ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಕೆಳಕಂಡ ಅಂಶಗಳನ್ನು ಖಾತರಿಪಡಿಸಿಕೊಳ್ಳುವುದು.

inyatrust.in | Saturday, January 14, 2023

ಅ.  ಶಿಕ್ಷಣ ಸಂಸ್ಥೆಗಳು ಮಕ್ಕಳ ರಕ್ಷಣಾ ನೀತಿಯ ಪ್ರತಿಯನ್ನು ಸುಲಭವಾಗಿ ಲಭ್ಯವಿರುವ ಸ್ಥಳದಲ್ಲಿರಿಸುವುದು.
ಆ.  ಮಕ್ಕಳ  ರಕ್ಷಣಾ  ನೀತಿಯನ್ನು  ಶಾಲಾ  ದಿನಚರಿ,  ಶಾಲೆಯ  ಸೂಚನಾ  ಫಲಕ,  ಓದುವ  ಸ್ಥಳಗಳು,  ಯಾವುದೇ ಮಾಹಿತಿ ಕೇಂದ್ರ ಮತ್ತು ತನ್ನ ಅಂತರ್ಜಾಲದಲ್ಲಿ ಪ್ರಕಟಿಸುವ ಮೂಲಕ ಶಿಕ್ಷಣ ಸಂಸ್ಥೆಯು ಪ್ರಚಾರ ಮಾಡುವುದು.
ಇ.  ಶಿಕ್ಷಣ  ಸಂಸ್ಥೆಯು  ತನ್ನ  ಎಲ್ಲಾ  ಸಿಬ್ಬಂದಿ,  ಗುತ್ತಿಗೆ  ನೌಕರರಿಗೆ  ಮತ್ತು  ಸಂಬಂಧಿಸಿದ  ಎಲ್ಲಾ  ಇತರೆ  ಭಾಗಿದಾರರಿಗೆ ಮಕ್ಕಳ  ರಕ್ಷಣಾ  ನೀತಿಯ  ಪಾಲನೆ  ಬಗ್ಗೆ  ಅಧಿಸೂಚನೆ  ಹೊರಡಿಸುವುದು  ಮತ್ತು  ಲಭ್ಯವಾಗುವಂತೆ ನೋಡಿಕೊಳ್ಳುವುದು.
ಈ.  ಮಕ್ಕಳ  ರಕ್ಷಣಾ  ನೀತಿಯ  ಮಾಹಿತಿ  ಮತ್ತು  ಅದನ್ನು  ಪಾಲಿಸಲು  ಬದ್ಧವಾಗಿರುವ  ಬಗ್ಗೆ  ಶಿಕ್ಷಣ  ಸಂಸ್ಥೆಗಳು ಲಿಖಿತವಾಗಿ ಘೋಷಣೆಯನ್ನು ಪಡೆದುಕೊಳ್ಳುವುದು.
ಉ.  ಶಿಕ್ಷಣ  ಸಂಸ್ಥೆಗಳು  ವಿದ್ಯಾರ್ಥಿಗಳಿಗೆ  ಮಕ್ಕಳ  ರಕ್ಷಣಾ  ನೀತಿಯ  ಬಗ್ಗೆ  ಕನಿಷ್ಠ  ಮೂರು  ತಿಂಗಳಿಗೊಮ್ಮೆ  ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ತಿಳುವಳಿಕೆ ನೀಡುವುದು.
ಊ.  ಮಕ್ಕಳ  ರಕ್ಷಣಾ  ನೀತಿಯನ್ನು,  ಶಿಕ್ಷಣ  ಸಂಸ್ಥೆಗಳ  ಆಡಳಿತ  (ಸರ್ಕಾರೇತರ  ಶಿಕ್ಷಣ  ಸಂಸ್ಥೆಗಳಿಗೆ  ಆಡಳಿತ  ಮಂಡಳಿ ಅಥವಾ  ಬೋರ್ಡ್  ಆಫ್  ಟ್ರಸ್ಟೀಸ್,  ಸರ್ಕಾರಿ  ಶಾಲೆಗಳಿಗೆ  ಕ್ಷೇತ್ರಶಿಕ್ಷಣಾಧಿಕಾರಿಗಳು)  ಮಂಡಳಿಯು  ಆಗಾಗ್ಗೆ ಪರಿಶೀಲಿಸಿ ಮಾರ್ಪಾಟುಗಳನ್ನು ಮಾಡುವುದು.
ಋ.  ಪ್ರಸ್ತಾವಿತ ಮಾರ್ಗಸೂಚಿಗಳಲ್ಲಿ ಸ್ವ-ಮೌಲ್ಯಮಾಪನದ ಗಮನಿಕೆ ಪಟ್ಟಿಯನ್ನು ಅಳವಡಿಸುವುದು.
