ಗ್ರಾಮೀಣ ವಸತಿ

inyatrust.in | Wednesday, January 25, 2023

  ವಸತಿರಹಿತ ಮತ್ತು ನಿವೇಶನರಹಿತ ಜನರನ್ನು ಹಾಗೂ ವಲಸೆ ಕಾರ್ಮಿಕರನ್ನು ಗುರುತಿಸುವುದು.
  ಮೀನುಗಾರರ  ವಸತಿ  ಸ್ಕೀಮುಗಳನ್ನು  ಒಳಗೊಂಡಂತೆ  ಎಲ್ಲಾ  ಗ್ರಾಮೀಣ  ವಸತಿ  ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಭಾಗವಹಿಸುವುದು.
 ವಸತಿ ಮೇಲ್ದರ್ಜಿಕರಣ ಸ್ಕೀಮಿನ ಅನುಷ್ಠಾನದಲ್ಲಿ ಭಾಗವಹಿಸುವುದು.
 ಋತುಮಾನದ ವಲಸೆ ಕಾರ್ಮಿಕರಿಗೆ ಋತುಮಾನದ ವಲಸೆ ಸೌಲಭ್ಯಗಳನ್ನು ಅನುಷ್ಠಾನಗೊಳಿಸುವುದು.
  ಗ್ರಾಮೀಣ ವಸತಿ ಸಹಕಾರ ಸಂಘಗಳಿಗೆ ಉತ್ತೇಜನ ನೀಡುವುದು.
 ಸರ್ಕಾರಿ ಭೂಮಿಯನ್ನು ಗುರುತಿಸುವುದು ಮತ್ತು ಬಡಾವಣೆಗಳ ಅಭಿವೃದ್ಧಿಗಾಗಿ, ವಸತಿ ರಹಿತರಿಗೆ ವಸತಿ ನಿವೇಶನಗಳನ್ನು  ವಿತರಿಸುವುದಕ್ಕೆ  ಸಂಬಂಧಿಸಿದಂತೆ  ನಿವೇಶನ  ಹಂಚಿಕೆಗಾಗಿ  ಅಥವಾ  ನಿವೇಶನ ಮೀಸಲಾತಿಗಾಗಿ ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡುವುದು.
  ಸರ್ಕಾರವು  ನೀಡಿದ  ಅಧಿಕಾರಗಳ  ಪ್ರಕಾರ  ಗ್ರಾಮೀಣ  ವಸತಿ  ಮತ್ತು  ಬಡಾವಣೆ  ಯೋಜನೆಗಳನ್ನು ಮಂಜೂರು ಮಾಡುವುದು.
9. ಕುಡಿಯುವ ನೀರಿನ ಪೂರೈಕೆ
 ನೀರಿನ  ಗುಣಮಟ್ಟ  ಮತ್ತು  ಅದರ  ವ್ಯಾಪ್ತಿ  ಕುರಿತು  ಅಗತ್ಯ  ದತ್ತಾಂಶ,  ಮಾಹಿತಿ ಸಂಗ್ರಹಿಸುವುದು ಹಾಗೂ ಆ ಕುರಿತು ಯೋಜನೆ ಸಿದ್ಧಪಡಿಸುವುದು.
  ಗ್ರಾಮಪಂಚಾಯತಿಗಳ  ವ್ಯಾಪ್ತಿಯೊಳಗಿನ  ನೀರು  ಸರಬರಾಜು  ಸ್ಕೀಮುಗಳನ್ನು ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.
