ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಪದಾವಧಿ

inyatrust.in | Saturday, January 21, 2023

 ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯು ಆತನು  ಪದವನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಗಾಗಿ ಅಥವಾ ಆತನಿಗೆ ಅರವತ್ತೈದು ವರ್ಷಗಳಾಗುವವರೆಗೂ ಇದರಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ಪದವನ್ನು  ಹೊಂದತಕ್ಕದ್ದು ಮತ್ತು ಮರು ನೇಮಕಕ್ಕಾಗಿ ಅರ್ಹನಾಗತಕ್ಕದ್ದಲ್ಲ 1]2
1. 2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2010ರಿಂದ ಸೇರಿಸಲಾಗಿದೆ.
2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
2[1[296ಇ. ರಾಜೀನಾಮೆ ಮತ್ತು ತೆಗೆದುಹಾಕುವುದು.- (1) ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯು ರಾಜ್ಯ ಸರ್ಕಾರಕ್ಕೆ  ಸ್ವಹಸ್ತದಿಂದ  ಲಿಖಿತದಲ್ಲಿನ  ನೋಟೀಸನ್ನು  ಸಲ್ಲಿಸುವ  ಮೂಲಕ  ತನ್ನ  ಪದಕ್ಕೆ  ರಾಜೀನಾಮೆ ನೀಡಬಹುದು.  
(2)  (1)ನೇ  ಉಪ  ಪ್ರಕರಣದಲ್ಲಿ  ಏನೇ  ಇದ್ದರೂ,  ಸರ್ಕಾರವು  ಆದೇಶದ  ಮೂಲಕ,  ಕುಂದು  ಕೊರತನಿವಾರಣಾ ಪ್ರಾಧಿಕಾರದ ಪದದಿಂದ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯನ್ನು  
(ಎ) ಆತನು ಅವಿಮುಕ್ತ ದಿವಾಳಿಯಾಗಿದ್ದಲ್ಲಿ; ಅಥವಾ  
(ಬಿ)  ನೈತಿಕ  ಅಧಃಪತನವನ್ನು  ಒಳಗೊಂಡಿದೆ  ಎಂದು  ಸರ್ಕಾರವು  ಅಭಿಪ್ರಾಯಪಡುವ    ಅಪರಾಧದಲ್ಲಿ  ಅಪರಾಧ ನಿರ್ಣೀತನಾಗಿದ್ದಲ್ಲಿ; ಅಥವಾ  
(ಸಿ)  ಆತನು  ತನ್ನ  ಪದಾವಧಿಯಲ್ಲಿ  ಆತನ  ಪದದ  ಕರ್ತವ್ಯಗಳ  ಹೊರತಾಗಿ  ಯಾವುದೇ  ಸಂಬಳ ಪಡೆಯುವ ಉದ್ಯೋಗದಲ್ಲಿ ತೊಡಗಿರುವನೆಂದು; ಅಥವಾ
(ಡಿ)  ಮಾನಸಿಕ  ಅಥವಾ  ದೈಹಿಕ  ಅಸಮರ್ಥತೆಯ  ಕಾರಣವಾಗಿ  ಪದದಲ್ಲಿ  ಮುಂದುವರೆಯಲು ಅರ್ಹನಲ್ಲವೆಂದು ಸರ್ಕಾರವು ಅಭಿಪ್ರಾಯಪಟ್ಟಲ್ಲಿ; ಅಥವಾ
(ಇ)  ಕುಂದು  ಕೊರತೆ  ನಿವಾರಣಾ  ಪ್ರಾಧಿಕಾರಿಯಾಗಿ  ಆತನ  ಪ್ರಕಾರ್ಯಗಳಿಗೆ  ಪೂರ್ವಾಗ್ರಹವಾಗಿ ಪರಿಣಾಮವುಂಟು ಮಾಡುವ ಅಂಥ ಹಣಕಾಸು ಅಥವಾ ಇತರೆ ಹಿತಾಸಕ್ತಿಯನ್ನು ಹೊಂದಿದ್ದಲ್ಲಿ ಆತನನ್ನು  ತೆಗೆದು ಹಾಕಬಹುದು.]1]2
 1. 2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2010ರಿಂದ ಸೇರಿಸಲಾಗಿದೆ.
