ಕುಡಿಯುವ ನೀರು ಪೂರೈಕೆ

inyatrust.in | Friday, January 27, 2023

  ಕುಡಿಯುವ  ನೀರು  ಪೂರೈಕೆ  ಯೋಜನೆಗಳು  ಅಥವಾ  ಬಹು  ತಾಲ್ಲೂಕು  ಕುಡಿಯುವ  ನೀರು  ಪೂರೈಕೆ ಯೋಜನೆಗಳನ್ನು ಸ್ಥಾಪಿಸುವುದು.
  ಕುಡಿಯುವ ನೀರು ಪರೀಕ್ಷಣಾ ಪ್ರಯೋಗಾಲಯಗಳನ್ನು ಸ್ಥಾಪಿಸುವುದು.
 ನೀರು  ಪೂರೈಕೆ  ಯೋಜನೆಗಳನ್ನು  ಅನುಷ್ಠಾನಗೊಳಿಸುವುದಕ್ಕೆ  ಸಂಬಂಧಿಸಿದಂತೆ  ಗ್ರಾಮ  ಪಂಚಾಯಿತಿಗಳು ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಹಣಕಾಸು ನೆರವು ನೀಡುವುದು.
10.  ಲೋಕೋಪಯೋಗಿ,  ಪಟ್ಟಣ  ಮತ್ತು  ಗ್ರಾಮಾಂತರ  ಯೋಜನೆ  (ರಸ್ತೆಗಳು,  ಸೇತುವೆಗಳು  ಹಾಯ್ಗಡಗಳು, ಜಲಮಾರ್ಗಗಳು ಮತ್ತು ಇತರ ಸಂಪರ್ಕ ಮಾರ್ಗಗಳು)
  ಯಾವುದೇ ಇತರ ಸ್ಥಳೀಯ ಪ್ರಾಧಿಕಾರ ಅಥವಾ ಸರ್ಕಾರದ ನಿಯಂತ್ರಣದ ಅಡಿಯಲ್ಲಿ ಬರದಿರುವಂಥ ರಾಷ್ಟ್ರೀಯ  ಹೆದ್ದಾರಿಗಳು  ಮತ್ತು  ರಾಜ್ಯ  ಹೆದ್ದಾರಿಗಳು  ಹಾಗೂ  ಬಹುಜಿಲ್ಲಾ  ರಸ್ತೆಗಳು  (ಎಂಆರ್ಡಿಗಳು), ಸೇತುವೆಗಳು,  ಸುರಂಗ  ಕಾಲುವೆಗಳನ್ನು,  ಹೊರತುಪಡಿಸಿ,  ಒಂದಕ್ಕಿಂತ  ಹೆಚ್ಚು  ತಾಲ್ಲೂಕುಗಳ  ಮೂಲಕ ಹಾದುಹೋಗುವ  ಅಂಥ  ತಾಲ್ಲೂಕುಗಳಿಗೆ  ಸಂಬಂಧಪಟ್ಟಿರುವ  ಎಲ್ಲಾ  ಜಿಲ್ಲಾ  ರಸ್ತೆಗಳ  ಸಂಬಂಧದಲ್ಲಿ ಯೋಜನೆ ರೂಪಿಸುವುದು, ನಿರ್ಮಾಣ ಮಾಡುವುದು ಮತ್ತು ನಿರ್ವಹಿಸುವುದು.
  ಕಟ್ಟಡಗಳ  ನಿರ್ಮಾಣ  ಮತ್ತು  ನಿರ್ವಹಣೆಗಳಿಗೆ  ಸಂಬಂಧಿಸಿದಂತೆ  ಗ್ರಾಮ  ಪಂಚಾಯತಿಗಳು  ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ತಂತ್ರಜ್ಞಾನವನ್ನು ಒದಗಿಸುವುದು.
