ಗ್ರಾಮ ಪಂಚಾಯತಿಯಿಂದ ಅಥವಾ ಅದರ ವಿರುದ್ಧವಾಗಿ ಸ್ವತ್ತಿನ ಬಗೆಗಿನ ಕ್ಲೇಮುಗಳ ತೀರ್ಮಾನ.

inyatrust.in | Monday, January 16, 2023

 (1) ತತ್ಕಾಲದಲ್ಲಿ  ಜಾರಿಯಲ್ಲಿರುವ  ಯಾವುದೇ  ಕಾನೂನಿನ  ಅಡಿಯಲ್ಲಿ  ಕೃಷಿ  ಉದ್ದೇಶಕ್ಕಾಗಿ  ಮಾತ್ರ  ಸಾಮಾನ್ಯವಾಗಿ ಉಪಯೋಗಿಸುವ  ಭೂಮಿಗಳನ್ನು  ಹೊರತುಪಡಿಸಿ,  ಇತರ  ಭೂಮಿಯ  ನೋಂದಣಿಯಾಗಿರುವ  ಅಥವಾ ಆಗಬೇಕಾಗಿರುವ  ಯಾವುದೇ  ಗ್ರಾಮದಲ್ಲಿ,  ಗ್ರಾಮ  ಪಂಚಾಯತಿ  ಅಥವಾ  ಅದರ  ಪರವಾಗಿ  ಅಥವಾ  ಯಾವನೇ ವ್ಯಕ್ತಿಯು  ಗ್ರಾಮ  ಪಂಚಾಯತಿಯ  ವಿರುದ್ಧ  ಹಕ್ಕನ್ನು  ಕ್ಲೇಮು  ಮಾಡಿರುವಲ್ಲಿ,  ಅಸಿಸ್ಟೆಂಟ್  ಕವಿೂಷನರು  ಆ  ಬಗ್ಗೆ ಸೂಕ್ತ  ನೋಟೀಸ್  ನೀಡಿ  ವಿಚಾರಣೆ  ಮಾಡಿದ  ತರುರಾಯ  ಕ್ಲೇಮುಗಳನ್ನು  ನಿರ್ಧರಿಸಿ  ಆದೇಶವನ್ನು  ಮಾಡುವುದು ಕಾನೂನು ಸಮ್ಮತವಾಗಿರತಕ್ಕದ್ದು.   
(2) (1)ನೇ ಉಪ-ಪ್ರಕರಣದ ಅಡಿಯಲ್ಲಿ ಮಾಡಿದ ಆದೇಶದಿಂದ ಬಾಧಿತನಾದ ಯಾವನೇ ವ್ಯಕ್ತಿಯು ಡೆಪ್ಯುಟಿ ಕವಿೂಷನರಿಗೆ ಅಪೀಲು ಮಾಡಿಕೊಳ್ಳಬಹುದು ಮತ್ತು ಡೆಪ್ಯುಟಿ ಕವಿೂಷನರ ತೀರ್ಮಾನವು ಅಂತಿಮವಾಗಿರತಕ್ಕದ್ದು.
  (3)  ಯಾವನೇ  ವ್ಯಕ್ತಿಗೆ  ಗೊತ್ತುಪಡಿಸಲಾದ  ರೀತಿಯಲ್ಲಿ  ನೋಟೀಸನ್ನು  ನೀಡಿದ್ದರೆ,  ಈ  ಪ್ರಕರಣದ  ಅಡಿಯಲ್ಲಿ ಯಾವುದೇ  ವಿಚಾರಣೆ  ಅಥವಾ  ಆದೇಶದ  ಬಗ್ಗೆ  ಅವರಿಗೆ  ಸೂಕ್ತ  ನೋಟೀಸನ್ನು  ಕೊಡಲಾಗಿದೆ  ಎಂದು ಭಾವಿಸತಕ್ಕದ್ದು.   
212.    ಗ್ರಾಮ  ಪಂಚಾಯತಿಯ  ನಿಧಿ.  (1)  ಪ್ರತಿಯೊಂದು  ಗ್ರಾಮ  ಪಂಚಾಯತಿಗೆ  ಗ್ರಾಮ  ಪಂಚಾಯತಿ  ನಿಧಿ ಎಂದು ಕರೆಯಲಾಗುವ ಒಂದು ನಿಧಿ ಇರತಕ್ಕದ್ದು.   