  ಜಲಮಾಲಿನ್ಯದ ನಿಯಂತ್ರಣ, ರಕ್ಷಣೆ ಮತ್ತು ತಡೆಗಟ್ಟುವಿಕೆ
  ಸಾಂಪ್ರದಾಯಿಕ ಕುಡಿಯುವ ಜಲಮೂಲಗಳ ನಿರ್ವಹಣೆ
  ಪರೀಕ್ಷೆಗಾಗಿ ಕುಡಿಯುವ ನೀರಿನ ಮೂಲಗಳಿಂದ ನೀರಿನ ಮಾದರಿಯ ಸಂಗ್ರಹಣೆ
  ಕುಡಿಯುವ ನೀರಿನ ಮೂಲಗಳ ನಿಯತಕಾಲಿಕ ಶುದ್ಧೀಕರಣ
  ಬಳಕೆದಾರರ  ಶುಲ್ಕಗಳನ್ನು  ಸಂಗ್ರಹಿಸುವ  ಮೂಲಕ  ಮನೆಗಳಿಗೆ  ಮತ್ತು  ವಾಣಿಜ್ಯ  ಸಂಸ್ಥೆಗಳಿಗೆ ನಲ್ಲಿ ನೀರನ್ನು ಒದಗಿಸುವುದು   ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ
ಅಂತರ್ಜಲ ದುರ್ಬಳಕೆಯ ನಿಯಂತ್ರಣಕ್ಕೆ ಪ್ರಾಧಿಕಾರಗಳಿಗೆ ನೆರವು ನೀಡುವುದು.
10.  ಪಟ್ಟಣ  ಮತ್ತು  ಗ್ರಾಮಾಂತರ  ಯೋಜನೆಗಳು  ಮತ್ತು  ಲೋಕೋಪಯೋಗಿ  ಕಾಮಗಾರಿಗಳು  (ರಸ್ತೆಗಳು, ಸೇತುವೆಗಳು ಹಾಯ್ಗಡಗಳು, ಜಲಮಾರ್ಗಗಳು ಮತ್ತು ಇತರ ಸಂಪರ್ಕ ಕಲ್ಪಿಸುವ ಮಾರ್ಗಗಳು)
  ಈ ಕೆಳಗಿನ ನಿಮರ್ಿತಿಗಳಿಗಾಗಿ ಯೋಜನೆ ರೂಪಿಸುವುದು, ಅವುಗಳನ್ನು ನಿಮರ್ಿಸುವುದು ಮತ್ತು ನಿರ್ವಹಿಸುವುದು:
(ಎ)  ಪಾದಚಾರಿ ಮಾರ್ಗಗಳು/ಓಣಿಗಳು
(ಬಿ)  ಗ್ರಾಮ ರಸ್ತೆಗಳು
(ಸಿ)  ಸೇತುವೆಗಳು, ಮೋರಿಗಳು,
(ಡಿ)  ಕಟ್ಟಡಗಳು
(ಇ)  ಚರಂಡಿಗಳು  
  (ಎಫ್)  ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಎಂಡಿಆರ್ಗಳನ್ನು ಅಥವಾ  ಇತರ  ಸ್ಥಳೀಯ  ಸಂಸ್ಥೆಗಳಿಗೆ  ಅಥವಾ  ಸರ್ಕಾರಿ  ಇಲಾಖೆಗಳಿಗೆ  ವಹಿಸಿಕೊಟ್ಟಂಥ ನಿರ್ಮಿತಿಗಳನ್ನು ಹೊರುತುಪಡಿಸಿ ಇತರ ನಿರ್ಮಿತಿಗಳು.
 ಈ ಕೆಳಗಿನವುಗಳನ್ನು ನಿರ್ಮಿಸುವುದು ಹಾಗೂ ನಿರ್ವಹಿಸುವುದು ಎ. ಪ್ರಯಾಣಿಕರ ತಂಗುದಾಣಗಳು/ವಾಹನ ನಿಲುಗಡೆ ಸ್ಥಳಗಳು  ಬಿ. ಆಟದ ಮೈದಾನಗಳು
  ಎಲ್ಲಾ  ವಿಧದ  ಸ್ಮಶಾನ  ಭೂಮಿ/ಸಮಾಧಿ  ಭೂಮಿಗಳನ್ನು  ನಿರ್ಮಿಸುವುದು  ಮತ್ತು  ನಿರ್ವಹಿಸುವುದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಎಲ್ಲಾ ಸ್ಮಶಾನ ಭೂಮಿ/ಸಮಾಧಿ ಭೂಮಿಗಳ ಬಳಕೆಗಾಗಿ ನಿಯಮಗಳನ್ನು ಮತ್ತು ವಿನಿಮಯಗಳ್ನು ರಚಿಸುವುದು
 ದೋಣಿಗಳು, ಹಾಯ್ಗಡಗಳು ಮತ್ತು ಜಲ ಮಾರ್ಗಗಳನ್ನು ನಿರ್ವಹಿಸುವುದು
  ಮಳೆ ನೀರು ಚರಂಡಿಗಳನ್ನು ನಿರ್ವಹಿಸುವುದು
 ಸ್ನಾನ  ಘಟ್ಟಗಳು,  ಸಾರ್ವಜನಿಕ  ಮಾರುಕಟ್ಟೆ  ಮುಂತಾದವುಗಳಂಥಹ ಮೂಲಸೌಕರ್ಯಗಳನ್ನು/ಸೌಲಭ್ಯಗಳನ್ನು ಆಧರಿಸಿದ ಸಮುದಾಯ ಅವಶ್ಯಕತೆಗಳನ್ನು ಸ್ಥಾಪಿಸುವುದು.
