ಹಣಕಾಸು ಆಯೋಗ.

inyatrust.in | Thursday, January 19, 2023

(1)  1[ರಾಜ್ಯಪಾಲರು]1,  ಈ  ಅಧಿನಿಯಮವು  ಪ್ರಾರಂಭವಾದ  ದಿನಾಂಕದಿಂದ ಒಂದು ವರ್ಷದೊಳಗೆ ಮತ್ತು ಆ ತರುವಾಯ ಪ್ರತಿ ಐದನೇ ವರ್ಷವು ಮುಕ್ತಾಯವಾದಾಗ ಜಿಲ್ಲಾ ಪಂಚಾಯತಿಗಳ, ತಾಲ್ಲೂಕು ಪಂಚಾಯತಿಗಳ ಮತ್ತು ಗ್ರಾಮ ಪಂಚಾಯತಿಗಳ ಹಣಕಾಸು ಪರಿಸ್ಥಿತಿಗಳನ್ನು ಪರಾಮರ್ಶಿಸಲು ಮತ್ತು ಈ ಮುಂದೆ ಹೇಳಿರುವವುಗಳ ಬಗ್ಗೆ, ಎಂದರೆ:     
(ಎ)  ಯಾವ ತತ್ವಗಳಿಂದ,     
  ರಾಜ್ಯದ  ಮತ್ತು  ಜಿಲ್ಲಾ  ಪಂಚಾಯತಿಗಳ,  ತಾಲ್ಲೂಕು  ಪಂಚಾಯತಿಗಳ  ಮತ್ತು  ಗ್ರಾಮ ಪಂಚಾಯತಿಗಳ  ನಡುವೆ  ವಿತರಣೆಯನ್ನು  ಮತ್ತು  ಸರ್ಕಾರವು  ವಿಧಿಸಬಹುದಾದ  ಮತ್ತು ತಮ್ಮಲ್ಲಿ ವಿಭಾಗಿಸಬಹುದಾದ ತೆರಿಗೆಗಳ, ಶುಲ್ಕಗಳ, ದಾರಿಸುಂಕಗಳ ಮತ್ತು ಫೀಜುಗಳ ನಿವ್ವಳ ಉತ್ಪತ್ತಿಯನ್ನು  ಅಂಥ  ಉತ್ಪತ್ತಿಯಲ್ಲಿ  ಜಿಲ್ಲಾ  ಪಂಚಾಯತಿಗಳ,  ತಾಲ್ಲೂಕು  ಪಂಚಾಯತಿಗಳ ಮತ್ತು ಗ್ರಾಮ ಪಂಚಾಯತಿಗಳ ಪಾಲಿನ ಹಂಚಿಕೆಯನ್ನು;
    ಜಿಲ್ಲಾ  ಪಂಚಾಯತಿಗಳಿಗೆ,  ತಾಲ್ಲೂಕು  ಪಂಚಾಯತಿಗಳಿಗೆ  ಮತ್ತು  ಗ್ರಾಮ  ಪಂಚಾಯತಿಗಳಿಗೆ ವಹಿಸಿಕೊಡಬಹುದಾದ ಅಥವಾ ಅವುಗಳು ವಿನಿಯೋಗಿಸಬಹುದಾದ ತೆರಿಗೆಗಳು, ಶುಲ್ಕಗಳು, ದಾರಿಸುಂಕಗಳು ಮತ್ತು ಫೀಜುಗಳನ್ನು ನಿರ್ಧರಿಸುವುದನ್ನು;
   ರಾಜ್ಯದ  ಸಂಚಿತ  ನಿಧಿಯಿಂದ  ಜಿಲ್ಲಾ  ಪಂಚಾಯತಿಗಳಿಗೆ,  ತಾಲ್ಲೂಕು  ಪಂಚಾಯತಿಗಳಿಗೆ ಮತ್ತು ಗ್ರಾಮ ಪಂಚಾಯತಿಗಳಿಗೆ ನೀಡುವ ಸಹಾಯಾನುದಾನವನ್ನು;     
