ನಿಷೇಧ ಮುಕ್ತಾಯ ಚಿಹ್ನೆ ಈ ಚಿಹ್ನೆಯು ನಿಷೇಧ ಮುಕ್ತಾಯಗೊಂಡಿರುವ ಬಗ್ಗೆ ತಿಳಿಸುತ್ತದೆ

inyatrust.in | Wednesday, January 11, 2023

 2.  ಎಚ್ಚರಿಕೆ ಚಿಹ್ನೆಗಳು  
ಎಲ್ಲಾ  ಎಚ್ಚರಿಕೆ  ಚಿಹ್ನೆಗಳು  ಕೆಂಪು  ಬಣ್ಣದಿಂದ  ಕೂಡಿದ್ದು,  ತ್ರಿಭುಜಾಕಾರವಾಗಿದ್ದು,  ಮೇಲ್ಮುಖವಾಗಿರುತ್ತವೆ.  ರಸ್ತೆಯ  ಮೇಲೆ ನಿರ್ದಿಷ್ಟ ಅಂತರದಲ್ಲಿ ಸಂದರ್ಭಕ್ಕೆ ತಕ್ಕಂತೆ ಎಚ್ಚರಿಕೆಗಾಗಿ ಹಾಕಲಾಗಿರುವ ಚಿಹ್ನೆಗಳಾಗಿವೆ.  
 ಕೂಡುರಸ್ತೆಗಳಲ್ಲಿ ರಸ್ತೆಯ ಪ್ರಾಧಾನ್ಯತೆ  
ಈ  ಕೆಳಗಿನ  ಸಂಚಾರ  ಚಿಹ್ನೆಗಳು  ಕೂಡುರಸ್ತೆಗಳ  ಇರುವಿಕೆಯನ್ನು  ಸೂಚಿಸುತ್ತವೆ.  ಇದರಲ್ಲಿ  ದಪ್ಪ  ಗೆರೆಗಳು  ಮುಖ್ಯರಸ್ತೆಯನ್ನು ಸೂಚಿಸುತ್ತಿದ್ದು,  ಮುಖ್ಯರಸ್ತೆಯ  ವಾಹನಗಳ  ಸಂಚರಣೆಗೆ  ಮೊದಲ  ಆದ್ಯತೆಯನ್ನು  ನೀಡುವುದು  ಈ  ಸಂಚಾರ  ನಿಯಮದ ಮುಖ್ಯ ಉದ್ದೇಶವಾಗಿರುತ್ತದೆ.
ತಿರುವು ಚಿಹ್ನೆಗಳು
ಈ  ಕೆಳಗಿನ  ಸಂಚಾರ  ಚಿಹ್ನೆಗಳು  ರಸ್ತೆಯಲ್ಲಿ  ವಾಹನ  ಚಾಲನೆ  ಮಾಡುವಾಗ  ಮುಂದೆ  ತಿರುವುಗಳಿರುವುದನ್ನು ಮುಂಜಾಗ್ರತೆಯಾಗಿ ಸೂಚಿಸುತ್ತವೆ.  
ಜನರು ಕಾರ್ಯನಿರತರಾಗಿದ್ದಾರೆ (ರಸ್ತೆ ಕಾಮಗಾರಿ ಚಿಹ್ನೆ)  
ಈ ಚಿಹ್ನೆಗಳು ಚಾಲಕರುಗಳಿಗೆ, ರಸ್ತೆಯಲ್ಲಿ / ರಸ್ತೆಯ ಬದಿಯಲ್ಲಿ ನಿರ್ಮಾಣ ಅಥವಾ ಅಭಿವೃಧ್ಧಿ ಕಾಮಗಾರಿಗಳು ಪ್ರಗತಿಯಲ್ಲಿರುವುದನ್ನು ಸೂಚಿಸುತ್ತವೆ.  
