ರಾಷ್ಟ್ರೀಯ ವೈದ್ಯರ ದಿನ ಜುಲೈ-1
- ರಾಜು ಭೂಶೆಟ್ಟಿ,

ಬಿ.ಸಿ. ರಾಯ್ ಅವರ ಪೂರ್ಣ ಹೆಸರು ಬಿಧನ್ ಚಂದ್ರ ರಾಯ್, ಖ್ಯಾತ ವೈದ್ಯ ಹಾಗೂ ದೇಶ ಭಕ್ತರಾಗಿದ್ದ ಇವರು ಜುಲೈ 1, 1882 ರಂದು ಬಿಹಾರ ರಾಜ್ಯದ ಪಾಟ್ನಾದ ಬಂಕಿಪೋರ್ನಲ್ಲಿ ಜನಿಸಿದರು. ಬಡ ರೋಗಿಗಳ ಬಗ್ಗೆ ಅಪಾರ ಕಾಳಜಿ, ಅವರು ತಮ್ಮ ಬಳಿಗೆ ಬರುತ್ತಿದ್ದ ರೋಗಿಗಳಿಗೆ ಕೇವಲ 2 ರೂ ಗಳನ್ನು ಮಾತ್ರ ಪಡೆಯುತ್ತಿದ್ದರು. ಕೇವಲ ಒಬ್ಬ ವೈದ್ಯರಾಗಿ ರೋಗಿಗಳನ್ನು ಉಪಚರಿಸದೇ, ಹಲವಾರು ಸಂದರ್ಭಗಳಲ್ಲಿ ದಾದಿಯ ಸೇವೆಯನ್ನೂ ಮಾಡುತ್ತಿದ್ದುದು ಅವರ ವೈದ್ಯಕೀಯ ಸೇವೆಯ ಭಕ್ತಿ ಹಾಗೂ ಸೇವಾ ಪಾವಿತ್ರ್ಯತೆಯನ್ನು ಎತ್ತಿ ತೋರಿಸುತ್ತದೆ. ವೈದ್ಯಕೀಯ ಸೇವೆಯ ಜೊತೆಗೆ ಒಬ್ಬ ನಿಸ್ವಾರ್ಥ ಸಮಾಜ ಸೇವಕರಾಗಿ, ದೇಶಕ್ಕಾಗಿ ಶ್ರಮವಹಿಸಿ ದುಡಿಯಬೇಕು, ಬದುಕಿನಲ್ಲಿ ಎಂತಹ ಸಂದರ್ಭಗಳಲ್ಲೂ ಧೈರ್ಯ, ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಸ್ವಂತ ಆಲೋಚನೆ ಮಾಡುವ ಬುದ್ಧಿಯನ್ನು ಬೆಳೆಸಿಕೊಳ್ಳಬೇಕು, ಯಾವುದೇ ಕೆಲಸ ನನ್ನಿಂದ ಸಾಧ್ಯವಿಲ್ಲವೆಂದು ಹೇಳಬಾರದು ಎಂಬ ಪ್ರೇರಣೆಯ ಮಾತುಗಳನ್ನು ಆಡುವುದರ ಜೊತೆಗೆ, ಅದನ್ನು ಮಾತು ಮತ್ತು ಕೃತಿಗಳಲ್ಲಿ ಮಾಡಿ ತೋರಿಸಿದರು. ಅವರು ವೈದ್ಯಕೀಯ ಕಾಲೇಜಿನಲ್ಲಿದ್ದಾಗ ಒಂದು ಉದ್ಗಾರ ಅವರನ್ನು ಬಹಳಷ್ಟು ಆಕರ್ಷಿಸಿತ್ತು- ಅದೇನೆಂದರೆ ನಿನ್ನ ಕೈಗಳು ಏನನ್ನು ಮಾಡಲು ಉತ್ಕೃಷ್ಟವಾಗಿವೆಯೋ ಅದನ್ನು ನೀನು ಪೂರ್ಣ ಸಾಮಥ್ರ್ಯದಿಂದ ಸಾಧಿಸಿ ತೋರಿಸು ಎಂಬ ಈ ಮಾತು ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿ, ಅದನ್ನು ತಮ್ಮ ವೃತ್ತಿ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದರು. ಹೀಗೆ ಅವರ ವೈದ್ಯಕೀಯ ಕ್ಷೇತ್ರದ ಅತ್ಯಮೂಲ್ಯ ಕೊಡುಗೆಗಾಗಿ ಅವರ ಜನ್ಮ ದಿನವಾದ ಜುಲೈ-1 ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸುವುದರ ಮೂಲಕ ಅವರ ಸೇವೆ ಹಾಗೂ ರೋಗಿಗಳನ್ನು ಗುಣಪಡಿಸುವಲ್ಲಿ ವೈದ್ಯ ಸಮೂಹದ ಸೇವೆಗಳನ್ನು ಸ್ಮರಿಸಿಕೊಳ್ಳುವುದು ಈ ದಿನದ ಉದ್ದೇಶವಾಗಿದೆ.

ಹೋರಾಟದ ಜೀವನ: ಬಿಧನ್ ಚಂದ್ರ ರಾಯ್ ಅವರ ತಂದೆಯ ಹೆಸರು ಪ್ರಕಾಶ ಚಂದ್ರ ಬಿಧನ್ ಅವರು ತಮ್ಮ ಕುಟುಂಬದಲ್ಲಿ 5 ನೆಯ ಹಾಗೂ ಕಿರಿಯ ಮಗನಾಗಿದ್ದರು, ಕೇವಲ 14 ವರ್ಷದವರಿದ್ದಾಗ ತಾಯಿಯನ್ನು ಕಳೆದುಕೊಂಡರು. ಆದರೆ ಇವರ ತಂದೆಯವರು ಐವರು ಮಕ್ಕಳ ಪಾಲಿಗೆ ತಾಯಿಯೂ ಆಗಿ ತುಂಬಾ ಪ್ರೀತಿಯಿಂದ ತಾಯಿಯ ಅಗಲಿಕೆ ಇವರಿಗೆ ಕಾಡದಂತೆ ಪಾಲನೆ ಮಾಡಿದರು. ರಾಯ್ ಅವರ ವಿದ್ಯಾಭ್ಯಾಸ ಪ್ರಾಥಮಿಕದಿಂದ ಪದವಿಯವರೆಗೆ ಪಾಟ್ನಾದಲ್ಲಿ ನಡೆಯಿತು. ಗಣಿತದಲ್ಲಿ ಆನರ್ಸ್ ಪದವಿ ಪಡೆದರು. ತದನಂತರ ವೈದ್ಯಕೀಯ ಶಿಕ್ಷಣ ಪಡೆಯಲು, ವೈದ್ಯಕೀಯ ಕಾಲೇಜನ್ನು ಸೇರಿದರು. ಮೊದಲನೆ ವರ್ಷದ ವೈದ್ಯಕೀಯ ಶಿಕ್ಷಣವನ್ನು ಮುಗಿಸುವ ಸಂದರ್ಭದಲ್ಲಿ ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. ಏಕೆಂದರೆ ಇವರ ತಂದೆಯವರು ನೌಕರಿಯಿಂದ ನಿವೃತ್ತಿಯಾದರು. ತೊಂದರೆಗಳು ಸಾಕಷ್ಟಿದ್ದರೂ, ವೈದ್ಯರಾಗಬೇಕೆಂಬ ಛಲ ಜೀವಂತವಾಗಿದ್ದರಿಂದ, ವಿದ್ಯಾರ್ಥಿ ವೇತನದ ನೆರವಿನಿಂದ ಹಾಗೂ ಜ್ಞಾನಾರ್ಜನೆಗಾಗಿ ವೈದ್ಯಕೀಯ ಪುಸ್ತಕಗಳನ್ನು ಸಹಪಾಠಿಗಳಿಂದ ಎರವಲು ಪಡೆದು, ಅತೀ ಹೆಚ್ಚು ಸಮಯವನ್ನು ಗ್ರಂಥಾಲಯಗಳಲ್ಲಿ ಓದುವಿಕೆಗೆ ಮೀಸಲಿಟ್ಟು ತಮ್ಮ ಅಧ್ಯಯನವನ್ನು ಮುಂದುವರೆಸಿದ್ದರು. ವೈದ್ಯಕೀಯ ಪದವಿಯನ್ನು ಪಡೆದ ನಂತರ ಪ್ರಾಂತೀಯ ವೈದ್ಯಕೀಯ ಸೇವಾ ಇಲಾಖೆಯನ್ನು ಸೇರಿ ತಮ್ಮ ವೃತ್ತಿಯನ್ನು ಆರಂಭಿಸಿದರು.

ಛಲ ಬಿಡದ ಪ್ರಯತ್ನ: ಉನ್ನತ ವ್ಯಾಸಂಗಕ್ಕಾಗಿ ಸೇಂಟ್ ಬಾರ್ತಲೋಮಿ ಸಂಸ್ಥೆಯನ್ನು ಸೇರಲು ಬಯಸಿ ಲಂಡನ್ಗೆ ಹೋದರು. ಆದರೆ ಆ ಸಂಸ್ಥೆಯ ಡೀನ್ ಏಷ್ಯಾ ಖಂಡದಿಂದ ಬಂದಿದ್ದ ಯಾವುದೇ ವಿದ್ಯಾರ್ಥಿಗೆ ಪ್ರವೇಶ ಕೊಡಲು ಒಪ್ಪಲಿಲ್ಲ. ರಾಯ್ ಅವರ ಅರ್ಜಿಯನ್ನು ಡೀನ್ ತಿರಸ್ಕರಿಸಿದ್ದರೂ ರಾಯ್ ತಮ್ಮ ಪ್ರಯತ್ನ ಬಿಡಲಿಲ್ಲ. ರಾಯ್ ಅವರ ವ್ಯಕ್ತಿತ್ವವು ಹಿಡಿದ ಯಾವುದೇ ಕೆಲಸವನ್ನು ಸಾಧಿಸದೇ ಬಿಡುತ್ತಿರಲಿಲ್ಲ. ಛಲ ಬಿಡದ ತಮ್ಮ ಪ್ರಯತ್ನವನ್ನು ಮುಂದುವರೆಸಿ, ಕೊನೆಗೆ ಸುಮಾರು ಮೂವತ್ತು ಬಾರಿ ಅರ್ಜಿಯನ್ನು ಸಲ್ಲಿಸಿದರು. ನಂತರ ಇವರ ಪ್ರಯತ್ನಕ್ಕೆ ಜಯ ಸಿಕ್ಕು ಡೀನ್ ಇವರ ಅಜರ್ಿಯನ್ನು ಅಂಗೀಕರಿಸಿದರು. ಎರಡು ವರ್ಷ ಮೂರು ತಿಂಗಳಲ್ಲಿ ರಾಯ್ ಎಂ.ಆರ್.ಸಿ.ಸಿ. ಮತ್ತು ಎಫ್.ಆರ್.ಸಿ.ಎಸ್. (ಫೆಲೋಷಿಪ್ ಆಫ್ ದ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ಸ್) ಪದವಿಗಳನ್ನು ಗಳಿಸಿ 1911 ರಲ್ಲಿ ಇಂಗ್ಲೆಂಡ್ನಿಂದ ಭಾರತಕ್ಕೆ ಮರಳಿದರು.

ಅಭಿವೃದ್ಧಿ ಪರ್ವ ಆರಂಭ:  ಭಾರತಕ್ಕೆ ವಾಪಸ್ಸಾದ ತಕ್ಷಣ ರಾಯ್ ಅವರು ಕಲ್ಕತ್ತ ವೈದ್ಯಕೀಯ ಕಾಲೇಜ್ನಲ್ಲಿ ಮತ್ತು ಕ್ಯಾಂಪ್ ಬೆಲ್ ವೈದ್ಯಕೀಯ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ವೈದ್ಯಕೀಯ ಶಿಕ್ಷಣ ಬೋಧಿಸಿದರು. ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಸುಧಾರಿಸಲು ಜಾದವ್ಪುರ್ ಕ್ಷಯ ಆಸ್ಪತ್ರೆ, ಚಿತ್ತರಂಜನ್ ಸೇವಾಸದನ್, ಆರ್.ಜಿ.ಖೇರ್ ವೈದ್ಯಕೀಯ ಕಾಲೇಜು, ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಸಂಸ್ಥೆ, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸಲು ಶ್ರಮಿಸಿದರು. 1926 ರಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಚಿತ್ತರಂಜನ್ ಸೇವಾಸದನ ಆರಂಭಿಸಲಾಯಿತು. ಮೊದಮೊದಲು ಮಹಿಳೆಯರು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದರು. ಆದರೆ ಡಾ. ರಾಯ್ ಅವರ ಪರಿಶ್ರಮದಿಂದ ಸೇವಾಸದನ ಎಲ್ಲ ವರ್ಗಗಳ, ಸಮುದಾಯಗಳ ಮಹಿಳೆಯರಿಗೆ ಆಶ್ರಯ ನೀಡುವ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಯಿತು. ಖರಗಪುರದಲ್ಲಿ ಐ.ಐ.ಟಿ.ಯನ್ನು ಸ್ಥಾಪಿಸಲು ಕಾರಣೀಕರ್ತರಾದರು.

ರಾಜಕೀಯ ಜೀವನ:  1925 ರಲ್ಲೇ ರಾಯ್ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದರು. ಅವರು ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಬೆಂಗಾಳ್ ಎಂದು ಖ್ಯಾತರಾಗಿದ್ದ  ಸುರೇಂದ್ರನಾಥ ಬ್ಯಾನರ್ಜಿಯವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಅವರ ಜನಪ್ರಿಯತೆ, ನಿಸ್ವಾರ್ಥ ಸೇವೆ ಹಾಗೂ ಜನರಿಗೆ ಅವರ ಮೇಲಿದ್ದ ಅಪಾರ ವಿಶ್ವಾಸವನ್ನು ಬಿಂಬಿಸುತ್ತದೆ.

ಪರಿಸರ ಪ್ರೇಮಿ: 1925 ರಲ್ಲಿ ಅವರು ಶಾಸನ ಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿ ಹೂಗ್ಲಿ ನದಿ ತೀವ್ರವಾಗಿ ಕಲುಷಿತಗೊಂಡಿರುವ ಬಗ್ಗೆ ಅಧ್ಯಯನ ನಡೆಸಬೇಕೆಂದು ಗಮನ ಸೆಳೆದರು. ಆ ನದಿಯನ್ನು ಶುದ್ಧವಾಗಿಡಲು ತಾವೇ ಅತ್ಯುತ್ತಮ ಸಲಹೆಗಳನ್ನು ನೀಡಿದರು.

ಸ್ವಾರಸ್ಯಕರ ಘಟನೆ: ಡಾ. ರಾಯ್ ಅವರು ಗಾಂಧೀಜಿಯವರ ಖಾಸಗಿ ವೈದ್ಯರಾಗಿದ್ದರು. 1933 ರಲ್ಲಿ ಬಾರತ ಬಿಟ್ಟು ತೊಲಗಿ ಚಳುವಳಿಯ ಕಾಲದಲ್ಲಿ ಗಾಂಧೀಜಿ ಪೂನಾದ ಪರ್ಣಕುಟಿಯಲ್ಲಿ ಉಪವಾಸ ವ್ರತವನ್ನು ಕೈಗೊಂಡಿದ್ದರು, ಆ ಸಂದರ್ಭದಲ್ಲಿ ರಾಯ್ ಅವರು ಬಾಪೂಜಿಯವರಿಗೆ ಕೆಲವು ಔಷಧಿಗಳನ್ನು ತೆಗೆದುಕೊಳ್ಳಲು ತಿಳಿಸಿದರು. ಆದರೆ ಬಾಪೂಜಿಯವರು ಆ ಔಷಧಿಗಳು ಭಾರತದಲ್ಲಿ ತಯಾರಾಗಿಲ್ಲವೆಂಬ ಕಾರಣಕ್ಕೆ ತೆಗೆದುಕೊಳ್ಳಲು ನಿರಾಕರಿಸಿ ರಾಯ್ ಅವರಿಗೆ ಹೀಗೆ ಪ್ರಶ್ನಿಸಿದರು ನಾನೇಕೆ ನಿಮ್ಮಿಂದ ಔಷಧಿಯನ್ನು ತೆಗೆದುಕೊಳ್ಳಬೇಕು? ನೀವು ನನ್ನ ನಾಲ್ಕು ನೂರು ದಶ ಲಕ್ಷ ದೇಶವಾಸಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವಿರಾ? ಅದಕ್ಕೆ ರಾಯ್ ರವರು ಕೊಟ್ಟ ಉತ್ತರ ನಾನು ಚಿಕಿತ್ಸೆ ನೀಡುತ್ತಿರುವುದು ಕೇವಲ ಒಬ್ಬ ಗಾಂಧೀಜಿಗೆ ಮಾತ್ರವಲ್ಲ, ನಾಲ್ಕುನೂರು ದಶಲಕ್ಷ ದೇಶವಾಸಿಗಳನ್ನು ಪ್ರತಿನಿಧಿಸುತ್ತಿರುವ ಗಾಂಧೀಜಿಗೆ ಎಂದು ಹೇಳಿದರು. ಅಂದರೆ ಗಾಂಧೀಜಿಯವರು ಆರೋಗ್ಯವಾಗಿ ಸದೃಢವಾಗಿದ್ದರೆ ಮಾತ್ರ ದೇಶವಾಸಿಗಳು ಆರೋಗ್ಯವಾಗಿದ್ದಂತೆ ಎಂದು ಹೇಳಿದ ಮಾತುಗಳಿಂದ ಗಾಂಧೀಜಿಯವರು ತಮ್ಮ ಪಟ್ಟು ಸಡಿಲಿಸಿ ರಾಯ್ ಅವರು ಕೊಟ್ಟ  ಔಷಧಿಯನ್ನು ಸ್ವೀಕರಿಸಿದರು. ಗಾಂಧೀಜಿಯರಲ್ಲದೆ ಒಮ್ಮೆ ಅಮೆರಿಕಾದ ಅಧ್ಯಕ್ಷರಾಗಿದ್ದ ಜಾನ್ ಕೆನಡಿಯವರಿಗೂ ಚಿಕಿತ್ಸೆ ನೀಡಿದ ಕೀತರ್ಿ ರಾಯ್ ಅವರಿಗೆ ಸಲ್ಲುತ್ತದೆ.

ಪಶ್ಚಿಮ ಬಂಗಾಳದ ಆಧುನಿಕ ಶಿಲ್ಪಿ: ಕಾಂಗ್ರೆಸ್ ಪಕ್ಷವು ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ಡಾ. ರಾಯ್ ಅವರ ಹೆಸರನ್ನು ಸೂಚಿಸಿತು. ಆದರೆ ರಾಯ್ ಅವರು ಎಂದಿಗೂ ಅಧಿಕಾರವನ್ನು ಬೆನ್ನತ್ತಿ ಹೋದವರಲ್ಲ ಹಾಗೂ ಅಧಿಕಾರಕ್ಕಾಗಿ ಯಾವುದೇ ಲಾಬಿ ಮಾಡುವ ಜಾಯಮಾನದವರು ಆಗಿರಲಿಲ್ಲ. ಜನಸೇವೆಯಲ್ಲೇ ತೃಪ್ತಿ ಕಂಡುಕೊಂಡಿದ್ದರು, ಹೀಗಾಗಿ ಸಹಜವಾಗಿಯೇ ಅವರು ಆ ಮುಖ್ಯಮಂತ್ರಿ ಹುದ್ದೆಯನ್ನು ನಿರಾಕರಿಸಿದ್ದರು ಆದರೂ ಪಕ್ಷ ಅವರ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದರಿಂದ, ಅಧಿಕಾರವನ್ನು ಸ್ವೀಕರಿಸಲೇಬೇಕೆಂಬ ಒತ್ತಾಯಗಳು ಸಾಕಷ್ಟು ಬಂದಿದ್ದರಿಂದ, ಅನಿವಾರ್ಯವಾಗಿ ಒಪ್ಪಬೇಕಾಯಿತು.  ಜನವರಿ 23, 1948 ರಲ್ಲಿ ಡಾ. ಬಿಧನ್ ಚಂದ್ರ ರಾಯ್ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಅಖಂಡ 14 ವರ್ಷ ಹಾಗೂ 158 ದಿನಗಳ ಕಾಲ ಬಂಗಾಳ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಜನರ ಆರೋಗ್ಯ ಸುಧಾರಣೆಗಾಗಿ ಅಸಂಖ್ಯಾತ ಆಸ್ಪತ್ರೆಗಳನ್ನು, ಆರ್ಥಿಕ ಸಮಸ್ಯೆ, ಬಡತನ, ನಿರುದ್ಯೋಗ, ಆಹಾರ ಕೊರತೆ ನೀಗಿಸಲು ನಿರಂತರವಾಗಿ ಶ್ರಮಿಸಿದರು. ಅತ್ಯಾಧುನಿಕ ಕಾರ್ಖಾನೆಗಳು, ನೂರಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿದರು. ಹೀಗೆ ಪಶ್ಚಿಮ ಬಂಗಾಳದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ, ನಿಸ್ವಾರ್ಥ ಸೇವೆಯ ಮೂಲಕ ಜನರ ಮನದಲ್ಲಿ ಅಚ್ಚಳಿಯದಂತೆ ಪಶ್ಚಿಮ ಬಂಗಾಳದ ಆಧುನಿಕ ಶಿಲ್ಪಿ ಎಂಬ ಹೆಸರಿನಿಂದ ಗುರುತಿಸಲ್ಪಟ್ಟರು.

ಪ್ರಶಸ್ತಿಗಳು: ಭಾರತ ಸರ್ಕಾರವು 1961 ರ ಫೆಬ್ರವರಿ 4 ರಂದು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ವನ್ನು ನೀಡಿ ಗೌರವಿಸಿತು. 1976 ರಲ್ಲಿ ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಆರಂಭಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಆ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಹೀಗೆ ಡಾ. ಬಿಧನ್ ಚಂದ್ರ ರಾಯ್ ಒಬ್ಬ ಅತ್ಯುತ್ತಮ ವೈದ್ಯರಾಗಿ, ಆಡಳಿತಗಾರರಾಗಿ, ಮುತ್ಸದ್ದಿ ರಾಜಕಾರಣಿಯಾಗಿ ದೇಶಕ್ಕೆ ಕೊಟ್ಟ ಸೇವೆ ಅವಿಸ್ಮರಣೀಯ. ಅವರಿಗೆ ವಿದೇಶಕ್ಕೆ ಹೋಗಿ ತಮ್ಮ ವೈದ್ಯಕೀಯ ವೃತ್ತಿಯಿಂದ ಹಣಗಳಿಸಲು ಸಾಕಷ್ಟು ಅವಕಾಶಗಳಿದ್ದರೂ ಕೂಡ, ಅವರು ತಮ್ಮ ಸೇವೆಯನ್ನು ದೇಶಕ್ಕಾಗಿ, ಬಡ ಜನರ ಏಳಿಗೆಗಾಗಿ ಮೀಸಲಿಟ್ಟು, ಕೇವಲ ವೈದ್ಯರಾಗದೇ, ರಾಜಕಾರಣಿಯಾಗದೇ, ಜನರ ಹೃದಯದಲ್ಲಿ ದೇವರ ಸ್ಥಾನ ಪಡೆದರು. ಇಂತಹ ಮಹಾನ್ ಚೇತನ ಡಾ. ಬಿ.ಸಿ.ರಾಯ್ ಅವರು ಜುಲೈ 1, 1962 ರಂದು ನಿಧನರಾದರು.

ವೈದ್ಯರ ಸೇವೆಯನ್ನು ಗೌರವಿಸೋಣ:  ವೈದ್ಯಕೀಯ ಕ್ಷೇತ್ರದಲ್ಲಿ ದಿನ ಕಳೆದಂತೆ ಹಲವಾರು ಸವಾಲುಗಳು ಎದುರಾಗುತ್ತಿದ್ದು, ಅವೆಲ್ಲವನ್ನೂ ಎದುರಿಸಿ ತಮ್ಮ ವೈಯಕ್ತಿಕ ಜೀವನವನ್ನೂ ತ್ಯಜಿಸಿ, ರೋಗಿಗಳ ಆರೈಕೆಯಲ್ಲಿಯೇ ನೆಮ್ಮದಿ ಕಂಡುಕೊಳ್ಳುತ್ತಿರುವ ವೈದ್ಯರನ್ನು ಪ್ರತಿಯೊಬ್ಬರೂ ಸ್ಮರಿಸಲೇಬೇಕು.

ರಾಷ್ಟ್ರೀಯ ವೈದ್ಯರ ದಿನ ಜುಲೈ-1

 ರಾಷ್ಟ್ರೀಯ ವೈದ್ಯರ ದಿನ ಜುಲೈ-1 - ರಾಜು ಭೂಶೆಟ್ಟಿ, ಬಿ.ಸಿ. ರಾಯ್ ಅವರ ಪೂರ್ಣ ಹೆಸರು ಬಿಧನ್ ಚಂದ್ರ ರಾಯ್, ಖ್ಯಾತ ವೈದ್ಯ ಹಾಗೂ ದೇಶ ಭಕ್ತರಾಗಿದ್ದ ಇವರು ಜುಲೈ 1, 18...


 ವಿಶ್ವ ಕಾರ್ಮಿಕ ಸಂಘಟನೆಗೆ 100 ವರ್ಷ'
- ಎನ್.ಕೆ. ನರಸಿಂಹ

ಮಕ್ಕಳನ್ನು ದುಡಿಮೆಗೆ ದೂಡುವ ಬದಲು ಅವರ ಉಜ್ವಲ ಭವಿಷ್ಯದ ಕನಸು ನನಸಾಗಲು ಅವಕಾಶ ಕಲ್ಪಿಸಿ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಷನ್ - ಐಎಲ್ಓ) ಪ್ರತಿ ವರ್ಷ ಜೂನ್ 12 ರಂದು ಅಂತಾರಾಷ್ಟ್ರೀಯ ಬಾಲಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸುತ್ತಿದೆ. 1919ರಲ್ಲಿ ಪ್ರಾರಂಭವಾದ ಐಎಲ್ಓ ಗೆ ಈ ವರ್ಷ ಶತಮಾನದ ಸಂಭ್ರಮವೂ ಹೌದು. ಪ್ರತಿವರ್ಷ ಒಂದು ಧ್ಯೇಯವಾಕ್ಯವನ್ನು ಆಧರಿಸಿ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ರೂಪಿಸಲಾಗುತ್ತದೆ. ಈ ಬಾರಿಯ ಧ್ಯೇಯವಾಕ್ಯ - ಮಕ್ಕಳನ್ನು ದುಡಿಮೆಗೆ ದೂಡುವ ಬದಲು ಅವರ ಉಜ್ವಲ ಭವಿಷ್ಯದ ಕನಸು ನನಸಾಗಲು ಅವಕಾಶ ಕಲ್ಪಿಸಿ.

ಮಾನವನ ಆಸೆಬುರುಕತನ, ಅಮಾನವೀಯ ವರ್ತನೆಯ ಫಲಶ್ರುತಿಯೇ ಬಾಲಕಾರ್ಮಿಕತೆ. ಮಾನವೀಯತೆಯ ಅತ್ಯಂತ ಹೀನಾಯ ಪರಿಸ್ಥಿತಿಯೆನ್ನಬಹುದಾದ ಈ ಪದ್ಧತಿ ದೇಶದ ಪ್ರಗತಿಯ ವಿಷಯದಲ್ಲೂ ವ್ಯತಿರಿಕ್ತ ಪರಿಣಾಮವನ್ನು ಬೀರುವುದರಿಂದಲೇ ಅದರ ನಿರ್ಮೂಲನೆಯ ವಿಷಯವೂ ಸಹ ಜಾಗತಿಕ ಮಟ್ಟದಲ್ಲಿ ಇಂದು ಚಚರ್ೆಯ ವಿಷಯವಾಗಿದೆ.

ಮಾನವ ತನ್ನ ವೈಯಕ್ತಿಕ ಲಾಭಕ್ಕಾಗಿ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದನ್ನು ಬಾಲಕಾರ್ಮಿಕ ಪದ್ಧತಿ ಎನ್ನಬಹುದಾದರೂ ಕುಟುಂಬದಿಂದ ಮೊದಲುಗೊಂಡು ಸಮಾಜದ ಹಲವು ಸ್ಥರಗಳಲ್ಲಿ ದುಡಿಮೆಗೊಳಪಡುವ ಮಕ್ಕಳವರೆಗೆ ತನ್ನ ವ್ಯಾಪ್ತಿಯನ್ನು ಬಾಲಕಾರ್ಮಿಕತೆ ಹೊಂದಿದೆ. 1986 ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ವಯ 14 ವರ್ಷದೊಳಗಿನ ದುಡಿಯುವ ಮಕ್ಕಳನ್ನು ಬಾಲಕಾರ್ಮಿಕರೆಂದು ಕರೆಯಲಾಗಿದೆ. ಈ ಕಾಯ್ದೆಗೆ 2016ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅದರ ಪ್ರಕಾರ 18 ವರ್ಷದವರೆಗೂ ಕಿಶೋರಾವಸ್ಥೆ ಎಂದು ಪರಿಗಣಿಸಲಾಗಿದ್ದು, 14 ರಿಂದ 18 ವರ್ಷದೊಳಗಿನವರನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿರುವ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಬಾಲಕಾರ್ಮಿಕತೆಗೆ ಕೆದಕಿದಷ್ಟೂ ಕಾರಣಗಳು ಸಿಗುತ್ತವೆ, ಆದರೆ ಚಚರ್ಿಸಿದಷ್ಟೂ ಪರಿಹಾರ ಸಿಗದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ದೇಶದ ಭವಿಷ್ಯತ್ತಿನ ರೂವಾರಿಗಳಾದ ಮಕ್ಕಳನ್ನು ಸ್ವಾಭಾವಿಕವಾಗಿ ಬೆಳೆಯಲು ಬಿಡದೆ ಅವರ ಮೂಲಭೂತ ಹಕ್ಕನ್ನೇ ಕಸಿದುಕೊಂಡು, ಪ್ರತಿಭೆಯನ್ನು ಮೂಲೆಗುಂಪಾಗಿಸಿ ಬಾಲಕಾರ್ಮಿಕತೆಯ ಕೂಪಕ್ಕೆ ದೂಡುವ ಮನಸ್ಥಿತಿಯನ್ನು ಇಂದಿನ ಸಮಾಜ ಹೊಂದಿರುವುದು ಅತ್ಯಂತ ವಿಷಾದನೀಯ. ಇಂತಹ ಹೇಯಕೃತ್ಯದ ಪರಿಣಾಮ ದೇಶದ ಭವಿಷ್ಯವನ್ನು ಮಬ್ಬಾಗಿಸುವುದರಲ್ಲಿ ಸಂಶಯವಿಲ್ಲ.

ಹಳ್ಳಿಗಳಿಂದ ಕೂಡಿದ ಭಾರತದಲ್ಲಿ ಬಹುಜನರ ಆದಾಯದ ಮೂಲ ಕೃಷಿ. ಇಲ್ಲಿಂದ ಪ್ರಾರಂಭಗೊಳ್ಳುವ ಮಕ್ಕಳ ದುಡಿಮೆ ಗೃಹಕೃತ್ಯ, ಹೋಟೆಲ್, ಅಂಗಡಿಯ ಪೊಟ್ಟಣ ಕಟ್ಟುವಿಕೆ, ಗ್ಯಾರೇಜ್, ವಿವಿಧ ಸಂಸ್ಕರಣಾ ಘಟಕಗಳು, ಚಿಂದಿ ಆಯುವುದು, ಕಾರ್ಖಾನೆಗಳು, ರಸ್ತೆಬದಿಯ ಅಂಗಡಿಗಳು,

ಭಿಕ್ಷಾಟನೆ ಹೀಗೆ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಆಘಾತಕಾರಿ ಸಂಗತಿಯೆಂದರೆ, ಪಟಾಕಿ ತಯಾರಿಸುವ, ಬೆಂಕಿಕಡ್ಡಿ, ಬೀಡಿ ಕಟ್ಟುವ ಅಪಾಯಕಾರಿ ಕೆಲಸಗಳಲ್ಲೂ ಸಹ ಬಾಲಕಾರ್ಮಿಕರೇ ಬಹುಸಂಖ್ಯಾತರು.

ಬಾಲಕಾರ್ಮಿಕ ಪದ್ದತಿಗೆ ಕಾರಣಗಳು ಅನೇಕ. ಭಾರತ ದೇಶದ ಸಾಮಾಜಿಕ ಪರಿಸ್ಥಿತಿಯು ಜಾತಿ, ಧರ್ಮ ಇತ್ಯಾದಿಗಳನ್ನೊಳಗೊಂಡಂತೆ ವಿಭಿನ್ನವಾದ ವಿನ್ಯಾಸವನ್ನು ಹೊಂದಿದ್ದು, ಈ ಸ್ಥರವಿನ್ಯಾಸದಲ್ಲಿ ಕೆಳಹಂತದಲ್ಲಿರುವರು ತಮ್ಮ ಸ್ವಂತದ ಸ್ಥಿರ ಆದಾಯದ ಮೂಲವಿಲ್ಲದೇ ಕೇವಲ ತಮ್ಮ ಶ್ರಮದ ನಂಬಿಕೆಯಲ್ಲಿ ಬದುಕುವವರಾಗಿದ್ದಾರೆ. ಈ ಕುಟುಂಬಗಳಿಂದಲೇ ಹೆಚ್ಚು ಮಕ್ಕಳು ಬಾಲಕಾರ್ಮಿಕರಾಗಿರುವುದು ಕಂಡುಬರುತ್ತದೆ. ಕುಟುಂಬದ ಆರ್ಥಿಕ ದುಸ್ಥಿತಿ, ಅನಕ್ಷರತೆ, ಬೇಜವಾಬ್ದಾರಿ ಪಾಲಕತ್ವ, ಅಜ್ಞಾನ ಹೀಗೆ. ಮಕ್ಕಳ ಬಾಲ್ಯವನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಕ್ರೂರತ್ವದಿಂದ ಬಾಲಕಾರ್ಮಿಕರು ಹೆಚ್ಚಾಗುತ್ತಿದ್ದಾರೆ.

ಕುಟುಂಬದ ಸಂಪ್ರದಾಯದಂತೆ ಮಕ್ಕಳೂ ಕೆಲಸ ಮಾಡಲೆಂಬ ಧೋರಣೆಯಿಂದ ಹೆಚ್ಚಿನ ಮಕ್ಕಳು ಜೀತಪದ್ಧತಿಯ ರೀತಿಯಲ್ಲಿ ಬಾಲಕಾರ್ಮಿಕರಾಗುತ್ತಾರೆ. ಹೆಚ್ಚಿನ ಮಕ್ಕಳು ಕೈಗಾರಿಕೆಗಳಲ್ಲಿ ದುಡಿಯಲು ಕಾರಣವೇನೆಂದರೆ ಕಡಿಮೆ ಕೂಲಿಯನ್ನು ನೀಡಿ ಹೆಚ್ಚಿನ ಲಾಭಮಾಡುವ ಕಾರ್ಖಾನೆ ಮಾಲೀಕರ ಹುನ್ನಾರ. ಕೆಲವೊಮ್ಮೆ ಕುಟುಂಬದ, ತಂದೆ ತಾಯಿಗಳ ಸಾಲಬಾಧೆಯ ಪರಿಣಾಮ ಮಕ್ಕಳು ದುಡಿಯಲು ಪ್ರಾರಂಭಿಸುತ್ತಾರೆ. ಬಾಲ್ಯದಲ್ಲೇ ಕೈಗಿಷ್ಟು ಕಾಸು ಕಂಡಾಗ ಅದೇ ಮಕ್ಕಳು ಶಾಲೆಯಿಂದ ಸ್ವಯಂಪ್ರೇರಿತರಾಗಿ ವಿಮುಖರಾಗುತ್ತಾರೆ ಹಾಗೂ ಇತರೆ ದುಶ್ಚಟಗಳಿಗೆ ಬಲಿಯಾಗುತ್ತಾರೆ. ತಂದೆ ಅಥವಾ ತಾಯಿ ತಮ್ಮ ದುಶ್ಚಟಗಳನ್ನು ಪೂರೈಸಿಕೊಳ್ಳಲು ಮಕ್ಕಳನ್ನು ಬಲವಂತವಾಗಿ ಬಾಲಕಾರ್ಮಿಕತೆಗೆ ದೂಡಿದ ಪ್ರಸಂಗಗಳೂ ಇವೆ.

ಬಾಲಕಾರ್ಮಿಕತೆಗೆ ಕಾರಣವೆನ್ನಲಾದ ಜನರ ಸಾಮಾಜಿಕ ಪರಿಸ್ಥಿತಿಯನ್ನು ಉತ್ತಮಪಡಿಸುವಲ್ಲಿ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ರಾಜಕೀಯ ಇಚ್ಛಾಶಕ್ತಿಯೂ ಸಹ ಬಹಳ ಮುಖ್ಯವಾಗುತ್ತದೆ. ಸಮಸ್ಯೆಯನ್ನು ಹಾಗೆಯೇ ಮುಂದೂಡುವ ಬದಲು ಅದನ್ನು ಪರಿಹರಿಸುವ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರಬೇಕಾಗುತ್ತದೆ

ಬಹಳಷ್ಟು ಮಾಲೀಕರು ಮಕ್ಕಳ ಮುಗ್ಧತೆಯನ್ನೇ ಬಂಡವಾಳವನ್ನು ಮಾಡಿಕೊಂಡು ಕಡಿಮೆ ಕೂಲಿಯಲ್ಲ ಹೆಚ್ಚು ದುಡಿಸಿಕೊಳ್ಳುವ ಹುನ್ನಾರದಿಂದ ಮಕ್ಕಳನ್ನೇ ಕೆಲಸಕ್ಕಾಗಿ ಬಯಸುತ್ತಾರೆ. ಅಲ್ಲದೇ ವಯಸ್ಕ ಕೆಲಸಗಾರರಿಂದ ಉಂಟಾಗಬಹುದಾದ ಯಾವುದೇ ಪ್ರತಿರೋಧಗಳು ಮಕ್ಕಳಿಂದ ಬರುವುದಿಲ್ಲವಾದ್ದರಿಂದ ಇವರ ನಿರ್ವಹಣೆ ಮಾಲೀಕರಿಗೆ ಸುಲಭವಾಗುತ್ತದೆ.

ಇಷ್ಟೆಲ್ಲದರ ನಡುವೆ ಅನಿವಾರ್ಯ ಪರಿಸ್ಥಿತಿಯಿಂದಾಗಿ ಬಾಲ್ಯದಲ್ಲೇ ಕುಟುಂಬದ ಜವಾಬ್ದಾರಿ ಹೆಗಲಿಗೇರಿದ ಪರಿಣಾಮ ಬಾಲಕಾರ್ಮಿಕರಾದ ಮಕ್ಕಳೂ ಸಹ ನಮ್ಮ ಮುಂದಿದ್ದಾರೆ.

ಬಾಲಕಾರ್ಮಿಕತೆ ಕೇವಲ ಒಂದು ದೇಶಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಜಾಗತಿಕವಾಗಿಯೂ ಅತ್ಯಂತ ಆತಂಕಕಾರಿ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತಕ್ಕೆ ಸೀಮಿತವಾಗಿ ನೋಡುವುದಾದರೆ, 2011ರ ಜನಗಣತಿ ಪ್ರಕಾರ 5 ರಿಂದ 18 ವರ್ಷದೊಳಗಿನ 33 ಮಿಲಿಯನ್ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಈ ಪೈಕಿ 10.1 ಮಿಲಿಯನ್ 5 ರಿಂದ 14 ವರ್ಷದವರಾಗಿದ್ದಾರೆ. 4.5 ಮಿಲಿಯನ್ ಬಾಲಕಿಯರಿದ್ದರೆ 5.6 ಮಿಲಿಯನ್ ಬಾಲಕರಾಗಿದ್ದಾರೆ. ಮತ್ತಷ್ಟು ಆತಂಕಕಾರಿ ಅಂಶವೆಂದರೆ, 8.1 ಮಿಲಿಯನ್ ಬಾಲಕಾರ್ಮಿಕರು ಗ್ರಾಮಾಂತರ ಪ್ರದೇಶದಲ್ಲಿದ್ದರೆ 2.1 ಮಿಲಿಯನ್ ಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿದ್ದಾರೆ. 2001ರ ಗಣತಿಯ ಹೋಲಿಕೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಬಾಲಕಾರ್ಮಿಕರ ಸಂಖ್ಯೆ 11.3 ಮಿಲಿಯನ್ ನಿಂದ 8.1ಕ್ಕೆ ಇಳಿಮುಖವಾಗಿದೆಯಾದರೂ ನಗರ ಪ್ರದೇಶದಲ್ಲಿನ ಬಾಲಕಾರ್ಮಿಕರ ಸಂಖ್ಯೆ 1.3 ರಿಂದ 2 ಮಿಲಿಯನ್ ಗೆ ಏರಿಕೆಯಾಗಿರುವುದು ಆಘಾತಕಾರಿ. ನಗರಪ್ರದೇಶಕ್ಕೆ ವಲಸೆ ಬರುತ್ತಿರುವ ಕಾರ್ಮಿಕರು ಮಕ್ಕಳನ್ನು ದುಡಿಮೆಗೆ ದೂಡುತ್ತಿರುವುದು ಇದಕ್ಕೆ ಕಾರಣವಾಗಿದೆ.

ಬಾಲಕಾರ್ಮಿಕತೆಯನ್ನು ನಿಷೇಧಿಸುವ ಹಿನ್ನಲೆಯಲ್ಲಿ ಭಾರತದಲ್ಲಿ ಸಾಕಷ್ಟು ಕಾನೂನು ಹಾಗೂ ಅವಕಾಶಗಳಿದ್ದು, ಸಾಂವಿಧಾನಿಕ ಅವಕಾಶಗಳನ್ನು ಗಮನಿಸುವುದಾದರೆ,  21ಎ ವಿಧಿ - ಶಿಕ್ಷಣದ ಹಕ್ಕು (6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ಒದಗಿಸುವದು), 24 ನೇ ವಿಧಿ - ಬಾಲಕಾರ್ಮಿಕ ನಿಷೇಧ, 23 ನೇ ವಿಧಿ - ಮಾನವ ದುವ್ರ್ಯವಹಾರ ಮತ್ತು ಬಲಾತ್ಕಾರದ ದುಡಿಮೆಯ ನಿಷೇಧ, 39 ನೇ ವಿಧಿ - ಪುರುಷ ಮತ್ತು ಮಹಿಳಾ ಕೆಲಸಗಾರರ ಆರೋಗ್ಯ ಮತ್ತು ಶಕ್ತಿ ಹಾಗೂ ಮಕ್ಕಳ ಎಳೆಯ ವಯಸ್ಸು ಇವುಗಳನ್ನು ದುರುಪಯೋಗಪಡಿಸಿಕೊಳ್ಳದಿರುವುದು ಇತ್ಯಾದಿಗಳನ್ನು ಕಾರ್ಮಿಕ ದಿನದ ನೂರು ವರ್ಷಗಳ ನಂತರವಾದರೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ

ವಿಶ್ವ ಕಾರ್ಮಿಕ ಸಂಘಟನೆಗೆ 100 ವರ್ಷ'

 ವಿಶ್ವ ಕಾರ್ಮಿಕ ಸಂಘಟನೆಗೆ 100 ವರ್ಷ' - ಎನ್.ಕೆ. ನರಸಿಂಹ ಮಕ್ಕಳನ್ನು ದುಡಿಮೆಗೆ ದೂಡುವ ಬದಲು ಅವರ ಉಜ್ವಲ ಭವಿಷ್ಯದ ಕನಸು ನನಸಾಗಲು ಅವಕಾಶ ಕಲ್ಪಿಸಿ. ಅಂತಾರಾಷ್ಟ...


 ಪುಟಾಣಿಗಳೇ ನಿಮ್ಮ ಜೊತೆ ಮಾತನಾಡಬಹುದಾ.....?
- ಪಿ. ಮಂಜುಳಾ ಕಲ್ಯಾಣ್,

ಏನ್ ಪುಟ್ಟಾ, ಬೇಸಿಗೆ ರಜಾ ಮುಗೀತಾ? ಎಷ್ಟೊಂದು ಮಜವಾಗಿತ್ತು. ಹೇಳೋರಿಲ್ಲಾ ಕೇಳೋರಿಲ್ಲಾ, ನಾವೆದ್ದದ್ದೇ ಟೈಮೂ, ನಡೆದದ್ದೇ ದಾರಿ ಅಂತ ಬೀಗ್ತಿದ್ದಿರಿ ಅಲ್ವಾ? ಶಾಲೆ ಬಾಗಿಲು ತೆರೆದು ಮೂಗುದಾರ ಹಾಕ್ಬಿಟ್ರಲ್ಲಾ ಅಂತೇನಾದ್ರು ಅನ್ನಿಸ್ತಿದ್ಯಾ?

ಅಂತಾ ಭಾವನೇನ್ನ ಮನ್ಸಿಂದ ಮೊದ್ಲು ತೆೆಗ್ದು ಬಿಡು. ನಿನಗೆ ಗೊತ್ತಲ್ವಾ- ಕೈ ಕೆಸರಾದರೆ ಬಾಯಿ ಮೊಸರೂಂತ. ಈಗ ನಿನ್ಕೆಲ್ಸಾ ಏನು? ಖುಷ್ ಖುಷಿಯಾಗಿ ಶಾಲೆಗೆ ಹೋಗಿ ಅಂದಂದಿನ ಪಾಠಾನ್ನ ಅಂದಂದೇ ಓದೀ ಬದರ್ು ಗುರುಗಳ ಹತ್ರ ಗುಡ್ ಅನ್ನಿಸ್ಕೋಬೇಕು. ಹಾಗೊಂದು ವೇಳೆ ಗುರು ಹಿರಿಯರು ನಿನ್ನನ್ನು ಮೆಚ್ಚಿಕೊಳ್ತಾ ಇಲ್ಲ ಅಂದ್ರೆ ಈ ಕೆಳಗೆ ಕೊಟ್ಟಿರುವ ಅಂಶಗಳಲ್ಲಿ ಯಾವುದಾದ್ರೂ ಅಂಶ ನಿನ್ನಲ್ಲಿ ಇದೆ ಅಂತ ಅರ್ಥ. ನೀನು ಒಳ್ಳೆಯ ವ್ಯಕ್ತಿಯಾಗಲಿಕ್ಕೆ ಅಡ್ಡಿಯಾಗುವ ವಿಚಾರಗಳ್ಯಾವುವು ಅಂತ ಮೊದ್ಲು ನೋಡು.

1. ಮೊಬೈಲ್ ಹಾಗೂ ಟಿ.ವಿ ನೋಡುವುದು ಅಂದ್ರೆ ನಂಗೆ ತುಂಬಾ ಇಷ್ಟ.
2. ಬೆಳಿಗ್ಗೆ ಎಷ್ಟೊತ್ತಾದ್ರೂ ಎದ್ದೇಳಕ್ಕೆ ಮನಸ್ಸೇ ಬರಲ್ಲ.
3. ನನ್ನ ವಸ್ತುಗಳನ್ನ ಕಾಲಕಾಲಕ್ಕೆ ಜೋಪಾನ ಮಾಡ್ಬೇಕು ಅಂದ್ರೆ ಬೇಜಾರು.
4. ಹೋಂ ವಕರ್್ ಮಾಡಿ ಮುಗಿಸಕ್ಕೆ ಇಷ್ಟಾನೇ ಆಗಲ್ಲ.
5. ಚಿತ್ರ ಬಿಡಿಸೋದು, ಕಥೆ ಪುಸ್ತಕ ಅಥವಾ ನ್ಯೂಸ್ ಪೇಪರ್ ಓದೋದು ಹೀಗೆ ಯಾವುದೇ ಹವ್ಯಾಸದಲ್ಲಿ ನಂಗೆ ಆಸಕ್ತಿ ಇಲ್ಲ.