(ಬಿ)  ಜಿಲ್ಲಾ ಪಂಚಾಯತಿಗಳ, ತಾಲ್ಲೂಕು ಪಂಚಾಯತಿಗಳ ಮತ್ತು ಗ್ರಾಮ  ಪಂಚಾಯತಿಗಳ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ಅವಶ್ಯಕವಾದ ಕ್ರಮಗಳನ್ನು;     
(ಸಿ)  ಜಿಲ್ಲಾ  ಪಂಚಾಯತಿಗಳ,  ತಾಲ್ಲೂಕು  ಪಂಚಾಯತಿಗಳ  ಮತ್ತು  ಗ್ರಾಮ  ಪಂಚಾಯತಿಗಳ  ಸುಭದ್ರ ಹಣಕಾಸಿನ  ದೃಷ್ಟಿಯಿಂದ  ರಾಜ್ಯಪಾಲರು  ಹಣಕಾಸು  ಆಯೋಗಕ್ಕೆ  ಉಲ್ಲೇಖಿಸಬಹುದಾದ  ಇತರ ವಿಷಯಗಳನ್ನು,
ನಿಯಂತ್ರಿಸಬೇಕೆನ್ನುವುದರ ಬಗ್ಗೆ ಶಿಫಾರಸ್ಸು ಮಾಡಲು ಹಣಕಾಸು ಆಯೋಗವೊಂದನ್ನು ರಚಿಸತಕ್ಕದ್ದು.     
(2)  ಹಣಕಾಸು  ಆಯೋಗವು  ಒಬ್ಬರು  ಅಧ್ಯಕ್ಷರನ್ನು  ಮತ್ತು  ಇತರ  ಇಬ್ಬರು  ಸದಸ್ಯರನ್ನು ಒಳಗೊಂಡಿರತಕ್ಕದ್ದು.     
(3)  ಹಣಕಾಸು  ಆಯೋಗದ  ಅಧ್ಯಕ್ಷರು  ಹಾಗೂ  ಸದಸ್ಯರು,  ಗೊತ್ತುಪಡಿಸಬಹುದಾದಂಥ ಅರ್ಹ ತೆಗಳನ್ನು  ಹೊಂದಿರತಕ್ಕದ್ದು  ಮತ್ತು  ಗೊತ್ತುಪಡಿಸಬಹುದಾದಂಥ  ವಿಧಾನದ  ಮೂಲಕ  ಅವರನ್ನು  ನೇಮಕ ಮಾಡತಕ್ಕದ್ದು.     
(4)  ಹಣಕಾಸು ಆಯೋಗವು ತನ್ನ ಕಾರ್ಯವಿಧಾನವನ್ನು ನಿರ್ಧರಿಸತಕ್ಕದ್ದು.     
(5)  ಹಣಕಾಸು  ಆಯೋಗದ  ಅಧ್ಯಕ್ಷರು  ಅಥವಾ  ಸದಸ್ಯರು,  ಸರ್ಕಾರದ  ಹಣಕಾಸು  ಇಲಾಖೆಯ ಕಾರ್ಯದರ್ಶಿಯವರನ್ನು  ಸಂಬೋಧಿಸಿ  ತನ್ನ  ಸಹಿ  ಸಹಿತ  ಬರಹದಲ್ಲಿ  ತಮ್ಮ  ಹುದ್ದೆಗಳಿಗೆ  ರಾಜೀನಾಮೆ ನೀಡಬಹುದು,  ಆದರೆ,  ಸರ್ಕಾರವು  ಅವರ  ರಾಜೀನಾಮೆಯನ್ನು  ಅಂಗೀಕರಿಸುವವರೆಗೆ  ಅವರು  ಹುದ್ದೆಯಲ್ಲಿ ಮುಂದುವರಿಯತಕ್ಕದ್ದು.     