 ಗ್ರಾಮಪಂಚಾಯತ್  ಮತ್ತು  ತಾಲ್ಲೂಕು  ಪಂಚಾಯತ್  ಕೋರಿಕೆಯ  ಮೇರೆಗೆ  ತಾಂತ್ರಿಕ,  ವಿನ್ಯಾಸಗಳನ್ನು ಹೊಸ ತಂತ್ರಜ್ಞಾನಗಳನ್ನು ಒದಗಿಸುವುದು.
  ಮಾರುಕಟ್ಟೆಗಳು,  ಆಟದ  ಮೈದಾನ,  ಕ್ರೀಡಾಂಗಣ  ಮೊದಲಾದಂಥ  ಬಹು  ತಾಲ್ಲೂಕು  ಮಟ್ಟದ  ನಾಗರಿಕ ಮೂಲಸೌಲಭ್ಯಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು.
11.  ಗ್ರಾಮೀಣ ವಿದ್ಯುದೀಕರಣ/ ವಿದ್ಯುಚ್ಛಕ್ತಿ ಮತ್ತು ಇಂಧನ
ಸೂಕ್ತವಾದ  ಸಾಂಪ್ರದಾಯಿಕ  ಮತ್ತು  ಸಾಂಪ್ರದಾಯಿಕವಲ್ಲದ  ಇಂಧನ  ಘಟಕಗಳನ್ನು  ಕುರಿತು  ಯೋಜನೆ ರೂಪಿಸುವುದು, ಸ್ಥಾಪಿಸುವುದು ಹಾಗೂ ನಿರ್ವಹಿಸುವುದು.
  ಸಾಂಪ್ರದಾಯಿಕ ಮತ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಇಂಧನಗಳನ್ನು ಇತರರಿಗೆ ಮಾರಾಟ ಮಾಡುವುದು.
12.  ಬಡತನ ನಿರ್ಮೂಲನೆ
ಗ್ರಾಮ ಪಂಚಾಯತಿಗಳು ಗುರುತಿಸಿದ ಬಡವರ ಕೌಶಲ್ಯವರ್ಧನೆ.
  ತಾಂತ್ರಿಕ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
ಗ್ರಾಮ  ಪಂಚಾಯತಿಗಳ  ಪಾಲುದಾರಿಕೆಯಲ್ಲಿ  ಉದ್ಯೋಗ  ಖಾತರಿ  ಯೋಜನೆಗಳನ್ನು  ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು.
 ಉದ್ಯೋಗ ಮೇಳಗಳನ್ನು ಏರ್ಪಡಿಸುವುದು
13. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)
14. ವಿಪತ್ತು ನಿರ್ವಹಣೆ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಮೂಲಸೌಕರ್ಯ ಸೃಷ್ಟಿಸುವುದು.
15.  ಶಿಕ್ಷಣ  (ಪ್ರಾಥಮಿಕ  ಮತ್ತು  ಪ್ರೌಢ  ಶಾಲಾ  ಶಿಕ್ಷಣ,  ತಾಂತ್ರಿಕ  ಮತ್ತು  ವೃತ್ತಿಪರ  ಶಿಕ್ಷಣ,  ವಯಸ್ಕರ  ಹಾಗೂ ಅನೌಪಚಾರಿಕ ಶಿಕ್ಷಣ)
 ಜಿಲ್ಲಾಮಟ್ಟದಲ್ಲಿ  ಔಪಚಾರಿಕ  ಮತ್ತು  ಅನೌಪಚಾರಿಕ  ಶಿಕ್ಷಣ  ಕುರಿತು  ಯೋಜನೆಯನ್ನು  ರೂಪಿಸುವುದು ಹಾಗೂ ನಿರ್ವಹಿಸುವುದು.