2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
2[1[296ಎಫ್.    ಕುಂದು  ಕೊರತೆ  ನಿವಾರಣಾ  ಪ್ರಾಧಿಕಾರದ  ಪ್ರಕ್ರಿಯೆ  ಮತ್ತು  ವಿಧಾನಗಳು:-  (1)  ದೂರನ್ನು ದಾಖಲ್ಮಾಡುವ  ಪ್ರಕ್ರಿಯೆ  ಮತ್ತು  ವಿಧಾನವು  ಮತ್ತು  ಅಂಥ  ದೂರಿನ  ಜೊತೆ  ಇರಬೇಕಾದ    ಫೀಜುಗಳು  ನಿಯಮಿಸಬಹುದಾದಂತೆ ಇರತಕ್ಕದ್ದು.
(2)  ಕುಂದು  ಕೊರತೆ  ನಿವಾರಣಾ  ಪ್ರಾಧಿಕಾರದ  ಮುಂದೆ  ವ್ಯವಹರಣೆಗಳನ್ನು  ನಡೆಸುವ  ವಿಧಾನ  ಮತ್ತು ಪ್ರಕ್ರಿಯೆಯು ನಿಯಮಿಸಬಹುದಾದಂತೆ ಇರತಕ್ಕದ್ದು.]1]2
1. 2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2010ರಿಂದ ಸೇರಿಸಲಾಗಿದೆ.
2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
1[296ಜಿ. ತನಿಖೆಗೆ ಒಳಪಡದ ವಿಷಯಗಳು.- ಕುಂದು ಕೊರತೆ ನಿವಾರಣಾ ಪ್ರಾಧಿಕಾರವು:-
  ಕರ್ನಾಟಕ  ಲೋಕಾಯುಕ್ತ  ಅಧಿನಿಯಮ,  1984ರ  (1985ರ  ಕರ್ನಾಟಕ  ಅಧಿನಿಯಮ  4) ಉಪಬಂಧಗಳ  ಅಡಿಯಲ್ಲಿ  ಲೋಕಾಯುಕ್ತ  ಅಥವಾ  ಉಪ  ಲೋಕಾಯುಕ್ತರು  ತನಿಖೆ ನಡೆಸುತ್ತಿರುವ; ಅಥವಾ
  ಕೇಂದ್ರ  ಅಧಿನಿಯಮ  ಅಥವಾ  ರಾಜ್ಯ  ಅಧಿನಿಯಮಗಳ  ಯಾವುದೇ  ಉಪಬಂಧಗಳ ಅಡಿಯಲ್ಲಿ ಸಕ್ಷಮ  ಪ್ರಾಧಿಕಾರವು ತನಿಖೆ ನಡೆಸುತ್ತಿರುವ,  - ವಿಷಯಗಳಲ್ಲಿ ತನಿಖೆ ನಡೆಸತಕ್ಕದ್ದಲ್ಲ.]1
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
1[296ಎಚ್.  ಬಾಕಿ  ಪ್ರಕರಣಗಳ  ವರ್ಗಾವಣೆ.-  ಕರ್ನಾಟಕ  ಪಂಚಾಯತ್  ರಾಜ್  (ಎರಡನೇ  ತಿದ್ದುಪಡಿ) ಅಧಿನಿಯಮ,  2015ರ  ಪ್ರಾರಂಭದ  ದಿನಾಂಕದಂದು  ಪಂಚಾಯತ್  ಓಂಬುಡ್ಸಮನ್  ಮುಂದೆ  ಬಾಕಿಯಿರುವ  ಎಲ್ಲಾ ಪ್ರಕರಣಗಳು  ಸಂಬಂಧಪಟ್ಟ  ಕುಂದುಕೊರತೆ  ನಿವಾರಣಾ  ಪ್ರಾಧಿಕಾರಕ್ಕೆ  ವರ್ಗಾವಣೆಯಾಗತಕ್ಕದ್ದು  ಮತ್ತು  ಅಂಥ ಪ್ರಾಧಿಕಾರದ  ಮುಂದೆ  ಪ್ರಕರಣಗಳು  ದಾಖಲಾಗಿದೆ  ಎಂಬಂತೆ    ಕುಂದು  ಕೊರತೆ  ನಿವಾರಣಾ  ಪ್ರಾಧಿಕಾರವು  ವಿಲೇ ಮಾಡತಕ್ಕದ್ದು.]1
