ಸಾಮಗ್ರಿ ಮತ್ತು ಸಾಧನ ಸಲಕರಣೆಗಳ ಖರೀದಿ.

inyatrust.in | Tuesday, January 17, 2023

(1) ಸರ್ಕಾರವು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ, ಈ ಮುಂದಿನ ಎಲ್ಲ ಅಥವಾ ಯಾವುವೇ ವಿಚಾರಗಳಿಗೆ ಉಪಬಂಧಿಸಬಹುದು, ಎಂದರೆ:     
(ಎ)  ಜಿಲ್ಲಾ  ಪಂಚಾಯತಿಗೆ,  ತಾಲ್ಲೂಕು  ಪಂಚಾಯತಿಗೆ  ಅಥವಾ  ಗ್ರಾಮ  ಪಂಚಾಯತಿಗೆ  ಅಗತ್ಯವಿರುವ ಸಾಮಗ್ರಿಗಳನ್ನು,  ಸಾಧನ  ಸಲಕರಣೆಗಳನ್ನು,  ಯಂತ್ರ  ಸಾಮಗ್ರಿಗಳನ್ನು  ಅಥವಾ  ಇತರ  ವಸ್ತುಗಳನ್ನು  ಅದು  ಖರೀದಿ ಮಾಡತಕ್ಕ ವಿಧಾನ;     
(ಬಿ)  ಕಾಮಗಾರಿ  ಕಾಂಟ್ರಾಕ್ಟಿಗಾಗಿ  ಮತ್ತು  ಸರಬರಾಜುಗಳಿಗಾಗಿ  ಟೆಂಡರುಗಳನ್ನು  ಆಹ್ವಾನಿಸತಕ್ಕ  ಮತ್ತು ಪರೀಕ್ಷಿಸತಕ್ಕ ಮತ್ತು ಅಂಗೀಕರಿಸತಕ್ಕ ವಿಧಾನ;     
(ಸಿ)  ಕಾಮಗಾರಿಗಳು  ಮತ್ತು  ಅಭಿವೃದ್ಧಿ  ಯೋಜನೆಗಳನ್ನು  ನಿರ್ವಹಿಸಬಹುದಾದ  ಮತ್ತು ಪರೀಕ್ಷಿಸಬಹುದಾದ  ಮತ್ತು  ಅಂತಹ  ಕಾಮಗಾರಿಗಳು  ಮತ್ತು  ಯೋಜನೆಗಳಿಗೆ  ಸಂಬಂಧಪಟ್ಟಂತೆ  ಸಂದಾಯ ಮಾಡಬಹುದಾದ ವಿಧಾನ;     
(ಡಿ)  ಈ ಪ್ರಕರಣದ ಉದ್ದೇಶಕ್ಕಾಗಿ ಸಮಿತಿಯ ರಚನೆ.   
(2) ನಿಧಿಗಳನ್ನು  ಪಡೆದುಕೊಳ್ಳುವುದು,  ಬಿಲ್ಗಳ  ನಮೂನೆ,  ವೆಚ್ಚಗಳನ್ನು  ಭರಿಸುವುದು,  ಲೆಕ್ಕಗಳ  ನಿರ್ವಹಣೆ, ಲೆಕ್ಕಗಳನ್ನು  ಸಲ್ಲಿಸುವುದು  ಮತ್ತು  ಅಂಥ  ಇತರ  ವಿಚಾರಗಳಿಗೆ  ಸಂಬಂಧಿಸಿದ  ಇತರ  ಎಲ್ಲ  ವಿಚಾರಗಳಿಗೆ ಸಂಬಂಧಪಟ್ಟಂತೆ  (1)ನೇ  ಉಪಪ್ರಕರಣದಲ್ಲಿ  ಬೇರೆ  ರೀತಿಯಲ್ಲಿ  ಸ್ಪಷ್ಟವಾಗಿ  ನಮೂದಿಸಿರುವುದರ  ಹೊರತಾಗಿ, ಸರ್ಕಾರದ ಇಲಾಖೆಗಳಿಗೆ ಅನ್ವಯವಾಗುವಂತೆ ಜಾರಿಗೆ ತರುವ ನಿಯಮಗಳು, ಯಥೋಚಿತ ಪರಿವರ್ತನೆಯೊಂದಿಗೆ ಅನ್ವಯವಾಗತಕ್ಕದ್ದು.  
 239.  ಕೆಲವು ಸಂದರ್ಭಗಳಲ್ಲಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅಧಿಕಾರ.   (ಎ)  ಈ  ಅಧಿನಿಯಮದ  ಅಡಿಯಲ್ಲಿ  ಜಿಲ್ಲಾ  ಪಂಚಾಯತಿಗೆ  ಅಥವಾ  ತಾಲ್ಲೂಕು  ಪಂಚಾಯತಿಗೆ ನಡೆಯಬೇಕಾದ  ಯಾವುದೇ  ಸಾರ್ವತ್ರಿಕ  ಚುನಾವಣೆಯನ್ನು  ಅಥವಾ  ಅದರ  ಪರಿಣಾಮವಾಗಿ ಯಾವುವೇ  ವ್ಯವಹರಣೆಗಳನ್ನು  ಸಕ್ಷಮ  ನ್ಯಾಯಾಲಯದ  ಅಥವಾ  ಪ್ರಾಧಿಕಾರಿಯ  ಆದೇಶದ ಮೂಲಕ ತಡೆಹಿಡಿದಿರುವಾಗಲೆಲ್ಲಾ; ಅಥವಾ
    (ಬಿ)  ಜಿಲ್ಲಾ  ಪಂಚಾಯತಿಯ  ಅಥವಾ  ತಾಲ್ಲೂಕು  ಪಂಚಾಯತಿಯ  ಎಲ್ಲ  ಸದಸ್ಯರು  ಅಥವಾ  ಸದಸ್ಯರ ಪೈಕಿ ಮೂರನೇ ಎರಡರಷ್ಟಕ್ಕಿಂತ ಹೆಚ್ಚಿನವರು ರಾಜೀನಾಮೆಯನ್ನು ಕೊಟ್ಟಿರುವಾಗಲೆಲ್ಲಾ, ಸರ್ಕಾರವು,  ಸರ್ಕಾರಿ  ರಾಜ್ಯಪತ್ರದಲ್ಲಿ  ಅಧಿಸೂಚನೆಯ  ಮೂಲಕ,  ಆ  ಅಧಿಸೂಚನೆಯಲ್ಲಿ  ನಿರ್ದಿಷ್ಟ ಪಡಿಸಬಹುದಾದಂಥ  ಅವಧಿಯವರೆಗೆ  ಆಡಳಿತಾಧಿಕಾರಿಯನ್ನು  ನೇಮಕಮಾಡತಕ್ಕದ್ದು  ಮತ್ತು  ಅಂಥದೇ ಅಧಿಸೂಚನೆಯ  ಮೂಲಕ,  ಅಂಥ  ನೇಮಕದ  ಅವಧಿಯನ್ನು  ಮೊಟಕುಗೊಳಿಸಬಹುದು  ಅಥವಾ  ವಿಸ್ತರಿಸಬಹುದು. ಆದಾಗ್ಯೂ, ಅಂಥ ನೇಮಕದ ಒಟ್ಟು ಅವಧಿಯು ಆರು ತಿಂಗಳನ್ನು ಮೀರತಕ್ಕದ್ದಲ್ಲ.   
(2) ಈ ಅಧಿನಿಯಮದಲ್ಲಿ ಏನೇ ಇದ್ದರೂ, (1)ನೇ ಉಪಪ್ರಕರಣದ ಅಡಿಯಲ್ಲಿ  ಆಡಳಿತಗಾರರನ್ನು ನೇಮಕ ಮಾಡಿದ  ಮೇಲೆ,  ಅಂಥ  ನೇಮಕದ  ಅವಧಿಯಲ್ಲಿ,  ಈ  ಅಧಿನಿಯಮದ  ಅಥವಾ  ಯಾವುದೇ  ಇತರ  ಕಾನೂನಿನ ಉಪಬಂಧಗಳನ್ನು  ಕಾರ್ಯಗತಗೊಳಿಸುವ  ಹೊಣೆಯನ್ನು  ಹೊತ್ತ  ಸದರಿ  