(2) ಈ  ಕೆಳಕಂಡವು  ಗ್ರಾಮ  ಪಂಚಾಯತಿ  ನಿಧಿಯ  ಭಾಗವಾಗಿರತಕ್ಕದ್ದು  ಅಥವಾ  ಅದಕ್ಕೆ ಸಂದಾಯವಾಗುವಂಥವುಗಳಾಗಿರತಕ್ಕದ್ದು, ಎಂದರೆ:     (ಎ)  ಈ  ಅಧಿನಿಯಮದ  ಅಥವಾ  ಇತರ  ಯಾವುದೇ  ಅಧಿನಿಯಮದ  ಉಪಬಂಧಗಳ  ಅಡಿಯಲ್ಲಿ ಅಥವಾ ಇತರ ಯಾವುದೇ ಲೆಕ್ಕದಲ್ಲಿ ಸರ್ಕಾರದಿಂದ ಅಥವಾ ಜಿಲ್ಲಾ ಪಂಚಾಯತಿಯಿಂದ ಅಥವಾ ತಾಲ್ಲೂಕು  ಪಂಚಾಯತಿಯಿಂದ  ಗ್ರಾಮ  ಪಂಚಾಯತಿಗೆ  ನೀಡಬಹುದಾದ  ಅಥವಾ  ಮಂಜೂರು ಮಾಡಬಹುದಾದ ಮೊಬಲಗು;
    (ಬಿ)  ಗ್ರಾಮ  ಪಂಚಾಯತಿಯು  ವಿಧಿಸಿದ  ಯಾವುದೇ  ತೆರಿಗೆ,  ದರ  ಮತ್ತು  ಫೀಜಿನಿಂದ  ಬಂದ ಉತ್ಪತ್ತಿಗಳು;
    (ಸಿ)  ಸರ್ಕಾರದಿಂದ  ಅಥವಾ  ಯಾವುದೇ  ಪ್ರಾಧಿಕಾರ  ಅಥವಾ  ವ್ಯಕ್ತಿಯಿಂದ  ಸಾಲಗಳು  ಅಥವಾ ಕೊಡುಗೆಗಳ  ರೂಪದಲ್ಲಿ  ಅಥವಾ  ಕಾಣಿಕೆಯ  ರೂಪದಲ್ಲಿ  ಗ್ರಾಮ  ಪಂಚಾಯತಿಯಿಂದ ಸ್ವೀಕರಿಸಲಾದ ಎಲ್ಲಾ ಮೊತ್ತಗಳು;
    (ಡಿ)  ಗ್ರಾಮ ಪಂಚಾಯತಿಯ ಮಾಲೀಕತ್ವದ ಅಥವಾ ಅದರಲ್ಲಿ ನಿಹಿತವಾದ ಯಾವುದೇ ಸ್ಥಿರ ಅಥವಾ ಚರಸ್ವತ್ತಿನ  ಬಾಡಿಗೆ  ಅಥವಾ  ಅದರಿಂದ  ಬರುವ  ಇತರ  ಆದಾಯ  ಅಥವಾ  ಮಾರಾಟದಿಂದ ಬರುವ ಉತ್ಪತ್ತಿ; ಮತ್ತು
    (ಇ)  ಯಾವುದಾದರೂ ಮೂಲದಿಂದ ಬರುವ ಇತರ ಎಲ್ಲಾ ಮೊತ್ತಗಳು.   
(3)  ``ಗ್ರಾಮ  ಪಂಚಾಯತಿ  ನಿಧಿ''ಗೆ  ಜಮೆಯಾಗುವ  ಮೊತ್ತಗಳನ್ನು  ತಾಲ್ಲೂಕಿನ  ಸರ್ಕಾರಿ  ಖಜಾನೆಯಲ್ಲಿ ಅಥವಾ  ಕಾರ್ಯನಿರ್ವಾಹಕ  ಅಧಿಕಾರಿಯ  ಅನುಮೋದನೆಯೊಂದಿಗೆ  ಯಾವುದೇ  ಪಂಚಾಯತಿ  ಪ್ರದೇಶದಲ್ಲಿರುವ ಅಥವಾ ನೆರೆಯ ಪಂಚಾಯತಿ ಪ್ರದೇಶದಲ್ಲಿರುವ ಯಾವುದೇ ಅನುಸೂಚಿತ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕಿನಲ್ಲಿ ಇಡತಕ್ಕದ್ದು.   
213.  ಗ್ರಾಮ ಪಂಚಾಯತಿ ನಿಧಿಯನ್ನು ಮತ್ತು ಸ್ವತ್ತನ್ನು ಬಳಸುವುದು. (1) ಈ ಅಧಿನಿಯಮದ ಮತ್ತು ಅದರ ಮೇರೆಗೆ  ಮಾಡಲಾದ  ನಿಯಮಗಳಿಗೆ  ಮತ್ತು  ಸರ್ಕಾರ  ಮಾಡಬಹುದಾದಂಥ  ಸಾಮಾನ್ಯ  ಅಥವಾ  ವಿಶೇಷ ಆದೇಶಗಳಿಗೊಳಪಟ್ಟು,  ಈ  ಅಧಿನಿಯಮದ  ಮೇರೆಗೆ  ಗ್ರಾಮ  ಪಂಚಾಯತಿಯ  ಮಾಲೀಕತ್ವದ  ಅಥವಾ  ಅದರಲ್ಲಿ ನಿಹಿತವಾದ ಎಲ್ಲಾ ಸ್ವತ್ತನ್ನು ಮತ್ತು ಈ ಅಧಿನಿಯಮದ ಉಪಬಂಧಗಳ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ  ಕಾನೂನಿನ  ಮೇರೆಗೆ  