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
  1[296ಐ.  ಕೈಗೊಂಡ  ಕ್ರಮದ  ವರದಿ.-  (1)  ಪ್ರತಿಯೊಂದು  ಕುಂದು  ಕೊರತೆ  ನಿವಾರಣಾ  ಪ್ರಾಧಿಕಾರವು ತನಗೆ  ಮಾಡಲಾದ  ದೂರುಗಳ  ಅಥವಾ  ಅದರಲ್ಲಿ  ನಿಯಮಿಸಲಾದ  ಅಪೀಲಿನ  ಸಂಬಂಧದಲ್ಲಿ  ಅನುಸರಿಸಲಾದ ಕ್ರಮದ ವರದಿಯನ್ನು ನಿಯಮಿಸಬಹುದಾದ ಅಂಥ ಅವಧಿಯೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
(2) ಪ್ರತಿಯೊಂದು ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ತನಗೆ ಮಾಡಲಾದ ದೂರುಗಳ ಅಥವಾ ದಾಖಲ್ಮಾಡಿದ  ಅಪೀಲಿನ  ಮತ್ತು  ಅಂಥ  ದೂರುಗಳ  ಮತ್ತು  ಅಪೀಲುಗಳ  ಮೇಲೆ  ದಾಖಲಾದ  ತೀರ್ಮಾನಗಳ ದಾಖಲೆಯನ್ನು  ನಿರ್ವಹಿಸತಕ್ಕದ್ದು.
(3) ಪ್ರತಿಯೊಂದು ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ತನ್ನ ಜಾಲತಾಣದಲ್ಲಿ ಪ್ರತಿ ತಿಂಗಳ 15ನೇ ದಿನಗೊಳಗಾಗಿ  ಅಥವಾ ನಿಯಮಿಸಬಹುದಾದ ಅಂಥ ಅಂತರಗಳಲ್ಲಿ, ಅದರಲ್ಲಿ ಹೇಳಲಾದ  ವರದಿಯಲ್ಲಿ ;-
(ಎ) ಸ್ವೀಕರಿಸಲಾದ ದೂರುಗಳ ಸಂಖ್ಯೆಯನ್ನು
(ಬಿ) ಬಾಕಿ ಇರುವ ದೂರುಗಳ ಸಂಖ್ಯೆಯನ್ನು
(ಸಿ) ವಿಲೆಯಾದ ದೂರುಗಳ ಸಂಖ್ಯೆಯನ್ನು
(ಡಿ) ನಿಯಮಿಸಬಹುದಾದ ಅಂಥ ಇತರ ವಿವರಗಳನ್ನು, - ಪ್ರಕಟಿಸತಕ್ಕದ್ದು.]1
1.  2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
  297.    ದಾವೆಯ  ಮೂಲಕ  ಪರ್ಯಾಯ  ಪ್ರಕ್ರಿಯೆ.  ಘಿನೇ  ಅಧ್ಯಾಯದ  ಉಪಬಂಧಗಳ  ಅಡಿಯಲ್ಲಿ ವಸೂಲಿಯಾಗಬಹುದಾದ  ಅಥವಾ  ಈ  ಅಧಿನಿಯಮದ  ಅಡಿಯಲ್ಲಿ  ಕೊಡಲಾದ  ಯಾವುದೇ  ನಷ್ಟಪರಿಹಾರ, ವೆಚ್ಚಗಳು,  ಚಾರ್ಜುಗಳು  ಅಥವಾ  ಹಾನಿಪರಿಹಾರಗಳ  ಯಾವುದೇ  ಮೊಬಲಗಿನ  ಒಟ್ಟು  ಅಥವಾ  ಅದರ  ಯಾವುದೇ ಭಾಗವನ್ನು ಅಂಥ ವಿಧಾನದ ಮೂಲಕ ಪಡೆಯಲು ವಿಫಲವಾಗುವ ಸಂದರ್ಭದಲ್ಲಿ, ಈ ಅಧಿನಿಯಮದ ಮೂಲಕ ಅಥವಾ ಅದರ ಅಡಿಯಲ್ಲಿ ಅನುಮತಿಸಲಾದ, ವಸೂಲಿ ಮಾಡಬಹುದಾದ ಯಾವುದೇ ವಿಧಾನಕ್ಕೆ ಬದಲಾಗಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ, ಸಕ್ಷಮ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದಲ್ಲಿ,  ಅದಕ್ಕೆ  ಹೊಣೆಗಾರನಾದ  ವ್ಯಕ್ತಿಯನ್ನು  ಮತ್ತು  ಗ್ರಾಮ  ಪಂಚಾಯತಿ,  ತಾಲ್ಲೂಕು  ಪಂಚಾಯತಿ ಅಥವಾ  ಜಿಲ್ಲಾ  ಪಂಚಾಯತಿಯ  ಸ್ವತ್ತಿಗೆ,  ಹಕ್ಕು  ಅಥವಾ  ವಿಶೇಷಾಧಿಕಾರಗಳಿಗೆ  ಯಾವುದೇ  ರೀತಿಯಲ್ಲಿ  ಯಾವುದೇ ಹಾನಿಯನ್ನು ಉಂಟುಮಾಡಿರಬಹುದಾದ ಯಾವನೇ ವ್ಯಕ್ತಿಯ ವಿರುದ್ಧ ದಾವೆಯನ್ನು ಹೂಡಬಹುದು.   
298.  ಈ ಅಧಿನಿಯಮದ ಅಡಿಯಲ್ಲಿನ ಅಪರಾಧಗಳಿಗಾಗಿ ದಂಡನೆ ಮತ್ತು ರಾಜಿ ಮಾಡಿಕೊಳ್ಳಲು ಅಧಿಕಾರ. (1) ಯಾರೇ ಆಗಲಿ,     
(ಎ)  64ನೇ  ಪ್ರಕರಣದ  ಮೂಲಕ  ಅಗತ್ಯಪಡಿಸಲಾದ,  ಬರಹದಲ್ಲಿನ  ಅನುಮತಿಯಿಲ್ಲದೆ  ಅಥವಾ  ಅದರ ಮೂಲಕ  ವಿಧಿಸಿದ  ಯಾವುದೇ  ಷರತ್ತನ್ನು  ಉಲ್ಲಂಘಿಸಿ  ಕಟ್ಟಡವನ್ನು  ನಿರ್ಮಿಸಿದರೆ,  ಬದಲಾವಣೆ ಮಾಡಿದರೆ, ಅಥವಾ ಅದಕ್ಕೆ ಸೇರ್ಪಡೆ ಮಾಡಿದರೆ ಅಥವಾ ಪುನಃ ನಿರ್ಮಿಸಿದರೆ;
    (ಬಿ)  66,  67,  68,  ಅಥವಾ  69ನೇ  ಪ್ರಕರಣಗಳ  ಮೂಲಕ  ಅಗತ್ಯಪಡಿಸಿದ,  ಪರವಾನಿಗೆ  ಅಥವಾ ಲೈಸೆನ್ಸಿಲ್ಲದೆ  ಅಥವಾ  ಯಾವುವೇ  ಷರತ್ತುಗಳನ್ನು  ಉಲ್ಲಂಘಿಸಿ  ಅಥವಾ  ಲೈಸೆನ್ಸನ್ನು ಅಮಾನತುಗೊಳಿಸಿದ ಕಾಲದಲ್ಲಿ, ಯಾವುದೇ ಸ್ಥಳವನ್ನು ಉಪಯೋಗಿಸಿದರೆ; ಅಥವಾ      
(ಸಿ)  ಅಧಿನಿಯಮದ ಇತರ ಯಾವುದೇ ಉಪಬಂಧವನ್ನು ಉಲ್ಲಂಘಿಸಿದರೆ, ಅಪರಾಧ ನಿರ್ಣಯವಾದ ಮೇಲೆ 1[ಐದು ಸಾವಿರ ರೂಪಾಯಿಗಳವರೆಗೆ]1 ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಮತ್ತು  ಮುಂದುವರೆಯುತ್ತಿರುವ  ಅಪರಾಧದ  ಸಂದರ್ಭದಲ್ಲಿ  ಮೊದಲಬಾರಿಗೆ  ಅಪರಾಧ  ನಿರ್ಣಯವಾದ  ಮೇಲೆ ಅಪರಾಧವು  ಮುಂದುವರಿಯುತ್ತಿರುವ  ಪ್ರತಿಯೊಂದು  ದಿವಸಕ್ಕೆ  1[ಐವತ್ತು  ರೂಪಾಯಿಗಳವರೆಗೆ]1 ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
  1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.   
