ಚುನಾವಣಾ ವೆಚ್ಚದ ಲೆಕ್ಕ ಮತ್ತು ಆ ವೆಚ್ಚದ ಗರಿಷ್ಠ ಮೊತ್ತ.-

inyatrust.in | Monday, January 23, 2023

 (1)  ಈ  ಅಧಿನಿಯಮದ ಅಡಿಯಲ್ಲಿ  ಜಿಲ್ಲಾ  ಪಂಚಾಯತಿ  ಅಥವಾ  ತಾಲ್ಲೂಕು  ಪಂಚಾಯಿತಿ  ಚುನಾವಣೆಯಲ್ಲಿ  ಪ್ರತಿಯೊಬ್ಬ  ಅಭ್ಯರ್ಥಿಯು ತಾನಾಗಿಯೇ ಆಗಲಿ ಅಥವಾ ತನ್ನ ಚುನಾವಣಾ ಏಜಂಟಿನಿಂದಾಗಲಿ, ಎಲ್ಲಾ ವೆಚ್ಚಗಳಿಗೆ, ತನ್ನನ್ನು ನಾಮನಿರ್ದೇಶನ ಮಾಡಿದ  ದಿನಾಂಕದಿಂದ  ಅದರ  ಫಲಿತಾಂಶವು  ಘೋಷಿತವಾದ  ದಿನಾಂಕದ  ನಡುವೆ,  ಎರಡೂ  ದಿನಾಂಕಗಳು ಸೇರಿದಂತೆ,  ಚುನಾವಣೆಯ  ಸಂಬಂಧದಲ್ಲಿ  ತಾನು  ಅಥವಾ  ತನ್ನ  ಚುನಾವಣಾ  ಏಜೆಂಟನು  ವಹಿಸಿದ  ಅಥವಾ ಪ್ರಾಧೀಕರಿಸಿದ ಎಲ್ಲ ವೆಚ್ಚಗಳ ಬಗ್ಗೆ ಪ್ರತ್ಯೇಕವಾದ ಮತ್ತು ಸರಿಯಾದ ಲೆಕ್ಕವನ್ನು ಇಡತಕ್ಕದ್ದು.
(2)  (1)ನೇ  ಉಪ  ಪ್ರಕರಣದಲ್ಲಿ  ಉಲ್ಲೇಖಿಸಿದ  ಅಭ್ಯರ್ಥಿಯ  ಚುನಾವಣೆಯ  ಸಂಬಂಧದಲ್ಲಿ  ಒಂದು  ರಾಜಕೀಯ ಪಕ್ಷವು  ಅಥವಾ  ಯವುದೇ  ಇತರ  ಅಸೋಶಿಯೇಷನ್  ಅಥವಾ  ನಿಕಾಯ  ಅಥವಾ  ವ್ಯಕ್ತಿಗಳು  ಅಥವಾ  ಯಾವೊಬ್ಬ ವ್ಯಕ್ತಿಯು (ಅಭ್ಯರ್ಥಿ ಅಥವಾ ಆತನ ಚುನಾವಣಾ ಏಜೆಂಟನನ್ನು ಹೊರತುಪಡಿಸಿ) ವಹಿಸಿದ ಅಥವಾ ಪ್ರಾಧೀಕರಿಸಿದ ಯಾವುದೇ  ವೆಚ್ಚವನ್ನು  ಅಭ್ಯರ್ಥಿಯು  ಅಥವಾ  ಆತನ  ಚುನಾವಣಾ  ಏಜೆಂಟನು  (1)ನೇ  ಉಪ  ಪ್ರಕರಣದ ಉದ್ದೇಶಕ್ಕಾಗಿ ಚುನಾವಣೆಗೆ ಸಂಬಂಧಿಸಿದಂತೆ ವಹಿಸಿದ ಅಥವಾ ಪ್ರಾಧೀಕರಿಸಿದ ವೆಚ್ಚವೆಂದು ಭಾವಿಸತಕ್ಕದ್ದಲ್ಲ.    
