ನೈರ್ಮಲ್ಯ

inyatrust.in | Monday, January 9, 2023

  ಜಿಲ್ಲಾ ನೈರ್ಮಲ್ಯ ಯೋಜನೆಗಳನ್ನು ಕ್ರೋಢೀಕರಿಸುವುದು
  ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ನೆರವು ನೀಡುವುದು.
 ಜಿಲ್ಲಾ  ನೀತಿ  ಮತ್ತು  ವಿನಿಯಮಗಳನ್ನು  ರೂಪಿಸುವುದು,  ಅವುಗಳನ್ನು  ವಿನಿಯಮಿಸುವುದು  ಮತ್ತು ಮೌಲ್ಯಮಾಪನ ಮಾಡುವುದು.
21. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷ ಚೇತನ ಹಾಗೂ ಮಾನಸಿಕ ಚೇತನರ ಕಲ್ಯಾಣ
  ತಾಂತ್ರಿಕ  ಹೂಡುವಳಿ  ಜ್ಞಾನರೂಪವನ್ನು  (ಟೆಕ್ನಿಕಲ್  ಇನ್ಪುಟ್)  ಒದಗಿಸುವುದಕ್ಕೆ  ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
  ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
 ಶಾಲಾ ಆರೋಗ್ಯ ಮತ್ತು ಪೌಷ್ಠಿಕ ಆಹಾರ ಕಾರ್ಯಕ್ರಮಗಳನ್ನು ನಿರ್ವಹಿಸುವುದು.
 ಮೆಟ್ರಿಕ್  ನಂತರದ  ವಿದ್ಯಾರ್ಥಿನಿಲಯಗಳು,  ಬಾಲಕರ  ವಿದ್ಯಾರ್ಥಿ  ನಿಲಯಗಳು  ಮತ್ತು ಅನಾಥಾಲಯಗಳನ್ನು ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು
22. ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು ಮತ್ತು ಇತರೆ ಹಿಂದುಳಿದ ಜಾತಿಗಳ ಅಭಿವೃದ್ಧಿ
  ವ್ಯಕ್ತಿ  ಮತ್ತು  ಸಮುದಾಯದ  ಸ್ವಾತಂತ್ರ್ಯ  ಮತ್ತು  ಘನತೆಗೆ  ಕುಂದುಂಟುಮಾಡುವಂಥ  ಸಾಮಾಜಿಕ, ಸಾಂಸ್ಕೃತಿಕ  ಪದ್ಧತಿಗಳನ್ನು  ಅನುಸೂಚಿತ  ಜಾತಿಗಳು/ಅನುಸೂಚಿತ  ಪಂಗಡಗಳು  ಹಾಗೂ  ಹಿಂದುಳಿದ ಸಮುದಾಯಗಳ ಸಂಬಂಧದಲ್ಲಿ ಅನುಸರಿಸದಂತೆ ಪ್ರತಿಬಂಧಿಸುವುದು.
  ಜಿಲ್ಲಾಮಟ್ಟದಲ್ಲಿ  ಮೆಟ್ರಿಕ್  ನಂತರದ  ವಿದ್ಯಾರ್ಥಿನಿಲಯಗಳ  ಮೇಲ್ವಿಚಾರಣೆ  ಮಾಡುವುದು  ಮತ್ತು ನಿರ್ವಹಿಸುವುದು.
 ಅನುಸೂಚಿತ  ಜಾತಿಗಳು/ಅನುಸೂಚಿತ  ಪಂಗಡಗಳು  ಹಾಗೂ  ಹಿಂದುಳಿದ  ಸಮುದಾಯಗಳಿಗೆ ಸಂಬಂಧಿಸಿದಂತೆ ವೃತ್ತಿ ಶಿಕ್ಷಣ ತರಬೇತಿ ಕೇಂದ್ರಗಳನ್ನು ನಿರ್ವಹಿಸುವುದು.
ಅನುಸೂಚಿತ  ಜಾತಿಗಳು/ಅನುಸೂಚಿತ  ಪಂಗಡಗಳು  ಹಿಂದುಳಿದ  ಸಮುದಾಯಗಳ  ಕಲ್ಯಾಣಕ್ಕೆ ಸಂಬಂಧಿಸಿದ  ಸ್ಕೀಮುಗಳ  ಅಡಿಯಲ್ಲಿ  ವ್ಯಕ್ತಿಗಳು  ಮತ್ತು  ಇತರರಿಗೆ  ಅನುದಾನಗಳು,  ಸಾಲಗಳು  ಮತ್ತು ಸಹಾಯಧನಗಳನ್ನು ವಿತರಿಸುವುದು.