(6)  (5)ನೇ ಉಪ ಪ್ರಕರಣದ ಅಡಿಯಲ್ಲಿ ಸದಸ್ಯರ ಅಥವಾ ಅಧ್ಯಕ್ಷರ ರಾಜೀನಾಮೆಯ ಅಥವಾ ಇತರ ಯಾವುದೇ ಕಾರಣದಿಂದ ಉಂಟಾದ ಆಕಸ್ಮಿಕ ಖಾಲಿ ಸ್ಥಾನವನ್ನು ಹೊಸದಾಗಿ ನೇಮಕ ಮಾಡುವ ಮೂಲಕ ಭರ್ತಿ ಮಾಡಬಹುದು ಮತ್ತು ಹಾಗೆ ನೇಮಕಗೊಂಡ ಸದಸ್ಯರು ಅಥವಾ ಅಧ್ಯಕ್ಷರು ಯಾರ ಸ್ಥಾನದಲ್ಲಿ ಅವರನ್ನು ನೇಮಕ ಮಾಡಲಾಯಿತೋ  ಆ  ಸದಸ್ಯ  ಅಥವಾ  ಅಧ್ಯಕ್ಷರ  ಹುದ್ದೆಯನ್ನು  ಧಾರಣ  ಮಾಡಬಹುದಾಗಿದ್ದಂಥ  ಉಳಿದ ಅವಧಿಯವರೆಗೆ ಹುದ್ದೆಯ ಧಾರಣ ಮಾಡತಕ್ಕದ್ದು.     
(7)  ಆಯೋಗವು,  ತನ್ನ  ಕಾರ್ಯಗಳನ್ನು  ನಿರ್ವಹಿಸುವಲ್ಲಿ  ಈ  ಕೆಳಕಂಡ  ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ:       
(ಎ) ಯಾವನೇ  ಅಧಿಕಾರಿಯಿಂದ  ಅಥವಾ  ಪ್ರಾಧಿಕಾರದಿಂದ  ಯಾವುದೇ  ದಾಖಲೆಯನ್ನು ತರಿಸಿಕೊಳ್ಳುವುದು;
      (ಬಿ) ಸಾಕ್ಷಯವನ್ನು  ಕೊಡಲು  ಅಥವಾ  ದಾಖಲೆಯನ್ನು  ಹಾಜರುಪಡಿಸಲು  ಯಾವನೇ  ವ್ಯಕ್ತಿಗೆ  ಕರೆ ಕಳುಹಿಸುವುದು;
      (ಸಿ) ಗೊತ್ತುಪಡಿಸಬಹುದಾದಂಥ ಇತರ ಅಧಿಕಾರಗಳು.   
(8)  ರಾಜ್ಯಪಾಲರು,  ಈ  ಪ್ರಕರಣದ  ಅಡಿಯಲ್ಲಿ  ಹಣಕಾಸು  ಆಯೋಗವು  ಮಾಡಿದ  ಪ್ರತಿಯೊಂದು ಶಿಫಾರಸನ್ನು,  ಅದರ  ಮೇಲೆ  ಕೈಕೊಂಡ  ಕ್ರಮದ  ಬಗೆಗಿನ  ವಿವರಣಾತ್ಮಕ  ಜ್ಞಾಪನ  ಪತ್ರದ  ಸಹಿತ,  ರಾಜ್ಯ ವಿಧಾನಮಂಡಲದ  ಉಬಯ  ಸದನಗಳ  ಮುಂದೆ  2[ಆರು  ತಿಂಗಳುಗಳ  ಅವಧಿಯ  ಒಳಗೆ]2  ಮಂಡಿಸುವಂತೆ ಮಾಡತಕ್ಕದ್ದು.
  1. 2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2010ರಿಂದ ಪ್ರತಿಯೋಜಿಸಲಾಗಿದೆ.   
2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.   