ಜಿಲ್ಲಾ  ಪಂಚಾಯತಿಯು  ಅಥವಾ ತಾಲ್ಲೂಕು  ಪಂಚಾಯತಿಯು  ಮತ್ತು  ಅದರ  ಸಮಿತಿಗಳು  ಮತ್ತು  ಅಧ್ಯಕ್ಷ  ಮತ್ತು  ಉಪಾಧ್ಯಕ್ಷರು  ಈ  ಅಧಿನಿಯಮದ ಅಥವಾ ಯಾವುದೇ ಇತರ ಕಾನೂನಿನ ಮೂಲಕ ಅಥವಾ ಅದರ ಅಡಿಯಲ್ಲಿ ಅವರಿಗೆ ಪ್ರದಾನ ಮಾಡಿದ ಅಥವಾ ವಿಧಿಸಿದ  ಯಾವುವೇ  ಅಧಿಕಾರಗಳನ್ನು  ಚಲಾಯಿಸುವುದು  ಮತ್ತು  ಯಾವುವೇ  ಕರ್ತವ್ಯಗಳನ್ನು    ಅಥವಾ ಪ್ರಕಾರ್ಯಗಳನ್ನು ನೆರವೇರಿಸುವುದು ಮತ್ತು ನಿರ್ವಹಿಸುವುದು ನಿಂತುಹೋಗತಕ್ಕದ್ದು ಮತ್ತು ಆ ಆಡಳಿತಾಧಿಕಾರಿಯು ಅಂಥ  ಎಲ್ಲ  ಅಧಿಕಾರಗಳನ್ನು  ಚಲಾಯಿಸತಕ್ಕದ್ದು  ಮತ್ತು  ಅಂಥ  ಎಲ್ಲ  ಕರ್ತವ್ಯಗಳನ್ನು  ಮತ್ತು  ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.   
240.    ಪಂಚಾಯತಿಗಳ  ಪಾತ್ರವನ್ನು  ನಿರ್ದಿಷ್ಟಪಡಿಸಲು  ಸರ್ಕಾರದ  ಅಧಿಕಾರ.  ಸರ್ಕಾರವು,  ಸಾಮಾನ್ಯ  ಅಥವಾ ವಿಶೇಷ  ಆದೇಶದ  ಮೂಲಕ, ಮತ್ತು ರಲ್ಲಿ  ನಿರ್ದಿಷ್ಟಪಡಿಸಿರುವ  ಕಾರ್ಯಗಳಿಗೆ  ಸಂಬಂಧಿಸಿದ ಕಾರ್ಯಕ್ರಮಗಳಿಗೆ,  ಯೋಜನೆಗಳಿಗೆ  ಮತ್ತು  ಚಟುವಟಿಕೆಗಳಿಗೆ  ಸಂಬಂಧಿಸಿದಂತೆ,  ಅಂಥ  ಕಾರ್ಯಕ್ರಮಗಳನ್ನು, ಯೋಜನೆಗಳನ್ನು  ಮತ್ತು  ಚಟುವಟಿಕೆಗಳನ್ನು  ಸೂಕ್ತವಾಗಿ  ಸಮನ್ವಯಗೊಳಿಸುವುದನ್ನು  ಮತ್ತು  ಪರಿಣಾಮಕಾರಿಯಾಗಿ ಜಾರಿಗೆ ತರುವುದನ್ನು  ಖಚಿತಪಡಿಸಿಕೊಳ್ಳುವ  ದೃಷ್ಟಿಯಿಂದ,  ಗ್ರಾಮಪಂಚಾಯತಿಯ,  ತಾಲ್ಲೂಕು  ಪಂಚಾಯತಿಯ ಮತ್ತು ಜಿಲ್ಲಾ ಪಂಚಾಯತಿಯ ಪಾತ್ರವನ್ನು ಕಾಲಕಾಲಕ್ಕೆ ನಿದರ್ಿಷ್ಟಪಡಿಸತಕ್ಕದ್ದು.