ಅದಕ್ಕೆ  ಪ್ರಾಪ್ತವಾದ  ಎಲ್ಲಾ  ಮೊಬಲಗನ್ನು  58  ಮತ್ತು  59ನೇ  ಪ್ರಕರಣಗಳಲ್ಲಿ ನಿರ್ದಿಷ್ಟಪಡಿಸಿದ  ಉದ್ದೇಶಗಳಿಗೆ  ಮತ್ತು  ಈ  ಅಧಿನಿಯಮದಿಂದ  ಅಥವಾ  ಈ  ಅಧಿನಿಯಮದ  ಅಡಿಯಲ್ಲಿ  ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನಿಂದ ಅಥವಾ ಅದರ ಅಡಿಯಲ್ಲಿ ಗ್ರಾಮ ಪಂಚಾಯತಿಗೆ ಅಧಿಕಾರಗಳನ್ನು ವಹಿಸಿಕೊಡಲಾದ ಅಥವಾ ಕರ್ತವ್ಯಗಳನ್ನು ವಿಧಿಸಲಾದ ಇತರ ಎಲ್ಲಾ ಉದ್ದೇಶಗಳಿಗೆ ಬಳಸತಕ್ಕದ್ದು:   ಪರಂತು, ಗ್ರಾಮ ಪಂಚಾಯತಿಯ ನಿಧಿಯಿಂದ ಯಾವುದೇ ವೆಚ್ಚವನ್ನು, ಗ್ರಾಮ ಪಂಚಾಯತಿಯು ಬಜೆಟ್ನಲ್ಲಿ ಅದಕ್ಕಾಗಿ  ಏರ್ಪಾಟನ್ನು  ಮಾಡಿದ  ಅಥವಾ  ವಿದ್ಯುಕ್ತವಾಗಿ  ಅಂಗೀಕೃತವಾದ  ಪುನರ್ವಿನಿಯೋಗದ  ಮೂಲಕ ನಿಧಿಯನ್ನು ಪಡೆದ ಹೊರತು, ಗೊತ್ತುಪಡಿಸಿದಂಥ ಸಂದರ್ಭಗಳಲ್ಲಿ ಹೊರತಾಗಿ, ಮಾಡತಕ್ಕದ್ದಲ್ಲ:   ಅಲ್ಲದೆ, ಕಲ್ಯಾಣ ಚಟುವಟಿಕೆಗಳ ಉದ್ದೇಶದ ನಿಧಿಗಳಲ್ಲಿ ಶೇಕಡ ಇಪ್ಪತ್ತೈದಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣಕ್ಕಾಗಿ ಉಪಯೋಗಿಸತಕ್ಕದ್ದು.   
(2) ಗ್ರಾಮ ಪಂಚಾಯತಿ ನಿಧಿಯನ್ನು, ಈ ಮುಂದಿನ ಉದ್ದೇಶಗಳಿಗಾಗಿ ಕೂಡ ಉಪಯೋಗಿಸತಕ್ಕದ್ದು:     
  ಅಧ್ಯಕ್ಷ  ಮತ್ತು  ಉಪಾಧ್ಯಕ್ಷ,  ಅಧಿಕಾರಿಗಳು  ಮತ್ತು  ಸಿಬ್ಬಂದಿಗಳ  ವೇತನ  ಮತ್ತು  ಭತ್ಯೆಗಳು, ಗೊತ್ತುಪಡಿಸಬಹುದಾದಂಥ  ನಿಯಮಗಳಿಗೊಳಪಟ್ಟು  ಗ್ರಾಮ  ಪಂಚಾಯತಿ  ಅಥವಾ  ಅದರ  ಯಾವುದೇ  ಸಮಿತಿಯ ಸದಸ್ಯರ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಉಪವೇಶನ ಶುಲ್ಕಗಳನ್ನು ಸಂದಾಯ ಮಾಡಲು;     
 ಗ್ರಾಮ ಪಂಚಾಯತಿಯಿಂದ ಎತ್ತಲಾಗುವ ಯಾವುದೇ ಸಾಲದ ಮೇಲೆ ಬಾಕಿಯಿರುವ ಯಾವುವೇ ಮೊಬಲಗುಗಳನ್ನು ಸಂದಾಯ ಮಾಡಲು;    
  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪೂರ್ವ ಮಂಜೂರಾತಿಯೊಂದಿಗೆ, 1[ಮತ್ತು ಸರ್ಕಾರವು ನಿರ್ದಿಷ್ಟಪಡಿಸಿದ  ಮಾರ್ಗದರ್ಶನಗಳಿಗೆ  ಅನುಸಾರವಾಗಿ]1  ಸಾರ್ವಜನಿಕ  ಹಿತಾಸಕ್ತಿಯಲ್ಲಿ  ಅಂತಹ  ಸ್ವತ್ತನ್ನು  ಅಥವಾ ನಿಧಿಯನ್ನು ಬಳಸುವುದು ಅವಶ್ಯವಾದ ಯಾವುದೇ ಇತರ ಉದ್ದೇಶಕ್ಕೆ ಬಳಸಬಹುದು:
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಸೇರಿಸಲಾಗಿದೆ.
