9 & 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ
* ಪೂರ್ಣ ಅಂಧ ವಿದ್ಯಾರ್ಥಿಗಳಿಗೆ ರೀಡರ್ ಭತ್ಯೆಯನ್ನು ನೀಡಲಾಗುವುದು.
* ಪ್ರತಿ ಮಗುವಿಗೆ ಪ್ರತಿ ತಿಂಗಳಿಗೆ ರೂ.250/-ರಂತೆಒಟ್ಟು 10 ತಿಂಗಳಿಗೆ ರೂ.2500/- ಅನುದಾನವನ್ನು ವಿದ್ಯಾರ್ಥಿಯ ಖಾತೆಗೆ ಜಮಾ ಮಾಡಲಾಗುವುದು.
ಸಾರಿಗೆ ಭತ್ಯೆ
ಶಾಲೆಗೆ ಬೇರೆ ಸ್ಥಳಗಳಿಂದ ಬಸ್/ಆಟೋ/ಟೆಂಪೋಗಳಲ್ಲಿ ಬರುವ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಮಾಸಿಕ ರೂ.250/- ಒಟ್ಟು 10 ತಿಂಗಳಿಗೆ ರೂ.2500/- ಅನುದಾನವನ್ನು ವಿದ್ಯಾರ್ಥಿಯ ಖಾತೆಗೆ ಜಮಾ ಮಾಡಲಾಗುವುದು.
ಬೆಂಗಾವಲು ಭತ್ಯೆ
* ಗಂಭೀರ ನ್ಯೂನತೆಯ ವಿಕಲಚೇತನ ಮಕ್ಕಳ ಪೈಕಿ ದೃಷ್ಟಿ, ಬುದ್ಧಿ ನ್ಯೂನತೆ, ಮೆದುಳಿನ ಪಾಶ್ರ್ವವಾಯು ಮತ್ತು ಬಹುನ್ಯೂನತೆಯ ಮಕ್ಕಳಿಗೆ ರೂ. 250/-ರಂತೆ ಒಟ್ಟು 10 ತಿಂಗಳಿಗೆ ರೂ. 2500/- ಅನುದಾನವನ್ನು ಬೆಂಗಾವಲು ಭತ್ಯೆಯಾಗಿ ವಿದ್ಯಾರ್ಥಿಯ ಖಾತೆಮಾ ಮಾಡಲಾಗುವುದು.
* ಇಂತಹ ಮಕ್ಕಳನ್ನು ಶಾಲೆಗಳಿಗೆ ಅಥವಾ ಸಂಪನ್ಮೂಲ ಕೇಂದ್ರಗಳಿಗೆ ಕರೆತರುವ ಸಲುವಾಗಿ ಪೋಷಕರಿಗೆ/ಸ್ವಯಂ ಸೇವಕರಿಗೆ ಬೆಂಗಾವಲು ಭತ್ಯೆಯನ್ನು ನೇರವಾಗಿ ಆವರ ಖಾತೆಗೆ ನೀಡಲಾಗುವುದು.
ಬಲವರ್ಧನೆ ಚಟುವಟಿಕೆಗಳು
1. ವಿಶ್ವ ಅಂಗವಿಕಲರ ದಿನಾಚರಣೆ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಆಚರಿಸಲು ಪ್ರತಿ ಶೈಕ್ಷಣಿಕ ಬ್ಲಾಕ್ನ ಒಂದು ಕೇಂದ್ರ ಪ್ರೌಢಶಾಲೆಯಲ್ಲಿ ಎಲ್ಲಾ ವಿಶೇಷ ಅಗತ್ಯತೆಯುಳ್ಳ ಮಕ್ಕಳು ಭಾಗವಹಿಸುವಂತೆ ರೂ.5000/- ಪ್ರತಿ ಬ್ಲಾಕ್ಗೆ ನೀಡಲಾಗುತ್ತದೆ.