ಪ್ರೌಢಶಾಲೆಗಳು,  ಪದವಿಪೂರ್ವ  ಕಾಲೇಜುಗಳು,  ಐಟಿಐ,  ಪಾಲಿಟೆಕ್ನಿಕ್  ಕಾಲೇಜುಗಳನ್ನು  ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ  ಸಕ್ಷಮ  ಪ್ರಾಧಿಕಾರಗಳಿಗೆ  ಪ್ರಸ್ತಾವನೆಗಳನ್ನು  ಕಳುಹಿಸುವುದು  ಮತ್ತು ಮಂಜೂರಾತಿಗಳನ್ನು ಪಡೆದುಕೊಳ್ಳುವುದು.
ಸರ್ಕಾರಿ ಪದವಿಪೂರ್ವ ಕಾಲೇಜುಗಳು, ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳನ್ನು ನಿರ್ಮಿಸುವುದು ಹಾಗೂ ನಿರ್ವಹಿಸುವುದು.
ಜಿಲ್ಲಾ  ಪಂಚಾಯಿತಿ  ಅಧೀನದಲ್ಲಿನ  ಸಂಸ್ಥೆಗಳಿಗೆ  ಸಂಬಂಧಿಸಿದ  ವಿದ್ಯಾರ್ಥಿ  ನಿಲಯಗಳ  ಸಂಬಂಧದಲ್ಲಿ ಯೋಜನೆಯನ್ನು ರೂಪಿಸುವುದು ಮತ್ತು ನಿರ್ವಹಿಸುವುದು.
  ಶಿಕ್ಷಣಕ್ಕೆ  ಸಂಬಂಧಿಸಿದ  ಕೇಂದ್ರ  ಮತ್ತು  ರಾಜ್ಯ  ಪ್ರಾಯೋಜಿತ  ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವುದು  ಮತ್ತು  ಶಿಕ್ಷಣ  ಚಟುವಟಿಕೆಗಳನ್ನು  ಸರ್ವೆ  ಮಾಡುವುದು  ಮತ್ತು ಮೌಲ್ಯಮಾಪನ ಮಾಡುವುದು.
ಗ್ರಾಮೀಣ ಕುಶಲ ಕಲೆ ಮತ್ತು ವೃತ್ತಿಶಿಕ್ಷಣ ತರಬೇತಿಗಳನ್ನು ಏರ್ಪಡಿಸುವುದು ಹಾಗೂ ನಿರ್ವಹಿಸುವುದು.
  ಗ್ರಾಮಪಂಚಾಯಿತಿಗಳು  ಮತ್ತು  ತಾಲ್ಲೂಕು  ಪಂಚಾಯಿತಿಗಳಿಗೆ  ತಾಂತ್ರಿಕ  ಹೂಡುವಳಿ  ರೂಪಗಳು, ಸಾಮಗ್ರಿಗಳು, ಹಣಕಾಸು ನೆರವನ್ನು ಒದಗಿಸುವುದು.
ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳು, ಹಿಂದುಳಿದ ವರ್ಗಗಳ ಮತ್ತು ಸಮೂಹಗಳಿಗೆ ಸೇರಿದ  ವಿದ್ಯಾರ್ಥಿಗಳಿಗೆ,  ಬಾಲಕಿಯರಿಗೆ,  ವಿಶೇಷ  ಚೇತನರಿಗೆ  ಮತ್ತು  ಅಲ್ಪಸಂಖ್ಯಾತ  ಸಮೂಹಗಳಿಗೆ ಸೇರಿದ  ವಿದ್ಯಾರ್ಥಿಗಳಿಗೆ  ವೃತ್ತಿಪರ  ಹಾಗೂ  ತಾಂತ್ರಿಕ  ಶಿಕ್ಷಣ  ನೀಡುವುದು  ಮತ್ತು  ವಯಸ್ಕರ  ಶಿಕ್ಷಣದ ಕುರಿತು ಯೋಜನೆ ರೂಪಿಸುವುದು ಹಾಗೂ ನಿರ್ವಹಿಸುವುದು.