ವಿವರಣೆ  1:  ಈ  ಉಪಪ್ರಕರಣದ  ಉದ್ದೇಶಕ್ಕಾಗಿ  ರಾಜಕೀಯ  ಪಕ್ಷವು,  ತತ್ಕಾಲದಲ್ಲಿ  ಜಾರಿಯಲ್ಲಿರುವ  1968ರ ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶದಲ್ಲಿನ ಅರ್ಥವನ್ನೇ ಹೊಂದಿರತಕ್ಕದ್ದು.    
ವಿವರಣೆ 2: ಸಂದೇಹಗಳ ನಿವಾರಣೆಗಾಗಿ, ಸರ್ಕಾರದ ಸೇವೆಯಲ್ಲಿರುವ ಅಥವಾ ಜಿಲ್ಲಾ ಪಂಚಾಯಿತಿ ಅಥವಾ ಸಂದರ್ಭಾನುಸಾರವಾಗಿ  ತಾಲ್ಲೂಕು  ಪಂಚಾಯಿತಿ  ಸೇವೆಯಲ್ಲಿರುವ  ಯಾವೊಬ್ಬ  ವ್ಯಕ್ತಿಯು,  (ಅಭ್ಯರ್ಥಿಯು  ಧಾರಣ ಮಾಡಿದ  ಹುದ್ದೆಯ  ಕಾರಣದಿಂದಾಗಲಿ  ಅಥವಾ  ಇತರ  ಯಾವುದೇ  ಕಾರಣದಿಂದಾಗಲಿ)  ಯಾವೊಬ್ಬ  ಅಭ್ಯರ್ಥಿ ಅಥವಾ  ಅವನ  ಚುನಾವಣಾ  ಏಜೆಂಟ್  ಅಥವಾ  ಅಭ್ಯರ್ಥಿಯ  ಅಥವಾ  ಅವನ  ಚುನಾವಣಾ  ಏಜೆಂಟನ ಸಮ್ಮತಿಯೊಡನೆ ಕಾರ್ಯನಿರ್ವಹಿಸುವ ಇತರ ಯಾವೊಬ್ಬ ವ್ಯಕ್ತಿಗಾಗಿ, ವ್ಯಕ್ತಿಗೆ, ಅಥವಾ ವ್ಯಕ್ತಿಯ ಸಂಬಂಧದಲ್ಲಿ ತನ್ನ ಅಧಿಕೃತ  ಕರ್ತವ್ಯದ  ನೆರವೇರಿಕೆಯಲ್ಲಿ  ಅಥವಾ  ನೆರವೇರಿಕೆ  ಎಂದು  ತಾತ್ಪರ್ಯವಾಗುವಲ್ಲಿ  ಮಾಡಿದ  ಯಾವುದೇ ವ್ಯವಸ್ಥೆ,  ಒದಗಿಸಿದ  ಸೌಲಭ್ಯಗಳು  ಅಥವಾ  ಮಾಡಿದ  ಯಾವುದೇ  ಇತರ  ಕಾರ್ಯ  ಅಥವಾ  ಕೃತ್ಯದ  ಸಂಬಂಧದಲ್ಲಿ ವಹಿಸಿದ  ಯಾವುದೇ  ವೆಚ್ಚವನ್ನು,  ಈ  ಪ್ರಕರಣದ  ಉದ್ದೇಶಕ್ಕಾಗಿ  ಒಬ್ಬ  ಅಭ್ಯರ್ಥಿಯು  ಅಥವಾ  ಚುನಾವಣಾ ಏಜೆಂಟನು,  ಚುನಾವಣೆಯ  ಸಂಬಂಧದಲ್ಲಿ  ವಹಿಸಿದ  ಅಥವಾ  ಪ್ರಾಧೀಕರಿಸಿದ  ವೆಚ್ಚವೆಂಬುದಾಗಿ  ಭಾವಿಸತಕ್ಕದ್ದಲ್ಲ ಎಂದು ಈ ಮೂಲಕ ಘೋಷಿಸಲಾಗಿದೆ.