  ಪರಂತು,  ಸರ್ಕಾರದಿಂದ  ಅಥವಾ  ಯಾವನೇ  ವ್ಯಕ್ತಿಯಿಂದ  ಅಥವಾ  ಸ್ಥಳೀಯ  ಪ್ರಾಧಿಕಾರದಿಂದ  ಯಾವುದೇ ನಿರ್ದಿಷ್ಟ  ಕೆಲಸಕ್ಕಾಗಿ  ಅಥವಾ  ಉದ್ದೇಶಕ್ಕಾಗಿ  ಗ್ರಾಮ  ಪಂಚಾಯತಿಗೆ  ನೀಡಲಾದ  ಯಾವುದೇ  ಮೊಬಲಗನ್ನು  ಕೇವಲ ಅಂತಹ  ಕೆಲಸಕ್ಕಾಗಿ  ಅಥವಾ  ಉದ್ದೇಶಕ್ಕಾಗಿ  ಮತ್ತು  ಸರ್ಕಾರವು  ಈ  ಬಗ್ಗೆ  ಸಾಮಾನ್ಯವಾಗಿ  ಅಥವಾ  ವಿಶೇಷವಾಗಿ ನಿರ್ದಿಷ್ಟಪಡಿಸುವಂಥ ಸೂಚನೆಗಳ ಅನುಸಾರವಾಗಿ ಬಳಸತಕ್ಕದ್ದು.   
214.    ಗ್ರಾಮ  ಪಂಚಾಯತಿಯು  ಸಾಲಗಳನ್ನು  ಎತ್ತಬಹುದು  ಮತ್ತು  ಋಣಪರಿಹಾರ  ನಿಧಿಯನ್ನು  ರಚಿಸಬಹುದು. ಗ್ರಾಮ  ಪಂಚಾಯತಿಯು,  ಸರ್ಕಾರದ  ಪೂರ್ವ  ಮಂಜೂರಾತಿಯೊಂದಿಗೆ  ಮತ್ತು  ಕಾಲಕಾಲಕ್ಕೆ  ಅದು  ವಿಧಿಸುವ ಷರತ್ತಿಗೊಳಪಟ್ಟು  ಯಾವುದೇ  ಕಾಮಗಾರಿಯ  ನಿರ್ವಹಣೆಗಾಗಿ  ಅಥವಾ  ಈ  ಅಧಿನಿಯಮದ  ಯಾವುದೇ ಏಪರ್ಾಟನ್ನು  ನಿರ್ವಹಿಸುವ  ಉದ್ದೇಶಕ್ಕಾಗಿ  ಸಾಲಗಳನ್ನು  ಎತ್ತಬಹುದು  ಮತ್ತು  ಅಂತಹ  ಸಾಲಗಳ ಮರುಸಂದಾಯಕ್ಕಾಗಿ ಗೊತ್ತುಪಡಿಸಿದ ರೀತಿಯಲ್ಲಿ ಒಂದು ಋಣ ಪರಿಹಾರ ನಿಧಿಯನ್ನು ರಚಿಸಬಹುದು.
  215.    ತಾಲ್ಲೂಕು  ಪಂಚಾಯತಿಯು,  ಸ್ವತ್ತನ್ನು  ಆರ್ಜಿಸಬಹುದು,  ಧಾರಣ  ಮಾಡಬಹುದು  ಮತ್ತು  ವಿಲೆ ಮಾಡಬಹುದು.  ತಾಲ್ಲೂಕು  ಪಂಚಾಯತಿಯು,  ತಾನು  ಅಧಿಕಾರ  ಹೊಂದಿರುವಂಥ  ಪ್ರದೇಶದ  ಪರಿಮಿತಿಗಳೊಳಗೆ ಆಗಲಿ ಅಥವಾ ಅದರ ಹೊರಗೆ ಆಗಲಿ ಇರುವ ಸ್ಥಿರ ಮತ್ತು ಚರ ಸ್ವತ್ತನ್ನು ಆರ್ಜಿಸುವ, ಧಾರಣ ಮಾಡುವ ಮತ್ತು ವಿಲೆ  ಮಾಡುವ  ಅಥವಾ  ತನ್ನಲ್ಲಿ  ನಿಹಿತವಾಗಿರುವ  ಅಥವಾ  ತನ್ನಿಂದ  ಆರ್ಜಿತವಾಗಿರುವ  ಯಾವುದೇ  ಚರ  ಅಥವಾ ಸ್ಥಿರ  ಸ್ವತ್ತಿನ  ವರ್ಗಾವಣೆಗೆ  ಮತ್ತು  ಈ  ಅಧಿನಿಯಮದ  ಉದ್ದೇಶಕ್ಕಾಗಿ  ಅವಶ್ಯವಿರುವ  ಇತರ  ಎಲ್ಲಾ  ಕಾರ್ಯಗಳನ್ನು ಮಾಡಲು  ತಾಲ್ಲೂಕು  ಪಂಚಾಯತಿಗೆ  ಇರುವ  ಅಧಿಕಾರವು,  ಈ  ಸಂಬಂಧದಲ್ಲಿ  ಗೊತ್ತುಪಡಿಸಬಹುದಾದ ನಿಯಮಗಳಿಗೆ ಒಳಪಟ್ಟಿರತಕ್ಕದ್ದು:   
1.   2003ರ ಅಧಿನಿಯಮ ಸಂಖ್ಯೆ: 37ರ ಮೂಲಕ ದಿನಾಂಕ: 01-10-2003ರಿಂದ ಬಿಟ್ಟುಬಿಡಲಾಗಿದೆ.