ಹಣಕಾಸು ನಿಯಂತ್ರಣ ಮತ್ತು ಲೆಕ್ಕ ಪರಿಶೋಧನೆ   
241.    ಗ್ರಾಮ  ಪಂಚಾಯತಿಯ  ಲೆಕ್ಕಗಳ  ಮತ್ತು  ಬಜೆಟ್ನ  ಮಂಡನೆ.  (1)  1[ಪಂಚಾಯತಿ  ಅಭಿವೃದ್ಧಿ ಅಧಿಕಾರಿಯು,]1  ಮುಂದಿನ  ಮಾರ್ಚ್ ಮೂವತ್ತೊಂದನೇ  ದಿನದಂದು  ಕೊನೆಗೊಳ್ಳುವ  ಆರ್ಥಿಕ  ವರ್ಷದ  ವಾಸ್ತವಿಕ ಮತ್ತು  ನಿರೀಕ್ಷಿತ  ಜಮೆ  ಮತ್ತು  ವೆಚ್ಚಗಳ  ಸಂಪೂರ್ಣ  ಲೆಕ್ಕವನ್ನು  ಸಿದ್ಧಪಡಿಸತಕ್ಕದ್ದು  ಮತ್ತು  ಮುಂಬರುವ  ಏಪ್ರಿಲ್ ಮೊದಲನೇ ದಿನದಂದು ಪ್ರಾರಂಭಗೊಳ್ಳುವ ಆರ್ಥಿಕ ವರ್ಷಕ್ಕಾಗಿ ಗ್ರಾಮ ಪಂಚಾಯತಿಯ ಆದಾಯ ಮತ್ತು ವೆಚ್ಚದ ಬಜೆಟ್  ಅಂದಾಜಿನ  ಜೊತೆಗೆ  ಅದನ್ನು  ಫೆಬ್ರವರಿ  ಮೊದಲನೇ  ದಿನದ  ಮತ್ತು  ಮಾರ್ಚ್  ಹತ್ತನೇ  ದಿನದ  ನಡುವೆ ನಡೆಯುವ ಸಭೆಯಲ್ಲಿ ಮಂಡಿಸತಕ್ಕದ್ದು.
 1. 2010ರ ಅಧಿನಿಯಮ ಸಂಖ್ಯೆ: 24ರ ಮೂಲಕ ದಿನಾಂಕ: 23-ಂ7-2010ರಿಂದ ಪ್ರತಿಯೋಜಿಸಲಾಗಿದೆ.
  (2) ಆ  ತರುವಾಯ,  ಗ್ರಾಮ  ಪಂಚಾಯತಿಯು,  ಮುಂಬರುವ  ಏಪ್ರಿಲ್  ಒಂದನೇ  ದಿನದಂದು ಪ್ರಾರಂಭವಾಗುವ ವರ್ಷದ ಬಜೆಟ್ನಲ್ಲಿ ಒಳಗೊಂಡಿರುವ ಧನ ವಿನಿಯೋಗಗಳ ಮತ್ತು ಮಾಗರ್ೊಪಾಯಗಳ ಬಗ್ಗೆ ತೀರ್ಮಾನಿಸತಕ್ಕದ್ದು.  ಗ್ರಾಮ  ಪಂಚಾಯತಿಯು  ಅಂಗೀಕರಿಸಿದಂತಹ  ಬಜೆಟನ್ನು,  ಸರ್ಕಾರವು ನಿಗದಿಪಡಿಸಬಹುದಾದಂತಹ ದಿನಾಂಕಕ್ಕೆ ಮೊದಲು ತಾಲ್ಲೂಕು ಪಂಚಾಯತಿಗೆ ಕಳುಹಿಸತಕ್ಕದ್ದು.   
(3)  ಅಂಥ ಬಜೆಟ್ ಅಂದಾಜಿನಲ್ಲಿ ಗ್ರಾಮ ಪಂಚಾಯತಿಯು ಇತರ ವಿಷಯಗಳೊಂದಿಗೆ,     (ಎ)  ಈ  ಅಧಿನಿಯಮದ  ಅಥವಾ  ಇತರ  ಯಾವುದೇ  ಕಾನೂನಿನ  ಮೂಲಕ  ಗ್ರಾಮ  ಪಂಚಾಯತಿಗೆ ವಿಧಿಸಿದ ಹಲವಾರು ಕರ್ತವ್ಯಗಳನ್ನು ನೆರವೇರಿಸಲು ಅಗತ್ಯವಾಗಬಹುದಾದಂಥ ಸೇವೆಗಳಿಗಾಗಿ ಸಾಕಷ್ಟು ಮತ್ತು ಸೂಕ್ತ ಏರ್ಪಾಟು ಮಾಡತಕ್ಕದ್ದು;     
(ಬಿ)  ಸರ್ಕಾರವು ಸಾಮಾನ್ಯವಾಗಿ ಎಲ್ಲ ಗ್ರಾಮ ಪಂಚಾಯತಿಗಳಿಗಾಗಿ ಅಥವಾ ವಿಶೇಷವಾಗಿ ಯಾವುದೇ ಗ್ರಾಮ  ಪಂಚಾಯತಿಗಾಗಿ  ಕಾಲಕಾಲಕ್ಕೆ  ನಿಗದಿಪಡಿಸಬಹುದಾದಂಥ  ಮೊತ್ತಕ್ಕೆ  ಅಥವಾ  ಆದಾಯದ  ಶೇಕಡಾ ಪ್ರಮಾಣಕ್ಕೆ ಕಡಿಮೆ ಇಲ್ಲದ ಹಣವನ್ನು ಸದರಿ ವರ್ಷದ ಕೊನೆಯಲ್ಲಿ ಶಿಲ್ಕಾಗಿ ಉಳಿಸತಕ್ಕದ್ದು;     
(ಸಿ)  ತಾನು  ಕರಾರು  ಮಾಡಿಕೊಂಡ  ಸಾಲಗಳ  ಸಂದಾಯದ  ಬಗ್ಗೆ  ಗ್ರಾಮ  ಪಂಚಾಯತಿಯು ಬದ್ಧವಾಗಿರಬಹುದಾದ  ಅಸಲು  ಮತ್ತು  ಬಡ್ಡಿಯ  ಎಲ್ಲ  ಕಂತುಗಳು  ಬಾಕಿಯಾದಾಗಲೆಲ್ಲ  ಅವುಗಳ  ಸಂದಾಯಕ್ಕಾಗಿ ಏರ್ಪಾಟು ಮಾಡತಕ್ಕದ್ದು.   