(3) ಲೆಕ್ಕಪತ್ರವು, ನಿಯಮಿಸಬಹುದಾದ ಅಂತಹ ವಿವರಗಳನ್ನು ಒಳಗೊಂಡಿರತಕ್ಕದ್ದು.
(4) ಸದರಿ ಒಟ್ಟು ವೆಚ್ಚವು ನಿಯಮಿಸಬಹುದಾದ ಅಂತಹ ಮೊತ್ತವನ್ನು ಮೀರತಕ್ಕದ್ದಲ್ಲ.]1
1. 2017ರ ಅಧಿನಿಯಮ ಸಂಖ್ಯೆ 37ರ ಮೂಲಕ ದಿನಾಂಕ: 12.07.2017ರಿಂದ ಸೇರಿಸಲಾಗಿದೆ.      308ಬಿ.  ರಿಟರ್ನಿಂಗ್  ಆಫೀಸರನಿಗೆ  ಲೆಕ್ಕಪತ್ರಗಳನ್ನು  ಸಲ್ಲಿಸುವಿಕೆ.  ಈ  ಅಧಿನಿಯಮದ  ಅಡಿಯಲ್ಲಿ  ಜಿಲ್ಲಾ ಪಂಚಾಯತ್ಗೆ  ಅಥವಾ  ತಾಲ್ಲೂಕು  ಪಂಚಾಯತ್ಗೆ  ಸ್ಪರ್ಧೆಸಿರುವ  ಪ್ರತಿಯೊಬ್ಬ  ಅಭ್ಯರ್ಥಿಯು,  ಗೆದ್ದ  ಅಭ್ಯರ್ಥಿಯ ಚುನಾವಣೆಯ ದಿನಾಂಕದಿಂದ ಅಥವಾ ಒಂದು ವೇಳೆ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಗೆದ್ದ ಅಭ್ಯರ್ಥಿಗಳಿದ್ದರೆ ಮತ್ತು ಚುನಾವಣಾ ದಿನಾಂಕಗಳು ಬೇರೆ ಬೇರೆಯಾಗಿದ್ದರೆ, ಆ ಎರಡು ದಿನಾಂಕಗಳಲ್ಲಿ ತರುವಾಯದ ದಿನಾಂಕದಿಂದ ಮೂವತ್ತು  ದಿನಗಳೊಳಗೆ  ಈ  ಅಧಿನಿಯಮದ  ಅಡಿಯಲ್ಲಿ  ಒಂದು  ಚುನಾವಣೆಗೆ  ನೇಮಿಸಲಾದ  ರಿಟರ್ನಿಂಗ್ ಆಫೀಸರನಿಗೆ, 308ಎ ಪ್ರಕರಣದ ಅಡಿಯಲ್ಲಿ ತಾನು ಅಥವಾ ತನ್ನ ಚುನಾವಣಾ ಏಜಂಟನು ಇಟ್ಟಿರುವ ಲೆಕ್ಕಪತ್ರಗಳ ಯಥಾ ಪ್ರತಿಯಾಗಿರುವ ತನ್ನ ಚುನಾವಣಾ ವೆಚ್ಚದ ಲೆಕ್ಕಪತ್ರವನ್ನು ಸಲ್ಲಿಸತಕ್ಕದ್ದು.    