23. ಅಂಕಿಅಂಶಗಳ ನಿರ್ವಹಣೆ
  ಜಿಲ್ಲೆಯ ಅಂಕಿಅಂಶಗಳನ್ನು ಕ್ರೋಢೀಕರಿಸುವುದು.
 ತಾಲ್ಲೂಕು  ಪಂಚಾಯಿತಿಯ  ದೃಷ್ಟಿಕೋನದ  ಯೋಜನೆಗಳನ್ನು  ಆಧರಿಸಿ  ಜಿಲ್ಲಾ  ದೃಷ್ಟಿಕೋನದ ಯೋಜನೆಯನ್ನು ಕ್ರೋಢೀಕರಿಸುವುದು ಮತ್ತು ಅಂತಿಮಗೊಳಿಸುವುದು.
24.  ಯೋಜನೆ
  ಜಿಲ್ಲಾಮಟ್ಟದ ಯೋಜನೆಯನ್ನು ರೂಪಿಸುವುದು.
  ತಾಲ್ಲೂಕು  ಪಂಚಾಯಿತಿಗಳಿಂದ  ಸ್ವೀಕರಿಸಿದ  ಯೋಜನೆಗಳನ್ನು  ಕ್ರೋಢೀಕರಿಸುವುದು,  ಜಿಲ್ಲಾಮಟ್ಟದ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಅದಕ್ಕೆ ಅನುಮೋದನೆ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದ ಸಮಿತಿ ರಚಿಸುವುದು.
 ದತ್ತಾಂಶ  ಮತ್ತು  ಮಾಹಿತಿ  ಸಂಗ್ರಹಿಸುವುದಕ್ಕೆ  ಹಾಗೂ  ಯೋಜನೆಯನ್ನು  ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿಗಳಿಗೆ ಅಗತ್ಯವಿರುವ ತಂತ್ರಜ್ಞರ ನೆರವನ್ನು ಒದಗಿಸುವುದು.
  ವಿಶೇಷ  ಘಟಕಾಂಶ  ಯೋಜನೆ  (ಎಸ್ಸಿಪಿ)  ಮತ್ತು  ಬುಡಕಟ್ಟು  ಉಪಯೋಜನೆ  (ಟಿಎಸ್ಪಿ)ಗಳೂ ಸೇರಿದಂತೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳ ಪ್ರಗತಿಯನ್ನು ಕುರಿತು ಮೇಲ್ವಿಚಾರಣೆ ಮಾಡುವುದು ಮತ್ತು ಗುಣಮಟ್ಟದ ಅನುಷ್ಠಾನ ಕುರಿತು ಖಚಿತಪಡಿಸಿಕೊಳ್ಳುವುದು.
  ಯೋಜನೆಗಳ ಮೌಲ್ಯಮಾಪನ ಮಾಡುವುದು.
 25.  ಸಹಕಾರ ಜಿಲ್ಲಾಮಟ್ಟದ ಎಲ್ಲಾ ಸಹಕಾರ ಸಂಘಗಳಿಗೆ ಅನುಕೂಲಗಳನ್ನು ಕಲ್ಪಿಸುವುದು.
26.  ಗ್ರಾಮೀಣ ವಿದ್ಯುದೀಕರಣ, ಪರಿಸರ ಮತ್ತು ಜೀವಿ ಪರಿಸ್ಥಿತಿ
ಗ್ರಾಮೀಣ  ವಿದ್ಯುದೀಕರಣ,  ಪರಿಸರ  ಮತ್ತು  ಜೀವಿ  ಪರಿಸ್ಥಿತಿ  ಸಂರಕ್ಷಣೆಗೆ  ಸಂಬಂಧಿಸಿದಂತೆ ಗ್ರಾಮಪಂಚಾಯಿತಿಗಳು ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ತಾಂತ್ರಿಕ ನೆರವನ್ನು ಒದಗಿಸುವುದು.
27.  ಆದಾಯೋತ್ಪತ್ತಿ ಚಟುವಟಿಕೆಗಳನ್ನು ಕೈಗೊಳ್ಳುವುದು  
ಜಿಲ್ಲಾ ಕೇಂದ್ರ ಕಚೇರಿಗಳಲ್ಲಿ ಆಸ್ತಿಗಳನ್ನು ಸೃಜಿಸುವುದು ಮತ್ತು ಅವುಗಳನ್ನು ಬಾಡಿಗೆಗೆ ನೀಡುವುದು.