 ಜನವಸತಿ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು.
  ವಸತಿ ಬಡಾವಣೆಗಳನ್ನು ನಿರ್ಮಿಸುವುದು
 ಗ್ರಾಮ ಪಂಚಾಯಿತಿಗಳಿಗೆ ವಹಿಸಿಕೊಟ್ಟಿರುವ ಶಾಲಾ ಕಟ್ಟಡಗಳು, ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳ  ನಿರ್ಮಾಣಕ್ಕೆ  ಯೋಜನೆ  ಸಿದ್ಧಪಡಿಸುವುದು,  ಅವುಗಳನ್ನು  ನಿರ್ಮಿಸುವುದು  ಮತ್ತು ನಿರ್ವಹಿಸುವುದು.
  ಸಮಗ್ರ ಗ್ರಾಮ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸುವುದು.
11.  ಗ್ರಾಮೀಣ ವಿದ್ಯುದೀಕರಣ/ವಿದ್ಯುತ್ ಮತ್ತು ಇಂಧನ
  ಸಾರ್ವಜನಿಕ  ಬೀದಿಗಳು  ಮತ್ತು  ಸ್ಥಳಗಳಲ್ಲಿ  ಬೀದಿ  ದೀಪಗಳನ್ನು  ಅಳವಡಿಸುವುದು  ಮತ್ತು ನಿರ್ವಹಿಸುವುದು.
 ಗ್ರಾಮ  ಪಂಚಾಯಿತಿ  ನಿಧಿಗಳಿಂದ  ಛಾವಣಿ  ಮೇಲಿನ  ಸೌರ  ತಟ್ಟೆ  ಅಳವಡಿಕೆಯನ್ನು ಒಳಗೊಂಡಂತೆ  ಸೌರವಿದ್ಯುತ್,  ಜೈವಿಕ  ಅನಿಲ,  ಗಾಳಿಯಂತ್ರ,  ಕಿರು  ವಿದ್ಯುತ್  ಜಲ ಸ್ಥಾವರಗಳಂತಹ  ಸಣ್ಣ  ಸಾಂಪ್ರದಾಯಿಕ  ಮತ್ತು  ಅಸಂಪ್ರದಾಯಿಕ  ಇಂಧನ  ಘಟಕಗಳ ಕುರಿತು  ಯೋಜನೆ  ಸಿದ್ಧಪಡಿಸುವುದು,  ಅವುಗಳನ್ನು  ಸ್ಥಾಪಿಸುವುದು,  ನಿರ್ವಹಿಸುವುದು ಮತ್ತು ಅವುಗಳಿಗೆ ಉತ್ತೇಜನ ನೀಡುವುದು.
 ಹೆಚ್ಚುವರಿ ಅಸಂಪ್ರದಾಯಿಕ ಇಂಧನ ಉತ್ಪತ್ತಿಯನ್ನು ಇತರರಿಗೆ ಮಾರಾಟ ಮಾಡುವುದು.
(ತ) ಗ್ರಾಮ  ಪಂಚಾಯಿತಿಗೆ  ಸ್ವಯಂ  ಸೇವೆ  ಸಲ್ಲಿಸುವ  ಮೂಲಕ  ಗ್ರಾಮೀಣ  ವಿದ್ಯುದೀಕರಣಕ್ಕೆ ನೆರವು ನೀಡುವುದು.