(2) ಯಾವುದೇ  ಸ್ಥಳಕ್ಕೆ  ಸಂಬಂಧಿಸಿದಂತೆ,  (1)ನೇ  ಉಪಪ್ರಕರಣದ  
(ಬಿ)  ಖಂಡದ  ಅಡಿಯಲ್ಲಿ  ಅಪರಾಧ ನಿರ್ಣಯವಾದ ಮೇಲೆ ಮ್ಯಾಜಿಸ್ಟ್ರೇಟರು ಸಂದರ್ಭಾನುಸಾರ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ  ಪಂಚಾಯತಿಯ  ಅರ್ಜಿಯ  ಮೇಲೆ,  ಅದರೆ  ಅನ್ಯಥಾ  ಅಲ್ಲ.  ಅಂಥ  ಸ್ಥಳವನ್ನು  ಮುಚ್ಚಬೇಕೆಂದು ಆದೇಶಿಸತಕ್ಕದ್ದು  ಮತ್ತು  ಆ  ತರುವಾಯ  ಅಂಥ  ಸ್ಥಳವನ್ನು  ಹಾಗೆ  ಉಪಯೋಗಿಸುವುದನ್ನು  ತಡೆಗಟ್ಟಲು  ಅಂಥ ವ್ಯಕ್ತಿಗಳನ್ನು  ನೇಮಕ  ಮಾಡತಕ್ಕದ್ದು  ಅಥವಾ  ಅಂಥ  ಇತರ  ಕ್ರಮಗಳನ್ನು  ಕೈಗೊಳ್ಳತಕ್ಕದ್ದು  ಮತ್ತು  ಅದನ್ನು ಮುಚ್ಚಬೇಕೆಂದು  ಆದೇಶವನ್ನು  ಮಾಡಿದ  ತರುವಾಯ,  ಸ್ಥಳವನ್ನು  ಹಾಗೆ  ಉಪಯೋಗಿಸುವ  ಅಥವಾ ಉಪಯೋಗಿಸಲು  ಅನುಮತಿಸುವ  ಪ್ರತಿಯೊಬ್ಬ  ವ್ಯಕ್ತಿಯು  ಅದನ್ನು  ಹಾಗೆ  ಮುಚ್ಚಬೇಕೆಂದು  ಆದೇಶವನ್ನು  ಮಾಡಿದ ತರುವಾಯ,  ಆ  ಸ್ಥಳವನ್ನು  ಉಪಯೋಗಿಸಲು  ಅಥವಾ  ಅಂಥ  ಉಪಯೋಗವನ್ನು  ಅನುಮತಿಸುವುದನ್ನು  ಅವನು ಮುಂದುವರಿಸುವಂಥ  ಕಾಲದಲ್ಲಿ  ಪ್ರತಿಯೊಂದು  ದಿವಸ  1[ಐವತ್ತು  ರೂಪಾಯಿಗಳಿಗೆ]1  ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.   
 1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.                