  216.    ತಾಲ್ಲೂಕು  ಪಂಚಾಯತಿಯಲ್ಲಿ  ಸ್ವತ್ತನ್ನು  ನಿಹಿತಗೊಳಿಸುವುದು.  (1)  ಕಾಲಕಾಲಕ್ಕೆ  ತಾಲ್ಲೂಕು ಪಂಚಾಯತಿಯ  ಸಹಮತಿಯೊಂದಿಗೆ,  ಸಂದರ್ಬಾನುಸಾರ  ಸರ್ಕಾರ  ಅಥವಾ  ಜಿಲ್ಲಾ  ಪಂಚಾಯತಿಯಲ್ಲಿ ನಿಹಿತವಾಗಿರುವ  ಯಾವುದೇ  ಸ್ವತ್ತು,  ಷರತ್ತುಗಳೊಂದಿಗೆ  ಅಥವಾ  ಷರತ್ತುಗಳಿಲ್ಲದೆ  ತಾಲ್ಲೂಕು  ಪಂಚಾಯತಿಯಲ್ಲಿ ನಿಹಿತವಾಗಿರತಕ್ಕದ್ದೆಂದು ನಿರ್ದೆಶಿಸುವುದಕ್ಕೆ ಸರ್ಕಾರ ಅಥವಾ ಜಿಲ್ಲಾ ಪಂಚಾಯತಿ ಸಕ್ಷಮವಾಗಿರತಕ್ಕದ್ದು:   ಪರಂತು,  ಸಂದರ್ಭಾನುಸಾರ  ಸರ್ಕಾರ  ಅಥವಾ  ಜಿಲ್ಲಾ    ಪಂಚಾಯತಿಯ  ಪೂರ್ವಾನುಮೋದನೆಯಿಲ್ಲದೆ ತಾಲ್ಲೂಕು ಪಂಚಾಯತಿಯು ಮಾಡಿದ, ಸ್ಥಿರಸ್ವತ್ತಿನ ಯಾವುದೇ ಗುತ್ತಿಗೆ, ಮಾರಾಟ ಅಥವಾ ಇತರ ವರ್ಗಾವಣೆಯು ಮಾನ್ಯವಾಗತಕ್ಕದ್ದಲ್ಲ.   
(2) ತಾಲ್ಲೂಕು ಪಂಚಾಯತಿ ನಿಧಿಯಿಂದ ತಾಲ್ಲೂಕು ಪಂಚಾಯತಿಯು ಮಾಡಿಸಿದ ಪ್ರತಿಯೊಂದು ನಿರ್ಮಾಣ ಕಾಮಗಾರಿಯು ಅಂಥ ತಾಲ್ಲೂಕು ಪಂಚಾಯತಿಯಲ್ಲಿ ನಿಹಿತವಾಗತಕ್ಕದ್ದು:   ಪರಂತು, ಸರ್ಕಾರ ಯುಕ್ತವೆಂದು ಭಾವಿಸಿದರೆ ಆದೇಶ ಹೊರಡಿಸುವ ಮೂಲಕ ತಾಲ್ಲೂಕು ಪಂಚಾಯತಿಯಲ್ಲಿ ನಿಹಿತವಾಗಿರುವ  ಅಂಥ  ರಸ್ತೆ,  ಕಟ್ಟಡ  ಅಥವಾ  ಇತರ  ಕಾಮಗಾರಿಯು  ಸಂದರ್ಭಾನುಸಾರ  ಜಿಲ್ಲಾ  ಪಂಚಾಯತಿಗೆ ಅಥವಾ ಸರ್ಕಾರಕ್ಕೆ ವರ್ಗಾವಣೆಯಾಗಿದೆ ಅಥವಾ ಅದರಲ್ಲಿ ನಿಹಿತವಾಗಿದೆ ಎಂದು ಘೋಷಿಸಬಹುದು.   
217.  ಸ್ವತ್ತಿಗೆ ತಾಲ್ಲೂಕು ಪಂಚಾಯತಿಯು ಅಥವಾ ಅದರ ವಿರುದ್ಧವಾಗಿ ಮಾಡಿದ ಕ್ಲೇಮುಗಳ ತೀರ್ಮಾನ. (1) ತತ್ಕಾಲದಲ್ಲಿ  ಜಾರಿಯಲ್ಲಿರುವ  ಯಾವುದೇ  ಕಾನೂನಿನ  ಅಡಿಯಲ್ಲಿ  ಕೃಷಿ  ಉದ್ದೇಶಕ್ಕಾಗಿ  ಮಾತ್ರ  ಸಾಮಾನ್ಯವಾಗಿ ಉಪಯೋಗಿಸುವ  ಭೂಮಿಗಳನ್ನು  ಹೊರತುಪಡಿಸಿ,  ಇತರ  ಭೂಮಿಯ  ಮೋಜಣಿಯಾಗಿರುವ  ಅಥವಾ ಆಗಬೇಕಾಗಿರುವ ಯಾವುದೇ ತಾಲ್ಲೂಕಿನಲ್ಲಿ, ತಾಲ್ಲೂಕು ಪಂಚಾಯತಿ ಅಥವಾ ಅದರ ಪರವಾಗಿ ಅಥವಾ ಯಾವನೇ ವ್ಯಕ್ತಿಯು  ತಾಲ್ಲೂಕು  ಪಂಚಾಯತಿಯ  ವಿರುದ್ಧ  ಹಕ್ಕನ್ನು  ಕ್ಲೇಮು  ಮಾಡಿರುವಲ್ಲಿ,  ಡೆಪ್ಯುಟಿ  ಕವಿೂಷನರು  ಆ  ಬಗ್ಗೆ ಸೂಕ್ತ  ನೋಟೀಸು  ನೀಡಿ  ವಿಚಾರಣೆ  ಮಾಡಿದ  ತರುವಾಯ  ಕ್ಲೇಮುಗಳನ್ನು  ನಿರ್ಧರಿಸಿ  ಆದೇಶವನ್ನು  ಮಾಡುವುದು ಕಾನೂನು ಸಮ್ಮತವಾದುದಾಗಿರತಕ್ಕದ್ದು.   