 ಜಿಲ್ಲಾ  ಪಂಚಾಯಿತಿಯ  ಅಧೀನದಲ್ಲಿ  ಬರುವ  ಶಿಕ್ಷಣ  ಸಂಸ್ಥೆಗಳಿಗೆ  ಸರ್ಕಾರದ ನಿರ್ದೇಶನಗಳಿಗನುಸಾರವಾಗಿ ಅತಿಥಿ ಶಿಕ್ಷಕರನ್ನು ನಿಯೋಜಿಸುವುದು.
ವಿಶೇಷ  ಚೇತನ  ಮಕ್ಕಳಿಗೆ  ವಿಶೇಷ  ಶಾಲೆಗಳು  ಮತ್ತು  ವಿದ್ಯಾರ್ಥಿನಿಲಯಗಳನ್ನು  ಸ್ಥಾಪಿಸುವುದು  ಹಾಗೂ ನಿರ್ವಹಿಸುವುದು.
 ಅನೌಪಚಾರಿಕ ಶಿಕ್ಷಣದ ಕಾರ್ಯಕ್ರಮಗಳಿಗೆ ಉತ್ತೇಜಿಸುವುದು.  
16. ಗ್ರಂಥಾಲಯಗಳು
ಇತರ  ಸ್ಥಳೀಯ  ಪ್ರಾಧಿಕಾರಗಳು  ಅಥವಾ  ಸರ್ಕಾರದ  ನಿಯಂತ್ರಣದ  ಅಡಿಯಲ್ಲಿ  ಬರದಿರುವಂಥ  ಜಿಲ್ಲಾಪಂಚಾಯಿತಿ  ಮಟ್ಟದ  ಗ್ರಂಥಾಲಯಗಳು  ಮತ್ತು  ವಾಚನಾಲಯಗಳನ್ನು  ಸ್ಥಾಪಿಸುವುದಕ್ಕೆ  ಸಂಬಂಧಿಸಿದಂತೆ ಯೋಜನೆಗಳನ್ನು  ರೂಪಿಸುವುದು,  ಅನುಷ್ಠಾನಗೊಳಿಸುವುದು,  ಸ್ಥಾಪಿಸುವುದು,  ನಿರ್ವಹಿಸುವುದು  ಹಾಗೂ ಮೇಲ್ವಿಚಾರಣೆಯನ್ನು ಮಾಡುವುದು.
17. ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
  ಗ್ರಾಮೀಣ  ಕಲಾ  ಮತ್ತು  ಸಾಂಸ್ಕೃತಿಕ  ಚಟುವಟಿಕೆಗಳು  ಹಾಗೂ  ಕುಶಲಕಲೆಗಳ  ಉತ್ಪನ್ನಗಳನ್ನು ದಾಖಲೀಕರಿಸುವುದು.
  ಬಹುಪಾಲು  ಅವನತಿಯಾಗಿರುವ  ಸಾಂಸ್ಕೃತಿಕ  ಪರಂಪರೆಯನ್ನು  ಸಂರಕ್ಷಿಸುವುದು  ಮತ್ತು ಪುನಶ್ಚೇತನಗೊಳಿಸುವುದು.
  ಜಿಲ್ಲಾ  ಮಟ್ಟದಲ್ಲಿ  ಸಾಂಸ್ಕೃತಿಕ  ಕೇಂದ್ರಗಳನ್ನು  ನಿರ್ಮಿಸುವುದು  ಮತ್ತು  ನಿರ್ವಹಿಸುವುದು  ಹಾಗೂ ಕುಶಲಕಲಾ ಮೇಳಗಳನ್ನು ಏರ್ಪಡಿಸುವುದು.
  ಜಿಲ್ಲಾಮಟ್ಟದಲ್ಲಿ ಯುವಮೇಳಗಳನ್ನು ಏರ್ಪಡಿಸುವುದು.