ಹಾ! ಈಗ ಹೇಳು, ಈ ಮೇಲಿನ ಎಷ್ಟು ಅಂಶಗಳಿಗೆ ನಿನ್ನ ಮನ್ಸು ಹೌದು, ನಂಗೂ ಹೀಗೇ ಅನ್ಸುತ್ತೇ ಅಂತ ಹೇಳ್ತು? ನಂಗೆ ಹೇಳ್ದೆಯಿದ್ರೂ ಪರವಾಗಿಲ್ಲ. ಬಿಡು. ನಿಮ್ಮನೇಲಿ ದೊಡ್ಡೋರು ಈ ವಿಚಾರವಾಗಿ ನಿನ್ನನ್ನು ಗದರಿಸಿದ್ದಾರಾ? ಹೌದು ಅನ್ನೋದು ನಿನ್ನ ಉತ್ತರವಾದರೆ ಖಂಡಿತ ನಿನ್ನನ್ನು ನೀನು ಬದಲಾಯಿಸಿಕೊಳ್ಳಲೇಬೇಕು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಲ್ಲ ಅನ್ನೋದೇಲ್ಲಾ ಗೊತ್ತಿರುವ ಜಾಣಮರಿ ನೀನು ಮತ್ತೆ ಯಾಕೆ ನಿಧಾನ? ನೀನು ಮನ್ಸು ಮಾಡಿದರೆ ಏನು ಬೇಕಾದ್ರೂ ಸಾಧ್ಯ ಆಗುತ್ತೆ. ಸುಮ್ಸುಮ್ನೆ ನಿನ್ನನ್ನು ಪುಸಲಾಯಿಸಕ್ಕೆ ಈ ಮಾತು ಹೇಳ್ತಿಲ್ಲ. ನೀನು ಏನೋ ಒಂದು ಒಳ್ಳೇ ಸಾಧನೆ ಮಾಡೇ ಮಾಡ್ತೀಯಾ ಅಂತ ನಂಬಿಕೆ ನನಗಿದೆ. ನನ್ನ ಕೈಯ್ಯಲ್ಲಿ ಏನಾಗುತ್ತೆ, ಏನೂ ಆಗಲ್ಲ ಅಂತ ಈಗ್ಲೇ ಸೋಲೊಪ್ಪಿಬಿಡ್ತಿಯಾ? ಇಲ್ಲ ತಾನೇ?

ಬಾಲ್ಯದಲ್ಲೇ ಜ್ಞಾನಕ್ಕಾಗಿ ಅಹನರ್ಿಶಿ ತಪಿಸಿದ ಶಂಕರಾಚಾರ್ಯರು ಅತೀ ಚಿಕ್ಕ ವಯಸ್ಸಿಗೇ ಜಗದ್ಗುರುಗಳೆಸಿನಿದರು. ಪುಟ್ಟ ಹುಡುಗನಾಗಿದ್ದಾಗಿನಿಂದಲೂ ವಿಜ್ಞಾನದ ವಿಚಾರದಲ್ಲಿ ಮನಸ್ಸನ್ನು ತಲ್ಲೀನಗೊಳಿಸಿದ ಥಾಮಸ್ ಆಲ್ಪ ಎಡಿಸನ್ ಕತ್ತಲೆಯನ್ನು ಹೊಡೆದೋಡಿಸುವ ವಿದ್ಯುತ್ ಬಲ್ಪ್ ಕಂಡುಹಿಡಿದ.

ಓಹ್! ಯಾರೋ ಏನೋ ಮಾಡಿದ್ರೂ ಅಂದ್ರೆ ಎಲ್ಲರೂ ಮಾಡಕ್ಕಾಗುತ್ತಾ? ಅಂತ ಸೋಗಲಾಡಿ ಉತ್ತರ ಕೊಡಬಹುದು, ನಿನ್ನ ಮನ್ಸು ಅಂತದ್ದಕ್ಕೆಲ್ಲಾ  ಹೆಚ್ಚು ಪ್ರಾಮುಖ್ಯತೆ ಕೊಡ್ಬೇಡ, ಸಣ್ಣಾಪುಟ್ಟಾ ತೊಂದ್ರೆಗಳು ಎಲ್ರಿಗೂ ಇದ್ದದ್ದೇ. ಅದನ್ನೇ ಬೆಟ್ಟಾ ಮಾಡಿ ಸೋಮಾರಿ ಹಾಗೆ ಇದ್ದುಬಿಡಕ್ಕೆ ನೋಡ್ಬೇಡ. ಹಾಗೊಂದು ವೇಳೆ ಅಡೆತಡೆಯಿದ್ರೂ ಅದನ್ನ ಮೀರಿಸಿ ನೀನೇನಾದ್ರೂ ಸಾಧನೆ ಮಾಡ್ದೆ ಅಂತಿಟ್ಕೋ, ಅಗ ಬೇರೆಯವರ ಕಣ್ಣಲ್ಲಿ ಗ್ರೇಟ್'ಆಗ್ತೀಯ. ಅಷ್ಟೇ ಯಾಕೆ ನಿನ್ನ ನೀನೇ ಮೆಚ್ಚಿಕೊಳ್ತೀಯ.

ಹಾಗಂತ ನೆಲದ ಮೇಲ್ನಿಂತು ಆಕಾಶಾನ್ನ ನೋಡಿದ ಮಾತ್ರಕ್ಕೆ ನಾವು ಅಲ್ಲಿರಕ್ಕ್ಕಾಗಲ್ಲ. ಅದಕ್ಕೆ ನಿರಂತರ ಪ್ರಯತ್ನ ಬೇಕು. ನಿನ್ನಲ್ಲಿರೋ ಒಂದೊಂದು ಬೇಡದ ವಿಚಾರವೂ ಬೇರೆಯವರಿಗಿಂತ ಹೆಚ್ಚಾಗಿ ನಿನಗೇ ಚೆನ್ನಾಗಿ ಗೊತ್ತಿರುತ್ತೆ. ಒಂದೊಂದಾಗಿ ಅವುಗಳನ್ನು ಬಿಡ್ತಾಹೋಗು. ಗಟ್ಟಿ ಮನ್ಸು ಮಾಡು ಎಲ್ಲಾ ಆಗುತ್ತೆ. ಜೀವನದಲ್ಲಿ ನೀನು ಏನಾಗಬೇಕು ಅಂತ ಒಂದು ಶಿನ್ಚಿತ ಗುರಿಯಿಟ್ಕೊ. ನೀನಿಡುವ ಪ್ರತಿ ಹೆಜ್ಜೆಯೂ ಆ ಗುರಿಯ ಕಡೆಗೇ ಹೋಗ್ತಿರಲಿ. ಮನಸ್ಸು, ಬುದ್ಧಿ, ಮಾತುಕತೆ, ಎಲ್ಲದರಲ್ಲೂ ಗುರಿಯನ್ನು ಸಾಧಿಸುವ ಹಠವಿರಲಿ. ನಿನ್ನ ಮನಸ್ಸನ್ನು ಸೆಳೆಯುವ ಯಾವ ಸುಖಗಳೂ ನಿನ್ನ ಹಠವನ್ನು ಮುರೀಬಾರ್ದು. ಅಂತಾ ಗಟ್ಟಿತನ ನಿನ್ನಲ್ಲಿರಲಿ. ನಿನಗೆ ನೀನೇ ಗುರುವಾಗ್ತಾ ಹೋಗು. ಏನಾದ್ರೂ ಸಮಯ ವ್ಯರ್ಥ ಆಗ್ತಿದೆ ಅನ್ಸಿದ ತಕ್ಷಣ ಮುಲಾಜಿಲ್ದೆ ಅಲ್ಲಿಂದ ಎದ್ದು ಬಿಡು. ಪುಸ್ತಕದ ಹುಳು ಏ ವಿಪರೀತ ಓದಬಾರ್ದು. ಹುಚ್ ಹಿಡಿಯುತ್ತೇ. ನಮ್ಮ ಹಾಗೆ ಜಾಲಿಯಾಗಿ ಇರು ಅಂತ ಇನ್ನೂ ಏನೇನೂ ಹೇಳಿ ಕಾಲೆಳೆಯೋವ್ರು ನಿನ್ನ ಅಕ್ಕಪಕ್ಕಾನೇ ಇರ್ತಾರೆ. ಒಂದು ನಿರ್ಲಿಪ್ತ ನೋಟವನ್ನು ಅವರತ್ತ ಬಿಸಾಕಿ ನಿನ್ನ ಕೆಲಸದಲ್ಲಿ ತಲ್ಲೀನತೆ ತೋರಿಸು.

 ಆಗೊಮ್ಮೆ ಈಗೊಮ್ಮೆ ಮನಸ್ಸು ಚಂಚಲವಾದ್ರೆ ನಿಮ್ಮ ಶಾಲಾ ಲೈಬ್ರರೀಲಿ ಇರೋ ಯಾವೂದಾದ್ರೂ ಸಾಧಕರ ಜೀವನ ಓದು. ಆಗ ನಿನಗೇ ಅರ್ಥ ಆಗುತ್ತೆ. ಸಾಧಕರು ಯಾರೂ ಮನಸ್ಸನ್ನು ಹೋದ ದಾರಿಗೆ ಬಿಟ್ಟಿರಲಿಲ್ಲ. ಬದಲಿಗೆ ಅದನ್ನ ಪಳಗಿಸಿ ಒಳ್ಳೆಯ ಸಾಧನೆ ಮಾಡಲು ಅದನ್ನೆ ಚೆನ್ನಾಗಿ ದುಡಿಸಿಕೊಂಡರು ಅಂತ. ಇಷ್ಟೆಲ್ಲಾ ಓದೋ ಹೊತ್ತಿಗೆ ನಿನಗೂ ನಿನ್ನತನವನ್ನು ಹೇಗೆ ರೂಪಿಸಿಕೊಳ್ಳಬೇಕು ಅಂತ ಅರ್ಥ ಆಗಿರುತ್ತೆ ಅಲ್ವಾ? ಸರಿ. ಒಳ್ಳೆಯ ಆರಂಭ ಒಳ್ಳೆಯ ಮುಕ್ತಾಯವನ್ನೇ ಕೊಡುತ್ತೆ. ಈಗಿನಿಂದ್ಲೇ ಶ್ರದ್ಧೆಯಿಡು. ಶ್ರಮಪಡು. ಮುಂದೆ ಒಂದೊಳ್ಳೆಯ ಸಂತಸದಾಯಕ ಜೀವನದ ಒಡೆತನ ನಿನ್ನದಾಗುತ್ತದೆ. ಶುಭವಾಗಲಿ. 

ಪುಟಾಣಿಗಳೇ ನಿಮ್ಮ ಜೊತೆ ಮಾತನಾಡಬಹುದಾ.....?

 ಪುಟಾಣಿಗಳೇ ನಿಮ್ಮ ಜೊತೆ ಮಾತನಾಡಬಹುದಾ.....? - ಪಿ. ಮಂಜುಳಾ ಕಲ್ಯಾಣ್, ಏನ್ ಪುಟ್ಟಾ, ಬೇಸಿಗೆ ರಜಾ ಮುಗೀತಾ? ಎಷ್ಟೊಂದು ಮಜವಾಗಿತ್ತು. ಹೇಳೋರಿಲ್ಲಾ ಕೇಳೋರಿಲ್ಲಾ, ನಾವ...

 


ಗಾಂಧೀಜಿ ಎಂದರೆ...
- ಅರವಿಂದ ಚೊಕ್ಕಾಡಿ,

ಗಾಂಧೀಜಿ ನಮ್ಮ ಯೋಚನೆಯ ವ್ಯಾಪ್ತಿ ಏನಿರಬೇಕೆಂದು ಕಲಿಸುತ್ತಾರೆ. ಗಾಂಧಿಯ ಚಿಂತನೆಗಳು ಯಾವುದೇ ಒಂದು ಜಾತಿ, ಒಂದು ಧರ್ಮ, ಒಂದು ವರ್ಗ, ಒಂದು ದೇಶಕ್ಕೆ ಸೀಮಿತವಲ್ಲ. ಅವರ ಆಲೋಚನೆಗಳು ಇಡೀ ಮಾನವ ಜನಾಂಗವನ್ನೇ ಒಳಗೊಳ್ಳುತ್ತವೆ. ಆದ್ದರಿಂದಲೆ ಗಾಂಧಿ ಅಧ್ಯಯನ ಕೇಂದ್ರಗಳು ಇಂಗ್ಲೆಂಡ್, ಅಮೆರಿಕ, ಕೆನಡ, ಕ್ಯಾಲಿಫೋರ್ನಿಯಾ ಮುಂತಾದ ಕಡೆಗಳಲ್ಲೆಲ್ಲ ಸ್ಥಾಪಿತವಾಗಿವೆ. ಇತ್ತೀಚೆಗೆ ನನ್ನ ಶಾಲೆಯ ಹಿಂದಿನ ಪ್ರಾಂಶುಪಾಲರಾಗಿದ್ದ ಅಂಡಾರು ಗುಣಪಾಲ ಹೆಗ್ಡೆಯವರು ನೆದರ್ಲ್ಯಾಂಡ್ಸ್ಗೆ ಹೋಗಿದ್ದರು. ಅಲ್ಲಿ ಅವರು ಇಂಟನ್ಯರ್ಾಷನಲ್ ಕೋರ್ಟ್ ಆಫ್ ಜಸ್ಟೀಸ್ಗೆ ಹೋದರಂತೆ. ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ರೆಫರೆನ್ಸ್ ಪುಸ್ತಕಗಳ ಕಪಾಟಿನಲ್ಲಿ ಮೇಲ್ಗಡೆ ಮೊದಲ ಸಾಲಿನ ಮೊದಲ ಎರಡು ಪುಸ್ತಕಗಳು ಮಹಾತ್ಮಾ ಗಾಂಧಿಯ ಚಿಂತನೆಗಳಿಗೆ ಸಂಬಂಧಿಸಿದವುಗಳನ್ನು ಇರಿಸಿದ್ದಾರೆ ಎಂದು ತಿಳಿಸಿದರು. ಅಂದರೆ ಮಹಾತ್ಮಾಗಾಂಧಿಯವರು ವಿಶ್ವದ ಎಲ್ಲಾ ಪ್ರಜ್ಞಾವಂತರ ಕೋಣೆಗಳಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ ಎಂಬುದು ಇಲ್ಲಿನ ವಿಶೇಷ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡ್ನ ವಿರೋಧ ಪಕ್ಷದ ನಾಯಕ ವಿನ್ಸ್ಟನ್ ಚಚರ್ಿಲ್ ಇನ್ನು ಭಾರತದಲ್ಲಿ ರಕ್ತಪಾತವೇ... ಎಂದು ಹೇಳಿಕೆ ಕೊಟ್ಟರು. ಅದಕ್ಕೆ ಗಾಂಧಿ, ಭಾರತದಲ್ಲಿ ರಕ್ತಪಾತವಾದರೆ ಇಂಗ್ಲೆಂಡ್ ಹೇಗೆ ನೆಮ್ಮದಿಯಿಂದ ಇರುತ್ತದೆಯೇ? ಎಂದು ಪ್ರಶ್ನಿಸುತ್ತಾರೆ. ಏಕೆಂದರೆ ಗಾಂಧೀಜಿಯವರ ದೃಷ್ಟಿಯಲ್ಲಿ ಇಂಗ್ಲೆಂಡ್ ಕೂಡ ಮಾನವ ಸಮಾಜದ ಒಂದು ಭಾಗವೆ ಹೊರತು ಸಂಬಂಧವಿಲ್ಲದ ಪ್ರದೇಶವಲ್ಲ. ರಾಣಿ ಎಲಿಜಬೆತ್ ಅವರ ಮದುವೆಗೆ ಗಾಂಧೀಜಿ ಸ್ವತಃ ತಾವೇ ನೇಯ್ದ ಟೇಬಲ್ ಕ್ಲಾತನ್ನು ಉಡುಗೊರೆಯಾಗಿ ಮೊಮ್ಮಗನ ಮೂಲಕ ಕಳಿಸುತ್ತಾರೆ. ಇನ್ನೂರು ವರ್ಷಗಳ ಕಾಲ ನಮ್ಮ ಅನ್ನವನ್ನು ಕಿತ್ತು ಕೊಂಡೊಯ್ದ ನಿಮ್ಮ ಊಟದ ಟೇಬಲ್ನ ಬಟ್ಟೆಯಾಗಲು ನಾವು ಹಿಂಜರಿಯುವುದಿಲ್ಲ ಎನ್ನುವ ಆ ಸಂದೇಶವನ್ನು ನೀಡಲು ಬಹುಶಃ ಗಾಂಧಿ ಒಬ್ಬರಿಗೆ ಮಾತ್ರ ಸಾಧ್ಯ. ಗಾಂಧಿ ವಿರೋಧಿಸಿದ್ದು ಬ್ರಿಟಿಷರನ್ನಲ್ಲ, ದಾಸ್ಯದ ಹೇರಿಕೆಯನ್ನು. ಕೊನೆಕೊನೆಗೆ ಬ್ರಿಟಿಷರಿಗೇ ಇದು ಅರ್ಥವಾಗಿತ್ತು. ಆದ್ದರಿಂದಲೆ ಅಟೆನ್ ಬರೋ ಎನ್ನುವ ಆಂಗ್ಲ ನಿದರ್ೇಶಕ ಗಾಂಧೀಜಿಯವರ ಜೀವನ ಕುರಿತ ಅದ್ಭುತ ಸಿನಿಮಾ ತೆಗೆದರು. ಬೆನ್ ಕಿಂಗ್ಸ್ಲೇ ಎಂಬ ಇನ್ನೊಬ್ಬ ಬ್ರಿಟಿಷ್ ನಟ ಗಾಂಧಿಯ ಪಾತ್ರಕ್ಕೆ ತಾನು ನ್ಯಾಯ ಸಲ್ಲಿಸಬೇಕಾದರೆ ತಾನು ಮೊದಲು ಉಪವಾಸ ಕುಳಿತು ಅದರ ಅನುಭವ ಪಡೆಯುತ್ತೇನೆ ಎಂದು ಉಪವಾಸದ ಅನುಭವ ಪಡೆದ ನಂತರ ಗಾಂಧಿಯ ಪಾತ್ರವನ್ನು ಅಭಿನಯಿಸಿದರು. ಗಾಂಧಿಯ ಕಾಲದಲ್ಲಿ ವಿಶ್ವಮಟ್ಟದಲ್ಲೇ ಜನಪರ ಹೋರಾಟ ಎಂದರೆ ಶ್ರೀಮಂತರ ವಿರುದ್ಧದ ಹೋರಾಟವಾಗಿದ್ದ ಕಾಲ. ಆಗಲೂ ಗಾಂಧಿ ಶ್ರೀಮಂತರನ್ನು ವಿರೋಧಿಸಲಿಲ್ಲ. ಟಾಟಾ ಸಂಸ್ಥೆಯವರು ಗಾಂಧಿಯ ಅನುಯಾಯಿಗಳಾದರು. ಹತ್ತು ವರ್ಷಗಳ ಕೆಳಗೆ ಒಬ್ಬ ಶ್ರೀಮಂತ ಕೈಗಾರಿಕೋದ್ಯಮಿ ಭವ್ಯ ಅರಮನೆ ಕಟ್ಟಿ ಗೃಹ ಪ್ರವೇಶವನ್ನು ಕಂಡರಿಯದಂತಹ ಅದ್ದೂರಿಯಿಂದ ಮಾಡಿದರು. ಆ ಅದ್ದೂರಿಯನ್ನು ನೋಡಿದ ಟಾಟಾ, ಮನೆ ಇಲ್ಲದವರು ಇನ್ನೂ ಇರುವ ಈ ದೇಶದಲ್ಲಿ ನಮ್ಮ ಶ್ರೀಮಂತಿಕೆಯನ್ನು ಹೀಗೆ ಪ್ರದಶರ್ಿಸುವುದು ಅಸಹ್ಯ ಎಂದರು. ಮಾಡಲು ಹೊರಟರೆ ಟಾಟಾ ಸಂಸ್ಥೆಯವರಿಗೆ ಅದಕ್ಕಿಂತ ಹೆಚ್ಚು ದುಂದು ಮಾಡುವ ಶಕ್ತಿ ಇಲ್ಲವೆ? ಇದೆ, ಆದರೆ ಅವರು ಮಾಡುವುದಿಲ್ಲ. ಏಕೆಂದರೆ ಅವರು ಗಾಂಧೀಜಿಯ ಶಿಷ್ಯರು. ಮೊನ್ನೆ ನಮ್ಮ ಪ್ರಾಂಶುಪಾಲರು ಎಲ್ಲೋ ಓದಿದ ಒಂದು ವಿಷಯವನ್ನು ಹೇಳಿದರು. ಟಾಟಾ ಸಂಸ್ಥೆಯವರು ಪೆಟ್ರೋಲ್, ಡೀಸಿಲ್ ಬಳಸದೆ ಓಡುವ ಕಾರನ್ನು ಆವಿಷ್ಕರಿಸಲು ಹೊರಟಿದ್ದಾರಂತೆ. ಕಾರಿಗೆ ಮಾತ್ರ 25 ಲಕ್ಷ ಆಗುತ್ತದೆ. ಆದರೆ ಆಮೇಲೆ ಬ್ಯಾಟರಿ ಚಾಜರ್್ ಮಾಡಿದರೆ ಆಯಿತು. ಅಂದರೆ ನನ್ನ ದೇಶದ ಇಂಧನ ಬಿಕ್ಕಟ್ಟಿಗೆ ನಾನು ಏನು ಪರಿಹಾರ ಕಂಡುಕೊಳ್ಳಬಹುದು ಎಂದು ಯೋಚಿಸುವ ಶಕ್ತಿ ಟಾಟಾ ಸಂಸ್ಥೆಗೆ ಇಂದಿಗೂ ಉಳಿದುಕೊಂಡಿದೆ ಎಂದರೆ ಅದರೊಳಗೆ ಗಾಂಧಿ ಪ್ರಭಾವ ಸದಾ ಹರಿಯುತ್ತಿದೆ ಎಂದರ್ಥ. ಗಾಂಧೀಜಿ ಶ್ರೀಮಂತರನ್ನು ವಿರೋಧಿಸುತ್ತಾ ಹೋಗಿದ್ದರೆ ಇದು ಸಾಧ್ಯವಿರಲಿಲ್ಲ. ಶ್ರೀಮಂತರಲ್ಲೂ ತುಂಬಾ ಒಳ್ಳೆಯವರಿರುತ್ತಾರೆ, ಕೆಟ್ಟವರೂ ಇರುತ್ತಾರೆ, ಶ್ರೀಮಂತರೂ ಮನುಷ್ಯರೇ. ಕೇವಲ ಮನುಷ್ಯರಾಗಿಯೆ ಹೋದರೆ ಅವರೂ ನೆರವಾಗುತ್ತಾರೆ. ಶ್ರೀಮಂತಿಕೆ, ಜಾತಿ, ಧರ್ಮ ಹೀಗೆ ಯಾವ ಹೆಸರಿನಲ್ಲೇ ಆದರೂ ಸಮುದಾಯವನ್ನು ದ್ವೇಷಿಸುತ್ತಾ ಹೋದರೆ ಅವರ ರಕ್ಷಣೆಗಾಗಿ ಅವರೂ ಪ್ರತಿತಂತ್ರವನ್ನು ಮಾಡಲೇಬೇಕಾಗುತ್ತದೆ. ಮಾಡಿಯೇ ಮಾಡುತ್ತಾರೆ. ಅದಕ್ಕೆ ಅವಕಾಶವೇ ಆಗದಿರಬೇಕಾದರೆ ಎಲ್ಲರಲ್ಲಿರುವ ಒಳ್ಳೆಯದನ್ನು ಸ್ವೀಕರಿಸಲು ಸಾಧ್ಯವಾಗಬೇಕು. ಇದನ್ನು ನಾವು ಗಾಂಧಿಯಿಂದ ಕಲಿಯಬೇಕು.

ನಿಜವಾಗಿಯೂ ಗಾಂಧಿ ಹೊಸದನ್ನು ಮಾಡಲಿಲ್ಲ. ಅಹಿಂಸೆಯನ್ನು ಜೈನ ಧರ್ಮದಿಂದ, ಸರ್ವ ಜೀವದಯೆಯ ಪ್ರೇಮವನ್ನು ಬೌದ್ಧ ಧರ್ಮದಿಂದ, ಎಲ್ಲವನ್ನೂ ಸ್ವೀಕರಿಸುವ ಮನೋಭಾವವನ್ನು ಹಿಂದೂ ಧರ್ಮದ ಅದ್ವೈತದಿಂದ, ಕ್ಷಮೆಯನ್ನು ಜೀಸಸ್ನಿಂದ ಹೀಗೆ ಹಳೆಯದರ ಎಲ್ಲ ಉತ್ತಮಿಕೆಗಳನ್ನು ಒಟ್ಟಾಗಿಸಿ ಹೊಸ ಅಗತ್ಯಗಳಿಗನುಗುಣವಾಗಿ ನಿರೂಪಿಸಿದರು. ಗ್ರಾಮಸ್ವರಾಜ್ಯದ ತತ್ವ ಹೆಚ್ಚು ಕಡಿಮೆ ಪುರಾತನ ಭಾರತದ ಗಣರಾಜ್ಯಗಳಿಂದಲೇ ರೂಪುಗೊಂಡದ್ದು. ಸತ್ಯಾಗ್ರಹ ನೋಡಿ, ಮಕ್ಕಳ ಹಠಮಾರಿತನದ ಅಭಿವೃದ್ಧಿ ಹೊಂದಿದ ರೂಪ ಅದು. ಮಕ್ಕಳು ತಂದೆ, ತಾಯಿ ಅವರಿಗೆ ಹೊಡೆಯಲಿ, ಬಡಿಯಲಿ, ಅವರಿಗೆ ಆಗಬೇಕಾದ್ದು ಅಗುವವರೆಗೆ ಬಿಡುವುದಿಲ್ಲ. ಗಾಂಧಿಯ ಆಥರ್ಿಕ ಚಿಂತನೆಗಳು ನೈತಿಕ ಅರ್ಥಶಾಸ್ತ್ರವೆಂದೇ ಕರೆಯಲ್ಪಟ್ಟಿದೆ. ಸಂಗಂ ಕಾಲದ ಕವಿ ತಿರುವಳ್ಳವರ್ನ ತಿರುಕ್ಕುರಳ್ನ ನಾಲ್ಕನೆಯ ಭಾಗವಾದ ಪೊರುತ್ಪಾಳ್ನಲ್ಲಿ ನೈತಿಕ ಅರ್ಥಶಾಸ್ತ್ರದ ಬೀಜವಿದೆ. ಒಂದು ಸಾವಿರದ ಒಂಬೈನೂರು ವರ್ಷಗಳ ಹಿಂದಿನ ಆ ಬೀಜವನ್ನು ಹೆಮ್ಮರವಾಗಿ ಬೆಳೆಸುವ ಕೆಲಸವನ್ನು ಗಾಂಧಿ ಮಾಡುತ್ತಾರೆ.

ಗಾಂಧಿ ಬದುಕಿದ್ದ ಕಾಲದಲ್ಲಿಯೂ ಗಾಂಧಿ ಏನನ್ನು ಬೇಕಾದರೂ ಮಾಡಬಲ್ಲ ದೈವಾಂಶ ಸಂಭೂತ ಎಂಬಂತೆ ಅರ್ಥಮಾಡಿಕೊಂಡವರಿದ್ದರು. ಆದರೆ ಈಗ ಏನನ್ನು ಬೇಕಾದರೂ ಮಾಡಬಲ್ಲವನಾಗಿದ್ದರೂ ಏನನ್ನೂ ಮಾಡಲಿಲ್ಲ ಎಂಬರ್ಥದಲ್ಲಿ ಗ್ರಹಿಸುವವರಿದ್ದಾರೆ. ಅದರಲ್ಲೂ ಗಾಂಧಿ ಯಾರಿಗಾಗಿ ಪ್ರಾಣವನ್ನೇ ಕೊಟ್ಟರೋ ಅವರಲ್ಲೇ ಕೆಲವರು ಗಾಂಧಿ ನಮಗೆ ಏನನ್ನೂ ಮಾಡಲಿಲ್ಲ ಎನ್ನುವುದನ್ನು ಕಂಡಾಗ ಮನುಷ್ಯನ ಧೂರ್ತತನ ಆತನನ್ನು ಯಾವ ಮಟ್ಟಕ್ಕೆ ಕೃತಘ್ನನನ್ನಾಗಿಸಬಹುದು ಎಂದು ಅನಿಸುತ್ತದೆ. ಆದರೆ ಗಾಂಧಿಯೂ ನಮ್ಮ, ನಿಮ್ಮ ಹಾಗಿನ ಮನುಷ್ಯರಾಗಿದ್ದರು. ಛೂಮಂತ್ರ ಹಾಕಿ ಏನು ಬೇಕಾದರೂ ಮಾಡಬಲ್ಲ ಶಕ್ತಿ ಅವರಿಗಿರಲಿಲ್ಲ. ನಮ್ಮ ಹಾಗೆಯೇ ಯುವಕರಾಗಿದ್ದಾಗ ಹೆಂಡತಿ ಬಳಿ ಜಗಳವಾಡಿದ್ದರು, ಸುಳ್ಳು ಹೇಳಿದ್ದರು. ಇಂಗ್ಲೆಂಡ್ಗೆ ಹೋಗಿ ಅಲ್ಲಿ ತಾನು ಬ್ರಿಟಿಷರ ಹಾಗೆ ಕಾಣಬೇಕೆಂದು ಡ್ಯಾನ್ಸ್ ಕಲಿಯಲಿಕ್ಕೆ ಹೋಗಿ ಬೇಡದ ಕುಚೋದ್ಯಗಳನ್ನೆಲ್ಲ ಮಾಡಿದ್ದರು. ಆದರೆ ತನ್ನ ಪ್ರತಿಯೊಂದು ತಪ್ಪಿನಿಂದಲೂ ಗಾಂಧಿ ಹೊಸ ಹೊಸದನ್ನು ಕಲಿಯುತ್ತಲೇ ಹೋಗಿ ಎತ್ತರಕ್ಕೆ ಬೆಳೆದರು. ನಮಗೆ ನಮ್ಮ ತಪ್ಪುಗಳಿಂದ ಕಲಿಯಲು ಆಗುತ್ತಿಲ್ಲ. ಆದ್ದರಿಂದ ಗಾಂಧಿ ನಮಗಿಂತ ಭಿನ್ನರಾಗಿ ಕಾಣುತ್ತಾರೆ. ಒಮ್ಮೆ ಗಾಂಧಿ ಎದುರಿಸಿದ ಸಂದರ್ಭಗಳಲ್ಲಿ ನಾವಿದ್ದಿದ್ದರೆ ಏನು ಮಾಡುತ್ತಿದ್ದೆವು? ಎಂದು ಯೋಚಿಸಿ ನೋಡಿದರೆ ಗಾಂಧಿ ಏನು ಎನ್ನುವುದು ಅರ್ಥವಾಗಲು ಆರಂಭವಾಗುತ್ತದೆ.

ಗಾಂಧೀಜಿಯವರನ್ನು ಅವರ ಜನ್ಮದಿನದ ದಿನ ಗುಣಗಾನ ಮಾಡಿ ಬಿಡುವುದಲ್ಲ, ಗಾಂಧಿ ನಮಗೆ ಮುಖ್ಯವಾಗಬೇಕಾದ್ದು ಅವರ ನಿರಂತರ ಪ್ರಯೋಗಶೀಲತೆ ಮತ್ತು ಸತ್ಯದೊಂದಿಗಿನ ಅಪಾರ ನಂಬಿಕೆಗಾಗಿ, ತನ್ನ ಆತ್ಮಸಾಕ್ಷಿಗೆ ನಿಷ್ಠರಾಗಿ ನಡೆದುಕೊಂಡದ್ದಕ್ಕಾಗಿ. ಸ್ವಾತಂತ್ರ್ಯ ಬಂದಾಗ ಆ ಹೋರಾಟದ ನಾಯಕನಾದವನಿಗೆ ಸಂಭ್ರಮ ಸಹಜ. ಆದರೆ ಆ ಎಲ್ಲ ಸಂಭ್ರಮವನ್ನು ತಿರಸ್ಕರಿಸಿ, ದೆಹಲಿಯಿಂದ ದೂರದ ಕಲ್ಕತ್ತಾ ಬೀದಿಗಳಲ್ಲಿ ತನ್ನ ಕೆಲಸವನ್ನು ನಿಮರ್ೋಹದಿಂದ ಮಾಡುತ್ತಿದ್ದ ಗಾಂಧೀಜಿಯವರ ನಡತೆಯಲ್ಲಿ ಇರುವ ಸತ್ಯದ ಮೇಲಿನ ನಂಬಿಕೆ ನಮ್ಮನ್ನು ತಟ್ಟಿ ಎಚ್ಚರಿಸಬೇಕು. ಈ ನಿಮರ್ೋಹಕ್ಕೆ ಭಿನ್ನವಾದ ನಡೆಯನ್ನೂ ಗಾಂಧಿಯಲ್ಲಿ ಕಾಣಬಹುದು. ದಾಂಪತ್ಯಕ್ಕೆ ಇರುವ ಒಂದು ಆಧ್ಯಾತ್ಮಿಕ ರೂಪದ ಅರಿವಿಲ್ಲದ ಅನೇಕರು ಇಂದಿಗೂ ಗಾಂಧಿ-ಕಸ್ತೂರ ಬಾ ನಡುವಿನ ಸಂಬಂಧಗಳ ಬಗ್ಗೆ ಕೆಲವರು ಮಾತನಾಡುತ್ತಾ ಗಾಂಧಿ ಶೋಷಣೆ ಮಾಡಿದ್ದಾರೆ ಇತ್ಯಾದಿ, ಇತ್ಯಾದಿ ಮಾತನಾಡಿಕೊಳ್ಳುತ್ತಾರೆ. ಗಾಂಧೀಜಿಯವರಿಂದ ನಿಮಗೆ ಏನಾದರೂ ತೊಂದರೆಯಾಗಿದೆಯಾ? ಎಂಬ ಪ್ರಶ್ನೆಗೆ ಕಸ್ತೂರ ಬಾ, ಮುಂದಿನ ಜನ್ಮವಿದ್ದರೆ ಅವರೇ ನನಗೆ ಪತಿಯಾಗಲಿ ಎಂದು ಉತ್ತರಿಸಿ ಬಿಟ್ಟಿದ್ದರು. ಕಸ್ತೂರಬಾ ಹೆಣಕ್ಕೆ ಬೆಂಕಿಕೊಟ್ಟ ಮೇಲೆ ಗಾಂಧಿ ಹೆಣ ಉರಿಯುತ್ತಿರುವುದನ್ನೇ ನೋಡುತ್ತಾ ಆರು ಗಂಟೆಗಳ ಕಾಲ ದೊಣ್ಣೆ ಊರಿಕೊಂಡು ನಿಂತಿದ್ದರು. ಕಸ್ತೂರ ಬಾ ನಿಧನಕ್ಕೆ ಶೋಕ ಪ್ರಕಟಿಸಿದ ವೈಸರಾಯ್ ವವೆಲ್ಗೆ ಮರು ಪತ್ರ ಬರೆಯುತ್ತಾ ಗಾಂಧಿ ಅವಳಿಗಾಗಿಯೇ ಬದುಕಿ ನಾನು ಸಂಕಟಪಡುವುದಕ್ಕಿಂತ, ಬಿಡುಗಡೆ ತರುವ ಮರಣ ಮೇಲೆಂದು ನಾನು ಭಾವಿಸುತ್ತೇನಾದರೂ ಅದು ಘಟಿಸುತ್ತಿಲ್ಲ ಎಂದು ಬರೆಯುತ್ತಾರೆ. ಗಾಂಧಿಯ ಈ ನಡವಳಿಕೆಗಳಲ್ಲಿ ಒಬ್ಬ ಪ್ರಾಮಾಣಿಕ ಗಂಡ ಮಾತ್ರ ಕಾಣುವುದು ವಿಶೇಷ. ಗಾಂಧಿ ನಮ್ಮ ಪಕ್ಕದಲ್ಲಿಯೇ ಇದ್ದಾರೇನೊ ? ಎಂದೆನಿಸುವುದೂ ಇಂತಹ ನಡವಳಿಕೆಗಳಲ್ಲೆ. ವೈಯಕ್ತಿಕವಾಗಿ ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿ ನಮ್ಮನ್ನು ನಾವು ಶುದ್ಧಗೊಳಿಸಿಕೊಳ್ಳಬೇಕು ಎನ್ನುವ ಗಾಂಧೀಜಿ ತಾನು ಕಸ್ತೂರಬಾ ಅವರಿಗೆ ಮಾಡಿದ ತೊಂದರೆಗಳನ್ನು ಅವರ ಆತ್ಮಕಥೆಯಲ್ಲಿ ಒಪ್ಪಿಕೊಳ್ಳುತ್ತಾರೆ. ಈ ಮಾನಸಿಕ ಸಂಸ್ಕಾರ ಇದೆಯಲ್ಲ, ಈ ಸಂಸ್ಕಾರವೇ ಬದುಕನ್ನು ಆಪ್ತವಾಗಿಸುವುದು ಮತ್ತು ಆತ್ಮಸ್ಥೈರ್ಯವನ್ನು ಬೆಳೆಯಿಸುವುದು.

ಗಾಂಧಿ ಒಬ್ಬ ಧನಾತ್ಮಕ ಅರಾಜಕತಾವಾದಿ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದಲ್ಲಿ ಅದರ ಸಾಕಾರವಾಗುತ್ತದೆ. ಅರಾಜಕತೆ ಎಂದರೆ ಆಡಳಿತ ಸಮಾಜವನ್ನು ನಿಯಂತ್ರಿಸದೆ ಇರುವ ಸ್ಥಿತಿ. ಹಾಗಾದರೆ ಸಮಾಜ ಹದಗೆಡುವುದಿಲ್ಲವೆ ? ಎಂದು ನೀವು ಕೇಳಬಹುದು. ಗಾಂಧೀಜಿಯ ಅರಾಜಕತೆಯಲ್ಲಿ ಹದಗೆಡುವುದಿಲ್ಲ. ಏಕೆಂದರೆ ಗ್ರಾಮ ಸ್ವರಾಜ್ಯದಲ್ಲಿ ಸ್ವಯಂ ಶಿಸ್ತು ಇರುತ್ತದೆ. ಅದಕ್ಕೇ ಗಾಂಧಿ "ಯಾವುದೆ ಒಳ್ಳೆಯ ಸರಕಾರಗಳೂ ಸ್ವರಾಜ್ಯಕ್ಕೆ ಸಮಾನವಲ್ಲ. ಸ್ವರಾಜ್ಯದಲ್ಲಿ ಮಾತ್ರ ಸ್ವಾತಂತ್ರ್ಯವಿರುತ್ತದೆ" ಎಂದಿರುವುದು." ಆ ಸ್ವರಾಜ್ಯವು ನನ್ನ ಜೀವಿತಾವಧಿಯಲ್ಲಿ ಬರುವುದಿಲ್ಲವೆಂಬ ಯಾತನಾಮಯ ಅರಿವು ನನಗಿದೆ"ಎಂದೂ ಗಾಂಧಿ ಹೇಳುತ್ತಾರೆ. ನೀವು ಕಾಲೇಜಿಗೆ ಸೇರುವಾಗ ಪ್ರಾಸ್ಪೆಕ್ಟಸ್ ಕೊಟ್ಟಿರುತ್ತಾರೆ. ಅದರಲ್ಲಿ ಈ ಸಂಸ್ಥೆಯ ನಿಯಮ ಇಂತಾದ್ದು ಎಂದು ಇರುತ್ತದೆ. ನೀವೆಲ್ಲರೂ ಮನುಷ್ಯರೇ ಆಗಿರುವುದರಿಂದ ನಿಮಗದು ಅರ್ಥವೂ ಆಗಿರುತ್ತದೆ. ಅದರಂತೆ ನಡೆದುಕೊಳ್ಳಬೇಕಾದ್ದು ನಿಮ್ಮ ಧರ್ಮ. ಆ ಸ್ವಯಂ ಶಿಸ್ತು ನಿಮ್ಮಲ್ಲಿದ್ದರೆ ಪ್ರಿನ್ಸಿಪಾಲರು ಹೊಸಹೊಸ ನಿಯಮಗಳನ್ನು ಮಾಡುವ, ನಿಮ್ಮನ್ನು ಕಾಯುವ ಕೆಲಸವನ್ನು ಮಾಡಬೇಕಾದ ಅಗತ್ಯವೇ ಇರುವುದಿಲ್ಲ. ಅವರಿಗೂ ಒತ್ತಡ ಇರುವುದಿಲ್ಲ. ಅವರ ಒತ್ತಡವನ್ನು ನೀವ

ಗಾಂಧೀಜಿ ಎಂದರೆ...

  ಗಾಂಧೀಜಿ ಎಂದರೆ... - ಅರವಿಂದ ಚೊಕ್ಕಾಡಿ, ಗಾಂಧೀಜಿ ನಮ್ಮ ಯೋಚನೆಯ ವ್ಯಾಪ್ತಿ ಏನಿರಬೇಕೆಂದು ಕಲಿಸುತ್ತಾರೆ. ಗಾಂಧಿಯ ಚಿಂತನೆಗಳು ಯಾವುದೇ ಒಂದು ಜಾತಿ, ಒಂದು ಧರ್ಮ, ಒಂ...


 ಧ್ಯಾನ ವಿಜ್ಞಾನ
ಇಂಗ್ಲಿಷ್ ಮೂಲ : ಡಾ.ಪಿ.ವಿ.ಶರ್ಮಾ,

ಯೋಗ ಎಂದರೆ ಕೇವಲ ಯೋಗಾಸನಗಳಲ್ಲ. `ಯೋಗ ಎಂದರೆ ಚಿತ್ತವೃತ್ತಿ ನಿರೋಧ ಎಂದು ಪತಂಜಲಿ ಋಷಿಗಳು ವ್ಯಾಖ್ಯಾನಿಸಿದ್ದಾರೆ. `ಚಿತ್ತ' ಎಂದರೆ ಮನೋವಿಷಯಗಳು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲವೂ ಹೌದು. `ವೃತ್ತಿ' ಎಂದರೆ, ಮರದಿಂದ ಮರಕ್ಕೆ ಹಾರುವ ಮಂಗನಂತೆ ಕ್ರಿಯೆಯಲ್ಲಿ ತೊಡಗಿರುವುದು `ಚಿತ್ತವೃತ್ತಿ' ಎಂದರೆ `ಅವಿಶ್ರಾಂತ ಮನಸ್ಸು'. ಮನಸ್ಸಿನ ಆಲೋಚನೆಗಳ ಪರಿಣಾಮವಾಗಿ ನಮಗಿರುವ ಸಮಯದಲ್ಲಿ ಶೇ.47ರಷ್ಟು ಮಾನಸಿಕವಾಗಿ ಸೋರಿಹೋಗುತ್ತದೆ. ಮನಸ್ಸಿನ ಸ್ವಾಭಾವಿಕವಾದ ಪ್ರಕ್ಷುಬ್ಧ ಅಲೆಗಳ ಪರಿಣಾಮವಾಗಿ ಆತ್ಮದ ಚೈತನ್ಯಶಕ್ತಿಯು ಅನಾವಶ್ಯಕವಾಗಿ ವ್ಯರ್ಥವಾಗುತ್ತದೆ. ಆತ್ಮದ ಚೈತನ್ಯಶಕ್ತಿ ಹೀಗೆ ವ್ಯರ್ಥವಾದರೆ ಭೌತಿಕ ದೇಹ ದುರ್ಬಲಗೊಳ್ಳುತ್ತದೆ ಮತ್ತು  ದುರ್ಬಲ ದೇಹವು ಹೊರಗಿನ ದಾಳಿಗಳಿಗೆ ಸುಲಭವಾಗಿ ತುತ್ತಾಗುವುದರಿಂದ ರೋಗಗಳು ಆವರಿಸುತ್ತವೆ.  

ಮನಸ್ಸು ಮತ್ತು ದೇಹ ಇವೆರಡೂ ಬೇರ್ಪಡಿಸಲಾಗದಂತೆ ಒಂದೇ ಆಗಿ ಥಳಕು ಹಾಕಿಕೊಂಡಿವೆ. ನಾವು ದೇಹಾನುಭವಗಳನ್ನು ಹೊಂದುತ್ತೇವೆ ವಸ್ತುನಿಷ್ಠವಾಗಿ : ನಾವು ಮನಸ್ಸಿನ ಅನುಭವಗಳನ್ನು ಹೊಂದುತ್ತೇವೆ ವ್ಯಕ್ತಿನಿಷ್ಠವಾಗಿ: ನಮ್ಮಲ್ಲಿ ಲೋಚನೆಗಳು ಮತ್ತು ಭಾವನೆಗಳು ಇವೆ. ಮನಸ್ಸು ಎಂಬುದು ನಮ್ಮ ಆಲೋಚನೆಗಳ ಒಟ್ಟು ಮೊತ್ತವಾಗಿದೆ. ಮಾನವನಲ್ಲಿ ಒಂದು ದಿನಕ್ಕೆ ಸರಾಸರಿ 60,000 ಆಲೋಚನೆಗಳು ಸೃಷ್ಟಿಯಾಗುತ್ತವೆ. ಇವುಗಳಲ್ಲಿ ಬಹುತೇಕ ಆಲೋಚನೆಗಳು ಒಂದೋ ಭೂತಕಾಲಕ್ಕೆ ಅಥವಾ ಭವಿಷ್ಯತ್ತಿಗೆ ಸಂಬಂಧಿಸಿರುತ್ತವೆ.