(2)  (1)ನೇ  ಉಪಪ್ರಕರಣದ  ಅಡಿಯಲ್ಲಿ  ಮಾಡಿದ  ಆದೇಶದಿಂದ  ಬಾಧಿತನಾದ  ಯಾವನೇ  ವ್ಯಕ್ತಿಯು, ಕವಿೂಷನರಿಗೆ ಅಪೀಲು ಮಾಡಿಕೊಳ್ಳಬಹುದು ಮತ್ತು ಕವಿೂಶನರ ತೀರ್ಮಾನವು ಅಂತಿಮವಾಗಿರತಕ್ಕದ್ದು.   
(3)  ಯಾವನೇ  ವ್ಯಕ್ತಿಗೆ,  ಗೊತ್ತುಪಡಿಸಿರುವ  ರೀತಿಯಲ್ಲಿ  ನೋಟೀಸನ್ನು  ನೀಡಿದ್ದರೆ,  ಈ  ಪ್ರಕರಣದ  ಅಡಿಯಲ್ಲಿ ಯಾವುದೇ  ವಿಚಾರಣೆಯ  ಅಥವಾ  ಆದೇಶದ  ಬಗ್ಗೆ  ಅವನಿಗೆ  ಸೂಕ್ತ  ನೋಟೀಸು  ಕೊಡಲಾಗಿದೆ  ಎಂದು ಭಾವಿಸತಕ್ಕದ್ದು.   
218.  ತಾಲ್ಲೂಕು ಪಂಚಾಯತಿ ನಿಧಿ. (1) ಪ್ರತಿಯೊಂದು ತಾಲ್ಲೂಕು ಪಂಚಾಯತಿಗೆ ತಾಲ್ಲೂಕು ಪಂಚಾಯತಿ ನಿಧಿ ಎಂದು ಕರೆಯಲಾಗುವ ಒಂದು ನಿಧಿ ಇರತಕ್ಕದ್ದು.   
(2) ಈ  ಕೆಳಕಂಡವು  ತಾಲ್ಲೂಕು  ಪಂಚಾಯತಿ  ನಿಧಿಯ  ಭಾಗವಾಗಿರತಕ್ಕದ್ದು  ಅಥವಾ  ಅದಕ್ಕೆ ಸಂದಾಯವಾಗುವಂಥವುಗಳಾಗಿರತಕ್ಕದ್ದು, ಎಂದರೆ:     
(ಎ)  ಈ  ಅಧಿನಿಯಮದ  ಅಥವಾ  ಇತರ  ಯಾವುದೇ  ಅಧಿನಿಯಮದ  ಉಪಬಂಧಗಳ  ಅಡಿಯಲ್ಲಿ ಅಥವಾ  ಇತರ  ಯಾವುದೇ  ಲೆಕ್ಕದಲ್ಲಿ  ಸರ್ಕಾರವು  ಅಥವಾ  ಜಿಲ್ಲಾ  ಪಂಚಾಯತಿಯು  ತಾಲ್ಲೂಕು  ಪಂಚಾಯತಿಗೆ ನೀಡಬಹುದಾದ ಅಥವಾ ವರ್ಗಾಯಿಸಬಹುದಾದ ಮೊಬಲಗು;     
(ಬಿ)  ತಾಲ್ಲೂಕು  ಪಂಚಾಯತಿಯು  ವಿಧಿಸಿದ  ಯಾವುದೇ  ತೆರಿಗೆ,  ದರ  ಮತ್ತು  ಫೀಜಿನಿಂದ  ಬಂದ ಉತ್ಪತ್ತಿಗಳು;     
(ಸಿ)  ಸರ್ಕಾರದಿಂದ  ಅಥವಾ  ಇತರ  ಯಾವುದೇ  ಪ್ರಾಧಿಕಾರ  ಅಥವಾ  ವ್ಯಕ್ತಿಯಿಂದ  ಸಾಲಗಳು  ಅಥವಾ ಕೊಡುಗೆಗಳ  ರೂಪದಲ್ಲಿ  ಅಥವಾ  ಕಾಣಿಕೆಯ  ರೂಪದಲ್ಲಿ  ತಾಲ್ಲೂಕು  ಪಂಚಾಯತಿಯಿಂದ  ಸ್ವೀಕರಿಸಲಾದ  ಎಲ್ಲಾ ಮೊತ್ತಗಳು;     
(ಡಿ)  ತಾಲ್ಲೂಕು  ಪಂಚಾಯತಿಯ  ಮಾಲೀಕತ್ವದ  ಅಥವಾ  ಅದರಲ್ಲಿ  ನಿಹಿತವಾದ  ಯಾವುದೇ  ಸ್ಥಿರ ಅಥವಾ ಚರಸ್ವತ್ತಿನ ಬಾಡಿಗೆ ಅಥವಾ ಅದರಿಂದ ಬರುವ ಇತರ ಆದಾಯ ಅಥವಾ ಮಾರಾಟದಿಂದ ಬರುವ ಉತ್ಪತ್ತಿ; ಮತ್ತು     
(ಇ)  ಯಾವುದಾದರೂ ಮೂಲದಿಂದ ಬರುವ ಇತರ ಎಲ್ಲಾ ಮೊತ್ತಗಳು:   ಪರಂತು,  ಯಾವುದೇ  ನಿರ್ದಿಷ್ಟ  ಉದ್ದೇಶಕ್ಕಾಗಿ  ದತ್ತಿಯ  ರೂಪದಲ್ಲಿ  ಸ್ವೀಕರಿಸಿದ  ಯಾವುವೇ  ಮೊತ್ತಗಳು ತಾಲ್ಲೂಕು ಪಂಚಾಯತಿ ನಿಧಿಯ ಭಾಗವಾಗಿರತಕ್ಕದ್ದಲ್ಲ ಅಥವಾ ಅದಕ್ಕೆ ಸಂದಾಯಮಾಡತಕ್ಕದ್ದಲ್ಲ.   