  ಜಿಲ್ಲಾಮಟ್ಟದಲ್ಲಿ ಕ್ರೀಡಾಶಾಲೆಗಳ ಮೇಲ್ವಿಚಾರಣೆಯನ್ನು ಮಾಡುವುದು.
  ಮತೀಯ  ಮತ್ತು  ಧಾರ್ಮಿಕ  ಸಾಮರಸ್ಯ  ಸಾಧನೆ,  ಮಕ್ಕಳು,  ಅಲ್ಪಸಂಖ್ಯಾತರು,  ಮಹಿಳೆಯರ  ಹಕ್ಕುಗಳ ಉಲ್ಲಂಘನೆ,  ದೌರ್ಜನ್ಯ,  ತಾರತಮ್ಯಗಳ  ವಿರುದ್ಧ  ಸುರಕ್ಷತೆ  ಒದಗಿಸುವ  ವಿಷಯದಲ್ಲಿ  ಅತ್ಯುತ್ತಮ  ಕಾರ್ಯಸಾಧನೆ  ಮಾಡಿರುವ  ಗ್ರಾಮ  ಪಂಚಾಯಿತಿಗಳಿಗೆ  ವಾರ್ಷಿಕ  ಪ್ರಶಸ್ತಿ  ನೀಡುವ  ಪದ್ಧತಿಯನ್ನು ಪ್ರಾರಂಭಿಸುವುದು
18. ಮಾರುಕಟ್ಟೆ, ಪರಿಷೆ ಮತ್ತು ದನಗಳ ಜಾತ್ರೆಗಳು
ದನಗಳ  ಜಾತ್ರೆಗಳನ್ನು  ಒಳಗೊಂಡಂತೆ  ಜಿಲ್ಲಾ  ಮಟ್ಟದಲ್ಲಿ  ಪರಿಷೆ,  ಉತ್ಸವಗಳನ್ನು    ನಡೆಸುವುದಕ್ಕೆ ನೀತಿನಿಯಮಗಳನ್ನು ರೂಪಿಸುವುದು ಮತ್ತು ಅವುಗಳನ್ನು ನಡೆಸುವುದು.
19.  ಸಾರ್ವಜನಿಕ  ಆರೋಗ್ಯ  (ಆಸ್ಪತ್ರೆಗಳು,  ಪ್ರಾಥಮಿಕ  ಆರೋಗ್ಯ  ಕೇಂದ್ರಗಳು  ಮತ್ತು  ಕುಟುಂಬ  ಕಲ್ಯಾಣ  ಸೌಲಭ್ಯಗಳೂ ಸೇರಿದಂತೆ ಆರೋಗ್ಯ ಸೌಲಭ್ಯಗಳು)
  ಜಿಲ್ಲಾಮಟ್ಟದಲ್ಲಿ  ಸಾಂಪ್ರದಾಯಿಕ  ಮತ್ತು  ಸಾಂಪ್ರದಾಯಕವಲ್ಲದ  ಈ  ಎರಡೂ  ಬಗೆಯ  ಸಾರ್ವಜನಿಕ ಆರೋಗ್ಯ  ಸೌಲಭ್ಯಗಳನ್ನು  ಒದಗಿಸುವುದಕ್ಕೆ  ಸಂಬಂಧಿಸಿದಂತೆ  ಯೋಜನೆ  ರೂಪಿಸುವುದು  ಹಾಗೂ ನಿರ್ವಹಿಸುವುದು.
  ಸಮುದಾಯ  ಆರೋಗ್ಯ  ಕೇಂದ್ರ  ಮತ್ತು  ಜಿಲ್ಲಾ  ಆಸ್ಪತ್ರೆಗಳನ್ನು  ಸ್ಥಾಪಿಸುವುದಕ್ಕೆ  ಸಂಬಂಧಿಸಿದಂತೆ  ಸಕ್ಷಮ ಪ್ರಾಧಿಕಾರಗಳಿಗೆ  ಪ್ರಸ್ತಾವನೆಗಳನ್ನು  ಕಳುಹಿಸಿಕೊಡುವುದು  ಮತ್ತು  ಮಂಜೂರಾತಿಗಳನ್ನು ಪಡೆದುಕೊಳ್ಳುವುದು.