308ಸಿ. ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಸಲ್ಲಿಸುವದಕ್ಕೆ ತಪ್ಪುವುದು. ಯಾವೊಬ್ಬ ವ್ಯಕ್ತಿಯು,   
(ಎ) ಈ  ಅಧಿನಿಯಮದ  ಅಡಿಯಲ್ಲಿ  ಅಗತ್ಯಪಡಿಸಲಾದಂಥ  ಸಮಯದೊಳಗೆ  ಮತ್ತು  ವಿಧಾನದಲ್ಲಿ ಚುನಾವಣಾ ವೆಚ್ಚದ ಲೆಕ್ಕಪತ್ರಗಳನ್ನು ಸಲ್ಲಿಸಲು ತಪ್ಪಿದ್ದಾನೆಂದು, ಮತ್ತು    
(ಬಿ) ತಪ್ಪಿರುವುದಕ್ಕೆ ಸರಿಯಾದ ಕಾರಣ ಅಥವಾ ಸಮರ್ಥನೆಯಿಲ್ಲವೆಂದು,     ಚುನಾವಣಾ  ಆಯೋಗಕ್ಕೆ  ಮನವರಿಕೆಯಾದರೆ,  ರಾಜ್ಯ  ಚುನಾವಣಾ  ಆಯೋಗವು  ರಾಜ್ಯ  ಪತ್ರದಲ್ಲಿ ಪ್ರಕಟಿತವಾದ  ಆದೇಶದ  ಮೂಲಕ  ಆತನನ್ನು  ಅನರ್ಹನೆಂದು  ಘೋಷಿಸತಕ್ಕದ್ದು  ಮತ್ತು  ಅಂತಹ  ಯಾವೊಬ್ಬ ವ್ಯಕ್ತಿಯು ಆದೇಶದ ದಿನಾಂಕದಿಂದ ಆರು ವರ್ಷಗಳ ಅವಧಿಗಾಗಿ ಅನರ್ಹನಾಗತಕ್ಕದ್ದು.   
308ಡಿ.  ರಿಟರ್ನಿಂಗ್ ಆಫೀಸರ್ ಮುಂತಾದವರು ರಾಜ್ಯ ಚುನಾವಣಾ ಆಯೋಗಕ್ಕೆ ಪ್ರತಿ ನಿಯೋಜನೆಯ ಮೇಲೆ ಇರುವುದಾಗಿ ಭಾವಿಸತಕ್ಕದ್ದು. ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಯ ಎಲ್ಲಾ ಚುನಾವಣೆಗಳಲ್ಲಿ,  ಮತದಾರರ  ಪಟ್ಟಿಯನ್ನು  ತಯಾರಿಸುವ,  ಪರಿಷ್ಕರಿಸುವ  ಮತ್ತು  ತಿದ್ದುವ  ಮತ್ತು  ಚುನಾವಣೆ ನಡೆಸುವ  ಸಂಬಂಧದಲ್ಲಿ  ನಿಯೋಜಿತರಾದ  ರಿಟರ್ನಿಂಗ್  ಆಫೀಸರ್ಗಳು,  ಪ್ರಿಸೈಡಿಂಗ್  ಆಫೀಸರುಗಳು,  ಪೋಲಿಂಗ್ ಆಫೀಸರುಗಳು  ಮತ್ತು  ಇತರ  ಯಾರೇ  ಅಧಿಕಾರಿಗಳು  ಅಥವಾ  ಸಿಬ್ಬಂದಿಯು,  ಅವರು  ಹಾಗೆ  ನಿಯೋಜಿತರಾದ ಅವಧಿಗಾಗಿ  ರಾಜ್ಯ  ಚುನಾವಣಾ  ಆಯೋಗಕ್ಕೆ  ಪ್ರತಿನಿಯೋಜಿತರಾಗಿದ್ದಾರೆಂದು  ಭಾವಿಸತಕ್ಕದ್ದು  ಮತ್ತು  ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಯು ಆ ಅವಧಿಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿಯಂತ್ರಣ,  ಮೇಲ್ವಿಚಾರಣೆ ಹಾಗೂ ಶಿಸ್ತಿಗೆ ಒಳಪಟ್ಟಿರತಕ್ಕದ್ದು ಹಾಗೂ ಈ ಅವಧಿಯಲ್ಲಿ ಅಧಿಕಾರಿಗಳು ದುರ್ನಡತೆ ಎಸಗಿದಲ್ಲಿ ಅಂಥವರ ವಿರುದ್ಧ ಕರ್ನಾಟಕ ಸಿವಿಲ್ ಸೇವೆಗಳು (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರನ್ವಯ ಕ್ರಮ ಕೈಗೊಳ್ಳತಕ್ಕದ್ದು.]1
1.   ಪ್ರಕರಣ 308ಎ ಇಂದ 308ಡಿ 2003ರ ಅಧಿನಿಯಮ ಸಂಖ್ಯೆ: 37ರ ಮೂಲಕ ದಿನಾಂಕ: 01-10-2003ರಿಂದ ಸೇರಿಸಲಾಗಿದೆ.