12.  ಬಡತನ ನಿರ್ಮೂಲನೆ
  ಬಡ  ಜನರನ್ನು  ಗುರುತಿಸುವುದು  ಮತ್ತು  ಬಡತನ  ನಿರ್ಮೂಲನೆ  ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.
  ಎಲ್ಲಾ ಬಡತನ ನಿರ್ಮೂಲನ ಕಾರ್ಯಕ್ರಮಗಳ ಫಲಾನುಭವಿಗಳನ್ನು ಗುರುತಿಸುವುದು ಮತ್ತು ಆಯ್ಕೆ ಮಾಡುವುದು.
 ಗ್ರಾಮ  ಪಂಚಾಯಿತಿ  ಮಟ್ಟದಲ್ಲಿನ  ವಿವಿಧ  ಕಾರ್ಯಕ್ರಮಗಳ  ಅಡಿಯಲ್ಲಿ  ಫಲಾನುಭವಿಗಳ ಆಯ್ಕೆಗಾಗಿ ಗ್ರಾಮ ಸಭೆಗೆ ಅನುಕೂಲ ಕಲ್ಪಿಸಿಕೊಡುವುದು.
 ಬಡತನ  ನಿಮರ್ೂಲನೆ  ಕಾರ್ಯಕ್ರಮಗಳ  ಪ್ರಯೋಜನಗಳನ್ನು  ಕುರಿತು  ಯೋಜಿಸುವುದು, ಅನುಷ್ಠಾನಗೊಳಿಸುವುದು, ಅವುಗಳ ಮೇಲ್ವಿಚಾರಣೆ ಮಾಡುವುದು ಮತ್ತು ವಿತರಿಸುವುದು.
  ಸ್ವ-ಉದ್ಯೋಗ ಕಾರ್ಯಕ್ರಮಗಳಿಗೆ ಮೂಲಸೌಕರ್ಯ ಸೌಲಭ್ಯಗಳನ್ನು ಕಲ್ಪಿಸುವುದು.
 ಸ್ವ-ಸಹಾಯ  ಗುಂಪುಗಳನ್ನು  ಮತ್ತು  ನೆರೆಹೊರೆ  ಗುಂಪುಗಳನ್ನು  ಸಂಘಟಿಸುವುದು  ಮತ್ತು ಸಬಲೀಕರಣಗೊಳಿಸುವುದು.
 ಬಡತನ ನಿರ್ಮೂಲನೆ ಅವಶ್ಯಕತೆಗಳನ್ನು ವಿಶ್ಲೇಷಿಸುವುದು.
 ಸ್ವ-ಉದ್ಯೋಗ  ಮತ್ತು  ಮಜೂರಿ  ಉದ್ಯೋಗ  ಕಾರ್ಯಕ್ರಮಗಳ  ಬಗ್ಗೆ  ಯೋಜನೆ ಸಿದ್ಧಪಡಿಸುವುದು ಮತ್ತು ಅದನ್ನು ಅನುಷ್ಠಾನಗೊಳಿಸುವುದು.
 ವಿವಿಧ ಸ್ಕೀಮುಗಳ ಅಡಿಯಲ್ಲಿ ಮೂಲಭೂತ ಕನಿಷ್ಠ ಅಗತ್ಯತೆಗಳನ್ನು ಒದಗಿಸುವುದು.
  ಕೌಶಲ್ಯ  ಅಭಿವೃದ್ಧಿ  ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದು  ಮತ್ತು  ಉದ್ಯೋಗ  ಅವಕಾಶದ ಉತ್ತೇಜನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು
13.  ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)
 ಆಹಾರ  ಧಾನ್ಯಗಳು  ಮತ್ತು  ಇತರ  ದೈನಂದಿನ  ಅವಶ್ಯಕತೆಗಳ  ವಿತರಣೆಯನ್ನು ನಿರ್ವಹಿಸುವುದು.
 ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಆ ಬಗ್ಗೆ ಅರಿವು ಮೂಡಿಸುವುದು.