2. ಸಂಪನ್ಮೂಲ ಕೊಠಡಿ ಬಲವರ್ಧನೆ
* ಬ್ಲಾಕ್ಗೊಂದು ಸಂಪನ್ಮೂಲ ಕೊಠಡಿಗೆ ಅವಕಾಶ
* ನಿಗದಿಪಡಿಸಿದ ವಿಶೇಷ ಮಕ್ಕಳು ಸಂಪನ್ಮೂಲ ಕೊಠಡಿಗೆ ಬರಲು ಅವಕಾಶ
* ಐ.ಇ.ಆರ್.ಟಿ. ಹಾಗೂ ನುರಿತ ವೈದ್ಯರಿಂದ ಸಂಪನ್ಮೂಲ ಕೊಠಡಿಯಲ್ಲಿ ಫಿಯೋಥೆರಪಿ
3. ಇತರೆ ಇಲಾಖೆಗಳಿಂದ ಸಿಗುವ ಸೌಲಭ್ಯಗಳು ಮಾಸಾಶನ:
ವಿಶೇಷ ಅಗತ್ಯವುಳ್ಳವರಿಗೆ ಸಕರ್ಾರದ ವತಿಯಿಂದ ಮಾಸಿಕವಾಗಿ ಅವರ ಅಂಗವೈಕಲ್ಯತೆಗೆ ಅನುಗುಣವಾಗಿ ಮಾಸಿಕ ರೂ.500/- ಹಾಗೂ ರೂ.1200/-ಗಳನ್ನು ನೀಡಲಾಗುತ್ತದೆ. ವಿಶೇಷ ಅಗತ್ಯವುಳ್ಳವರಿಗೆ ಗುರುತಿನ ಚೀಟಿ: ವಿಶೇಷ ಅಗತ್ಯವುಳ್ಳವರು ಯಾವುದೇ ಸವಲತ್ತು ಪಡೆಯಬೇಕಾದರೆ ಅವರಅಂಗವೈಕಲ್ಯತೆ ಶೇ.40ಕ್ಕಿಂತ ಜಾಸ್ತಿ ಇರಬೇಕು. ಈ ದೃಢೀಕರಣ ಇಲ್ಲದೇ ಯಾವುದೇ ಸರ್ಕಾರದ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಪ್ರಮಾಣಪತ್ರವನ್ನು ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿಗಳು/ ತಾಲ್ಲೂಕು ವೈದ್ಯಾಧಿಕಾರಿಗಳ ನೇತೃತ್ವದ ತಂಡ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ನೇತೃತ್ವದ ತಂಡದಿಂದ ಪರಿಶೀಲನೆಗೆ ಒಳಪಟ್ಟ ನಂತರ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹಾಗೂ ಪ್ರೋತ್ಸಾಹ ಬಹುಮಾನ ಯೋಜನೆ: 1ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ರೂ.100/- ರಿಂದ 600/- ರವರೆಗೆ ಪ್ರತಿ ಮಾಹೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಅವರ ಬ್ಯಾಂಕ್ ಖಾತೆಗೆ ವಾಷರ್ಿಕ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಪಬ್ಲಿಕ್ ಪರೀಕ್ಷೆಗಳಲ್ಲಿ ಶೇ.60ಕ್ಕಿಂತ ಹೆಚ್ಚಿಗೆ ಅಂಕ ಪಡೆದ ಪ್ರತಿಭಾನ್ವಿತ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಉನ್ನತ ಶಿಕ್ಷಣ ಪಡೆಯುವ ವಿಶೇಷ ಅಗತ್ಯವುಳ್ಳವರಿಗೆ ಶುಲ್ಕ ಮರುಪಾವತಿ:
ಎಸ್ಎಸ್ಎಲ್ಸಿ ನಂತರದ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ, ಔದ್ಯೋಗಿಕ ಶಿಕ್ಷಣಗಳಿಗೆ ನಿಯಮಾನುಸಾರ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿರುವ ಪರೀಕ್ಷಾ ಶುಲ್ಕ, ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಕ್ರೀಡಾ ಶುಲ್ಕ ಹಾಗೂ ಗ್ರಂಥಾಲಯ ಶುಲ್ಕಗಳನ್ನು ಮರುಪಾವತಿ ಮಾಡಲಾಗುವುದು. ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್:
ಎಸ್ಎಸ್ಎಲ್ಸಿ ಹಾಗೂ ನಂತರದ ವ್ಯಾಸಂಗ ಮಾಡುವ ದೃಷ್ಟಿ ನ್ಯೂನತೆಯುಳ್ಳ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಮಾತನಾಡುವ (ಟಾಕಿಂಗ್) ಲ್ಯಾಪ್ಟಾಪ್ಗಳನ್ನು ಒದಗಿಸಲಾಗುವುದು. ವಿಶೇಷ ಅಗತ್ಯವುಳ್ಳ ಯಂತ್ರಚಾಲಿತ ದ್ವಿಚಕ್ರವಾಹನ: 20 ರಿಂದ 60 ವರ್ಷ ವಯೋಮಾನದ ತೀವ್ರತರವಾದ ದೈಹಿಕ ವಿಕಲಚೇತನರ ಕುಟುಂಬದ ವಾರ್ಷಿಕ ವರಮಾನ ರೂ.2.00 ಲಕ್ಷಗಳಿಗಿಂತ ಕಡಿಮೆ ಇರುವ ವಿಶೇಷ ಅಗತ್ಯವುಳ್ಳವರಿಗೆ ಅನುಕೂಲವಾಗುವಂತೆ ಜೀವಿತಕಾಲದಲ್ಲಿ ಒಂದು ಬಾರಿ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ನೀಡಲಾಗುವುದು. ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ:
ರಾಜ್ಯ ಸರ್ಕಾರವು ಸಿ ಮತ್ತು ಡಿ ಹುದ್ದೆಗಳಲ್ಲಿ 5 ಪ್ರತಿಶತ ಮತ್ತು ಎ ಮತ್ತು ಬಿ ಹುದ್ದೆಗಳಲ್ಲಿ 3 ಪ್ರತಿಶತ ಹುದ್ದೆಗಳನ್ನು ವಿಶೇಷ ಅಗತ್ಯವುಳ್ಳವರಿಗಾಗಿ ಮೀಸಲಿರಿಸಿದೆ. ನಿರುದ್ಯೋಗಿ ವಿಕಲಚೇತನರಿಗೆ ನಿರುದ್ಯೋಗ ಭತ್ಯೆ: ಎಸ್ಎಸ್ಎಲ್ಸಿ ಹಾಗೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ವಿಶೇಷ ಅಗತ್ಯವುಳ್ಳವರು ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡು 2 ವರ್ಷವಾಗಿದ್ದಲ್ಲಿ ಮಾಹೆಯಾನ ರೂ.1000/-ಗಳ ನಿರುದ್ಯೋಗ ಭತ್ಯೆ ನೀಡಲಾಗುವುದು. ಮಾಸಾಶನ ಪಡೆಯುವವರು ಇದಕ್ಕೆ ಅರ್ಹರಿರುವುದಿಲ್ಲ. ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ/ತಾಯಿ/ಪೋಷಕರಿಗೆ ಸಾಮೂಹಿಕ ವಿಮಾಯೋಜನೆ:
ಭಾರತೀಯಜೀವ ವಿಮಾ ನಿಗಮದ ಮೂಲಕ ಬುದ್ಧಿನ್ಯೂನತೆಯುಳ್ಳ ಮಕ್ಕಳ ತಂದೆ/ತಾಯಿ/ಪೋಷಕರಿಗೆ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ನಿರಾಮಯಆರೋಗ್ಯ ವಿಮಾಯೋಜನೆಯಡಿ ನೋಂದಾಯಿಸಿಕೊಂಡ ಬುದ್ಧಿನ್ಯೂನತೆ, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗನ್ಯೂನತೆಗೆ ಒಳಗಾದ ವಿಶೇಷ ಅಗತ್ಯವುಳ್ಳವರು ರೂ.1.00 ಲಕ್ಷಗಳವರೆಗೆ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿರುತ್ತದೆ.
No comments:
Post a Comment