  309.  ಅಭಿವೃದ್ಧಿ ಯೋಜನೆಯ ತಯಾರಿಕೆ. (1) ಪ್ರತಿಯೊಂದು ಗ್ರಾಮ ಪಂಚಾಯತಿಯು 1[ಗ್ರಾಮ ಸಭೆಯು ಸೂಚಿಸಿದ  ಅಭಿವೃದ್ಧಿ  ಕಾರ್ಯಕ್ರಮಗಳನ್ನು  ಗಮನದಲ್ಲಿಟ್ಟುಕೊಂಡು]1,  ಪ್ರತಿವರ್ಷವೂ  ಅಭಿವೃದ್ಧಿ ಯೋಜನೆಯೊಂದನ್ನು  ಸಿದ್ಧಪಡಿಸತಕ್ಕದ್ದು  ಮತ್ತು  ಗೊತ್ತುಪಡಿಸಬಹುದಾದಂಥ  ದಿನಾಂಕದೊಳಗೆ  ಮತ್ತು  ಅಂಥ ರೀತಿಯಲ್ಲಿ ತಾಲ್ಲೂಕು ಪಂಚಾಯತಿಗೆ 2[ಕಳುಹಿಸತಕ್ಕದ್ದು]2.
  1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಸೇರಿಸಲಾಗಿದೆ.   
2.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.   (2) ಪ್ರತಿಯೊಂದು  ತಾಲ್ಲೂಕು  ಪಂಚಾಯತಿಯು,  ಪ್ರತಿವರ್ಷವೂ  ಗ್ರಾಮ  ಪಂಚಾಯತಿಗಳ  ಅಭಿವೃದ್ಧಿ ಯೋಜನೆಗಳು  ಸೇರಿದ  ನಂತರ  ತಾಲ್ಲೂಕು  ಅಭಿವೃದ್ಧಿ  ಯೋಜನೆಯನ್ನು  ಸಿದ್ಧಪಡಿಸತಕ್ಕದ್ದು  ಮತ್ತು ಗೊತ್ತುಪಡಿಸಬಹುದಾದಂಥ ದಿನಾಂಕದೊಳಗೆ ಮತ್ತು ಅಂಥ ರೀತಿಯಲ್ಲಿ ಜಿಲ್ಲಾ ಪಂಚಾಯತಿಗೆ 1[ಕಳುಹಿಸತಕ್ಕದ್ದು]1.
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
  (3)  ಪ್ರತಿಯೊಂದು  ಜಿಲ್ಲಾ  ಪಂಚಾಯತಿಯು,  ಪ್ರತಿವರ್ಷವೂ  ತಾಲ್ಲೂಕು  ಪಂಚಾಯತಿಯ  ಅಭಿವೃದ್ಧಿ ಯೋಜನೆಗಳು  ಸೇರಿದ  ನಂತರ  ಜಿಲ್ಲೆಯ  ಅಭಿವೃದ್ಧಿ  ಯೋಜನೆಯನ್ನು  ಸಿದ್ಧಪಡಿಸತಕ್ಕದ್ದು  ಮತ್ತು  ಅದನ್ನು  310ನೇ  ಪ್ರಕರಣದ ಅಡಿಯಲ್ಲಿ ರಚಿತವಾದ ಜಿಲ್ಲಾ ಯೋಜನಾ ಸಮಿತಿಗೆ 1[ಕಳುಹಿಸತಕ್ಕದ್ದು]1.