3.2 ಸುರಕ್ಷ ನೇಮಕಾತಿ ಮತ್ತು ಆಯ್ಕೆಯ ಮಾರ್ಗಸೂಚಿಗಳು
ಸುರಕ್ಷ  ನೇಮಕಾತಿ  ಮತ್ತು  ಆಯ್ಕೆಯ  ಮಾರ್ಗಸೂಚಿಗಳಿಂದ  ಶಿಕ್ಷಣ  ಸಂಸ್ಥೆಗಳಲ್ಲಿ  ಮಕ್ಕಳ  ರಕ್ಷಣೆಗೆ  ಸೂಕ್ತವಾದ ವ್ಯಕ್ತಿಗಳನ್ನು  ಗುರುತಿಸಿ,  ಆಯ್ಕೆ  ಮಾಡಿಕೊಳ್ಳಲು  ಮತ್ತು  /  ಅಥವಾ  ವಿದ್ಯಾರ್ಥಿಗಳ  ಸುರಕ್ಷತೆಯನ್ನು  ತೊಂದರೆಗೆ ಸಿಲುಕಿಸಬಹುದಾದ  ಅನರ್ಹ  ವ್ಯಕ್ತಿಗಳನ್ನು  ಗುರುತಿಸಿ,  ತಡೆಯಲು  ನೆರವಾಗುತ್ತದೆ.  ಕೆಳಕಂಡ  ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳುವುದರಿಂದ ಶಿಕ್ಷಣ ಸಂಸ್ಥೆಗಳಲ್ಲಿನ ಸಿಬ್ಬಂದಿ ನಿಯಮಗಳಲ್ಲಿ ತಿದ್ದುಪಡಿಗಳನ್ನು ಮಾಡುವುದು.
 ತಪಾಸಣೆ
ಅ.  ಸಂಸ್ಥೆಯ  ಮುಖ್ಯಸ್ಥರಿಂದ  ಹಿಡಿದು  ಬೋಧಕ,  ಬೋಧಕೇತರ  ಸಿಬ್ಬಂದಿ,  ಗುತ್ತಿಗೆ  ಸಿಬ್ಬಂದಿ  ಮತ್ತು  ಹೊರ ಗುತ್ತಿಗೆಯ  ಸಂಸ್ಥೆಗಳನ್ನು  ನೇಮಿಸಿಕೊಳ್ಳುವಾಗ  ಎಲ್ಲಾ  ಅರ್ಜಿಗಳನ್ನು  ಪರಿಶೀಲಿಸಿ,  ಹಿಂದೆ  ಅವರು  ಸೇವೆ ಸಲ್ಲಿಸಿದ  ಎರಡು  ಉದ್ಯೋಗದಾತರಿಂದ  ದೃಢೀಕರಣ  ಪತ್ರವನ್ನು  ಪಡೆದುಕೊಳ್ಳುವುದು  ಮತ್ತು ಇದರೊಂದಿಗೆ  ಹಿಂದಿನ  ಉದ್ಯೋಗದಾತರು  ಮತ್ತು  ಶಿಫಾರಸ್ಸು  ಮಾಡಿರುವವರೊಂದಿಗೆ  ಲಿಖಿತ  ಮತ್ತು ಮೌಖಿಕವಾಗಿ  ಪರಿಶೀಲಿಸುವುದು.  ಎಲ್ಲ  ರೀತಿಯಿಂದಲೂ  ಸೂಕ್ತವಾದ  ಅಭ್ಯರ್ಥಿಯನ್ನು  ಆಯ್ಕೆ  ಮಾಡಿ ಮಕ್ಕಳೊಂದಿಗೆ ಕಾರ್ಯನಿರ್ವಹಿಸಲು ತೊಡಗಿಸಿಕೊಳ್ಳುವುದು.
ಆ.  ಆಯ್ಕೆಗಾಗಿ  ಲಿಖಿತವಾಗಿ  ಅರ್ಜಿಯನ್ನು  ಆಹ್ವಾನಿಸುವುದು  ಮತ್ತು  ವೈಯಕ್ತಿಕ  ಸಂದರ್ಶನ  ನಡೆಸುವುದು. ಮಕ್ಕಳ  ಸುರಕ್ಷತೆ  ಮತ್ತು  ಹಲ್ಲೆ  ಮುಂತಾದವುಗಳ  ಕುರಿತು  ಅರ್ಜಿದಾರನ  ಮನೋಭಾವವನ್ನು ಪರಿಶೀಲಿಸುವುದು.