ಶೇ.80 ರಷ್ಟು ರೋಗಗಳು ಮನೋದೈಹಿಕವಾದವು : ಯಾರು ಮನಸ್ಸನ್ನು ಯಾವುದೇ ರೀತಿಯಲ್ಲಿ ಪ್ರಜ್ಞಾಪೂರ್ವಕವಾಗಿ  ಉತ್ತು- ಬಿತ್ತಿ ಕಳೆ ತೆಗೆಯುವುದಿಲ್ಲವೋ ಅಂಥವರೆಲ್ಲರ ಆಸ್ತಿ ಎಂದರೆ, ಅದೇ ಸಹಜ ಪ್ರಕ್ಷುಬ್ಧ ಮನಸ್ಸು.  ಸಾಗುವಳಿ ಇಲ್ಲದ ಭೂಮಿ ವ್ಯರ್ಥವಾದ ಕಳೆಗಳಿಂದ ಕೂಡಿರುತ್ತದೆ. ಹಾಗೆಯೇ, ಸಾಗುವಳಿ ಇಲ್ಲದ ಮನಸ್ಸೂ ಸಹ ಅನಗತ್ಯವಾದ ಆಲೋಚನೆಗಳಿಂದ ತುಂಬಿಕೊಂಡಿರುತ್ತದೆ. ಆಧ್ಯಾತ್ಮಿಕ ಪ್ರಗತಿಯನ್ನು ಬಯಸುವ ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಶುಚಿಗೊಳಿಸುವುದು ತೀರಾ ಅಗತ್ಯವಾದುದು. ಮನಸ್ಸನ್ನು ಶುಚಿಗೊಳಿಸುವುದೆಂದರೆ  ನಮ್ಮ ಆಧ್ಯಾತ್ಮಿಕ ಪ್ರಗತಿಯ ಸೂಚಕವಾಗಿ ನಿರ್ಮಾಣಗೊಳ್ಳುವ ಕಟ್ಟಡಕ್ಕೆ ಅಡಿಪಾಯವನ್ನು ಹಾಕಿದಂತೆಯೇ ಸರಿ. ಮಿದುಳು ಎಂಬುದು 1.1 ಟ್ರಿಲಿಯನ್ ಜೀವಕೋಶಗಳು ಮತ್ತು 100 ಶತಕೋಟಿ ನ್ಯೂರಾನ್ಗಳನ್ನು (ನರಕೋಶಗಳು) ಹೊಂದಿರುವ 3 ಕೋಣೆಗಳ ಒಂದು ಅಂಗವಾಗಿದೆ.  ಪ್ರತಿ ನರಕೋಶವು ತನ್ನಲ್ಲಿ 5,000

ಧ್ಯಾನದ ಒಂದು ಸರಳ ವ್ಯಾಖ್ಯಾನ ಎಂದರೆ... ಅದು ಮನಸ್ಸನ್ನು ಸ್ಥಗಿತಗೊಳಿಸುವಿಕೆ, `ನಿರ್ಮಲ ಸ್ಥಿತಿ'. ಬಾಯಿಯಿಂದ ಶಬ್ದಗಳು ಹೊರ ಬರದಿದ್ದರೆ, ಅದೇ `ಮೌನ'. ಮನಸ್ಸಿನಲ್ಲಿ ಆಲೋಚನೆಗಳಿಲ್ಲದಿದ್ದರೆ ಅದೇ `ಧ್ಯಾನ'. ನಾವು ಏನೂ ಮಾಡದೇ ಸುಮ್ಮನೇ ಇದ್ದಾಗ, ಚೈತನ್ಯ ಶಕ್ತಿಯು ನಮ್ಮ ಮೂಲ ಅಸ್ತಿತ್ವದ ಕೇಂದ್ರದತ್ತ ಚಲಿಸುತ್ತದೆ ಮತ್ತು ಅಲ್ಲಿಯೇ ನೆಲೆನಿಲ್ಲುತ್ತದೆ. ಧ್ಯಾನ ಎಂದರೆ ಕೇವಲ ಮನಸ್ಸನ್ನು ಸ್ಥಗಿತಗೊಳಿಸುವುದಷ್ಟೇ ಅಲ್ಲ, ಮನಸ್ಸಿನ ಚಲನೆಯನ್ನು ಗಮನಿಸುವುದೂ ಸಹ ಆಗಿದೆ. `ಅಲೆಗಳ ಸ್ಥಿತಿ ಮತ್ತು `ಅಲೆರಹಿತ ಸ್ಥಿತಿ ಎರಡೂ ಹೇಗೆ ಒಂದೇ ಸಮುದ್ರದ ಭಾಗವೋ ಹಾಗೆ `ಸ್ಥಿರತೆ' ಮತ್ತು `ಚಲನೆ' ಎಂಬುವು ಪ್ರಜ್ಞೆ ಎಂಬ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಧ್ಯಾನವನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಿದಷ್ಟೂ  ನಮ್ಮ ಜೀವನವು ಹೆಚ್ಚು ಹೆಚ್ಚು  ದೈಹಿಕವಾಗಿ... ಭಾವನಾತ್ಮಕವಾಗಿ... ಬೌದ್ಧಿಕವಾಗಿ... ಮತ್ತು ಆಧ್ಯಾತ್ಮಿಕವಾಗಿ ಸದೃಢಗೊಳ್ಳುತ್ತದೆ.  ಧ್ಯಾನವು ಒಂದು ಬೃಹತ್ ಆಂತರಿಕ ಸಾಹಸ ಮತ್ತು ಇರುವ ಎಲ್ಲವುಗಳೊಡನೆ ಅಸ್ತಿತ್ವದ ಸಂಬಂಧ ಎಲ್ಲ ವ್ಯಕ್ತಿಗಳು ಮಾಡಬೇಕಾದುದೇನೆಂದರೆ, ಸುಮ್ಮನೆ ಒಂದೆಡೆ ಮೌನವಾಗಿ ಕುಳಿತು ಆಂತರಿಕ ಪ್ರಯಾಣವನ್ನು ಮಾಡುವುದು; ಮತ್ತು ತಮ್ಮ ಉಸಿರಾಟದ ಮೇಲೆ ಗಮನವನ್ನು ಸ್ಥಿರಗೊಳಿಸುವುದು ಮತ್ತು ನಿಧಾನವಾಗಿ ತಮ್ಮ ನೈಜ ಮೂಲ ನೆಲೆಯತ್ತ ಪ್ರಯಾಣಿಸುವುದು.

ಉಸಿರೇ ನಮ್ಮ ಆಂತರಿಕ ಮತ್ತು ಬಾಹ್ಯದ ಗುರು : ಉಸಿರು ಎಂಬ ಗುರುವನ್ನು ಅನುಸರಿಸಿರಿ. ಪ್ರಜ್ಞಾಪೂರ್ವಕವಾಗಿ ಉಸಿರಾಡುವುದರಿಂದ ಗಾಳಿಯು ಪ್ರಬಲವಾದ ಪ್ರಾಣವಾಯುವಾಗಿ ಪರಿವರ್ತನೆಗೊಳ್ಳುತ್ತದೆ. ಇದು ಶುದ್ಧೀಕರಣ ಕ್ರಿಯೆಯನ್ನು ಮತ್ತಷ್ಟು ಪ್ರಬಲಗೊಳಿಸುತ್ತದೆ. ಇದು ಸಾಯುತ್ತಿರುವ ಜೀವಕಣಗಳನ್ನು ಪುನರುಜ್ಜೀವನಗೊಳಿಸುತ್ತದೆ.  ಪ್ರಜ್ಞಾಪೂರ್ವಕವಾಗಿ ಉಸಿರಾಡಿ... ಎಂದು ಹೇಳಿದ್ದಾರೆ ಗೌತಮ ಬುದ್ಧ. ಉಸಿರಾಟದ ಮೇಲೆ ಏಕಾಗ್ರವಾಗಿ ಗಮನವಿರಿಸಿದಷ್ಟೂ ಕಾಲ ನೀವು ಸ್ಪಷ್ಟವಾಗಿ ವರ್ತಮಾನದಲ್ಲಿ ಇರುತ್ತೀರಿ.  ಇದನ್ನು ಗಮನದಲ್ಲಿಡಿ. ನಿಮ್ಮ ಉಸಿರಾಟದ ಮೇಲೆ ಗಮನವಿರಿಸುವುದು ಮತ್ತು ಆಲೋಚಿಸುವುದು ಇವೆರಡನ್ನೂ ನೀವು ಏಕಕಾಲದಲ್ಲಿ ಮಾಡಲಾರಿರಿ. ಉಸಿರು ಎಂಬುದು ಒಂದು ಆಧ್ಯಾತ್ಮಿಕ ಮೂಲಾಂಶ. ಪ್ರಾಣ ಎಂದು ಕರೆಯಲಾಗುವ ಮೂಲತತ್ವವು ನಮ್ಮ ಭೌತಿಕ ದೇಹಕ್ಕೆ ಜೀವವನ್ನು ನೀಡುತ್ತದೆ.  ಧ್ಯಾನದಲ್ಲಿ ಉಸಿರನ್ನು ಗಮನಿಸುವುದರಿಂದ, ನಾವು ಪ್ರಾಣವನ್ನು ಪ್ರಜ್ಞಾಪೂರ್ವಕವಾಗಿ ಅನುಭವಿಸುತ್ತೇವೆ.  `ಆತ್ಮನ್' ಎಂಬ ಜರ್ಮನ್ ಭಾಷೆಯ ಪದವು ಸಂಸ್ಕೃತದ `ಆತ್ಮನು' ಎಂಬ ಪದದಿಂದ ಹೊರಹೊಮ್ಮಿದೆ. ಆತ್ಮನ್ ಎಂದರೆ ಒಳಗಿರುವ ಚೈತನ್ಯ ಅಥವಾ ದಿವ್ಯಚೇತನ. ಉಸಿರು ಎಂಬುದು ಪ್ರಾಣದ ಹೊರರೂಪ. ಚೈತನ್ಯ ಎಂಬುದು ಅದರ ಒಳರೂಪ. ಹೊರಗಿನ ರೂಪವಾದ ಉಸಿರನ್ನು ಅನುಭವಿಸುವ ಮೂಲಕ ಒಳಗಿರುವ  ಮೂಲ ಆಂತರಿಕ ರೂಪವನ್ನು ಅರಿಯುತ್ತೇವೆ. ಒಳಬರುತ್ತಿರುವ ಉಸಿರು ಮತ್ತು ಹೊರಹೋಗುತ್ತಿರುವ ಉಸಿರು ಇವುಗಳ ಲಯದ ಮೇಲೆ ಪ್ರಜ್ಞಾಪೂರ್ವಕವಾಗಿ ಮನಸ್ಸನ್ನು ಕೇಂದ್ರೀಕರಿಸುವುದರಿಂದ  ಧ್ಯಾನ ಎಂಬುದಕ್ಕೆ ಒಂದು ಸಹಜವಾದ ವಸ್ತು ದೊರೆಯುತ್ತದೆ. ನಾವು ನಮ್ಮ ಉಸಿರಿನೊಂದಿಗೆ ಬೆರೆತಾಗ, ನಮ್ಮ ಮನಸ್ಸು ತಾನಾಗಿಯೇ `ಖಾಲಿ'ಯಾಗುತ್ತದೆ.  ನಾವು ಉಸಿರಾಟವನ್ನು ಗಮನಿಸುತ್ತಾ ಇರುತ್ತಿದ್ದಾಗ, ಅದರ ಲಯದಲ್ಲಿ ಇದು ಬೆರೆಯುತ್ತದೆ.  ಕ್ರಮೇಣ... ಉಸಿರಾಟದ ಗತಿ ನಿಧಾನಗೊಳ್ಳುತ್ತದೆ ಮತ್ತು ಅರಿವಿನಿಂದ ಕೂಡಿದ ಮನಸ್ಸು ಪ್ರಶಾಂತಗೊಂಡಂತೆಲ್ಲಾ ಉಸಿರಾಟವು ಆಳವಾಗುತ್ತಾ ಸಾಗುತ್ತದೆ.

ಧ್ಯಾನ ವಿಜ್ಞಾನದ ಮೂರು ತತ್ವಗಳು -  ಮೊದಲನೆಯ ತತ್ವ : ಸರಳವಾದ, ಸುಲಭವಾಗಿ ಮತ್ತು ಸಹಜವಾಗಿ ನಡೆಯುತ್ತಿರುವ ನಮ್ಮ ಉಸಿರಾಟದೊಂದಿಗೆ ನಾವು ಇದ್ದಾಗ... ನಮ್ಮ ಮನಸ್ಸು ತಾನಾಗಿಯೇ ಖಾಲಿಯಾಗುತ್ತದೆ  ಎರಡನೆಯ ತತ್ವ : ಮನಸ್ಸು ಸ್ಪಷ್ಟವಾಗಿ ಖಾಲಿಯಾದಾಗ, ಅಗಾಧ ಪ್ರಮಾಣದ ವಿಶ್ವಪ್ರಾಣ ಶಕ್ತಿಯು (ಕಾಸ್ಮಿಕ್ ಎನಜರ್ಿ)  ದೈಹಿಕ ವ್ಯವಸ್ಥೆಯೊಳಗೆ ಪ್ರವೇಶಿಸುತ್ತದೆ. ಮೂರನೆಯ ತತ್ವ : ``ಸಾಕಷ್ಟು ಪ್ರಮಾಣದ ವಿಶ್ವಪ್ರಾಣ ಶಕ್ತಿಯು ನಮ್ಮ ಭೌತಿಕ ವ್ಯವಸ್ಥೆಯೊಳಗೆ ಪ್ರವೇಶಿಸಿದಾಗ ಅದರ ಪರಿಣಾಮವಾಗಿ, ತಕ್ಕಷ್ಟು ಪ್ರಮಾಣದಲ್ಲಿ ಒಳಗಣ್ಣು ಸಕ್ರಿಯಗೊಳ್ಳುತ್ತದೆ

ಧ್ಯಾನದ ಪ್ರಯೋಜನಗಳು : ಸಂಪೂರ್ಣ ದೈಹಿಕ ಆರೋಗ್ಯ ಉಂಟಾಗುತ್ತದೆ. ಮಾನಸಿಕ ಶಾಂತಿ ಸಿಗುತ್ತದೆ. ಏಕಾಗ್ರತೆ ಶಕ್ತಿ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಬುದ್ಧಿಯು ಚುರುಕಾಗಿ ಸೂಕ್ಷ್ಮಗೊಳ್ಳುತ್ತದೆ, ಜೀವನದ ಗುರಿಯ ಸ್ಪಷ್ಟಗೊಳ್ಳುತ್ತದೆ. ನೆನಪಿನ ಶಕ್ತಿ ಹೆಚ್ಚಳವಾಗುತ್ತದೆ. ಮಾನವೀಯ ಸಂಬಂಧಗಳು ಉತ್ತಮಗೊಳ್ಳುತ್ತವೆ. ಕೆಟ್ಟ ಅಭ್ಯಾಸಗಳು ತಾವಾಗಿಯೇ ಬಿಟ್ಟುಹೋಗುತ್ತವೆ.

ಧ್ಯಾನದ ಅನುಭವಗಳು : ಧ್ಯಾನ ಮಾಡುವಾಗಲೇ ನಿಮಗೆ ಆಹ್ಲಾದಕರ ಮತ್ತು ಪ್ರಶಾಂತಸ್ಥಿತಿಯ ಭಾವನೆಗಳಂಥ ಅನೇಕಾನೇಕ ವೈವಿಧ್ಯಮಯವಾದ ಅನುಭವಗಳು ಉಂಟಾಗುತ್ತವೆ. ನಿಮ್ಮ ಮುಚ್ಚಿದ ಕಣ್ಣುಗಳಿಗೆ ದೃಶ್ಯಗಳು ಕಂಡುಬರುವುದು, ಒಳಗೇ ಶಬ್ದಗಳು ಕೇಳಿಬರುವುದು, ಅಥವಾ ಒಳಗಡೆಯ ವಾಸನೆಗಳು, ರುಚಿ ಇಂಥವುಗಳು ತಿಳಿದುಬರುವುದು ಇಂತಹ ಬೇರೆ ಬೇರೆ ಅನುಭವಗಳೂ ಸಹ ಉಂಟಾಗುತ್ತವೆ. ಆದರೆ ಸಾಮಾನ್ಯವಾಗಿ ಇಂತಹವುಗಳ ಸಂಭಾವ್ಯತೆ ಕಡಿಮೆ. ಧ್ಯಾನದಲ್ಲಿ ನಿಮಗೆ ಉಂಟಾಗುವ ಬದಲಾವಣೆಗಳನ್ನು ಕರಾರುವಾಕ್ಕಾಗಿ ಗುರುತಿಸಿದರೆ, ಅವು ತುಂಬಾ ಸೂಕ್ಷ್ಮವಾಗಿರುತ್ತವೆ ಎಂಬುದು ತಿಳಿಯುತ್ತದೆ. `ಇದಿಷ್ಟೇ' ಎಂಬಂಥ ನಿಧರ್ಾರ, ನಿರ್ಣಯಗಳನ್ನು ಮಾಡುವುದನ್ನು ಬಿಟ್ಟುಬಿಡಿ. ತಾನಾಗಿಯೇ ಏನೇನಾಗುತ್ತದೆಯೋ ಅದನ್ನಷ್ಟೇ ಗಮನಿಸಿ.

 ಏನು ಬರುತ್ತದೆಯೋ ಅದನ್ನು ಬಂದ ಹಾಗೆಯೇ ಹೋಗಲು ಬಿಡಿ. ಧ್ಯಾನದಲ್ಲಿ ಯಾವುದೇ ಅನುಭವಗಳು ಉಂಟಾಗಲಿ, ಚಿಂತೆಯಿಲ್ಲ. ಧ್ಯಾನಾಭ್ಯಾಸವನ್ನು ನಿಯಮಿತವಾಗಿ ಮುಂದುವರೆಸಿ. ಜನರು ಧ್ಯಾನವನ್ನು ಕಲಿತು ಅಭ್ಯಾಸ ಮಾಡುವುದು ಬಹು ಮುಖ್ಯವಾದುದು, ಮತ್ತು ಆ ಮೂಲಕ ದೊರೆಯುವ ಉತ್ತಮ ಆಲೋಚನೆಗಳು,  ಉತ್ತಮ ಭಾವನೆಗಳು ಹಾಗೂ ಉತ್ತಮ ಹರ್ಷೋಲ್ಲಾಸಗಳಿಂದ ಅವರವರ ಕಾರ್ಯಕ್ಷೇತ್ರಗಳನ್ನು ಶ್ರೀಮಂತಗೊಳಿಸಿಕೊಳ್ಳಬೇಕು. ವ್ಯಕ್ತಿಗತ ಪರಿವರ್ತನೆಯೇ ಧ್ಯಾನದ ಉದ್ದೇಶ.  ಧ್ಯಾನದ ಅನುಭವಗಳ ಒಳಗೆ ಹೋಗುವಾಗಿನ `ನೀವು', ಅನುಭವಗಳನ್ನು ಪಡೆದು ಹೊರಬರುವಾಗ ಅದೇ `ನೀವು' ಆಗಿರುವುದಿಲ್ಲ. `ಧ್ಯಾನ' ಎಂಬುದು ಬದುಕನ್ನು ಉನ್ನತಿಗೆ ಕರೆದೊಯ್ಯುವ ವಿಧಾನ. ಸಂತೋಷಕರವಾದ, ಪ್ರಶಾಂತವಾದ ಮತ್ತು ಉಪಯುಕ್ತ  ಬದುಕನ್ನು ಜೀವಿಸಲು ಚಿಕ್ಕ ವಯಸ್ಸಿನಿಂದಲೇ ಅಂದರೆ ಸುಮಾರು 5 ವರ್ಷದ ವಯಸ್ಸಿನಿಂದಲೇ ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಧ್ಯಾನ ಸಾಧನೆ : ಧ್ಯಾನಿಯೊಬ್ಬನ ಸಾಧನಾ ಪ್ರಯಾಣದಲ್ಲಿ ಧ್ಯಾನ ವಿಜ್ಞಾನದ ಮೂರು ತತ್ವಗಳು ಕ್ರಮವಾಗಿ ಮೂರು ಮಹಾಘಟನೆಗಳ ರೂಪದಲ್ಲಿ ಸಾಕಾರಗೊಳ್ಳುತ್ತವೆ. 1. ದೈನಂದಿನ ಚಟುವಟಿಕೆಗಳ ಒಂದು ಭಾಗವಾಗಿ, ಕಡಿಮೆ ಸಮಯದ ಧ್ಯಾನಾಭ್ಯಾಸವು ಒತ್ತಡ, ಆತಂಕ ನಿವಾರಿಸಿ ಕ್ರಮತಪ್ಪಿದ ಜೀವನವನ್ನು ಕ್ರಮಬದ್ಧಗೊಳಿಸುತ್ತದೆ. 2. ಮಧ್ಯಮ ಪ್ರಮಾಣದಲ್ಲಿ ಸಮಯ ವ್ಯಯಿಸಿ ಮಾಡಿದ ಧ್ಯಾನಾಭ್ಯಾಸವು ಹಲವು ದೈಹಿಕ ಮತ್ತು ಮಾನಸಿಕ ರೋಗಗಳನ್ನು ನಿವಾರಿಸುತ್ತವೆ. 3. ಜೀವಿತಾವಧಿಯಲ್ಲಿ ದೀರ್ಘ ಸಮಯದ ಧ್ಯಾನಾಭ್ಯಾಸದಿಂದ ಆತ್ಮಸಾಕ್ಷಾತ್ಕಾರ ಉಂಟಾಗುತ್ತದೆ.

ಧ್ಯಾನ ಕುರಿತ ವೈಜ್ಞಾನಿಕ ಅಧ್ಯಯನಗಳು : 16 ವಾರಗಳ ಕಾಲದ ಒಂದು ಆಧ್ಯಯನದಲ್ಲಿ, ಹೃದಯ ಸಮಸ್ಯೆಗಳಿರುವ ರೋಗಿಗಳು ನಿಯಮಿತವಾಗಿ ಧ್ಯಾನ ಮಾಡುವುದರಿಂದ ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಇನ್ಸುಲಿನ್ ಮಟ್ಟ ಈ ಸಮಸ್ಯೆಗಳಲ್ಲಿ ಗಣನೀಯ ಸುಧಾರಣೆಯು ಕಂಡುಬಂದಿತು (ಅಮೆರಿಕದ ವೈದ್ಯಕೀಯ ಸಂಘದ ನಿಯತಕಾಲಿಕೆಯಲ್ಲಿ ಪ್ರಕಟಿತ `ಆಂತರಿಕ ಔಷಧಿಗಳು'  ಹೆಸರಿನ  ಅಧ್ಯಯನ ವರದಿ) ``ಅಪರಾಧಗಳ ಸಂಭವನೀಯತೆಯ ಮೇಲೆ ಸಾಮೂಹಿಕ ಧ್ಯಾನದ ಪರಿಣಾಮ'' ಕುರಿತ ಒಂದು ಅಧ್ಯಯನವನ್ನು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಕೈಗೊಳ್ಳಲಾಗಿತ್ತು. ಅದರಲ್ಲಿ 4000 ಖೈದಿಗಳು ಧ್ಯಾನಶಿಬಿರದಲ್ಲಿ ಭಾಗವಹಿಸಿದ್ದರು. ಫಲಿತಾಂಶವಾಗಿ, ಶೇ.25ರಷ್ಟು ಅಪರಾಧಗಳ ಸಂಖ್ಯೆ ಇಳಿಮುಖವಾದದ್ದು ದಾಖಲಾಗಿದೆ. ಹಲವು ಸಾವಿರ ಸಂಖ್ಯೆಯಲ್ಲಿ ಸೇರಿ ಮಾಡಲಾದ ಸಾಮೂಹಿಕ ಧ್ಯಾನವು ನಗರದಲ್ಲಿನ ಲಕ್ಷಾಂತರ ಜನರನ್ನು ಪ್ರಭಾವಿಸಿತು.

 ಸಾಮಾಜಿಕ ಸೂಚ್ಯಂಕಗಳ ಸಂಶೋಧನೆ : 1999 ಹಿಂಸಾ ಪ್ರಕರಣಗಳ ಇಳಿಕೆಯಲ್ಲಿ ಧ್ಯಾನದ  ಪರಿಣಾಮವನ್ನು ಅಧ್ಯಯನ ಮಾಡಲು 1980ರಲ್ಲಿ ನಡೆದ ಇಸ್ರೇಲ್-ಲೆಬನಾನ್ ಯುದ್ಧ ಕಾಲದಲ್ಲಿ 821ದಿನಗಳ ಕಾಲ ಪ್ರಯೋಗಗಳನ್ನು ನಡೆಸಲಾಯಿತು. ಫಲಿತಾಂಶವಾಗಿ, ಹಿಂಸಾ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದ್ದು ಕಂಡುಬಂತು.

ಧ್ಯಾನದ ಮೂಲಕ ಒಬ್ಬ ವ್ಯಕ್ತಿಯು ತನ್ನ ವಂಶವಾಹಿಗಳು ಮತ್ತು ಡಿ.ಎನ್.ಎ.ಗಳಲ್ಲಿ ಅನುಕೂಲಕರ ಬದಲಾವಣೆಗಳನ್ನು ತಂದುಕೊಳ್ಳಬಹುದು. ವಂಶವಾಹಿ ಮತ್ತು ಡಿ.ಎನ್.ಎ.ಗಳಲ್ಲಿನ ಮಾದರಿಗಳನ್ನು ಮತ್ತು ಕಾರಣಮಯ, ಪ್ರಾಣಮಯ ಮತ್ತು ಮನೋಮಯ ಶರೀರಗಳ ಶಾಶ್ವತ ಕಣಗಳನ್ನು ಸಂಪರ್ಕಿಸುವ ಮೂಲಕ  ಇಂತಹ ಬದಲಾವಣೆಯನ್ನು ತಂದುಕೊಳ್ಳಬಹುದು. ಜೀವನವನ್ನು ಉತ್ತಮವಾಗಿ ತಿಳಿದುಕೊಳ್ಳಲು ಮತ್ತು ಜೀವನದ ಉನ್ನತ ಸತ್ಯಗಳನ್ನು, ಸಕಾಲದಲ್ಲಿ, ಸಾಕ್ಷಾತ್ಕರಿಸಿಕೊಳ್ಳಲು ಸಹಾಯಕವಾದ ಹಲವಾರು ಪ್ರಬಲ ಉಪಕರಣಗಳಲ್ಲಿ ಧ್ಯಾನವೂ ಸಹ ಒಂದು ಉಪಕರಣ. ಇವೆಲ್ಲವೂ ಸಹ ಧ್ಯಾನ ವಿಜ್ಞಾನದ ಮೂಲಕ ಸುಸಾಧ್ಯಗೊಳ್ಳುತ್ತವೆ.

ಉಸಿರಾಟದ ಮೇಲೆ ಗಮನವಿರಿಸಿ ಮಾಡುವ ಧ್ಯಾನವನ್ನು ವೈಜ್ಞಾನಿಕವಾಗಿ, ಉಚಿತವಾಗಿ ಬೋಧಿಸುವ ಅಂತಾರಾಷ್ಟ್ರೀಯ ಕೇಂದ್ರವು ಬೆಂಗಳೂರು-ಕನಕಪುರ ರಸ್ತೆಯಲ್ಲಿನ ಹಾರೋಹಳ್ಳಿಯ ಬಳಿಯ ಕೆಬ್ಬೆದೊಡ್ಡಿ ಗ್ರಾಮದಲ್ಲಿ ನೆಲೆಗೊಂಡಿದೆ. `ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಹೆಸರಿನ ಆ ಸ್ಥಳದಲ್ಲಿ ಧ್ಯಾನಕ್ಕೆಂದೇ ನಿಮರ್ಿಸಲಾದ ಏಷ್ಯಾದ ಅತಿದೊಡ್ಡ ಪಿರಮಿಡ್ ಇದೆ.

ಧ್ಯಾನ ವಿಜ್ಞಾನ

 ಧ್ಯಾನ ವಿಜ್ಞಾನ ಇಂಗ್ಲಿಷ್ ಮೂಲ : ಡಾ.ಪಿ.ವಿ.ಶರ್ಮಾ, ಯೋಗ ಎಂದರೆ ಕೇವಲ ಯೋಗಾಸನಗಳಲ್ಲ. `ಯೋಗ ಎಂದರೆ ಚಿತ್ತವೃತ್ತಿ ನಿರೋಧ ಎಂದು ಪತಂಜಲಿ ಋಷಿಗಳು ವ್ಯಾಖ್ಯಾನಿಸಿದ್ದಾರೆ...


 ಸವಾಲುಗಳನ್ನು ಸ್ವೀಕರಿಸಿ !!!ಫಲಿತಾಂಶದ ಒತ್ತಡಕ್ಕೆ ಸಿಲುಕಿ ಖಿನ್ನರಾಗದಿರಿ!
- ಡಾ. ಶಾಲಿನಿ ರಜನೀಶ್,

ಇಂದಿನ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಫೇಲಾದೆವೆಂದೋ ಅಥವಾ ಅಂಕಗಳು ಕಡಿಮೆಯಾದವೆಂದೋ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಅಥವಾ ಆತ್ಮಹತ್ಯೆಯಂತಹ ದುರಂತಕ್ಕೆ ಕೈ ಹಾಕುವುದನ್ನು ಪ್ರತಿವರ್ಷ ಪತ್ರಿಕೆಗಳಲ್ಲಿ ಓದುತ್ತೇವೆ. ಮನುಷ್ಯನ ಬದುಕಿನಲ್ಲಿ, ಶಾಲಾ ಶಿಕ್ಷಣದಲ್ಲಿ ಪರೀಕ್ಷೆಗಳು ಅತ್ಯಗತ್ಯ. ಆದರೆ ಫೇಲಾಗುವುದು ಅಥವಾ ಅಂಕಗಳು ಕಡಿಮೆಯಾಗುವುದನ್ನು ಬದುಕಿನ ಕೊನೆಯ ಘಟ್ಟವಲ್ಲ. ಫೇಲಾದ ವಿದ್ಯಾರ್ಥಿ ಅದನ್ನು ಅಪಮಾನ ಎಂದು ಭಾವಿಸಿ ಎದೆಗುಂದದೆ, ಗೆಲುವಿಗೆ ಸೋಲೇ ಮೊದಲ ಮೆಟ್ಟಿಲು ಎಂದು ಪರಿಭಾವಿಸುವಂತಾಗಬೇಕು.

ಅದನ್ನು ಛಲವಾಗಿ ಸ್ವೀಕರಿಸಿ, ಗಟ್ಟಿ ತೀರ್ಮಾನ ಮಾಡಿ ಸಾಧನೆ ಮಾಡಲು ನಿಯತವಾಗಿ, ನಿರಂತರವಾಗಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಯಲ್ಲಿ ಗಟ್ಟಿತನ ತುಂಬುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯ. ಅಭ್ಯಾಸದಿಂದ ಪರಿಪೂರ್ಣತೆ ಸಿದ್ಧಿಸುತ್ತದೆ ಎಂಬ ನುಡಿಗಟ್ಟಿದೆ. ಆದರೆ ಒಬ್ಬರಿಗೆ ಎಷ್ಟು ಅಭ್ಯಾಸ ಅಗತ್ಯ ಎನ್ನುವುದು ಮಾಡಬೇಕಾದ ಚಟುವಟಿಕೆಯ ಸ್ವರೂಪ ಮತ್ತು ವ್ಯಕ್ತಿಯ ಮೇಲೆ ಅವಲಂಬಿಸಿರುತ್ತದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಯೋಜನೆ ರೂಪಿಸಬೇಕಾಗುತ್ತದೆ.

ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅದ್ಭುತ ಕನಸುಗಳನ್ನಿಟ್ಟುಕೊಂಡು ಸಾಧಿಸಿ ತೋರಿಸಿದ ಅನೇಕ ಮಹನೀಯರು ನಮ್ಮೆದುರಿಗೆ ಇದ್ದಾರೆ. ಅಂತಹವರನ್ನು ನಾವು ಆದರ್ಶವಾಗಿಟ್ಟುಕೊಳ್ಳಬೇಕು.  ತಂದೆ ತಾಯಿಯರ ಕನಸುಗಳನ್ನು ನನಸಾಗಿಸುವುದು ಮಕ್ಕಳ ಕರ್ತವ್ಯ. ಒಮ್ಮೆ ಸೋತರೇನಂತೆ ಮತ್ತೆ ಪ್ರಯತ್ನಿಸಿ ಯಶಸ್ಸಿನ ಗುರಿ ಮುಟ್ಟಬಹುದು. ಬದುಕಿನಲ್ಲಿ ಸೋಲುಗಳು ಎದುರಾದಾಗ ಹೆದರದೆ ಆತ್ಮಬಲದಿಂದ ಅವುಗಳನ್ನು ಎದುರಿಸಿ ಮನ್ನಡೆದರೆ ಗುರಿ ತಲುಪುವುದು ಶತಸ್ಸಿದ್ಧ.

ಶಿಕ್ಷಕರೇ, ಇಲ್ಲಿ ನೀಡಿರುವ ಎರಡು ಉದಾಹರಣೆಗಳನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ.

ರುಕ್ಮಣಿ ರಿಯಾರ್, ಐ.ಎ.ಎಸ್.
ಅಖಿಲ ಭಾರತದ ಯುಪಿಎಸ್ಸಿ ಪರೀಕ್ಷೆ-2011 ರಲ್ಲಿ ಎರಡನೇ ರ್ಯಾಂಕ್ ಪಡೆದ ರುಕ್ಮಣಿ ರಿಯಾರ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾದವರು. ಯಾವುದೇ ಕೋಚಿಂಗ್ಗೆ ಹೋದವರಲ್ಲ, ಅದರಲ್ಲಿ ನನಗೆ ನಂಬಿಕೆ ಇಲ್ಲ ಎನ್ನುತ್ತಾರೆ. ಮೂಲತಃ ಚಂಡೀಗಢದವರಾದ ರುಕ್ಮಣಿ ರಿಯಾರ್, ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಸಾಮಾಜಿಕ ಉದ್ಯಮಶೀಲತೆ ವಿಷಯದಲ್ಲಿ ಸ್ನಾತಕೋತ್ತರ  ಪದವಿಯನ್ನು ಪಡೆದಿದ್ದಾರೆ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ನೀವು ನಿಮ್ಮ ಪರೀಕ್ಷೆಯ ಸಿದ್ಧತೆಯಲ್ಲಿ ಸ್ಥಿರವಾಗಿ ಮತ್ತು ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದರೆ, ಯಾವುದೇ ತರಬೇತಿ ಇಲ್ಲದೆ ನೀವು ಪರೀಕ್ಷೆಯಲ್ಲಿ ಪಾಸಾಗಬಹುದು ಎಂದು ಹೇಳುತ್ತಾರೆ. ರುಕ್ಮಿಣಿಯವರು ಯುಪಿಎಸ್ಸಿ ಪರೀಕ್ಷೆಗಾಗಿ ರಾಜಕೀಯ ವಿಜ್ಞಾನ ಮತ್ತು ಸಮಾಜಶಾಸ್ತ್ರವನ್ನು ತಮ್ಮ ಮುಖ್ಯ ವಿಷಯವಾಗಿ ಆಯ್ಕೆ ಮಾಡಿಕೊಂಡದ್ದು ಟಾಪರ್ ಆಗಲು ಸಹಾಯವಾಯಿತೆಂದು ತಿಳಿಸಿದ್ದಾರೆ.

ನಾನು ಯಾವಾಗಲೂ ನನ್ನ ದೇಶಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂದು ಕನಸು ಕಾಣುತ್ತಿದ್ದೆ. ಅದೀಗ ನೆರವೇರಿದೆ ಇದಕ್ಕೆ ಕಾರಣ ನನ್ನ ದೃಢನಿಶ್ಚಯ ಮತ್ತು ನಿರಂತರ ಸಾಧನೆ, ಇದನ್ನು ಎಲ್ಲರೂ ನಂಬಲೇಬೇಕು. ಎನ್ನುವ ರಿಯಾರ್ ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿನ ಯೋಜನಾ ಆಯೋಗದ ಸ್ವಯಂಸೇವಕ ತಂಡಗಳೊಂದಿಗೆ ಕಾರ್ಯನಿರತರಾಗಿದ್ದಾರೆ. ವಿವಿಧ ಸಾಮಾಜಿಕ ನೀತಿಗಳ ಸಂಶೋಧನೆ, ಅರ್ಥಮಾಡಿಕೊಳ್ಳುವಿಕೆ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಲು ಸಹಾಯ ಮಾಡುವ ವಿಧಾನಗಳನ್ನು ಕಂಡುಕೊಂಡಿದ್ದಾರೆ.

ಆದರೆ ಈ ಯಶಸ್ಸಿನ ಹಿಂದೆ ಸೋಲಿನ ಕತೆಯೊಂದಿದೆ ಎಂಬುದನ್ನು ನೀವು ನಂಬಲೇಬೇಕು ಎನ್ನುವ ರುಕ್ಮಣಿ ರಿಯಾರ್ ಅವರು ನಾನು ಡಾಲ್ ಹೌಸಿ ಸೇಕ್ರೆಡ್ಹಾರ್ಟ್ ಬೋರ್ಡಿಂಗ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಪರೀಕ್ಷಾ ಭಯದಿಂದ ಒತ್ತಡಕ್ಕೊಳಗಾಗಿ ಫೇಲಾದೆ, ನಂತರ ಫೇಲಾದ ಹೆದರಿಕೆಯಿಂದ ತುಂಬಾ ಖಿನ್ನತೆಯನ್ನು ಅನುಭವಿಸಿದೆ. ಆದರೆ ನಾನು ನನ್ನೊಳಗೆ ಗಟ್ಟಿ ತೀರ್ಮಾನ ಮಾಡಿದೆ. ನಾನು ಸೋಲನ್ನು ದೂರಬಾರದು! ನಾನು ಗೆದ್ದೇ ಗೆಲ್ಲುತ್ತೇನೆ! ಎಂಬ ದೃಢ ವಿಶ್ವಾಸದಿಂದ  ನಿರಂತರವಾಗಿ ಶ್ರಮವಹಿಸಿ ಓದಿ ಬರೆದೆ,  ಆ ಸಾಧನೆಯ ಫಲವೇ ಇಂದು ನಾನು ಐಎಎಸ್ ಆಗಲು ಸಹಕಾರ ನೀಡಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಸೋಲಿನಿಂದ ಕಂಗಾಲಾದ ಹಂತದಿಂದ ಹೊರಬರಲು ಒಬ್ಬ ವ್ಯಕ್ತಿ ದೃಢವಾಗಿ ನಿರ್ಧರಿಸಿ ಎದ್ದು ನಿಂತರೆ, ನೀವು ಯಶಸ್ಸಿನ ಮೆಟ್ಟಿಲೇರುವುದನ್ನು ಯಾರೂ ನಿಲ್ಲಿಸಲಾರರು ಎಂಬುದು ಅವರ ಅಭಿಮತ. ನಾನು ಸೋತು ಕಂಗೆಟ್ಟಾಗ ನನಗೆ ಆದರ್ಶವಾದ ಕೆಲವು ಮಹನೀಯರಿದ್ದಾರೆ, ಅವರೂ ನನ್ನ ಹಾಗೆ ಜೀವನದಲ್ಲಿ ಸೋಲನ್ನು ಗೆಲುವಿನ ಹಾದಿಯನ್ನಾಗಿ ಮಾಡಿಕೊಂಡು ವಿಶ್ವ ಮಟ್ಟದಲ್ಲಿ ಹೆಸರಾದವರು. ಭಾರತದ ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಮ್, ಮಾಜಿ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್, ಖ್ಯಾತ ಚಲನಚಿತ್ರ ನಟರಾದ ಅಮೀರ್ಖಾನ್, ಶಾರೂಖ್ಖಾನ್, ಇವರೆಲ್ಲರ ಜೀವನ ಕಥನಗಳಿಂದ ನಾನು ಸ್ಫೂರ್ತಿಯನ್ನು ಪಡೆದಿದ್ದೇನೆ ಎನ್ನುತ್ತಾರೆ ರುಕ್ಮಿಣಿ ರಿಯಾರ್.

ಅರುಣಿಮಾ ಸಿನ್ಹಾ:
ಅರುಣಿಮ ಸಿನ್ಹಾ ಹುಟ್ಟಿದ್ದು 1988 ರಲ್ಲಿ. ಮೌಂಟ್ ಎವರೆಸ್ಟ್ ಅನ್ನು ಏರಿದ ಭಾರತದ ಮೊದಲ ವಿಕಲಚೇತನ  ಮಹಿಳೆ. ಮಾಜಿ ರಾಷ್ಟ್ರೀಯ ವಾಲಿಬಾಲ್ ಮತ್ತು ಫುಟ್ಬಾಲ್ ಆಟಗಾತರ್ಿ ಅರುಣಿಮಾ ಸಿನ್ಹಾ ಸಿಐಎಸ್ಎಫ್ ಗೆ ಸೇರುವ ಪರೀಕ್ಷೆ ಬರೆಯಲು ಏಪ್ರಿಲ್ 12-2011 ರಂದು ದೆಹಲಿಗೆ ಹೋಗಲು ಲಕ್ನೋದಲ್ಲಿ ಪದ್ಮಾವತಿ ಎಕ್ಸ್ಪ್ರೆಸ್ ರೈಲಿಗೆ ಹತ್ತಿದರು. ಅದೇ ರೈಲಿನಲ್ಲಿದ್ದ ಕಳ್ಳರು ಅವರ ಚೀಲ ಮತ್ತು ಚಿನ್ನದ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಅರುಣಿಮಾ ಬಲವಾದ ಪ್ರತಿರೋಧ ಒಡ್ಡಿದರು. ರೈಲ್ವೆ ಕಳ್ಳರಿಂದ ಚಲಿಸುವ ರೈಲಿನಿಂದ ಕೆಳಗೆ ತಳ್ಳಲ್ಪಟ್ಟರು. ಆಗ ಪಕ್ಕದ ಹಳಿಯ ಮೇಲೆ ಬಂದ ರೈಲಿನಡಿ ಇವರ ಕಾಲುಗಳು ಸಿಕ್ಕಿಹಾಕಿಕೊಂಡವು. ಪರಿಣಾಮವಾಗಿ ಅವರ ಕಾಲುಗಳಲ್ಲಿ ಒಂದನ್ನು ಮೊಣಕಾಲಿನ ಕೆಳಗೆ ಕತ್ತರಿಸಲಾಯಿತು.

ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರತರವಾದ ಪೆಟ್ಟು ಬಿದ್ದಿದ್ದರಿಂದ ಅವರ ಜೀವವನ್ನು ರಕ್ಷಿಸಲು ವೈದ್ಯರು ಕಾಲನ್ನು ಕತ್ತರಿಸಲೇಬೇಕಾಯಿತು. ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತು. ಇಂಡಿಯನ್ ಕ್ರೀಡಾ ಸಚಿವಾಲಯವು ಅವರಿಗೆ 25,000 ರೂ. ಪರಿಹಾರವನ್ನು ನೀಡಿತು. ರಾಷ್ಟ್ರೀಯ ದೌರ್ಜನ್ಯವೆಂದು ಪರಿಗಣಿಸಿ ಯುವ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಅಜಯ್ ಮಾಕೆನ್ ರೂ. 2,00,000 ವೈದ್ಯಕೀಯ ಪರಿಹಾರ ನೀಡುವುದರ ಜೊತೆಗೆ, ಸಿಐಎಸ್ಎಫ್ ಗೆ ಕೆಲಸಕ್ಕೆ ಶಿಫಾರಸ್ಸು ಮಾಡಿ ಭಾರತೀಯ ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸಿದರು. 18 ಏಪ್ರಿಲ್ 2011 ರಂದು ಉನ್ನತ ಚಿಕಿತ್ಸೆಗಾಗಿ ಅರುಣಿಮ ಸಿನ್ಹಾ ಅವರನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಗೆ ಕರೆತರಲಾಯಿತು. ಚಿಕಿತ್ಸೆಯ ನಂತರ ದೆಹಲಿ ಮೂಲದ ಭಾರತೀಯ ಖಾಸಗಿ ಕಂಪೆನಿಯವರು ಅವರಿಗೆ ಉಚಿತವಾಗಿ ಕೃತಕ ಕಾಲನ್ನು ದೇಣಿಗೆ ನೀಡಿದರು.

ಈ ಘಟನೆಯ ಕುರಿತು ತನಿಖೆ ನಡೆಸಿದ್ದು ಪೊಲೀಸರು ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಅಥವಾ ರೈಲ್ವೆ ಟ್ರ್ಯಾಕ್ಗಳನ್ನು ದಾಟುವಾಗ ಅಪಘಾತವಾಗಿರಬಹುದು ಎಂದು ವರದಿ ನೀಡಿದರು. ಪೊಲೀಸರ ವರದಿ ಸುಳ್ಳು ಎಂದು ಅರುಣಿಮಾ ನಿರೂಪಿಸಿದರು. ಆಗ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠವು ಭಾರತೀಯ ರೈಲ್ವೆಗಳಿಗೆ ರೂ. 5,00,000(ಐದು ಲಕ್ಷ ರೂ.) ಪರಿಹಾರವನ್ನು ಅರುಣಿಮಾ ಸಿನ್ಹಾಗೆ ಪಾವತಿಸಲು ಆದೇಶಿಸಿತು.

ಆಲ್ ಇಂಡಿಯಾ ಇನ್ಸ್ಟ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅರುಣಿಮಾ ಸಿನ್ಹಾ ಅವರು ಮೌಂಟ್ ಎವರೆಸ್ಟ್ ಅನ್ನು ಏರಲು ನಿರ್ಧರಿಸಿದರು. ಜೀವನದಲ್ಲ್ಲಿ ಏನನ್ನಾದರೂ ಸಾಧಿಸಲೇಬೇಕೆಂಬ ಧೃಢನಿಧರ್ಾರ ಮಾಡಿದರು. ಅದೇ ಸಮಯಕ್ಕೆ ಭಾರತದ ಸುಪ್ರಸಿದ್ಧ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಡಿ ಯಶಸ್ವಿಯಾದ ಪ್ರಸಂಗವನ್ನು ಕಿರುತೆರೆ ಕಾರ್ಯಕ್ರಮಗಳಿಂದ ನೋಡಿ ಪ್ರೇರಣೆ ಪಡೆದರು. ಉತ್ತರಕಾಶಿಯ ನೆಹರು ಪರ್ವತಾರೋಹಣ ಸಂಸ್ಥೆಯು ನಡೆಸಿದ ಪರ್ವತಾರೋಹಣದಲ್ಲಿ ಭಾಗಿಯಾಗಿ ಯಶಸ್ವಿಯಾದರು. ಇದಕ್ಕೆ ಅವರ ಹಿರಿಯ ಸಹೋದರ ಓಂಪ್ರಕಾಶ್ ಅವರ ಸಂಪೂರ್ಣ ಬೆಂಬಲವಿತ್ತು.

ತಮ್ಮ ಕನಸುಗಳು ಭಗ್ನಗೊಂಡರೂ ಏನನ್ನಾದರೂ ಸಾಧಿಲೇಬೇಕು ಎಂಬ ಛಲದಿಂದ ವಿಶ್ವದ ಎಲ್ಲಾ  ಖಂಡಗಳಲ್ಲಿರುವ ವಿಶ್ವದ ಅತೀ ಎತ್ತರದ ಶಿಖರಗಳನ್ನು ಏರಿ ಅಲ್ಲಿ ಭಾರತದ ತ್ರಿವರ್ಣಧ್ವಜವನ್ನು ಹಾರಿಸುವ ಹೆಬ್ಬಕೆಯನ್ನು ಇರಿಸಿಕೊಂಡರು. ಈ ನಿಟ್ಟಿನಲ್ಲಿ ಅವರು ಈಗಾಗಲೇ ಭಾರತದಲ್ಲಿನ ಮೌಂಟ್ ಎವರೆಸ್ಟ್, ಆಫ್ರಿಕಾದಲ್ಲಿ ಕಿಲಿಮಾಂಜರೋ, ಯೂರೋಪಿನಲ್ಲಿ ಎಲ್ಬ್ರಸ್, ಆಸ್ಟ್ರೇಲಿಯಾದಲ್ಲಿ ಕೊಸ್ಸಿಯಸ್ಜ್ಕೋ, ಅರ್ಜೆಂಟೈನಾದ ಅಕೊನ್ಕಾಗುವಾ ಮತ್ತು ಇಂಡೋನೇಷ್ಯಾದಲ್ಲಿ ಕಾಸ್ಟರ್ೆನ್ಸ್ಜ್ ಪಿರಮಿಡ್ (ಪುನ್ಕಾಕ್ ಜಯಾ) ಎಂಬ ಆರು ಶಿಖರಗಳನ್ನು ಏರಿ ದಾಖಲೆ ಮಾಡಿದ್ದಾರೆ

 ವಿಶ್ವ ಅರಣ್ಯ ದಿನ

ಮಾರ್ಚ್ 21 ರಂದು ವಿಶ್ವ ಅರಣ್ಯ ದಿನ. ಪ್ರಕೃತಿಯ ಸಮತೋಲನಕ್ಕೆ ಮರ-ಗಿಡಗಳ ಪಾತ್ರ ಬಹುದೊಡ್ಡದು. ಇರುವೆಯಿಂದ ಮಾನವನವರೆಗೆ ಸಕಲ ಜೀವಕೋಟಿಗೆ ಆಹಾರ, ನೀರು, ಶುದ್ಧಗಾಳಿ, ಜೀವರಕ್ಷಕ ಗಿಡಮೂಲಿಕೆಗಳು, ಹಣ್ಣು ಹಂಪಲುಗಳು, ರಬ್ಬರ್ನಿಂದ ಹಿಡಿದು, ಅಮೂಲ್ಯ ಮರ-ಮುಟ್ಟುಗಳವರೆಗೆ ಎಲ್ಲವೂ ಪ್ರಕೃತಿಯಿಂದಲೇ ಅಂದರೆ ಅರಣ್ಯ ಪ್ರದೇಶಗಳಿಂದಲೇ ಬರಬೇಕು. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ, ಕಾಸ್ಮೋಪಾಲಿಟನ್ ನಗರಗಳ ವಾಯು, ಜಲ ಮಾಲಿನ್ಯಗಳಿಂದ ಆಗುತ್ತಿರುವ ಪರಿಸರ ಹಾನಿಗೆ ತಡೆಯೊಡ್ಡುವ ಬಹುದೊಡ್ಡ ಮಾರ್ಗವೆಂದರೆ ಅರಣ್ಯಪ್ರದೇಶಗಳನ್ನು ಉಳಿಸಿ-ಬೆಳೆಸುವುದು. ಅರಣ್ಯ ಪ್ರದೇಶಗಳು ಹೆಚ್ಚಿರುವ ಕಡೆ ಹೆಚ್ಚು ಮಳೆಯಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಮಟ್ಟದಲ್ಲಿ ಪರಿಸರ ವಿಜ್ಞಾನಿಗಳು ಮತ್ತು ಪರಿಸರವಾದಿಗಳೆಲ್ಲ ಸೇರಿ ಮಾರ್ಚ್ 21 ನ್ನು ಇಂಟರ್ ನ್ಯಾಷನಲ್ ಡೇ ಆಫ್ ಫಾರೆಸ್ಟ್ ಅಥವಾ ವಿಶ್ವ ಅರಣ್ಯದಿನವೆಂದು ಘೋಷಿಸಿದ್ದಾರೆ. ಭಾರತ ದೇಶದ ಅರಣ್ಯ ಪ್ರದೇಶವು ದೇಶದ ಭೌಗೋಳಿಕ ಪ್ರದೇಶದ ಪ್ರತಿ ಶತ 21.34 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಶೇ. 33 ರಷ್ಟಿರಬೇಕು ಎಂದು ಪರಿಸರ ವಿಜ್ಞಾನ ಹೇಳಿದೆ. ದೇಶದಲ್ಲಿ ಸುಮಾರು 2,510 ಚದರ ಕಿ.ಮೀ. ಅತ್ಯಂತ ದಟ್ಟ ಕಾಡುಗಳು ಇಲ್ಲಿಯವರೆಗೆ ನಾಶಗೊಂಡಿವೆ ಎಂದು ಭಾರತದ ರಾಜ್ಯಗಳ ಅರಣ್ಯ ವರದಿ-2015 ಹೇಳುತ್ತದೆ. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಮೇಘಾಲಯ, ಕೇರಳ, ಅರುಣಾಚಲ ಪ್ರದೇಶ, ಕನರ್ಾಟಕ ಮತ್ತು ತೆಲಂಗಾಣ ರಾಜ್ಯಗಳು ಅರಣ್ಯ ಪ್ರದೇಶಗಳ ನಷ್ಟವನ್ನು ಅನುಭವಿಸಿವೆ.