(3)  (ಎ)  ಗ್ರಾಮ  ಪಂಚಾಯತಿ,  ತಾಲ್ಲೂಕು  ಪಂಚಾಯತಿ,  ಅಥವಾ  ಜಿಲ್ಲಾ  ಪಂಚಾಯತಿ  ಅಥವಾ  ಜಿಲ್ಲಾ ಪಂಚಾಯತಿಯು  ಅಧಿಕೃತಗೊಳಿಸಬಹುದಾದಂಥ  ಅಧಿಕಾರಿಯು,  ಸಂದರ್ಭಾನುಸಾರ  ಗ್ರಾಮ  ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಅಥವಾ ಅಧಿಕೃತ ಅಧಿಕಾರಿಯ ಅಭಿಪ್ರಾಯದಲ್ಲಿ,       
 (1)ನೇ  ಉಪಪ್ರಕರಣದಲ್ಲಿ  ಉಲ್ಲೇಖಿಸಿದ  ಹಿಂದೆ  ಹೇಳಿದ  ಯಾವುದೇ  ಅಪರಾಧವನ್ನು, ಅಥವಾ        
  ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರ ಮೇರೆಗೆ ರಚಿಸಲಾದ ಯಾವುದೇ ನಿಯಮ, ವಿನಿಯಮ  ಅಥವಾ  ಉಪವಿಧಿಯ  ಅಡಿಯಲ್ಲಿ  ಸರ್ಕಾರವು  ಅಧಿಸೂಚನೆಯ  ಮೂಲಕ ರಾಜಿಮಾಡಿಕೊಳ್ಳಬಹುದು  ಎಂದು  ಘೋಷಿಸಬಹುದಾದಂಥ  ಯಾವುದೇ  ಇತರ ಅಪರಾಧವನ್ನು,
ಮಾಡಿರುವ  ಯಾವನೇ  ವ್ಯಕ್ತಿಯಿಂದ  1[ಎರಡು  ಸಾವಿರ  ರೂಪಾಯಿಗಳನ್ನು  ಮೀರದ]1  ಹಣದ  ಮೊತ್ತವನ್ನು ರಾಜಿಯ ರೂಪದಲ್ಲಿ ಅಂಗೀಕರಿಸಬಹುದು ಮತ್ತು ಹಾಗೆ ರಾಜಿಯಾದ ಮೇಲೆ ಅಂಥ ಅಪರಾಧಕ್ಕೆ ಸಂಬಂಧಿಸಿದಂತೆ ಅಂಥ ವ್ಯಕ್ತಿಯ ವಿರುದ್ಧ ಯಾವುದೇ ವ್ಯವಹರಣೆಗಳನ್ನು ಕೈಗೊಳ್ಳತಕ್ಕದ್ದಲ್ಲ.     
(ಬಿ)  (ಎ) ಖಂಡದ  ಅಡಿಯಲ್ಲಿ  ಯಾವುದೇ  ಅಪರಾಧವನ್ನು  ರಾಜಿ  ಮಾಡಿಕೊಂಡ  ಮೇಲೆ,  ಆ ಅಪರಾಧಕ್ಕೆ  ಸಂಬಂಧಿಸಿದಂತೆ  ಸಂಬಂಧಪಟ್ಟ  ವ್ಯಕ್ತಿಯ  ವಿರುದ್ಧ  ಯಾವುವೇ  ವ್ಯವಹರಣೆಗಳನ್ನು  ಕ್ರಿಮಿನಲ್ ನ್ಯಾಯಾಲಯದಲ್ಲಿ  ಹೂಡಿದ್ದರೆ,  ರಾಜಿಯನ್ನು  ಖುಲಾಸೆಯೆಂಬುದಾಗಿ  ಭಾವಿಸತಕ್ಕದ್ದು  ಮತ್ತು  ಅಂಥ  ಅಪರಾಧಕ್ಕೆ ಸಂಬಂಧಿಸಿದಂತೆ, ಅಂಥ ವ್ಯಕ್ತಿಯ ವಿರುದ್ಧ ಯಾವುವೇ ಹೆಚ್ಚಿನ ವ್ಯವಹರಣೆಗಳನ್ನು ಕೈಗೊಳ್ಳತಕ್ಕದ್ದಲ್ಲ.
  1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.  

No comments:

Post a Comment