ಇ.  ಪೊಲೀಸ್  ಇಲಾಖೆಯಿಂದ  ಅರ್ಜಿದಾರನ  ಹಿನ್ನೆಲೆ  ಮತ್ತು  ಆತನ  ವಿರುದ್ಧ  ಯಾವುದಾದರೂ  ಬಾಕಿ ಇರುವ  ಅಪರಾಧ  ಪ್ರಕರಣಗಳಿರುವುದರ  ಬಗ್ಗೆ  ಮಾಹಿತಿಯನ್ನು  ಪಡೆಯವುದು.  ಒಂದುವೇಳೆ  ಅಂತಹ ಪ್ರಕರಣವೇನಾದರೂ  ನೋಂದಣಿಯಾಗಿದ್ದಲ್ಲಿ,  ಅಂತಹ  ವ್ಯಕ್ತಿಯನ್ನು  ಮಕ್ಕಳೊಂದಿಗೆ  ನೇರವಾಗಿ ಸಂಪರ್ಕವಿರುವ ಯಾವುದೇ ಕೆಲಸಕ್ಕೂ ಪರಿಗಣಿಸದಿರುವುದು.
ಈ.  ಸಿಬ್ಬಂದಿಗಳಿಗೆ  ಸಂಬಂಧಿಸಿದ  ಎಲ್ಲಾ  ದಾಖಲೆಗಳು,  ಸಂದರ್ಶನ  ವರದಿಗಳು,  ಪ್ರಮಾಣಪತ್ರಗಳು  ಅವರು ನಿವೃತ್ತರಾಗುವವರೆಗೂ ಶಿಕ್ಷಣ ಸಂಸ್ಥೆ ಮತ್ತು ಆಡಳಿತ ಮಂಡಳಿಯಲ್ಲಿ ಲಭ್ಯವಿರುವುದು.
3.3 ಹೊರಗುತ್ತಿಗೆ ಸಿಬ್ಬಂದಿಗಳಿಗಾಗಿ
*  ಶಿಕ್ಷಣ  ಸಂಸ್ಥೆಯು  ಸಿಬ್ಬಂದಿಗಳನ್ನು  ಹೊರಗುತ್ತಿಗೆ  ಸಂಸ್ಥೆಯ  ಮೂಲಕ  ತೆಗೆದುಕೊಂಡಿದ್ದಲ್ಲಿ,  ಆ  ಸಂಸ್ಥೆಯು ಸಿಬ್ಬಂದಿಗಳ ನೇಮಕಾತಿ ಮಾರ್ಗಸೂಚಿಗಳನ್ನು ಹೊಂದಿದ್ದು, ಆಯ್ಕೆಯಲ್ಲಿ ಮೇಲ್ಕಂಡ ನಿಯಮಗಳನ್ನು ಪಾಲಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
3.4ಮಾನವ ಸಂಪನ್ಮೂಲ ನೀತಿ ಮತ್ತು ಸೇವಾ ನಿಯಮಗಳು
*  ಶಿಕ್ಷಣ  ಸಂಸ್ಥೆಯಲ್ಲಿನ  ಆಡಳಿತ  ಮಂಡಳಿಯ  ಮಾನವ  ಸಂಪನ್ಮೂಲ  ನೀತಿಯು  ಸಂಸ್ಥೆಯಲ್ಲಿನ  ಮಕ್ಕಳ  ರಕ್ಷಣಾ ನೀತಿಯನ್ನು  ಉಲ್ಲೇಖಿತ,  ಅದರಲ್ಲಿರುವ  ಮಕ್ಕಳ  ರಕ್ಷಣಾತ್ಮಕ  ಕ್ರಮಗಳ  ಮಾಹಿತಿಯನ್ನು  ಅಳವಡಿಸಿಕೊಳ್ಳುವುದು. ಮಕ್ಕಳ  ರಕ್ಷಣಾ  ನೀತಿಯನ್ನು  ಪಾಲಿಸದಿರುವ  ಹಾಗೂ  ನೀತಿಸಂಹಿತೆಗೆ  ಬದ್ಧರಾಗದೇ  ಇರುವುದರಿಂದ  ಎದುರಾಗುವ ಪರಿಣಾಮಗಳ ಬಗ್ಗೆ ಸಂಸ್ಥೆಯ ಮಾನವ ಸಂಪನ್ಮೂಲ ನೀತಿಯಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸುವುದು.
*  ಸರ್ಕಾರಿ  ಶಾಲೆಗಳಿಗೆ  ಸಂಬಂಧಿಸಿದಂತೆ  ಶಿಕ್ಷಣ  ಸಂಸ್ಥೆಗಳ  ಮಕ್ಕಳ  ರಕ್ಷಣಾ  ನೀತಿಯನ್ನು  ರಾಜ್ಯದ  ಸಿಬ್ಬಂದಿಗಳ ನೀತಿಯ  ಸೇವಾ  ನಿಯಮಗಳಲ್ಲಿ  ಸೇರಿಸುವುದು.  ಈ  ನಿಯಮಗಳು  ಗ್ರ್ಯಾಂಟ್  ಇನ್  ಏಡ್  ಸಂಸ್ಥೆಗಳ  ಸೇವಾ ನಿಯಮಗಳು, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುತ್ತದೆ.

No comments:

Post a Comment