ಹೆಚ್ಚು ಆತಂಕದ ಪರಿಸ್ಥಿತಿಯಲ್ಲಿ ರಸ್ತೆಯನ್ನು ದಾಟುವ ಸಂದರ್ಭಗಳು  
ಪಾದಚಾರಿಗಳ ರಸ್ತೆ ದಾಟುವಿಕೆ  
ಈ ಚಿಹ್ನೆಯು ವಾಹನ ಚಾಲಕರಿಗೆ, ಮುಂದೆ ಪಾದಚಾರಿಗಳು ರಸ್ತೆ ದಾಟುತ್ತಿರುವುದನ್ನು ಸೂಚಿಸುತ್ತದೆ.   
ಅಶಕ್ತರು ರಸ್ತೆ ದಾಟುವಿಕೆ  
ಈ ಚಿಹ್ನೆಯು ವಾಹನ ಚಾಲಕರಿಗೆ, ಮುಂದೆ ವಯೋವೃದ್ದರು ಮತ್ತು ಅಶಕ್ತ ಪಾದಚಾರಿಗಳು ರಸ್ತೆ ದಾಟುತ್ತಿರುವುದನ್ನು ಸೂಚಿಸುತ್ತದೆ.   
ಸೈಕಲ್ ರಸ್ತೆ ದಾಟುವಿಕೆ
ಈ ಚಿಹ್ನೆಯು ವಾಹನ ಚಾಲಕರಿಗೆ, ಮುಂದೆ ಸೈಕಲ್ ಸವಾರರು ರಸ್ತೆ ದಾಟುತ್ತಿರುಮದನ್ನು ಅಥವಾ ಯಾವುದೇ ಸಂಚಾರ ಸಿಗ್ನಲ್ಗಳ ಮೂಲಕ ನಿಯಂತ್ರಿಸದಿರುವ ಮಾರ್ಗ ಇರುವುದನ್ನು ಸೂಚಿಸುತ್ತದೆ.  
ಪ್ರಾಣಿಗಳ ಬಗ್ಗೆ ಎಚ್ಚರಿಕೆ  
ಈ ಚಿಹ್ನೆಯು ಮುಂದೆ ಪ್ರಾಣಿಗಳು ರಸ್ತೆಯಲ್ಲಿ ಓಡಾಡುವ ಬಗೆಗಿನ ಸೂಚನೆಗಳನ್ನು ನೀಡುತ್ತದೆ.   
ರೈಲ್ವೆ ಲೆವೆಲ್ ಕ್ರಾಸಿಂಗ್  
ಈ ಚಿಹ್ನೆಯು ವಾಹನ ಚಾಲಕರುಗಳಿಗೆ, ಮುಂದೆ ರಸ್ತೆಯಲ್ಲಿ ರೈಲ್ವೆ ಮತ್ತು ಟ್ರ್ಯಾಮ್ ಕ್ರಾಸ್ಗಳಿರುವುದನ್ನು ಸೂಚಿಸುತ್ತದೆ. ಸದರಿ ಕ್ರಾಸ್ಗಳಿರುವ ಅಂತರವನ್ನು ನಮೂದಿಸಲಾಗಿರುತ್ತದೆ.  
ಗಾರ್ಡ್‍‍ಗಳಿಲ್ಲದ ರೈಲ್ವೆ ಕ್ರಾಸಿಂಗ್  
ಮುಂದೆ ರಸ್ತೆಯಲ್ಲಿ ಗೇಟ್/ಬ್ಯಾರಿಕೇಡ್ಸ್ ಅಳವಡಿಸಿಲ್ಲದ ರೈಲ್ವೆ ಕ್ರಾಸಿಂಗ್ ಇರುವುದನ್ನು ಚಾಲಕರಿಗೆ ಈ ಚಿಹ್ನೆಯು ಸೂಚಿಸುತ್ತದೆ.   
3.  ಉಪಯುಕ್ತ ಮಾಹಿತಿ ನೀಡುವ ಚಿಹ್ನೆಗಳು
ಚಾಲಕರಿಗೆ/ರಸ್ತೆ ಬಳಕೆದಾರರಿಗೆ ಅಗತ್ಯ ಮಾಹಿತಿಗಳನ್ನು ಮಾಹಿತಿ ಸೂಚನಾ ಫಲಕಗಳು ಒದಗಿಸುತ್ತವೆ.  