ನವೆಂಬರ್ 28, 2012 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ನಿರ್ಣಯದಿಂದ ಮಾರ್ಚ್ 21 ರಂದು ದಿ ಇಂಟರ್ ನ್ಯಾಷನಲ್ ಡೇ ಆಫ್ ಫಾರೆಸ್ಟ್ ಘೋಷಿಸಲಾಯಿತು. ಪ್ರತಿ ವರ್ಷವೂ, ವಿವಿಧ ಸಂಘಟನೆಗಳು ಈ ದಿನವನ್ನು ಆಚರಿಸುತ್ತವೆ. ನಮ್ಮ ಮುಂದಿರುವ ಬಹುದೊಡ್ಡ ಸವಾಲೆಂದರೆ ನಮ್ಮ ಮುಂದಿನ ಪೀಳಿಗೆಗೆ ಏನನ್ನು ಬಿಟ್ಟು ಹೋಗುತ್ತಿದ್ದೇವೆ' ಎನ್ನುವುದಾಗಿದೆ. ಅಂತಾರಾಷ್ಟ್ರೀಯ ಅರಣ್ಯ ದಿನದಂದು ಪರಿಸರದ ದಿನದಂತೆಯೇ ಗಿಡ ನೆಡುವಿಕೆಯ ಕಾರ್ಯಕ್ರಮಗಳು ವಿಶ್ವದೆಲ್ಲ್ಲೆಡೆ ನಡೆಯುತ್ತವೆ. ಅರಣ್ಯಗಳು ಮತ್ತು ಮರಗಳನ್ನು ರಕ್ಷಿಸುವ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಟುವಟಿಕೆಗಳನ್ನು ಸಂಘಟಿಸುವ ಪ್ರಯತ್ನಗಳನ್ನು ಕೈಗೊಳ್ಳಲು ಎಲ್ಲಾ ದೇಶಗಳು ಪ್ರೋತ್ಸಾಹಿಸುತ್ತಿವೆ. ವಿಶೇಷವಾಗಿ ಅರಣ್ಯಗಳ ರಕ್ಷಣೆಗಾಗಿ ಯುನೈಟೆಡ್ ನೇಷನ್ಸ್ ಫೋರಂನ ಸಚಿವಾಲಯ, ಆಹಾರ ಮತ್ತು ಕೃಷಿ ಸಂಘಟನೆಯ ಸಹಯೋಗದೊಂದಿಗೆ ವಿವಿಧ ದೇಶಗಳ ಸಹಯೋಗದಲ್ಲಿ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅರಣ್ಯಗಳನ್ನು ಉಳಿಸುವ ಮತ್ತು ಬೆಳೆಸುವ ಸಹಭಾಗಿತ್ವದಲ್ಲಿ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳು ಸೇರಿ ಮಾರ್ಚ್ 21, 2013 ರಂದು ಅರಣ್ಯದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.

ಇತಿಹಾಸ : ಪ್ರತಿ ವರ್ಷ 13 ಮಿಲಿಯನ್ ಹೆಕ್ಟೇರ್ನಷ್ಟು (32 ಮಿಲಿಯನ್ ಎಕರೆ) ಕಾಡುಗಳು ಕಣ್ಮರೆಯಾಗುತ್ತಿವೆ. ಮುಖ್ಯವಾಗಿ ಕಾಡುಗಳು ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹವಾಮಾನ ಬದಲಾವಣೆಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ವಿಶ್ವದ ಕಾರ್ಬನ್ ಹೆಚ್ಚಳಕ್ಕೆ ಶೇಕಡ 12-18 ರಷ್ಟು ಅರಣ್ಯ ನಾಶವೇ ಕಾರಣವಾಗಿದೆ. ಅರಣ್ಯಗಳು ವಿಶ್ವದ ಶೇ.30ಕ್ಕಿಂತ ಹೆಚ್ಚಿನ ಭಾಗ ಹೊಂದಿವೆ. 60,000 ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಿಡಗಳನ್ನು ಹೊಂದಿವೆ. ಕಾಡುಗಳಿಂದ ಸುಮಾರು 1.6 ಶತಕೋಟಿ ವಿಶ್ವದ ಬಡಜನರಿಗೆ ಆಹಾರ, ಫೈಬರ್, ನೀರು ಮತ್ತು ಔಷಧಿಗಳನ್ನು ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ 1971 ರ ನವೆಂಬರ್ನಲ್ಲಿ, ಆಹಾರ ಮತ್ತು ಕೃಷಿ ಸಂಘಟನೆಯ ಸಮ್ಮೇಳನದ 16 ನೇ ಅಧಿವೇಶನದಲ್ಲಿ ಅಮೆರಿಕನ್ ಸ್ಟೇಟ್ಸ್ ಸದಸ್ಯರು ಪ್ರತಿ ವರ್ಷ ಮಾರ್ಚ್ 21 ರಂದು ವರ್ಲ್ಡ್ ಫಾರೆಸ್ಟ್ರಿ ಡೇ ಆರಂಭಿಸಲು ನಿರ್ಧರಿಸಿದರು. ಇಂಟರ್ನ್ಯಾಷನಲ್ ಫಾರೆಸ್ಟ್ರಿ ರಿಸರ್ಚ್ ಸೆಂಟರ್ ಯುನೈಟೆಡ್ ನೇಷನ್ಸ್ ಫ್ರೇಮ್ವರ್ಕ್ಸ್ ಕನ್ವೆನ್ಷನ್ನ ವಾಷರ್ಿಕ ಸಭೆಯಲ್ಲಿ ಇತರ ಸಮಾನ ಮನಸ್ಕ ಸಂಘಟನೆಗಳೊಡನೆ ಸೇರಿ 2011 ರಲ್ಲಿ ಅಂತಾರಾಷ್ಟ್ರೀಯ ಅರಣ್ಯಗಳ ವರ್ಷ ಎಂದು ಘೋಷಿಸಿತು. ನಂತರ ನವೆಂಬರ್ 28, 2012 ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ  ಅಂತಾರಾಷ್ಟ್ರೀಯ ಅರಣ್ಯ ದಿನವನ್ನಾಗಿ ಆಚರಿಸಲು ನಿರ್ಣಯಿಸಲಾಯಿತು.

ಭಾರತದಲ್ಲಿ ಅರಣ್ಯಗಳು: ಭಾರತದಲ್ಲಿ ಅರಣ್ಯಗಳು ರಬ್ಬರ್ ಹಾಲು, ಅಂಟುದ್ರವಗಳು, ತೈಲಗಳು, ಸುವಾಸನಾಯುಕ್ತ ಸುಗಂಧ ದ್ರವ್ಯಗಳು, ಪರಿಮಳ ರಾಸಾಯನಿಕಗಳು, ಧೂಪದ್ರವ್ಯಗಳಲ್ಲದೆ ಕರಕುಶಲ ವಸ್ತುಗಳಿಗೆ ಬೇಕಾಗವ ಹಲವು ಜಾತಿಯ ಮರಗಳು ಮತ್ತು ಔಷಧೀಯ ಸಸ್ಯಗಳನ್ನು ಉತ್ಪಾದಿಸುವ ಉದ್ಯಮವನ್ನು ಹೊಂದಿವೆ. ಅಲ್ಲದೆ ಅರಣ್ಯ ಉತ್ಪನ್ನಗಳ ಉತ್ಪಾದನೆಯ ಸುಮಾರು 60% ರಷ್ಟನ್ನು ಸ್ಥಳೀಯವಾಗಿ ಬಳಸಲಾಗುತ್ತದೆ. ಭಾರತದಲ್ಲಿನ ಅರಣ್ಯ ಉದ್ಯಮದಿಂದ ಬರುವ ಒಟ್ಟು ಆದಾಯದಲ್ಲಿ ಸುಮಾರು 50% ನಾನ್-ವುಡ್ ಅರಣ್ಯ ಉತ್ಪನ್ನಗಳ ವಿಭಾಗದಲ್ಲಿದೆ. 2002 ರಲ್ಲಿನ ಅಂದಾಜಿನಂತೆ ಭಾರತದಲ್ಲಿ 400 ದಶಲಕ್ಷಕ್ಕೂ ಹೆಚ್ಚಿನ ಕಾಡಂಚಿನಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ವಾಸಮಾಡುವ ಜನರಿಗೆ ಅರಣ್ಯ ಉತ್ಪನ್ನಗಳು ಗಮನಾರ್ಹ ಪೂರಕ ಆದಾಯದ ಮೂಲವಾಗಿವೆೆ.

1988 ರಲ್ಲಿ ಭಾರತ ತನ್ನ ರಾಷ್ಟ್ರೀಯ ಅರಣ್ಯ ನೀತಿ ಆರಂಭಿಸಿತು. ಇದು ಅರಣ್ಯ ಇಲಾಖೆಯ ಸಹಯೋಗದಲ್ಲಿ ನಿರ್ದಿಷ್ಟ ಗ್ರಾಮಗಳು ನಿರ್ದಿಷ್ಟ ಅರಣ್ಯ ನಿಕ್ಷೇಪಗಳನ್ನು ನಿರ್ವಹಿಸುತ್ತದೆ ಎಂದು ಪ್ರಸ್ತಾಪಿಸಿ, ಜಾಯಿಂಟ್ ಫಾರೆಸ್ಟ್ ಮ್ಯಾನೇಜ್ಮೆಂಟ್ ಎಂಬ ಕಾರ್ಯಕ್ರಮಕ್ಕೆ ಕಾರಣವಾಯಿತು. ನಿರ್ದಿಷ್ಟವಾಗಿ, ಅರಣ್ಯಗಳ ರಕ್ಷಣೆ ಅಲ್ಲಿನ ಜನರ ಜವಾಬ್ದಾರಿಯಾಗಿದೆ. 1992 ರ ಹೊತ್ತಿಗೆ ಭಾರತದ ಹದಿನೇಳು ರಾಜ್ಯಗಳು ಜಂಟಿ ಅರಣ್ಯ ನಿರ್ವಹಣೆಯಲ್ಲಿ ಪಾಲ್ಗೊಂಡವು, ಪರಿಸರ ರಕ್ಷಣೆಗಾಗಿ ಸುಮಾರು 2 ಮಿಲಿಯನ್ ಹೆಕ್ಟೇರ್ನಷ್ಟು ಹೊಸ ಅರಣ್ಯ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಯಿತು.

ಭಾರತ 1991 ರಿಂದ ಅರಣ್ಯ ವಿನಾಶದ ಪ್ರವೃತ್ತಿಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ಭಾರತದಲ್ಲಿ ಅರಣ್ಯಗಳು ಮತ್ತು ಅರಣ್ಯ ಪ್ರದೇಶದ ರಕ್ಷಣೆ ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ತಜ್ಞರು ವರದಿ ಮಾಡಿದ್ದಾರೆ. 2010 ರ ಆಹಾರ ಮತ್ತು ಕೃಷಿ ಸಂಘಟನೆಯ ಅಧ್ಯಯನವು ತಿಳಿಸಿದಂತೆ, ಜಗತ್ತಿನ ಅತಿ ದೊಡ್ಡ ಅರಣ್ಯ ಪ್ರದೇಶದ ವ್ಯಾಪ್ತಿ ಹೊಂದಿರುವ 10 ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದು ಎಂಬುದು ಹೆಮ್ಮೆಯ ವಿಚಾರ. ಇತರ ಒಂಬತ್ತು ದೇಶಗಳಾದ ರಷ್ಯಾ ಒಕ್ಕೂಟ, ಬ್ರೆಜಿ಼ಲ್, ಕೆನಡಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಚೀನಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಸುಡಾನ್ಗಳೂ ಸೇರಿವೆ. ಒಂದು  ಅಧ್ಯಯನದ ಪ್ರಕಾರ, ವಿಶ್ವದಲ್ಲೇ ಅತಿದೊಡ್ಡ ಪ್ರಾಥಮಿಕ ಅರಣ್ಯ ರಕ್ಷಣೆ ಹೊಂದಿರುವ 10 ದೇಶಗಳಲ್ಲಿ ಭಾರತ ಕೂಡ ಒಂದು.

1990 ರಿಂದ 2000 ರ ವರೆಗೆ ವಿಶ್ವಮಟ್ಟದ ಅರಣ್ಯ ಉತ್ಪಾದನೆಯ ವ್ಯಾಪ್ತಿಯಲ್ಲಿ ಭಾರತವು ಐದನೇ ಅತಿ ಹೆಚ್ಚು ಲಾಭ ಗಳಿಸಿದ ದೇಶವಾಗಿದೆ ಎಂದು ಈಂಔ ಹೇಳುತ್ತದೆ. 2000 ದಿಂದ 2010 ರವರೆಗೆ ಈಂಔ ನ ವರದಿಯಂತೆ ಅರಣ್ಯಗಳ ರಕ್ಷಣೆಯಲ್ಲಿ ಭಾರತವು ಮೂರನೇ ಅತಿ ದೊಡ್ಡ ದೇಶವೆಂದು ಪರಿಗಣಿಸಲ್ಪಟ್ಟಿದೆ. ಭಾರತವು ವಿವಿಧ ಅರಣ್ಯ ವಲಯಗಳನ್ನು ಹೊಂದಿದೆ. ಅವುಗಳಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು, ಉಷ್ಣವಲಯದ ಜೌಗು ಪ್ರದೇಶದ ಕಾಡುಗಳು, ಕರಾವಳಿ ಪ್ರದೇಶದ ಅರಣ್ಯ, ಉಪ-ಉಷ್ಣವಲಯದ ಕಾಡುಗಳು, ಪರ್ವತಪ್ರದೇಶದ ಕಾಡುಪ್ರದೇಶಗಳು, ಹಿಮತ್ಪರ್ವತದ ಆಲ್ಪೈನ್ ಕಾಡುಗಳು ಎಂಬ ಪ್ರಬೇಧಗಳನ್ನೊಳಗೊಂಡಿವೆ. ಈ ಕಾಡುಗಳು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ವಿವಿಧ ಪರಿಸರ ವ್ಯವಸ್ಥೆಗಳನ್ನು ಹೊಂದಿವೆ.

1970 ರ ದಶಕದಲ್ಲಿಯೇ ಅರಣ್ಯನಾಶದ ತಡೆ ಮತ್ತು ಅರಣ್ಯಗಳ ಅಭಿವೃದ್ಧಿಯ ವಿಚಾರವಾಗಿ ಭಾರತವು ತನ್ನ ಮೂರು ಪ್ರಮುಖ ಉದ್ದೇಶಗಳ ಈಡೇರಿಕೆಗಾಗಿ ದೀರ್ಘಾವಧಿಯ ತಂತ್ರಗಳನ್ನು ಘೋಷಿಸಿತು. 1. ಮಣ್ಣಿನ ಸವೆತ ಮತ್ತು ಪ್ರವಾಹವನ್ನು ಕಡಿಮೆ ಮಾಡಲು 2. ದೇಶೀಯ ಮರದ ಉತ್ಪನ್ನಗಳ ಕೈಗಾರಿಕೆಗಳ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು 3. ಇಂಧನ, ಮರ, ಮೇವು, ಸಣ್ಣ ಮರದ, ಮತ್ತು ಇತರ ಅರಣ್ಯ ಉತ್ಪಾದನೆಗೆ ಗ್ರಾಮೀಣ ಜನರ ಅಗತ್ಯಗಳನ್ನು ಪೂರೈಸುವುದು ಈ 3 ಪ್ರಮುಖ ಉದ್ದೇಶಗಳಾಗಿವೆ. ಈ ಉದ್ದೇಶಗಳನ್ನು ಸಾಧಿಸಲು, 1976ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ರಾಜ್ಯ ಅರಣ್ಯ ಇಲಾಖೆಗಳ ಮರು ಸಂಘಟನೆಯನ್ನು ಶಿಫಾರಸು ಮಾಡಿತು, ಮತ್ತು ಸಾಮಾಜಿಕ ಅರಣ್ಯಶಾಸ್ತ್ರದ ಪರಿಕಲ್ಪನೆಯನ್ನು ಸೂಚಿಸಿತು. ಆಯೋಗವು ಸ್ವತಃ ಮೊದಲ ಎರಡು ಉದ್ದೇಶಗಳ ಮೇಲೆ ಕೆಲಸ ಮಾಡಿತು, ಸಾಂಪ್ರದಾಯಿಕ ಅರಣ್ಯ ಮತ್ತು ವನ್ಯಜೀವಿ ಚಟುವಟಿಕೆಗಳನ್ನು ಒತ್ತಿ ಹೇಳಿತು; ಮೂರನೇ ಉದ್ದೇಶದ ಅನ್ವೇಷಣೆಯಲ್ಲಿ, ಸಮುದಾಯದ ಅರಣ್ಯಗಳನ್ನು ಅಭಿವೃದ್ಧಿಪಡಿಸಲು ಒಂದು ಹೊಸ ರೀತಿಯ ಘಟಕವನ್ನು ಸ್ಥಾಪಿಸಲು ಆಯೋಗ ಶಿಫಾರಸು ಮಾಡಿತು. ಗುಜರಾತ್ ಮತ್ತು ಉತ್ತರ ಪ್ರದೇಶದ ನಾಯಕತ್ವಗಳ ನಂತರ, ಅನೇಕ ಇತರ ರಾಜ್ಯಗಳು ಸಹ ಸಮುದಾಯ ಆಧಾರಿತ ಅರಣ್ಯ ಇಲಾಖೆಗಳನ್ನು ಸ್ಥಾಪಿಸಿವೆ, ಇದು ಕೃಷಿ ಅರಣ್ಯ, ಮರದ ನಿರ್ವಹಣೆ, ವಿಸ್ತಾರ ಅರಣ್ಯ, ಮರುಕಳಿಸುವ ಅರಣ್ಯಗಳ ಮರುಸ್ಥಾಪನೆ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಕಾಡುಗಳ ಬಳಕೆಯನ್ನು ಪ್ರೋತ್ಸಾಹಿಸಿತು.

1980 ರ ದಶಕದಲ್ಲಿ ಕಾಡು ಪ್ರದೇಶಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರಗಳು ಸಮುದಾಯಗಳನ್ನು ಅರಣ್ಯ ಸಂಸ್ಥೆಯ ಮೂಲಕ ಪ್ರೋತ್ಸಾಹಿಸಿತು. ಗ್ರಾಮಸ್ಥರ ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಮರದ ಸರಬರಾಜು ಮಾಡಲು ಮತ್ತು ಕೃಷಿ ಉಪಕರಣಗಳನ್ನು ಸಿದ್ಧಪಡಿಸಲು ಬೇಕಾದ ಮರದ ಅಗತ್ಯವನ್ನು ಒದಗಿಸುವುದಕ್ಕಾಗಿ, ಜಾನುವಾರು ಮೇಯಿಸುವ ಮೈದಾನಗಳಲ್ಲಿ ಗಿಡಗಳನ್ನು ನಾಟಿ ಮಾಡುವಂತಹ ಯೋಜನೆಗಳನ್ನು ಜಾರಿಗೆ ತರಲಾಯಿತು. ಪ್ರತ್ಯೇಕವಾಗಿ ರೈತರು ಮತ್ತು ಬುಡಕಟ್ಟು ಜನಾಂಗದವರ ಲಾಭಕ್ಕಾಗಿ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸಿದರು. ಉದಾಹರಣೆಗೆ ಗುಜರಾತ್ನಲ್ಲಿ, ಸಾಮಾಜಿಕ, ಆರ್ಥಿಕ ಪ್ರಾಮುಖ್ಯತೆಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಹೆಚ್ಚು ಪರಿಣಾಮಕಾರಿಯಾದ ಇಲಾಖೆಗಳಲ್ಲಿ ಒಂದಾದ ಅರಣ್ಯ ಇಲಾಖೆ 1983 ರಲ್ಲಿ 200 ಮಿಲಿಯನ್ ಮರದ ಮೊಳಕೆಗಳನ್ನು ವಿತರಿಸಿದೆ. ಭಾರತದ ರಾಷ್ಟ್ರೀಯ ಅರಣ್ಯ ನೀತಿಯು 2020 ರ ಹೊತ್ತಿಗೆ 26.7 ಶತಕೋಟಿ ಡಾಲರ್ ಹೂಡಿಕೆ ಮಾಡಲು ಉದ್ದೇಶಿಸಿದೆ. ಇದು ಭಾರತದ ಅರಣ್ಯ ಸಂರಕ್ಷಣೆಯೊಂದಿಗೆ ಅರಣ್ಯ ಕವಚವನ್ನು 20% ರಿಂದ 33% ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದೆ.

ಈ ನಿಟ್ಟಿನಲ್ಲಿ ನಮ್ಮ ಪರಿಸರದ ಸಂರಕ್ಷಣೆಗಾಗಿ ನಾಳಿನ ನಮ್ಮ ಮುಂದಿನ ಪೀಳಿಗೆಯ ಉನ್ನತಿಗಾಗಿ ಶಾಲಾಹಂತದಿಂದಲೇ ಮಕ್ಕಳಿಗೆ ಪರಿಸರದ ಕಾಳಜಿಯ ಬಗ್ಗೆ ನಮ್ಮ ಶಿಕ್ಷಕರು ತಿಳಿಸುತ್ತಾ ಹೋಗಬೇಕು. ಮುಂದೆ ಅವರು ಈ ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ಎಲ್ಲರೂ ಪರಿಸರ ಮತ್ತು ಅರಣ್ಯಗಳ ಸಂರಕ್ಷಣೆಯ ವಿಚಾರದಲ್ಲಿ ಕೈಜೋಡಿಸುವತ್ತ ಆಲೋಚಿಸಲು ಪ್ರೇರೇಪಿಸುವಂತಾಗಲಿ

ಸವಾಲುಗಳನ್ನು ಸ್ವೀಕರಿಸಿ !!!ಫಲಿತಾಂಶದ ಒತ್ತಡಕ್ಕೆ ಸಿಲುಕಿ ಖಿನ್ನರಾಗದಿರಿ!

 ಸವಾಲುಗಳನ್ನು ಸ್ವೀಕರಿಸಿ !!!ಫಲಿತಾಂಶದ ಒತ್ತಡಕ್ಕೆ ಸಿಲುಕಿ ಖಿನ್ನರಾಗದಿರಿ! - ಡಾ. ಶಾಲಿನಿ ರಜನೀಶ್, ಇಂದಿನ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಫೇಲಾದೆವೆಂದೋ ಅಥವಾ ಅಂ...

 


ಸಾಹಿತ್ಯ ಕ್ಷೇತ್ರದ ಸಿಡಿಲ ಮೊಗ್ಗು ತ.ರಾ.ಸು.
- ಡಾ. ಸಂಗಮೇಶ ತಮ್ಮನಗೌಡ್ರ,

ಬರಹ ಮತ್ತು ವೃತ್ತಿ ಅಷ್ಟೊಂದು ಸುಲಭವಾಗಿ ದಕ್ಕುವಂತಹುದಲ್ಲ. ಅನಂತ ಕಾಲದ ತಪವೆಂಬಂತೆ ಉತ್ತಮ ಬರಹಗಾರರು ಆಯಾ ಭಾಷೆಯಲ್ಲಿ ಮೈದಾಳುತ್ತಾರೆ. ಕನ್ನಡದಲ್ಲಿ ಒಬ್ಬ ಬರಹಗಾರರಾಗಿ ಯಾವುದೇ ನೌಕರಿ ಇತರ ವೃತ್ತಿಯನ್ನು ಕೈಕೊಳ್ಳದೇ ಕೇವಲ ಪುಸ್ತಕ ಬರಹ ವೃತ್ತಿಯಿಂದ ಬದುಕಿದ ಅ.ನ.ಕೃ. ಬಸವರಾಜ ಕಟ್ಟಿಮನಿ ಅವರಂತೆ ತ.ರಾ.ಸು. ಕನ್ನಡದಲ್ಲಿ ಉತ್ಕೃಷ್ಟ ಕಾದಂಬರಿಗಳನ್ನು ಬರೆದು ಶ್ರೇಷ್ಠ ಬರಹಗಾರರೆನಿಸಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದ ತ.ರಾ.ಸು. ಕನ್ನಡದ ಶ್ರೇಷ್ಟ ಸಾಹಿತಿಗಳಲ್ಲೊಬ್ಬರು. ಅವರ ಗದ್ಯ ಸಾಹಿತ್ಯದಲ್ಲಿ ಬಹಳಷ್ಟು ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿವೆ. ಹಂಸಗೀತೆ ಎಂಬ ಕಾದಂಬರಿ ಬಸಂತ ಬಹಾರ್ ಹೆಸರಿನಲ್ಲಿ ಹಿಂದಿ ಚಲನಚಿತ್ರವಾಗಿದೆ.

1920 ರ ಏಪ್ರಿಲ್ 21 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ಸುಬ್ಬರಾಯರು ಹುಟ್ಟಿದರು. ತ.ರಾ.ಸು. ಎಂದರೆ ತಳುಕಿನ ರಾಮಸ್ವಾಮಯ್ಯನವರ ಮಗ ಸುಬ್ಬರಾವ್ ಎಂಬುದು ಅವರ ಪೂರ್ಣಹೆಸರು. ಶಾಲೆಯ ಪಠ್ಯಪುಸ್ತಕದ ಓದಿಗಿಂತಲೂ ಸಾಹಿತ್ಯ ಕೃತಿಗಳ ಓದಿನ ಹುಚ್ಚಿಗಂಟಿಕೊಂಡು ಬರಹಗಾರಿಕೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡವರು ತ.ರಾ.ಸು. ಅ.ನ.ಕೃ. ಗರಡಿಯಲ್ಲಿ ಪಳಗಿದ ತ.ರಾ.ಸು.: ಕನ್ನಡ ಸಾಹಿತ್ಯದ ಪ್ರಗತಿಶೀಲ ಚಳುವಳಿ ಪ್ರಾರಂಭವಾದಾಗ ಅ.ನ.ಕೃ ಅವರಿಗೆ ಬಲಗೈ ಬಂಟನಂತೆ ಬೆಳೆದ ತ್ರಿಕರ್ಣಶುದ್ಧವಾಗಿ ಶ್ರದ್ಧಾನಿಷ್ಟೆಗಳಿಂದ ಜಡ ಸಂಪ್ರದಾಯಕ್ಕೆ ವಿರುದ್ಧವಾಗಿ ಸೆಟೆದು ನಿಂತು ಸಾಹಿತ್ಯ ರಚಿಸಿದರು. ಇವರ ಸಾಹಿತ್ಯ ಕಂಡು ಕೆಲವರು ಮೂಗು ಮುರಿದರೂ ಅದರ ಬಗ್ಗೆ ತ.ರಾ.ಸು. ಎಂದೂ ತಲೆ ಕೆಡಿಸಿಕೊಳ್ಳದೆ, ಯಾರೊಂದಿಗೂ ದ್ವೇಷ ಬೆಳಸಿಕೊಳ್ಳದೇ, ಆತ್ಮ ಸಾಕ್ಷಿಯಿಂದ ಸಾಹಿತ್ಯ ಕೃಷಿಗೈದರು.

ವಂಶಪಾರಂಪರ್ಯವಾಗಿ ಬೆಳೆದು ಬಂದ ಸಾಹಿತ್ಯ ಸಂಸ್ಕಾರ :
ತ.ರಾ.ಸು ಅವರ ಮನೆತನವು ವಂಶಪರಂಪರೆಯಾಗಿ ಸಾಹಿತ್ಯ ಪರಂಪರೆಯ ಮನೆತನ. ತ.ರಾ.ಸು ಅವರ ಅಜ್ಜ ಆಷು ಕವಿ, ಜನಪದ ನಾಟಕಕಾರ ಮತ್ತು ದೇವರ ನಾಮಗಳ ಕತರ್ೃವಾಗಿದ್ದರು. ಅಜ್ಜಿಯು ಅಕ್ಷರಸ್ಥಳಲ್ಲದಿದ್ದರೂ ಕುಮಾರವ್ಯಾಸ, ಲಕ್ಷ್ಮೀಶರ ಪದ್ಯಗಳ ಅರ್ಥ ಹೇಳಬಲ್ಲವಳಾಗಿದ್ದಳು. ರಸಋಷಿ ಕುವೆಂಪು ಅವರ ಗುರುಗಳಾದ ಕನ್ನಡ ಪ್ರಖ್ಯಾತ ಪ್ರಾಧ್ಯಾಪಕ ಟಿ.ಎಸ್.ವೆಂಕಣ್ಣಯ್ಯ ತ.ರಾ.ಸು ಅವರ ದೊಡ್ಡಪ್ಪನವರು. ಹೆಸರಾಂತ ಅಧ್ಯಾಪಕ, ವಿದ್ವಾಂಸರಾದ ತ.ಸು.ಶ್ಯಾಮರಾವ್ ತ.ರಾ.ಸು. ಚಿಕ್ಕಪ್ಪ, ತಂದೆ ರಾಮಸ್ವಾಮಯ್ಯನವರು ಬರವಣಿಗೆಯ ಒಲವುಳ್ಳವರಾಗಿದ್ದರು. ಎಂಟು ವರ್ಷದ ಎಳೆಯನಾಗಿದ್ದ ತ.ರಾ.ಸು. ಟಿ.ಎಸ್.ವೆಂಕಣ್ಣಯ್ಯನವರಿಗೆ ರವೀಂದ್ರನಾಥ ಠಾಕೂರರ ಹಾಗೆ ನಾನೂ ದೊಡ್ಡ ಕವಿಯಾಗುತ್ತೇನೆ ಎಂದು ಹೇಳಿದ್ದರಂತೆ.

ಚಲನಚಿತ್ರರಂಗದಲ್ಲಿ ತ.ರಾ.ಸುಬ್ಬರಾಯರ ಸಾಹಿತ್ಯ : ಚಲನಚಿತ್ರ ದಿಗ್ಗಜರಾದ ವಿಜಯನಾರಸಿಂಹ, ಹಿಂದಿ ಚಿತ್ರ ರಂಗದ ಭರತ್ ಭೂಷಣ್, ಬಿ.ಆರ್.ಪಂತಲು, ಪುಟ್ಟಣ್ಣ ಕಣಗಾಲ್ ಮುಂತಾದವರು ತ.ರಾ.ಸು ಅವರ ಮೈಸೂರಿನ ಯಾದವ ನಗರದ ಗಿರಿಕನ್ನಿಕಾ ಮನೆಯಲ್ಲಿ ಚರ್ಚಿಸಿದ ಫಲವಾಗಿ ಅವರ ಹಲವಾರು ಕಾದಂಬರಿಗಳು ಜನಪ್ರಿಯ ಚಲನಚಿತ್ರಗಳಾದವು. ಅವುಗಳಲ್ಲಿ ಪ್ರಸಿದ್ಧ ವಾದವೆಂದರೆ ನೃಪತುಂಗ, ಚಂದವಳ್ಳಿಯ ತೋಟ, ಚಕ್ರತೀರ್ಥ, ಹಂಸಗೀತೆ (ಇದು ಹಿಂದಿಯಲ್ಲಿ ಬಸಂತ ಬಿಹಾರ್ ಆಯಿತು) ಕಾದಂಬರಿಗಳು ಹಿಂದಿಯಲ್ಲದೇ ದಕ್ಷಿಣ ಭಾರತದ  ತೆಲುಗು ಮತ್ತು ಇತರೆ ಭಾಷೆಗಳಲ್ಲೂ ತಯಾರಾದವು. 70-80 ರ ದಶಕದಲ್ಲಿ ತ.ರಾ.ಸು ಸಾಹಿತ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಇತ್ತು. ನಾಗರಹಾವು, ಚಂದನದಗೊಂಬೆ ಗಾಳಿ ಮಾತು ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾದ ಚಲನಚಿತ್ರಗಳು. ನಾಗರಹಾವು ಕನ್ನಡದಿಂದ ತಮಿಳಿನಲ್ಲಿ ರಾಜನಾಗಂ ಎಂದೂ ತೆಲುಗಿನಲ್ಲಿ ಕೊಡೆನಾಗು ಎಂತಲೂ ಹಿಂದಿಯಲ್ಲಿ ಜಹರೀಲಾ ಇನ್ಸಾನ್ ಎಂಬ ಹೆಸರಿನಲ್ಲಿ ಚಲನಚಿತ್ರಗಳಾದವು. ಅನೇಕ ಚಲನ ಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ದೊರೆತವು.

ತ.ರಾ.ಸು ಅವರಿಗೆ ಗಣಿತವೆಂದರೆ ತಲೆನೋವು : ತ.ರಾ.ಸುಬ್ಬರಾಯ ರು ವಿದ್ಯಾಥರ್ಿಯಾಗಿದ್ದಾಗ ಶಾಲೆಯಲ್ಲಿ ಎಲ್ಲಾ ವಿಷಯಗಳಲ್ಲಿಯೂ ಚೆನ್ನಾಗಿ ಅಂಕ ತೆಗೆಯುತ್ತಿದ್ದರೂ ಗಣಿತದಲ್ಲಿ ಮಾತ್ರ ಸೊನ್ನೆ ಬರುತ್ತಿತ್ತು. ಎರಡನೆಯ ಬಾರಿ ಎಸ್.ಎಸ್.ಎಲ್.ಸಿ. ಯಲ್ಲಿ ತೇರ್ಗಡೆ ಹೊಂದಿದರು. ಆ ಕಾಲದಲ್ಲಿ ಚಿಕ್ಕಪ್ಪ ತ.ಸು.ಶಾಮರಾವ್ ಶಿವಮೊಗ್ಗ ದ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಆತನ ಆಶ್ರಯದಲ್ಲಿ ಕಲಿತು, ಜ್ಯೂನಿಯರ್ ಇಂಟರ್ನಲ್ಲಿ ಪಾಸಾದರು. ಶಾಮಣ್ಣನಿಗೆ ಬೇರೆ ಕಡೆ ವರ್ಗವಾಯಿತು. ತುಮಕೂರು ಕಾಲೇಜಿನಲ್ಲಿ ಸೀನಿಯರ್ ಇಂಟರ್ ಕ್ಲಾಸಿಗೆ ಸೇರಿಸಿ, ಗವರ್ನಮೆಂಟ್ ಹಾಸ್ಟೆಲ್ನಲ್ಲಿ ಇದ್ದುಕೊಂಡು ಓದುವಂತೆ ತಂದೆ ಏಪರ್ಾಡು ಮಾಡಿದರೂ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ ಸುಬ್ಬಣ್ಣ ಜೈಲು ಸೇರಬೇಕಾಯಿತು. ತ.ರಾ.ಸು ಶಿಕ್ಷಣವು ಜ್ಯೂನಿಯರ್ ಇಂಟರ್ಕ್ಲಾಸಿಗೆ ಮುಕ್ತಾಯವಾಯಿತು.

ಚಿತ್ರದುರ್ಗದ ಇತಿಹಾಸವುಳ್ಳ ತ.ರಾ.ಸು.ಕಾದಂಬರಿಗಳು : ತ.ರಾ.ಸು. ಅವರು ಚಿತ್ರದುರ್ಗದ ಇತಿಹಾಸವುಳ್ಳ ಸರಣಿ  ಕಾದಂಬರಿಗಳನ್ನು ರಚಿಸಿದರು.  ಕಸ್ತೂರಿ ಕಂಕಣ ಭಾಗ-1 ಮತ್ತು 2, ರಾಜ್ಯದಾಹ, ರಕ್ತರಾತ್ರಿ, ತಿರುಗುಬಾಣ, ಹೊಸಹಗಲು, ವಿಜಯೋತ್ಸವ ಭಾಗ-1 ಮತ್ತು 2, ದುಗರ್ಾಸ್ತಮಾನ ಮುಂತಾದ ಕಾದಂಬರಿಗೆ ತುಂಬಾ ಪ್ರಸಿದ್ಧ ಕೃತಿಗಳಾಗಿವೆ. ಈ ಎಲ್ಲಾ ಕೃತಿಗಳ ರಚನೆಗೆ ಇತಿಹಾಸ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಪ್ರೇರಣೆಯೂ ಕಾರಣವಾಗಿದೆ.

ತ.ರಾ.ಸು. ಚಿತ್ರದುರ್ಗದ ಕಲ್ಲು ಕಲ್ಲನ್ನೂ ತಮ್ಮ ಕಾದಂಬರಿಯಲ್ಲಿ ವಣರ್ಿಸಿದ್ದಾರೆ. ಮದಕರಿ ನಾಯಕ, ರಾಯನ ದಳವಾಯಿ, ಓಬವ್ವ ನಾಗತಿ, ಲಿಂಗಣ್ಣ, ದೇಸಣ್ಣ, ಮುದ್ದಣ್ಣ, ಕಸ್ತೂರಿ ನಾಯಕ, ಗಿರಿಜವ್ವೆ, ಪರಶುರಾಮಪ್ಪ, ಭರಮಣ್ಣ ಮುಂತಾದ ನೂರಾರು ಪಾತ್ರಗಳು ತ.ರಾ.ಸು ಅವರ ಐತಿಹಾಸಿಕ ಕಾದಂಬರಿಗಳಲ್ಲಿ ಬೆಳಕು ಕಂಡಿವೆ.

ತ.ರಾ.ಸು. ಸಾಹಿತ್ಯ ಪ್ರಪಂಚ
ಸಾಮಾಜಿಕ ಕಾದಂಬರಿಗಳು : ಮನೆಗೆ ಬಂದ ಮಹಾಲಕ್ಷ್ಮಿ, ರಕ್ತತರ್ಪಣ, ಕಾಮಾಕ್ಷಿ, ಜೀತದ ಜೀವ, ಪುರುಷಾವತಾರ, ಮುಂಜಾವಿನಿಂದ ಮುಂಜಾವು, ಬೇಡದ ಮಗು, ಮಸಣದ ಹೂವು, ಬಿಡುಗಡೆಯ ಬೇಡಿ, ಚಂದನದ ಗೊಂಬೆ, ಚಕ್ರತೀರ್ಥ, ಚಂದವಳ್ಳಿಯ ತೋಟ, ಸಾಕು ಮಗಳು, ಬೆಂಕಿಯ ಬಲೆ, ನಾಗರಹಾವು-1, ಎರಡು ಹೆಣ್ಣು ಒಂದು ಗಂಡು-2, ಸರ್ಪ ಮತ್ಸರ-3, ಕೇದಗೆ ವನ-1, ಕಣ್ಣು ತೆರೆಯಿತು-2, ವಿಷಪ್ರಾಸನ (ಪಾರಿಜಾತ), ಹಂಸಗೀತೆ, ಮೊದಲನೋಟ-1, ಗೃಹಪ್ರವೇಶ -2, ರಾಜೇಶ್ವರಿ-3, ಮಾರ್ಗದಶರ್ಿ-1, ಭಾಗ್ಯಶಿಲ್ಪಿ-2, ಬೆಳಕಿನ ಬೀದಿ-3, ಮರಳು ಸೇತುವೆ, ಗಾಳಿಮಾತು, ಬೇಲಿಮೇಯ್ದ ಹೊ, ಬಂಗಾರಿ, ಬಯಸಿಬಿದ್ದ ಬೇಸ್ತು, ಆಕಸ್ಮಿಕ-1, ಅಪರಾಧಿ-2, ಪರಿಣಾಮ-3, ನಾಯಕಿ, ಹಾವು ಹಿಡಿದವರು-1, ಗ್ರಹಣ ಬಿಟ್ಟಿತು-2, ಎಲ್ಲಾ ಅವನ ಹೆಸರಿನಲ್ಲೇ 1-2, ಪಂಜರದ ಪಕ್ಷಿ-1, ಒಮ್ಮೆ ನಕ್ಕು ನಗು-2, ಶಿಶುದೈತ್ಯ, ಹೆಣ್ಣುಕಟ್ಟಿದ ಮನೆ, ಕಾರ್ಕೋಟಕ, ಯಕ್ಷಪ್ರಶ್ನೆ, ಬಯಕೆಯಬಂದಿ, ಪರಿಮಳದ ಉರುಳು, ಖೋಟಾನೋಟು, ಲಾವಣ್ಯವತಿ, ಚದುರಂಗದ ಮನೆ, ಅಕ್ಕಮ್ಮನ ಭಾಗ್ಯ, ಶುಕ್ರವಾರದ ಲಕ್ಷ್ಮಿ, ಶ್ರೀ ಚಕ್ರೇಶ್ವರಿ, ಬೆಳಕು ತಂದ ಬಾಲಕ, 4ಥ4=1. ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ.

ಐತಿಹಾಸಿಕ ಕಾದಂಬರಿಗಳು: ನೃಪತುಂಗ, ಸಿಡಿಲಮೊಗ್ಗು, ಕೀತರ್ಿನಾರಾಯಣ, ಶಿಲ್ಪಶ್ರೀ, ಅಗ್ನಿರಥ ಮುಕ್ತಿಪಥ, ಕಸ್ತೂರಿ ಕಂಕಣ, ಕಂಬನಿಯ ಕುಯ್ಲಿ, ರಾಜ್ಯದಾಹ, ರಕ್ತರಾತ್ರಿ, ಹೊಸಹಗಲು, ವಿಜಯೋತ್ಸವ, ದುರ್ಗಾಸ್ತಮಾನ ಮುಂತಾದವುಗಳು ಪ್ರಸಿದ್ಧವಾದವು.

ಕಥಾ ಸಂಕಲನಗಳು : ರೂಪಸಿ, ತೊಟ್ಟಿಲು ತೂಗಿತು, ಗಿರಿಮಲ್ಲಿಗೆಯ ನಂದನದಲ್ಲಿ, ಮೂರು ಮತ್ತೊಂದು, ತ.ರಾ.ಸು ಅವರ ಸಮಗ್ರ ಸಣ್ಣ ಕಥೆಗಳು.

ನಾಟಕಗಳು :  ಜ್ವಾಲಾ, ಮೃತ್ಯು ಸಿಂಹಾಸನ.

ಬಾನುಲಿ ನಾಟಕಗಳು: ಅನ್ನಾವತಾರಗಳು, ಮಹಾಶ್ವೇತೆ. ಮುಂತಾದವುಗಳು.

ಗಾಂಧೀಜಿ, ದಳಪತಿ ಜವಾಹರ, ನಿಮ್ಮ ಆಹಾರ, ಡಾಕ್ಟರ್ ಕೋಟ್ನೀಸ್, ಬಾರ್ಬೋಸಾ ಕಂಡ ವಿಜಯನಗರ, ನಂದನವನ, ಮದಾಂಬಾವರಿ, ಮರೆಯಲಾಗದ ಪರಿಮಳ, ಪ್ರಥಮ ಪ್ರಣಯ ಮುಂತಾದ ಅನುವಾದಿಯ ಕೃತಿಗಳು.

ಜೀವನ ಚರಿತ್ರೆ ವ್ಯಕ್ತಿ ಚಿತ್ರಗಳು : ರೇಖಾ ಚಿತ್ರಗಳು, ಅ.ನ.ಕೃ ಸ್ನೇಹ ಸಮನ್ವಯ

ಲೇಖನ ಸಂಗ್ರಹ : ಸ್ಪಂದನ

ವಿಮರ್ಶಾಸಾಹಿತ್ಯ : ಕ್ರಿಯಾಶಕ್ತಿ ವಿದ್ಯಾರಣ್ಯ,

ನವಸಾಕ್ಷರರಿಗಾಗಿ : ನಾಗರಮರಿ

ಚಿತ್ರಸಂಪುಟ: ಚಿತ್ರಮಯ ಚಿತ್ರದುರ್ಗ

ಸಂಪಾದಿತ ಕೃತಿಗಳು : ಶ್ರೀ ಜಗದ್ಗುರು ಶ್ರೀ ಶಿವಾರ್ಪಣಂ, ಆತ್ಮಕಥನ ಹಿಂತಿರುಗಿ ನೋಡಿದಾಗ (ಅಂಬುಜಾ ತ.ರಾ.ಸು ಅವರೊಡನೆ), ಮಂಥನ

ಅಪ್ರಕಟಿತ ಕಾದಂಬರಿಗಳು : ವನಾಂತರಾಳ, ಸ್ವಗತ, ಬಂಗಾರದ ಸೂಜಿ, ಶ್ರೀ ಶಂಕರಾಚಾರ್ಯ.

ತ.ರಾ.ಸು. ಅವರು ಸ್ವತಂತ್ರ ಸಾಹಿತ್ಯ ಕೃಷಿ ಅಲ್ಲದೇ ವಿವಿಧ ಪತ್ರಿಕೆಗಳಲ್ಲಿ ಸಂಪಾದಕ, ಉಪಸಂಪಾದಕರಾಗಿ ದುಡಿದರು. 1942 ರಿಂದ 1984 ರವರೆಗೆ ಆ ಸೇವೆ ನಡೆದಿದೆ. ವಿಶ್ವಕರ್ನಾಟಕ ಬೆಂಗಳೂರು (1942 ರಿಂದ1944), ಪ್ರಜಾಮತ ಬೆಂಗಳೂರು (1944-45), ವಾಹಿನಿ ಚಿತ್ರದುರ್ಗ (1945-47), ನವೋದಯ ಚಿತ್ರದುರ್ಗ (1947-49), ಚೇತನ ಚಿತ್ರದುರ್ಗ (1948-49), ಪ್ರಜಾವಾಣಿ ಬೆಂಗಳೂರು (1949-50), ವಿಚಾರವಾಣಿ ಉಡುಪಿ (1960), ಮೈಸೂರು ಪತ್ರಿಕೆ ಮೈಸೂರು, ಕಾಲದೂತ ಮೈಸೂರು(1960), ಶ್ರೀ ಶಂಕರಕೃಪಾ ಮೈಸೂರು (1974 ರಿಂದ1984)

ತ.ರಾ.ಸು.ಅವರ ಸ್ವಾತಂತ್ರ್ಯ ಅಂದೋಲನ ಮತ್ತು ವಿವಿಧ ಚಳುವಳಿಗಳು : ವಿವಿಧ ಚಳುವಳಿಗಳಲ್ಲಿ ಧುಮುಕಿದ ತ.ರಾ.ಸು ಅವರು ಸಾಮಾಜಿಕ ಪರಿವರ್ತನಾ ಚಳುವಳಿಯಲ್ಲಿ ಭಾಗವಹಿಸುತ್ತಾ ಬಂದರು. 1937ರಲ್ಲಿ ಧ್ವಜ ಸತ್ಯಾಗ್ರಹ (ದಸ್ತಗಿರಿ, ಬಾಗೂರು), 1939ರಲ್ಲಿ ಅರಣ್ಯ ಸತ್ಯಾಗ್ರಹ, 1942ರಲ್ಲಿ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ ತುಮಕೂರಿನಲ್ಲಿ ಸೆರೆಮನೆ ವಾಸ ಅನುಭವಿಸಿದರು. 1947ರಲ್ಲಿ ಜವಾಬ್ದಾರಿ ಸರಕಾರಿ ಚಳುವಳಿಯಲ್ಲಿ, 1944 ರಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿ, 1960 ರಿಂದ 1984 ರವರೆಗೆ ಕನ್ನಡ ಚಳುವಳಿಯಲ್ಲಿ ಭಾಗವಹಿಸಿದ್ದರು.