1.   1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
  1[(4)  ಗ್ರಾಮೀಣ  ಮಟ್ಟದಿಂದ  ರಾಜ್ಯಮಟ್ಟದವರೆಗಿನ  ಅವಶ್ಯಕತೆಗಳನ್ನು  ಈಡೇರಿಸುವ  ಸಲುವಾಗಿ  ಎಲ್ಲ ಯೋಜನೆಗಳನ್ನು  ತಾಲ್ಲೂಕು  ಯೋಜನಾ  ಮತ್ತು  ಅಭಿವೃದ್ಧಿ  ಸಮಿತಿಗಳು  ಮತ್ತು  ಜಿಲ್ಲಾ  ಯೋಜನಾ  ಸಮಿತಿಗಳ ಮೂಲಕ ರೂಪಿಸತಕ್ಕದ್ದು.]1
  1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.
309ಬಿ. ದೂರದೃಷ್ಠಿ ಯೋಜನೆ.-(1) ಪ್ರತಿಯೊಂದು ಹೊಸದಾಗಿ  ಚುನಾಯಿತವಾದ ಗ್ರಾಮ ಪಂಚಾಯತಿಯು, ಅದರ  ರಚನೆಯ  ದಿನಾಂಕದಿಂದ    ಮೂರು  ತಿಂಗಳೊಳಗಾಗಿ,  ಜನವಸತಿ  ಸಭಾ,  ವಾರ್ಡ್  ಸಭಾ,  ಮತ್ತು  ಗ್ರಾಮ ಸಭೆಗಳ  ಸದಸ್ಯರನ್ನು  ಅದರ  ಪ್ರದೇಶದ  ಸಂಪನ್ಮೂಲಗಳನ್ನು,  ಜನಸಂಖ್ಯೆ  ಮತ್ತು  ಅಗತ್ಯಗಳನ್ನು    ತೋರಿಸುವ ಸಹಭಾಗಿ ಗ್ರಾಮೀಣ ಪರಾಮರ್ಶನವನ್ನು ಕೈಗೊಳ್ಳತಕ್ಕದ್ದು.
(2)  ಗ್ರಾಮ  ಪಂಚಾಯತಿಯ,  ಕಾರ್ಯಸಾಧನೆ  ಪದ್ದತಿಯನ್ನು  ಬಳಸಿಕೊಂಡು  ಕ್ರಮ  ಕೈಗೊಳ್ಳುವುದಕ್ಕಾಗಿ ಗುರಿಗಳನ್ನು   ಹೊಂದಿರುವ    ಮತ್ತು  ಅಭಿವೃದ್ಧಿ  ಪ್ರತಿಫಲದ    ಸೂಚಿಗಳಿಗೆ  ಸ್ಥಳೀಯ  ರಾಜ್ಯ  ಮತ್ತು  ಕೇಂದ್ರ ಸರ್ಕಾರಗಳು  ಸ್ಥಾಪಿಸಿದ ಅಭಿವೃದ್ಧಿ ಮೈಲಿ ಗುರುತುಗಳು ಅಭಿವೃದ್ಧಿಯ ಆಧಾರದ ಮೇಲೆ ಪಂಚಾಯತ್ ಪೂರ್ಣ ಅವಧಿಗಾಗಿ ದೂರದೃಷ್ಠಿ ಯೋಜನೆಯನ್ನು  ಮುಂದಾಲೋಚನೆ ಸಿದ್ದಪಡಿಸತಕ್ಕದ್ದು.