 ಸಂಚಾರ  ಸಿಗ್ನಲ್ ದೀಪಗಳು   
ಸಂಚಾರ  ಸಿಗ್ನಲ್ದೀಪಗಳು  ಸಂಚಾರ  ನಿಯಂತ್ರಣದ  ಒಂದು  ಪ್ರಮುಖ ಯಂತ್ರವಾಗಿದೆ.  ವಾಹನ  ಸಂಚಾರಕ್ಕೆ  ಮತ್ತು  ಪಾದಚಾರಿಗಳ  ಓಡಾಟದ ನಿರ್ವಹಣೆಗೆ ಸಿಗ್ನಲ್ಗಳು ಇರುತ್ತವೆ. ಸಾಮಾನ್ಯವಾಗಿ ಜಂಕ್ಷನ್ಗಳಲ್ಲಿ ಸಂಚಾರ ಸಿಗ್ನಲ್  ವ್ಯವಸ್ಥೆಯನ್ನು  ಕೆಂಪು-ಹಸಿರು-ಹಳದಿ  ಬಣ್ಣದ  ದೀಪಗಳಿಂದ ನಿರ್ವಹಣೆ ಮಾಡಲಾಗುತ್ತಿದೆ.
1.  ಕೆಂಪು  ಸಿಗ್ನಲ್  ದೀಪ:  ಕೆಂಪು  ಸಿಗ್ನಲ್ದೀಪದ  ಸೂಚನೆ  ಬಂದಾಗ ವಾಹನಗಳು ಚಲಿಸಕೂಡದು. ಸ್ಟಾಪ್ಲೈನನ್ನು ಕ್ರಾಸ್ ಮಾಡಬಾರದು.   
2.  ಹಳದಿ  ಸಿಗ್ನಲ್  ದೀಪ:  
ಹಳದಿ  ಸಿಗ್ನಲ್  ದೀಪವು  ಚಲಿಸುತ್ತಿರುವ ವಾಹನಗಳನ್ನು  ನಿಲ್ಲಿಸಲು  ಮತ್ತು  ನಿಂತಿರುವ  ವಾಹನಗಳನ್ನು  ಚಲಿಸಲು ಸಿದ್ಧಗೊಳಿಸಿಕೊಳ್ಳುವುದನ್ನು ಸೂಚಿಸುತ್ತದೆ.  
3.  ಹಸಿರು  ಸಿಗ್ನಲ್  ದೀಪ:  ಹಸಿರು  ಸಿಗ್ನಲ್  ದೀಪದ  ಸೂಚನೆ  ಬಂದಾಗ  ವಾಹನಗಳು  ಅಗತ್ಯ  ಎಚ್ಚರಿಕೆಯೊಡನೆ ಚಲಿಸಬಹುದು.  
 ಪಾದಚಾರಿ ಸಿಗ್ನಲ್ ದೀಪಗಳು  
ಜಂಕ್ಷನ್ಗಳಲ್ಲಿ ಮತ್ತು ರಸ್ತೆ ದಾಟುವ ಸ್ಥಳಗಳಲ್ಲಿ ಕೆಂಪು ಮತ್ತು ಹಸಿರು ಬಣ್ಣದಲ್ಲಿ ನಿಂತಿರುವ ವ್ಯಕ್ತಿಯ  ಚಿತ್ರವನ್ನೊಳಗೊಂಡಿರುತ್ತವೆ.  ಪಾದಚಾರಿ  ಸಿಗ್ನಲ್ನಲ್ಲಿ  ಕೆಂಪು  ಬ್ಲಿಂಕರ್  ಬರುತ್ತಿದ್ದರೆ ಆ ದಿಕ್ಕಿನಲ್ಲಿ ಪಾದಚಾರಿಗಳು ರಸ್ತೆಯನ್ನು ದಾಟಕೂಡದು. ಹಸಿರು ಪಾದಚಾರಿ ಸಿಗ್ನಲ್ ದೀಪ ಬಂದಾಗ ಮಾತ್ರ ರಸ್ತೆ ದಾಟಬೇಕಾಗುತ್ತದೆ.
 ಸಂಚಾರ ಸುರಕ್ಷತೆಯ ನಿಯಮಗಳ ಪಾಲನೆ 

No comments:

Post a Comment