ವಿವಿಧ ಹುದ್ದೆಗಳಲ್ಲಿ ತ.ರಾ.ಸು. : 10-09-1962 ರಿಂದ ನಾಲ್ಕು ವರ್ಷ ಮೈಸೂರಿನ ಪುರಸಭೆಯ ಸದಸ್ಯರಾಗಿದ್ದರು. ಇದೇ ಅವಧಿಯಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. 21-07-1971 ರಿಂದ 07-05-1975ರವರೆಗೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು.

ತ.ರಾ.ಸು ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು : ಯಕ್ಷಪ್ರಶ್ನೆಗೆ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿಲ್ಪಶ್ರೀಗೆ ಗೊಮ್ಮಟೇಶ್ವರ ಪುರಸ್ಕಾರ, ಸಮಿತಿಯ ಪದಕ ಹಾಗೂ ವಿದ್ಯಾವಾರಿಧಿ ಪ್ರಶಸ್ತಿ, ದುರ್ಗಾಸ್ತಮಾನ ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪುರಸ್ಕಾರ 1983 ಹಾಗೂ ಇದೇ ಕೃತಿಗೆ ಮರಣೋತ್ತರವಾಗಿ 1985ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ದೊರಕಿದೆ.

27-12-1970 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಷ್ಠ ಕಾದಂಬರಿಕಾರ ಪ್ರಶಸ್ತಿ, 19-10-1978ರಂದು ಚಿತ್ರದುರ್ಗದ ಮದಕರಿ ಬಳಗದಿಂದ ಸಾಹಿತ್ಯ ರತ್ನ ಪ್ರಶಸ್ತಿ ದೊರಕಿದ್ದು, ಜ್ಞಾನಪೀಠ ಪ್ರಶಸ್ತಿಗೆ ತ.ರಾ.ಸು. ಅರ್ಹರಾದವರಾಗಿದ್ದರು.

ಸಾಹಿತ್ಯ ಸೇವೆಯಲ್ಲಿ ದಣಿವರಿಯದ ಜೀವ :
ಚಿತ್ರದುರ್ಗದ ತ.ರಾ.ಸು. ಮೈಸೂರಿನಲ್ಲಿ ನೆಲೆನಿಂತು, ನಲವತ್ತು ವರ್ಷಗಳ ನಿರಂತರ ಸಾಹಿತ್ಯ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು 10-04-1984ರಂದು ನಿಧನರಾದರು. ಅವರು ನಮ್ಮ ಮಧ್ಯೆ ಇಲ್ಲದಿದ್ದರೂ ನಮ್ಮ ನಾಡಿಗೆ ಬಿಟ್ಟು ಹೋದ ಸಾಹಿತ್ಯ ಸಿರಿ ಇದೆ. ಅವರ ಕೃತಿಗಳನ್ನು ಓದಿ, ತ.ರಾ.ಸು. ಗೆ ನಿಜ ಗೌರವ ಅರ್ಪಿಸೋಣ !
 

ಸಾಹಿತ್ಯ ಕ್ಷೇತ್ರದ ಸಿಡಿಲ ಮೊಗ್ಗು ತ.ರಾ.ಸು.

  ಸಾಹಿತ್ಯ ಕ್ಷೇತ್ರದ ಸಿಡಿಲ ಮೊಗ್ಗು ತ.ರಾ.ಸು. - ಡಾ. ಸಂಗಮೇಶ ತಮ್ಮನಗೌಡ್ರ, ಬರಹ ಮತ್ತು ವೃತ್ತಿ ಅಷ್ಟೊಂದು ಸುಲಭವಾಗಿ ದಕ್ಕುವಂತಹುದಲ್ಲ. ಅನಂತ ಕಾಲದ ತಪವೆಂಬಂತೆ ಉತ್...


ಪರೀಕ್ಷೆ ಒಂದು! ಪತ್ರಗಳು ಎರಡು!!
- ಡಾ.ಎಚ್.ಬಿ.ಚಂದ್ರಶೇಖರ್,

ಹೇಗಿದ್ದೀಯಾ? ನನಗೆ ಗೊತ್ತು ನೀನು ನಿನ್ನ ಜೀವನದ ಪ್ರಮುಖ ಘಟ್ಟದ ಬಹು ಮುಖ್ಯ ಪರೀಕ್ಷೆಯನ್ನು ಬರೆಯಲು ತಯಾರಿ ನಡೆದಿಸ್ದೀಯಾ ಎಂದು. ಹೌದು! ನೀನು ಎದುರಿಸಲು ಹೊರಟಿರುವ ಪರೀಕ್ಷೆಯೇನೋ ಬಹು ಮುಖ್ಯವಾದದ್ದೆ. ಆದರೆ ಜೀವನವೆಂಬ ದೊಡ್ಡ ಪರೀಕ್ಷೆಯಲ್ಲಿ ಪ್ರತಿ ದಿನವನ್ನು ಯಶಸ್ವಿಯಾಗಿ ನಿಭಾಯಿಸುವುದೂ ಒಂದು ಚಿಕ್ಕ ಪರೀಕ್ಷೆಯನ್ನು ಎದುರಿಸಿದಂತಲ್ಲವೇ?. ಪ್ರತಿ ದಿನದ ಕೊನೆಯಲ್ಲಿ ಆ ದಿನವನ್ನು ಸಂತಸಕರ ಮತ್ತು ಉಪಯುಕ್ತವಾಗಿರುವಂತೆ ನಾವು ಕಳೆಯಲು ಸಾಧ್ಯವಾದೆವೆಂದರೆ ಅಂದಿನ ಕಿರುಪರೀಕ್ಷೆಯನ್ನು ನಾವು ಯಶಸ್ವಿಯಾಗಿ ಗೆದ್ದಹಾಗೇ ಅಲ್ಲವೇ? ಈ ರೀತಿ ಪ್ರತಿ ದಿನದ ಪರೀಕ್ಷೆಯನ್ನು ಗೆಲ್ಲಲು ನಾವು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಹಾಕಬೇಕು ತಾನೇ? ಅದೇ ರೀತಿ ನೀನು ಎದುರಿಸುತ್ತಿರುವ ಪರೀಕ್ಷೆಯನ್ನು ಯಶಸ್ವಿಯಾಗಿ ಗೆಲ್ಲಲೂ ಸಹ ನಿನ್ನ ಹೃತ್ಪೂರ್ವಕವಾದ ಪ್ರಯತ್ನಗಳು ಅಗತ್ಯವಾಗಿವೆ.

ನಿನ್ನ ಮೇಲೆ ಇರುವ ನಿರೀಕ್ಷೆಗಳ ಭಾರ ಎಷ್ಟೆಂಬುದು ನನಗೆ ಗೊತ್ತು. ನಿನ್ನ ತಂದೆ-ತಾಯಿ, ನಿನ್ನ ಶಿಕ್ಷಕರು, ನಿನ್ನ ಮುಖ್ಯ ಶಿಕ್ಷಕರು, ನಿನ್ನ ಆತ್ಮೀಯ ಗೆಳೆಯರು, ನಿನ್ನ ಹಿತಚಿಂತಕರು ನೀನು ಪರೀಕ್ಷೆಯಲ್ಲಿ ಚೆನ್ನಾಗಿ ಅಂಕಗಳನ್ನು ತೆಗೆದುಕೊಳ್ಳಲಿ ಎಂಬ ಆಸೆಯನ್ನು ಇರಿಸಿಕೊಂಡಿದ್ದಾರೆ. ಇವರೆಲ್ಲರ ನಿರೀಕ್ಷೆಗಳ ಹೊರೆ ನಿನ್ನ ಮೇಲೆ ಸಾಕೆನಿಸುವಷ್ಟೇ ಇದೆ. ಕೆಲವೊಮ್ಮೆ ನೀನು ಇಷ್ಟೇ ಶೇಕಡಾವಾರು ಅಂಕಗಳನ್ನು ತೆಗೆದುಕೊಳ್ಳಬೇಕೆಂದು ತಾಕೀತು ಮಾಡುವುದು ನಿನಗೆ ಕಿರಿಕಿರಿ ಅಥವಾ ಕಷ್ಟವೆನಿಸಬಹುದು. ಮಗು! ನಾನು ಹೇಳುತ್ತೇನೆ, ನೀನು ನಿನಗೆ ಬರಬೇಕಾದ ಅಂಕಗಳ ಬಗ್ಗೆ ತೆಲೆಕೆಡಿಸಿಕೊಳ್ಳಬೇಡ. ಅಂದರೆ ಹೆಚ್ಚು ಅಂಕಗಳನ್ನು ತೆಗೆಯುವ ಕುರಿತಾದ ಆಸೆ ನೀನು ಹೊಂದಿರಬಾರದೆಂದಲ್ಲ. ನೀನು ನಿನಗೆ ಬರಬೇಕಾಗಿರುವ ಅಂಕಗಳನ್ನು ನಿಗಗೊಳಿಸಿಕೊಂಡು, ಅದನ್ನು ನಿನ್ನ ಪ್ರಮುಖ ಗುರಿಯಾಗಿಸಿಕೊಂಡಲ್ಲಿ, ಅದಕ್ಕೆ ತಕ್ಕಂತೆ ನಿನ್ನ ಪ್ರಯತ್ನಗಳು ಸಾಗುವಂತೆ ನಿನ್ನ ಮನಸ್ಸು ನಿನಗೆ ಪ್ರೇರೇಪಿಸುತ್ತದೆಂದರೆ ನಿನಗೆ ಅಚ್ಚರಿಯಾಗುತ್ತದಲ್ಲವೇ. ಎಷ್ಟೇ ಆಗಲೀ ಅಂಕಗಳು ನಿನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಆದರೆ ಅಂಕಗಳ ಕುರಿತಾಗಿ ನನ್ನ ಕಿವಿಮಾತಿಷ್ಟೇ. ನೀನು ಶ್ರದ್ಧೆ, ಆಸಕ್ತಿ, ಉತ್ಸಾಹದಿಂದ ಓದಲು ತೊಡಗಿದ್ದೇ ಆದಲ್ಲಿ ಅಂಕಗಳು ನಿನ್ನ ನಿರೀಕ್ಷೆಗೂ ಮೀರಿದಷ್ಟು ತಮ್ಮ ಪಾಡಿಗೆ ತಾವು ಬಂದು ನಿನ್ನ ಖಾತೆಗೆ ಬೀಳುತ್ತವೆ.

ಇನ್ನೊಂದು ಮಾತು ನಿನಗೆ ಹೇಳಬೇಕಿದೆ. ತಿಳಿದುಕೊಳ್ಳಬೇಕೆಂಬ ಕುತೂಹಲ,  ಸಹಜ ಆಸಕ್ತಿ, ಪ್ರೇರಣೆಗಳಿಂದ ನೀನು ಓದಿನಲ್ಲಿ ತೊಡಗಿಸಿಕೊಂಡಿದ್ದೇ ಆದಲ್ಲಿ ಈ ಪರೀಕ್ಷೆಯನ್ನು ನೀನು ನಿಜವಾಗಿಯೂ ಸಂಭ್ರಮದಿಂದಲೇ ಎದುರಿಸುವೆ. ನಿನ್ನ ಮೇಲಿರುವ ಎಲ್ಲರ ನಿರೀಕ್ಷೆಗಳ ಭಾರವನ್ನು ಮನದೊಳಗೆ  ತೆಗೆದುಕೊಳ್ಳದೇ ನಿನ್ನದೇ ಆದ ಆಸಕ್ತಿಯಿಂದ ಓದುವುದರಲ್ಲಿ ತೊಡಗಿಕೊ. ಇದರಿಂದ ನೀನು ಉತ್ತಮವಾಗೇ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಇದಕ್ಕೊಂದು ನಿನ್ನ ಇಷ್ಟದ ಉದಾಹರಣೆಯನ್ನೇ ಕೊಡುತ್ತೇನೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಕ್ರಿಕೆಟ್ ಪಂದದಲ್ಲಿ ಭಾರತ ತಂಡವು ಗೆಲ್ಲಲು 351 ರನ್ ಗಳಿಸಬೇಕಾಗಿತ್ತು. ಇಷ್ಟು ಆಗಾಧವೆನಿಸುವಷ್ಟು ದೊಡ್ಡ ಮೊತ್ತವನ್ನು ಬೆನ್ನತ್ತಿದ ನಮ್ಮ ಭಾರತ ತಂಡದ ಆಟಗಾರರು ತಮ್ಮ ಸಹಜವಾದ ಆಟವನ್ನು ಖುಷಿಯಿಂದ ಆಡುತ್ತಾ ಹೋದರು. ಗೆಲ್ಲಲೇಬೇಕಾದ ಒತ್ತಡದೊಂದಿಗೆ ಆಡದೇ ಇಷ್ಟದಿಂದ ಗುರಿಯನ್ನು ಮನದೊಳಗಿಟ್ಟುಕೊಂಡು, ಒಂದೊಂದೇ ಓವರ್ನ ಒಂದೊಂದು ಎಸೆತವನ್ನು ತನ್ಮಯತೆ ಮತ್ತು ಆನಂದದಿಂದ ಆಡುತ್ತಾ ಹೋದರು. ಗುರಿಯೆಡೆ ಲಕ್ಷ್ಯವಿರಿಸಿಕೊಂಡು ಗೆಲ್ಲಲೇಬೇಕೆಂಬ ಒತ್ತಡವನ್ನು ತಮ್ಮ ಮೇಲೆ ಹೇರಿಕೊಳ್ಳದೇ ಖುಷಿ ಮತ್ತು ಆನಂದದಿಂದ ಕೂಡಿದ ಆಟವನ್ನು ಆಡಿದ್ದರಿಂದ ಗೆಲುವನ್ನು ತಮ್ಮದಾಗಿಸಿಕೊಂಡರು. ಇದು ನಿನ್ನ ಮುಂಬರುವ ಪರೀಕ್ಷೆಗೂ ಪಾಠವಾಗಬಹುದಲ್ಲವೇ? ನಿನ್ನ ಗುರಿಯೆಡೆಗೆ ಲಕ್ಷ್ಯವನ್ನು ಸದಾ ಹೊಂದಿರುವುದರ ಜೊತೆ ಆಸಕ್ತಿ, ಶ್ರದ್ಧೆ, ಉತ್ಸಾಹ, ಖುಷಿ, ತನ್ಮಯತೆಗಳಿಂದ ಓದಿನಲ್ಲಿ ತೊಡಗಿಕೊಂಡಲ್ಲಿ ಪರೀಕ್ಷೆಯಲ್ಲಿ ನಿನ್ನ ಗೆಲುವು ಖಚಿತವೇ ಸರಿ.

ಪರೀಕ್ಷೆ ಇಷ್ಟು ಹತ್ತಿರ ಬಂದಾದ ಮೇಲೆ ಆಸಕ್ತಿ, ಶ್ರದ್ಧೆಗಳಿಂದ ಓದಲು ಅಸಾಧ್ಯವೇನೋ ಎಂಬಂತೆ ನಿನ್ನ ಮನಸ್ಸು ಒಮ್ಮೊಮ್ಮೆ ಅತ್ತಿತ್ತ ಚಸಿಲಿದಂತಾಗುತ್ತಲ್ಲವೇ. ಹೌದು! ಇಂತಹ ಅನುಭವ ಎಲ್ಲರಿಗೂ ಆಗುತ್ತದೆ. ಆದರೆ ಮನಸ್ಸನ್ನು ಎಳೆದು ಒಂದೆಡೆ ಕಟ್ಟಿ ಹಾಕಿ, ಓದಿಗೆ ಕೂರುವುದು ಒಂದು ರೀತಿಯ ಮಜವಾದ ಆಟವೇ ತಾನೇ. ನೆನಪಿಡು, ಈ ಆಟದಲ್ಲಿ ಗೆಲವು ನಿನ್ನದೇ ಆಗಬೇಕು. ಮನದ ಹೊಯ್ದಾಟವನ್ನು ಯಾರು ಸಮಸ್ಥಿತಿಗೆ ತಂದುಕೊಂಡು, ತಮ್ಮ ಗುರಿಯೆಡೆಗೆ ಗಮನ ಹರಿಸುತ್ತಾರೋ ಅವರಿಗೇ ತಾನೇ ಗೆಲುವು ಎಂಬುದು ದಕ್ಕುವುದು. ಈ ಕಾರಣದಿಂದ ತಾತ್ಕಾಲಿಕ ಖಷಿಕೊಡುವ ಮೊಬೈಲ್, ಟಿ.ವಿ.ಗಳ ಸಾಂಗತ್ಯವನ್ನು ತೊರೆದುಬಿಡು. ಮೊಬೈಲ್, ಟಿ.ವಿ.ಗಳಿಂದ ನೀನು ಎಷ್ಟು ದೂರವಾಗಿ ಪುಸ್ತಕಗಳಿಗೆ ಎಷ್ಟು ಹತ್ತಿರವಾಗುತ್ತೀಯೋ, ಅಷ್ಟು ಗೆಲವಿನ ಸನಿಹ ನೀನು ಇದ್ದೀಯಾ ಎಂಬುದನ್ನು ನೀನು ಮನಗಾಣು. ಮುಂದೆ ಬರುವ ದೊಡ್ಡ ಗೆಲುವಿನಿಂದ ಸಿಗುವ ಆನಂದವನ್ನು ಕಲ್ಪಿಸಿಕೊಂಡು, ಇಂದಿನ ತಾತ್ಕಾಲಿಕ ಖುಷಿಗಳನ್ನು ತೊರೆಯುವುದು ಉತ್ತಮವೆಂದು ನಿನಗನಿಸುವುದಿಲ್ಲವೇ?

ಪರೀಕ್ಷೆಗೆ ಕೆಲವೇ ದಿನಗಳಿವೆ. ಆದರೆ ಈ ಕೆಲವೇ ದಿನಗಳು ಬಹಳ ಮಹತ್ವದ ದಿನಗಳಲ್ಲವೇ. ಎಷ್ಟೋ ವೇಳೆ, ಆರಂಭದಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ ಕೆಲವರು ಪರೀಕ್ಷೆಯ ದಿನಗಳು ಸಮೀಪಿಸುತ್ತಿದ್ದಂತೆ ಸೋತಂತಾಗುತ್ತಾರೆ. ಆದರೆ ನೆನಪಿಡು! ಈ ಕಡಿಮೆಯ ದಿನಗಳಲ್ಲಿ ನೀನು ಅರ್ಥಪೂರ್ಣವಾಗಿ ಓದಿನಲ್ಲಿ ಸಂಪೂರ್ಣ ತೊಡಗಿಕೊಂಡಿದ್ದೇ ಆದಲ್ಲಿ, ಯಶಸ್ಸು ಕಟ್ಟಿಟ್ಟ ಬುತ್ತಿ.

ಸಮಯವೆಂಬುದು ಅಮೂಲ್ಯ. ಒಂದು ನಿಮಿಷವನ್ನೂ ವ್ಯರ್ಥ ಮಾಡದೇ ಓದಿನಲ್ಲಿ ತೊಡಗಿಕೋ. ಆದರೆ ವಿಶ್ರಾಂತಿ, ವಿರಾಮಗಳೂ ಮುಖ್ಯವೆಂಬುದೂ ನಿನ್ನ ಗಮನದಲ್ಲಿರಲಿ. ಓದಿನ ನಡುವೆ ನೀನು ತೆಗೆದುಕೊಳ್ಳುವ ಚಿಕ್ಕ ಬಿಡುವು, ವಿಶ್ರಾಂತಿ, ಮನರಂಜನೆಗಳು ನೀನು ಮತ್ತಷ್ಟು ಚೆನ್ನಾಗಿ ಓದಿನಲ್ಲಿ ತೊಡಗಿಕೊಳ್ಳಲು ಅಗತ್ಯವಾದ ಶಕ್ತಿ, ಉತ್ಸಾಹಗಳನ್ನು ನಿನ್ನಲ್ಲಿ ತುಂಬುತ್ತವೆ. ಜೊತೆಗೆ ಕಲಿತ ವಿಷಯವು ಗಟ್ಟಿಗೊಳ್ಳಲು ಸಹಾಯಕವಾಗುತ್ತವೆ.

ನಿನಗೆ ಹೆಚ್ಚು ಹೇಳಿ ಬೇಸರ ತರಿಸಲಾರೆ. ಪರೀಕ್ಷೆಯ ದಿನಗಳಲ್ಲಿ ನಿನ್ನ ಆರೋಗ್ಯವನ್ನು ನಿರ್ಲಕ್ಷಿಸಬೇಡ. ಹಿತ-ಮಿತವಾದ ಆಹಾರ ಸೇವನೆಯ ಜೊತೆ ನಿಯಮಿತವಾಗಿ ನೀರು, ಎಳನೀರು, ಹಣ್ಣಿನ ರಸದ ಸೇವನೆ ಮಾಡುವುದರಿಂದ ನಿನಗೆ ಚೈತನ್ಯ ಬರುತ್ತದೆ. ಇದರ ಜೊತೆ ಉತ್ತಮವಾಗಿ ನಿದ್ರಿಸುವುದನ್ನು ಮರೆಯಬೇಡ. ಸ್ನೇಹಿತರ ಜೊತೆ ಒಂದರ್ಧ ಗಂಟೆ ಖುಷಿಯಿಂದ ಆಟ ಆಡು. ಆದರೆ ಆಟಕ್ಕೆ ಹೋದ ಮೇಲೆ ನೀನು ತಲುಪಬೇಕಿರುವ ಗುರಿಯನ್ನು ನೆನೆದು ಓದಿನೆಡೆಗೆ ತಕ್ಷಣವೇ ಮರಳುವುದನ್ನು ಮರೆಯಬೇಡ. ನಿನಗೆ ಶುಭವಾಗಲಿ.. ನಿನ್ನ ಫಲಿತಾಂಶವನ್ನು ನನಗೆ ತಿಳಿಸುವುದನ್ನು ಮರೆಯಬೇಡ. ನಿನ್ನ ಸಂಭ್ರಮದಲ್ಲಿ ನಾನೂ ಭಾಗಿಯಾಗುತ್ತೇನೆ.

ಆದರೆ ಮುಗಿಸುವ ಮುನ್ನ ಒಂದು ಮಾತು ನಿನ್ನ ಗಮನದಲ್ಲಿರಲಿ. ನಿನ್ನ ಪರೀಕ್ಷೆಯ ಫಲಿತಾಂಶ ಏನೇ ಆದರೂ ತಲೆಕೆಡಿಸಿಕೊಳ್ಳುವುದಿಲ್ಲವೆಂದು ಇಂದೇ ನಿರ್ಧರಿಸು.ಹೇಗಿರುವಿರಿ? ದೈನಂದಿನ ಕೆಲಸದ ಒತ್ತಡಗಳು ನಿಮ್ಮನ್ನು ಹೆಚ್ಚು ಬ್ಯುಸಿಯಾಗಿಯೂ ಮತ್ತು ಬಿಸಿಯಾಗಿಯೂ ಇಟ್ಟಿವೆಯೆಂಬುದು ನನಗೆ ಗೊತ್ತು. ಇದರ ನಡುವೆಯೇ ನಿಮ್ಮ ಮಗುವನ್ನು ಬಹುಮುಖ್ಯ ಪರೀಕ್ಷೆಗೆ ಅಣಿ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆಯಲ್ಲವೇ? ನಿಮ್ಮ ಮಗುವಿನ ಓದು ಹೇಗೆ ಸಾಗಿದೆ? ಹೌದು! ನಿಮಗೆ ನಿಮ್ಮ ಮಗುವು ಪರೀಕ್ಷೆಗೆ ತಯಾರಿ ನಡೆಸುತ್ತಿರುವುದು ಏನೇನೂ ಸಾಲದು ಎನಿಸುತ್ತದಲ್ಲವೇ? ನೀವು ವಿದ್ಯಾರ್ಥಿಯಾಗಿದ್ದಾಗ ಓದಿದ್ದ ದಿನಗಳನ್ನು ಸ್ವಲ್ಪ ನೆನಪು ಮಾಡಿಕೊಳ್ಳುವಿರಾ? ನೀವು ನಿಮ್ಮ ಮಗು ಎದುರಿಸುತ್ತಿರುವ ಮುಖ್ಯ ಪರೀಕ್ಷೆಯ ಘಟ್ಟದಲ್ಲಿದ್ದಾಗ ಪರೀಕ್ಷೆಗಾಗಿ ಎಷ್ಟು ಹೊತ್ತು ಮತ್ತು ಹೇಗೆ ತಯಾರಿ ಮಾಡಿಕೊಳ್ಳುತ್ತಿದ್ದಿರಿ? ಈ ಮಾತನ್ನು ನಾನು ನಿಮಗೆ ಹೇಳಿದಾಗ ನಿಮ್ಮ ಉತ್ತರ ಏನಿರಬಹುದೆಂಬುದನ್ನು ಊಹಿಸಲೇ. ನಾನು ಚೆನ್ನಾಗಿ ಓದಲು ಸಾಧ್ಯವಾಗಲಿಲ್ಲ. ನಮ್ಮ ಮಗುವಾದರೂ ಚೆನ್ನಾಗಿ ಓದಲಿ. ನಮಗೆ ನಮ್ಮ ಕಾಲದಲ್ಲಿ ಇಷ್ಟೆಲ್ಲಾ ಬೆಂಬಲ ಇರಲಿಲ್ಲ, ಇದ್ದ ಪ್ರೋತ್ಸಾಹದಲ್ಲೇ ಅಷ್ಟು ಸಾಧನೆ ಮಾಡಿದೆವು ಎನ್ನುತ್ತೀರಾ ತಾನೇ?

ಹೌದು! ನಾವು ಮಕ್ಕಳಾಗಿದ್ದಾಗ ಮಾಡಲು ಸಾಧ್ಯವಾಗದ ಸಾಧನೆಗಳಿಗೆ ನೆಪಗಳನ್ನು ನಾವೆಲ್ಲಾ ಎಷ್ಟು ಸಹಜವಾಗಿ ಹೇಳುತ್ತೇವಲ್ಲವೇ? ಅದೇ ನಮ್ಮ ಮಕ್ಕಳ ವಿಷಯಕ್ಕೆ ಬಂದಾಗ ನಾವು ಮಾಡಲು ಸಾಧ್ಯವಾಗದ ಸಾಧನೆಗಳನ್ನು ಮಾಡಲಿ ಎಂದು ನಿರೀಕ್ಷಿಸುತ್ತೇವೆ. ಇರಲಿ! ಎಲ್ಲ ತಂದೆ-ತಾಯಿಯರಿಗಿರಬೇಕಾದ ಆಸೆ, ನಿರೀಕ್ಷೆಗಳು ನಿಮ್ಮಲ್ಲೂ ಇರುವುದು ತಪ್ಪಲ್ಲ. ಆದರೆ, ನೀವು ನಿಮ್ಮ ಮಗುವಿನ ಸ್ಥಾನದಲ್ಲಿ ನಿಂತು ಸ್ವಲ್ಪ ಯೋಚಿಸಿ. ನಿಮ್ಮ ಆಸೆ, ನಿರೀಕ್ಷೆಗಳು ಭಾರವಾಗಿ, ನಿಮ್ಮ ಮಗುವಿಗೆ ಆಯಾಸವಾಗದಂತೆ ನೋಡಿಕೊಳ್ಳುವ ಹೊಣೆಯೂ ನಿಮ್ಮ ಮೇಲಿದೆಯಲ್ಲವೇ? ಹಾಗಾದರೆ ನಾನೇನು ಮಾಡಬೇಕೆನ್ನುತ್ತೀರಾ? ನಿಮ್ಮ ಆಸೆ, ನಿರೀಕ್ಷೆಗಳನ್ನು ನವಿರಾಗಿ ನಿಮ್ಮ ಮಗುವಿಗೆ ತಿಳಿಸುವುದು ತಪ್ಪಲ್ಲ. ಆದರೆ ನಿಮ್ಮ ಮನದ ಬಯಕೆ, ನಿರೀಕ್ಷೆಗಳಷ್ಟೇ ಸಾಧನೆ ಮಾಡಬೇಕೆಂಬ ವಿಷಯವನ್ನು ಪದೇ ಪದೇ ನೆನಪಿಸಿ, ಅವರನ್ನು ಬಸವಳಿಯುವಂತೆ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ.

ನಾನು ಎಷ್ಟು ಹೇಳಿದರೂ ಅಷ್ಟೇ, ಸರಿಯಾಗಿ ಓದುವುದಿಲ್ಲ ಎಂಬ ಮಾತನ್ನು ನೀವು ಆಗಾಗ್ಗೆ ನಿಮ್ಮ ಮಗುವಿಗೆ ಹೇಳುತ್ತಿರಬಹುದು. ಆದರೆ ಒಂದು ಮಾತು ನಿಮಗೆ ತಿಳಿಸಲು ಇಚ್ಛಿಸುತ್ತೇನೆ. ಟೀಕೆ, ಮೂದಲಿಕೆ ಹಾಗೂ ಋಣಾತ್ಮಕ ಹೇಳಿಕೆಗಳು ನಿಮ್ಮ ಮಗುವಿನ ಮನವನ್ನು ಕಲಕಿ, ಉತ್ತಮ ಸಾಧನೆ ತೋರಲು ಅಡ್ಡಿಯಾಗುತ್ತವೆ. ಈ ಕಾರಣದಿಂದ ಸಾಧ್ಯವಾದಷ್ಟು ಮೃದು ಮಾತುಗಳಿಂದ ತಿಳಿಸಿ ಹೇಳುವುದು ಪರಿಣಾಮಕಾರಿ. ಇದರ ಜೊತೆ ಸೂಕ್ತ ಸಂದರ್ಭದಲ್ಲಿ ನಿಮ್ಮ ಮಗುವಿನ ಸಾಧನೆಯನ್ನು ಗುರುತಿಸಿ, ಪ್ರಶಂಸಿಸಿ. ಅತಿಚಿಕ್ಕ ಸಾಧನೆಯೇ ಆದರೂ, ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದರಿಂದ, ನಿಮ್ಮ ಮಗುವಿನಲ್ಲಿ ಸಾರ್ಥಕದ ಭಾವನೆಗಳುಂಟಾಗಿ ಹೆಚ್ಚಿನ ಸಾಧನೆಗೆ ಮುನ್ನುಡಿ ಬರೆಯುತ್ತವೆ. ನಿಮ್ಮ ಮಗುವಿನ ಪರೀಕ್ಷೆಯ ಈ ದಿನಗಳಲ್ಲಿ ಅವರನ್ನು ಟೀಕಿಸಿ, ಮನ ನೋಯಿಸದೇ ಅವರ ಜೊತೆ ನಿಲ್ಲುತ್ತೀರೆಂದು ಭಾವಿಸಲೇ?

ನಿಮ್ಮ ಮಗು ನಿಮಗೆ ಬೇಕಾದಷ್ಟು ಅಂಕಗಳನ್ನು ತೆಗೆಯುತ್ತಿಲ್ಲವೆಂಬ ನೋವು ನಿಮಗಿದೆ ತಾನೇ? ಎಷ್ಟು ಅಂಕ ಬಂದರೆ ನಿಮಗೆ ತೃಪ್ತಿಯಾಗಬಹುದು? ಎಲ್ಲಾ ವಿಷಯಗಳಲ್ಲೂ ನೂರಕ್ಕೆ ನೂರೇ ತೆಗೆಯಬೇಕೆಂಬ ಆಸೆ ನಿಮಗಿದೆ ತಾನೇ? ನಿಮ್ಮ ಮಗುವನ್ನು ಅಂಕ ಗಳಿಸುವ ಯಂತ್ರವೆಂದು ನಿರೀಕ್ಷೆ ಮಾಡದಿರಿ. ಒಂದಷ್ಟು ಕಡಿಮೆ ಅಂಕಗಳನ್ನು ತೆಗೆದರೂ ಆದೀತು ಎಂಬ ಉದಾರ ಧೋರಣೆಯಿರಲಿ. ಅಂಕಗಳೇ ಎಲ್ಲವೂ ಅಲ್ಲವೆಂಬುದನ್ನು ನಾವೆಲ್ಲ ಮರೆಯಬಾರದಲ್ಲವೇ? ಈ ಅಂಕಗಳ ಗಳಿಕೆಯ ಸ್ಪರ್ಧೆಗಿಂತ ಜೀವನ ದೊಡ್ಡದಲ್ಲವೇ. ಪೋಷಕರಾಗಿ ನಮ್ಮ ವಿಪರೀತದ ನಿರೀಕ್ಷೆಗಳು ಮಕ್ಕಳಲ್ಲಿ ಎಂತಹ ಭಯ, ಭೀತಿಗಳನ್ನು ಸೃಷ್ಟಿಸಬಹುದೆಂಬುದನ್ನು ಸ್ವಲ್ಪ ಅಂದಾಜಿಸಿ, ಸ್ವಲ್ಪ ಸಡಿಲಿಕೆಗಳನ್ನು ನೀಡುವುದು ಉತ್ತಮವೆಂದು ನನ್ನ ಭಾವನೆ. ಮಕ್ಕಳಿಗೆ ನೀಡುವ ಇಂತಹ ಸಡಿಲಿಕೆ, ಸ್ವಾತಂತ್ರ್ಯಗಳು ಅದ್ಭುತ ಸಾಧನೆಗೆ ಮುನ್ನುಡಿ ಬರೆಯುತ್ತವೆ.

ನಿಮಗೆ ಹೆಚ್ಚು ತಿಳಿಸಿ ಹೇಳುವಷ್ಟು ನಾನು ಶಕ್ಯನಲ್ಲ. ನನ್ನ ವಿನಮ್ರ ಮನವಿಯಿಷ್ಟೇ. ನಿಮ್ಮ ಮಗುವಿನ ಪರೀಕ್ಷಾ ಕಾಲದಲ್ಲಿ ನೀವು ಅವರಿಗೆ ಒಬ್ಬ ಗೆಳೆಯರಾಗಿ ಅವರಿಗೆ ಒತ್ತಾಸೆಯಾಗಿ ನಿಲ್ಲಿ. ಅವರಿಗೆ ಸ್ಫೂರ್ತಿ, ಪ್ರೇರಣೆಗಳನ್ನು ತುಂಬಿ. ಇನ್ನೊಂದು ಬಹುಮುಖ್ಯ ಮಾತನ್ನು ತಿಳಿಸಿ, ನನ್ನ ಪತ್ರ ಮುಗಿಸುತ್ತೇನೆ. ಪರೀಕ್ಷೆ ಮುಗಿದು, ಫಲಿತಾಂಶ ಬಂದ ದಿನದಂದು, ನಿಮ್ಮ ಮಗುವಿನ ಫಲಿತಾಂಶ ಏನೇ ಆದರೂ ಪಡೆದ ಫಲಿತಾಂಶಕ್ಕೆ ಅಭಿನಂದನೆ ಸಲ್ಲಿಸುವುದನ್ನು ಮರೆಯಬೇಡಿ.  ಎಷ್ಟೇ ಆಗಲಿ ಜೀವನ ದೊಡ್ಡದಲ್ಲವೇ. ಇಂತಹ ನೂರಾರು ಪರೀಕ್ಷೆಗಳನ್ನು ಯಶಸ್ವಿಯಾಗಿ ಗೆದ್ದು ಬರುವ ಸಾಮಥ್ರ್ಯ ನಿಮ್ಮ ಮಗುವಿಗಿದೆ ಎಂಬ ವಿಶ್ವಾಸ ನನ್ನಲ್ಲಿದೆ

ಪರೀಕ್ಷೆ ಒಂದು! ಪತ್ರಗಳು ಎರಡು

ಪರೀಕ್ಷೆ ಒಂದು! ಪತ್ರಗಳು ಎರಡು!! - ಡಾ.ಎಚ್.ಬಿ.ಚಂದ್ರಶೇಖರ್, ಹೇಗಿದ್ದೀಯಾ? ನನಗೆ ಗೊತ್ತು ನೀನು ನಿನ್ನ ಜೀವನದ ಪ್ರಮುಖ ಘಟ್ಟದ ಬಹು ಮುಖ್ಯ ಪರೀಕ್ಷೆಯನ್ನು ಬರೆಯಲು ತಯಾ...


ಆಕಾಶ ವೀಕ್ಷಣೆ ಗ್ರಹ ತಾರೆಗಳ ಮಾಹಿತಿ
- ಬೇದ್ರೆ ಮಂಜುನಾಥ,

ಗ್ರೇಟ್ಬ್ರಿಟನ್ನಲ್ಲಿರುವ ಯಾರ್ಕ್ಶೈರ್ ಡೇಲ್ಸ್ನ ನಾರ್ತ್ ಮೂರ್ಸ್ ರಾಷ್ಟ್ರೀಯ ಉದ್ಯಾನದಲ್ಲಿ ಪ್ರತಿ ಫೆಬ್ರವರಿಯಲ್ಲಿ ಡಾರ್ಕ್ ಸ್ಕೈಸ್ ಫೆಸ್ಟಿವಲ್ ಎಂಬ ನಿರಭ್ರ ಕೃಷ್ಣ ಆಕಾಶದಲ್ಲಿನ ಗ್ರಹ ತಾರೆಗಳ ಅಧ್ಯಯನಕ್ಕೆ ಮೀಸಲಾಗಿರಿಸಿರುವ ಪಾಕ್ಷಿಕ ಏಪರ್ಾಡಾಗುತ್ತಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಗ್ರಹ ತಾರೆಗಳ ಪರಿಚಯಮಾಡಿಕೊಂಡು ಸಂಭ್ರಮಿಸುವ ಅವಕಾಶ ಕಲ್ಪಿಸಲಾಗಿದೆ.  ಈ ಬಾರಿ ಫೆಬ್ರವರಿ 15 ರಿಂದ ಮಾರ್ಚ್ 03 ರವರೆಗೆ ನಡೆಯುವ ಈ ಆಕಾಶ ವೀಕ್ಷಣೆಯ ಉತ್ಸವಕ್ಕಾಗಿ ತಂಡೋಪತಂಡವಾಗಿ ಜನ ಹೆಸರುಗಳನ್ನು ನೋಂದಾಯಿಸಿದ್ದಾರಂತೆ! ನಾರ್ತ್ಮೂರ್ಸ್ನಲ್ಲಿ ಮಾತ್ರವಲ್ಲದೇ ಬ್ರಿಟನ್ನಿನ ವಿವಿಧ ರಾಷ್ಟ್ರೀಯ ಉದ್ಯಾನಗಳಲ್ಲಿ, ವಿಶೇಷವಾಗಿ ನದಿ ಪಾತ್ರಗಳಲ್ಲಿ ಕ್ಯಾಂಪ್ ಹಾಕಿ, ಬಾಹ್ಯಾಕಾಶ ಮತ್ತು ಗ್ರಹ-ತಾರೆಗಳ ಉಗಮ, ಅಂತ್ಯ, ನಿಹಾರಿಕೆಗಳು, ತಾರಾಪುಂಜಗಳು, ಉಲ್ಕೆಗಳು, ಧೂಮಕೇತುಗಳು ಇತ್ಯಾದಿ ಅಂತರಿಕ್ಷ ವಿಸ್ಮಯಗಳ ಪರಿಚಯ ಮಾಡಿಕೊಳ್ಳುವ ಸದವಕಾಶ ಕಲ್ಪಿಸಲಾಗಿದೆಯಂತೆ. ವಿಶ್ವದ ಹಲವು ದೇಶಗಳಲ್ಲಿ ಮಾಘಮಾಸದ ಶುಭ್ರ ರಾತ್ರಿಗಳನ್ನು ಪ್ರಕೃತಿಯ ಮಡಿಲಲ್ಲಿ, ಪ್ರಶಾಂತ ಪರಿಸರಗಳಲ್ಲಿ ಹಾಕಿರುವ ಕ್ಯಾಂಪ್ಗಳಲ್ಲಿ, ಉಳಿದುಕೊಂಡು ಆಕಾಶವೀಕ್ಷಣೆ ಮಾಡುವ ಹವ್ಯಾಸ ಬೆಳೆಸುವ ವಿಜ್ಞಾನಾಸಕ್ತರ ತಂಡಗಳು ಸಕ್ರಿಯವಾಗಿ ಸೇವೆಸಲ್ಲಿಸುತ್ತಿವೆ. ಈ ವರ್ಷ ವಿಶೇಷವಾಗಿ ಪ್ರತಿ ತಿಂಗಳೂ ನಕ್ಷತ್ರಗಳ ರಾಶಿಗಳಿಂದ ಉಲ್ಕಾಪಾತ ಉಂಟಾಗುತ್ತಿದ್ದು ಖಗೋಳಾಸಕ್ತರ ಕಣ್ಣಿಗೆ ಹಬ್ಬ ತರುತ್ತಿವೆ.

ಸಾಮಾನ್ಯವಾಗಿ ಮಾಘಮಾಸದ ರಾತ್ರಿಗಳಲ್ಲಿ ಆಕಾಶ ಶುಭ್ರವಾಗಿರುತ್ತದೆ. ಜನವರಿ 21 ರಿಂದ ಫೆಬ್ರವರಿ 19 ರವರೆಗಿನ ಈ ಮಾಘ ಮಾಸದ ಶುಭ್ರ ರಾತ್ರಿ ಆಕಾಶದತ್ತ ಒಮ್ಮೆ ಕಣ್ಣು ಹಾಯಿಸಿ.  ಅಗಣಿತ ತಾರಾ ಸಮೂಹವೇ ನಿಮ್ಮ ಕಣ್ಮನ ಸೆಳೆಯುತ್ತದೆ, ಅಲ್ಲವೇ? ಈ ದಿನಗಳು ನಕ್ಷತ್ರಗಳ ಅಥವಾ ಆಕಾಶ ವೀಕ್ಷಣೆಗೆ ಸೂಕ್ತವಾಗಿವೆ.  ಪೂರ್ಣ ಚಂದಿರನಿರುವ ರಾತ್ರಿ ನಿಮಗೆ ಹೆಚ್ಚು ಬೆಳಕಿರುವ ಕಾರಣ ಗ್ರಹತಾರೆಗಳು ಸ್ಪಷ್ಟವಾಗಿ ಕಾಣದಿರಬಹುದು.  ಚಂದಿರನ ಬೆಳಕು ಅಷ್ಟಾಗಿ ಇಲ್ಲದ ರಾತ್ರಿಗಳು ಮತ್ತು ಅಮವಾಸ್ಯೆಯಂದು ನಿಚ್ಚಳವಾಗಿ ಕಾಣುವ ಅನೇಕ ತಾರಾ ಸಮೂಹಗಳನ್ನು ಬರಿಗಣ್ಣಿನಿಂದಲೇ ಗುರುತಿಸಲು ಸಾಧ್ಯ.  ಸಂಜೆಯ ಆಕಾಶದಲ್ಲಿ ಕೆಂಪಗೆ ಹೊಳೆಯುವ ಮಂಗಳ ಗ್ರಹ ಗೋಚರಿಸಿದರೆ ಬೆಳಗಿನ ಜಾವದ ಪೂರ್ವಾಕಾಶದಲ್ಲಿ ಇನ್ನೂ ಕೆಲವು ಗ್ರಹಗಳು ನೋಡಲು ಸಿಗುತ್ತಿವೆ, ಹಲವು ರಾಶಿ ನಕ್ಷತ್ರಗಳನ್ನು ಸುಲಭವಾಗಿ ಪತ್ತೆಹಚ್ಚಲು ಇದು ಸಕಾಲ.

ಮಹಾವ್ಯಾಧ ನಕ್ಷತ್ರ ಪುಂಜ (ಓರಿಯನ್) ಮತ್ತು ಅದರಲ್ಲಿನ ಆರಿದ್ರಾ ನಕ್ಷತ್ರ (ಬೀಟಲ್ಗೀಸ್- ರೆಡ್ ಜಯಂಟ್), ಇದರ ಹತ್ತಿರದಲ್ಲೇ ಇರುವ ಲುಬ್ಧಕ (ಡಾಗ್ಸ್ಟಾರ್ ಸಿರಿಯಸ್), ವೃಷಭ ರಾಶಿ, ಸಿಂಹ ರಾಶಿ, ವೃಶ್ಚಿಕಾ ರಾಶಿ, ವಿವಿಧ ನಕ್ಷತ್ರ ಪುಂಜಗಳು, ನೂರಾರು ನಕ್ಷತ್ರಗಳನ್ನು ಗುರುತಿಸುವುದನ್ನು ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕರು ಹೇಳಿಕೊಟ್ಟಿರುತ್ತಾರೆ.  ನಮ್ಮ ದೇಶದ ವಿಜ್ಞಾನ್ ಪ್ರಸಾರ್ ಸಂಸ್ಥೆ ಮತ್ತು ವಿವಿಧ ತಾರಾಲಯಗಳು ನಕ್ಷತ್ರ ವೀಕ್ಷಣೆಯ ಕಿಟ್ ಗಳನ್ನು ಸಿದ್ಧಮಾಡಿ ಆಸಕ್ತರಿಗೆ ಒದಗಿಸುತ್ತಿವೆ. ವಿವಿಧ ಗಾತ್ರಗಳ ಲೆನ್ಸ್ಗಳನ್ನು ಖರೀದಿಸಿ, ಕೂಡ ಅತಿ ಕಡಿಮೆ ಖರ್ಚಿನಲ್ಲಿ ದೂರದರ್ಶಕವನ್ನು ತಯಾರಿಸಿಕೊಂಡು ಆಕಾಶದತ್ತ ಮುಖಮಾಡಿ ಗ್ರಹತಾರೆಗಳ ಪರಿಚಯ ಮಾಡಿಕೊಳ್ಳುವ ಸಮಯ ಇದು.  ಕೆಲವು ತಾರಾಲಯಗಳಲ್ಲಿ ನಕ್ಷತ್ರ ವೀಕ್ಷಣೆಗೆ ಸಹಾಯಮಾಡುವ ಚಲನಚಿತ್ರಗಳನ್ನು ತೋರಿಸುತ್ತಾರೆ.  ಕೆಲವೆಡೆ ನಕ್ಷತ್ರ ವೀಕ್ಷಣಾಲಯಗಳೂ ಇವೆ. ತಮಿಳುನಾಡಿನ ಕವಲೂರಿನಲ್ಲಿರುವ ವೈನುಬಪ್ಪು (ವೇಣುಬಾಪು) ನಕ್ಷತ್ರ ವೀಕ್ಷಣಾಲಯ ನಮ್ಮ ದೇಶದ ಹೆಮ್ಮೆಯ ವೇಧಶಾಲೆಯಾಗಿದೆ.