 ಸಂಕೀರ್ಣ
  268.  ಪಂಚಾಯತಿಗಳ ವಿಸರ್ಜನೆ. (1) 1[ತಾಲ್ಲೂಕು ಪಂಚಾಯತಿಯ ಶಿಫಾರಸ್ಸಿನ ಮೇಲೆ ಅಥವಾ ಅನ್ಯಥಾ, ಜಿಲ್ಲಾ  ಪಂಚಾಯತಿಯ  ಅಭಿಪ್ರಾಯದಲ್ಲಿ]1,  ಗ್ರಾಮ  ಪಂಚಾಯತಿಯು,  ಅದರ  ಅಧಿಕಾರವನ್ನು  ವಿೂರಿದರೆ  ಅಥವಾ ಅದನ್ನು ದುರುಪಯೋಗಪಡಿಸಿದರೆ ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ  ಇತರೆ  ಕಾನೂನಿನ  ಅಡಿಯಲ್ಲಿ  ಅದಕ್ಕೆ  ವಿಧಿಸಿದ  ಕರ್ತವ್ಯಗಳನ್ನು  ನೆರವೇರಿಸಲು  ಸಕ್ಷಮವಾಗಿಲ್ಲದಿದ್ದರೆ ಅಥವಾ  ಅವುಗಳನ್ನು  ನೆರವೇರಿಸುವುದರಲ್ಲಿ  ಸತತವಾಗಿ  ತಪ್ಪಿದಲ್ಲಿ  1[ಜಿಲ್ಲಾ  ಪಂಚಾಯತಿಯು]1,  ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ ಅಂಥ ಗ್ರಾಮಪಂಚಾಯತಿಯನ್ನು ವಿಸರ್ಜಿಸಬಹುದು.
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
  (2) ಸರ್ಕಾರದ  ಅಭಿಪ್ರಾಯದಲ್ಲಿ,  ಜಿಲ್ಲಾ  ಪಂಚಾಯತಿಯು  ಅಥವಾ  ತಾಲ್ಲೂಕು  ಪಂಚಾಯತಿಯು  ಅದರ ಅಧಿಕಾರವನ್ನು ವಿೂರಿದರೆ ಅಥವಾ ಅದನ್ನು ದುರುಪಯೋಗಪಡಿಸಿಕೊಂಡರೆ ಅಥವಾ ಈ ಅಧಿನಿಯಮದ ಅಥವಾ ತತ್ಕಾಲದಲ್ಲಿ  ಜಾರಿಯಲ್ಲಿರುವ  ಯಾವುದೇ  ಇತರೆ  ಕಾನೂನಿನ  ಅಡಿಯಲ್ಲಿ  ಅದಕ್ಕೆ  ವಿಧಿಸಿದ  ಕರ್ತವ್ಯಗಳನ್ನು ನೆರವೇರಿಸಲು  ಸಕ್ಷಮವಾಗಿಲ್ಲದಿದ್ದರೆ  ಅಥವಾ  ಅವುಗಳನ್ನು  ನಿರ್ವಹಿಸುವುದರಲ್ಲಿ  ಸತತವಾಗಿ  ತಪ್ಪಿದರೆ,  ಸರ್ಕಾರವು, ಸರ್ಕಾರಿ  ರಾಜ್ಯಪತ್ರದಲ್ಲಿ  ಪ್ರಕಟಿಸಿದ  ಆದೇಶದ  ಮೂಲಕ  ಅಂಥ  ಜಿಲ್ಲಾ  ಪಂಚಾಯತಿಯನ್ನು  ಅಥವಾ  ತಾಲ್ಲೂಕು ಪಂಚಾಯತಿಯನ್ನು ವಿಸರ್ಜಿಸಬಹುದು.