(3)  ದೂರದೃಷ್ಠಿ  ಯೋಜನೆಯ  ತನ್ನ  ಅವಧಿಯ    ಮುಂದಿನ  ಐದು  ವರ್ಷಗಳಿಗಾಗಿ  ಪ್ರತಿವರ್ಷಕ್ಕೆ  ಅಗತ್ಯ- ಆಧಾರಿತ  ವಾರ್ಷಿಕ    ಯೋಜನೆಗಳನ್ನು  ನಿರ್ಮಿಸುವ    ಆಧಾರದಲ್ಲಿ    ರೂಪಿಸತಕ್ಕದ್ದು.  ಆದ್ಯತೆ  ವಿಷಯಗಳು ಜವಾಬ್ದಾರಿ ನಕ್ಷೆಯಲ್ಲಿ ಹೇಳಲಾದ ಆದ್ಯತಾರ್ಯಾಂಕಿಂಗ್ ವಿಧಾನದ ಆಧಾರದಲ್ಲಿರತಕ್ಕದ್ದು.
(4)  ಮುಂದಿನ  ಹಣಕಾಸು  ವರ್ಷದ    ಅವಧಿಯಲ್ಲಿ  ನಿಧಿಗಳ  ಲಭ್ಯತೆಗೆ  ಒಳಪಟ್ಟು  ಪ್ರತಿಯೊಂದು  ಗ್ರಾಮ ಪಂಚಾಯತಿಯ  ಅದೇ  ವರ್ಷದ  ಅಕ್ಟೋಬರ್  ಒಳಗಾಗಿ  ಕ್ರೋಢೀಕರಣ  ಮತ್ತು    ಸಂಯೋಜನೆಗಾಗಿ  ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ತಮ್ಮ ವಾರ್ಷಿಕ  ಕರಡು ಯೋಜನೆಗಳನ್ನು ಸಲ್ಲಿಸತಕ್ಕದ್ದು.
ವಿವರಣೆ:-  309ಎ,  309ಬಿ  ಪ್ರಕರಣದ  ಉದ್ದೇಶಕ್ಕಾಗಿ  ಮತ್ತು  ಅಧಿನಿಯಮದಲ್ಲಿ  ಸದರಿ  ಪದಾವಳಿಗಳು ಬರುವಕಡೆಗಳಲ್ಲಿ:   
(1)    ``ಸಹಭಾಗೀ  ಗ್ರಾಮೀಣ  ಪರಾಮರ್ಶೆಯಲ್ಲಿ  ಈ  ಅಧಿನಿಯಮದ  ಅಡಿಯಲ್ಲಿ  ಪಂಚಾಯತ್ಗಳ ದೀರ್ಘಾವಧಿ  ದೂರದೃಷ್ಟಿ  ಯೋಜನೆಗೆ  ಅಥವಾ  ವಾರ್ಷಿಕ  ಯೋಜನೆಗಳಿಗೆ  ಸಂಬಂಧಪಟ್ಟಂತೆ  ಕೈಗೆತ್ತಿಕೊಳ್ಳಲಾದ ವಾಸ್ತವಾಂಶಗಳ ಕುರಿತಂತೆ ಅಧ್ಯಯನ, ವಿಶ್ಲೇಷಣೆ ಮತ್ತು ಪರಾಮರ್ಶೆ ಒಳಗೊಂಡಿರುತ್ತವೆ.   