(3)  ``ತಾಲ್ಲೂಕು  ಪಂಚಾಯತಿ  ನಿಧಿ''ಗೆ  ಜಮೆಯಾಗುವ  ಮೊತ್ತಗಳನ್ನು  ತಾಲ್ಲೂಕಿನ  ಸರ್ಕಾರಿ  ಖಜಾನೆಯಲ್ಲಿ ಇಡತಕ್ಕದ್ದು.   219.    ತಾಲ್ಲೂಕು  ಪಂಚಾಯತಿ  ನಿಧಿಯನ್ನು  ಮತ್ತು  ಸ್ವತ್ತನ್ನು  ಬಳಸುವುದು.  (1)  ಈ  ಅಧಿನಿಯಮದ  ಮತ್ತು ಅದರ  ಮೇರೆಗೆ  ಮಾಡಲಾದ  ನಿಯಮಗಳಿಗೆ  ಮತ್ತು  ಸರ್ಕಾರ  ಮಾಡಬಹುದಾದಂಥ  ಸಾಮಾನ್ಯ  ಅಥವಾ  ವಿಶೇಷ ಆದೇಶಗಳಿಗೊಳಪಟ್ಟು,  ಈ  ಅಧಿನಿಯಮದ  ಮೇರೆಗೆ  ತಾಲ್ಲೂಕು  ಪಂಚಾಯತಿಯ  ಮಾಲೀಕತ್ವದ  ಅಥವಾ  ಅದರಲ್ಲಿ ನಿಹಿತವಾದ ಎಲ್ಲಾ ಸ್ವತ್ತನ್ನು ಮತ್ತು ಈ ಅಧಿನಿಯಮದ ಉಪಬಂಧಗಳ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ  ಕಾನೂನಿನ  ಮೇರೆಗೆ  ಅದಕ್ಕೆ  ಪ್ರಾಪ್ತವಾದ  ಎಲ್ಲಾ  ಮೊಬಲಗನ್ನು  145  ಮತ್ತು  146ನೇ  ಪ್ರಕರಣಗಳಲ್ಲಿ ನಿರ್ದಿಷ್ಟಪಡಿಸಿದ  ಉದ್ದೇಶಗಳಿಗೆ  ಮತ್ತು  ಈ  ಅಧಿನಿಯಮದಿಂದ  ಅಥವಾ  ಈ  ಅಧಿನಿಯಮದ  ಅಡಿಯಲ್ಲಿ  ಅಥವಾ ತತ್ಕಾಲದಲ್ಲಿ  ಜಾರಿಯಲ್ಲಿರುವ  ಇತರ  ಯಾವುದೇ  ಕಾನೂನಿನಿಂದ  ಅಥವಾ  ಅದರ  ಅಡಿಯಲ್ಲಿ  ತಾಲ್ಲೂಕು ಪಂಚಾಯತಿಗೆ  ಅಧಿಕಾರಗಳನ್ನು  ವಹಿಸಿಕೊಡಲಾದ  ಅಥವಾ  ಕರ್ತವ್ಯಗಳನ್ನು  ವಿಧಿಸಲಾದ  ಇತರ  ಎಲ್ಲಾ ಉದ್ದೇಶಗಳಿಗೆ ಬಳಸತಕ್ಕದ್ದು:   
ಪರಂತು,  ತಾಲ್ಲೂಕು  ಪಂಚಾಯತಿಯ  ನಿಧಿಯಿಂದ  ಯಾವುದೇ  ವೆಚ್ಚವನ್ನು  ತಾಲ್ಲೂಕು  ಪಂಚಾಯತಿಯು, ಬಜೆಟ್ನಲ್ಲಿ  ಅದಕ್ಕಾಗಿ  ಏರ್ಪಾಟನ್ನು  ಮಾಡಿದ  ಅಥವಾ  ವಿದ್ಯುಕ್ತವಾಗಿ  ಅಂಗೀಕೃವಾದ  ಪುನರ್ವಿನಿಯೋಗದ ಮೂಲಕ ನಿಧಿಯನ್ನು ಪಡೆದ ಹೊರತು, ಗೊತ್ತುಪಡಿಸಿದಂಥ ಸಂದರ್ಭಗಳಲ್ಲಿ ಹೊರತಾಗಿ, ಮಾಡತಕ್ಕದ್ದಲ್ಲ:   ಅಷ್ಟೇ  ಅಲ್ಲದೆ,  ಕಲ್ಯಾಣ  ಚಟುವಟಿಕೆಗಳ  ಉದ್ದೇಶದ  ನಿಧಿಗಳಲ್ಲಿ  ಶೇಕಡ  ಇಪ್ಪತ್ತಕ್ಕಿಂತ  ಕಡಿಮೆ  ಇರದಷ್ಟು ಮೊತ್ತವನ್ನು ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣಕ್ಕಾಗಿ ಉಪಯೋಗಿಸತಕ್ಕದ್ದು.   
