗಳ  ಮಕ್ಕಳ  ರಕ್ಷಣಾ ನೀತಿಯಲ್ಲಿ  ನಿಗದಿಪಡಿಸಿರುವಂತೆ  ಮಕ್ಕಳ  ರಕ್ಷಣಾ  ಅಧಿಕಾರಿ  /  ಮಕ್ಕಳ  ರಕ್ಷಣಾ  ಸಮಿತಿಗಳು ವ್ಯವಹರಿಸುವುದು.  ಸದರಿ  ವಿಷಯವನ್ನು  ಶಿಕ್ಷಣ  ಸಂಸ್ಥೆಯ  ಸಿಬ್ಬಂದಿಗಳು  ಶಾಲೆಯ  ಇತರೆ ಸಿಬ್ಬಂದಿಗಳೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು.  
ಮಕ್ಕಳ ಸಹಾಯವಾಣಿ 1098   
ಮಕ್ಕಳ  ಸಹಾಯವಾಣಿ  1098ಅನ್ನು  ಕೇಂದ್ರ  ಸರ್ಕಾರದ ಮಹಿಳಾ  ಮತ್ತು  ಮಕ್ಕಳ  ಅಭಿವೃದ್ಧಿ  ಮಂತ್ರಾಲಯದಡಿ ರಚಿಸಲಾಗಿದ್ದು,  ಅಪಘಾತದಲ್ಲಿರುವ  ಮತ್ತು  ತೊಂದರೆಯ ಪರಿಸ್ಥಿತಿಯಲ್ಲಿರುವ ದೇಶದ ಯಾವುದೇ ಭಾಗದಲ್ಲಿರುವ ಮಕ್ಕಳು ತುತರ್ುಸಂದರ್ಭದಲ್ಲಿ  ಸಂಪರ್ಕಿಸಬಹುದಾಗಿದೆ.  ಮಕ್ಕಳ ಸಹಾಯವಾಣಿ  ಸಂಖ್ಯೆ  1098  ಅನ್ನು  ಮಕ್ಕಳು  ಮತ್ತು ಪೋಷಕರಿಗೆ  ತಿಳಿಸಲು  ಹೆಚ್ಚು  ವ್ಯಾಪಕವಾಗಿ  ಪ್ರಚಾರ ಮಾಡುವುದು ಮತ್ತು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಪ್ರಕಟಿಸುವುದು.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ ಕಾಯಿದೆ - 2012   
ಲೈಂಗಿಕ  ಅತ್ಯಾಚಾರದ,  ಲೈಂಗಿಕ  ಕಿರುಕುಳದ  ಮತ್ತು  ಕಾಮಪ್ರಚೋದಕ  ಅಪರಾಧಗಳಿಂದ  ಮಕ್ಕಳನ್ನು  ಸಂರಕ್ಷಿಸಲು  ಮತ್ತು ಅಂತಹ  ಅಪರಾಧಗಳ  ವಿಚಾರಣೆಗೆ  ವಿಶೇಷ  ನ್ಯಾಯಾಲಯಗಳನ್ನು  ಸ್ಥಾಪಿಸಲು  ಮತ್ತು  ಅದಕ್ಕೆ  ಸಂಬಂಧಿಸಿದ  ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗೆ ಉಪಬಂಧಗಳನ್ನು ಕಲ್ಪಿಸಲು ಇರುವ ಅಧಿನಿಯಮ.
ಈ ಅಧಿನಿಯಮದನ್ವಯ,
*  ಯಾವುದೇ ಕಾನೂನು ಬಾಹಿರ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಗುವನ್ನು ಪ್ರೇರೇಪಿಸುವುದನ್ನು ಅಥವಾ ಬಲಾತ್ಕಾರ ಮಾಡುವುದನ್ನು ನಿಷೇಧಿಸಿದೆ ಮತ್ತು ಇದು ಶಿಕ್ಷಾರ್ಹ ಅಪರಾಧವಾಗಿದೆ.
*  ಮಕ್ಕಳನ್ನು ಶೋಷಣೆ ಮಾಡಿ ಕಾಮಪ್ರಚೋದಕ ಪ್ರದರ್ಶನಗಳಲ್ಲಿ ಮತ್ತು ಸಾಹಿತ್ಯದಲ್ಲಿ ಬಳಸಿಕೊಳ್ಳುವುದನ್ನು ನಿಷೇಧಿಸಿದೆ ಮತ್ತು ಇದು ಶಿಕ್ಷಾರ್ಹ ಅಪರಾಧವಾಗಿದೆ.
*  ಮಕ್ಕಳನ್ನು ಶೋಷಣೆ ಮಾಡಿ ವೇಶ್ಯಾವೃತ್ತಿ ಅಥವಾ ಇತರೆ ಕಾನೂನು ಬಾಹಿರ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸುವುದನ್ನು ತಡೆಗಟ್ಟಲು ಸಮುಚಿತವಾದ ಎಲ್ಲಾ ರಾಷ್ಟ್ರೀಯ ದ್ವಿ ಪಕ್ಷೀಯ ಮತ್ತು ಬಹುಪಕ್ಷೀಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.
*  ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡುವುದು ಮತ್ತು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವುದು ಹೇಯ ಅಪರಾಧಗಳಾಗಿರುವುದರಿಂದ ಅವುಗಳ ಬಗ್ಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಅತ್ಯಗತ್ಯ.

No comments:

Post a Comment