  1[(3)  ಜಿಲ್ಲಾ  ಪಂಚಾಯತಿಯು  ಅಥವಾ  ಸಂದರ್ಭಾನುಸಾರ  ಸರ್ಕಾರವು  (1)ನೇ  ಉಪಪ್ರಕರಣ  ಅಥವಾ (2)ನೇ  ಉಪಪ್ರಕರಣದ  ಅಡಿಯಲ್ಲಿ  ಒಂದು  ಆದೇಶವನ್ನು  ಪ್ರಕಟಿಸುವುದಕ್ಕೆ  ಮುಂಚೆ,  ಅದು  ಯಾವ  ಕಾರಣಗಳ ಮೇಲೆ  ಅದನ್ನು  ವಿಸರ್ಜಿಸಲು  ಉದ್ದೇಶಿಸಲಾಗಿದೆಯೋ  ಆ  ಕಾರಣಗಳನ್ನು  ಗ್ರಾಮಪಂಚಾಯತಿ,  ತಾಲ್ಲೂಕು ಪಂಚಾಯತಿ  ಅಥವಾ  ಸಂದರ್ಭಾನುಸಾರ  ಜಿಲ್ಲಾ  ಪಂಚಾಯತಿಗೆ  ತಿಳಿಸತಕ್ಕದ್ದು  ಮತ್ತು  ಪ್ರಸ್ತಾವದ  ವಿರುದ್ಧ  ಕಾರಣ ತೋರಿಸಲು  ಗ್ರಾಮ  ಪಂಚಾಯತಿ,  ತಾಲೂಕು  ಪಂಚಾಯತಿ  ಅಥವಾ  ಜಿಲ್ಲಾ  ಪಂಚಾಯತಿಗೆ  ಒಂದು  ಸೂಕ್ತ ಅವಧಿಯನ್ನು  ನಿಗದಿಪಡಿಸತಕ್ಕದ್ದು  ಮತ್ತು  ಅದರ  ವಿವರಣೆ  ಮತ್ತು  ಆಕ್ಷೇಪಣೆಗಳು  ಯಾವುವಾದರೂ  ಇದ್ದರೆ, ಅವುಗಳನ್ನು ಪರಿಶೀಲಿಸತಕ್ಕದ್ದು.]1
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
(1)ನೇ  ಉಪಪ್ರಕರಣದಡಿ  ಜಿಲ್ಲಾ  ಪಂಚಾಯತಿಯ  ಆದೇಶದಿಂದ  ತೊಂದರೆಗೊಳಗಾದ  ಯಾವೊಬ್ಬ ವ್ಯಕ್ತಿಯು  ಅಂಥ ಆದೇಶದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಸರ್ಕಾರಕ್ಕೆ ಅಪೀಲನ್ನು ಸಲ್ಲಿಸಬಹುದು.]1
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಸೇರಿಸಲಾಗಿದೆ.
  (4) ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಗ್ರಾಮಪಂಚಾಯತಿಯನ್ನು ವಿಸರ್ಜಿಸಿದಾಗ ಅಂಥ ಪಂಚಾಯತಿಯ  ಎಲ್ಲ  ಸದಸ್ಯರು,  ಆದೇಶದಲ್ಲಿ  ನಿರ್ದಿಷ್ಟಪಡಿಸಿದ  ದಿನಾಂಕದಿಂದ  ಅಂಥ  ಸದಸ್ಯರಾಗಿ  ಅವರ ಹುದ್ದೆಯನ್ನು ತೆರವು ಮಾಡತಕ್ಕದ್ದು.   
(5)  ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯನ್ನು ವಿಸರ್ಜಿಸಿದಾಗ ಅಂಥ ವಿಸರ್ಜನೆಯ  ದಿನಾಂಕದಿಂದ  ಆರು  ತಿಂಗಳುಗಳು  ಮುಕ್ತಾಯವಾಗುವ  ಮುಂಚೆ  ಈ  ಅಧಿನಿಯಮದಲ್ಲಿ ಉಪಬಂಧಿಸಿದ ರೀತಿಯಲ್ಲಿ ಅದನ್ನು ಪುನಃ ರಚಿಸತಕ್ಕದ್ದು:   ಪರಂತು, ವಿಸರ್ಜನೆಗೊಂಡ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಗ್ರಾಮ ಪಂಚಾಯತಿಯು ಮುಂದುವರಿಯಬಹುದಾಗಿದ್ದ  ಉಳಿದ  ಅವಧಿಯು  ಆರು  ತಿಂಗಳುಗಳಿಗಿಂತ  ಕಡಿಮೆಯಾಗಿದ್ದರೆ,  ಅಂಥ  ಅವಧಿಗಾಗಿ ಜಿಲ್ಲಾ  ಪಂಚಾಯತಿ,  ತಾಲ್ಲೂಕು  ಪಂಚಾಯತಿ  ಅಥವಾ  ಗ್ರಾಮ  ಪಂಚಾಯತಿಯನ್ನು  ರಚಿಸುವುದಕ್ಕೆ  ಈ  ಪ್ರಕರಣದ ಅಡಿಯಲ್ಲಿ ಚುನಾವಣೆ ನಡೆಸುವ ಅಗತ್ಯವಿರತಕ್ಕದ್ದಲ್ಲ.   