(4) ಅಂಥ  ಬಜೆಟ್  ಅಂದಾಜು,  ಈ  ಅಧಿನಿಯಮಕ್ಕೆ  ಅಥವಾ  ಅದರ  ಅಡಿಯಲ್ಲಿ  ರಚಿಸಿರುವ  ನಿಯಮಗಳಿಗೆ ಮತ್ತು  ಅದರ  ಅಡಿಯಲ್ಲಿ  ಹೊರಡಿಸಿರುವ  ಆದೇಶಗಳಿಗೆ  ಅನುಸಾರವಾಗಿ  ಇಲ್ಲದಿದ್ದರೆ,  ತಾಲ್ಲೂಕು  ಪಂಚಾಯತಿಯು ಬಜೆಟ್ಟನ್ನು ಸ್ವೀಕರಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಈ ಅಧಿನಿಯಮದ ನಿಯಮಗಳ ಅಥವಾ ಆದೇಶಗಳ ಪಾಲನೆಯಾಗುವಂತಾಗಲು ಅದನ್ನು ಮಾರ್ಪಾಟು ಮಾಡತಕ್ಕದ್ದು:   ಪರಂತು,  ತಾಲ್ಲೂಕು  ಪಂಚಾಯತಿಯು,  ಒಟ್ಟು  ಪ್ರಸ್ತಾವಿತ  ವೆಚ್ಚವು,  ಮುಂಬರುವ  ವರ್ಷದ  ಮತ್ತು  ಗ್ರಾಮ ಪಂಚಾಯತಿಯ  ಅಂದಾಜು  ವರಮಾನದ  ಒಟ್ಟು  ಮೊತ್ತವನ್ನು  ಮತ್ತು  ಪ್ರಾರಂಭ  ಶಿಲ್ಕನ್ನು  ಮೀರತಕ್ಕದ್ದೆಂದು ನಿರ್ದೆಶಿಸಲು ಅಧಿಕಾರವನ್ನು ಹೊಂದಿರತಕ್ಕದ್ದಲ್ಲ.   
(5)  (1)ನೇ  ಉಪ  ಪ್ರಕರಣದಲ್ಲಿ  ಹೇಳಿರುವ  ದಿನಾಂಕದಂದು,  ಅಥವಾ  ಅದಕ್ಕೂ  ಮೊದಲು  ಬಜೆಟ್ ಅಂದಾಜನ್ನು ಅಂಗೀಕರಿಸಲು ಗ್ರಾಮ ಪಂಚಾಯತಿಯು ತಪ್ಪಿದಲ್ಲಿ, 1[ಪಂಚಾಯತಿ ಅಭಿವೃದ್ಧಿ ಅಧಿಕಾರಿಯು]1 ಬಜೆಟ್ ಅಂದಾಜನ್ನು  ತಾಲ್ಲೂಕು  ಪಂಚಾಯತಿಗೆ  ಕಳುಹಿಸತಕ್ಕದ್ದು  ಮತ್ತು  ಅದು  ಅದನ್ನು  ಮಾರ್ಪಾಟಿನೊಂದಿಗೆ  ಅಥವಾ ಮಾರ್ಪಾಟಿಲ್ಲದೆ  ಅನುಮೋದಿಸತಕ್ಕದ್ದು.  ತಾಲ್ಲೂಕು  ಪಂಚಾಯತಿಯು  ಹಾಗೆ  ಅನುಮೋದಿಸಿದ  ಬಜೆಟ್ಟನ್ನು ಕಾರ್ಯನಿರ್ವಾಹಕ  ಅಧಿಕಾರಿಯು  ಪ್ರಮಾಣೀಕರಿಸತಕ್ಕದ್ದು  ಮತ್ತು  ಆ  ತರುವಾಯ,  ಅದನ್ನು  ಗ್ರಾಮ ಪಂಚಾಯತಿಯು ಯಥಾವಿಧಿಯಾಗಿ ಅನುಮೋದಿಸಿದುದೆಂಬಂತೆ ಭಾವಿಸತಕ್ಕದ್ದು.