 ಗ್ರಾಮ  ಪಂಚಾಯಿತಿ  ನಿಧಿಗಳಿಂದ  ಗೋದಾಮುಗಳನ್ನು  ಮತ್ತು  ಗ್ರಾಮೀಣ  ದಾಸ್ತಾನು ಮಳಿಗೆಗಳನ್ನು ನಿರ್ಮಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು
14.  ವಿಪತ್ತು ನಿರ್ವಹಣೆ
 ವಿಪತ್ತು ಪೀಡಿತ ಸ್ಥಳಗಳನ್ನು ಗುರುತಿಸಲು ಸಮೀಕ್ಷೆ ನಡೆಸುವುದಕ್ಕಾಗಿ;
  ವಿಪತ್ತು ನಿರ್ವಹಣೆ ಸೌಲಭ್ಯಗಳನ್ನು ಸೃಜಿಸಲು ಮತ್ತು ನಿರ್ವಹಿಸಲು;
ವಿಪತ್ತು ನಿರ್ವಹಣೆಯಲ್ಲಿ ಸ್ಥಳೀಯ ಮತ್ತು ಹೊರಗಿನ ತಜ್ಞರನ್ನು ಗುರುತಿಸಲು;
 ಗ್ರಾಮ  ಪಂಚಾಯತಿಯ  ಸ್ವಂತ  ನಿಧಿಯಿಂದ  ಮತ್ತು  ಸರ್ಕಾರವು  ಹೊರಡಿಸಿದ  ಮಾರ್ಗಸೂಚಿಗಳಪ್ರಕಾರ ವಿಪತ್ತುಗಳಿಂದ ಸಂತ್ರಸ್ತರಾದ ವ್ಯಕ್ತಿಗಳಿಗೆ ಪರಿಹಾರ ಮತ್ತು ನಷ್ಟ ಪರಿಹಾರ ಒದಗಿಸಲು, -ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನೆರವು ನೀಡುವುದು
15.  ಶಿಕ್ಷಣ  [ಪ್ರಾಥಮಿಕ  ಮತ್ತು  ಪ್ರೌಢಶಾಲಾ  ಶಿಕ್ಷಣ,  ತಾಂತ್ರಿಕ  ಮತ್ತು  ವೃತ್ತಿಪರ  ಶಿಕ್ಷಣ,  ವಯಸ್ಕರ  ಹಾಗೂ ಅನೌಪಚಾರಿಕ ಶಿಕ್ಷಣ]
  ಪಂಚಾಯತಿ  ಮಟ್ಟದಲ್ಲಿ  ಸಾಂಪ್ರದಾಯಿಕ  ಮತ್ತು  ಸಾಂಪ್ರದಾಯಿಕವಲ್ಲದ  ಈ  ಎರಡು  ರೀತಿಯ  ಶಿಕ್ಷಣ ನೀಡುವ  ಕುರಿತು  ಯೋಜನೆಯನ್ನು  ರೂಪಿಸುವಲ್ಲಿ  ಮತ್ತು  ಮೇಲ್ವಿಚಾರಣೆ  ಮಾಡುವಲ್ಲಿ ಪಾಲ್ಗೊಳ್ಳುವುದು.
 ಲೋಯರ್  ಮತ್ತು  ಅಪ್ಪರ್  ಪ್ರಾಥಮಿಕ  ಶಾಲೆಗಳನ್ನು  ಸ್ಥಾಪಿಸುವುದಕ್ಕೆ  ಸಂಬಂಧಿಸಿದಂತೆ  ಸಕ್ಷಮ ಪ್ರಾಧಿಕಾರಕ್ಕೆ  ಪ್ರಸ್ತಾವನೆಗಳನ್ನು  ಕಳುಹಿಸುವುದು  ಮತ್ತು  ಅವರಿಂದ  ಮಂಜೂರಾತಿಗಳನ್ನು ಪಡೆದುಕೊಳ್ಳುವುದು.
ಸರ್ಕಾರಿ ಲೋಯರ್ ಮತ್ತು ಅಪ್ಪರ್ ಪ್ರಾಥಮಿಕ ಶಾಲೆಗಳ ಮೇಲುಸ್ತುವಾರಿ ನೋಡಿಕೊಳ್ಳುವುದು.