(2)  ``ಕಾರ್ಯಸಾಧನೆ  ಪದ್ದತಿ  ಎಂದರೆ  ಮೂರು  ಪ್ರಾಥಮಿಕ  ಘಟಕಗಳಾದ-ಅಳತೆಗೋಲು,     ಪ್ರತಿಕ್ರಿಯೆ ಮತ್ತು ಧನಾತ್ಮಕ ಮರು ಜಾರಿ ಒಳಗೊಂಡಿರುವ, ವೈಜ್ಞಾನಿಕ ಆಧಾರಿತ, ದತ್ತಾಂಶ ಆಧಾರಿತ ನಿರ್ವಹಣಾ ಪದ್ಧತಿ  ಮತ್ತು  ಇದರಲ್ಲಿ  ಅತ್ಯಗತ್ಯ  ಧ್ಯೇಯೋದ್ದೇಶಗಳನ್ನು  ಮತ್ತು  ಆದ್ಯತೆಗಳನ್ನು  ಸಾಧಿಸುವ  ನಿಟ್ಟಿನಲ್ಲಿ ಸಂಪನ್ಮೂಲಗಳನ್ನು,  ವ್ಯವಸ್ಥೆಗಳನ್ನು  ಹಾಗೂ  ಸಿಬ್ಬಂದಿವರ್ಗದವರನ್ನು  ಸರಿಹೊಂದಾಣಿಕೆ  ಮಾಡುವ  ವಿಧಾನದ ಮೂಲಕ  ಪರಿಣಾಮಕಾರಿಯಾಗಿ  ಮತ್ತು  ದಕ್ಷತೆಯಿಂದ  ನಿರಂತರವಾಗಿ  ಗುರಿಗಳನ್ನು  ಸಾಧಿಸುತ್ತಿರುವುದನ್ನು ಸುನಿಶ್ಚಿತಪಡಿಸುವಂಥ ಕಾರ್ಯಚಟುವಟಿಕೆಗಳು ಸೇರುತ್ತವೆ.   
(3)    ``ಆದ್ಯತಾ ರ್ಯಾಂಕಿಂಗ್ ಇದು ಆದ್ಯತಾ ನಿಗದಿ ವಿಧಾನವನ್ನು ಬಳಸಿಕೊಂಡು ಫಲಾನುಭವಿಗಳನ್ನು, ಯೋಜನೆಗಳನ್ನು,  ಕಾರ್ಯಕ್ರಮಗಳನ್ನು  ಮತ್ತು  ಪರಿಯೋಜನೆಗಳನ್ನು  ಆಯ್ಕೆ  ಮಾಡಿಕೊಳ್ಳುವಾಗ  ಪ್ರದೇಶದ ಹಿಂದುಳಿದಿರುವಿಕೆ, ಅವಶ್ಯಕತೆಯತುರ್ತು, ಪರಿಣಾಮಕಾರಿ ಹಂತ ಮತ್ತು ವ್ಯಾಪ್ತಿಯ ಆದ್ಯತೆಗಳನ್ನು ನಿರ್ಧರಿಸುವುದಕ್ಕೆ ಸೂಚಕಗಳನ್ನು ನೀಡುತ್ತದೆ.
   309ಸಿ. ತಾಲ್ಲೂಕು ಪಂಚಾಯತ್ ಯೋಜನೆ.- (1) 309ಡಿ ಪ್ರಕರಣದ ಅಡಿಯಲ್ಲಿ ರಚನೆಯಾದ ತಾಲ್ಲೂಕು ಯೋಜನೆ  ಮತ್ತು  ಅಭಿವೃದ್ಧಿ  ಸಮಿತಿಯ  ಮುಂದೆ  ಮಂಡಿಸುವುದಕ್ಕಾಗಿ  ತಾಲ್ಲೂಕು  ಮಟ್ಟದಲ್ಲಿ    ಎಲ್ಲಾ  ಗ್ರಾಮ ಪಂಚಾಯತಿಗಳ  ಯೋಜನೆಗಳನ್ನು  ಡಿಜಿಟಲ್  ನಮೂನೆಯಲ್ಲಿ  ಕ್ರೋಢೀಕರಿಸುವುದಕ್ಕೆ  ತಾಲ್ಲೂಕು  ಪಂಚಾಯತಿಗಳು ಹೊಣೆಯಾಗತಕ್ಕದ್ದು.
(2)  ತಾಲ್ಲೂಕು  ಪಂಚಾಯತಿಯು  ಜಿಲ್ಲಾ  ಪಂಚಾಯತಿಗೆ  ಈ  ಯೋಜನೆಯ  ಡಿಜಿಟಲ್  ಪ್ರತಿಯನ್ನು  ಕೂಡಾ ಕಳುಹಿಸತಕ್ಕದ್ದು.

No comments:

Post a Comment