1. 2010ರ ಅಧಿನಿಯಮ ಸಂಖ್ಯೆ: 24ರ ಮೂಲಕ ದಿನಾಂಕ: 23-ಂ7-2010ರಿಂದ ಪ್ರತಿಯೋಜಿಸಲಾಗಿದೆ.
  242.    ಬಜೆಟ್  ಪರಿಷ್ಕರಣೆ.  ಆರ್ಥಿಕ  ವರ್ಷದಲ್ಲಿ  ಗ್ರಾಮ  ಪಂಚಾಯತಿಯು,  ಜಮೆಗಳ  ಬಗ್ಗೆ  ಅಥವಾ  ಅದು ಕೈಗೊಳ್ಳುವ ವಿವಿಧ ಸೇವೆಗಳ ಬಗ್ಗೆ ವೆಚ್ಚ ಮಾಡಬೇಕಾದ ಮೊಬಲಗುಗಳ ಹಂಚಿಕೆಯ ಬಗ್ಗೆ ಬಜೆಟ್ಟಿನಲ್ಲಿ ಮಾಡಿರುವ ಏರ್ಪಾಡುಗಳನ್ನು  ಮಾರ್ಪಾಡು  ಮಾಡುವುದು  ಅವಶ್ಯವೆಂದು  ಕಂಡುಬಂದರೆ  ಅದು  ಅಂಥ  ಮಾರ್ಪಾಡನ್ನು ಮಾಡಬಹುದು:   ಪರಂತು, ರಾಜ್ಯದ ಸಂಚಿತ ನಿಧಿಯಿಂದ ಸರ್ಕಾರವು ವರ್ಗಾವಣೆ ಮಾಡಿರುವ ಯಾವುವೇ ಅನುದಾನಗಳನ್ನು, ಅಂಥ  ಅನುದಾನಗಳ  ವ್ಯಾಪ್ತಿಯೊಳಗೆ  ಬರದ  ಉದ್ದೇಶಕ್ಕಾಗಿ  ಅಥವಾ  ಕಾರ್ಯಕ್ರಮಕ್ಕಾಗಿ  ಅಥವಾ  ಯೋಜನೆಗಾಗಿ ಪಲ್ಲಟ ಮಾಡತಕ್ಕದ್ದಲ್ಲ:   
ಮತ್ತು ಪರಂತು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮೋದನೆ ಇಲ್ಲದೆ,   
(ಎ) ಗ್ರಾಮ  ಪಂಚಾಯತಿಯ  ಯಾವುವೇ  ಅಭಿವೃದ್ಧಿಕಾರ್ಯಗಳಿಗಾಗಿ  ಅನುಮೋದಿಸಿದ  ಅನುದಾನಗಳಲ್ಲಿ ಶೇಕಡಾ ಹತ್ತಕ್ಕಿಂತ ಹೆಚ್ಚಿಗೆ ಯಾವುದೇ ಕಡಿತ ಮಾಡತಕ್ಕದ್ದಲ್ಲ.   
(ಬಿ) 241ನೇ ಪ್ರಕರಣದ (3)ನೇ ಉಪ ಪ್ರಕರಣದ
(ಬಿ) ಖಂಡದ ಅಡಿಯಲ್ಲಿ ನಿಗದಿ ಮಾಡಿದ ಮೊಬಲಗಿಗಿಂತ ಕಡಿಮೆಯಾಗಿ ಮುಕ್ತಾಯ ಶಿಲ್ಕನ್ನು ಕಡಿಮೆ ಮಾಡತಕ್ಕದ್ದಲ್ಲ. 

No comments:

Post a Comment