28.  ಜ್ಞಾನ ನಿರ್ವಹಣೆ
 ಎಲ್ಲ  ಸಕರ್ಾರಿ  ಸ್ಕೀಮುಗಳಿಗೆ  ಸಂಬಂಧಿಸಿದಂತೆ  ಜಾಗೃತಿ  ಮೂಡಿಸುವ  ಮತ್ತು  ಮಾಹಿತಿ,  ಶಿಕ್ಷಣ  ಮತ್ತು ಸಂಪರ್ಕ ಚಟುವಟಿಕೆಗಳನ್ನು ಕೈಗೊಳ್ಳುವುದು.
  ಜಿಲ್ಲಾ ಅಂಕಿಅಂಶಗಳನ್ನು ಸಂಗ್ರಹಿಸುವುದು, ಕ್ರೋಢೀಕರಿಸುವುದು ಮತ್ತು ದತ್ತಕಣಜ (ಡೇಟಾಬೇಸ್)ವನ್ನು ನಿರ್ವಹಿಸುವುದು.
 ಜಿಲ್ಲೆಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ದಾಖಲಿಸುವುದು.
  ಜಿಲ್ಲೆಯ  ಮಾನವ  ಅಭಿವೃದ್ಧಿಯನ್ನು  ನಿರ್ಧರಿಸುವುದಕ್ಕೆ  ಸಂಬಂಧಿಸಿದಂತೆ  ಸಮೀಕ್ಷೆಗಳನ್ನು  ಮತ್ತು ಅಧ್ಯಯನಗಳನ್ನು ಕೈಗೊಳ್ಳುವುದು.
  ಮಾನವಾಭಿವೃದ್ಧಿ ಸೂಚ್ಯಂಕವನ್ನು ನಿಯತಕಾಲಿಕವಾಗಿ ಗಣನೆ ಮಾಡುವುದು
 ಎಲ್ಲ ದತ್ತಾಂಶ ಜನರಿಗೆ ಲಭ್ಯವಾಗುವಂತೆ ಮಾಡುವುದು.  
ವಿವರಣೆ:- 1.  ತೆರಿಗೆಗೆ  ಗುರಿಯಾಗುವ  ಸ್ವತ್ತಿನ  ಮೂಲಮೌಲ್ಯ  ಎಂದರೆ  (ಕರ್ನಾಟಕ  ಸ್ಟ್ಯಾಂಪ್  ಅಧಿನಿಯಮ  1957ರ 45ಬಿ  ಪ್ರಕರಣದ  ಅಡಿಯಲ್ಲಿ  ಪ್ರಕಟಿಸಲಾದ  ಮಾರ್ಗಸೂಚಿ  ಮಾರುಕಟ್ಟೆ  ಮೌಲ್ಯದಲ್ಲಿ  ಸರ್ಕಾರವು ಕಾಲಕಾಲಕ್ಕೆ  ಅಧಿಸೂಚಿಸಬಹುದಾದಂತೆ  ನಿರ್ಧರಣೆಯ  ಸಮಯದ  ಮೌಲ್ಯದ  ಸವಕಳಿಯನ್ನು ಕಳೆಯುವುದು)
2.  ಕಟ್ಟಡದ  ಖಾಲಿ  ಜಮೀನು  ಅಥವಾ  ಅವೆರಡರ  ಮೇಲೆ  ಪ್ರದೇಶವನ್ನು,  ಕಟ್ಟಡದ  ನಿರ್ಮಾಣದ  ವಿಧಾನ, ಅದರ  ಉಪಯೋಗ  ಮತ್ತು  ಕಟ್ಟಡದ  ಆಯಷು  ಮತ್ತು  ನಿಯಮಿಸಬಹುದಾದ  ಅಂತಹ  ಇತರ ಯಾವುದೇ  ಮಾನದಂಡಗಳನ್ನು  ಗಮನದಲ್ಲಿಟ್ಟುಕೊಂಡು  ನಿಯಮಗಳು  ಮತ್ತು  ದರಗಳನ್ನು ಅನುಸೂಚಿಯಲ್ಲಿ ನಿಯಮಿಸಲಾದ ತೆರಿಗೆಯ ನಿರ್ಧರಣೆ.

No comments:

Post a Comment