ಆಕಾಶ ವೀಕ್ಷಣೆ - ಗ್ರಹ ತಾರೆಗಳ ಮಾಹಿತಿ :
ಕನರ್ಾಟಕದ ಕೆಲವು ಆಕಾಶವಾಣಿ ಕೇಂದ್ರಗಳು ಆಕಾಶ ವೀಕ್ಷಣೆಯ ನೇರ ಪ್ರಸಾರ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ರೇಡಿಯೋ ಕೇಳುತ್ತಲೇ ಬರಿಗಣ್ಣಿನಲ್ಲಿ ಗೋಚರಿಸುವ ಗ್ರಹ-ತಾರೆಗಳ ಪರಿಚಯ ಮಾಡಿಕೊಳ್ಳುವ ಅವಕಾಶ ಇದು. ಆಕಾಶವಾಣಿ ಹಾಸನ ಕೇಂದ್ರವು ಪ್ರತಿ ಮಾಘಮಾಸದಲ್ಲಿ ಈ ಆಕಾಶ ವೀಕ್ಷಣೆ - ಗ್ರಹ ತಾರೆಗಳ ಮಾಹಿತಿ ನೇರ ಪ್ರಸಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ.  ರಾಜ್ಯದ ಮೊತ್ತಮೊದಲ ಆಕಾಶವಾಣಿ ಕೇಂದ್ರವಾಗಿರುವ ಆಕಾಶವಾಣಿ ಮೈಸೂರು ಕೇಂದ್ರವು ಈ ಫೆಬ್ರವರಿ 08 ರ ಶುಕ್ರವಾರ, ರಾತ್ರಿ 8.00 ರಿಂದ ಆಕಾಶವೀಕ್ಷಣೆ - ಗ್ರಹ ತಾರೆಗಳ ಮಾಹಿತಿ ಕಾರ್ಯಕ್ರಮವನ್ನು ಮೈಸೂರಿನ ಜೆ.ಪಿ. ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಸ್ಕೂಲ್ನ ಮಾಳಿಗೆಯಿಂದ ಬಿತ್ತರಿಸಿತು. ಇದರಲ್ಲಿ ಭಾರತೀಯ ಜ್ಞಾನ-ವಿಜ್ಞಾನ ಸಮಿತಿ ಮತ್ತು ಮೈಸೂರಿನ ಸೈನ್ಸ್ ಫೌಂಡೇಶನ್ನ ಟಿ. ಶಿವಲಿಂಗಸ್ವಾಮಿ, ಕಿರಣ್, ಜಿ.ಬಿ. ಸಂತೋಷ್ಕುಮಾರ್ ಮತ್ತಿತರರು ಭಾಗವಹಿಸಿ ಗ್ರಹ, ತಾರೆಗಳ ವಿಸ್ತೃತ ಮಾಹಿತಿ ಹಂಚಿಕೊಂಡರು

ಕನ್ನಡದಲ್ಲಿ ಖಗೋಳ ವಿಜ್ಞಾನದ ಕೃತಿಗಳು : ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆಸಕ್ತಿ ಕೆರಳಿಸಿ ವಿಜ್ಞಾನವನ್ನು ಕುತೂಹಲದಿಂದ ನೋಡುವಂತೆ, ಪ್ರಾಯೋಗಿಕವಾಗಿ ಕಲಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿರುವ ನವಕರ್ನಾಟಕ ಪ್ರಕಾಶನ ಖಗೋಳ ವರ್ಷ ಆಚರಣೆಯ ಸಂದರ್ಭದಲ್ಲಿ ಜವರಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿ ಡಾ. ಬಿ. ಎಸ್. ಶೈಲಜಾ ಅವರ ಆಗಸದ ಅಲೆಮಾರಿಗಳು, ಶುಕ್ರ ಸಂಕ್ರಮಣದ ಸಂದರ್ಭದಲ್ಲಿ ಶುಕ್ರಗ್ರಹದ ಸಂಕ್ರಮಣ ಹಾಗೂ ಐಸಾನ್ ಧೂಮಕೇತು ದರ್ಶನದ ಸಂದರ್ಭದಲ್ಲಿ ಬಾಲಂಕೃತ ಚುಕ್ಕಿ : ಧೂಮಕೇತು ಎಂಬ ಸಚಿತ್ರ ಕೃತಿಗಳನ್ನು ಪ್ರಕಟಿಸಿತ್ತು.  ಇವುಗಳಲ್ಲಿ ಮೊದಲೆರಡು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗಳು ದೊರೆತಿವೆ.

ಆಗಸದ ಅಲೆಮಾರಿಗಳು ಮತ್ತು ಹೊಸತು ವಾಚಿಕೆಯಾಗಿ ಪ್ರಕಟವಾಗಿದ್ದ ಬಾನಿಗೊಂದು ಕೈಪಿಡಿ ಕೃತಿಗಳು ಆಕಾಶಕಾಯಗಳ ಸಚಿತ್ರ ಪರಿಚಯ ಮಾಡಿಕೊಡುತ್ತವೆ. ಸರೋಜ ಪ್ರಕಾಶ್ ಅವರ ಬಾನಲ್ಲಿ ಗ್ರಹಗಣತಿ ಕೃತಿ ಕಳೆದ ಹತ್ತು ವರ್ಷಗಳಲ್ಲಿ ಮಾನವನ ಬುದ್ಧಿಮತ್ತೆಯ ಪ್ರತೀಕವಾಗಿ ಮೆರೆದ ಬಾಹ್ಯಾಕಾಶ ನೌಕೆಗಳ ಚಿತ್ರಣ, ವಿವಿಧ ರೀತಿಯ ದೂರದರ್ಶಕಗಳು, ಡೀಪ್ ಇಂಪ್ಯಾಕ್ಟ್ ಯೋಜನೆ, ಮಂಗಳನ ಅಂಗಳದಲ್ಲಿ ಇಳಿದ ವಿವಿಧ ಶೋಧ ನೌಕೆಗಳು, ಬಾನಲ್ಲಿ ನಡೆಸಲಾಗುತ್ತಿರುವ ಗ್ರಹಗಣತಿ, ಹಬಲ್ ದೂರದರ್ಶಕ, ಚಂದ್ರ ದೂರದರ್ಶಕ, ಜೇಮ್ಸ್ವೆಬ್ ದೂರದರ್ಶಕ,  ಸ್ಪೇಸ್ಷಟಲ್ಗಳು, ಪುಟಾಣಿ ಕೃತಕ ಉಪಗ್ರಹಗಳು, ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ನಲ್ಲಿ ನಡೆಯುತ್ತಿರುವ ಸಂಶೋಧನೆಗಳು, ಡೀಪ್ಸ್ಪೇಸ್ ಎಕ್ಸ್ಪ್ಲೊರೇಷನ್, ಹೊಸ ಗ್ರಹತಾರೆಗಳ ಶೋಧ, ಬಾನು-ಭುವಿ ಬೆಸೆಯುವ ಜಿಪಿಎಸ್ ತಂತ್ರಜ್ಞಾನ, ಗುರುಗ್ರಹದತ್ತ ನೆಗೆತ ಹೀಗೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದ್ದು, ಓದುಗರಲ್ಲಿ ಖಗೋಳ ವಿಜ್ಞಾನದ ಆಸಕ್ತಿ ಕೆರಳಿಸಿ, ಹೆಚ್ಚಿನ ಅಧ್ಯಯನಕ್ಕೆ ಪ್ರೇರಣೆ ನೀಡುವಂತಿದೆ. ಉದಯ ಪಾಟೀಲ್ ಅವರು ಕಾರ್ಟೂನ್ಗಳ ಸಹಾಯದಿಂದ ಆಕರ್ಷಕವಾಗಿ ನಿರೂಪಿಸಿರುವ ಖಗೋಳ ವಿಜ್ಞಾನದ ಕಥೆ, (ಕನ್ನಡಕ್ಕೆ : ಡಾ. ಪಿ. ಆರ್. ವಿಶ್ವನಾಥ್), ಬಿಮಾನ್ ಬಸು ಅವರ ತಾರಾಂತರಂಗ (ಕನ್ನಡಕ್ಕೆ : ಕೊಳ್ಳೇಗಾಲ ಶರ್ಮ), ಡಾ. ಮಹೀಧರ ನಳಿನೀ ಮೋಹನ್ ಅವರ ಕ್ಯಾಲೆಂಡರ್ ಕಥೆ ಮತ್ತು ಡಾ. ಪಿ. ಆರ್. ವಿಶ್ವನಾಥ್ ಅವರ ಭೂಮಿಯಿಂದ ಬಾನಿನತ್ತ ಕೃತಿಗಳು ವಯೋಭೇದವಿಲ್ಲದೇ ಓದಿಸಿಕೊಳ್ಳುವ, ಅಪರೂಪದ ಖಗೋಳ ವಿದ್ಯಮಾನಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೃತಿಗಳಾಗಿವೆ.

ಪುಟ್ಟ ದೂರದರ್ಶಕವೊಂದರ ಸಹಾಯದಿಂದ ಆಗಸದೆಡೆಗೆ ಮುಖ ಮಾಡಿ, ಚಂದ್ರ, ಗುರು, ಶುಕ್ರ, ಶನಿ, ಅವುಗಳ ಉಪಗ್ರಹಗಳು, ಬೇರೆ ಬೇರೆ ನಕ್ಷತ್ರ ಪುಂಜಗಳನ್ನು ಪರಿಚಯಿಸಿಕೊಳ್ಳುವುದರಿಂದ ಆರಂಭಿಸಿ ಭೂಮಿಯ ಮೇಲಿರುವ ಬೃಹತ್ಗಾತ್ರದ ದೂರದರ್ಶಕಗಳು, ರೇಡಿಯೋ ದೂರದರ್ಶಗಳು ಮತ್ತು ಜಾಲಗಳು, ಶುಭ್ರ ಆಗಸವಿರುವ ಉನ್ನತ ಶಿಖರಗಳಲ್ಲಿ ಸ್ಥಾಪಿಸಲಾಗಿರುವ ವೇಧಶಾಲೆಗಳು,  ಜನಸಾಮಾನ್ಯರಿಗೆ ಪರಿಚಿತವಿರುವ ಮಳೆ ನಕ್ಷತ್ರಗಳಿಂದ ಹಿಡಿದು ದೂರದಲ್ಲಿರುವ ನಕ್ಷತ್ರಗಳನ್ನು ನೋಡುವ, ಅಧ್ಯಯನ ಮಾಡುವ ಸಂಗತಿಗಳನ್ನು ಕನ್ನಡದ ಓದುಗರಿಗೆ ಸರಳವಾಗಿ ತಿಳಿಯಪಡಿಸುವ ಇಂತಹ ಹತ್ತಾರು ಕೃತಿಗಳನ್ನು ನವಕನರ್ಾಟಕ ಪ್ರಕಾಶನವು ಪ್ರಕಟಿಸುತ್ತಾ ಬಂದಿದೆ.  ಈಗಾಗಲೇ ಪ್ರಕಟಿಸಿರುವ ನಾಲ್ಕು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಲ್ಲಿ ಶೇಕಡಾ 40 ರಷ್ಟು ಕೃತಿಗಳು ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದ್ದು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಪ್ರಚಾರಕ್ಕೆ ನವಕನರ್ಾಟಕ ಪ್ರಕಾಶನ ಬದ್ಧವಾಗಿರುವುದನ್ನು ತೋರಿಸುತ್ತದೆ. ಈ ಕೃತಿಗಳನ್ನು ನಮ್ಮ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಕೊಂಡು, ಓದಿ, ಜ್ಞಾನದ ಸಿಹಿಯನ್ನು ಹಂಚಿಕೊಳ್ಳಬೇಕಿದೆ.

ವಿಜ್ಞಾನ ಮಾಸ / ವಿಜ್ಞಾನ ದಿನ : ಫೆಬ್ರವರಿ ತಿಂಗಳು ವಿಜ್ಞಾನ ಮಾಸ. ಫೆಬ್ರವರಿ 28 ಭಾರತೀಯ ರಾಷ್ಟ್ರೀಯ ವಿಜ್ಞಾನ ದಿನ. ಮಕ್ಕಳಿಗೆ ವಿಜ್ಞಾನದ ಮೂಲ ಪರಿಕಲ್ಪನೆಗಳನ್ನು ಪರಿಚಯಿಸುವ, ಅವರಲ್ಲಿ ಅಧ್ಯಯನದ ಆಸಕ್ತಿ ಕೆರಳಿಸುವ ನಿಟ್ಟಿನಲ್ಲಿ ಈ ಆಚರಣೆ ಅತ್ಯಗತ್ಯ. ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರು 1928 ರ ಫೆಬ್ರವರಿ 28 ರಂದು ರಾಮನ್ ಪರಿಣಾಮ ಎಂದೇ ಖ್ಯಾತವಾದ ಅಪೂರ್ವ ವಿದ್ಯಮಾನವನ್ನು ಕಂಡು ಹಿಡಿದರು. 1928 ರ ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಸೈನ್ಸ್ ಅಸೋಸಿಯೇಷನ್ ಮತ್ತು ಸೆಂಟ್ರಲ್ ಕಾಲೇಜಿನ ವಿಜ್ಞಾನ ಸಂಘಗಳ ಸದಸ್ಯರನ್ನು ಕುರಿತು ಭಾಷಣ ಮಾಡಿ ತಮ್ಮ ಬೆಳಕಿನ ಪ್ರಯೋಗಗಳನ್ನು ಮತ್ತು ಪರಿಣಾಮವನ್ನು ವಿವರಿಸಿದರು. ಇದಕ್ಕಾಗಿ 1929 ರಲ್ಲಿ ಸರ್ ಬಿರುದೂ, 1930ರಲ್ಲಿ ನೊಬಲ್ ಪ್ರಶಸ್ತಿಯೂ ಅವರಿಗೆ ದೊರೆತವು. ಈ ಅಪೂರ್ವ ಘಟನೆಯ ಸ್ಮರಣಾರ್ಥ ಭಾರತ ಸರ್ಕಾರ ಫೆಬ್ರವರಿ 28 ರ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಘೋಷಿಸಿದೆ. ಇದೇ ತಿಂಗಳಲ್ಲಿ ಮಾಘ ಮಾಸವೂ ಇರುವುದರಿಂದ ರಾತ್ರಿಯ ಶುಭ್ರ ಆಗಸದಲ್ಲಿ ನಕ್ಷತ್ರಗಳನ್ನು ಗುರುತಿಸಿ, ಖಗೋಳ ವಿಸ್ಮಯಗಳನ್ನು ಪರಿಚಯಿಸುವ ಪ್ರಾಯೋಗಿಕ ಕಲಿಕೆಗೆ ಅಪೂರ್ವ ಅವಕಾಶವೂ ಇದೆ

ಆಕಾಶ ವೀಕ್ಷಣೆ ಗ್ರಹ ತಾರೆಗಳ ಮಾಹಿತಿ

ಆಕಾಶ ವೀಕ್ಷಣೆ ಗ್ರಹ ತಾರೆಗಳ ಮಾಹಿತಿ - ಬೇದ್ರೆ ಮಂಜುನಾಥ, ಗ್ರೇಟ್ಬ್ರಿಟನ್ನಲ್ಲಿರುವ ಯಾರ್ಕ್ಶೈರ್ ಡೇಲ್ಸ್ನ ನಾರ್ತ್ ಮೂರ್ಸ್ ರಾಷ್ಟ್ರೀಯ ಉದ್ಯಾನದಲ್ಲಿ ಪ್ರತಿ ಫೆಬ್ರವರ...

 


ಸಮನ್ವಯ ಶಿಕ್ಷಣ
- ಎನ್.ಶೈಲಜಾ

ಜನಿಸಿದ ಎಲ್ಲಾ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕಿರುತ್ತದೆ 6 ರಿಂದ 14 ವರ್ಷದ ಮಕ್ಕಳಿಗೆ ಸರ್ಕಾರವು ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಆದರೆ ಎಲ್ಲಾ ಮಕ್ಕಳೂ ಒಂದೇ ರೀತಿ ಇರುವುದಿಲ್ಲ. ಕೆಲ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ನ್ಯೂನ್ಯತೆಗಳನ್ನು ಹೊಂದಿರುತ್ತಾರೆ. ಅಂತಹ ಮಕ್ಕಳಿಗೆ ಹೇಗೆ ಶಿಕ್ಷಣ ನೀಡುವುದು ? ಎಲ್ಲಾ ಸಾಮಾನ್ಯ ಮಕ್ಕಳ ಜೊತೆ ಶಿಕ್ಷಣ ನೀಡುವುದೋ ಅಥವಾ ಅಂತಹ ಮಕ್ಕಳನ್ನು ಪ್ರತ್ಯೇಕವಿರಿಸಿ ಶಿಕ್ಷಣ ಕೊಡಬೇಕೇ ಎಂಬುದು ಒಂದು ಪ್ರಶ್ನೆ.

ಸಾಮಾನ್ಯ ಶಿಕ್ಷಣವು ಎಲ್ಲಾ ರೀತಿಯ ಮಕ್ಕಳನ್ನು ಒಳಗೊಂಡಿರುತ್ತದೆ. ಸರ್ವರಿಗೂ ಶಿಕ್ಷಣ ಎಂಬ ವಿಚಾರಧಾರೆಯ ವ್ಯಾಪ್ತಿಯಲ್ಲಿ ವಿವಿಧ ಸಾಮಾಥ್ರ್ಯವುಳ್ಳ ಮಕ್ಕಳು ಅಂದರೆ ವಿಕಲಚೇತನರು, ವಿಶೇಷ ಅಗತ್ಯವುಳ್ಳ ಮಕ್ಕಳು ಕೂಡ ಎಲ್ಲರಂತೆ ಶಿಕ್ಷಣ ಪಡೆಯಲು ಬದ್ದರಾಗಿದ್ದಾರೆ. ಈ ಮಕ್ಕಳು ಸಾಮಾನ್ಯ ಮಕ್ಕಳ ಜೊತೆಯಲ್ಲಿಯೇ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಬೇಕು ಎಂಬುದೇ ಸರ್ಕಾರ ಸಮನ್ವಯ ಶಿಕ್ಷಣವನ್ನು ಜಾರಿಗೆ ತಂದಿದೆ.

ತರಗತಿಯಲ್ಲಿ ಕಲಿಸುವಾಗ ಎಲ್ಲ ಮಕ್ಕಳಿಗೂ ಸಮಾನ ವಾತಾವರಣವನ್ನು ಒದಗಿಸುತ್ತಾರೆ. ಆದರೂ ಮಕ್ಕಳ ಗ್ರಹಿಕೆ ಒಂದೇ ರೀತಿ ಇರುವುದಿಲ್ಲ, ಮಗುವಿಗೆ ಗ್ರಹಿಸಲು ನ್ಯೂನ್ಯತೆ ಇದ್ದಾಗ ಕಲಿಕೆಯ ನಿರೀಕ್ಷೆಗಳ ಮಟ್ಟ ಬದಲಾಗಬೇಕಾಗುತ್ತದೆ ವಿವಿಧ ಸಾಮಥ್ರ್ಯವುಳ್ಳ ಮಕ್ಕಳನ್ನು ಒಂದೇ ತರಗತಿಯಲ್ಲಿಟ್ಟು ಕಲಿಕೆ ಬೋಧನೆಯ ವಿಧಾನಗಳನ್ನು ವೈಯುಕ್ತಿಕ ಭಿನ್ನತೆ ಅಗತ್ಯತೆ, ಸರಿಹೊಂದಿಸಿ ಬೋಧಿಸುವುದರಿಂದ ಎಲ್ಲಾ ಮಕ್ಕಳು ತಮ್ಮ ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಮತ್ತು ವಿಕಾಸ ಹೊಂದಲು ಸಾಧ್ಯವಾಗುತ್ತದೆ. ಇಂತಹ ಸಾಧ್ಯತೆಯ ಆಶಯವೇ ಸಮನ್ವಯ ಶಿಕ್ಷಣದ್ದಾಗಿದೆ.

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಮಾನ್ಯ ಮಕ್ಕಳ ಜೊತೆ ಶಿಕ್ಷಣ ಕೊಡಬೇಕೆ, ಕೊಟ್ಟರೆ ಅದು ಯಶಸ್ವಿಯಾದೀತೇ ಎಂಬ ಗೊಂದಲ ಕಾಡುವುದು ಸಹಜ ಆದರೆ ಅನುಕೂಲಕರ ಪರಿಸರ, ಸ್ಪೂರ್ತಿ, ವಿಶೇಷ ತರಬೇತಿ ದೊರೆತಾಗ ವಿಕಲ ಚೇತನ ಮಕ್ಕಳು ಇತರರಂತೆ ಸಾಮಾನ್ಯರಿಗಿಂತ ಹೆಚ್ಚು ಸಾಧನೆ ಮಾಡುತ್ತಾರೆ, ಮಾಡಿದ್ದಾರೆ ಎಂಬುದು ಅನೇಕ ಸಂದರ್ಭಗಳಲ್ಲಿ ದೃಢಪಟ್ಟಿದೆ.

ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಹಾಗು ಕಲಿಕೆಯಲ್ಲಿ ಭಿನ್ನತೆಯುಳ್ಳ ಮಕ್ಕಳಿಗೆ ಅವಕಾಶ ಒದಗಿಸುವುದು ಒಂದು ನಾಗರೀಕ ವ್ಯವಸ್ಥೆಯ ಜವಾಬ್ದಾರಿಯಾಗಿದೆ ಸಾಮಾನ್ಯ ಶಾಲೆ ಮತ್ತು ತರಗತಿಗಳಲ್ಲಿ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಮನ್ವಯಗೊಳಿಸುವುದು ಮಾನವ ಹಕ್ಕುಗಳ ಆಶಯಕ್ಕೆ ಪೂರಕವಾಗಿದೆ.

ವಿಶ್ವಸಂಸ್ಥೆಯು ಮಗುವಿನ ಹಕ್ಕುಗಳ ಬಗ್ಗೆ ಮಾಡಿದ ಒಪ್ಪಂದದ ಪ್ರಕಾರ ಯಾವುದೇ ಸ್ವರೂಪದ ನ್ಯೂನ್ಯತೆ ಇರುವ ಮಗು ಅದೇ ವಯಸ್ಸಿನ ಸಾಮಾನ್ಯ ಮಕ್ಕಳಂತೆ ಗೌರವಾನ್ವಿತ ಬಾಳ್ವೆ ನಡೆಸಲು ಬೇಕಾಗಿರುವ ಎಲ್ಲಾ ಹಕ್ಕುಗಳನ್ನು ಹೊಂದಿರುತ್ತದೆ ಎಂದು ಘೋಷಿಸಿದೆ.

ಯುನೆಸ್ಕೋರವರ 1994ರ ಸಲಮಾಂಕ ಹೇಳಿಕೆಯು ಭಿನ್ನತೆ ಅಥವಾ ಯಾವುದೇ ರೀತಿಯ ಸಮಸ್ಯೆಗಳನ್ನು ಲೆಕ್ಕಿಸದೆ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಒದಗಿಸಲು ಅನುವಾಗುವಂತೆ ಶೈಕ್ಷಣಿಕ ಸೇವೆಗಳನ್ನು ಉತ್ತಮ ಪಡಿಸಲು ಸೂಚಿಸಿದೆ. ಅದರಂತೆ ಎಲ್ಲರಿಗೂ ಭೇದವಿಲ್ಲದೆ ಶಿಕ್ಷಣ ನೀಡಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾಮುಖ್ಯತೆ ಹಾಗು ಆಯವ್ಯಯದಲ್ಲಿ ಆದ್ಯತೆಯನ್ನು ನೀಡುವಂತೆ ಎಲ್ಲಾ ದೇಶದ ಸರ್ಕಾರಗಳಿಗೂ ಕರೆ ನೀಡಿದೆ, ನ್ಯೂನ್ಯತೆಯುಳ್ಳ ಮಕ್ಕಳನ್ನು ಸಮೀಪದ ಸಾಮಾನ್ಯ ಶಾಲೆಗಳಿಗೆ ದಾಖಲಿಸಿ ಕಲಿಸುವಂತೆ ಕರೆ ನೀಡಿದೆ. ಸಾಮಾನ್ಯ ಶಿಕ್ಷಣವು ಎಲ್ಲಾ ರೀತಿಯ ಮಕ್ಕಳನ್ನು ಒಳಗೊಂಡಿರುತ್ತದೆ, ಆದರೆ ಅತೀ ತೀವ್ರ ಬುದ್ಧಿಮಾಂದ್ಯ, ಮೆದುಳಿನ ಪಾಶ್ರ್ವವಾಯು ಆಟಿಸಂ ಮತ್ತು ಬಹುವಿಧ ಅಂಗವಿಕಲತೆ ಹೊಂದಿದವರನ್ನು ಸಮನ್ವಯ ಶಿಕ್ಷಣದ ಅಡಿಯಲ್ಲಿ ತರಲು ಸಾಧ್ಯವಿಲ್ಲ. ವಿಕಲ ಚೇತನರು, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣ ವರವಾಗಿದೆ.

ಸಮನ್ವಯ ಶಿಕ್ಷಣದ ಮುಖ್ಯ ಸವಾಲು ಎಂದರೆ ಅದಕ್ಕೆ ಸಂಬಂಧಿಸಿದ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡುವುದು ಮತ್ತು ಎಲ್ಲಾ ವಿಧದ ಕಲಿಕಾ ಅಗತ್ಯಗಳನ್ನು ಅಲ್ಲಿ ಪೂರೈಸುವುದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಭಿನ್ನ ಸಾಮಾಥ್ರ್ಯವುಳ್ಳ ಮಕ್ಕಳ ಕಲಿಕೆಯನ್ನು ಏಕಕಾಲದಲ್ಲಿ ತರಗತಿಯ ಕೋಣೆಯಲ್ಲಿ ಪೂರೈಸಿ ಎಲ್ಲಾ ಮಕ್ಕಳು ಕಲಿಯುವಂತೆ ಮಾಡುವುದೇ ಸಮನ್ವಯ ಶಿಕ್ಷಣ.

ಇಂತಹ ಮಕ್ಕಳ ಕಲಿಕೆಗಾಗಿ ಶಿಕ್ಷಕರಿಗೆ ವಿಶೇಷ ರೀತಿಯ ತರಬೇತಿ ನೀಡಿ ಆಯಾಯಾ ಮಕ್ಕಳಿಗೆ ಅಗತ್ಯವುಳ್ಳ ಉಪಕರಣಗಳ ಸೌಲಭ್ಯವನ್ನು ನೀಡಿ ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಿ ಅಲ್ಲಿ ಎಲ್ಲಾ ರೀತಿಯ ಅನುಕೂಲವನ್ನು ಮಾಡಿಕೊಟ್ಟು ಆ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಶ್ರಮಿಸುತ್ತಿದೆ.

ಸಮನ್ವಯ ಶಿಕ್ಷಣದ ಮುಖ್ಯ ಉದ್ದೇಶವೆಂದರೆ ವಿಶೇಷ ಅಗತ್ಯವುಳ್ಳ ಮಕ್ಕಳು ಸಮಾಜವನ್ನು ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡುವುದು. ಆ ಮಕ್ಕಳಿಗೆ ಕೇವಲ ಅನುಕಂಪ ತೋರದೆ ಸಮಾನ ಅವಕಾಶ ಕಲ್ಪಿಸುವ ಮನೋಭಾವ ಎಲ್ಲರಲ್ಲಿ ಬೆಳೆಸುವುದು, ಎಲ್ಲರೊಂದಿಗೆ ಸಾಮಾಜಿಕ ಆರೋಗ್ಯಕರ ಸಂಬಂಧಗಳನ್ನು ಬೆಳಸುವ ಮೂಲಕ ಈ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಆಗಿದೆ.

ಈ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕರು ತರಬೇತಿ ಪಡೆದು ಕೆಲವು ವಿಶೇಷ ಗುಣಗಳನ್ನು ತಮ್ಮದಾಗಿಸಿಕೊಂಡಿರಬೇಕಾಗುತ್ತದೆ ಇಂತಹ ಶಿಕ್ಷಕರು ಉತ್ಸಾಹಭರಿತ ಹಾಗು ಸ್ನೇಹಮಯಿ ಆಗಿರಬೇಕು, ಇಂತಹ ಮಕ್ಕಳನ್ನು ಆತ್ಮೀಯತೆಯಿಂದ ಪ್ರೀತಿಯಿಂದ ನೋಡಿಕೊಳ್ಳುವಂತವರಾಗಿರಬೇಕು, ತರಗತಿಯ ಇತರ ಮಕ್ಕಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಡುವಂತವರಾಗಿರಬೇಕು. ಈ ಮಕ್ಕಳ ಸಣ್ಣ ಪ್ರಗತಿಯನ್ನು ಗುರುತಿಸಿ ಪ್ರಶಂಸಿಸಬೇಕು, ಒಟ್ಟಿನಲ್ಲಿ ವಿಶೇಷ ರೀತಿಯ ಗಮನವನ್ನು ನೀಡಿ ಕಲಿಸುವ ಮನಸ್ಸು ಆಸಕ್ತಿವುಳ್ಳವರಾಗಿರಬೇಕು, ಇಂತಹ ಬೋಧನೆ ಒಂದು ಸವಾಲಾದರೂ ಕೊಂಚ ಆಸಕ್ತಿ, ಉತ್ಸಾಹ ತೋರಿದರೆ ಖಂಡಿತ ಮಕ್ಕಳಲ್ಲಿ ಪ್ರಗತಿ ತೋರಲು ಸಾಧ್ಯವಾಗಬಹುದು.

ಕುಟುಂಬ ವರ್ಗದವರು ತಮ್ಮ ಕುಟುಂಬದಲ್ಲಿ ಅಂತಹ ನ್ಯೂನ್ಯತೆ ಹೊಂದಿದ ಮಗುವಿದ್ದರೆ ಆ ಮಗುವನ್ನು ಶಾಲೆಗೆ ಸೇರಿಸುವ ಪ್ರತಿ ದಿನ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು, ಸಮಾಜ ಕೂಡ ಇಂತಹ ಮಕ್ಕಳನ್ನು ಗುರುತಿಸಿ ಶಾಲೆಗೆ ಬರುವಂತೆ ಮಾಡಬೇಕು, ಎಲ್ಲರೊಂದಿಗೆ ಕಲಿಯುವ ಮಗು ತನ್ನ ಕೀಳರಿಮೆಯಿಂದ ಹೊರ ಬಂದು ಆತ್ಮ ವಿಶ್ವಾಸದಿಂದ ಬದುಕುವಂತೆ ಮಾಡುವಲ್ಲಿ ಈ ಸಮನ್ವಯ ಶಿಕ್ಷಣ ನೆರವಾಗುತ್ತಿದೆ.

ಸಮನ್ವಯ ಶಿಕ್ಷಣ ಯೋಜನೆಯಡಿ ದೊರೆಯುವ ಸೌಲಭ್ಯವನ್ನು ಉಪಯೋಗಿಸಿಕೊಂಡು ದೃಷ್ಟಿ ದೋಷ, ಶ್ರವಣ ದೋಷ, ಬುದ್ಧಿ ದೋಷ, ಕಲಿಕೆಯಲ್ಲಿ ಹಿಂದುಳಿದ ಹಾಗೂ ದೈಹಿಕ ನ್ಯೂನ್ಯತೆಯ ಪರಿಣಾಮವನ್ನು ತಗ್ಗಿಸಿ ಆತ್ಮ ಸ್ಥೈರ್ಯದಿಂದ ಬದುಕು ನಡೆಸಲು ನಾವು ನೀವು ಎಲ್ಲರೂ ನೆರವಾಗೋಣ ಆ ಮೂಲಕ ಈ ಯೋಜನೆ ಯಶಸ್ವಿಯಾಗಲು ಸಹಕರಿಸೋಣ.

ಗೃಹಾಧಾರಿತ ಶಿಕ್ಷಣ:
ಇತ್ತೀಚಿಗೆ ಪೋಷಕರೊಬ್ಬರು ಶಾಲೆಗೆ ಬೇಟಿ ನೀಡಿ ತಮ್ಮ ಮಗು ಮಾನಸಿಕವಾಗಿ ಬೆಳವಣಿಗೆ ಇಲ್ಲದೆ ಕುಳಿತಲ್ಲಿಯೇ ಕುಳಿತಿರುತ್ತದೆ. ತನ್ನ ಸ್ವಂತ ಕೆಲಸ ಕೂಡ ಅದಕ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅಂತಹ ಮಕ್ಕಳೇ ಇರುವ ವಸತಿಶಾಲೆಗೆ ಸೇರಿಸಲು ಯಾರಿಗೂ ಇಷ್ಟವಿಲ್ಲ, ಎಲ್ಲಾ ಮಕ್ಕಳು ಶಾಲೆಗೆ ಬರುತ್ತಾರೆ, ನನ್ನ ಮಗುವಿಗೆ ಆ ಭಾಗ್ಯವಿಲ್ಲ. ಎಂದು ನೊಂದುಕೊಂಡರು ಅಂತಹ ಮಕ್ಕಳಿಗಾಗಿ ಗೃಹಾಧಾರಿತ ಶಿಕ್ಷಣದ ವ್ಯವಸ್ಥೆ ಇರುವುದಾಗಿ, ಮನೆಗೆ ಬಂದು ಆ ಮಗುವಿನ ಶಿಕ್ಷಣ ನೀಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದಾಗ ಆ ಪೋಷಕರ ಕಣ್ಣುಗಳಲ್ಲಿ ಸಂತಸದ ಕಣ್ಣೀರು ಚಿಮ್ಮಿತು.

 ಏನಿದು ಗೃಹಧಾರಿತ ಶಿಕ್ಷಣ?: ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣದಲ್ಲಿ ಸರ್ವರಿಗೂ ಶಿಕ್ಷಣ ದೊರಕಿಸುವುದು, ಸಾಮಾನ್ಯ ಶಿಕ್ಷಣವು ಎಲ್ಲಾ ರೀತಿಯ ಮಕ್ಕಳನ್ನು ಒಳಗೊಂಡಿರುತ್ತದೆ. ಆದರೆ ಅತೀ ತೀವ್ರ ಬುದ್ಧಿಮಾಂದ್ಯ, ಮೆದುಳಿನ ಪಾಶ್ರ್ವವಾಯು, ಆಟಿಸಂ ಮತ್ತು ಬಹುವಿಧ ಅಂಗವಿಕಲತೆ ಹೊಂದಿದ ಮಕ್ಕಳನ್ನು ಸಮನ್ವಯ ಶಿಕ್ಷಣದ ಅಡಿಯಲ್ಲಿ ತರಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಇಂತಹ ಮಕ್ಕಳ ಕಲಿಕೆ ಮತ್ತು ಗ್ರಹಿಕೆಯ ಸಾಮಾಥ್ರ್ಯ ಅತ್ಯಂತ ತಳಮಟ್ಟದಲ್ಲಿ ಇರುತ್ತದೆ. ಇವರನ್ನು ಇತರ ಮಕ್ಕಳೊಂದಿಗೆ ಸಮನ್ವಯಗೊಳಿಸಿ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ಮಕ್ಕಳಿಗೆಂದೇ ಗೃಹಾಧಾರಿತ ಶಿಕ್ಷಣದ ವ್ಯವಸ್ಥೆಯನ್ನು ಸರ್ಕಾರ 2005 ರಲ್ಲಿ ಜಾರಿಗೆ ತಂದಿತು.

ಈ ಗೃಹಾಧಾರಿತ ಶಿಕ್ಷಣದ ಉದ್ದೇಶಗಳೆಂದರೆ ಅರ್ಹರಾದ ಮಕ್ಕಳನ್ನು ಗುರ್ತಿಸುವುದು, ಪಾತ್ರ ಹಾಗೂ ಜವಾಬ್ದಾರಿಯನ್ನು ಅರಿಯುವುದು, ಅವಶ್ಯಕತೆಗೆ ತಕ್ಕಂತೆ ಪಠ್ಯವನ್ನು ಚಟುವಟಿಕೆಯನ್ನು ರೂಪಿಸುವುದು, ಮಗು ತನ್ನ ಜೀವನದಲ್ಲಿ ಸ್ವಾವಲಂಬನೆ ಸಾಧಿಸಲು ಅವಕಾಶ ಕಲ್ಪಿಸುವುದು, ಸಮಾಜದ ಎಲ್ಲಾ ಮಕ್ಕಳಂತೆ ತಾನೂ ಸಮಾನ ಎಂಬ ಅಂಶವನ್ನು ಮನವರಿಕೆ ಮಾಡಿಕೊಡುವುದು ಆಗಿದೆ.

ಇಂತಹ ಮಕ್ಕಳು ಇರುವ ಪ್ರದೇಶದ ವ್ಯಾಪ್ತಿಗೆ ಬರುವ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರ ಸಭೆ ಕರೆದು ಸಭೆಯಲ್ಲಿ ಎಲ್ಲರ ಸಮ್ಮತಿ ಮೇರೆಗೆ ಒಬ್ಬ ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡು ಅವರಿಗೆ ಗೌರವ ಧನ ನಿಗದಿ ಮಾಡಬೇಕು. ಈ ಸ್ವಯಂ ಸೇವಕರು ಪ್ರತಿದಿನ ಆ ಮಗುವಿನ ಮನೆಗೆ ಹೋಗಿ ಮಗುವಿಗೆ ದೈನಂದಿನ ಕೌಶಲ್ಯಗಳಿಂದ ಕಲಿಸಲು ಪ್ರಾರಂಭಿಸಬೇಕು ಉದಾಹರಣೆಗೆ ಹಲ್ಲುಜ್ಜುವುದು, ಮುಖ ತೊಳೆಯುವುದು, ಮಲಮೂತ್ರ ವಿಸರ್ಜಿಸಿ ಶುಚಿಗೊಳಿಸಿಕೊಳ್ಳುವುದು, ಸ್ನಾನ ಮಾಡಿ ಬಟ್ಟೆ ಹಾಕಿಕೊಳ್ಳುವುದು, ಊಟ ತಿಂಡಿಯನ್ನು ಕೆಳಗೆ ಬೀಳಿಸಿದೆ ಹೇಗೆ ತಿನ್ನುವುದು, ಹೀಗೆ ಒಂದೊಂದಾಗಿ ದಿನನಿತ್ಯದ ಕೌಶಲ್ಯವನ್ನು ಕಲಿಸಬೇಕು.

ಈ ಮಗುವಿನ ಶಿಕ್ಷಣದ ಬಗ್ಗೆ ಶಾಲಾ ಶಿಕ್ಷಕರು ಮೇಲ್ವಿಚಾರಣೆ ನಡೆಸಬೇಕು ಹಾಗೂ ಕೆಲವು ದಾಖಲೆಗಳನ್ನು ನಿರ್ವಹಿಸಬೇಕು. ಸ್ವಯಂ ಸೇವಕರ ವೇಳಾಪಟ್ಟಿ, ಸ್ವಯಂ ಸೇವಕರ ಹಾಜರಿ ರಿಜಿಸ್ಟರ್, ಮಗುವಿನ ದಿನಚರಿ, ಮಗುವಿನ ಪ್ರಗತಿ ಪತ್ರ, ಕ್ರಿಯಾಯೋಜನೆ ಆ ಮಗುವಿನ ಕಲಿಕೆಗಾಗಿ ವೆಚ್ಚ ಮಾಡಿದ ಮತ್ತು ಕೊಂಡು ತಂದ ಕಲಿಕಾ ಉಪಕರಣಗಳ ಮೇಲೆ ಖರ್ಚಾದ ಹಣದ ವಿವರ ಹೀಗೆ ಎಲ್ಲಾ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕಾಗಿರುತ್ತದೆ.

ಯಾವ ಮಕ್ಕಳು ಇಂತಹ ಗೃಹಾಧಾರಿತ ಶಿಕ್ಷಣಕ್ಕೆ ಒಳಪಡುತ್ತವೆ ಎಂದರೆ, ಮಾನಸಿಕವಾಗಿ ದೈಹಿಕವಾಗಿ ಊನ ಇರುವ, ನಡೆದಾಡಲು ಸಾಧ್ಯವಾಗದ, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಸಾಧ್ಯವಾಗದ, ಪ್ರಪಂಚದ ಆಗು-ಹೋಗುಗಳ ಅರಿವು ಇಲ್ಲದೆ ಮಾನಸಿಕ ಹಾಗು ದೈಹಿಕ ವಿಕಲಾಂಗತೆ ಹೊಂದಿದ ಮಕ್ಕಳು ಈ ಗೃಹಾಧಾರಿತ ಶಿಕ್ಷಣಕ್ಕೆ ಒಳಪಡುತ್ತಾರೆ.

ಬುದ್ಧಿದೋಷವನ್ನು ವ್ಯಕ್ತಿಯ ಬುದ್ಧಿಮಟ್ಟವನ್ನು ಆಧರಿಸಿ ಈ ಕೆಳಗಿನಂತೆ ವಗರ್ಿಕರಿಸಲಾಗುತ್ತದೆ. ಇದನ್ನು ಮನೋವಿಜ್ಞಾನಿಗಳು ಮಾಪನ ಮಾಡಿ ವರದಿ ನೀಡಿದ್ದಾರೆ, ಇದನ್ನು ಐ.ಕ್ಯೂ. ನಲ್ಲಿ ಅಳೆಯಲಾಗುತ್ತಿದೆ.

ಸೌಮ್ಯ: 75-89 ಕಿ, ಸಾಧಾರಣ -50-74 ಕಿ, ತೀವ್ರ: 30-49 ಕಿ, ಅತಿ ತೀವ್ರ : 30 ಕಿ ಕ್ಕಿಂತ ಕಡಿಮೆ. ಈ ನಾಲ್ಕು ವಗರ್ಿಕರಣದ ಕೊನೆಯ ಕಿ ಹೊಂದಿದ ಮಕ್ಕಳು ಗೃಹಧಾರಿತ ಶಿಕ್ಷಣಕ್ಕೆ ಒಳಪಡುತ್ತಾರೆ.

ಸರ್ಕಾರವು ಎಲ್ಲಾ ಮಕ್ಕಳಿಗೂ ಶಿಕ್ಷಣ ಕಡ್ಡಾಯಗೊಳಿಸಿ ದೈಹಿಕ ಹಾಗು ಮಾನಸಿಕ ಅಸಮರ್ಥರಿಗೂ ಶಿಕ್ಷಣ ನೀಡುವ ಉದ್ದೇಶದಿಂದ ಗೃಹಾಧಾರಿತ ಶಿಕ್ಷಣ ಎಂಬ ಒಂದು ಉತ್ತಮವಾದ ಕೆಲಸ ಮಾಡಿ ಎಲ್ಲಾ ಮಕ್ಕಳೊಂದಿಗೆ ಆ ಮಕ್ಕಳೂ ಕೂಡ ತಮ್ಮ ಹಕ್ಕನ್ನು ಪಡೆದು ಕೊಂಡು ಕಲಿಕೆಯಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಿದೆ, ಇದು ನಿಜಕ್ಕೂ ಪ್ರಶಂಸನೀಯ, ಇಂತಹ ನ್ಯೂನ್ಯತೆವುಳ್ಳ ಮಕ್ಕಳು ನಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತ ಇದ್ದಲ್ಲಿ ಆ ಮಕ್ಕಳನ್ನು ಗೃಹಾಧಾರಿತ ಶಿಕ್ಷಣಕ್ಕೆ ಒಳಪಡಿಸುವ ನಿಟ್ಟಿನಲ್ಲಿ ನಾವು ನೀವೆಲ್ಲರೂ ಸಹಕರಿಸಬೇಕು. ಆಗ ಮಾತ್ರವೇ ಸರಕಾರದ ಯೋಜನೆ ಯಶಸ್ವಿಯಾಗಲು ಸಾಧ್ಯ.

ಈ ಶಿಕ್ಷಣದಿಂದ ಅತಿ ತೀವ್ರ ನ್ಯೂನ್ಯತೆವುಳ್ಳ ಮಕ್ಕಳು ಸಾಮಾನ್ಯ ಮಕ್ಕಳಂತೆ ಶಿಕ್ಷಣ ಕಲಿಯಲು ಸಾಧ್ಯವಾಗದಿದ್ದರೂ, ಸ್ವಾವಲಂಬನೆ ಸಾಧಿಸಲು ನೆರವು ನೀಡುತ್ತದೆ. ಸ್ವಂತ ಕೆಲಸಗಳಿಗೂ ಅವಲಂಬನೆ ಹೊಂದಿರುವ ಮಕ್ಕಳು ಕೊನೆ ಪಕ್ಷ ತಮ್ಮ ಕೆಲಸ ತಾವೇ ಮಾಡಿಕೊಳ್ಳಲು ಕಲಿತು ಕೊಳ್ಳುತ್ತಾರೆ. ಇಂತಹ ಮಕ್ಕಳು ಸಮಾಜಕ್ಕೆ, ಪೋಷಕರಿಗೆ ಹೊರೆ ಎಂಬ ಭಾವದಿಂದ ಹೊರ ಬಂದು ಪೋಷಕರು, ಶಿಕ್ಷಕರು ಹಾಗು ಸಮಾಜ ಅವರನ್ನು ಪ್ರೀತಿಯಿಂದ ವಿಶ್ವಾಸದಿಂದ ಕಾಣುತ್ತ ಆ ಮೂಲಕ ಆ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸವಾಗಬೇಕಾಗಿದೆ. ಈ ಶಿಕ್ಷಣದ ಮೂಲಕ ಮಕ್ಕಳಲ್ಲಿ ಮಾನಸಿಕ ದೈರ್ಯ ತುಂಬ ಬೇಕಾಗಿದೆ. ಇಂತಹ ಮಕ್ಕಳಿಗೆ ಅನುಕಂಪ ಮಾತ್ರ ತೋರದೆ ಅದರ ಬದಲಾಗಿ ಪ್ರೇಮ, ವಾತ್ಸಲ್ಯ ತೋರುತ್ತ ದೇವರ ಮಕ್ಕಳು ಎಂಬಂತೆ ಅವರನ್ನು ಕಂಡಾಗ ಸೃಷ್ಟಿವೈಚಿತ್ರವನ್ನು ಸಮವಾಗಿ ಸ್ವೀಕರಿಸಿ ಅಂತಹ ಮಕ್ಕಳನ್ನು ಸಲಹಬೇಕು. ಇಲ್ಲಿ ಪೋಷಕರ, ಶಿಕ್ಷಕರ ಪಾತ್ರವೇ ದೊಡ್ಡದು, ಅಂತಹ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ ಗೃಹಧಾರಿತ ಶಿಕ್ಷಣಕ್ಕೆ ಒಳಪಡುವ ಮಕ್ಕಳ ಬದುಕು ಹಸನಾಗಲಿ

ಸಮನ್ವಯ ಶಿಕ್ಷಣ

  ಸಮನ್ವಯ ಶಿಕ್ಷಣ - ಎನ್.ಶೈಲಜಾ ಜನಿಸಿದ ಎಲ್ಲಾ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕಿರುತ್ತದೆ 6 ರಿಂದ 14 ವರ್ಷದ ಮಕ್ಕಳಿಗೆ ಸರ್ಕಾರವು ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಆ...


 ಬೆತ್ತ ಬಳಸದೇ ಬಾಲ್ಯ ಉಳಿಸುವಮಗುಸ್ನೇಹಿ ಚಿಂತನೆಗಳು
- ಆರ್.ಬಿ.ಗುರುಬಸವರಾಜ ಹೊಳಗುಂದಿ,

ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಪ್ರಮುಖ ಭಾಗೀದಾರರು. ಮಕ್ಕಳಿಗೆ ಅರ್ಥಪೂರ್ಣ ಶಿಕ್ಷಣವನ್ನು ಕೊಡಬೇಕಾದರೆ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಚರ್ಚೆ ಸಂವಾದಗಳು ನಡೆಯುವಾಗ ಮಕ್ಕಳ ವಿಚಾರ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಮಕ್ಕಳ ಬಗೆಗಿನ ಕಲ್ಪನೆ, ಮಕ್ಕಳ ಸಾಮಥ್ರ್ಯಗಳನ್ನು ಅರ್ಥಮಾಡಿಕೊಳ್ಳುವುದು, ಮಕ್ಕಳ ಬೆಳವಣಿಗೆ ಹಾಗೂ ಕಲಿಕೆಯನ್ನು ಪ್ರೇರೇಪಿಸುವ ಅಂಶಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.

ಮಗು ಶಾಲೆಯ ಒಳಗೆ ಮತ್ತು ಹೊರಗಿನ ವಾತಾವರಣದಲ್ಲಿಯೂ ಕಲಿಯುತ್ತದೆ. ಮಗುವಿನ ಕಲಿಕಾ ವಾತಾವರಣವು ಮಗುವಿನ ತಕ್ಷಣದ ಸುತ್ತಮುತ್ತಲಿನ ವಾತಾವರಣದಲ್ಲಿ ನಡೆಯುವ ಅನೌಪಚಾರಿಕ ಕಲಿಕಾ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ಬದಲಾವಣೆಗಳು ಸಹ ಮಕ್ಕಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿವೆ. ಆದಕಾರಣ ಶಿಕ್ಷಕರು ಮತ್ತು ಪಾಲಕರು ಮಗು, ಮಗುವಿನ ಬಗೆಗಿನ ಕಲ್ಪನೆ ಮತ್ತು ಮಗುವಿನ ಕಲಿಕಾ ಪರಿಸರವನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಬಹು ಮುಖ್ಯವಾಗಿ ಮಗುವಿನ ಬಾಲ್ಯವು ಹೆಚ್ಚು ಸಂಕೀರ್ಣವಾಗಿದ್ದು ಬದಲಾವಣೆಯಾಗುತ್ತಲೇ ಇದೆ. ಸಮಾಜದ ಎಲ್ಲಾ ಸಂಕೀರ್ಣ ಬದಲಾವಣೆಗಳು ಮಗುವಿನ ಕಲಿಕಾ ಸಾಮಥ್ರ್ಯ ಹಾಗೂ ಅನಾವರಣಗೊಳ್ಳುವ ಸಾಮಥ್ರ್ಯಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆ.

ಮಗುವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ತ್ರಾಸದಾಯಕ ಕೆಲಸ. ಮಗುವೊಂದನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಪ್ರತಿ ಮಗುವೂ ಅನನ್ಯ. ಪ್ರತೀ ಮಗುವಿನ ಕಲಿಕಾ ವಿಧಾನ, ವೇಗ ಮತ್ತು ಗ್ರಹಿಕೆಗಳು ವಿಭಿನ್ನವಾಗಿರುತ್ತವೆ. ಇದನ್ನು ಆಧರಿಸಿ ಮನೋವಿಜ್ಞಾನಿಗಳು ಅನೇಕ ಕಲಿಕಾ ಸಿದ್ಧಾಂತಗಳನ್ನು ರೂಪಿಸಿದ್ದಾರೆ.

ಮಗುವಿನಲ್ಲಿ ಉತ್ತಮ ಕಲಿಕೆಯನ್ನು ಉಂಟುಮಾಡಲು ಎಂತಹ ಸನ್ನಿವೇಶ ಒದಗಿಸಬೇಕು? ಎಂತಹ ಬೋಧನೋಪಕರಣ ಬಳಸಬೇಕು? ಕಲಿಸುವವರು ಹೇಗೆ ವತರ್ಿಸಬೇಕು? ಎಂಬುದು ಮಗುವಿನ ಪರ ಕಾಳಜಿ ಇರುವ ಪ್ರತಿಯೊಬ್ಬರ ಪ್ರಶ್ನೆಯಾಗಿದೆ. ಮುಖ್ಯವಾಗಿ ಮಗು ಹೇಗೆ ಕಲಿಯುತ್ತದೆ? ಎಂಬುದನ್ನು ಅರ್ಥಮಾಡಿಕೊಳ್ಳುವುದೂ ಅಗತ್ಯವಾಗಿದೆ. ಮಗುವಿನ ಕಲಿಕೆಯನ್ನು ಮೊಟಕುಗೊಳಿಸುವುದು ಶಿಕ್ಷಣದ ಉದ್ದೇಶವಲ್ಲ. ಹಾಗಾಗಿ ಮಗುವಿಗೆ ಅನುಕೂಲವಾದ ರೀತಿಯಲ್ಲಿ ಕಲಿಕೆಯನ್ನು ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಇರುವ ಪರಿಹಾರವೆಂದರೆ ಮಗುಸ್ನೇಹಿ ವಾತಾವರಣ ನಿರ್ಮಿಸುವುದು.

ಮಗುವಿನ ಸಾಮಥ್ರ್ಯಗಳು, ಆಸಕ್ತಿಯ ಕ್ಷೇತ್ರಗಳು, ಕಲಿಕಾ ಶೈಲಿ ಮತ್ತು ಮಗುವಿನ ಅಗತ್ಯತೆಗಳು ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಪಠ್ಯಕ್ರಮ, ಕಲಿಕಾ ವಿಧಾನಗಳು, ಕಲಿಕಾ ಚಟುವಟಿಕೆಗಳು, ಮತ್ತು ಕಲಿಕೆಯ ವಾತಾವರಣಗಳು ಮಗುಸ್ನೇಹಿಯಾಗಿದ್ದಾಗ ಕಲಿಕೆಯು ಸುಗಮವಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಮತವಾಗಿದೆ. ರೂಸೋ, ಪ್ರೊಬೆಲ್, ಪೆಸ್ಟಾಲಜಿ, ಜಾನ್ಡ್ಯೂಯಿ, ಜಾನ್ಪಿಯಾಜೆ, ರವೀಂದ್ರನಾಥ ಠ್ಯಾಗೋರ್ ಮುಂತಾದ ಶಿಕ್ಷಣ ತಜ್ಞರು ಮಗುಸ್ನೇಹಿ ಕಲಿಕಾ ವಾತಾವರಣದ ಅಗತ್ಯತೆಯನ್ನು ಅರಿತು ಅದನ್ನು ತಮ್ಮ ಪ್ರಯೋಗಗಳಲ್ಲಿ ಸಾಧಿಸಿ ತೋರಿಸಿದ್ದಾರೆ.

ಮಗುಸ್ನೇಹಿ ವಾತಾವರಣವು ಮಗು ಸ್ವಂತಂತ್ರವಾಗಿ ಕಲಿಕೆಯಲ್ಲಿ ತೊಡಗುವಂತೆ ಮಾಡುತ್ತದೆ. ಮಗುವಿನ ಭೌತಿಕ, ಬೌದ್ಧಿಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಗೆ ಆದ್ಯತೆ ನೀಡುವುದು ಪ್ರತಿಯೊಬ್ಬ ಪಾಲಕ ಮತ್ತು ಶಿಕ್ಷಕರ ಜವಾಬ್ದಾರಿ. ಎಲ್ಲಾ ಆಯಾಮಗಳಲ್ಲಿ ಮಗು ಅಭಿವೃದ್ಧಿ ಹೊಂದಿದಾಗ ಸರ್ವತೋಮುಖ ಬೆಳವಣಿಗೆಯಾಗಿದೆ ಎನ್ನುತ್ತೇವೆ. ಇದು ಮುಖ್ಯವಾಗಿ ಭಯರಹಿತ ಮುಕ್ತ ವಾತಾವರಣವನ್ನು ಅವಲಂಬಿಸಿದೆ.

ಮಕ್ಕಳಲ್ಲಿನ ಸಾಮಾನ್ಯ ಗುಣಲಕ್ಷಣಗಳೆಂದರೆ ಮೇರೆ ಇಲ್ಲದ ಕುತೂಹಲ, ಸ್ವಾತಂತ್ರ್ಯದ ಹಂಬಲ, ಅನ್ವೇಷಣೆ ಅಥವಾ ಪ್ರಯೋಗ ನಡೆಸಬೇಕೆಂಬ ಹಾಗೂ ಎಲ್ಲವನ್ನೂ ತಾನೇ ಮಾಡಬೇಕೆಂಬ ತುಡಿತ. ಮಗುವಿನ ಬಗ್ಗೆ ಹಿರಿಯರಿಗೆ ಸೂಕ್ತ ಕಾಳಜಿ ಇರಬೇಕು. ಮಗು ಅನ್ವೇಷಣೆ ಮಾಡಲು, ತಾನೇ ಸ್ವತಃ ಕೆಲಸ ಕಾರ್ಯಗಳನ್ನು ಮಾಡಲು ಬಿಡಬೇಕು. ಮಗುವಿನ ಸಂಕಲ್ಪ ಶಕ್ತಿ ಹಾಗೂ ನಿರ್ಧಾರಗಳಿಗೆ ಮನ್ನಣೆ ನೀಡಬೇಕು. ಹಾಗೆಯೇ ಮಗುವಿನ ಸಾಮಥ್ರ್ಯದ ಬಗ್ಗೆ ಗೌರವ ಇರಬೇಕು. ವಯಸ್ಕರಾದ ನಾವು ಮಕ್ಕಳಿಗೆ ಮುಕ್ತ ಅವಕಾಶ ಒದಗಿಸಬೇಕು ಮತ್ತು ಮಗುವು ಅಪಾಯಕಾರಿಯಲ್ಲದ ಸವಾಲುಗಳು ಮತ್ತು ಸಾಹಸಗಳಿಗೆ ಮಾತ್ರ ಕೈ ಹಾಕುವಂತೆ ನೋಡಿಕೊಳ್ಳಬೇಕು.

ಮನೆಯಲ್ಲದೆ, ಮಗುವಿಗೆ ದೊರೆಯುವ ಇನ್ನೊಂದು ಪರಿಸರವೆಂದರೆ ಶಾಲೆ. ಮನೆಗೂ ಶಾಲೆಗೂ ವ್ಯತ್ಯಾಸವಿದೆ, ಈ ವ್ಯತ್ಯಾಸ ಇರುವಂತೆಯೇ ನೋಡಿಕೊಳ್ಳುವುದೂ ಬಹಳ ಮುಖ್ಯ. ಶಾಲೆಯಲ್ಲಿ ಮಕ್ಕಳ ಒಂದು ತಂಡಕ್ಕೆ ಕಲಿಕೆಯನ್ನು ಏರ್ಪಡಿಸಲಾಗಿರುತ್ತದೆ. ಈ ಮಕ್ಕಳೆಲ್ಲರೂ ಒಂದೇ ಹಿನ್ನೆಲೆ ಅಥವಾ ಅನುಭವ ವಲಯದಿಂದ ಬಂದಿರಬೇಕೆಂದೇನೂ ಇಲ್ಲ. ಇಲ್ಲಿ ಕಲಿಕೆಯ ಯಾವುದೋ ಒಂದು ಮಟ್ಟವನ್ನು ಮಗು ತಲುಪಬೇಕೆಂಬ ನಿರೀಕ್ಷೆ ಇರುತ್ತದೆ. ಆದರೆ ಉಪಾಧ್ಯಾಯರಾದವರು ಎಷ್ಟೋ ಬಾರಿ ಮಗುವಿನ ಸಂಸ್ಕೃತಿಯನ್ನಾಗಲಿ ಮತ್ತು ಅದರ ಭಾಷೆಯನ್ನಾಗಲಿ ಸರಿಯಾಗಿ ಮನದಟ್ಟು ಮಾಡಿಕೊಂಡಿರಲು ಆಗಿರುವುದಿಲ್ಲ. ಶಿಕ್ಷಕರು ಮತ್ತು ಮಗುವಿನ ಸಂಬಂಧಕ್ಕೂ, ಮನೆಯಲ್ಲಿನ ಮಕ್ಕಳು ಮತ್ತು ಹಿರಿಯರ ಸಂಬಂಧಕ್ಕೂ ಬಹಳ ಭಿನ್ನತೆ ಇರುತ್ತದೆ. ಅದೇ ರೀತಿ ಮಗುವಿನ ಬಗ್ಗೆ ಅವರು ತೋರುವ ಕಾಳಜಿಯೂ ಬಹಳ ಭಿನ್ನವಾಗಿರುತ್ತದೆ.

ಶಾಲೆಯಲ್ಲಿ ದೊರಕುವ ಸಮಯ ಮತ್ತು ಅವಕಾಶಗಳು ಸೀಮಿತ. ಪ್ರತಿಯೊಂದು ಮಗುವಿಗೂ ಅದೇನನ್ನು ಅನ್ವೇಷಣೆ ಮಾಡಲು ಇಚ್ಛಿಸುತ್ತದೋ ಅದನ್ನೆಲ್ಲಾ ಅನ್ವೇಷಿಸಲು ಅಥವಾ ಏನೇನು ಕಲಿಯಲು ಇಚ್ಛಿಸುತ್ತದೆಯೋ ಅದನ್ನು ಕಲಿಯಲು ಇಲ್ಲಿ ಅವಕಾಶ ಮಾಡಿಕೊಡುವುದು ಸಾಧ್ಯವಿಲ್ಲ. ಶಾಲೆಯ ಸಂದರ್ಭದಲ್ಲಿ ಮಕ್ಕಳ ಗುಣಲಕ್ಷಣಗಳ ಅಂತರಾರ್ಥವನ್ನು ಅರ್ಥಮಾಡಿಕೊಳ್ಳುವಾಗ ಈ ವ್ಯತ್ಯಾಸಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಈ ಮೇಲಿನ ಎಲ್ಲಾ ಕಾರಣಗಳಿಗಾಗಿ ಶಾಲೆ ಮತ್ತು ಕೌಟುಂಬಿಕ ವಾತಾವರಣದಲ್ಲಿ ಮಗುಸ್ನೇಹಿ ವಾತಾವರಣ ನಿರ್ಮಿಸುವ ಅವಶ್ಯಕತೆ ಇದೆ.
* ಪ್ರತಿ ಶಾಲೆಯಲ್ಲೂ ತರಬೇತಿ ಪಡೆದ ಮಕ್ಕಳ ಆಪ್ತ ಸಲಹೆಗಾರರಿರಬೇಕು. ಇವರೂ ಆ ಶಾಲೆಯ ಶಿಕ್ಷಕರೇ ಅಗಿದ್ದರೆ ಒಳಿತು. ಮಗುವಿನ ಸಮಸ್ಯೆಯ ಕುರಿತು ಪೋಷಕರಿಗೆ ಅಗತ್ಯವಿರುವ ಆಪ್ತ ಸಲಹೆ ನೀಡುವಂತಿರಬೇಕು.
* ಶಾಲೆಯಲ್ಲಿ ಆಗಾಗ್ಗೆ ಪಾಲಕರ ಸಭೆ ನಡೆಯಬೇಕು. ಈ ಸಭೆ ಮಗುವಿನ ತರಗತಿಯ ಪ್ರಗತಿ ಮಾತ್ರವಲ್ಲದೇ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಸಂವಾದ ನಡೆಸುವ ವೇದಿಕೆಯಾಗಬೇಕು.
* ಪ್ರತಿ ಶಾಲೆಯಲ್ಲೂ ಮಕ್ಕಳ ಹಕ್ಕುಗಳ ಕ್ಲಬ್ ಇರಬೇಕು. ಪ್ರತಿ ತಿಂಗಳು ಕ್ಲಬ್ನ ಸದಸ್ಯರು ಸಭೆ ಸೇರಿ ಮಕ್ಕಳ ಸಮಸ್ಯೆಗಳು ಮತ್ತು ಅವಶ್ಯಕತೆಗಳ ಬಗ್ಗೆ ಚಚರ್ಿಸಬೇಕು. ವರ್ಷಕ್ಕೊಮ್ಮೆ ಮಕ್ಕಳ ಗ್ರಾಮಸಭೆ ನಡೆಸಲು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಒತ್ತಾಯ ಹೇರಬೇಕು. ಅಂತೆಯೇ ಶಾಲೆಗೆ ಗೈರುಹಾಜರಾಗುವ ಮಕ್ಕಳನ್ನು ಶಾಲೆಗೆ ಕರೆತರಲು ಪ್ರಯತ್ನಿಸಬೇಕು.
* ವಿಕಲ ಚೇತನ ಮಕ್ಕಳಿಗೆ ಮೂಲಸೌಕರ್ಯಗಳು ಹಾಗೂ ಅವರಿಗೆ ಅಗತ್ಯ ಪೀಠೋಪಕರಣ ಮತ್ತು ಪಾಠೋಪಕರಣಗಳು ಇರಬೇಕು.
* ಲಿಂಗ, ವಿಕಲತೆ, ಜಾತಿ, ಧರ್ಮ ಅಥವಾ ಕಾಯಿಲೆಗಳ(ಹೆಚ್.ಐ.ವಿ/ ಏಡ್ಸ್) ಆಧಾರದ ಮೇಲೆ ತಾರತಮ್ಯ ಮಾಡಬಾರದು.
* ಜೀವನ ಕೌಶಲ್ಯಗಳು ಶಿಕ್ಷಣದ ಮುಖ್ಯ ಭಾಗವಾಗಬೇಕು. ಅಂದರೆ ಶಿಕ್ಷಣವು ಬದುಕಿನ ಭಾಗವಾಗಬೇಕು.
* ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ನೀಡುವುದನ್ನು ರದ್ದುಗೊಳಿಸಬೇಕು. ಶಾಲೆಯಲ್ಲಿ ಭಯ ಮುಕ್ತ ವಾತಾವರಣ ನಿಮರ್ಾಣವಾಗಬೇಕು. ಸರಿ ತಪ್ಪುಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡುವಂತಿರಬೇಕು.
* ಮನೆಯಲ್ಲಿಯೂ ಒತ್ತಡ ರಹಿತ ವಾತಾವರಣ ನಿರ್ಮಿಸಬೇಕು. ಅಪಾಯಕಾರಿಯಲ್ಲದ ಸಂತಸದ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಅದರ ಮೂಲಕ ಕಲಿಕಾ ವಾತಾವರಣ ನಿರ್ಮಿಸಬೇಕು.
* ಮಗುವಿನಲ್ಲಿ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕು. ಅದಕ್ಕಾಗಿ ಪೋಷಕರು ಪ್ರತಿದಿನ ನಿಗದಿತ ವೇಳೆಯಲ್ಲಿ ಮಗುವಿನೊಂದಿಗೆ ಬೆರೆಯುವ ಮೂಲಕ ಸಾಮಥ್ರ್ಯಗಳನ್ನು ವೃದ್ಧಿಸಬೇಕು ಹಾಗೂ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು.
* ನೈತಿಕತೆಯ ಪಾಠ ಮನೆಯಿಂದಲೇ ಪ್ರಾರಂಭವಾಗಬೇಕು. ಆದರೆ ಅದು ಒತ್ತಾಯಪೂರ್ವಕವಾಗಬಾರದು.
* ಮಗುವಿಗೆ ಶೈಕ್ಷಣಿಕ ಹಾಗೂ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಲು ಮಕ್ಕಳ ಪುಸ್ತಕಗಳಿರಬೇಕು.
* ಯಾವುದೇ ಕಾರಣಕ್ಕೂ ಯಾವ ಮಗುವೂ ತಿರಸ್ಕೃತವಾಗಬಾರದು. ಪ್ರತೀ ಮಗುವಿನ ಭಾವನಾತ್ಮಕತೆಯನ್ನು ಗಟ್ಟಿಗೊಳಿಸಬೇಕು.
* ಮನೆಯಲ್ಲಿ ಅಥವಾ ಸಮುದಾಯದಲ್ಲಿ ಮಕ್ಕಳ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ರಕ್ಷಣೆಯ ಭರವಸೆ ಇರಬೇಕು. ಹದಿಹರೆಯದ ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇರಬೇಕು.
ಒಟ್ಟಾರೆ ಹೇಳುವುದಾದರೆ ಬೆತ್ತ ಬಳಸದೇ ಬಾಲ್ಯ ಉಳಿಸಿ ಎಂಬುದು ಶಾಲೆಯ, ತಂದೆ ತಾಯಿಯರ ಅಥವಾ ಸಮುದಾಯದ ಘೋಷಣೆ ಮತ್ತು ಸಂದೇಶವಾಗಬೇಕು. ಆಗ ಮಾತ್ರ ಮಗುಸ್ನೇಹಿ ಸುಂದರ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಆ ಮೂಲಕ ಮಗುವಿನ ಸಾಮಥ್ರ್ಯಗಳನ್ನು ಅಭಿವೃದ್ಧಿಗೊಳಿಸಿ ಸರ್ವಾಂಗೀಣ ಬೆಳೆವಣಿಗೆ ಉಂಟುಮಾಡಲು ಸಾಧ್ಯ

ಗೆಲ್ಲುವುದೇ ಗುರಿ ಎಂದುಕೊಂಡರೆ ಸೋಲು ಕಾಡುವುದೇ ಇಲ್ಲ....!
- ಜಯಶ್ರೀ.ಜೆ

ವರ್ಷದುದ್ದಕ್ಕೂ ಓದಿ ವಾರ್ಷಿಕ ಪರೀಕ್ಷೆ ಬರೆದು ಪಾಸ್ ಅಥವಾ ಫೇಲ್ ಬಗ್ಗೆ ಕೇಳುವ ದಿನ ಬಂದಾಗ ಮನದಲ್ಲಿ ಯಾವುದೇ ದುಗುಡ ಇರುವುದಿಲ್ಲ. ಪರೀಕ್ಷೆ ಬರೆದ ನಮಗೂ ಒತ್ತಡ ಇರುವುದಿಲ್ಲ, ಪಾಲಕರಿಗೂ ಒತ್ತಡ ಇರುವುದಿಲ್ಲ ಗುರುಗಳಂತೂ ಸದಾ ಹಸನ್ಮುಖಿಗಳಾಗಿ ಜ್ಞಾನ ಸುಧೆಯನ್ನು ಹರಿಸುವ ಕಾಯಕದಲ್ಲಿ ನಿರತರಾಗಿರುತ್ತಿದ್ದರು. ಶಿಸ್ತಿನ ಸಿಪಾಯಿಗಳಂತೆ ಕಲಿಸಬೇಕಾದ್ದನ್ನು ಕಲಿಸದೇ ಬಿಡುತ್ತಿರಲಿಲ್ಲ. ಹೀಗಾಗಿ ಅವರಿಗೆ ತಮ್ಮ ಶಿಷ್ಯಂದಿರ ಬಗ್ಗೆ ಚೆನ್ನಾಗಿ ಗೊತ್ತಿರುತ್ತಿತ್ತು. ಪ್ರಾಥಮಿಕ ಶಾಲೆಯಲ್ಲಂತೂ ಪರೀಕ್ಷೆ ಬರೆದವರೆಲ್ಲ ಪಾಸು. ನಾವೆಲ್ಲರೂ ಏಪ್ರಿಲ್ 10 ಫಲಿತಾಂಶ ಕೇಳಲು ಹೋದರೆ ಮುಂದಿನ ವರ್ಷ ನೀವೆಲ್ಲರೂ ಮುಂದಿನ ಕ್ಲಾಸಿನ್ಯಾಗ ಕೂಡ್ರಿ ಎಂಬ  ಒಂದೇ ಒಂದು ವಾಕ್ಯದಲ್ಲಿ ಫಲಿತಾಂಶ ಘೋಷಿಸುತ್ತಿದ್ದರು. ಆ ವಾಕ್ಯ ಕೇಳಿದ ಕೂಡಲೇ ಹೋ.....! ಎಂದು ಕೇಕೆ ಹಾಕುತ್ತ ಮನೆಗೆ ಬಂದು ಪಾಸ್ ಆದ ಸುದ್ದಿ ಹೇಳಿದರೆ ಪೋಷಕರು ಆ ವಿಷಯವನ್ನು ಸಾಮಾನ್ಯವೆನ್ನುವಂತೆ ತೆಗೆದುಕೊಂಡು ಬಿಡುತ್ತಿದ್ದರು. ಒಂದು ವೇಳೆ ಎಸ್.ಎಸ್.ಎಲ್.ಸಿ. ಯಂಥ ಪರೀಕ್ಷೆಯಲ್ಲಿ ಫೇಲಾಗಿದ್ದು ಕೇಳಿದರೆ ಆಕಾಶ ಮೈಮೇಲೆ ಬಿದ್ದವರ ಹಾಗೆ ನಡೆದುಕೊಳ್ಳದೇ ಆತು ನಾಳಿಯಿಂದ ನನ್ನ ಜೋಡಿ ಹೊಲಕ್ಕ ಗಳೆ ಹೊಡಿಯಾಕ ನಡಿ ಎಂಬ ಸರಳ ವಾಕ್ಯದಿಂದ ಮುಗಿಸುತ್ತಿದ್ದರು ಫೇಲಾದವರು ಅದನ್ನು ತಲೆಗೆ ಹಚ್ಚಿಕೊಳ್ಳದೇ ಯಾಕೋ ವಿದ್ಯೆ ನನ್ನ ತಲಿಗೆ ಹತ್ತವಲ್ದು ಭೂಮಿ ತಾಯಿ ನಂಬಿದ್ರ ಬಂಗಾರ ಬೆಳೀಬಹುದು ಎನ್ನುತ್ತ ಹೊಲದೆಡೆ ಕಾಲು ಹಾಕುತ್ತಿದ್ದರು. ಹೆಣ್ಮಕ್ಕಳು ಕಸೂತಿ ಹೊಲಿಗೆ ಕಡೆ ಗಮನ ಕೊಡುತ್ತಿದ್ದರು. ಫೇಲ್ ಅನ್ನೋ ಪದ ಬಾಳ ಜನರನ್ನ ಕೊರಗಿಸಲಿಲ್ಲ. ಅವರ ಬಾಳನ್ನೂ ಹದಗೆಡಿಸಲಿಲ್ಲ. ತಲೆ ಇದ್ದಾಂವ ಎಲೆ ಮಾರಿ ಜೀವನ ಮಾಡತಾನ ಎಂಬ ಮಾತನ್ನು ಬಲವಾಗಿ ನಂಬಿ, ಬಂದದ್ದು ಬರಲಿ ಎದುರಿಸೋ ಎದೆ ಇರಲಿ ಅನ್ನೋದು ಹಿರಿಯರ ಮಾತಾಗಿತ್ತು.

ಇತ್ತೀಚಿನ ದಿನಮಾನದಲ್ಲಿ ಎಲ್ಕೆಜಿಯಿಂದ ಹಿಡಕೊಂಡು ಪಿಜಿಯವರೆಗೂ ಪರೀಕ್ಷೆಯ ಫಲಿತಾಂಶದ ಒತ್ತಡದ ಹುಳ ಮಕ್ಕಳ ಪಾಲಕರ ಶಿಕ್ಷಕರ ತಲೆಯಲ್ಲಿ ಒಂದೇ ಸಮನೆ ಹರಿದಾಡುತ್ತಿದೆ. ಇನ್ನಿಲ್ಲದಂತೆ ಬಾಧಿಸುತ್ತಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ ಮಾತ್ರ ಜೀವನ ಇಲ್ಲದಿದ್ದರೆ ಜೀವನವೇ ಇಲ್ಲ ಅನ್ನೋ ತಪ್ಪು ಕಲ್ಪನೆಯಲ್ಲಿ ಪಡುವ ಪಾಡು ದಿನೇ ದಿನೇ ಹೆಚ್ಚುತ್ತಲೇ ಇದೆ. ಕೇವಲ ಅಂಕಗಳು ಜೀವನವನ್ನು ನಿರ್ಧರಿಸಲಾರವು ಪರೀಕ್ಷೆ ಫಲಿತಾಂಶ ಒಂದು ದಾಖಲೆ ಮಾತ್ರ. ಎಂಬುದು ತಿಳಿದಿದ್ದರೂ ಜನ ಮರುಳೊ ಜಾತ್ರೆ ಮರುಳೊ ಎಂಬ ಮಾತಿಗೆ ಮೂಢರಂತೆ ಅಂಟಿಕೊಂಡು ಶಿಕ್ಷಿತರಂತೆ ವರ್ತಿಸದೇ ಕುರಿಯ ಹಿಂಡಿನಲ್ಲಿ ಕುರಿಗಳಾಗಿ ಸಾಗುತ್ತಿದ್ದೇವೆ. ಇನ್ನೇನು ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆ ಫಲಿತಾಂಶಕ್ಕೆ ದಿನ ಗಣನೆ ನಡೆದಿದೆ. ಶಿಕ್ಷಕರ, ಮಕ್ಕಳ, ಪಾಲಕರ ಎದೆ ಡವಡವ ಹೆಚ್ಚುತ್ತಿದೆ. ತಾವು ಅಂದುಕೊಂಡಷ್ಟು ಅಂಕ ಬೀಳುತ್ತವೆಯೋ ಇಲ್ಲವೋ? ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ದೊರುಕುತ್ತದೋ ಇಲ್ಲವೋ? ವೃತ್ತಿಪರ ಕೋರ್ಸುಗಳಿಗೆ ಸೀಟು ಸಿಗುತ್ತೋ ಇಲ್ಲವೋ? ಎಂಬ ನೂರಾರು ಪ್ರಶ್ನೆಗಳು ತಲೆ ಹೊಕ್ಕು ಜೀವ ತಿನ್ನುತ್ತಿವೆ. ವಿದ್ಯಾರ್ಥಿಗಳ ಸಾಧನೆ ಕಮ್ಮಿಯಾದರೆ ಇಲಾಖೆಯಿಂದ ಎದುರಿಸಬೇಕಾದ ಕ್ರಮಗಳಿಗೆ ಬೋಧಕ ಬಳಗ ಚಿಂತಿತಗೊಂಡರೆ ಕಮ್ಮಿ ಅಂಕ ಪಡೆದರೆ ಸಮಾಜದಲ್ಲಿ ಸರೀಕರಿಗೆ ಮುಖ ತೋರಿಸುವುದು ಹೇಗೆ ಎನ್ನುವುದು ಪಾಲಕರ ಗೋಳು. ಅತ್ಯಧಿಕ ಅಂಕ ತೆಗೆದರೆ ಸಂಬಂಧಿಕರಿಗೆ ಫೋನಾಯಿಸಿ ಊರಲ್ಲಿ ಸಿಹಿ ಹಂಚಿ ಸಂಭ್ರಮಿಸುವುದೂ ಬೀಗುವುದೂ ನಡೆದೇ ನಡೆಯುತ್ತದೆ.

ಇನ್ನೂ ಅರಳಬೇಕಾದ ಮೊಗ್ಗುಗಳಂತಿರುವ ವಿದ್ಯಾರ್ಥಿಗಳು ಕೇವಲ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಗಳಲ್ಲಿ ಕಳಪೆ ಸಾಧನೆ ಮಾಡಿದ್ದಕ್ಕೆ ಅಥವಾ ಫೇಲ್ ಆಗಿದ್ದಕ್ಕೆ ನೊಂದು ಹೇಡಿಯಂತೆ ಜೀವ ಕಳೆದುಕೊಂಡರೆ ಏನು ಬಂತು?  ಪರೀಕ್ಷೆಯೊಂದೇ ನಮ್ಮ ಸಾಮಥ್ರ್ಯ ಶಕ್ತಿಯನ್ನು ಅಳೆಯುವ ಮಾನದಂಡವಲ್ಲ ಹಾಗಾಗಿದ್ದರೆ ಕಮ್ಮಿ ಅಂಕ ತಗೆದು ಫೇಲ್ ಆಗಿ ಸಾಧಿಸಿದ ಅನೇಕ ಸಾಧಕರು ನಮ್ಮ ಕಣ್ಮುಂದೆ ರಾರಾಜಿಸುತ್ತಿರಲಿಲ್ಲ. ಕ್ರಿಕೆಟ್ ದೇವರೆಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಕಷ್ಟ ನೋವುಗಳಲ್ಲಿ ಕೈತೊಳೆದು ಶ್ರೀಮಂತಿಕೆ ಗಳಿಸಿದ, ಎಲ್ಲರ ನಾಲಿಗೆಯ ತುದಿಯ ಮೇಲಿರುವ ಧೀರೂ ಬಾಯಿ ಅಂಬಾನಿ, ಸೋಲುಗಳನ್ನು ಬೆನ್ನಗಂಟಿಸಿಕೊಂಡಿದ್ದ ಅಬ್ರಹಾಂ ಲಿಂಕನ್ ಅವರೆಲ್ಲ ಜೀವಂತ ಮಾದರಿಗಳಾಗುತ್ತಿರಲಿಲ್ಲ ಅಲ್ಲವೇ? ಪರೀಕ್ಷೆಯಲ್ಲಿ ಫೇಲಾದರೆ ಕಮ್ಮಿ ಅಂಕ ಪಡೆದರೆ ಮತ್ತೊಮ್ಮೆ ಪರೀಕ್ಷೆ ಕಟ್ಟಿ ಸಾಧಿಸಿ ತೋರಿಸಬಹುದು. ಸೋಲು ಕಲಿಸುವ ಪಾಠ ಇನ್ನಾರೂ ಕಲಿಸಲಾರರು ಎನ್ನುವುದನ್ನು ಮರೆಯಬೇಡಿ. ಸೋಲಿನಂಥ ಗುರು ಇಲ್ಲ. ವೈಫಲ್ಯಗಳು ಯಶಸ್ಸಿಗೆ ಮುನ್ನುಡಿ ಬರೆಯುತ್ತವೆ. ನಾವು ಎಡವಿದ್ದೆಲ್ಲಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ತಿದ್ದಿ ನಡೆದರೆ ಗೆಲುವಿನ ಮೇರು ಪರ್ವತ ಹತ್ತಿ ಗೆಲುವಿನ ಸರದಾರರಾಗಬಹುದು.

ಫಲಿತಾಂಶ ನೋಡಿದ ತಕ್ಷಣ ವಿವೇಕರಹಿತರಾಗದೇ ಆತುರದಲ್ಲಿ ನಿಧರ್ಾರ ತೆಗೆದುಕೊಳ್ಳದೇ ಆತಂಕದ ಮಡುವಿನಲ್ಲಿ ಬಿದ್ದು ಒದ್ದಾಡಿ ಆತ್ಮಹತ್ಯೆಯಂಥ ಹೀನ ಕಾರ್ಯಕ್ಕೆ ಕೈ ಹಾಕದೇ ಬುದ್ಧಿಯ ಕೈಯಲ್ಲಿ ಮನಸ್ಸನ್ನು ಕೊಟ್ಟರೆ ಅದು ಬದುಕನ್ನು ಸುಂದರವಾಗಿಸುವ ಯೋಜನೆಗಳನ್ನು  ಹಾಕಿಕೊಡುತ್ತದೆ. ಅನೇಕ ಸಾಧಕರ ಬಾಳಲ್ಲಿ ಈ ಸೋಲು ಮೈಲಿಗಲ್ಲಾಗಿ ಕೆಲಸ ನಿರ್ವಹಿಸಿದೆ ಎಂಬುದನ್ನು ಮರೆಯದಿರಿ. ಸೋಲನ್ನು ನೀವು ಹೇಗೆ ಸ್ವೀಕರಿಸುತ್ತೀರಿ ಎನ್ನುವುದು.

ಮುಖ್ಯ. ಸಾಲು ಸಾಲು ಸೋಲುಗಳೇ ಗೆಲುವಾಗಿ ಬದಲಾಗುತ್ತವೆ. ಬದುಕು ಏನನ್ನೂ ಕೊಡುವುದಿಲ್ಲ. ಸಮಯ ಮತ್ತು ಅವಕಾಶಗಳನ್ನು ಹೊರತುಪಡಿಸಿ ಅವೆರಡನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಜೀವನ ನಿರ್ಮಾಣಗೊಳ್ಳುತ್ತದೆಯೋ ಹೊರತು ಕೇವಲ ಪರೀಕ್ಷೆಯ ಫಲಿತಾಂಶದಿಂದಲ್ಲ. ಪ್ರತಿ ಬಾರಿಯೂ ಉತ್ತಮ ಫಲಿತಾಂಶ ಬಾರದಿರಬಹುದು ಆದರೆ ಪ್ರಯತ್ನಿಸದಿದ್ದರೆ ಯಾವ ಫಲವೂ ದೊರೆಯುವುದಿಲ್ಲ ಎಂಬುದು ಸೋಲನ್ನೇ ಹಾಸಿ ಹೊದ್ದು ಛಲ ಬಿಡದೇ ಕೊನೆಗೆ ಗೆಲುವಿನ ನಗೆ ಬೀರಿದ ಅಬ್ರಹಾಂನ ಅನುಭವದ ಮಾತು.

ಬರೀ ಅಂಕಗಳ ಬೆನ್ನು ಹತ್ತಿ  ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತ ಆಡಂಬರದ ದೊಡ್ಡಸ್ತಿಕೆಯ ಮಾತುಗಳನ್ನಾಡಿದರೆ, ಸಮಾಜದ ಬಿರುನುಡಿಗಳಿಗೆ ಕಟು ಟೀಕೆಗಳಿಗೆ ತಲೆ ಕೆಡಿಸಿಕೊಂಡರೆ ಉಪಯೋಗವಿಲ್ಲ. ಉತ್ತಮ ಫಲಿತಾಂಶ ಆ ಹಂತದಲ್ಲಿ ಮಾತ್ರ ಸಂತಸ ತಂದು ಕೊಡಬಹುದು. ಗೌರವಯುತವಾಗಿ ಜೀವಿಸುವ ಕಲೆ ಜೀವನ ಕೌಶಲ್ಯಗಳು ನಿಮ್ಮ ಜೀವನದ ಬೆಲೆಯನ್ನೇ ಹೆಚ್ಚಿಸುತ್ತದೆ ಗೌರವದ ಜೊತೆ ಸಂತಸ ಮತ್ತು ಸಂತೃಪ್ತಿಯ ಹೆಬ್ಬಾಗಿಲನ್ನು ತೆರೆಯುತ್ತದೆ.

ಸೋಲುವೆನೆಂಬ ಕಾರಣಕ್ಕೆ ಹಿಂದೇಟು ಹಾಕುವವರ ಮತ್ತು ಸೋತ ನಂತರ ಹೇಡಿಯಾಗಿ ಹಿಂದೆ ಸರಿದು ಜೀವ ಕಳೆದುಕೊಳ್ಳುವವರನ್ನು ಕಂಡು ಷೇಕ್ಸ್ಪಿಯರ್ನ ಈ ಮಾತು ನೆನಪಿಗೆ ಬರುತ್ತದೆ. ಸೋಲುತ್ತೇನೆಂಬ ಭಯದಿಂದ ಪ್ರಯತ್ನಿಸದೇ ಇರುವುದಕ್ಕಿಂತ ಪ್ರಯತ್ನಿಸಿ ಸೋಲುವವನು ಉತ್ತಮ. ಶಾಲಾ ಕಾಲೇಜುಗಳಲ್ಲಿ ಪಡೆದ ಅಂಕಗಳೇ ಜೀವನವನ್ನು ರೂಪಿಸುತ್ತವೆ ಎನ್ನುವ ಭ್ರಮೆಯಿಂದ ಹೊರ ಬರುವುದು ಇಂದಿನ ಅಗತ್ಯವಾಗಿದೆ. ಸೋತಾಗ ಸತ್ತೆ ಎಂದುಕೊಳ್ಳದೇ ಪ್ರಯತ್ನಿಸುವಾಗ ಸೋಲು ಗೆಲುವು ಇದ್ದಿದ್ದೆ ಎಂದುಕೊಳ್ಳುತ್ತ ಗೆದ್ದೇ ಗೆಲ್ಲುವೆ ಎಂದುಕೊಂಡು ದೇಶದ ಚಿನ್ನದ ಓಟಗಾರ್ತಿ ಎನಿಸಿಕೊಂಡಳು ಪಿ.ಟಿ. ಉಷಾ. ಗೆಲ್ಲುವುದೇ ನನ್ನ ಗುರಿ ಎಂದುಕೊಂಡವರಿಗೆ ಸೋಲು ಕಾಡುವುದೇ ಇಲ್ಲ. ಕಡಿಮೆ ಅಂಕ ಗಳಿಸಿದರೆ ಮರು ಎಣಿಕೆ ಮರು ಮೌಲ್ಯಮಾಪನ ಬಳಸಿಕೊಳ್ಳಿ ಫೇಲಾದರೆ ಮತ್ತೊಮ್ಮೆ ಅತ್ಯದ್ಭುತವಾಗಿ ಪ್ರಯತ್ನಿಸಿ ಪ್ರತಿಫಲ ನಿಮ್ಮನ್ನು ದೊಡ್ಡ ಮಟ್ಟಕ್ಕೆ ಕರೆದೊಯ್ಯುವುದಲ್ಲದೇ ಫಲಿತಾಂಶದ ಹೂ ಅರಳಿ ಸಮಾಜದ ಉದ್ಗಗಲಕ್ಕೂ ಸುವಾಸನೆ ಬೀರುತ್ತದೆ.

ಬೆತ್ತ ಬಳಸದೇ ಬಾಲ್ಯ ಉಳಿಸುವಮಗುಸ್ನೇಹಿ ಚಿಂತನೆಗಳು

 ಬೆತ್ತ ಬಳಸದೇ ಬಾಲ್ಯ ಉಳಿಸುವಮಗುಸ್ನೇಹಿ ಚಿಂತನೆಗಳು - ಆರ್.ಬಿ.ಗುರುಬಸವರಾಜ ಹೊಳಗುಂದಿ, ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಪ್ರಮುಖ ಭಾಗೀದಾರರು. ಮಕ್ಕಳಿಗೆ ಅರ್ಥಪೂರ್ಣ ಶ...

ರಸ್ತೆ ಸುರಕ್ಷತೆ ಹಾಗೂ  ಸಂಚಾರಿ ನಿಯಮಗಳು-6

- ಅನಿಲ್ ಕುಮಾರ್,

ಇಡೀ ಪ್ರಪಂಚವೇ ಬೆಳಕಿನ ವೇಗದಲ್ಲಿ ಚಲಿಸುತ್ತಿರುವಂತೆ ಭಾಸವಾಗುವ ಈ ದಿನಗಳಲ್ಲಿ ನಾವೇಕೆ ಆಮೆ ವೇಗದಲ್ಲಿ ಸಾಗಬೇಕು? ರಸ್ತೆಯ ಮೇಲೆ ವಿವಿಧ ಮಾಡೆಲ್ಗಳ ಕಾರು, ಜೀಪು, ದ್ವಿಚಕ್ರ ವಾಹನಗಳ ಮೇಲೆ ಕುಳಿತು ಹೋಗುತ್ತಿರುವದೃಶ್ಯ ನೋಡಿದರೆ ಎಲ್ಲರೂ ಶರವೇಗದ ಸರದಾರರಂತೆಯೇ ಭಾಸವಾಗುತ್ತಾರೆ! ಆದರೆ ಎಲ್ಲರೂ ರಸ್ತೆಯ ಮೇಲೆ ಜವಾಬ್ದಾರಿಯುತವಾಗಿ ವಾಹನಗಳನ್ನು ನಡೆಸಿದರೆ ಎಷ್ಟು ಚಂದ! ಎಷ್ಟು ಸುರಕ್ಷಿತ ಅಲ್ಲವೇ?

ಫಾರ್ಮುಲಾ-1 ರೇಸಿಂಗ್ ಸ್ಪರ್ಧೆಗೆ ತಾಲೀಮು ನಡೆಸುವಂತೆ ನಗರದ ರಸ್ತೆಗಳ ಮೇಲೆ ವೇಗವಾಗಿ ಹೋಗುವುದು ತರವಲ್ಲ, ಬೆಳಗಿನ ಜಾವ ಹಾಗೂ ತಡರಾತ್ರಿಯಲ್ಲಿ ಬೆಂಗಳೂರು ನಗರದಲ್ಲಿ ಹೇಳಿಕೊಳ್ಳುವಷ್ಟು ಟ್ರಾಫಿಕ್ ಇರುವುದಿಲ್ಲ ನಿಜ ಆದರೆ ಇಂತಹ ಸಂದರ್ಭಗಳಲ್ಲಿ ಅತೀವೇಗವಾಗಿ ಓಡಿಸಿ ಅಪಘಾತ ಮಾಡಿಕೊಂಡವರ ವಿವರಗಳನ್ನು ಮೂಳೆ ತಜ್ಞರು ನೀಡಬಲ್ಲರು!

ವೇಗ ಒಳ್ಳೆಯದಲ್ಲ...! ನಿಧಾನವೇ ಪ್ರಧಾನ, ತಡವಾಗಿ ಬಂದರೂ ಸೌಖ್ಯವಾಗಿ ತಲುಪಿ, ರಸ್ತೆಯ ಮೇಲೆ ವಾಹನದಲ್ಲಿ ಹೋಗುವಾಗ ಸುರಕ್ಷತೆಯ ಬಗ್ಗೆ ಗಮನವಿರಲಿ-ಅನಿರೀಕ್ಷಿತವಾದದನ್ನು ನಿರೀಕ್ಷಿಸಿ, ಗಮನಿಸಿ , ಹೊಂದಿಕೊಳ್ಳಿ, ರಸ್ತೆಗೆ ತಕ್ಕಂತೆ ನಿಮ್ಮ ವಾಹನದ ಧೃಡತೆಗೆ ತಕ್ಕಂತೆ, ಎದುರಿನ ಕಾಣುವಿಕೆಗೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯ ಮತ್ತು ಅತ್ಯವಶ್ಯಕ, ಇವೆಲ್ಲದರ ಜೊತೆಗೆ ನಿಮ್ಮ ವಾಹನ ಚಾಲನಾ ಸಾಮಥ್ರ್ಯದ ಪರಿಪೂರ್ಣ ಅರಿವು ನಿಮಗಿದ್ದರೆ ನೀವು ಸುರಕ್ಷಿತರು, ಯಾವತ್ತೂ ನಿಮ್ಮ ಬಗ್ಗೆ ನಿಮಗೆ ರಸ್ತೆ ಯಾವಾಗಲೂ ನೀವು ಯೋಚಿಸಿದಂತೆ ಇರುವುದಿಲ್ಲ, ಬೆಳಿಗ್ಗೆ ನೀವು ಸಂಚರಿಸಿದ ಉತ್ತಮ ರಸ್ತೆಯನ್ನು ಯಾರೋ ಯಾವುದೋ ಕಾರಣಕ್ಕೆ ಅಗೆದಿರಬಹುದು, ಆಗ ಅದೇ ದಿನ ರಾತ್ರಿ ನಿಮಗೆ ಸಿಗುವ ರಸ್ತೆ ಬೇರೆಯೇ ಅಲ್ಲವೇ?

 ಇನ್ನೂ ವೇಗವನ್ನು ಹೆಚ್ಚಿಸಿ ತಮ್ಮ ವಾಹನದ ಸಾಮಥ್ರ್ಯದ ಪರಿಪೂರ್ಣ ಪರೀಕ್ಷೆ ಮುಗಿದು ಫಲಿತಾಂಶ ಬರುವ ಮುನ್ನ ಆಸ್ಪತ್ರೆಯ ಹಾಸಿಗೆ ಮೇಲೆ ಡಾಕ್ಟರ್ಗಳು ಇಂತಹವರಿಗೆ ತಮ್ಮ ಟ್ರೀಟ್ಮೆಂಟ್ ಶುರು ಮಾಡಿರುತ್ತಾರೆ ಇದನ್ನು ನೀವು ಅರಿತರೆ ಉತ್ತಮ.