 ಸರ್ಕಾರ  ಅಥವಾ  ಇತರ  ಸ್ಥಳೀಯ  ಪ್ರಾಧಿಕಾರದ  ಆಡಳಿತದಿಂದ  ಹೊರಗಿರುವ  ಸಮುದಾಯ  ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ನಿರ್ವಹಿಸುವುದು.
 ತಾಲ್ಲೂಕು  ಪಂಚಾಯಿತಿ  ಮಟ್ಟ,  ಸಮೂಹ  ಮಟ್ಟ  (ಕ್ಲಸ್ಟರ್  ಲೆವೆಲ್)  ಹಾಗೂ  ಗ್ರಾಮ  ಪಂಚಾಯಿತಿ ಮಟ್ಟದ  ಆರೋಗ್ಯ  ಸೇವಾ  ಕೇಂದ್ರಗಳಿಗೆ  ಸಾಧನಗಳು,  ಮೂಲ  ಔಷಧ  ವಸ್ತುಗಳು  ಮತ್ತು  ಇತರ ಔಷಧಗಳನ್ನು  ಪಡೆದುಕೊಳ್ಳುವುದು,  ಔಷಧಗಳು,  ವೈದ್ಯಕೀಯ  ಉಪಕರಣಗಳು  ಮತ್ತು  ಇತರ ವೈದ್ಯಕೀಯ ಸಾಧನ ಸಾಮಗ್ರಿಗಳನ್ನು ಪೂರೈಸುವುದು.
  ಜಿಲ್ಲಾಮಟ್ಟದಲ್ಲಿ  ಸಾಂಕ್ರಾಮಿಕ  ರೋಗ  ನಿರ್ವಹಣಾ  ವ್ಯವಸ್ಥೆಯನ್ನು  ರೂಪಿಸುವುದು  ಮತ್ತು ಅನುಷ್ಠಾನಗೊಳಿಸುವುದು.
  ಜಿಲ್ಲಾಮಟ್ಟದಲ್ಲಿ ಪ್ರಯೋಗಾಲಯಗಳು ಮತ್ತು ರೋಗ ಪರಿಶೋಧನಾ ಸೇವೆಗಳನ್ನು ಸ್ಥಾಪಿಸುವುದು.
 ಜಿಲ್ಲಾಮಟ್ಟದಲ್ಲಿ  ಪ್ರಸೂತಿ  ಮತ್ತು  ಶಿಶು  ಆರೋಗ್ಯ  ಕಾರ್ಯಕ್ರಮವನ್ನು  ಅನುಷ್ಠಾನಗೊಳಿಸುವುದು  ಮತ್ತು ನಿರ್ವಹಿಸುವುದು.
 ಜಿಲ್ಲಾಮಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಪ್ರಾಯೋಜಿತ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವುದು
 ವಿಶೇಷ  ಚೇತನ  ಮತ್ತು  ಮನೋವಿಕಲತೆಯ  ವ್ಯಕ್ತಿಗಳಂತಹ  ವಿಶೇಷ  ವರ್ಗಗಳಿಗೆ  ಆರೋಗ್ಯ  ಪಾಲನಾ ಕೇಂದ್ರಗಳನ್ನು ಸ್ಥಾಪಿಸುವುದು.
  ಜಿಲ್ಲಾಮಟ್ಟದಲ್ಲಿ  ಕುಟುಂಬ  ಕಲ್ಯಾಣ  ಕಾರ್ಯಕ್ರಮಗಳನ್ನು  ಯೋಜಿಸುವುದು  ಮತ್ತು ಅನುಷ್ಠಾನಗೊಳಿಸುವುದು.

No comments:

Post a Comment