(6) ಜಿಲ್ಲಾ  ಪಂಚಾಯತಿ,  ತಾಲ್ಲೂಕು  ಪಂಚಾಯತಿ  ಅಥವಾ  ಗ್ರಾಮ  ಪಂಚಾಯತಿಯು  ತನ್ನ  ಅವಧಿಯು ಪೂರ್ಣಗೊಳ್ಳುವುದಕ್ಕೆ  ಮೊದಲು  ವಿಸರ್ಜನೆಗೊಂಡಿದ್ದಕ್ಕಾಗಿ  ರಚನೆಯಾದರೆ,  ವಿಸರ್ಜನೆಗೊಂಡ  ಜಿಲ್ಲಾ  ಪಂಚಾಯತಿ, ತಾಲ್ಲೂಕು  ಪಂಚಾಯತಿ  ಅಥವಾ  ಗ್ರಾಮ  ಪಂಚಾಯತಿಯು  ಅದು  ಹಾಗೆ  ವಿಸರ್ಜನೆಗೊಳ್ಳದಿದ್ದಾಗಿನ  ಉಳಿದ ಅವಧಿಯವರೆಗೆ ಮಾತ್ರ ಮುಂದುವರಿಯತಕ್ಕದ್ದು.   
(7)  ಗ್ರಾಮ  ಪಂಚಾಯತಿ,  ತಾಲ್ಲೂಕು  ಪಂಚಾಯತಿ  ಅಥವಾ  ಜಿಲ್ಲಾ    ಪಂಚಾಯತಿಯನ್ನು ವಿಸರ್ಜನೆಗೊಳಿಸಿದರೆ,      
(ಎ)  ಜಿಲ್ಲಾ  ಪಂಚಾಯತಿ,  ತಾಲ್ಲೂಕು  ಪಂಚಾಯತಿ  ಅಥವಾ  ಗ್ರಾಮ  ಪಂಚಾಯತಿಯ  ಎಲ್ಲ  ಅಧಿಕಾರ ಮತ್ತು  ಕರ್ತವ್ಯಗಳನ್ನು,  ಅದರ  ವಿಸರ್ಜನೆಯ  ಅವಧಿಯಲ್ಲಿ,  ಸಂದರ್ಭಾನುಸಾರ,  ಜಿಲ್ಲಾ  ಪಂಚಾಯತಿ  ಅಥವಾ ಸರ್ಕಾರವು ಕಾಲಕಾಲಕ್ಕೆ, ಈ ಬಗ್ಗೆ ನೇಮಕ ಮಾಡಬಹುದಾದಂಥ ವ್ಯಕ್ತಿ ಅಥವಾ ವ್ಯಕ್ತಿಗಳು ಚಲಾಯಿಸತಕ್ಕದ್ದು ಮತ್ತು ನೆರವೇರಿಸತಕ್ಕದ್ದು;
    (ಬಿ)  ಗ್ರಾಮ  ಪಂಚಾಯತಿ,  ತಾಲ್ಲೂಕು  ಪಂಚಾಯತಿ  ಅಥವಾ  ಜಿಲ್ಲಾ  ಪಂಚಾಯತಿಯಲ್ಲಿ ನಿಹಿತವಾಗಿರುವ ಎಲ್ಲ ಸ್ವತ್ತು ವಿಸರ್ಜನೆಯ ಅವಧಿಯಲ್ಲಿ ಸರ್ಕಾರದಲ್ಲಿ ನಿಹಿತವಾಗತಕ್ಕದ್ದು;     
(ಸಿ)  ವಿಸರ್ಜನೆಯಾದ  ಮೇಲೆ  ಹುದ್ದೆಯನ್ನು  ತೆರವು  ಮಾಡುವ  ವ್ಯಕ್ತಿಗಳು,  ಮರು  ಚುನಾವಣೆಗೆ ಅರ್ಹರಾಗಿರತಕ್ಕದ್ದು.   