ಫಾರ್ಮುಲಾ-2 : ಹೈವೇಗಳಲ್ಲಿ ಜಂಟಿ ವಾಹನದ ಅಪಘಾತಗಳು ಹೆಚ್ಚು... ! ಏಕೆಂದರೆ ಅತಿಯಾದ ವೇಗ! ಹೈವೇಗಳಲ್ಲಿ ಮರಕ್ಕೆ ಡಿಕ್ಕಿ ಹೊಡೆದ ವಾಹನಗಳು ಅನಾಥರಂತೆ ಬಿದ್ದಿರುವುದನ್ನು ನೀವು ಸರ್ವೇಸಾಮಾನ್ಯವಾಗಿ ಹೈವೇಗಳಲ್ಲಿ ಸಂಚರಿಸುವಾಗ ನೋಡಿರುತ್ತೀರಿ. ಇದು ಎಲ್ಲಡೆ ಸರ್ವೆ ಸಾಮಾನ್ಯ.  ನೀವು ನಿಮ್ಮದಲ್ಲದ ಅಥವಾ ಸ್ನೇಹಿತರ ವಾಹನಗಳನ್ನು ಓಡಿಸುವಾಗ ಇನ್ನೂ ಹೆಚ್ಚು ಎಚ್ಚರಿಕೆಯಿಂದ ಇರುವುದು ಅತ್ಯಾವಶ್ಯಕ. ರಸ್ತೆಯನ್ನು ತುಂಬಾ ಜಾಗ್ರತೆಯಿಂದ ಅಭ್ಯಸಿಸುವ ಹವ್ಯಾಸ ನಿಮ್ಮ ವೇಗ ಕ್ಷಮತೆಯನ್ನು ಹೆಚ್ಚಿಸುತ್ತದೆ, ನೆನಪಿರಲಿ ರಸ್ತೆಯು ಕೇವಲ 1 ಕೀ.ಮೀ ಅಂತರದಲ್ಲಿ ಸಾಕಷ್ಟು ಏರಿಳಿತಗಳನ್ನು ತಂದೊಡ್ಡಬಹುದು, ಜಾಗ್ರತೆಯಿಂದಿರಬೇಕು. ನಿಮ್ಮ ಹಳ್ಳಿಗಳಿಂದ ರಜೆ ಮುಗಿಸಿಕೊಂಡು ನಗರಕ್ಕೆ ವಾಪಾಸ್ಸಾಗುವಾಗ ವೇಗದ ಮಿತಿ ಮೀರಬೇಡಿ, ಅಪಘಾತದಲ್ಲಿ ಇಡೀ ಕುಟುಂಬ ಕಷ್ಟಕ್ಕೊಳಗಾಗುತ್ತದೆ ಎಚ್ಚರ

 ಮಕ್ಕಳ ಕಲಿಕೆಯ ಖಾತ್ರಿಯ ಆಯಾಮಗಳು...!
- ಡಾ.ಎಚ್.ಬಿ.ಚಂದ್ರಶೇಖರ್,

ವಿದ್ಯಾರ್ಥಿಗಳನ್ನು 5ನೇ ತರಗತಿಯವರೆಗೆ ಅನುತ್ತೀರ್ಣರನ್ನಾಗಿ ಮಾಡಬಾರದು ಹಾಗೂ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ಮಾಡುವುದು ಹಾಗೂ ಆ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವ ಕುರಿತ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಬಿಡುವ ನಿರ್ಧಾರವನ್ನು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ  ಮಾಡಿದ್ದು, ಈ ಸಂಬಂಧ ಮಕ್ಕಳನ್ನು ಅನುತ್ತೀರ್ಣ ಮಾಡುವುದರಿಂದ ಗುಣಮಟ್ಟ ಸುಧಾರಣೆ ಸಾಧ್ಯವಿಲ್ಲವೆಂದು ನಾನು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಕೆಲವು ಶಿಕ್ಷಕ ಮತ್ತು ಪೋಷಕ ಮಿತ್ರರು ಹಲವಾರು ಪ್ರಶ್ನೆಗಳನ್ನು ನನ್ನ ಮುಂದೊಡ್ಡಿದ್ದಾರೆ. ನೀವು ಹೇಗಿದ್ದರೂ ನನ್ನನ್ನು ಪಾಸ್ ಮಾಡುತ್ತೀರಾ. ಆದ್ದರಿಂದ ನಾನ್ಯಾಕೆ ಓದಲಿ ಎಂದು ನನ್ನ ವಿದ್ಯಾರ್ಥಿಯೊಬ್ಬ ಪ್ರಶ್ನಿಸುತ್ತಿದ್ದಾನೆ ಹೀಗೆಂದು ಶಿಕ್ಷಕಿಯೊಬ್ಬರು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಅನುತ್ತೀರ್ಣಗೊಳಿಸದೇ ಇರುವ ಕಾರಣ ಮಕ್ಕಳಲ್ಲಿ ಸ್ವಲ್ಪವೂ ಭಯವೇ ಇಲ್ಲ. ಭಯ, ಒತ್ತಡಗಳಿಲ್ಲದೇ ಹೇಗೆ ಕಲಿಯಬಲ್ಲರು ಎಂದು ಶಿಕ್ಷಕರೊಬ್ಬರು ಪ್ರಶ್ನಿಸುತ್ತಾರೆ. ಮಕ್ಕಳನ್ನು ಹೊಡೆಯದೇ ಕಲಿಸಬೇಕೆಂಬ ನೀತಿಯ ಕಾರಣ ಮಕ್ಕಳಿಗೆ ಸಮರ್ಪಕವಾಗಿ ಕಲಿಸಲಾಗುತ್ತಿಲ್ಲ. ಈ ಕಾರಣಗಳಿಂದ ಶಿಕ್ಷಣದ ಗುಣಮಟ್ಟದಲ್ಲಿ ಕುಸಿತ ಕಂಡಿದೆ. ಎಂದು ಇನ್ನೊಬ್ಬ ಶಿಕ್ಷಕರು ಪ್ರಶ್ನಿಸುತ್ತಾರೆ. ಕೆಳಹಂತದ ತರಗತಿಗಳಲ್ಲಿ ಕಲಿಯದೇ ದಾಟಿಕೊಂಡು ಪ್ರೌಢಶಾಲಾ ಹಂತಕ್ಕೆ ಬರುವ ಮಕ್ಕಳಿಗೆ ಕಲಿಸುವ ಸ್ಥಿತಿ ಯಾರಿಗೂ ಬರಬಾರದು ಎಂದು ಪ್ರೌಢಶಾಲೆಯ ಶಿಕ್ಷಕರೊಬ್ಬರು ತಮ್ಮ ಬೇಸರ ವ್ಯಕ್ತಪಡಿಸುತ್ತಾರೆ.

ಮಗು ಕಲಿಯದಿದ್ದರೂ ಎಲ್ಲಾ ತರಗತಿಗಳಲ್ಲಿ ಉತ್ತೀರ್ಣಗೊಳಿಸುತ್ತಾ ಹೋದರೆ, ಹತ್ತನೇ ತರಗತಿಯಲ್ಲಿ ಆ ಮಗು ಏನೂ ಕಲಿಯದೇ ಅನುತ್ತೀರ್ಣನಾಗುತ್ತಾನೆ/ಳೆ, ಎಂದು ಪೋಷಕರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೀಗೆ ಅನುತ್ತೀರ್ಣಗೊಳಿಸದಿದ್ದಲ್ಲಿ ಮಕ್ಕಳಲ್ಲಿ ಕಲಿಕಾ ಖಾತ್ರಿ ಸಾಧ್ಯವಾಗದೆಂಬ ಅಭಿಪ್ರಾಯ/ವಾದವನ್ನು ಅನೇಕರು ಮಾಡುತ್ತಾರೆ.

ಹೌದು! ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಮುಖ್ಯವಾಗಿದೆ. ಮಕ್ಕಳಲ್ಲಿ ಕಲಿಕೆಯ ಖಾತ್ರಿ ಕುರಿತ ಹಲವು ಆಯಾಮಗಳನ್ನು ಚರ್ಚಿಸುವುದು ಪ್ರಮುಖವಾದುದಾಗಿದೆ. ನನ್ನನ್ನು ಅನುತ್ತೀರ್ಣಗೊಳಿಸುತ್ತಿಲ್ಲವೆಂಬ ಮಕ್ಕಳ ಭಾವನೆ ಹಾಗೂ ಮಕ್ಕಳು ಕಲಿಯದಿದ್ದರೂ ಉತ್ತೀರ್ಣಗೊಳಿಸಬಹುದೆಂಬ ಶಿಕ್ಷಕರ ಭಾವನೆಗಳು ಸಮಸ್ಯೆಯ ಕೇಂದ್ರಬಿಂದುಗಳಾಗಿವೆಯೆನ್ನಬಹುದು. ಈ ನಿಟ್ಟಿನಲ್ಲಿ ಉತ್ತೀರ್ಣಗೊಳ್ಳಲು ಕಲಿಯಲೇಬೇಕು ಮತ್ತು ಅದೇ ವರ್ಷದಲ್ಲಿ ಕಲಿಸಿಯೇ ಎಲ್ಲಾ ಮಕ್ಕಳನ್ನು ಉತ್ತೀರ್ಣಗೊಳಿಸಲಾಗುತ್ತದೆಂಬ ಸಂದೇಶ ಮಕ್ಕಳಿಗೆ ದಾಟಿಸಬೇಕಾದ ಅಗತ್ಯವಿದೆ. ಅದೇ ರೀತಿ ಶಿಕ್ಷಕರಿಗೂ ಸಹ ಎಲ್ಲಾ ಮಕ್ಕಳಿಗೂ ನಿಗದಿಯಂತೆ ಕಲಿಸಿಯೇ, ಅದೇ ವರ್ಷದಲ್ಲಿ ಉತ್ತೀರ್ಣಗೊಳಿಸಬೇಕೆಂಬ ಸ್ಪಷ್ಟ ನಿರ್ದೇಶನ ನೀಡುವುದು ಪರಿಣಾಮಕಾರಿ. ಯಾವುದೇ ಮಗು ನಿಗದಿಯಂತೆ ಕಲಿಯದಿದ್ದರೆ, ವರ್ಷಾಂತ್ಯದಲ್ಲಿ ಅಥವಾ ವರ್ಷದ ಮಧ್ಯಭಾಗದಲ್ಲಿ ಪೂರಕ ತರಗತಿಗಳನ್ನು ತೆಗೆದುಕೊಂಡು ಕಲಿಸಲೇಬೇಕು ಹಾಗೂ ಮಕ್ಕಳು ಕಲಿತರೇ ಮಾತ್ರ ಉತ್ತೀರ್ಣತೆಯೆಂಬ ಸಂದೇಶಗಳು ಬದಲಾವಣೆ ತರಬಲ್ಲವು. ಇದರ ಜೊತೆ ಮಕ್ಕಳ ಕಲಿಕೆಯ ಖಾತ್ರಿಗಾಗಿ ಪೋಷಕರ ಬೆಂಬಲವನ್ನೂ ಬಳಸಿಕೊಳ್ಳುವತ್ತಲೂ ಕ್ರಮ ಕೈಗೊಂಡಲ್ಲಿ ಶಿಕ್ಷಕ, ಪೋಷಕ, ವಿದ್ಯಾರ್ಥಿ-ಈ ಮೂವರ ಸಂಯೋಜಿತ ಪ್ರಯತ್ನಗಳಿದ್ದಲ್ಲಿ ಮಕ್ಕಳಲ್ಲಿ ಕಲಿಕೆಯ ಖಾತ್ರಿ ಕಷ್ಟವೇನಲ್ಲ.

ಮಕ್ಕಳ ಕಲಿಕೆಗೆ ಅಗತ್ಯವಾದ ಅಂಶವೆಂದರೆ ಆರಂಭದ ತರಗತಿಗಳಲ್ಲಿ (1 ಮತ್ತು 2 ನೇ ತರಗತಿ) ಮಕ್ಕಳು ಭಾಷೆ ಮತ್ತು ಗಣಿತದ ಮೂಲಕ್ರಿಯೆಗಳನ್ನು ಸಮರ್ಪಕವಾಗಿ ಕಲಿಯುವುದಾಗಿದೆ. ಈ ತರಗತಿಗಳಲ್ಲಿ ಸರಿಯಾಗಿ ಕಲಿಯದಿದ್ದಲ್ಲಿ, ಆ ಸಮಸ್ಯೆಗಳು ಸಂಯುಕ್ತಗೊಂಡು ಮುಂದಿನ ತರಗತಿಗಳಲ್ಲಿ ಮಕ್ಕಳು ಹಿಂದುಳಿಯುವ ಸನ್ನಿವೇಶಗಳು ಎದುರಾಗುತ್ತವೆ. ಒಂದೆಡೆ ಮೂಲ ಸಾಮಥ್ರ್ಯಗಳ ಗಳಿಕೆಯಿಲ್ಲದಿದ್ದಲ್ಲಿ, ಅದರ ಜೊತೆ ಪಠ್ಯಸೂಚಿಯಲ್ಲಿರುವ ಎಲ್ಲಾ ಸಾಮಥ್ರ್ಯಗಳನ್ನು ಕಲಿಸುವ ಒತ್ತಡದಿಂದ ಶಿಕ್ಷಕರ ಬೋಧನೆಯು ಶಾಸ್ತ್ರಕ್ಕೆಂಬಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಆರಂಭದ ತರಗತಿಗಳಲ್ಲಿ ಆಸಕ್ತ ಹಾಗೂ ಸಮರ್ಥ ಶಿಕ್ಷಕರ ಬೋಧನೆ ಮಕ್ಕಳಿಗೆ ಅಗತ್ಯವಾಗಿ ಬೇಕಾಗುತ್ತದೆ. ಈ ತರಗತಿಗಳಲ್ಲಿ ಮಕ್ಕಳ ಕಲಿಕೆಯ ಖಾತ್ರಿಯ ಕುರಿತು ಆಡಳಿತ ವ್ಯವಸ್ಥೆಯ ಕಣ್ಗಾವಲೂ ಸಹ ಅಗತ್ಯವಾದುದಾಗಿದೆ. ಇದರ ಜೊತೆ ಎಲ್ಲಾ ತರಗತಿಗಳಲ್ಲಿಯ ಮಕ್ಕಳ ಕಲಿಕೆಯ ಖಾತ್ರಿಯ ಕುರಿತ ಕಣ್ಗಾವಲು ಇರಬೇಕಾಗುತ್ತದೆ. ಆಡಳಿತ ವ್ಯವಸ್ಥೆಯ ಮೇಲುಸ್ತುವಾರಿ ಪ್ರಕ್ರಿಯೆಯು ಚುರುಕಾಗಿದ್ದಲ್ಲಿ ಶಿಕ್ಷಕರೂ ಸಹ ತಮ್ಮ ಕಾರ್ಯನಿರ್ವಹಣೆಯಲ್ಲಿ ಸಕ್ರಿಯರಾಗುತ್ತಾರೆ. ತನ್ಮೂಲಕ ಮಕ್ಕಳೂ ಸಹ ಸಕ್ರಿಯವಾಗಿ ಕಲಿಯಲು ಶಿಕ್ಷಕರು ಅಗತ್ಯ ಇಂಬು ಕೊಡುತ್ತಾರೆ.

ಪ್ರಾಥಮಿಕ ಶಾಲಾ ಪಠ್ಯಸೂಚಿಯಲ್ಲಿ ಭಾಷೆಯ ಜೊತೆ ಗಣಿತ ವಿಷಯವಿದ್ದಲ್ಲಿ ಸಾಕೆನಿಸುತ್ತದೆ. ಪರಿಸರ ಅಧ್ಯಯನದ ಅಂಶಗಳನ್ನು ಭಾಷೆಯಲ್ಲಿ ಸಂಯೋಜಿಸಬಹುದು. ಈ ರೀತಿಯ ಸರಳೀಕರಣಗೊಂಡ ಪಠ್ಯಸೂಚಿಯಿದ್ದಲ್ಲಿ ಭಾಷೆ ಮತ್ತು ಗಣಿತದ ಮೂಲಪರಿಕಲ್ಪನೆಗಳನ್ನು ಎಲ್ಲಾ ಮಕ್ಕಳೂ ಸಮರ್ಥವಾಗಿ ಕರಗತ ಮಾಡಿಕೊಳ್ಳುವಂತೆ ಮಾಡಲು ಶಿಕ್ಷಕರಿಗೆ ಹೆಚ್ಚು ಸಮಯ ದೊರೆಯುತ್ತದೆ. ಅಕ್ಷರ ಹಾಗೂ ಸರಳ ಪದಗಳನ್ನು ಸರಾಗವಾಗಿ ಕಲಿಯುವ ಹೆಚ್ಚಿನ ಮಕ್ಕಳು ಗುಣಿತಾಕ್ಷರ ಹಾಗೂ ಗುಣಿತಾಕ್ಷರಗಳನ್ನೊಳಗೊಂಡ ಒತ್ತಕ್ಷರಗಳ ಕಲಿಕೆಯಲ್ಲಿ ಕೆಲವು ಮಕ್ಕಳು ಹಿಂದೆ ಬೀಳುತ್ತಾರೆ. ಅಂಕಿಗಳನ್ನು ಗುರುತಿಸಲು ಹಾಗೂ ಸರಳವಾದ ಕೂಡುವ, ಕಳೆಯುವ ಲೆಕ್ಕಗಳನ್ನು ಆರಾಮಾಗಿ ಮಾಡುವ ಹೆಚ್ಚಿನ ಮಕ್ಕಳು ದಶಕ ತೆಗೆದುಕೊಂಡು ಕೂಡುವ, ಕಳೆಯುವ ಲೆಕ್ಕಗಳನ್ನು ಮಾಡುವಲ್ಲಿ ಕೆಲವರು ಹಿಂದೆ ಬೀಳುತ್ತಾರೆ. ಇನ್ನು ಗುಣಾಕಾರ, ಭಾಗಾಕಾರ, ದಶಮಾಂಶಗಳು ಕಠಿಣವಾಗುತ್ತಾ ಹೋಗುತ್ತವೆ. ತಜ್ಞರು ಕಂಡುಕೊಂಡಂತೆ ಈ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸಲು ಅಗತ್ಯ ಕಲಿಕಾ ಸಂಪನ್ಮೂಲಗಳನ್ನೊಳಗೊಂಡ ಚಟುವಟಿಕೆಗಳ ಬಳಕೆಯ ಮೂಲಕ ಮಾತ್ರ ಸಾಧ್ಯವಿದೆ. ಇದರ ಜೊತೆ ಮಕ್ಕಳಿಗೆ ಹೆಚ್ಚು ಅಭ್ಯಾಸ, ಪುನರಭ್ಯಾಸಗಳನ್ನು ಮಾಡಿಸಿದಲ್ಲಿ ಮಾತ್ರ ಈ ಸಾಮಥ್ರ್ಯಗಳನ್ನು ಮಕ್ಕಳು ಯಶಸ್ವಿಯಾಗಿ ಕಲಿಯಬಲ್ಲರು. ಈ ನಿಟ್ಟಿನಲ್ಲಿ ಪ್ರತಿ ಮಗುವಿನ ಕಲಿಕಾ ಕೊರತೆಗಳನ್ನು ಕಂಡುಕೊಳ್ಳುವ ನೈದಾನಿಕ ಪರೀಕ್ಷೆಗಳನ್ನು ನಿರ್ವಹಿಸಿ, ಪೂರಕ ಚಟುವಟಿಕೆಗಳನ್ನು ಮಾಡಿ, ಮಕ್ಕಳನ್ನು ಕಲಿಕೆಯ ಪ್ರಗತಿಯೆಡೆಗೆ ಕೊಂಡೊಯ್ಯಲು ಪ್ರತಿ ಮಗುವಿನ ಕಲಿಕೆಯ ಕ್ರಿಯಾಯೋಜನೆಯನ್ನು ಶಿಕ್ಷಕರು ತಯಾರಿಸಿಕೊಂಡು, ಮುಂದುವರೆಯಬೇಕಾಗುತ್ತದೆ.

ಇಷ್ಟಾಗಿಯೂ ಕೆಲವು ಮಕ್ಕಳು ಕಲಿಯದಿದ್ದಲ್ಲಿ ಅವರಿಗೆ ಪೂರಕ ತರಗತಿಗಳನ್ನು ತೆಗೆದುಕೊಂಡು, ವಿಶಿಷ್ಟ ಬೋಧನೆಯನ್ನು ಕೈಗೊಂಡು, ಕಲಿಸಿ, ಉತ್ತೀರ್ಣಗೊಳಿಸಬೇಕು. ಮಕ್ಕಳ ಕಲಿಕೆಯ ಕೊರತೆಗಳು ಎಲ್ಲಾ ವಿಷಯಗಳಲ್ಲಿದ್ದು, ಸಾಮಾನ್ಯವಾದುವುಗಳೇ ಅಥವಾ ಯಾವುದಾದರೂ ಒಂದು ವಿಷಯ ಅಥವಾ ಒಂದು ವಿಷಯದ ಕೆಲವು ಪರಿಕಲ್ಪನೆಗಳಲ್ಲಿರುವ ನಿರ್ದಿಷ್ಟ ಕೊರತೆಗಳೇ ಎಂಬುದನ್ನು ಕಂಡುಕೊಳ್ಳಬೇಕು. ಈ ಕೊರತೆಗಳು ಮತ್ತು ಅವುಗಳನ್ನು ಪರಿಹರಿಸಬೇಕಾದ ಮಾರ್ಗೋಪಾಯಗಳನ್ನು ಒಳಗೊಂಡ ಅಂಶಗಳು ಮಕ್ಕಳುವಾರು ಕ್ರಿಯಾಯೋಜನೆ ಅಥವಾ ಮಕ್ಕಳ ಕೃತಿಸಂಪುಟ (ಚೈಲ್ಡ್ ಪೋಟರ್್ಫೋಲಿಯೋ) ದಲ್ಲಿರಬೇಕಾಗುತ್ತದೆ. ಮಕ್ಕಳ ಕೊರತೆಗಳನ್ನು ಯಾವ ರೀತಿ ಸರಿಪಡಿಸಿಕೊಳ್ಳಬೇಕೆಂಬ ನಿರ್ದಿಷ್ಟತೆಯನ್ನಿಟ್ಟುಕೊಂಡೇ ಶಿಕ್ಷಕರಿಗೆ ತಮ್ಮ ಶಾಲಾ ಹಂತದಲ್ಲಿಯೇ ತರಬೇತಿಗಳನ್ನು ಆಯೋಜಿಸುವ ಸಾಧ್ಯತೆಗಳತ್ತ ಚಿಂತಿಸಬೇಕು. ಸಾಮಾನ್ಯವಾದ ತರಬೇತಿಗಳಿಗಿಂತ ಶಿಕ್ಷಕರ ನಿರ್ದಿಷ್ಟ ಅವಶ್ಯಕತೆ ಮತ್ತು ಬೇಡಿಕೆಗಳಾಧರಿಸಿದ ತರಬೇತಿಗಳ ಆಯೋಜನೆ ಪರಿಣಾಮಕಾರಿಯಾಗುತ್ತದೆ. ಮಕ್ಕಳ ಕಲಿಕೆ ಖಾತ್ರಿಪಡಿಸುವ ವಿಷಯಗಳನ್ನು ಶಿಕ್ಷಕರು ಪರಸ್ಪರ ಚರ್ಚಿಸಿ, ತಾವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವಂತೆ ಶಿಕ್ಷಕರು ತಮ್ಮದೇ ಆದ ವೃತ್ತಿಪರ ಸಮುದಾಯಗಳನ್ನು ಅನೌಪಚಾರಿಕವಾಗಿ ರಚಿಸಿಕೊಂಡು, ಚರ್ಚಿಸಿ, ಕಾರ್ಯನಿರ್ವಹಿಸುವಂತೆ ಮಾಡಲು ಶಿಕ್ಷಕರನ್ನು ಪ್ರೇರೇಪಿಸಬೇಕು.

ಕಲಿಯಬೇಕೆಂಬ ಆಸಕ್ತಿ ಪ್ರತಿಯೊಬ್ಬರಲ್ಲೂ ಸಹಜವಾಗಿ ಬರುವ ಗುಣವಾಗಿರುತ್ತದೆ. ಆದರೆ ಕಾಲಕ್ರಮೇಣ ಈ ಗುಣವನ್ನು ನಾವೆಲ್ಲಾ ಮರೆತುಬಿಡುತ್ತೇವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯಶಸ್ವಿಯಾಗಿ ಕಲಿಸುವ ವಿಧಾನಗಳನ್ನು ತಾವೂ ಕಲಿತು, ಕಲಿಸುವ ಪ್ರಕ್ರಿಯೆಯಲ್ಲಿ ಶಿಕ್ಷಕರು ಹಾಗೂ ಆಡಳಿತ ವ್ಯವಸ್ಥೆಯ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿ ತೊಡಗಿಸಿಕೊಂಡಲ್ಲಿ ಕಲಿಕೆಯ ಖಾತ್ರಿ ಅಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ ಮಕ್ಕಳ ಬೋಧನಾ ತಜ್ಞರು, ಆಸಕ್ತ ಸರ್ಕಾರೇತರ ಸಂಸ್ಥೆಗಳು ಹಾಗೂ ಸಮುದಾಯವನ್ನು ಯಶಸ್ವಿಯಾಗಿ ತೊಡಗಿಸಿಕೊಂಡಲ್ಲಿ ಹೆಚ್ಚಿನ ಪರಿಣಾಮವನ್ನು ಕಂಡುಕೊಳ್ಳಲು ಸಾಧ್ಯವಿದೆ. ಇದರ ಜೊತೆ ಶಿಕ್ಷಕರು ಕಲಿಕಾ ಚಟುವಟಿಕೆಗಳ ಕಡೆ ಸಂಪೂರ್ಣವಾಗಿ ತಮ್ಮ ಗಮನ ಹರಿಸುವಂತೆ ಮಾಡಲು ಅವರ ಬೋಧಕೇತರ ಕಾರ್ಯಗಳ ನಿರ್ವಹಣೆಯ ಹೊರೆಯನ್ನು ಸಂಪೂರ್ಣ ತಪ್ಪಿಸುವ ಅಗತ್ಯವೂ ಇದೆ.

ಇನ್ನು ಮಕ್ಕಳಿಗೆ ಕಲಿಕಾ ಪ್ರಕ್ರಿಯೆಯಲ್ಲಿ ಭಯ, ಒತ್ತಡಗಳನ್ನು ಮೂಡಿಸಿದರೆ ಮಾತ್ರ ಕಲಿಕೆ ಸಾಧ್ಯವೆನ್ನುವ ಶಿಕ್ಷಕರಿಗೆ ಮಕ್ಕಳ ಮನೋವಿಜ್ಞಾನದ ತತ್ವಗಳನ್ನು ಮನದಾಳದೊಳಗೆ ದಾಟಿಸಿ, ಅವರ ಮನೋಭಾವಗಳು ಪರಿವರ್ತನೆಯಾಗುವಂತೆ ಮಾಡಬೇಕಿದೆ. ತಾವು ಕಲಿತ ಡಿ.ಇಡಿ, ಬಿ.ಇಡಿ.ಗಳಲ್ಲಿ ಈ ಅಂಶಗಳನ್ನು ಕಲಿತಿದ್ದರೂ, ಪ್ರಾಯೋಗಿಕ ಹಾಗೂ ಪರಿಣಾಮಕಾರಿ ಕಲಿಕೆಯಾಗದೇ ಇರುವ ಕಾರಣ ಅವರ ಮನೋಭಾವಗಳಲ್ಲಿ ಪರಿವರ್ತನೆಯಾಗಿಲ್ಲದಿರುವ ಸಾಧ್ಯತೆಗಳಿವೆ. ಈ ಕಾರಣದಿಂದ ಶಿಕ್ಷಕರು ಮತ್ತು ಪೋಷಕರ ಮನೋಭಾವಗಳ ಪರಿವರ್ತನೆಗಾಗಿ ಅಗತ್ಯವಾದ ಸಂಪನ್ಮೂಲಗಳನ್ನು ಹೊಂದಿದ ಮಾಹಿತಿಗಳ ನೀಡಿಕೆ ಹಾಗೂ ತರಬೇತಿಗಳ ಆಯೋಜನೆ ಅಗತ್ಯವಿದೆ. ಮಕ್ಕಳ ಕುರಿತಾದ ಧನಾತ್ಮಕ ನಂಬಿಕೆ, ತಾಳ್ಮೆ, ಭರವಸೆಗಳನ್ನು ಶಿಕ್ಷಕರೂ ಹೊಂದಿರುವುದು ಹಾಗೂ ಅವುಗಳನ್ನು ಯಾವತ್ತೂ ಕಳೆದುಕೊಳ್ಳದೆ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿಯೇ ಯಶಸ್ಸು ಅಡಗಿದೆ. ಈ ನಿಟ್ಟಿನಲ್ಲಿ ಸ್ವಾಮಿ ಜಗದಾತ್ಮಾನಂದರ ಪ್ರಸಿದ್ಧ ಕೃತಿ ಬದುಕಲು ಕಲಿಯಿರಿಯಲ್ಲಿನ ಎರಡು ಪ್ರಮುಖ ಪ್ರಸಂಗಗಳು ಉಲ್ಲೇಖಾರ್ಹ. ಮೊದಲ ಪ್ರಸಂಗದಲ್ಲಿ ರಾಮಕೃಷ್ಣಾಶ್ರಮ ನಡೆಸುವ ವಸತಿನಿಲಯದಲ್ಲಿದ್ದ ವಿದ್ಯಾರ್ಥಿಯೊಬ್ಬ ಅವನ ತಂದೆಯು ಅವನು ಚಿಕ್ಕವನಿದ್ದಾಗ ಭಯ ಹಾಗೂ ಮೂದಲಿಕೆಗಳಿಂದ ಕಲಿಸಿದ್ದರ ಪರಿಣಾಮವಾಗಿ ಗಣಿತ ವಿಷಯದ ಬಗ್ಗೆ ದ್ವೇಷ ಭಾವನೆಯನ್ನು ಬೆಳೆಸಿಕೊಂಡಿರುತ್ತಾನೆ. ಅವನು ಆಶ್ರಮದಲ್ಲಿ ಕಾಪಿ ಮಾಡಿ, ಪರೀಕ್ಷೆಗಳಲ್ಲಿ ಪಾಸು ಮಾಡುತ್ತಿರುತ್ತಾನೆ. ಇಂತಹ ವಿದ್ಯಾರ್ಥಿ ಸ್ವಾಮೀಜಿಯವರ ಮಾತಿನಿಂದ ಪ್ರೇರಣೆಗೊಂಡು, ವೈಯಕ್ತಿಕವಾಗಿ ಗಣಿತ ಕಲಿಸಲು ವಿನಂತಿಸುತ್ತಾನೆ. ಸ್ವಾಮೀಜಿ ಆರಂಭದಲ್ಲಿ ಅವನಿಗೆ ಬರುವ ಸುಲಭ ಲೆಕ್ಕಗಳನ್ನು ಬಿಡಿಸಲು ತಿಳಿಸುವ ಮೂಲಕ ನಿಧಾನವಾಗಿ ಆತ್ಮವಿಶ್ವಾಸ ತುಂಬುತ್ತಾರೆ. ಹಂತಹಂತವಾಗಿ ಕಠಿಣ ಲೆಕ್ಕಗಳನ್ನು ಬಿಡಿಸಲು ಕಲಿಸುತ್ತಾರೆ. ಏಳನೇ ತರಗತಿಯಲ್ಲಿದ್ದ ಅವನ ಗಣಿತದ ಸಾಮಥ್ರ್ಯ ಮೂರನೇ ತರಗತಿಯಷ್ಟಿರುತ್ತದೆ. ದಡ್ಡ, ಸೋಮಾರಿ, ಕಾಪಿ ಹೊಡೆಯುವವ ಈ ರೀತಿಯ ಬಿರುದುಗಳನ್ನು ಪೋಷಕರು, ಶಿಕ್ಷಕರು, ಸ್ನೇಹಿತರಿಂದ ಪಡೆದಿದ್ದ ಅವನ ಮನಸ್ಸಿನಲ್ಲಿ ನಂಬಿಕೆ, ಆತ್ಮವಿಶ್ವಾಸ ಮೂಡಿಸಿ, ಏಳನೇ ತರಗತಿಯ ಗಣಿತ ಪರೀಕ್ಷೆಯಲ್ಲಿ ಎಪ್ಪತ್ತು ಅಂಕಗಳನ್ನು ಪಡೆಯುವಂತೆ ಸ್ವಾಮೀಜಿಯವರು ಮಾಡಿದ ನೈಜ ಪ್ರಸಂಗ ಅನುಕರಣೀಯವಾದುದಲ್ಲವೇ, ಇಂಥದ್ದೇ ಪ್ರಸಂಗಗಳು ಹಲವು ಅನುಭವಿ ಶಿಕ್ಷಕರ ವೃತ್ತಿ ಜೀವನದಲ್ಲಿ ಸಾಕಷ್ಟು ಘಟಿಸಿರಬಹುದಲ್ಲವೇ?

ಇದೇ ರೀತಿ ಬಾಲಾಪರಾಧಿಗಳ ಮನಃಪರಿವರ್ತನೆ ಮಾಡುತ್ತಿದ್ದ ಅಮೇರಿಕಾದ ಫ್ಲೆನಾಗನ್ ಎಂಬ ಫಾದರ್ ಅವರಿಗೆ ಎಡ್ಡಿ ಎಂಬ ಬಾಲಾಪರಾಧಿಯ ಸುಧಾರಣೆ ಕಠಿಣ ಸವಾಲಾಗುತ್ತದೆ. ಆದಾಗ್ಯೂ ಆರು ತಿಂಗಳು ಪ್ರಯತ್ನಿಸಿ ಫ್ಲೆನಾಗನ್ನ ಸಹಾಯಕರು ನಿರಾಶರಾಗುತ್ತಾರೆ. ಆದರೆ ತಾಳ್ಮೆಗೆಡದ ಫ್ಲೆನಾಗನ್ ಆ ಮಗುವಿನ ಮೇಲೆ ಇರಿಸಿದ ಅಪಾರ ಭರವಸೆ, ನಂಬಿಕೆಗಳ ಜೊತೆ ಕೈಗೊಂಡ ಪ್ರಯತ್ನಗಳ ಕಾರಣದಿಂದ ಅವನು ಬದಲಾಗಿ, ಯಶಸ್ವಿ ವ್ಯಕ್ತಿಯಾಗಿ ಮಾರ್ಪಡುತ್ತಾನೆ.

ಈ ಹಿನ್ನೆಲೆಯಲ್ಲಿ ಮಕ್ಕಳು ಕಲಿಯುತ್ತಾರೆಂಬ ನಂಬಿಕೆ, ಭರವಸೆಗಳೊಂದಿಗೆ ತಾಳ್ಮೆಯಿಂದ ಶಿಕ್ಷಕರು, ಪೋಷಕರು, ತಜ್ಞರು, ಮೇಲ್ವಿಚಾರಕರು, ಸಮುದಾಯದ ಆಸಕ್ತರು ಸಂಘಟಿತವಾಗಿ ಪ್ರಯತ್ನಗಳನ್ನು ಕೈಗೊಂಡಲ್ಲಿ ಯಶಸ್ಸು ಖಂಡಿತ ಸಾಧ್ಯವಿದೆ. ಈ ನಿಟ್ಟಿನಲ್ಲಿ ಮುಂದಡಿಯಿಡುವ ಅಗತ್ಯವಿದೆಯಲ್ಲವೇ

ಮುದ್ದಿನ ಕವಿ ಮುದ್ದಣ
- ಸುರೇಶ ಗೋವಿಂದರಾವ್ ದೇಸಾಯಿ,

ನೀರಿಳಿಯದ ಗಂಟಲ್ದಾಗ ಕಡಬ ತುರುಕಿದಾಂಗಾತು ಇದು ಸರ್ವೇ ಸಾಮಾನ್ಯ ಗ್ರಾಮೀಣ ಜನತೆಯ ನುಡಿಮುತ್ತು. ಆದರೆ ಇದನ್ನು ಕೇಳಿದಾಗ ನೆನಪಾಗುವುದು ಮುದ್ದಣ. ಕನ್ನಡ ಸಾಹಿತ್ಯದ ಮುಂಗೋಳಿ ಎಂದೇ ಹೆಸರಾಗಿದ್ದ ಕನ್ನಡದ ಮಹಾಕವಿ ಮುದ್ದಣ ಈ ರೀತಿಯಾಗಿ ಹೇಳಿದ್ದನು.

ನೀರಿಳಿಯದ ಗಂಟಲೊಳ್ ಕಡುಬಂ  
ತುರುಕಿದಂತಾಯ್ತು, ಕನ್ನಡಂ
ಕತ್ತೂರಿಯಲ್ತೆ , ಪದ್ಯಂ ವದ್ಯಂ ಗದ್ಯಂ ಹೃದ್ಯಂ ,
ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು

ಮುದ್ದಣ ಎಂಬುದು ಕವಿಯ ಕಾವ್ಯನಾಮ ಆತನ ನಿಜವಾದ ಹೆಸರು ಲಕ್ಷ್ಮೀನಾರಣಪ್ಪ. ಇವನು ಹುಟ್ಟಿದ್ದು ಉಡಪಿಯ ಬಳಿಯ ನಂದಳಿಕೆ ಎಂಬ ಗ್ರಾಮದಲ್ಲಿ 24 ಜನವರಿ 1870 ರಂದು. ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ನಾರಾಣಪ್ಪ ಮುದ್ದು ಮುದ್ದಾಗಿದ್ದ. ತಾಯಿ ತನ್ನ ಮಗನನ್ನು ಮುದ್ದಿನಿಂದ ಕರೆದ ಮುದ್ದಣ ಎಂಬ ಹೆಸರೇ ಮುಂದೆ ಅವನ ಕಾವ್ಯನಾಮವಾಯಿತು, ಮನೆದೇವರು ಮಹಾಲಿಂಗೇಶ್ವರ ಸ್ವಾಮಿ. ತಂದೆ ದೇವಾಲಯಕ್ಕೆ ಪೂಜೆ ಮಾಡಲು ನಿತ್ಯವು ಹೋಗುತ್ತಿದ್ದರು. ಅವರ ಜೊತೆಗೆ ಮುದ್ದಣನೂ ಹೂಕಟ್ಟಿಕೊಡಲು ಹೋಗುತ್ತಿದ್ದನು. ತಿಮ್ಮಪ್ಪಯ್ಯನಿಗೆ ಇಬ್ಬರು ಗಂಡು ಮಕ್ಕಳು. ಮುದ್ದಣ ಹಿರಿಯವನು. ಶಿವರಾಮಯ್ಯ ಚಿಕ್ಕವನು. ಕಿತ್ತು ತಿನ್ನುವ ಬಡತನ. ಪ್ರಾಥಮಿಕ ವಿದ್ಯಾಭ್ಯಾಸ ನಂದಳಿಕೆಯಲ್ಲೇ ಆಯಿತು. ಅದು ನಾಲ್ಕನೇ ಇಯತ್ತೆ ಮಾತ್ರ. ತಂದೆ ಶಾಲೆ ಬಿಡಿಸಿ ಕೂಲಿಕೆಲಸಕ್ಕ್ಕೆ ಕಳಿಸಿದ. ಅದರೆ ಮುದ್ದಣನಿಗೆ ಓದಬೇಕೆಂಬ ಹಂಬಲ. ಕಷ್ಟಪಟ್ಟು ಉಡುಪಿಗೆ ಹೋಗಿ ವಾರಾನ್ನದ ಮನೆಯೊಂದನ್ನು ಗೊತ್ತು ಮಾಡಿಕೊಂಡು ಆರನೇ ತರಗತಿಯವರೆಗೆ ಓದಿದ. ಮತ್ತೆ ಓದು ಮುಂದುವರೆಸುವುದು ಅಸಾಧ್ಯವಾದಾಗ, ಪ್ರಧಾನ ಗುರುಗಳ ಸಲಹೆಯಂತೆ ಕನ್ನಡ ತರಬೇತಿ ಶಾಲೆ ಸೇರಿದ. ಅಲ್ಲಿ ವಿದ್ಯಾರ್ಥಿ ವೇತನ ಸಿಗುತ್ತಿದ್ದರಿಂದ 2 ವರ್ಷಗಳ ತರಬೇತಿ ಪಡೆದು ಬಂದನು. ನಂತರ ಉಡುಪಿಯ ಸರಕಾರಿ ಶಾಲೆಯಲ್ಲಿ ವ್ಯಾಯಾಮ ಶಿಕ್ಷಕನ ಹುದ್ದೆ ದೊರೆಯಿತು.

ಶಾಲಾ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದಲಾರಂಭಿಸಿದ ಮುದ್ದಣ. ಓದುವುದರ ಜೊತೆಗೆ ಬರೆಯುವುದನ್ನೂ ಹವ್ಯಾಸ ಮಾಡಿಕೊಂಡು 1889 ರಲ್ಲಿ ರತ್ನಾವತಿ ಕಲ್ಯಾಣ 1892 ರಲ್ಲಿ ಕುಮಾರ ವಿಜಯ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾನೇ ಮುದ್ರಿಸಿ ಪ್ರಕಟಿಸಿದನು. ಜೊತೆಗೆ ಕೇಶೀರಾಜನ ಶಬ್ದಮಣಿದರ್ಪಣ, ಕಿಟ್ಟೆಲ್ ಪದಕೋಶ ಅವನಿಗೆ ಸಹಾಯಕವಾದವು. ಮುದ್ದಣನ ಬದುಕಿಗೊಂದು ತಿರುವು ತಂದುಕೊಟ್ಟಂತ ಕೃತಿ ಅದ್ಭುತ ರಾಮಾಯಣ ರಚನೆಯಾಯಿತು. ಆದರೆ ಪ್ರಕಟಿಸಲು ಮತ್ತು ಕೃತಿಗೆ ತನ್ನ ಹೆಸರು ಸೇರಿಸಲು ಹಿಂಜರಿಕೆಯಾಗಿ ಇದು ನನಗೆ ಸಿಕ್ಕಿದ ಹಸ್ತಪ್ರತಿ ಎಂದು ಕಾವ್ಯ ಮಂಜರಿ ಮಾಸಪತ್ರಿಕೆಯಲ್ಲಿ ಹೆಸರಿಲ್ಲದೆ ಪ್ರಕಟವಾಯಿತು. ಮುಂದೆ ರಚಿಸಿದ ಶ್ರೀರಾಮ ಪಟ್ಟಾಭಿಷೇಕ ಕೃತಿಗೆ ಮಹಾಲಕ್ಷ್ಮೀರಚಿತ ಎಂದು ತನ್ನ ತಾಯಿಯ ಹೆಸರಿನಿಂದ ಪ್ರಕಟಿಸಿದನು. ಇದಾದ ನಂತರ ಸುವಾಸಿನಿ ಪತ್ರಿಕೆಗೆ ಜೋಜೋ ಎಂಬ ಕವಿತೆ ಬರೆದ ಅದಕ್ಕೆ ಚಕ್ರಧಾರಿ ಅನ್ನುವ ಕಾವ್ಯನಾಮದಿಂದ ಪ್ರಕಟಿಸಿದನು.

ಮುದ್ದಣ ಕೆಲವು ಕಾಲ ಉಡುಪಿಯ ಕ್ರಿಶ್ಚಿಯನ್ ಶಾಲೆಯಲ್ಲಿ ಕನ್ನಡ ಅಧ್ಯಾಪಕನಾಗಿ ಕೆಲಸ ಮಾಡಿದ. ನಂತರ ಮುದ್ದಣನಿಗೆ ಒಂದು ಕೆಲಸ ಸಿಕ್ಕಿತು ಅಂತಾ ಸಮಾಧಾನ ಹೊಂದಿ ತಿಮ್ಮಪ್ಪಯ್ಯ-ಮಹಾಲಕ್ಷ್ಮಮ್ಮ ದಂಪತಿ, ಮುದ್ದಣನಿಗೆ ಶಿವಮೊಗ್ಗದ ಹತ್ತಿರದ ಕಾಗೆಕೋಡಮಗ್ಗಿ ಗ್ರಾಮದ ಕನ್ಯೆ ಕಮಲಳನ್ನು ತಂದು ಮದುವೆ ಮಾಡಿದರು. ಕಮಲ ಹೆಚ್ಚು ಓದಿದವಳಲ್ಲ. ಕೆಲವೇ ದಿನಗಳಲ್ಲಿ ಎಲ್ಲರ ಪ್ರೀತಿಗೆ ಪಾತ್ರಳಾಗಿ ಅಚ್ಚುಮೆಚ್ಚಿನವಳಾದಳು. ಈ ಸಮಯದಲ್ಲಿ ಮುದ್ದಣ ರಾಮಾಶ್ವಮೇಧ ಕೃತಿಯನ್ನು ರಚಿಸಿದ. ಅದನ್ನು ಕರ್ನಾಟಕ ಕಾವ್ಯ ಕಲಾನಿಧಿ ಪತ್ರಿಕೆಗೆ ಕಳಿಸಿ ಪ್ರಕಟಿಸಿದನು.

ಮುದ್ದಣನಿಗೆ ಆಗ ಒಂದು ಮಗುವಾಯ್ತು. ಆ ಮಗುವಿನ ಆಟ ಅವನ ಬಡತನ ಮರೆಸಿತು. ಆದರೆ ವಿಧಿಯ ಆಟ ಆರಂಭವಾಗಿತ್ತು. ಕೆಮ್ಮು ಶುರುವಾಯಿತು. ಅದು ಹಾಗೇ ಮುಂದುವರೆದು ಕ್ಷಯರೋಗ ಅಂತ ತಿಳಿಯಿತು. ಈಗ ಮುದ್ದಣ ಯೋಚಿಸಿ ನನ್ನ ಕಾಯಿಲೆ ನನ್ನ ಹೆಂಡತಿ ಮಗನಿಗೆ ಬರಬಾರದೆಂದು ಏನೋ ನೆಪಹೇಳಿ ಹೆಂಡತಿ ಕಮಲಾಳನ್ನು ಹಾಗೂ ಮಗು ರಾಧಾಕೃಷ್ಣನನ್ನೂ ಹೆಂಡತಿಯ ತವರಿಗೆ ಕಳಿಸಿದನು. ಇತ್ತ ರೋಗ ಉಲ್ಬಣವಾಯಿತು. ಚಿಕಿತ್ಸೆಗೂ ಹಣ ಇಲ್ಲದೇ ಪರದಾಡಿ ಕೆಮ್ಮಿಕೆಮ್ಮಿ ಕಾರಿಕೊಂಡು ತನ್ನ ಮೂವತ್ತೆರಡನೇ ವಯಸ್ಸಿಗೆ ಅಂದರೆ 1901 ಫೆಬ್ರವರಿ 16 ರಂದು ಮರಳಿಬಾರದ ಲೋಕಕ್ಕೆ ಹೋದನು.

ಮೊದಲೇ ಹೇಳಿದಂತೆ ಮುದ್ದಣ ರಚಿಸಿದ ಕೃತಿಗಳು ರಾಮಾಶ್ವಮೇಧ, ಅದ್ಭುತ ರಾಮಾಯಣ, ಶ್ರೀರಾಮ ಪಟ್ಟಾಭಿಷೇಕ ಎಂಬ ಷಟ್ಪದಿ ಕಾವ್ಯ, ಭಗವದ್ಗೀತೆ ಹಾಗೂ ರಾಮಾಯಣಗಳ ಕನ್ನಡ ಅನುವಾದ, ಕಾಮಶಾಸ್ತ್ರವನ್ನು ಕುರಿತ ಗ್ರಂಥ ಮತ್ತು ಗೋದಾವರಿ ಎಂಬ ಕಾಲ್ಪನಿಕ ಕಾದಂಬರಿ ಹೃದ್ಯಮಪ್ಪ ಗದ್ಯದಲ್ಲಿ ಅಂದರೆ ಪದ್ಯದ ಗೋಜಲು ಇಲ್ಲದ ಹೃದಯಕ್ಕೆ ಗದ್ಯದಲ್ಲಿ ಕಾವ್ಯ ರಚನೆ ಮಾಡುತ್ತೇನೆ ಎಂದು ಕರಿಮಣಿಯ ಸರದೋಳ್ ಚೆಂಬವಳಮಂ ಕೋದಂತೆ ಅಲ್ಲಲ್ಲಿ ಸಂಸ್ಕೃತ ಪದಗಳನ್ನೂ ಬಳಸಿಕೊಂಡು ಕಾವ್ಯ ರಚನೆ ಮಾಡಿದ್ದಾನೆ. ಮುದ್ದಣ ನವಿರಾದ ಹಾಸ್ಯ ಬೆರೆತ ನೂತನ ಶೈಲಿಯಲ್ಲಿ ತನ್ನ ಮಡದಿ ಮನೋರಮೆಗೆ ಕಥೆಹೇಳುವ ವೈಖರಿ ಎಂಥವರ ಮನಸ್ಸನ್ನಾದರೂ ಆಕರ್ಷಿಸುತ್ತದೆ. ಮುದ್ದಣನ ಪತ್ನಿಯ ಹೆಸರು ಕಮಲಾ ಎಂದಿದ್ದರೂ ಮುದ್ದಣ ಪ್ರೀತಿಯ ಮಡದಿಗೆ ಮನೋರಮಾ ಎಂದೇ ಮುದ್ದಿನಿಂದ ಕರೆಯುತ್ತಿದ್ದನು.

 ಮುದ್ದಣನ ನೆನಪು ಸದಾ ಹಸಿರಾಗಿರಬೇಕೆಂಬ ಬಯಕೆಯಿಂದ ಅವನ ಅಭಿಮಾನಿಗಳು ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ರೈತಸಂಘ, ಮುದ್ದಣ ಸ್ಮಾರಕ ಮಿತ್ರಮಂಡಳಿ ಸ್ಥಾಪಿಸಿದರು. ಇವರ ಕುರಿತು ಮುದ್ದಣಾಭಿನಂದನಾ ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದರು. ಮುದ್ದಣ ನಮ್ಮನ್ನು ಅಗಲಿ ಹೋಗಿ 116 ವರ್ಷ ಕಳೆದರೂ ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸ್ತುತನಾಗಿದ್ದಾನೆ, ಆತನ ನೆನಪು ಸದಾ ಹಸಿರು 

ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳು-6

ರಸ್ತೆ ಸುರಕ್ಷತೆ ಹಾಗೂ  ಸಂಚಾರಿ ನಿಯಮಗಳು-6 - ಅನಿಲ್ ಕುಮಾರ್, ಇಡೀ ಪ್ರಪಂಚವೇ ಬೆಳಕಿನ ವೇಗದಲ್ಲಿ ಚಲಿಸುತ್ತಿರುವಂತೆ ಭಾಸವಾಗುವ ಈ ದಿನಗಳಲ್ಲಿ ನಾವೇಕೆ ಆಮೆ ವೇಗದಲ್ಲಿ ...