ಸರ್ಕಾರಿ  ಲೋಯರ್  ಮತ್ತು  ಅಪ್ಪರ್  ಪ್ರಾಥಮಿಕ  ಶಾಲೆಗಳ  ಕಟ್ಟಡಗಳನ್ನು  ನಿಮರ್ಿಸುವುದು  ಮತ್ತು ನಿರ್ವಹಿಸುವುದು.  
 ಮಕ್ಕಳ ವಿವರಗಳನ್ನು ಸಂಗ್ರಹಿಸುವುದು ಮತ್ತು ಇಂದೀಕರಿಸುವುದು.  
ಸಾಕ್ಷರತಾ  ಕಾರ್ಯಕ್ರಮಗಳು,  ಅನೌಪಚಾರಿಕ  ಮತ್ತು  ಔಪಚಾರಿಕ  ಶಿಕ್ಷಣ  ಕಾರ್ಯಕ್ರಮಗಳನ್ನು  ಅನುಷ್ಠಾನಗೊಳಿಸುವುದು, ವಯಸ್ಕರ ಸಾಕ್ಷರತೆಗೆ ಉತ್ತೇಜನ ನೀಡುವುದು.
ಆಡಳಿತ ನಿರ್ವಹಣೆಯನ್ನು ಒಳಗೊಂಡಂತೆ ಗುಣಮಟ್ಟ ನಿಯಂತ್ರಣವನ್ನು ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.
ಗ್ರಾಮ  ಪಂಚಾಯಿತಿ  ಮಟ್ಟದಲ್ಲಿ  ಶಿಕ್ಷಣ  ಚಟುವಟಿಕೆಗಳ  ಸಮೀಕ್ಷೆ  ಮಾಡುವುದು  ಮತ್ತು ಮೌಲ್ಯಮಾಪನ ಮಾಡುವುದು.
 ಹಿಂದುಳಿದ  ವರ್ಗಗಳು  ಮತ್ತು  ಸಮೂಹಗಳಿಗೆ,  ಬಾಲಕಿಯರಿಗೆ,  ವಿಶೇಷವಾಗಿ  ವಿಕಲಚೇತನರು  ಮತ್ತು ಅಲ್ಪಸಂಖ್ಯಾತ  ಸಮೂಹಗಳಿಗಾಗಿ  ಉನ್ನತ  ಪ್ರಾಥಮಿಕ  ಹಂತದವರೆಗಿನ  ಆಶ್ರಮ, ಶಾಲೆಗಳ/ವಿದ್ಯಾರ್ಥಿನಿಲಯ ಶಾಲೆಗಳ ಮೇಲ್ವಿಚಾರಣೆ ಮಾಡುವುದು.
ಗ್ರಾಮೀಣ  ಕುಶಲಕರ್ಮಿಗಳಿಗೆ  ಉತ್ತೇಜನ  ನೀಡುವುದು  ಮತ್ತು  ಅವರಿಗೆ  ವೃತ್ತಿ  ತರಬೇತಿಯನ್ನು ನೀಡುವುದು.
 ಪ್ರಾಥಮಿಕ  ಹಾಗೂ  ಮಾಧ್ಯಮಿಕ  ಶಾಲೆಗಳಲ್ಲಿ  ಸಂಪೂರ್ಣ  ದಾಖಲಾತಿ  ಮತ್ತು  ಹಾಜರಾತಿಯನ್ನು ಖಚಿತಪಡಿಸಿಕೊಳ್ಳುವುದು.
16. ಗ್ರಂಥಾಲಯಗಳು
 ಗ್ರಾಮ  ಪಂಚಾಯತಿ  ಮಟ್ಟದ  ಗ್ರಂಥಾಲಯಗಳನ್ನು  ಮತ್ತು  ವಾಚನಾಲಯಗಳನ್ನು  ನಿರ್ವಹಿಸುವುದು  ಮತ್ತು  ಮೇಲ್ವಿಚಾರಣೆ ಮಾಡುವುದು.

No comments:

Post a Comment