269.    ಅಪೀಲುಗಳು.  1[(1)  ಈ  ಅಧಿನಿಯಮದಡಿ  ಗ್ರಾಮ  ಪಂಚಾಯತಿಯ  ಯಾವುದೇ  ಮೂಲ ಆದೇಶದಿಂದ ತೊಂದರೆಗೊಳಗಾದ ಯಾವೊಬ್ಬ ವ್ಯಕ್ತಿಯು, ಈ ಅಧಿನಿಯಮದಲ್ಲಿ ಬೇರೆಡೆಯಲ್ಲಿ ಅಪೀಲು ಸಲ್ಲಿಸಲು ಉಪಬಂಧ  ಕಲ್ಪಿಸಿರದಿದ್ದರೆ,  ಅಂಥ  ಆದೇಶದ  ದಿನಾಂಕದಿಂದ  ಮೂವತ್ತು  ದಿನಗಳೊಳಗೆ  ಕಾರ್ಯನಿರ್ವಾಹಕ ಅಧಿಕಾರಿಗೆ ಅಪೀಲು ಮಾಡಿಕೊಳ್ಳಬಹುದು.]1
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.   
(2) ಅಪೀಲು  ಪ್ರಾಧಿಕಾರವು,  ಅಪೀಲುದಾರನಿಗೆ  ಅಹವಾಲನ್ನು  ಹೇಳಿಕೊಳ್ಳಲು  ಅವಕಾಶವನ್ನು  ಕೊಟ್ಟ ತರುವಾಯ  ಮತ್ತು  ಅದು  ಸೂಕ್ತವೆಂದು  ಭಾವಿಸುವಂಥ  ವಿಚಾರಣೆಯನ್ನು  ಮಾಡಿದ  ತರುವಾಯ  ಅಪೀಲನ್ನು ತೀರ್ಮಾನಿಸಬಹುದು ಮತ್ತು ಅದರ ತೀರ್ಮಾನವು ಅಂತಿಮವಾದುದಾಗಿರತಕ್ಕದ್ದು.   
(3)  (1)ನೇ  ಉಪಪ್ರಕರಣದ  ಅಡಿಯಲ್ಲಿ  ಜಿಲ್ಲಾ  ಪರಿಷತ್ತಿನಲ್ಲಿ  ಬಾಕಿ  ಉಳಿದಿರುವ,  ಯಾವುದೇ  ಅಪೀಲನ್ನು 1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು ಪ್ರಾರಂಭವಾದ ದಿನಾಂಕದಂದು ಅಸಿಸ್ಟೆಂಟ್ ಕಮಿಷನರ್ ಅವರಿಗೆ  ವರ್ಗಾವಣೆ  ಮಾಡತಕ್ಕದ್ದು  ಮತ್ತು  ಅಂಥ  ಅಪೀಲನ್ನು  ಅವರಿಗೆ  ಸಲ್ಲಿಸಿದ್ದರೆ  ಹೇಗೋ  ಹಾಗೇ  ಅವರು ತೀರ್ಮಾನಿಸತಕ್ಕದ್ದು.   
270.    ಸಮಿತಿಗಳ  ತೀರ್ಮಾನಗಳ  ಮೇಲೆ  ಅಧಿಕಾರ.  ಪ್ರತಿಯೊಂದು  ಜಿಲ್ಲಾ  ಪಂಚಾಯತಿ  ಅಥವಾ  ತಾಲ್ಲೂಕು ಪಂಚಾಯತಿ  ಅಥವಾ  ಗ್ರಾಮ  ಪಂಚಾಯತಿಯು,  ಅದರ  ಯಾವುದೇ  ಸಮಿತಿಯು  ತೆಗೆದುಕೊಂಡ  ಯಾವುದೇ ತೀರ್ಮಾನವನ್ನು  ಅನೂರ್ಜಿತಗೊಳಿಸಲು,  ಪುನರೀಕ್ಷಿಸಲು  ಅಥವಾ  ಮಾರ್ಪಾಡು  ಮಾಡಲು  ಅಧಿಕಾರವನ್ನು ಹೊಂದಿರತಕ್ಕದ್ದು.  

No comments:

Post a Comment