(2) ತಾಲ್ಲೂಕು ಪಂಚಾಯತಿ ನಿಧಿಯನ್ನು ಈ ಮುಂದಿನ ಉದ್ದೇಶಗಳಿಗಾಗಿ ಕೂಡ ಉಪಯೋಗಿಸತಕ್ಕದ್ದು:     
  ಅಧ್ಯಕ್ಷ  ಮತ್ತು  ಉಪಾಧ್ಯಕ್ಷ,  ಅಧಿಕಾರಿಗಳು  ಮತ್ತು  ಸಿಬ್ಬಂದಿಗಳ  ವೇತನ  ಮತ್ತು  ಭತ್ಯೆಗಳು,  ಈ ಸಂಬಂಧದಲ್ಲಿ  ಸರ್ಕಾರವು  ಮಾಡಿರುವ  ನಿಯಮಗಳಿಗೊಳಪಟ್ಟು  ತಾಲ್ಲೂಕು  ಪಂಚಾಯತಿ  ಅಥವಾ  ಅದರ ಯಾವುದೇ ಸಮಿತಿಯ ಸದಸ್ಯರ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಉಪವೇಶನ ಶುಲ್ಕಗಳನ್ನು ಸಂದಾಯ ಮಾಡಲು;     
  ತಾಲ್ಲೂಕು  ಪಂಚಾಯತಿಯು  ಎತ್ತುವ  ಯಾವುದೇ  ಸಾಲದ  ಮೇಲೆ  ಬಾಕಿಯಿರುವ  ಯಾವುದೇ ಮೊಬಲಗನ್ನು ಸಂದಾಯ ಮಾಡಲು;     
 1[ಸರ್ಕಾರದ]1  ಪೂರ್ವ  ಮಂಜೂರಾತಿಯೊಂದಿಗೆ,  ಸಾರ್ವಜನಿಕ  ಹಿತಾಸಕ್ತಿಯಲ್ಲಿ  ಅಂತಹ  ಸ್ವತ್ತನ್ನು ಅಥವಾ ನಿಧಿಯನ್ನು ಬಳಸುವುದು ಅವಶ್ಯವಾದ ಯಾವುದೇ ಇತರ ಉದ್ದೇಶಕ್ಕೆ ಬಳಸಬಹುದು:
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
  ಪರಂತು,  ಸರ್ಕಾರದಿಂದ  ಅಥವಾ  ಯಾವನೇ  ವ್ಯಕ್ತಿಯಿಂದ  ಅಥವಾ  ಸ್ಥಳೀಯ  ಪ್ರಾಧಿಕಾರದಿಂದ  ಯಾವುದೇ ನಿರ್ದಿಷ್ಟ  ಕೆಲಸಕ್ಕಾಗಿ  ಅಥವಾ  ಉದ್ದೇಶಕ್ಕಾಗಿ  ತಾಲ್ಲೂಕು  ಪಂಚಾಯತಿಗೆ  ನೀಡಲಾದ  ಯಾವುದೇ  ಮೊಬಲಗನ್ನು ಕೇವಲ  ಅಂತಹ  ಕೆಲಸಕ್ಕಾಗಿ  ಅಥವಾ  ಉದ್ದೇಶಕ್ಕಾಗಿ  ಮತ್ತು  ಸರ್ಕಾರವು  ಈ  ಬಗ್ಗೆ  ಸಾಮಾನ್ಯವಾಗಿ  ಅಥವಾ ವಿಶೇಷವಾಗಿ ನಿರ್ದಿಷ್ಟಪಡಿಸುವಂತಹ ಸೂಚನೆಗಳ ಅನುಸಾರವಾಗಿ ಬಳಸತಕ್ಕದ್ದು.  

No comments:

Post a Comment